`
ಯುವರತ್ನ ಚಿತ್ರದ ಊರಿಗೊಬ್ಬ ರಾಜಾ.. ಅನ್ನೋ ಹಾಡು ಫೆಬ್ರವರಿ 25ರಂದು ರಿಲೀಸ್ ಆಗುತ್ತಿದೆ. ಇದು ಸ್ವತಃ ಪುನೀತ್ ಅವರೇ ಹಾಡಿರೋ ಹಾಡು. ಪುನೀತ್ ಜೊತೆ ರಮ್ಯಾ ಬೆಹರಾ ಕೂಡಾ ಹಾಡಿದ್ದಾರೆ. ಫೆಬ್ರವರಿ 25ರ ಮಧ್ಯಾಹ್ನ 3 ಗಂಟೆ 33 ನಿಮಿಷಕ್ಕೆ ಊರಿಗೊಬ್ಬ ರಾಜಾ.. ಹಾಡು ರಿಲೀಸ್ ಆಗಲಿದೆ. ತೆಲುಗಿನಲ್ಲಿ ಊರಿಕೊಕ್ಕರಾಜಾ.. ವರ್ಷನ್ ಕೂಡಾ ಆ ಕ್ಷಣದಲ್ಲೇ ಬರಲಿದೆ.
ಈ ಹಾಡಿಗೆ ಕನ್ನಡದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರೇ ಸಾಹಿತ್ಯ ಕೊಟ್ಟಿದ್ದರೆ, ತೆಲುಗಿನಲ್ಲಿ ಕಲ್ಯಾಣ್ ಚಕ್ರವರ್ತಿ ಬರೆದಿದ್ದಾರೆ. ಅಂದಹಾಗೆ ಪಾಠಶಾಲಾ ಹಾಡು ಯಾವಾಗ ರಿಲೀಸ್ ಅನ್ನೋದು ಕನ್ಫರ್ಮ್ ಆಗಿಲ್ಲ.
ನೀನೇ ಮೊದಲು ನೀನೇ ಕೊನೆ.. ಹಾಡಿನ ಮೂಲಕ ಯುವಕರ ಎದೆಗೆ ಲಗ್ಗೆಯಿಟ್ಟ ಚೆಲುವೆ ಶ್ರೀಲೀಲಾ. ಕಿಸ್ ಮತ್ತು ಭರಾಟೆ ಚಿತ್ರಗಳಲ್ಲಿ ಗಮನ ಸೆಳೆದಿದ್ದ ಶ್ರೀಲೀಲಾ ಮೇಲೆ ಟಾಲಿವುಡ್ ಕಣ್ಣು ಬಿದ್ದಿದೆ. ಶ್ರೀಕಾಂತ್ ಪುತ್ರನ ಪೆಳ್ಳಿ ಸಂದಡಿ ಚಿತ್ರದ ಬೆನ್ನಲ್ಲೇ, ಮಾಸ್ ಮಹಾರಾಜ ರವಿತೇಜ ಶ್ರೀಲೀಲಾ ಮೇಲೆಕಣ್ಣು ಹಾಕಿದ್ದಾರೆ.
ತೆಲುಗಿನಲ್ಲಿ ತ್ರಿನಂದ ರಾವ್ ಎಂಬುವವರು ನಿರ್ದೇಶಿಸುತ್ತಿರೋ ಆರ್ಟಿ68 (ಚಿತ್ರಕ್ಕಿನ್ನೂ ಟೈಟಲ್ ಸಿಕ್ಕಿಲ್ಲ) ಚಿತ್ರದಲ್ಲಿ ಶ್ರೀಲೀಲಾ ನಾಯಕಿ. ಅಫ್ಕೋರ್ಸ್.. ಇದೇ ಚಿತ್ರದಲ್ಲಿ ಐಶ್ವರ್ಯಾ ಮೆನನ್ ಎಂಬ ಇನ್ನೊಬ್ಬ ನಾಯಕಿಯೂ ಇದ್ದಾರೆ.
ಈಗಾಗಲೇ ಕನ್ನಡದ ರಶ್ಮಿಕಾ ಮಂದಣ್ಣ ಮತ್ತು ನಭಾ ನಟೇಶ್ ಕನ್ನಡ ಚಿತ್ರಗಳಿಗೆ ಸಿಗದಷ್ಟು ದೂರ ಹೋಗಿದ್ದಾಗಿದೆ. ಮುಂದಿನ ಸರದಿ ಶ್ರೀಲೀಲಾ ಅವರದ್ದಾ. ಗೊತ್ತಿಲ್ಲ. ಸದ್ಯಕ್ಕೆ ಕನ್ನಡದಲ್ಲಿ ಶ್ರೀಲೀಲಾ ಧ್ರುವ ಸರ್ಜಾ ಜೊತೆ ದುಬಾರಿ ಹಾಗೂ ಧನ್ವೀರ್ ಜೊತೆ ಬೈಟು ಲವ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಚಂದನವನ ಫಿಲ್ಮ್ ಕ್ರಿಕೆಟ್ ಅಕಾಡೆಮಿ ಪ್ರಶಸ್ತಿಗಳಿಗೆ ಚಿತ್ರರಂಗದಲ್ಲಿ ವಿಶೇಷ ಸ್ಥಾನವಿದೆ. 2020ರಲ್ಲಿ ಹೊಸ ಚಿತ್ರಗಳ ಸಂಖ್ಯೆ ಕಡಿಮೆಯಿದ್ದರೂ, ಒಟಿಟಿ ಮತ್ತು ಥಿಯೇಟರ್ ಎರಡೂ ಕಡೆ ರಿಲೀಸ್ ಆದ ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಸೀನಿಯರ್ ಜರ್ನಲಿಸ್ಟುಗಳೇ ನೀಡುವ ಈ ಪ್ರಶಸ್ತಿ ಪ್ರದಾನ ಚಾಮರಾಜಪೇಟೆಯ ಕಲಾವಿದರ ಸಂಘದ ಕಟ್ಟಡದಲ್ಲಿ ನಡೆಯಿತು.
ಅತ್ಯುತ್ತಮ ನಟ : ಡಾಲಿ ದನಂಜಯ್ - ಚಿತ್ರ : ಪಾಪ್ಕಾರ್ನ್ ಮಂಕಿ ಟೈಗರ್
ಅತ್ಯುತ್ತಮ ನಟಿ : ಖುಷಿ - ಚಿತ್ರ : ದಿಯಾ
ಅತ್ಯುತ್ತಮ ನಿರ್ದೇಶಕ : ಮಂಸೋರೆ (1978 ಆಕ್ಟ್ )
ಮನುಷ್ಯೇತರ ವಿಭಾಗ : ನಾಯಿ ಸಿಂಬಾ. ಚಿತ್ರ : ನಾನು ಮತ್ತು ಗುಂಡ
ಅತ್ಯುತ್ತಮ ಪೋಷಕ ನಟ : ಅಚ್ಯುತ್ ಕುಮಾರ್ (ಮಾಯಾಬಜಾರ್)
ಅತ್ಯುತ್ತಮ ಪೋಷಕ ನಟಿ : ತಾರಾ ಅನುರಾಧಾ (ಶಿವಾರ್ಜುನ)
ಅತ್ಯುತ್ತಮ ಚಿತ್ರಕಥೆ : ಅಭಿಜಿತ್ & ಆಕಾಶ್ ಶ್ರೀವತ್ಸ (ಶಿವಾಜಿ ಸುರತ್ಕಲ್)
ಅತ್ಯುತ್ತಮ ಬಾಲನಟಿ : ಆರಾಧ್ಯ ಎನ್ ಚಂದ್ರ (ಜಂಟಲ್ಮನ್)
ಅತ್ಯುತ್ತಮ ಸಂಗೀತ ನಿರ್ದೇಶಕ : ರಘು ದೀಕ್ಷಿತ್ (ಲವ್ ಮಾಕ್ಟೇಲ್)
ಅತ್ಯುತ್ತಮ ಗೀತೆ : ನಾಗಾರ್ಜುನ ಶರ್ಮ, ಕಿನ್ನಿಲ್ ರಾಜ್ (ಜಂಟಲ್ಮನ್ ಚಿತ್ರದ ಮರಳಿ ಮನಸಾಗಿದೆ..)
ಅತ್ಯುತ್ತಮ ಗಾಯಕಿ : ಚಿನ್ಮಯಿ ಶ್ರೀಪಾದ್ (ದಿಯಾ ಚಿತ್ರದ ಸೋಲ್ ಆಫ್ ದಿಯಾ)
ಅತ್ಯುತ್ತಮ ಛಾಯಾಗ್ರಹಣ : ಶೇಖರ್ (ಪಾಪ್ಕಾರ್ನ್ ಮಂಕಿ ಟೈಗರ್)
ಅತ್ಯುತ್ತಮ ಸಂಭಾಷಣೆ : ಅಶೋಕ್ (ದಿಯಾ)
ಅತ್ಯುತ್ತಮ ಸಂಕಲನ : ದೀಪು ಎಸ್ ಕುಮಾರ್ (ಪಾಪ್ಕಾರ್ನ್ ಮಂಕಿ ಟೈಗರ್)
ಅತ್ಯುತ್ತಮ ನೃತ್ಯ ಸಂಯೋಜನೆ : ಎ ಹರ್ಷ (ಮಾಯಾಬಜಾರ್ `ಲೋಕ ಮಾಯಾ ಬಜಾರು..')
ಅತ್ಯುತ್ತಮ ಸಾಹಸ : ಜಾಲಿ ಬಾಸ್ಟಿನ್ (ಪಾಪ್ಕಾರ್ನ್ ಮಂಕಿ ಟೈಗರ್)
ಅತ್ಯುತ್ತಮ ಕಲಾ ನಿರ್ದೇಶನ : ಗುಣ (ಬಿಚ್ಚುಗತ್ತಿ)
ಅತ್ಯುತ್ತಮ ವಿಎಫ್ಎಕ್ಸ್ : ಕಾಣದಂತೆ ಮಾಯವಾದನು
ಪೊಗರು ಚಿತ್ರದ ಒಂದು ದೃಶ್ಯ ಈಗ ವಿವಾದವನ್ನೇ ಸೃಷ್ಟಿಸಿದೆ. ಹೋಮ ಮಾಡುವ ಬ್ರಾಹ್ಮಣ ಅರ್ಚಕರ ಮೇಲೆ ವಿಲನ್ ಪಾತ್ರಧಾರಿ ಶೂಗಾಲಿಡುವುದು, ಕೆಟ್ಟದಾಗಿ ಮಾತನಾಡುವುದು ವಿವಾದದ ಕಿಡಿ ಹೊತ್ತಿಸಿದೆ.
ಚಿತ್ರದ ಅದೊಂದು ದೃಶ್ಯದಿಂದ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ಇದು ಉದ್ದೇಶಪೂರ್ವಕವಾಗಿ ಆಗಿದ್ದಲ್ಲ. ತಿಳಿದೋ.. ತಿಳಿಯದೆಯೋ.. ನಮ್ಮಿಂದ ನೋವಾಗಿದ್ದರೆ ಕ್ಷಮಿಸಿಬಿಡಿ. ಕೋವಿಡ್ ಆದ ಮೇಲೆ ತುಂಬಾ ಕಷ್ಟಪಟ್ಟು ಸಿನಿಮಾ ಬಿಡುಗಡೆ ಮಾಡಿದ್ದೇವೆ. ದಯವಿಟ್ಟು ದೊಡ್ಡ ಮನಸ್ಸು ಮಾಡಿ ಎಂದು ಕೈಮುಗಿದು ಕೇಳಿಕೊಂಡಿದ್ದಾರೆ ನಿರ್ದೇಶಕ ನಂದಕಿಶೋರ್.
ನಂದಕಿಶೋರ್ ಅವರಿಗೆ ಈ ಕೂಡಲೇ ವಿವಾದಾತ್ಮಕ ದೃಶ್ಯವನ್ನು ಒತ್ತಾಯಿಸಿದ್ದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಮೂರ್ತಿ ಇಂದು ತಮ್ಮ ನಿರ್ಧಾರವನ್ನು ಹೇಳಲಿದ್ದಾರೆ.
ಈ ಮಧ್ಯೆ ನಂದಕಿಶೋರ್, ಸಚ್ಚಿದಾನಂದ ಮೂರ್ತಿ ಹಾಗೂ ಡಾ.ಭಾನುಪ್ರಕಾಶ್ ಅವರನ್ನೂ ಕೂಡಾ ಭೇಟಿ ಮಾಡಿ, ಅವರ ಎದುರಿನಲ್ಲೇ ಕ್ಷಮೆಯಾಚಿಸಿರುವುದರಿಂದ ವಿವಾದ ಇಲ್ಲಿಗೇ ಮುಗಿಯಬಹುದು ಎನ್ನುವ ನಿರೀಕ್ಷೆ ಇದೆ.
ಒಂದಂತೂ ಸತ್ಯ. ಚಿತ್ರರಂಗಕ್ಕೆ ಯಾವುದೇ ಧರ್ಮದ ಬಗ್ಗೆ ದ್ವೇಷವಂತೂ ಇಲ್ಲ. ಹಾಗೆ ನೋಡಿದರೆ ಕಲೆಗೆ ಜಾತಿ, ಧರ್ಮವೇ ಇಲ್ಲ. ಹೀಗಿದ್ದೂ ಅಪಚಾರವಾಗಿದ್ದರೆ ಕ್ಷಮಿಸಿ ಎಂದು ಚಿತ್ರತಂಡವೇ ಕೇಳಿಕೊಳ್ಳುತ್ತಿರುವಾಗ ಸಂಘಟನೆಗಳು ಕ್ಷಮಿಸುವ ಔದಾರ್ಯ ತೋರುತ್ತವಾ..? ಕಾದು ನೋಡಬೇಕು.
ರಾಬರ್ಟ್. ದರ್ಶನ್ ಅಭಿನಯದ ಈ ಚಿತ್ರ ಬಿಡುಗಡೆಗೂ ಮೊದಲೇ ಹವಾ ಎಬ್ಬಿಸಿದೆ. ಟೀಸರು, ಟ್ರೇಲರುಗಳ ಜೊತೆ ಇತ್ತೀಚೆಗೆ ರಿಲೀಸ್ ಆದ ಕಣ್ಣು ಹೊಡ್ಯಾಕ ಮೊನ್ನೀ ಕಲತ್ಯಾನಿ.. ಅನ್ನೋ ಉತ್ತರ ಕರ್ನಾಟಕದ ಕನ್ನಡವನ್ನೇ ರೊಮ್ಯಾಂಟಿಕ್ ಆಗಿ ಬಳಸಿಕೊಂಡಿರೋ ಹಾಡು ಹೊಸದೊಂದು ಥ್ರಿಲ್ ಕೊಟ್ಟಿದೆ. ಹೀಗಿರುವಾಗ ಇಡೀ ಚಿತ್ರತಂಡ ಉತ್ತರ ಕರ್ನಾಟಕದಿಂದಲೇ ದಿಗ್ವಿಜಯ ಆರಂಭಿಸುತ್ತಿದೆ.
ಫೆ.28ರಂದು ಹುಬ್ಬಳ್ಳಿಯ ರೈಲ್ವೇ ಗ್ರೌಂಡ್ಸ್ನಲ್ಲಿ ರಾಬರ್ಟ್ ಪ್ರೀ-ರಿಲೀಸ್ ಈವೆಂಟ್ ನಡೆಯುತ್ತಿದೆ. ಆ ಕಾರ್ಯಕ್ರಮದಲ್ಲಿ ದರ್ಶನ್, ತರುಣ್ ಸುಧೀರ್, ಉಮಾಪತಿ, ಆಶಾ ಭಟ್, ವಿನೋದ್ ಪ್ರಭಾಕರ್.. ಸೇರಿದಂತೆ ಇಡೀ ಚಿತ್ರತಂಡ ಪಾಲ್ಗೊಳ್ಳಲಿದೆ.