` Flash Back - chitraloka.com | Kannada Movie News, Reviews | Image
shankar mahadevan's magic for jai shri ram song

User Rating: 5 / 5

Star activeStar activeStar activeStar activeStar active

ಜೈ ಶ್ರೀರಾಮ್ ಎಂಬ ರಾಬರ್ಟ್ ಚಿತ್ರದ ಹಾಡು ಸೃಷ್ಟಿಸಿದ್ದ ಕ್ರೇಜ್ ಗೊತ್ತಿದೆಯಲ್ಲ, ಈಗ ಅದೇ ಹಾಡಿನ ಹೊಸ ವರ್ಷನ್ ಬಂದಿದೆ. ಈಗ ಆ ಹಾಡಿನ ಶಕ್ತಿ ಹೆಚ್ಚಿಸಿರುವುದು ಶಂಕರ್ ಮಹಾದೇವನ್. ರಾಮನವಮಿಗಾಗಿ ಹಾಡನ್ನು ಮತ್ತೊಮ್ಮೆ ಶಂಕರ್ ಮಹದೇವನ್ ಧ್ವನಿಯಲ್ಲಿ ರಿಲೀಸ್ ಮಾಡಿದ್ದಾರೆ ನಿರ್ದೇಶಕ ತರುಣ್ ಸುಧೀರ್.

ದಿವ್ಯ ಕುಮಾರ್ ಧ್ವನಿಯಲ್ಲಿದ್ದ ಹಾಡಿನಲ್ಲೇ ಕುಣಿದು ಕುಪ್ಪಳಿಸಿದ್ದ ಅಭಿಮಾನಿಗಳಿಗೆ ಶಂಕರ್ ಮಹದೇವನ್ ದೈವೀಕ ಕಂಠದ ಧ್ವನಿ ಇನ್ನಷ್ಟು ರೋಮಾಂಚನ ಹುಟ್ಟಿಸಿದೆ. ನಟ ದರ್ಶನ್ ಶ್ರೀರಾಮ ಶ್ಲೋಕವನ್ನು ಪಠಿಸಿ ಹಾಡನ್ನು ಅಭಿಮಾನಿಗಳಿಗೆ ಅರ್ಪಿಸಿದ್ದಾರೆ.

ಉಮಾಪತಿ ನಿರ್ಮಾಣದ ರಾಬರ್ಟ್ ಚಿತ್ರ, ಕೊರೋನಾ ಶಾಕ್ ಇಲ್ಲದೇ ಹೋಗಿದ್ದರೆ ಇದೇ ವಾರ ರಿಲೀಸ್ ಆಗಬೇಕಿತ್ತು. ಸದ್ಯಕ್ಕೆ ರಾಬರ್ಟ್ ಸೇರಿದಂತೆ ಯಾವುದೇ ಚಿತ್ರಗಳಿಗೆ ಏಪ್ರಿಲ್ ತಿಂಗಳಲ್ಲಿ ಥಿಯೇಟರು ಭಾಗ್ಯ ದೊರೆಯುವ ಲಕ್ಷಣಗಳಿಲ್ಲ.

puneeth's helping nature

User Rating: 0 / 5

Star inactiveStar inactiveStar inactiveStar inactiveStar inactive

ಶಿವಣ್ಣ ಸದ್ದಿಲ್ಲದೆ ಮಾಡುತ್ತಿರುವ ಸೇವೆಯ ಸುದ್ದಿ ಗೊತ್ತಿದೆ. 32 ವರ್ಷಗಳ ಹಿಂದೆ ಅವರು ಮಾಡಿದ್ದ ಸಹಾಯ, ಇತ್ತೀಚೆಗೆ ಗೊತ್ತಾದಾಗ ಹಲವರು ಬೆರಗುಗಣ್ಣಿನಿಂದ ನೋಡಿದ್ದರು. ಈಗ ಪುನೀತ್ ಸರದಿ. ಒನ್ಸ್ ಎಗೇಯ್ನ್.. ಪುನೀತ್ ಕೂಡಾ ಥೇಟು ಅಣ್ಣನ ಹಾಗೆ.

ಇತ್ತೀಚೆಗೆ ಚಿನ್ನಪ್ಪ ಎಂಬ ಕಲಾವಿದರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಈ ಚಿನ್ನಪ್ಪ ಥಿಯೇಟರುಗಳ ಮುಂದೆ ಕಟೌಟ್ ಕಟ್ಟುವ ಕಲಾವಿದ. ಚೆಂದದ ಕಟೌಟ್ ಮಾಡುವ ಈತ ಅಣ್ಣಾವ್ರ ಮೆಚ್ಚುಗೆ ಗಳಿಸಿದ್ದ ವ್ಯಕ್ತಿ. ಇಂತಹ ಚಿನ್ನಪ್ಪನವರಿಗೆ ಕಷ್ಟವಂತೆ ಎಂದು ಯಾರೋ ಒಬ್ಬರು ಪುನೀತ್ ಕಿವಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ತಮ್ಮ ಸಹಾಯಕರೊಬ್ಬರಿಂದ ಚಿನ್ನಪ್ಪ ಅವರ ಮನೆಗೆ 50 ಸಾವಿರ ರೂ. ಹಣ ತಲುಪಿಸಿದ್ದಾರೆ ಪುನೀತ್.

ಚಿನ್ನಪ್ಪನವರ ಪುತ್ರ ಕೃಷ್ಣ ಹೇಳಿಕೊಳ್ಳುವವರೆಗೆ ಇದು ಯಾರಿಗೂ ಗೊತ್ತಿರಲಿಲ್ಲ ಎನ್ನುವ ವಿಷಯವೇ ವಿಶೇಷ. ಪುನೀತ್ ನಮ್ಮ ಹಾಗೂ ನಮ್ಮ ಕುಟುಂಬದ ಪಾಲಿಗೆ ದೇವರಾಗಿ ಬಂದರು ಎಂದಿದ್ದಾರೆ ಚಿನ್ನಪ್ಪನವರ ಪುತ್ರ ಕೃಷ್ಣ.

pogaru's khabaru song

User Rating: 0 / 5

Star inactiveStar inactiveStar inactiveStar inactiveStar inactive

ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಮೊದಲ ಸಾಂಗ್ ಖರಾಬು ರಿಲೀಸ್ ಆಗಿದೆ. 2 ವರ್ಷದ ನಂತರ ಅಣ್ಣ ಬತ್ತಾವ್ನೆ ಎನ್ನುತ್ತಲೇ ಶುರುವಾಗುವ ಗೀತೆಯಿದು. ರಶ್ಮಿಕಾ ಮಂದಣ್ಣರನ್ನು ಕಿಚಾಯಿಸುವ, ಚುಡಾಯಿಸುವ, ಗೋಳು ಹೊಯ್ದುಕೊಳ್ಳುವ ಈ ಹಾಡಿನ ಲಿರಿಕ್ಸು ಪಕ್ಕಾ ಲೋಕಲ್. ಸ್ಟೆಪ್ಪು ಕೂಡಾ. ಎಲ್ಲವೂ ಪಡ್ಡೆಗಳು ಕುಣಿದು ಕುಪ್ಪಳಿಸುವಂತಿದೆ.

ಈ ಹಾಡಿಗೆ ಸಂಗೀತ, ಸಾಹಿತ್ಯ ಮತ್ತು ಗಾಯನ ಮೂರೂ ಕೂಡಾ ಚಂದನ್ ಶೆಟ್ಟಿಯವರದ್ದೇ. ನಂದಕಿಶೋರ್ ನಿರ್ದೇಶನದ ಚಿತ್ರಕ್ಕೆ ಬಿ.ಕೆ.ಗಂಗಾಧರ್ ನಿರ್ಮಾಪಕ. 

mp prathap simha and v somanna appreciates darshan;s fan

User Rating: 5 / 5

Star activeStar activeStar activeStar activeStar active

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಈ ಕೊರೋನಾ ಸಂಕಷ್ಟದ ಸಮಯದಲ್ಲಿ ಮಾಡುತ್ತಿರುವ ಸೇವೆ ಎಲ್ಲರಲ್ಲಿಯೂ ಮೆಚ್ಚುಗೆ ಮೂಡಿಸುತ್ತಿದೆ. ಪ್ರತ್ಯೇಕ ಗುಂಪುಗಳಲ್ಲಿ ಆಹಾರ ಮಾಡಿಕೊಂಡು ಸಾವಿರಾರು ದಿನಗೂಲಿ ಕಾರ್ಮಿಕರಿಗೆ ದರ್ಶನ್ ಅಭಿಮಾನಿಗಳು ಆಹಾರ ತಲುಪಿಸುತ್ತಿದ್ದಾರೆ. ಮೈಸೂರು ಭಾಗದಲ್ಲಂತೂ ದರ್ಶನ್ ಅಭಿಮಾನಿಗಳ ತಂಡ ಒಂದು ಸೈನ್ಯದಂತೆ ಕೆಲಸ ಮಾಡುತ್ತಿದೆ.

ದರ್ಶನ್ ಅಭಿಮಾನಿಗಳ ಈ ಸೇವೆಗೆ ಸ್ವತಃ ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಸೋಮಣ್ಣ ಧನ್ಯವಾದ ಅರ್ಪಿಸಿದ್ದಾರೆ. ದರ್ಶನ್ ಹಾಗೂ ದರ್ಶನ್ ಅಭಿಮಾನಿಗಳಿಗೆ ಚಾಮುಂಡೇಶ್ವರಿ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ ಸಚಿವ ಸೋಮಣ್ಣ.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ದರ್ಶನ್ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

B Sarojadevi Contribution

User Rating: 0 / 5

Star inactiveStar inactiveStar inactiveStar inactiveStar inactive

Veteran Actress B Saroja Devi has contributed Rs Five Lakhs as donation to Chief Minister's Relief Fund to combat the corona pandemic.

B Sarojadevi is one of the most successful female leads in the history of Indian cinema and in her six decades she acted in more than 200 films. She has received the Padmasri, the fourth highesh civilian honour in 1969 and after that she has been conferred the Padmabhushan in 1992 from the Government of India

Shivarjun Movie Gallery

KFCC 75Years Celebrations and Logo Launch Gallery