` Flash Back - chitraloka.com | Kannada Movie News, Reviews | Image
dwarakish, shruthi image

User Rating: 0 / 5

Star inactiveStar inactiveStar inactiveStar inactiveStar inactive

ಬಹಳ ತೊಂದರೆಗಳಿಗೆ ಸಿಲುಕಿದ್ದ ದ್ವಾರಕೀಶ್ ಗೆ ತಮ್ಮ ಮನೆಗಳನ್ನ ಮಾರುವುದೇ ದೊಡ್ಡ ಕೆಲಸವಾಗಿತ್ತು ಎಂದ ದ್ವಾರಕೀಶ್ 1985ರಲ್ಲಿ ಯಶಸ್ಸಿನ ತುತ್ತ ತುದಿಯಲ್ಲಿದ್ದಾಗ ಚಿತ್ರರಂಗದಿಂದ ನಿವೃತ್ತನಾಗಿದ್ದೆ ಇವತ್ತು ಬೇರೆಯ ರೀತಿಯಲ್ಲೇ ಇರುತ್ತಿದ್ದೆ ಎನ್ನುತ್ತಾರೆ. ಆದ್ರೆ ಸಿನಿಮಾ ಮಾಡುವ ಹುಮ್ಮಸ್ಸು ಬಿಡಬೇಕಲ್ಲ. ಅದೇ ಸಮಯದಲ್ಲಿ ಮಾಡಿದ ಚಿತ್ರ ಶುೃತಿ. ಪ್ರಿಯದರ್ಶಿಯಾಗಿದ್ದ ಹುಡುಗಿ ನನ್ನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿ ಆಕೆಗೆ ಶುೃತಿ ಅಂತ ಹೆಸರಿಟ್ಟೆ. ಆದ್ರೆ ಆ ಸಮಯದಲ್ಲಿ ಶೃುತಿ ಅಂದು ಸುಳ್ಳು ಹೇಳಿದ್ದು ಯಾಕೆ ಅನ್ನವ ಪ್ರಶ್ನೆ ಇಂದಿಗೂ ಕಾಡಿತ್ತಿದೆ ಎಂದರು ದ್ವಾರಕೀಶ್

 

#Chitraloka #dwarakish #shruthi #sunil #selling houses

ಅರ್ಜುನ್ ಗೌಡ ಏನ್ ಕಥೆ..?

User Rating: 0 / 5

Star inactiveStar inactiveStar inactiveStar inactiveStar inactive

ಕೋಟಿ ರಾಮು ನಿರ್ಮಾಣದ ಅರ್ಜುನ್ ಗೌಡ ಒಂದು ಭರ್ಜರಿ ಕಮರ್ಷಿಯಲ್ ಕಥೆಯಿರೋ ಸಿನಿಮಾ ತೋರಿಸುವ ಉಮೇದಿನಲ್ಲಿದ್ದಾರೆ. ಅರ್ಜುನ್ ಗೌಡ ಚಿತ್ರದ ಟ್ರೇಲರ್ ನೋಡಿದಾಗ ಅನ್ನಿಸೋದೇ ಇದು. ಟ್ರೇಲರ್ ನೋಡಿದವರಿಗೆ ಗೌರಿ ಲಂಕೇಶ್ ಹತ್ಯೆ, ಸಿಎಎ ವಿರೋಧಿ ಹೋರಾಟದಲ್ಲಿ ಕೇಳಿಬಂದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ, ಪ್ರತಿಭಟನೆ, ಹೋರಾಟ, ಪತ್ರಕರ್ತರ ಕಥೆಗಳು ನೆನಪಾದರೆ, ಕ್ರೆಡಿಟ್ಟು ಸಲ್ಲಬೇಕಿರೋದು ಲಕ್ಕಿ ಶಂಕರ್ ಅವರಿಗೆ. ಕಥೆ, ಚಿತ್ರಕಥೆ ಅವರದ್ದೇ. ನಿರ್ದೇಶನವೂ ಕೂಡಾ.

ಜೊತೆಯಲ್ಲೊಂದು ಚೆಂದದ ರೊಮ್ಯಾನ್ಸ್ ಇದೆ. ಪ್ರಜ್ವಲ್ ದೇವರಾಜ್ ಮತ್ತು ಪ್ರಿಯಾಂಕಾ ತಿಮ್ಮೇಶ್ ನಡುವೆ ಇರೋ ಲವ್ ಸ್ಟೋರಿ, ಕಚಗುಳಿ ಇಡುವ ಕಾಮಿಡಿ ಮತ್ತು ಮೈನವಿರೇಳಿಸುವ ಸಾಹಸ ಎಲ್ಲವೂ ಇರುವ ಪಕ್ಕಾ ಕಮರ್ಷಿಯಲ್ ಮೂವಿ ಅರ್ಜುನ್ ಗೌಡ. 

ವೀಲ್ ಚೇರ್ ರೋಮಿಯೋ : ವೇಶ್ಯೆಯ ಜೊತೆ ಲವ್ & ಮ್ಯಾರೇಜ್

User Rating: 0 / 5

Star inactiveStar inactiveStar inactiveStar inactiveStar inactive

ವೇಶ್ಯೆಗೂ ಒಂದು ಬದುಕಿದೆ.. ಆಕೆಯ ಹೃದಯದಲ್ಲೂ ಪ್ರೀತಿಯಿದೆ.. ಎಂದು ಹೇಳಿರೋ ಚಿತ್ರಗಳು ಅದೆಷ್ಟೋ.. ಇನ್ನು ಅಂಗವಿಕಲರನ್ನು ಅನುಕಂಪದಿಂದ ನೋಡಬೇಕು ಎನ್ನುವ ಚಿತ್ರಗಳಿಗೂ ಲೆಕ್ಕವಿಲ್ಲ. ಆದರೆ ಆ ಎರಡನ್ನೂ ಒಟ್ಟಿಗೇ ಸೇರಿಸಿ, ಅವರ ಮಧ್ಯೆ ಪ್ರೀತಿ, ಮದುವೆ ಮಾಡಿಸಿದರೆ ಹೇಗೆ ಅನ್ನೋ ಯೋಚನೆ ಹೊಸದು. ವೀಲ್ ಚೇರ್ ರೋಮಿಯೋ ಚಿತ್ರ ಅಂತಾದ್ದೊಂದು ವಿಭಿನ್ನ ಸಾಹಸಕ್ಕೆ ಕೈ ಹಾಕಿದೆ.

ವೀಲ್‍ಚೇರ್ ರೋಮಿಯೋ ಆಗಿರೋದು ರಾಮ್ ಚೇತನ್, ವೇಶ್ಯೆಯಾಗಿರೋದು ಮಯೂರಿ ಹಾಗೂ ವೇಶ್ಯೆಯ ಬಳಿಗೆ ಮಗನನ್ನು ಕರೆದುಕೊಂಡು ಹೋಗೋ ತಂದೆಯ ಪಾತ್ರದಲ್ಲಿರೋದು ಸುಚೇಂದ್ರ ಪ್ರಸಾದ್. ಪ್ರತಿ ಕಲಾವಿದರೂ ತಮ್ಮ ಇಮೇಜ್‍ನ ಹಂಗು ತೊರೆದು ಪಾತ್ರ ಮಾಡಿದ್ದಾರೆ. ಈ ಕಥೆಗೆ ಜಿ.ನಟರಾಜ್ ನಿರ್ದೇಶಕರಾಗಿದ್ದರೆ, ವೆಂಕಟಾಚಲಯ್ಯ ಮತ್ತು ಭಾರತಿ ವೆಂಕಟೇಶ್ ನಿರ್ಮಾಪಕರು. ವಿಭಿನ್ನತೆಯಿಂದಾಗಿಯೇ ಚಿತ್ರದ ಟ್ರೇಲರ್ ಗಮನ ಸೆಳೆಯುತ್ತಿದೆ.

ಏ. 15. ಬೆಳಗ್ಗೆ 11.10ಕ್ಕೆ ರೋಣ ಹೇಳಲಿರೋ ಸಸ್ಪೆನ್ಸ್ ಏನು..?

User Rating: 0 / 5

Star inactiveStar inactiveStar inactiveStar inactiveStar inactive

ವಿಕ್ರಾಂತ್ ರೋಣ. ಕಿಚ್ಚ ಸುದೀಪ್ ನಟಿಸಿರುವ ಹೊಸ ಸಿನಿಮಾ. ಚಿತ್ರದ ಬಗ್ಗೆ ದಿನ ದಿನಕ್ಕೂ ನಿರೀಕ್ಷೆಗಳನ್ನು ಮುಗಿಲು ಮುಟ್ಟಿಸುತ್ತಿರುವ ವಿಕ್ರಾಂತ್ ರೋಣ ಚಿತ್ರತಂಡ ಈಗೊಂದು ಹೊಸ ಡೇಟ್ ಮತ್ತು ಟೈಂ ಘೋಷಿಸಿದೆ. ಏಪ್ರಿಲ್ 15, ಬೆಳಗ್ಗೆ 11.10.

ಆಗ ಚಿತ್ರತಂಡ ಚಿತ್ರದ ಕುರಿತ ಯಾವುದೋ ಒಂದು ವಿಷಯವನ್ನು ಘೋಷಿಸಲಿದೆ. ಅದೇನು ಅನ್ನೋದೇ ಸಸ್ಪೆನ್ಸ್. ಚಿತ್ರೀಕರಣವನ್ನು ಹೆಚ್ಚೂ ಕಡಿಮೆ ಮುಗಿಸಿದ್ದರೂ ಇದೂವರೆಗೆ ಹೀರೋಯಿನ್ ಯಾರು ಅನ್ನೋ ಗುಟ್ಟನ್ನೇ ಬಿಟ್ಟುಕೊಟ್ಟಿಲ್ಲ. ಶ್ರದ್ಧಾ ಶ್ರೀನಾಥ್ ಇರಬಹುದು ಎಂಬ ಸುದ್ದಿ ಹೊರಬಿತ್ತಾದರೂ, ಅತ್ತ ನಿರ್ಮಾಪಕ ಜಾಕ್ ಮಂಜುನೂ ಯೆಸ್ ಎನ್ನಲಿಲ್ಲ. ಇತ್ತ ಶ್ರದ್ಧಾ ಕೂಡಾ ನೋ ಎನ್ನಲಿಲ್ಲ.  ಡೈರೆಕ್ಟರ್ ಅನೂಪ್ ಭಂಡಾರಿಯೂ ಹ್ಞಾಂಹ್ಞೂಂ ಎನ್ನಲಿಲ್ಲ. ಬ್ರೇಕ್ ಆಗಲಿರೋ ಸಸ್ಪೆನ್ಸ್ ಅದೇನಾ..?

ಅಥವಾ ಚಿತ್ರದ ರಿಲೀಸ್ ಡೇಟ್‍ನ್ನೇ ಅನೌನ್ಸ್ ಮಾಡ್ತಾರಾ..? ವೇಯ್ಟ್.. ಏಪ್ರಿಲ್ 15, ಬೆಳಗ್ಗೆ 11.10.

ವಿ.ನಾಗೇಂದ್ರ ಪ್ರಸಾದ್`ಗೆ ಡಾಕ್ಟರೇಟ್

User Rating: 5 / 5

Star activeStar activeStar activeStar activeStar active

ವಿ.ನಾಗೇಂದ್ರ ಪ್ರಸಾದ್ ಅವರಿಗೆ ಹಂಪಿ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಹಾಗಂತ ಇದು ಗೌರವ ಡಾಕ್ಟರೇಟ್ ಅಲ್ಲ. ವಿ.ನಾಗೇಂದ್ರ ಪ್ರಸಾದ್ ಕನ್ನಡ ಚಲನಚಿತ್ರ ಗೀತೆಗಳ ಸಾಮಾಜಿಕ ಪರಿಣಾಮ ವಿಷಯದ ಮೇಲೆ ಅಧ್ಯಯನ ಮಾಡಿ ಸಲ್ಲಿಸಿದ ಪ್ರಬಂಧಕ್ಕೆ ಸಂದಿರುವ ಡಾಕ್ಟರೇಟ್ ಇದು.

ಕನ್ನಡ ಚಿತ್ರರಂಗದಲ್ಲಿ ಕೆಲವೇ ಕೆಲವರು ಗೌರವ ಡಾಕ್ಟರೇಟ್ ಹೊರತಾಗಿ, ಅಧ್ಯಯನ, ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆದಿದ್ದಾರೆ. ಡಾ.ನಾಗೇಂದ್ರ ಪ್ರಸಾದ್ ಈಗ ಅಂತಹ ಅಪರೂಪದವರ ಸಾಲಿಗೆ ಸೇರಿದ್ದಾರೆ. ಡಾ. ಹಂಸಲೇಖ, ಡಾ. ಜಯಮಾಲಾ ಸೇರಿದಂತೆ ಕೆಲವರು ಮಾತ್ರವೇ ಈ ರೀತಿಯ ಸಂಶೋಧನಾತ್ಮಕ ಪ್ರಬಂಧ ಬರೆದು ಡಾಕ್ಟರೇಟ್ ಪಡೆದವರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery