ಗಣೇಶ್ ಅಭಿನಯದ ಚೆಲುವಿನ ಚಿತ್ತಾರದಲ್ಲಿ ಬುಲ್ಲಿ ಆಗಿ ಕಾಣಿಸಿಕೊಂಡಿದ್ದ, ಪಪ್ಪುಸಿ ಡೈಲಾಗ್ ನಿಂದಲೇ ಖ್ಯಾತರಾಗಿದ್ದ ನಡ ರಾಕೇಶ್ ನಿಧನರಾಗಿದ್ದಾರೆ. ಸದ್ಯಕ್ಕೆ ಧೂಮಪಾನ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದ ರಾಕೇಶ್
ಗ್ಯಾಂಗ್ರಿನ್ ಸಮಸ್ಯೆಯಿಂದ ಬಳಲುತ್ತಿದ್ದರು.
ಎರಡು ತಿಂಗಳ ಹಿಂದೆ ಆಪರೇಷನ್ ಮಾಡಲಾಗಿತ್ತಾದರೂ ಫಲಕಾರಿಯಾಗಲಿಲ್ಲ.ಆಪರೇಷನ್ ನಂತರ ಕೋರಮಂಗಲದ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದ ರಾಕೇಶ್, ಸಂಜೆ ೭.೩೦ರ ವೇಳೆಗೆ ವಿಧಿವಶರಾಗಿದ್ದಾರೆ. ನಾಯಕನಾಗಬೇಕೆಂಬ ಅವರ ಕನಸು ಈಡೇರಲೇ ಇಲ್ಲ.