` ಎಂಎಲ್‍ಎ ಪ್ರಥಮ್ ಚಿತ್ರಕ್ಕೆ ಫೈರ್‍ಬ್ರಾಂಡ್ ಸಿಎಂ - Exclusive - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
mla movie
Pratham, CM Siddaramaiah Image

ಎಂಎಲ್‍ಎ ಪ್ರಥಮ್. ಇದು ಬಿಗ್‍ಬಾಸ್ ಖ್ಯಾತಿಯ ಪ್ರಥಮ್ ಅಭಿನಯಿಸುತ್ತಿರುವ ನೂತನ ಚಿತ್ರ. ಹಾಗೆಂದು ಚಿತ್ರದ ಶೂಟಿಂಗ್ ಪೂರ್ತಿ ಮುಗಿದಿಲ್ಲ.

ಚಿತ್ರದಲ್ಲಿ ಪ್ರಥಮ್ ಎಂಎಲ್‍ಎ ಅಷ್ಟೇ ಅಲ್ಲ, ನಗರಾಭಿವೃದ್ಧಿ ಸಚಿವರಾಗಿಯೂ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ನೀವು ಈಗಾಗಲೇ ಚಿತ್ರಲೋಕದಲ್ಲಿ ಓದಿದ್ದೀರಿ. ಆದರೆ, ಸಿಎಂ ಯಾರಾಗಿರ್ತಾರೆ..? ಈ ಪ್ರಶ್ನೆಯನ್ನು ಪ್ರಥಮ್ ಮುಂದಿಟ್ಟರೆ, ರಾಜ್ಯ ರಾಜಕಾರಣದಲ್ಲಿರುವ ಅತ್ಯಂತ ಪ್ರಮುಖ ನಾಯಕರೊಬ್ಬರು ಚಿತ್ರದಲ್ಲಿ ಸಿಎಂ ಆಗಿ ನಟಿಸುತ್ತಿದ್ದಾರೆ ಎನ್ನುತ್ತಾರೆ. ಯಾರವರು ಎಂದರೆ ಗುಟ್ಟು ಬಿಟ್ಟುಕೊಡಲ್ಲ.

ಚಿತ್ರಲೋಕಕ್ಕೆ ಲಭ್ಯವಾದ ಮಾಹಿತಿಗಳ ಪ್ರಕಾರ, ಸಿಎಂ ಆಗಿ ನಟಿಸುತ್ತಿರುವುದು ರಾಜ್ಯದ ಒಬ್ಬ ಫೈರ್‍ಬ್ರಾಂಡ್ ಲೀಡರ್. ಅವರು ಬಿಜೆಪಿಯಲ್ಲೂ ಇರಬಹುದು. ಕಾಂಗ್ರೆಸ್‍ನಲ್ಲೂ ಇರಬಹುದು, ಜೆಡಿಎಸ್‍ನಲ್ಲೂ ಇರಬಹುದು.

ಆ ಬೆಂಕಿ ಲೀಡರ್ ಯಾರು..?

Gara Gallery

Rightbanner02_butterfly_inside

Paddehuli Movie Gallery