`
ಬ್ರಾಹ್ಮಣ ಸಮುದಾಯ ಮತ್ತು ಸಂಘಟನೆಗಳ ಒತ್ತಾಯಕ್ಕೆ ಪೊಗರು ಚಿತ್ರ ತಂಡ ಮಣಿದಿದೆ. ಚಿತ್ರದ ನಿರ್ದೇಶಕ ನಂದಕಿಶೋರ್ ಕ್ಷಮೆಯಾಚನೆಗೂ ಬಗ್ಗದ ಬ್ರಾಹ್ಮಣ ಸಂಘಟನೆಗಳು ಚಿತ್ರದಲ್ಲಿ 13 ದೃಶ್ಯಗಳಿಗೆ ಕತ್ತರಿ ಹಾಕಲು ಆಗ್ರಹಿಸಿದ್ದಾರೆ.
ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಕಚೇರಿಗೇ ಹೋಗಿ ನಂದಕಿಶೋರ್ ಕ್ಷಮೆ ಕೇಳಿದರೂ ಬ್ರಾಹ್ಮಣ ಸಮುದಾಯದವರ ಆಕ್ರೋಶ ಕಡಿಮೆಯಾಗಿರಲಿಲ್ಲ. ತಾರ್ಕಿಕ ಅಂತ್ಯ ಕಾಣಿಸುವ ಸಲುವಾಗಿ ಫಿಲಂ ಚೇಂಬರ್ನಲ್ಲಿ ದೊಡ್ಡ ಸಭೆಯೇ ನಡೆಯಿತು. ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥ ಸ್ವಾಮೀಜಿ, ಪೆಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು, ರಾಘವೇಶ್ವರ ಭಾರತಿ ಸ್ವಾಮೀಜಿ... ಹೀಗೆ ದೊಡ್ಡ ದೊಡ್ಡವರೇ ಧ್ವನಿಯೆತ್ತಿದಾಗ ಪೊಗರು ಚಿತ್ರತಂಡವೇ ಹೆಜ್ಜೆ ಹಿಂದಿಟ್ಟಿತು.
ಈಗ ಒಟ್ಟು 13 ಕಟ್ಗಳಿಗೆ ಚಿತ್ರತಂಡ ಒಪ್ಪಿದ್ದು, ಹೊಸದಾಗಿ ಸೆನ್ಸಾರ್ ಮಾಡಿಸಿ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅಷ್ಟೇ ಅಲ್ಲ, ಕೆಲವು ಸಂಭಾಷಣೆಗಳನ್ನು ಮ್ಯೂಟ್ ಮಾಡಲೂ ಚಿತ್ರತಂಡ ಒಪ್ಪಿದೆ.
ಸಾಲ್ಟ್ ಅನ್ನೋ ಹೊಸಬರ ಚಿತ್ರ ತೆರೆಗೆ ಸಿದ್ಧವಾಗಿದೆ. ಭರತ್ ನಂದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರೋ ಚಿತ್ರವಿದು. ನಿರ್ದೇಶಕರೂ ಅವರೇ. ಅಷ್ಟೇ ಅಲ್ಲ, ಚಿತ್ರದ ನಾಲ್ವರು ನಾಯಕರಲ್ಲಿ ಅವರೂ ಒಬ್ಬರು. ಭರತ್ ನಂದ, ಚೇತನ್ ಕುಮಾರ್, ಚಂದ್ರು ಛತ್ರಪತಿ, ಸತೀಶ್ ಮಳವಳ್ಳಿ ನಟಿಸಿರುವ ಚಿತ್ರದಲ್ಲಿ ವಿಜಯಶ್ರೀ ಕಲಬುರಗಿ, ಯಶಸ್ವಿನಿ ಶೆಟ್ಟಿ, ರಶ್ಮಿತಾ ಗೌಡ ಫೀಮೇಲ್ ಲೀಡ್ ಇದೆ.
ಉಪ್ಪಿದ್ದರಷ್ಟೇ ಅಡುಗೆ ರುಚಿಕರ. ಜೀವನವೂ ಹಾಗೆಯೇ. ಅಲ್ಲಿಯೂ ಉಪ್ಪಿನಂತ ಅಂಶಗಳಿರಬೇಕು ಅನ್ನೋ ಥೀಮ್ ಇಟ್ಟುಕೊಂಡು ಬಂದಿರೋ ಸಿನಿಮಾ ಸಾಲ್ಟ್.
ನೀನೇ ಮೊದಲು ನೀನೇ ಕೊನೆ.. ಹಾಡಿನ ಮೂಲಕ ಯುವಕರ ಎದೆಗೆ ಲಗ್ಗೆಯಿಟ್ಟ ಚೆಲುವೆ ಶ್ರೀಲೀಲಾ. ಕಿಸ್ ಮತ್ತು ಭರಾಟೆ ಚಿತ್ರಗಳಲ್ಲಿ ಗಮನ ಸೆಳೆದಿದ್ದ ಶ್ರೀಲೀಲಾ ಮೇಲೆ ಟಾಲಿವುಡ್ ಕಣ್ಣು ಬಿದ್ದಿದೆ. ಶ್ರೀಕಾಂತ್ ಪುತ್ರನ ಪೆಳ್ಳಿ ಸಂದಡಿ ಚಿತ್ರದ ಬೆನ್ನಲ್ಲೇ, ಮಾಸ್ ಮಹಾರಾಜ ರವಿತೇಜ ಶ್ರೀಲೀಲಾ ಮೇಲೆಕಣ್ಣು ಹಾಕಿದ್ದಾರೆ.
ತೆಲುಗಿನಲ್ಲಿ ತ್ರಿನಂದ ರಾವ್ ಎಂಬುವವರು ನಿರ್ದೇಶಿಸುತ್ತಿರೋ ಆರ್ಟಿ68 (ಚಿತ್ರಕ್ಕಿನ್ನೂ ಟೈಟಲ್ ಸಿಕ್ಕಿಲ್ಲ) ಚಿತ್ರದಲ್ಲಿ ಶ್ರೀಲೀಲಾ ನಾಯಕಿ. ಅಫ್ಕೋರ್ಸ್.. ಇದೇ ಚಿತ್ರದಲ್ಲಿ ಐಶ್ವರ್ಯಾ ಮೆನನ್ ಎಂಬ ಇನ್ನೊಬ್ಬ ನಾಯಕಿಯೂ ಇದ್ದಾರೆ.
ಈಗಾಗಲೇ ಕನ್ನಡದ ರಶ್ಮಿಕಾ ಮಂದಣ್ಣ ಮತ್ತು ನಭಾ ನಟೇಶ್ ಕನ್ನಡ ಚಿತ್ರಗಳಿಗೆ ಸಿಗದಷ್ಟು ದೂರ ಹೋಗಿದ್ದಾಗಿದೆ. ಮುಂದಿನ ಸರದಿ ಶ್ರೀಲೀಲಾ ಅವರದ್ದಾ. ಗೊತ್ತಿಲ್ಲ. ಸದ್ಯಕ್ಕೆ ಕನ್ನಡದಲ್ಲಿ ಶ್ರೀಲೀಲಾ ಧ್ರುವ ಸರ್ಜಾ ಜೊತೆ ದುಬಾರಿ ಹಾಗೂ ಧನ್ವೀರ್ ಜೊತೆ ಬೈಟು ಲವ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಯುವರತ್ನ ಚಿತ್ರದ ಊರಿಗೊಬ್ಬ ರಾಜಾ.. ಅನ್ನೋ ಹಾಡು ಫೆಬ್ರವರಿ 25ರಂದು ರಿಲೀಸ್ ಆಗುತ್ತಿದೆ. ಇದು ಸ್ವತಃ ಪುನೀತ್ ಅವರೇ ಹಾಡಿರೋ ಹಾಡು. ಪುನೀತ್ ಜೊತೆ ರಮ್ಯಾ ಬೆಹರಾ ಕೂಡಾ ಹಾಡಿದ್ದಾರೆ. ಫೆಬ್ರವರಿ 25ರ ಮಧ್ಯಾಹ್ನ 3 ಗಂಟೆ 33 ನಿಮಿಷಕ್ಕೆ ಊರಿಗೊಬ್ಬ ರಾಜಾ.. ಹಾಡು ರಿಲೀಸ್ ಆಗಲಿದೆ. ತೆಲುಗಿನಲ್ಲಿ ಊರಿಕೊಕ್ಕರಾಜಾ.. ವರ್ಷನ್ ಕೂಡಾ ಆ ಕ್ಷಣದಲ್ಲೇ ಬರಲಿದೆ.
ಈ ಹಾಡಿಗೆ ಕನ್ನಡದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರೇ ಸಾಹಿತ್ಯ ಕೊಟ್ಟಿದ್ದರೆ, ತೆಲುಗಿನಲ್ಲಿ ಕಲ್ಯಾಣ್ ಚಕ್ರವರ್ತಿ ಬರೆದಿದ್ದಾರೆ. ಅಂದಹಾಗೆ ಪಾಠಶಾಲಾ ಹಾಡು ಯಾವಾಗ ರಿಲೀಸ್ ಅನ್ನೋದು ಕನ್ಫರ್ಮ್ ಆಗಿಲ್ಲ.
ಪೊಗರು ಚಿತ್ರದ ಒಂದು ದೃಶ್ಯ ಈಗ ವಿವಾದವನ್ನೇ ಸೃಷ್ಟಿಸಿದೆ. ಹೋಮ ಮಾಡುವ ಬ್ರಾಹ್ಮಣ ಅರ್ಚಕರ ಮೇಲೆ ವಿಲನ್ ಪಾತ್ರಧಾರಿ ಶೂಗಾಲಿಡುವುದು, ಕೆಟ್ಟದಾಗಿ ಮಾತನಾಡುವುದು ವಿವಾದದ ಕಿಡಿ ಹೊತ್ತಿಸಿದೆ.
ಚಿತ್ರದ ಅದೊಂದು ದೃಶ್ಯದಿಂದ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ಇದು ಉದ್ದೇಶಪೂರ್ವಕವಾಗಿ ಆಗಿದ್ದಲ್ಲ. ತಿಳಿದೋ.. ತಿಳಿಯದೆಯೋ.. ನಮ್ಮಿಂದ ನೋವಾಗಿದ್ದರೆ ಕ್ಷಮಿಸಿಬಿಡಿ. ಕೋವಿಡ್ ಆದ ಮೇಲೆ ತುಂಬಾ ಕಷ್ಟಪಟ್ಟು ಸಿನಿಮಾ ಬಿಡುಗಡೆ ಮಾಡಿದ್ದೇವೆ. ದಯವಿಟ್ಟು ದೊಡ್ಡ ಮನಸ್ಸು ಮಾಡಿ ಎಂದು ಕೈಮುಗಿದು ಕೇಳಿಕೊಂಡಿದ್ದಾರೆ ನಿರ್ದೇಶಕ ನಂದಕಿಶೋರ್.
ನಂದಕಿಶೋರ್ ಅವರಿಗೆ ಈ ಕೂಡಲೇ ವಿವಾದಾತ್ಮಕ ದೃಶ್ಯವನ್ನು ಒತ್ತಾಯಿಸಿದ್ದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಮೂರ್ತಿ ಇಂದು ತಮ್ಮ ನಿರ್ಧಾರವನ್ನು ಹೇಳಲಿದ್ದಾರೆ.
ಈ ಮಧ್ಯೆ ನಂದಕಿಶೋರ್, ಸಚ್ಚಿದಾನಂದ ಮೂರ್ತಿ ಹಾಗೂ ಡಾ.ಭಾನುಪ್ರಕಾಶ್ ಅವರನ್ನೂ ಕೂಡಾ ಭೇಟಿ ಮಾಡಿ, ಅವರ ಎದುರಿನಲ್ಲೇ ಕ್ಷಮೆಯಾಚಿಸಿರುವುದರಿಂದ ವಿವಾದ ಇಲ್ಲಿಗೇ ಮುಗಿಯಬಹುದು ಎನ್ನುವ ನಿರೀಕ್ಷೆ ಇದೆ.
ಒಂದಂತೂ ಸತ್ಯ. ಚಿತ್ರರಂಗಕ್ಕೆ ಯಾವುದೇ ಧರ್ಮದ ಬಗ್ಗೆ ದ್ವೇಷವಂತೂ ಇಲ್ಲ. ಹಾಗೆ ನೋಡಿದರೆ ಕಲೆಗೆ ಜಾತಿ, ಧರ್ಮವೇ ಇಲ್ಲ. ಹೀಗಿದ್ದೂ ಅಪಚಾರವಾಗಿದ್ದರೆ ಕ್ಷಮಿಸಿ ಎಂದು ಚಿತ್ರತಂಡವೇ ಕೇಳಿಕೊಳ್ಳುತ್ತಿರುವಾಗ ಸಂಘಟನೆಗಳು ಕ್ಷಮಿಸುವ ಔದಾರ್ಯ ತೋರುತ್ತವಾ..? ಕಾದು ನೋಡಬೇಕು.