` Flash Back - chitraloka.com | Kannada Movie News, Reviews | Image
ಫೆ.21ಕ್ಕೆ ಚಂದನ ಫಿಲಂ ಕ್ರಿಟಿಕ್ಸ್ ಅವಾರ್ಡ್

User Rating: 0 / 5

Star inactiveStar inactiveStar inactiveStar inactiveStar inactive

ಚಂದನ ಫಿಲಂ ಕ್ರಿಟಿಕ್ಸ್ ಅವಾರ್ಡ್‍ಗೆ ಸ್ಯಾಂಡಲ್‍ವುಡ್‍ನಲ್ಲಿ ಬೇರೆಯದ್ದೇ ಆದ ಸ್ಥಾನಮಾನವಿದೆ. ಪತ್ರಕರ್ತರೇ ಸೇರಿಕೊಂಡು ನೀಡುವ ವಿಮರ್ಶಾತ್ಮಕ ಪ್ರಶಸ್ತಿ ಪುರಸ್ಕಾರವಿದು. ಈ ವರ್ಷವೂ ಪ್ರಶಸ್ತಿ ನೀಡಲು ಮುಂದಾಗಿರುವ ಚಂದನ ಫಿಲಂ ಕ್ರಿಟಿಕ್ಸ್ ಅವಾರ್ಡ್, ಫೆಬ್ರವರಿ 21ರಂದು ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಿದೆ. ಇದರ ಪೂರ್ವಭಾವಿಯಾಗಿ ಪ್ರಶಸ್ತಿಯ ಟ್ರೋಫಿಯನ್ನು ಅನಾವರಣ ಮಾಡಿದ್ದು ವಿಶೇಷ.

ನಟ ಸಂಚಾರಿ ವಿಜಯ್ ಮತ್ತು ನಟಿ ಮಾನ್ವಿತಾ ಕಾಮತ್ ಟ್ರೋಫಿಯನ್ನು ಅನಾವರಣ ಮಾಡಿದರು. ಈ ವರ್ಷವೂ 20 ವಿಭಾಗಗಳಲ್ಲಿ ನಾಮಿನೇಟ್ ಆಗಿದ್ದು, ಪ್ರಶಸ್ತಿ ಆಯ್ಕೆ ನಡೆಯಲಿದೆ.

ಎಸ್‍ಆರ್‍ವಿ ಥಿಯೇಟರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿಲಹರಿ ಸಿಇಓ ಪಿ.ಕೃಷ್ಣ, ಶ್ರೇಯಸ್ ಮೀಡಿಯಾದ ನವರಸನ್ ಇದ್ದರು. ಕ್ರಿಟಿಕ್ಸ್ ಅಕಾಡೆಮಿ ಪವರವಾಗಿ ಶರಣು ಹುಲ್ಲೂರು ಇದ್ದರೆ, ಪತ್ರಕರ್ತರಾದ ವಾಸು, ಪಿಆರ್‍ಓಗಳಾದ ನಾಗೇಂದ್ರ ವಿಜಯ್ ಕುಮಾರ್ ಅತಿಥಿಗಳನ್ನ ಸ್ವಾಗತಿಸಿದರು.

ಸತ್ಯಜಿತ್ ವಿರುದ್ಧ ಮಗಳು ಅಖ್ತರ್ ಸ್ವಲೇಹ, ಅಳಿಯ ಇಬ್ರಾಹಿಂ ದೂರು

User Rating: 0 / 5

Star inactiveStar inactiveStar inactiveStar inactiveStar inactive

ಸತ್ಯಜಿತ್ ಅವರ ವಿರುದ್ಧ, ಅವರು ಹೆತ್ತ ಮಗಳೇ ತಿರುಗಿಬಿದ್ದಿದ್ದಾರೆ. ಸತ್ಯಜಿತ್ ಅವರು ತಮಗೆ ಕಿರುಕುಳ ನೀಡುತ್ತಿದ್ದಾರೆ. ತಮ್ಮ ಮನೆಯನ್ನು ಮಾರಿ ಹಣ ಕೊಡು ಎನ್ನುತ್ತಿದ್ದಾರೆ. ಇಲ್ಲದೇ ಹೋದರೆ ಮಗಳಿಗೆ ಡೈವೋರ್ಸ್ ಕೊಡು ಎನ್ನುತ್ತಿದ್ದಾರೆ ಎಂದು ಅಳಿಯ ಮಹಮ್ಮದ್ ಇಬ್ರಾಹಿಂ  ಖಾನ್ ದೂರು ಕೊಟ್ಟಿದ್ದಾರೆ.

ಅಪ್ಪನ ವಿರುದ್ಧವೇ ಮಾತನಾಡಿರುವ ಮಗಳು ಅಖ್ತರ್ ಸ್ವಲೇಹಾ ಹಣ ಕೊಡುವುದನ್ನು ನಿಲ್ಲಿಸಿದ ಮೇಲೆ ಹೀಗೆಲ್ಲ ಮಾತನಾಡುತ್ತಿದ್ದಾರೆ. ಅಪ್ಪನಿಗೆ ನನಗಿಂತ ಹೆಚ್ಚಾಗಿ ನಾನು ಕೊಡೊ ಹಣ ಬೇಕು. ಅಣ್ಣಂದಿರೂ ದುಡಿಯುತ್ತಿಲ್ಲ. ಎಲ್ಲರೂ ಹಣಕ್ಕಾಗಿ ಕಿರುಕುಳ ಕೊಡಲಾರಂಭಿಸಿದರೆ ನಾನೇನು ಮಾಡಬೇಕು ಎನ್ನುವುದು ಅವರ ಪ್ರಶ್ನೆ. ತಪ್ಪು ಮಾಡಿದವರಿಗೆ ದೇವರೇ ಶಿಕ್ಷೆ ಕೊಡುತ್ತಾನೆ ಎನ್ನುತ್ತಿದ್ದಾರೆ ಸತ್ಯಜಿತ್ ಪುತ್ರಿ. ಅವರಿಗೆ ಇನ್ನೆರಡು ವಾರದಲ್ಲಿ ಹೆರಿಗೆ ಇದೆ.

ಆದರೆ, ಸತ್ಯಜಿತ್ ಹೇಳೋದೇ ಬೇರೆ. ನಾನು ಮಗಳ ಬಳಿ ಹಣವನ್ನೇ ಕೇಳಿಲ್ಲ ಎನ್ನುತ್ತಿದ್ದಾರೆ. ಆದರೆ, ಇತ್ತೀಚೆಗಷ್ಟೇ ಕಾಲು ಕಳೆದುಕೊಂಡಿರುವ ನನಗೆ ನನ್ನ ಮಗಳೂ ಸಹಾಯ ಮಾಡುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದರು.

ಅಂದಹಾಗೆ ಸತ್ಯಜಿತ್ ಅವರು ಮತಾಂತರವಾಗಿದ್ದಾರಾ ಎನ್ನುವುದು ಅನೇಕರ ಪ್ರಶ್ನೆ. ಆದರೆ ವಾಸ್ತವ ಬೇರೆಯೇ ಇದೆ. ಸತ್ಯಜಿತ್ ಎನ್ನುವುದು ಸಿನಿಮಾ ಹೆಸರು. ಅವರ ಮೂಲ ಹೆಸರು ಸೈಯದ್ ನಿಜಾಮುದ್ದೀನ್. ಅರ್ಥಾತ್ ಸತ್ಯಜಿತ್ ಮೂಲತಃ ಮುಸ್ಲಿಂ.

ಅಭಿಮಾನಿಗಳ ಎದುರು ಕಣ್ಣೀರಿಟ್ಟ ರಾಗಿಣಿ

User Rating: 0 / 5

Star inactiveStar inactiveStar inactiveStar inactiveStar inactive

ಇತ್ತೀಚೆಗಷ್ಟೇ ಡ್ರಗ್ಸ್ ಕೇಸಿನಲ್ಲಿ ಜಾಮೀನು ಪಡೆದು ಹೊರಬಂದ ರಾಗಿಣಿ, ಹೊರಗೆ ಕಾನ್ಫಿಡೆಂಟ್ ಆಗಿಯೇ ತೋರುತ್ತಿದ್ದರೂ, ಒಳಗಿನ ದುಃಖ ಬೇರೆಯೇ ಇದೆ. ಅದು ಅಭಿಮಾನಿಗಳ ಜೊತೆ ನಡೆದ ಲೈವ್ ಚಾಟ್ನಲ್ಲಿ ಎಲ್ಲರಿಗೂ ಗೊತ್ತಾಗಿದೆ. ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಮಾತನಾಡುವಾಗ ರಾಗಿಣಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ನಾನು ಜೀವನದಲ್ಲಿ ಸಾಕಷ್ಟು ಶ್ರಮ ಪಟ್ಟಿದ್ದೇನೆ, ಸಾಕಷ್ಟು ಏಳು ಬೀಳು ನೋಡಿದ್ದೆನೆ. ಆದರೆ, ಈ ವೇಳೆ ನನ್ನ ಬಗ್ಗೆ ಸಾಕಷ್ಟು ಚೀಪ್ ಕಮೆಂಟುಗಳು ಬಂದವು. ಅವರ ಹೆಸರನ್ನು ನಾನು ಹೇಳೋದಿಲ್ಲ. ಹೆಣ್ಣು ಮಕ್ಕಳಿಗೆ ಹೀಗೆ ಹೆಸರಿಟ್ಟರೆ ನಿಮಗೇನು ಖುಷಿ ಸಿಗುತ್ತೋ ಗೊತ್ತಿಲ್ಲ. ನನ್ನ ಮತ್ತು ನನ್ನ ಫ್ಯಾಮಿಲಿ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ರೆ ಏನು ಸಿಗತ್ತೆ..? ನಿಮ್ಮ ಬಳಿ ಮಾತನಾಡೋಕೆ ಇಷ್ಟ ಇದೆ. ಆದರೂ ನರ್ವಸ್ ಆಗಿದ್ದೇನೆ ಎಂದು ಕಣ್ಣೀರಿಟ್ಟಿದ್ದಾರೆ ರಾಗಿಣಿ.

ಮಕ್ಕಳಿಗೆ ತಂದೆ ತಾಯಿ ಸಪೋರ್ಟ್ ಬೇಕೆ ಬೇಕು. ಈ ಎಲ್ಲಾ ಘಟನೆಗಳಿಂದ ಹೊರ ಬರಲು ಪ್ರಯತ್ನ ಮಾಡುತ್ತಿದ್ದೇನೆ. ಅದಕ್ಕೆ ತುಂಬಾ ಸಮಯಬೇಕು. ಸದ್ಯಕ್ಕೆ ನಾನಿಷ್ಟು ಪಾಸಿಟಿವ್ ಆಗಿ ಇರೋಕೆ ಕಾರಣ, ನನ್ನ ಫ್ಯಾಮಿಲಿ ಎಂದಿದ್ದಾರೆ ರಾಗಿಣಿ.

ಪುರುಷೋತ್ತಮ ಜಿಮ್ ರವಿ

User Rating: 0 / 5

Star inactiveStar inactiveStar inactiveStar inactiveStar inactive

ಜಿಮ್ ರವಿ, ಬಾಡಿಬಿಲ್ಡರ್. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಮ್ ರವಿಗೆ ಬೇರೆಯೇ ಖ್ಯಾತಿ ಇದೆ. ಸಿನಿಮಾಗಳಲ್ಲೂ ಸಣ್ಣ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿರೋ ಜಿಮ್ ರವಿ, ಕನ್ನಡ, ತಮಿಳು, ತೆಲುಗಿನ 130ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮದೇ ಜಿಮ್ ಇಟ್ಟುಕೊಂಡಿರೋ ಜಿಮ್ ರವಿ, ಈಗ ಹೀರೋ ಆಗೋಕೆ ಹೊರಟಿದ್ದಾರೆ.

ದಿಲ್ದಾರ್, ನಾನು ನಮ್ಮುಡ್ಗಿ, ಖರ್ಚಿಗೊಂದ್ ಮಾಫಿಯಾ ಸಿನಿಮಾಗಳನ್ನು ನಿರ್ದೇಶಿಸಿದ್ದ ಅವರ್‍ನಾಥ್, ಜಿಮ್ ರವಿಯನ್ನು ಹೀರೋ ಮಾಡುತ್ತಿದ್ದಾರೆ. ಚಿತ್ರದ ಟೈಟಲ್ ಪುರುಷೋತ್ತಮ. ಈ ಚಿತ್ರಕ್ಕೆ ಸ್ವತಃ ಜಿಮ್ ರವಿಯೇ ನಿರ್ಮಾಪಕ.

 

Rishab Shetty's 'Hero' To Release On March 5th

User Rating: 0 / 5

Star inactiveStar inactiveStar inactiveStar inactiveStar inactive

Rishab Shetty's 'Hero' which was shot during the post lockdown is all set to release on the 05th of March across Karnataka. Rishab took to his Twitter handle on Thursday and announced the release date of the film.

Post lockdown, Rishab is said to be the first to start shooting for the film. The actor in a recently held press conference had announced that the shooting for the film commenced on the 07th of July and got completed in a 45 day single schedule in a Coffee Estate in Chickmagalur. After that, the team was busy with the post-production of the film and now has announced the release date of the film.

'Hero' which has a caption called 'You cannot be a Hero without being a coward' is directed by debutante Bharath Raj and scripted by Rishab Shetty and team. Apart from acting and scripting, Rishab has produced the film under his Rishab Shetty Productions banner. The film stars Ganavi Lakshman, Pramod Shetty, Kolar Manju and others in prominent roles. Ajaneesh Lokanath is the music director, while Aravind Kashyap is the cinematographer.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery