` Flash Back - chitraloka.com | Kannada Movie News, Reviews | Image
rishab shetty's open invitation to writers

User Rating: 0 / 5

Star inactiveStar inactiveStar inactiveStar inactiveStar inactive

ಒಂದು ವೇಳೆ ಕಿರಿಕ್ ಪಾರ್ಟಿ ಸಿನಿಮಾ, ಗ್ಯಾಂಗ್‍ಸ್ಟರ್ ಕಥೆಯಾಗಿದ್ದರೆ.. ಕಥೆ ಹೇಗಿರುತ್ತಿತ್ತು..?

ಸಹಿಪ್ರಾಶಾಲೆಯ ಅನಂತ ಪದ್ಮನಾಭ್, ಬೆಲ್‍ಬಾಟಂನ ಕುಸುಮ, ಉಳಿದವರು ಕಂಡಂತೆ ಚಿತ್ರದ ರತ್ನಕ್ಕ, ರಂಗನಾಯಕಿ ಚಿತ್ರದ ಶೇಖರ್.. ಈ ನಾಲ್ಕು ಪಾತ್ರಗಳ ಪೈಕಿ, ಒಂದನ್ನ ಆಯ್ಕೆ ಮಾಡಿಕೊಳ್ಳಿ. ಆ ಪಾತ್ರದ ಚಿತ್ರಣ ಬರೆಯಿರಿ. ಅದು ಅವರವರ ದೃಷ್ಟಿಯಲ್ಲೇ ಇರಬೇಕು.

ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ನಡೆಯಬಹುದಾದ ಹಾಸ್ಯ ಸನ್ನಿವೇಶವನ್ನು ದೃಶ್ಯ ವಿವರ, ಸಂಭಾಷಣೆ ಸಹಿತ ಬರೆಯಿರಿ.

ಇದು ನವನೀವನ ಕಲ್ಪನೆಯ ಬರಹಗಾರರಿಗೆ, ನಟ, ನಿರ್ದೇಶಕ ರಿಷಬ್ ಶೆಟ್ಟಿ ನೀಡಿರುವ ಪಂಥಾಹ್ವಾನ. ಕಥಾಸಂಗಮ ಚಿತ್ರದಲ್ಲಿ ಕಥೆಗಾರರಿಗೆ ಅವಕಾಶ ಕೊಟ್ಟಂತೆಯೇ, ಈಗ ಬರಹಗಾರರಿಗೆ, ಸನ್ನಿವೇಶ ವಿಸ್ತರಿಸುವ, ಮೆರುಗು ನೀಡುವವರಿಗೆ ಇಂತಹುದೊಂದು ಸ್ಪರ್ಧೆ ಮುಂದಿಟ್ಟಿದ್ದಾರೆ ರಿಷಬ್.

ನೀವೂ ಬರೆಯಬಹುದು. ಎರಡು ಪುಟ ಮೀರಬಾರದು. ಮೇ 23ರೊಳಗೆ ಕಳುಹಿಸಿಕೊಟ್ಟರೆ ಸಾಕು.

 

bell bottom is the first movie to complete 100 days

User Rating: 0 / 5

Star inactiveStar inactiveStar inactiveStar inactiveStar inactive

ಬೆಲ್‍ಬಾಟಂ, ಈ ವರ್ಷದ ಮೊದಲ ಶತದಿನೋತ್ಸವ ಕಂಡ ಚಿತ್ರವಾಗಿ ಹೊರಹೊಮ್ಮಿದೆ. 2019ರಲ್ಲಿ ಹಲವು ಚಿತ್ರಗಳು ರಿಲೀಸ್ ಆಗಿವೆ. ಯಶಸ್ಸನ್ನೂ ಕಂಡಿವೆ. ಆದರೆ, ಚಿತ್ರಮಂದಿರಗಳಲ್ಲಿ 100 ದಿನ ದಾಟಿದ ಮೊದಲ ಚಿತ್ರವಾಗಿರುವುದು ಬೆಲ್‍ಬಾಟಂ.

ರಿಷಬ್ ಶೆಟ್ಟಿ ಅಭಿನಯದ ಮೊದಲ ಚಿತ್ರ ಬೆಲ್‍ಬಾಟಂ. ಸಹಜವಾಗಿಯೇ ರಿಷಬ್, ಸಂಭ್ರಮವನ್ನೆಲ್ಲ ಬೊಗಸೆಯಲ್ಲೇ ಹಿಡಿದಿಟ್ಟುಕೊಂಡು ಖುಷಿಪಟ್ಟಿದ್ದಾರೆ. ಚಿತ್ರದ ಗೆಲುವಿನ ಕ್ರೆಡಿಟ್‍ನ್ನು ನಿರ್ದೇಶಕ, ನಿರ್ಮಾಪಕ, ಸಹಕಲಾವಿದರು ಹಾಗೂ ಕಥೆಗಾರರಿಗೆ ಕೊಟ್ಟಿದ್ದಾರೆ.

ರಿಷಬ್, ಜಯತೀರ್ಥ, ಹರಿಪ್ರಿಯಾ ಸೇರಿದಂತೆ ಇಡೀ ಚಿತ್ರತಂಡದ ಒಟ್ಟು ಶ್ರಮವೇ ಇವತ್ತಿನ ಗೆಲುವಿನ ಗುಟ್ಟು ಎನ್ನುವುದು ನಿರ್ಮಾಪಕ ಸಂತೋಷ್ ಕುಮಾರ್ ವಾದ.

ಡಿಟೆಕ್ಟಿವ್ ದಿವಾಕರನಾಗಿ ರಿಷಬ್, ಕುಸುಮ ಪಾತ್ರದಲ್ಲಿ ಹರಿಪ್ರಿಯಾ ಪ್ರಧಾನ ಪಾತ್ರಗಳಲ್ಲಿದ್ದರೆ, ಅಚ್ಯುತ್ ಕುಮಾರ್, ಯೋಗರಾಜ್ ಭಟ್, ಶಿವಮಣಿ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಅಜನೀಶ್ ಲೋಕನಾಥ್ ನಿರ್ದೇಶನದ ಹಾಡುಗಳು ಮೋಡಿ ಮಾಡಿದ್ದವು.

police baby song goes viral

User Rating: 0 / 5

Star inactiveStar inactiveStar inactiveStar inactiveStar inactive

ಇತ್ತೀಚೆಗೆ ತಮಿಳಿನ ರೌಡಿ ಬೇಬಿ ಹಾಡು ದೊಡ್ಡ ಮಟ್ಟಿಗೆ ಸದ್ದು ಮಾಡಿತ್ತು. ಪ್ರಭುದೇವ ಕೊರಿಯೋಗ್ರಫಿ ಮಾಡಿದ್ದ ಹಾಡಿಗೆ ಧನುಷ್ ಮತ್ತು ಸಾಯಿಪಲ್ಲವಿಯ ಡ್ಯಾನ್ಸ್ ಹುಚ್ಚೆಬ್ಬಿಸುವಂತಿತ್ತು. ಅದಕ್ಕೆ ಸಡ್ಡು ಹೊಡೆಯುವಂತಹ ಹಾಡೊಂದು ಕನ್ನಡದಲ್ಲಿಯೇ ಬಂದಿದೆ. ರುಸ್ತುಂ ಚಿತ್ರದಲ್ಲಿ.

ಯೂ ಆರ್ ಮೈ ಪೊಲೀಸ್ ಬೇಬಿ ಅನ್ನೋ ಹಾಡು ರುಸ್ತುಂ ಚಿತ್ರದ್ದು. ಕುಣಿದಿರೋದು ಶಿವರಾಜ್‍ಕುಮಾರ್ ಮತ್ತು ಶ್ರದ್ಧಾ ಶ್ರೀನಾಥ್. ಆ ಹಾಡಿನ ನೆರಳಾಗಲೀ, ಡ್ಯಾನ್ಸ್‍ನ ನೆರಳಾಗಲೀ ಈ ಹಾಡಿನಲ್ಲಿಲ್ಲ. ಆದರೆ ಕುಣಿತ ಬೊಂಬಾಟ್ ಆಗಿದೆ ಅನ್ನೋ ಸಿಗ್ನಲ್ಲನ್ನಂತೂ ಕೊಟ್ಟಿದೆ.

ಎ.ಪಿ.ಅರ್ಜುನ್ ಬರೆದಿರುವ ಹಾಡಿಗೆ ರಘು ದೀಕ್ಷಿತ್, ಅಪೂರ್ವ ಶ್ರೀಧರ್ ಧ್ವನಿ ನೀಡಿದ್ದಾರೆ. ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ, ಅನೂಪ್ ಸೀಳಿನ್ ಅವರ ಸಂಗೀತದ ಕಿಕ್ಕನ್ನು ಹೆಚ್ಚಿಸುವ ಹಾಗಿದೆ. ಅಂದಹಾಗೆ ಇದು ಇಂಡಿಯಾದ ನಂಬರ್  1 ಸ್ಟಂಟ್ ಮಾಸ್ಟರ್ ರವಿವರ್ಮ ನಿರ್ದೇಶನದ ಮೊದಲ ಚಿತ್ರ ರುಸ್ತುಂ.

gn lakshmipathi no more

User Rating: 0 / 5

Star inactiveStar inactiveStar inactiveStar inactiveStar inactive

Veteran producer GN Lakshmipathi aged 103 years has expired. 

Lakshmipathi had produced Superhit movies like Uyyale, Devara Makkalu, Kaadu, Ondanondu Kaladalli, Nentaro Gantu Kallaro movies. For Rajkumar movie Lakshmipathi had paid Rs 14,000/ as his remuneration and for next movie he paid Rs 16,000/-. Rajkumar was so happy that he got highest amount at that time. He has received 4 State awards and 2 National Award.

Lakshmipathi has received 4 State awards and 2 National Award.

Lakshmipathi was basically a contractor, and he the first person to provide suggestion to government advising for the underpass in those times. That suggestion was implemented after so many years. It was because of Lakshmipathi's help and suggestion that KFCC got its office at Sheshadripuram.

Chitraloka mourns the death of legendary producer Lakshmipathi

will not act in jodettu says yash

User Rating: 0 / 5

Star inactiveStar inactiveStar inactiveStar inactiveStar inactive

ಜೋಡೆತ್ತು ಚಿತ್ರದ ಟೈಟಲ್‍ನ್ನು ಮೆಜೆಸ್ಟಿಕ್ ರಾಮಮೂರ್ತಿ ದರ್ಶನ್ ಅವರಿಗಾಗಿಯೇ ಪಡೆದಿರುವುದು ಗೊತ್ತಿದೆ ತಾನೇ. ಆದರೆ, ಆ ಚಿತ್ರದಲ್ಲಿ ತಾನು ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಯಶ್. ದರ್ಶನ್ ನನ್ನ ಸೀನಿಯರ್ ನಟ. ಒಳ್ಳೆಯ ಕಥೆ ಸಿಕ್ಕರೆ ಅವರ ಜೊತೆ ನಟಿಸಬೇಕು ಎಂದುಕೊಂಡಿದ್ದೇನೆ ಎಂದಿರುವ ಯಶ್, ಜೋಡೆತ್ತು ಚಿತ್ರದಲ್ಲಿ ನಾನಿಲ್ಲ ಎಂದಿದ್ದಾರೆ.

ಅಷ್ಟೇ ಅಲ್ಲ, ನಿಖಿಲ್ ಎಲ್ಲಿದ್ದೀಯಪ್ಪ ಚಿತ್ರತಂಡಕ್ಕೂ ಶುಭ ಹಾರೈಸಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery