ಉಪೇಂದ್ರ, 1999ರಲ್ಲಿ ರಿಲೀಸ್ ಆಗಿದ್ದ ಸಿನಿಮಾ. ಪ್ರೇಮಾ, ರವಿನಾ ಟಂಡನ್, ದಾಮಿನಿ ಉಪೇಂದ್ರ ಚಿತ್ರಕ್ಕೆ ನಾಯಕಿಯರಾಗಿದ್ದರು. ಉಪೇಂದ್ರ ಹೀರೋ ಆಗಿ ನಟಿಸಿದ್ದ 2ನೇ ಸಿನಿಮಾ ಉಪೇಂದ್ರ. ಚಿತ್ರದ ಹೀರೋ ಹೆಸರೇ ನಾನು. ವಿಭಿನ್ನ ಪೋಸ್ಟರ್, ವಿಚಿತ್ರ ಕಥೆ, ಚಿತ್ರ ವಿಚಿತ್ರ ನಿರೂಪಣೆ, ಅರ್ಥಗರ್ಭಿತ ಅರ್ಥವಾಗದ ಸಂದೇಶ.. ಹೀಗೆ ಎಲ್ಲವೂ ಉಪ್ಪಿ ಸ್ಟೈಲ್ನಲ್ಲಿಯೇ ಇದ್ದ ಸಿನಿಮಾ ಡಬಲ್ ಶತದಿನೋತ್ಸವ ಆಚರಿಸಿತ್ತು. ತೆಲುಗಿನಲ್ಲೂ ಭರ್ಜರಿ ಸಕ್ಸಸ್ ಕಂಡಿದ್ದ ಸಿ ನಿಮಾ, ಆಂಧ್ರದಲ್ಲಿ ಶತದಿನೋತ್ಸವ ಕಂಡಿತ್ತು.
ಈ ಸಿನಿಮಾ 20 ವರ್ಷಗಳ ನಂತರ ಮತ್ತೆ ರಿಲೀಸ್ ಆಗುತ್ತಿದೆ. ಹಾಗೆಂದು ಅದೇ ವರ್ಷನ್ನಲ್ಲಿ ಅಲ್ಲ, ಸಿನಿಮಾದ ಟೆಕ್ನಾಲಜಿಯನ್ನು ಅಪ್ಡೇಟ್ ಮಾಡಿಸಿ ರಿಲೀಸ್ ಮಾಡೋಕೆ ರೆಡಿಯಾಗಿದ್ದಾರೆ ನಿರ್ಮಾಪಕ ಶಿಲ್ಪ ಶ್ರೀನಿವಾಸ್. ಶೀಘ್ರದಲ್ಲೇ ರಿಲೀಸ್ ದಿನಾಂಕ ಘೋಷಿಸಲಿದ್ದಾರೆ ಶಿಲ್ಪ ಶ್ರೀನಿವಾಸ್.