ಬೆಂಗಳೂರಲ್ಲಿ ಸಿನಿಮಾ ಶೂಟಿಂಗ್ ವೇಳೆ ದುರಂತ ಸಂಭವಿಸಿದೆ. ದುರಂತದಲ್ಲಿ ಫೈಟ್ ಮಾಸ್ಟರ್ ವಿವೇಕ್ ಸಾವಿಗೀಡಾಗಿದ್ದಾರೆ. ಬಿಡದಿಯ ಈಗಲ್ ಟನ್ ರೆಸಾರ್ಟ್ ಬಳಿ ಘಟನೆ ನಡೆದಿದ್ದು, ಹೈಟೆನ್ಷನ್ ವೈರ್ ತಗುಲಿ ಫೈಟ್ ಮಾಸ್ಟರ್ ವಿವೇಕ್ ಸಾವನ್ನಪ್ಪಿದ್ದಾರೆ.
ಅಜೇಯ್ ರಾವ್ ಮತ್ತು ರಚಿತಾ ರಾಮ್ ಅಭಿನಯದ ‘ಲವ್ ಯೂ ರಚ್ಚು’ ಸಿನಿಮಾ ಚಿತ್ರೀಕರಣದ ವೇಳೆ ಸಂಭವಿಸಿರುವ ದುರಂತವಿದು. ಗುರುದೇಶ ಪಾಂಡೆ ನಿರ್ಮಾಣದ ಚಿತ್ರದಲ್ಲಿ ಫೈಟ್ ಮಾಸ್ಟರ್ ವಿನೋದ್ ಸಾಹಸ ನಿರ್ದೇಶನವಿತ್ತು.
ಮೆಟಲ್ ರೋಪ್ ಮೇಲೆ ವಿವೇಕ್ ಜಾಕೆಟ್ ಹಾಕಿದ್ದರೂ, ಶಾರ್ಟ್ ಸರ್ಕ್ಯೂಟ್ ಆಗಿ ದುರಂತ ಸಂಭವಿಸಿದೆ. ಘಟನಾ ಸ್ಥಳದಲ್ಲಿ ಇಬ್ಬರು ಗಾಯಗೊಂಡರು. ಆದರೆ, ವಿವೇಕ್ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಸಾವನ್ನಪ್ಪಿದರು.
ಘಟನೆ ಸಂಬಂಧ ಫೈಟ್ ಮಾಸ್ಟರ್ ವಿನೋದ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ನನ್ನ ಅರಿವಿಗೆ ಬಂದಿರಲಿಲ್ಲ. ಗೊತ್ತಿದ್ದರೆ, ಖಂಡಿತಾ ಆ ರಿಸ್ಕ್ ಶಾಟ್ಗೆ ಒಪ್ಪುತ್ತಿರಲಿಲ್ಲ. ಮೃತ ವಿವೇಕ್ ಅವರಿಗೆ ನ್ಯಾಯ ಸಿಗುವವರೆಗೂ ಶೂಟಿಂಗ್ಗೆ ಹೋಗಲ್ಲ ಎಂದಿದ್ದಾರೆ ನಟ ಅಜೇಯ್ ರಾವ್.