`
ಮಾದಕ ನಟಿ ಸುಮನ್ ರಂಗನಾಥ್ ವಯಸ್ಸು 50 ದಾಟಿದ್ದರೂ, ಅದು ಕಾಣದಷ್ಟು ಚೆಲುವೆ. ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸುಮನ್ ರಂಗನಾಥ್, ಸನ್ಯಾಸತ್ವ ಸ್ವೀಕರಿಸಿಬಿಟ್ಟರಾ ಅನ್ನೋ ಅನುಮಾನ ಮೂಡಿಸಿದ್ದು ಒಂದು ಫೋಟೋ.
ಕೇಸರಿ ವಸ್ತ್ರ, ಕೊರಳಲ್ಲಿ ರುದ್ರಾಕ್ಷಿ ಮಾಲೆ, ಮೇಕಪ್ಪೂ ಇಲ್ಲದ ಆ ಫೋಟೋ ನೋಡಿ ಬೆಚ್ಚಿಬಿದ್ದವರಿಗೆ ಒಂದು ರಿಲೀಫ್ ಸುದ್ದಿ ಇದು. ಇದು ಸಿನಿಮಾಗಾಗಿ ಮಾತ್ರ.
ಸುಮನ್ ರಂಗನಾಥ್ ಅವರಿಗೆ ಈ ಸನ್ಯಾಸಿನಿ ವೇಷ ಹಾಕಿಸಿರುವುದು ನಿರ್ದೇಶಕ ವಿಜಯ ಪ್ರಸಾದ್. ಜಗ್ಗೇಸ್, ಆದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿರೋ ಚಿತ್ರ ಇದೇ ವರ್ಷ ರಿಲೀಸ್ ಆಗುತ್ತಿದ್ದು, ಸುಮನ್ ರಂಗನಾಥ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ ಅನ್ನೋದಂತೂ ಸತ್ಯ.
ಪ್ರಭಾಸ್. ನ್ಯಾಷನಲ್ ಸ್ಟಾರ್. ತೆಲುಗು ಚಿತ್ರರಂಗದ ಸೂಪರ್ ಸ್ಟಾರ್. ಇವರ ಜೊತೆ ಕೈಜೋಡಿಸಿರುವುದು ಸ್ಯಾಂಡಲ್ವುಡ್ ಸೆನ್ಸೇಷನ್ ಪ್ರಶಾಂತ್ ನೀಲ್ ಮತ್ತು ವಿಜಯ್ ಕಿರಗಂದೂರು. ಕೆಜಿಎಫ್ ಚಾಪ್ಟರ್ 2 ಮುಗಿಸಿದ ಬೆನ್ನಲ್ಲೇ ಸಲಾರ್ ಕೈಗೆತ್ತಿಕೊಂಡಿರೋ ಪ್ರಶಾಂತ್ ನೀಲ್, ಸಲಾರ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.
ಒಂದು ವರ್ಷ ಮೊದಲೇ.. ಪಕ್ಕಾ ಲೆಕ್ಕ ಹಾಕಿದರೆ 13 ತಿಂಗಳು 14 ದಿನ ಮೊದಲೇ ರಿಲೀಸ್ ಡೇಟ್ ಘೋಷಿಸಿದೆ ಹೊಂಬಾಲೆ ಫಿಲಂಸ್. ಪ್ರಭಾಸ್, ಶ್ರುತಿ ಹಾಸನ್ ಪ್ರಧಾನ ಪಾತ್ರದಲ್ಲಿರೋ ಸಿನಿಮಾ ಸಲಾರ್, 2022ರ ಸೆನ್ಸೇಷನಲ್ ಮೂವಿ ಆಗೋದಂತೂ ಪಕ್ಕಾ.
ದರ್ಶನ್ ಎಲ್ಲಿದ್ದರೂ.. ಹೇಗಿದ್ದರೂ ಅಭಿಮಾನಿಗಳು ಮುತ್ತಿಕೊಳ್ಳೋದು ಸಹಜ. ಹುಬ್ಬಳ್ಳಿಯಲ್ಲಿ ಬಹಳ ದಿನಗಳ ನಂತರ ದರ್ಶನ್ ಒಂದು ದೊಡ್ಡ ವೇದಿಕೆಯಲ್ಲಿ ಕಾಣಿಸಿಕೊಂಡಾಗ ಅಭಿಮಾನಿಗಳ ಕ್ರೇಜ್ ದೊಡ್ಡದಾಗಿಯೇ ಇತ್ತು. ಅಭಿಮಾನಿಗಳನ್ನು ಕಂಟ್ರೋಲ್ ಮಾಡೋಕೆ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯ್ತು. ಅಭಿಮಾನಿಗಳ ಕುರಿತೇ ಮಾತನಾಡಿದ ದರ್ಶನ್
ಅಭಿಮಾನಿಗಳನ್ನು ಗದರಿಸಿದರು. ಜೊತೆಯಲ್ಲಿಯೇ ಪರೋಕ್ಷವಾಗಿ ಇತ್ತೀಚಿನ ಜಗ್ಗೇಶ್ ವಿವಾದವನ್ನು ನೆನಪಿಸುವಂತೆ ಮಾತನಾಡಿದ ದರ್ಶನ್ `ಕನ್ನಡ ಚಿತ್ರರಂಗದಲ್ಲಿ ಎಲ್ಲ ಕಲಾವಿದರದ್ದೂ ಒಂದೇ ಜಾತಿ. ನಾವು ಯಾವ ಜಾತಿಗಾಗಿಯೂ ಹುಟ್ಟಿಲ್ಲ. ಯಾರೊಬ್ಬರ ಸ್ವತ್ತೂ ಅಲ್ಲ. ಅಭಿಮಾನಿಗಳೊಂದೇ ನಮ್ಮ ಜಾತಿ' ಎಂದರಷ್ಟೇ ಅಲ್ಲ `ದರ್ಶನ್ ಅಭಿಮಾನಿಗಳಿಗೆ ಕಾಕಾ ಹೊಡೀತಾನೆ ಅಂತಾರೆ. ನಾನು ಹಾಗೆಲ್ಲ ಮಾಡಲ್ಲ. ಅಭಿಮಾನಿಗಳಿಗೆ ನಾನು ಉಗಿದಿದ್ದೂ ಇದೆ. ತಲೆ ಮೇಲೆ ನಾಲ್ಕು ಬಾರಿಸಿ ಬೈದಿದ್ದೂ ಇದೆ' ಎಂದರು.
ಇದೇ ವೇಳೆ ನಾವು ಗಾಡಿ ಓಡಿಸುವಾಗ ಹತ್ತಿರ ಬರಬೇಡಿ. ಓವರ್ ಟೇಕ್ ಮಾಡೋಕೆ ಹೋಗಬೇಡಿ. ನನ್ನನ್ನು ನೋಡದೇ ಇದ್ದರೂ ಪರವಾಗಿಲ್ಲ. ಮನೆಯಲ್ಲಿ ಅಪ್ಪ, ಅಮ್ಮ, ಹೆಂಡತಿ, ಮಕ್ಕಳು ಇರ್ತಾರೆ ಅನ್ನೋದನ್ನು ಮರೆಯಬೇಡಿ ಎಂದು ಬುದ್ದಿವಾದ ಹೇಳಿದರು. ಅಂದಹಾಗೆ ದರ್ಶನ್ ಇಷ್ಟೆಲ್ಲ ಹೇಳಿದ್ದು ರಾಬರ್ಟ್ ಬಿಡಗಡೆಗೆ ಮುನ್ನ ನಡೆದ ಕಾರ್ಯಕ್ರಮದಲ್ಲಿ.
ಹೀರೋ. ರಿಷಬ್ ಶೆಟ್ಟಿ ಬ್ಯಾನರಿನ ಹೊಸ ಸಿನಿಮಾ. ಮಾರ್ಚ್ 5ಕ್ಕೆ ರಿಲೀಸ್ ಆಗುತ್ತಿರೋ ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇರೋದು ಎರಡು ಕಾರಣಕ್ಕೆ. ಇದು ಬೆಲ್ಬಾಟಂ ನಂತರ ರಿಷಬ್ ಶೆಟ್ಟಿ ಮತ್ತೆ ನಾಯಕನಾಗಿ ನಟಿಸಿರೋ ಸಿನಿಮಾ ಎನ್ನುವುದು ಒಂದಾದ್ರೆ, ಎರಡನೆಯದು ಚಿತ್ರದ ಟ್ರೇಲರ್.
ಒಂದು ಸಿನಿಮಾದಲ್ಲಿ ಏನೇನೆಲ್ಲ ಇರಬಹುದೋ.. ಅದೆಲ್ಲವನ್ನೂ ಟ್ರೇಲರಿನಲ್ಲಿಯೇ ಕೊಟ್ಟಿರೋದು ಹೀರೋ ಚಿತ್ರದ ಪ್ಲಸ್ ಪಾಯಿಂಟ್. ಅಲ್ಲಿ ಕಾಮಿಡಿ, ಸಸ್ಪೆನ್ಸ್, ಥ್ರಿಲ್, ಹಾರರ್, ಲವ್.. ಎಲ್ಲವನ್ನೂ ಇಟ್ಟಿದ್ದಾರೆ. ಆದರೆ.. ಯಾವುದನ್ನೂ ಬಿಟ್ಟುಕೊಟ್ಟಿಲ್ಲ. ಕುತೂಹಲವನ್ನು ಕಾಯ್ದಿರಿಸಿದ್ದಾರೆ ರಿಷಬ್ ಶೆಟ್ಟಿ.
ಅಂದಹಾಗೆ ಈ ಚಿತ್ರಕ್ಕೆ ರಿಷಬ್ ಹೀರೋ ಮತ್ತು ನಿರ್ಮಾಪಕ ಮಾತ್ರ. ಅವರ ಜೊತೆಯಲ್ಲೇ ಇದ್ದ ಭರತ್ ರಾಜ್ ನಿರ್ದೇಶಕ. ಆದರೆ ಕಥೆಯಲ್ಲಿ ರಿಷಬ್ ಶೆಟ್ಟಿ ಪಾತ್ರವೂ ಇದೆ. ಗಾನವಿ ಲಕ್ಷ್ಮಣ್ ಹೀರೋಯಿನ್. ರಿಷಬ್ ಅವರ ಫೇವರಿಟ್ ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ. ಜಯಣ್ಣ ಕಂಬೈನ್ಸ್ ಮೂಲಕ ರಿಲೀಸ್ ಆಗುತ್ತಿರೋ ಸಿನಿಮಾ, ಬೆಲ್ಬಾಟಂನ್ನೂ ಮೀರಿದ ಯಶಸ್ಸು ಕಾಣಲಿದೆ ಎನ್ನುವುದು ಚಿತ್ರ ನೋಡಿದವರ ಮಾತು.
ಇದೇ ಫೆಬ್ರವರಿ 28ರಿಂದ ಬಿಗ್ ಬಾಸ್ ಶೋ ಶುರುವಾಗುತ್ತಿದೆ. ಈ ಬಾರಿಯೂ 17 ಸ್ಪರ್ಧಿಗಳಿರಲಿದ್ದಾರೆ. ಎಂದಿನಂತೆ ಸಂಗೀತ, ಸಿನಿಮಾ, ಕಿರುತೆರೆ, ಕ್ರೀಡೆ, ಸೆಮಿ-ಸೆಲಬ್ರಿಟಿಗಳು ಎಲ್ಲರೂ ಇರುತ್ತಾರೆ. ಇದರಲ್ಲಿ ಈ ಬಾರಿಯ ಸ್ಪೆಷಲ್ ಎಂದರೆ ಒಬ್ಬ ರಾಜಕಾರಣಿ.
ಯೆಸ್, ಈ ಬಾರಿ ಒಬ್ಬ ಪೊಲಿಟಿಕಲ್ ಲೀಡರ್ ಕೂಡಾ ಇದ್ದಾರಂತೆ. ಅವರು ಯಾರು ಅನ್ನೋದನ್ನು ಕಲರ್ಸ್ ಬಿಟ್ಟುಕೊಟ್ಟಿಲ್ಲ. ಬಿಗ್ಬಾಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಲರ್ಸ್ ಟಿವಿ ಪರಮೇಶ್ವರ್ ಗುಂಡ್ಕಲ್ ಈ ಒಬ್ಬ ರಾಜಕಾರಣಿಯೂ ಇರಲಿದ್ದಾರೆ ಎಂದು ಹೇಳಿದ್ದಾರೆ. ಅವರು ಸುದೀಪ್ ಅವರಿಗೂ ಗೊತ್ತಂತೆ.
ಎಲ್ಲ 17 ಜನರೂ ಕ್ವಾರಂಟೈನ್ನಲ್ಲಿದ್ದಾರೆ. ಸ್ಸೋ.. ಈಗ ಚೆಕ್ ಮಾಡ್ತಾ ಹೋಗಿ, ಸುದೀಪ್ ಅವರಿಗೂ ಗೊತ್ತಿರೋ.. ಕಳೆದ ಕೆಲ ದಿನಗಳಿಂದ ಮಿಸ್ ಆಗಿರೋ ಆ ರಾಜಕೀಯ ನಾಯಕ ಯಾರು ಅನ್ನೋದನ್ನ.