` Flash Back - chitraloka.com | Kannada Movie News, Reviews | Image
ಹೀರೋ ಮ್ಯೂಸಿಕ್ ಚಾಲೆಂಜ್

User Rating: 0 / 5

Star inactiveStar inactiveStar inactiveStar inactiveStar inactive

ಹೀರೋ ಚಿತ್ರದ ಹಾಡೊಂದು ರಿಲೀಸ್ ಆಗಿದೆ. ಅದರಲ್ಲೂ ನೆನಪಿನ ಹುಡುಗಿಯೇ.. ಹಾಡು ಗುನುಗುವ ಗುಣವಿರೋ ಹಾಡು. ಒನ್ಸ್ ಎಗೇಯ್ನ್ ಅಜನೀಶ್ ಲೋಕನಾಥ್ ಮೆಲೋಡಿ ಸ್ಕೋರ್ ಮಾಡಿದ್ದಾರೆ. ಆದರೆ ಈ ಚಿತ್ರದ ಮ್ಯೂಸಿಕ್ ಮತ್ತು ಅದರ ಚಾಲೆಂಜ್ ಕಥೆ ಬೇರೆಯೇ ಇದೆ.

ಎಲ್ಲ ಚಿತ್ರಗಳಿಗೂ ಮ್ಯೂಸಿಕ್ ಮಾಡೋ ಸ್ಟೈಲೇ ಬೇರೆ. ಆದರೆ ಹೀರೋಗೆ ಮ್ಯೂಸಿಕ್ ಮಾಡಿದ ಅನುಭವವೇ ಬೇರೆ. ಸಾಮಾನ್ಯವಾಗಿ ಚಿತ್ರದ ಬಗ್ಗೆ ಡಿಸ್ಕಷನ್ ನಡೆಯುವಾಗಲೇ ಹಾಡು, ಮ್ಯೂಸಿಕ್‍ಗಳ ಒಂದು ರಫ್ ವರ್ಕ್ ಆದರೂ ಆಗಿರುತ್ತೆ. ಆದರೆ ಹೀರೋ ಚಿತ್ರದಲ್ಲಿ ಹಾಗಾಗಲಿಲ್ಲ. ಹೀರೋ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಬಂದ ಮೇಲೆ ರಿಷಬ್ ಶೆಟ್ಟಿ ಮ್ಯೂಸಿಕ್ ಮಾಡೋಕೆ ಹೇಳಿದರು ಎನ್ನುತ್ತಾರೆ ಅಜನೀಶ್.

ಅದು ನನಗೆ ಚಾಲೆಂಜಿಂಗ್ ಆಗಿತ್ತು. ನಮ್ಮ ಕಂಪೋಸಿಂಗ್ ಮೇಲೆ ಎಲ್ಲರೂ ಸೀನ್ ಶೂಟ್ ಮಾಡಿದ್ರೆ, ಇಲ್ಲಿ ಸೀನ್‍ಗಳಿಗೆ ತಕ್ಕಂತೆ ಮ್ಯೂಸಿಕ್ ಕಂಪೋಸ್ ಮಾಡೋ ಸವಾಲು. ರಿಷಬ್ ಅವರಂತೂ ನನಗೆ 3 ಹಾಡು ಬೇಕು. ಎಲ್ಲಿ, ಯಾವ ಪಾರ್ಟ್‍ನಲ್ಲಿದ್ದರೆ ಓಕೆ ಅನ್ನೋದನ್ನು ನೋಡಿ ಕಂಪೋಸ್ ಮಾಡಿಕೊಡು ಎಂದರು. ಮೊದ ಮೊದಲು ತಲೆ ಕೆಟ್ಟಿದ್ದು ಹೌದಾದರೂ, ಆಮೇಲೆ ಅದು ಕೊಟ್ಟ ಥ್ರಿಲ್ಲೇ ಬೇರೆ ಎಂದಿದ್ದಾರೆ ಅಜನೀಶ್.

ಅಜನೀಶ್ ಲೋಕನಾಥ್ ಮತ್ತು ರಿಷಬ್ ಶೆಟ್ಟಿ ಅವರ ಸಂಬಂಧ ಬೇರೆಯದೇ ರೀತಿಯದ್ದು. ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಬೆಲ್ ಬಾಟಂ..ಹೀಗೆ ರಿಷಬ್ ಶೆಟ್ಟಿ ಜರ್ನಿಯಲ್ಲಿ ಅಜನೀಶ್ ಕೂಡಾ ಜೊತೆ ಜೊತೆಯಲಿ ಹೆಜ್ಜೆ ಹಾಕಿದ್ದಾರೆ. ಹೀರೋ ಚಾಲೆಂಜ್‍ನ್ನೂ ಸೊಗಸಾಗಿ ಗೆದ್ದಿದ್ದಾರೆ. ಮುಂದಿನದ್ದು ಪ್ರೇಕ್ಷಕರ ಚಾಲೆಂಜ್.

 

ರಾಬರ್ಟ್ ಟೀಂಗೆ ಆಶಾ ಭಟ್ ಬಂದಿದ್ದು ಹೇಗೆ..?

User Rating: 0 / 5

Star inactiveStar inactiveStar inactiveStar inactiveStar inactive

ಆಶಾ ಭಟ್, ಮಿಸ್ ಸುಪ್ರಾ ಇಂಟರ್‍ನ್ಯಾಷನಲ್ ಅವಾರ್ಡ್ ವಿಜೇತೆ. ಅಪ್ಪಟ ಕನ್ನಡತಿಯೇ ಆದರೂ ಮಾಡೆಲಿಂಗ್ ವೃತ್ತಿಯಲ್ಲಿ ತೊಡಗಿದ ಮೇಲೆ ಮುಂಬೈನಲ್ಲೇ ಸೆಟಲ್ ಆಗಿದ್ದವರು. ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದ ಆಶಾ ಭಟ್ ತರುಣ್ ಸುಧೀರ್ ಕಣ್ಣಿಗೆ ಬಿದ್ದಿದ್ದು ಹೇಗೆ..?

ನಾನು ಮುಂಬೈನಲ್ಲೇ ಇದ್ದೆ. ಮಾಡೆಲಿಂಗ್ ಮಾಡುತ್ತಿದ್ದ ಕಾರಣ, ಬಾಲಿವುಡ್ ಆಫರ್‍ಗಳು ಬರೋಕೆ ಶುರುವಾಯ್ತು. ಆಗ ಸಿಕ್ಕ ಆಫರ್ ಹಿಂದಿಯ ಜಂಗ್ಲಿ ಸಿನಿಮಾ. ವಿದ್ಯುತ್ ಜಮ್ವಾಲ್ ಎದುರು ನಟಿಸಿದ್ದೆ. ಅದನ್ನು ನೋಡಿ ತರುಣ್ ಸುಧೀರ್ ನನ್ನನ್ನು ಕಾಂಟ್ಯಾಕ್ಟ್ ಮಾಡಿದರು. ನನಗೂ ಕ್ಯಾರೆಕ್ಟರ್, ಕಥೆ ಮತ್ತು ಟೀಂ ಇಷ್ಟವಾಯ್ತು. ಒಪ್ಪಿಕೊಂಡೆ ಎಂದಿದ್ದಾರೆ ಆಶಾ ಭಟ್.

ಆಶಾ ಭಟ್, ಅವರ ಆಕ್ಟಿಂಗ್ ಸ್ಕಿಲ್ ಮತ್ತು ಕಾನ್ಫಿಡೆನ್ಸ್ ರಾಬರ್ಟ್ ಚಿತ್ರಕ್ಕೆ ಆಕೆಯನ್ನು ಓಕೆ ಮಾಡಲು ಕಾರಣವಂತೆ. ತರುಣ್ ಸುಧೀರ್‍ಗೂ ಇದು ದೊಡ್ಡ ಚಾಲೆಂಜ್. ದರ್ಶನ್, ವಿನೋದ್ ಪ್ರಭಾಕರ್, ದೇವರಾಜ್, ಜಗಪತಿ ಬಾಬು, ರವಿಶಂಕರ್‍ರಂತಹ ದಿಗ್ಗಜರನ್ನು ಹ್ಯಾಂಡಲ್ ಮಾಡೋದು ಸುಲಭದ ವಿಷಯ ಅಲ್ಲ. ನಿರ್ಮಾಪಕ ಉಮಾಪತಿಯವರಂತೂ ದೊಡ್ಡ ಚಾಲೆಂಜ್‍ನ್ನೇ ತೆಗೆದುಕೊಂಡಿದ್ದಾರೆ. ಅವರೆಲ್ಲರ ಶ್ರಮಕ್ಕೆ ಮಾರ್ಚ್ 11ರಂದು ಪ್ರೇಕ್ಷಕರ ರೆಸ್ಪಾನ್ಸ್‍ನಲ್ಲಿ ಬೆಲೆ ಸಿಗಲಿದೆ.

2016ರಿಂದ 2021ರವರೆಗೆ ರಾಬರ್ಟ್ ಜರ್ನಿ

User Rating: 0 / 5

Star inactiveStar inactiveStar inactiveStar inactiveStar inactive

2016ರಲ್ಲಿ ದರ್ಶನ್ ಉಮಾಪತಿ ಭೇಟಿ

2017ರಲ್ಲಿ ತರುಣ್ ಸುದೀರ್ ಫೈನಲ್

2018ರಲ್ಲಿ ಕಥೆಗೆ ಗ್ರೀನ್ ಸಿಗ್ನಲ್

2019ರಲ್ಲಿ ಶೂಟಿಂಗ್ ಶುರು, 2020ರಲ್ಲಿ ಕಂಪ್ಲೀಟ್

2021ರಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ..

ರಾಬರ್ಟ್ ಸಿನಿಮಾದ ಈ ಸುದೀರ್ಘ ಜರ್ನಿಯನ್ನು ಬಿಚ್ಚಿಟ್ಟಿದ್ದಾರೆ ನಿರ್ಮಾಪಕ ಉಮಾಪತಿ. ಚಿತ್ರದ ಹೀರೋ ದರ್ಶನ್ ಆಗಲೀ, ನಿರ್ದೇಶಕ ತರುಣ್ ಸುಧೀರ್ ಆಗಲೀ.. ಪ್ರತಿ ಹಂತದಲ್ಲೂ ಹೇಳುತ್ತಿರೋ ಮಾತು ಉಮಾಪತಿಯವರ ವರ್ಚಸ್ಸು ಹೆಚ್ಚಿಸಿರೋದು ಸುಳ್ಳಲ್ಲ.

ಈ ಚಿತ್ರದ ನಿರ್ಮಾಪಕ ಉಮಾಪತಿ ಚಿತ್ರದ ಮೊದಲ ಹೀರೋ ಎಂದಿದ್ದರು ದರ್ಶನ್. ಅದನ್ನು ಯೆಸ್ ಎಂದಿದ್ದರು ತರುಣ್. ಏಕೆಂದರೆ 2020ರಲ್ಲಿ ಕಂಪ್ಲೀಟ್ ಆದ ಚಿತ್ರಕ್ಕೆ ಒಟಿಟಿಯಿಂದ ಒಳ್ಳೆಯ ಡಿಮ್ಯಾಂಡ್ ಬಂದರೂ ರಿಲೀಸ್ ಮಾಡದೆ ತಡೆದಿದ್ದ ಉಮಾಪತಿ, ಈಗ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಮಾರ್ಚ್ 11ಕ್ಕೆ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಈ ವೇಳೆ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಬರ್ಟ್ ಚಿತ್ರದ 5 ವರ್ಷದ ಜರ್ನಿಯನ್ನು ಚುಟುಕಾಗಿ ಬಿಚ್ಚಿಟ್ಟಿದ್ದಾರೆ ಉಮಾಪತಿ.

ಬೆಲ್ಬಾಟಂ ಕ್ಲಾಸ್.. ಹೀರೋ ಕ್ಲಾಸ್ ಮಸಾಲಾ..

User Rating: 0 / 5

Star inactiveStar inactiveStar inactiveStar inactiveStar inactive

ಹೀರೋ ಚಿತ್ರದ ಬಗ್ಗೆ ಪ್ರೇಕ್ಷಕರು ಇಷ್ಟೆಲ್ಲ ಕುತೂಹಲದಿಂದ ಕಾಯ್ತಿರೋದಕ್ಕೆ ಕಾರಣ ಬೆಲ್ಬಾಟಂ. ಯಾಕಂದ್ರೆ,

ಬೆಲ್ ಬಾಟಂ ಮಾಸ್ ಅಲ್ಲ. ಪಕ್ಕಾ ಕ್ಲಾಸ್.

ಆದರೆ, ಹೀರೋ ಹಾಗಿಲ್ಲ. ಅಲ್ಲೊಂದು ರೊಮ್ಯಾಂಟಿಕ್ ಲವ್ ಸ್ಟೋರಿ, ಬಿಸಿ ನೆತ್ತರನ್ನೇ ಕುಡಿಯುವ ಕ್ರೌರ್ಯ, ಫೈಟಿಂಗ್, ಚೇಸಿಂಗ್.. ಎಲ್ಲವೂ ಇದೆ. ಆದರೆ.. ಎಲ್ಲಿಯೂ ಕ್ಲಾಸ್ ಟಚ್ ಕಳೆದುಕೊಂಡಿಲ್ಲ.ಜೊತೆಗೆ ಹೀರೋ ಅನ್ನೋ ಮಾಸ್ ಟೈಟಲ್.

ಹೀಗಾಗಿ.. ಹೀರೋ ಚಿತ್ರವನ್ನು ಕ್ಲಾಸ್ ಮಸಾಲಾ ಎನ್ನಬಹುದು.

ಭರತ್ ರಾಜ್ ಅನ್ನೋ ತಮ್ಮದೇ ಗರಡಿಯ ಹುಡುಗನ ಬೆನ್ನಿಗೆ ನಿಂತು, ಚೆಂದದ ಚಿತ್ರ ಕಟ್ಟಿಕೊಟ್ಟಂತಿದೆ ರಿಷಬ್ ಶೆಟ್ಟಿ & ಟೀಂ. ರಿಷಬ್ ಶೆಟ್ಟಿಯ ಎದುರು ನಟಿಸಿರೋ ಗಾನವಿ ಲಕ್ಷ್ಮಣ್, ಹೀರೋ ಪಾತ್ರಕ್ಕೆ ಸೇರಿಗೆ ಸವ್ವಾಸೇರು ಎನ್ನುವಂತೆ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಕಣ್ಣುಗಳಲ್ಲೇ ಕೊಲ್ಲುತ್ತಿದ್ದಾರೆ.

ಇನ್ನು ಗ್ರಾಫಿಕ್ಸ್ ಕೆಲಸ ಮೇಲ್ನೋಟಕ್ಕೆ ಗೊತ್ತೇ ಆಗದಂತೆ ವರ್ಕೌಟ್ ಆದ ಹಾಗಿದೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಬೇರೆಯದ್ದೇ ಮ್ಯಾಜಿಕ್ ಇರುವ ಹಾಗಿದೆ. ಮೊದಲು ಕಥೆಯನ್ನು ಹೀರೋ ಆಗಿ ಸೆಲೆಕ್ಟ್ ಮಾಡಿಕೊಳ್ಳೋದು ರಿಷಬ್ ಶೆಟ್ಟಿ ಸ್ಟೈಲ್. ನಂತರ ಕೂರೋದು ಚಿತ್ರಕಥೆಗೆ.

ಈ ಹಿಂದೆ ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಥಾಸಂಗಮ, ಬೆಲ್ಬಾಟಂಗಳಲ್ಲಿ ಅವರು ಗೆದ್ದಿದ್ದೇ ಹಾಗೆ. ಆ ಕ್ಲಾಸಿಕಲ್ ಟಚ್ ಇಲ್ಲೂ ವರ್ಕೌಟ್ ಆಗಿದ್ದರೆ, ನೋ ಡೌಟ್. ಈ ಕ್ಲಾಸ್ ಮಸಾಲಾ ಚಿತ್ರವನ್ನು ರಿಲೀಸ್ ಆಗುವ ಮೊದಲೇ ಹಿಟ್ ಎಂದು ಘೋಷಿಸಬಹುದು.

ನಟನೆ ಬಿಟ್ಟು ನಿರ್ದೇಶನಕ್ಕಿಳಿದ ಕಿರಿಕ್ ಕೀರ್ತಿ

User Rating: 0 / 5

Star inactiveStar inactiveStar inactiveStar inactiveStar inactive

ರೇಡಿಯೋ ಜಾಕಿ, ಟಿವಿ ಶೋಗಳಲ್ಲಿ ಆಂಕರಿಂಗ್ ಮೂಲಕ ಗುರುತಿಸಿಕೊಂಡಿದ್ದ ಕಿರಿಕ್ ಕೀರ್ತಿ, ದೊಡ್ಡ ಹೆಸರು ಮಾಡಿದ್ದು ಬಿಗ್ ಬಾಸ್ ಶೋ ಮೂಲಕ. ಅದಾದ ಮೇಲೆ ಕೆಲವು ಚಿತ್ರಗಳಲ್ಲೂ ನಟಿಸಿದ್ದ ಕೀರ್ತಿ, ಈಗ ನಿರ್ದೇಶನಕ್ಕಿಳಿಯುತ್ತಿದ್ದಾರೆ.

ಪ್ರೀತಿ ಮದುವೆ ಇತ್ಯಾದಿ ಅನ್ನೋದು ಚಿತ್ರದ ಟೈಟಲ್. ಕಥೆಯೂ ಅವರದ್ದೇ. ನಿರ್ದೇಶನವೂ ಅವರದ್ದೆ. ಚಿತ್ರಕ್ಕೆ ಸಂಕಷ್ಟಕರ ಗಣಪತಿ ಖ್ಯಾತಿಯ ಲಿಖಿತ್ ಶೆಟ್ಟಿ ಮತ್ತು ರಾಧಾರಮಣ ಧಾರಾವಾಹಿ ಖ್ಯಾತಿಯ ಶ್ವೇತಾ ಪ್ರಸಾದ್ ನಾಯಕ, ನಾಯಕಿ. ಅಂದಹಾಗೆ ಈ ಚಿತ್ರಕ್ಕೆ ಕಿರಿಕ್ ಕೀರ್ತಿ ನಿರ್ಮಾಪಕರೂ ಹೌದು

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery