` ಸ್ವಾತಂತ್ರ್ಯದ ದಿನವೇ ಬಂದ ಸ್ವಾತಂತ್ರ್ಯ.. ಅವತ್ತೇ ಹೋಯ್ತು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
nagathihalli chandrashekar, shobha
nagathihalli chandrashekar, shobha image

ಸ್ವಾತಂತ್ರ್ಯ ದಿನಾಚರಣೆ ಅನ್ನೋದು ದೇಶಕ್ಕೇ ಹಬ್ಬವಾದರೆ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ವಿವಾಹ ವಾರ್ಷಿಕೋತ್ಸವ ಹೌದು. 1958, ಆಗಸ್ಟ್ 15 ಅವರ ಮದುವೆಯಾದ ದಿನ. ಅಂದ್ರೆ, ಈ ಜಗತ್ತಿಗೆ ಅವರು ಅಧಿಕೃತವಾಗಿ ಸ್ವಾತಂತ್ರ್ಯ ಪಡೆದುಕೊಂಡು ಬಂದ ದಿನ.

ಸ್ವಾತಂತ್ರ್ಯದ ದಿನವೇ ಸಿಕ್ಕಿದ್ದ ಸ್ವಾತಂತ್ರ್ಯವನ್ನು ಸ್ವಾತಂತ್ರ್ಯದ ದಿನವೇ ಸಂತೋಷದಿಂದ ಕಳೆದುಕೊಂಡೆ ಎಂದು ತಮಾಷೆಯಾಗಿಯೇ ನೆನಪಿಸಿಕೊಂಡಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್.

ನಾಗತಿಹಳ್ಳಿ ಚಂದ್ರಶೇಖರ್ ಅವರದ್ದು ಲವ್ ಮ್ಯಾರೇಜ್. 1986, ಆಗಸ್ಟ್ 15ರಂದು ಅವರು ಶೋಭಾ ಅವರನ್ನು ವಿವಾಹವಾದರು. ಬೆಂಗಳೂರಿನ ನೃಪತುಂಗ ರಸ್ತೆಯ ಸ್ಟೇಟ್ ಯೂತ್ ಸೆಂಟರ್‍ನ ಕಾನ್ಫರೆನ್ಸ್ ಹಾಲ್, ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಶೋಭಾರ ದಾಂಪತ್ಯ ಜೀವನಕ್ಕೆ ಮಂಟಪವಾಗಿತ್ತು. 

ಅವರಿಬ್ಬರ ಸುಖೀ ದಾಂಪತ್ಯಕ್ಕೀಗ 33 ವರ್ಷ. ಕಥೆಗಾರ, ಸಾಹಿತಿ, 40ಕ್ಕೂ ಹೆಚ್ಚು ದೇಶ ಸುತ್ತಿರುವ ಪ್ರವಾಸಿ, ನಿರ್ಮಾಪಕ, ನಿರ್ದೇಶಕ, ಮೇಷ್ಟ್ರು, ನಟ.. ಹೀಗೆ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್, ಸದ್ಯಕ್ಕೆ ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರವನ್ನು ತೆರೆಗೆ ತರುವ ಕೆಲಸದಲ್ಲ ಮಗ್ನರಾಗಿದ್ದಾರೆ.

 

Matthe Udbhava Trailer Launch Gallery

Maya Bazaar Pressmeet Gallery