ಗೌರಿ ಲಂಕೇಶ್ ಮತ್ತು ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣ, ದೇಶಾದ್ಯಂತ ಸಂಚಲನ ಸೃಷ್ಟಿಸಿರುವುದು ಗುಟ್ಟೇನಲ್ಲ. ಒಂದು ಸಿನಿಮಾಗೆ ಆಗಬಹುದಾದ ಎಲ್ಲ ಅಂಶಗಳೂ ಈ ಹತ್ಯೆ ಪ್ರಕರಣದಲ್ಲಿವೆ. ಎರಡೂ ಪ್ರಕರಗಳಲ್ಲಿ ಇದುವರೆಗೆ ಸಣ್ಣದೊಂದು ಕ್ಲೂ ಸಹ ಸಿಕ್ಕಿಲ್ಲ. ಹೀಗಿರುವಾಗಲೇ ಅವರ ಹತ್ಯೆ ಪ್ರಕರಣದ ಬಗ್ಗೆ ಸಿನಿಮಾ ಮಾಡಲು ಚಿತ್ರರಂಗ ಉತ್ಸುಕತೆ ತೋರಿದೆ.
ನಿರ್ಮಾಪಕ ಪ್ರವೀಣ್ ಕುಮಾರ್ ಗೌರಿ ಲಂಕೇಶ್ ಮತ್ತು ಕಲಬುರ್ಗಿ ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ.
ಚಿತ್ರದ ಸ್ಕ್ರಿಪ್ಟ್ ಕೆಲಸ ಶುರುವಾಗಿದ್ದು, ಕೆಲವೇ ದಿನಗಳಲ್ಲಿ ಚಿತ್ರದ ಶೂಟಿಂಗ್ ಶುರುವಾಗುವ ನಿರೀಕ್ಷೆಯಿದೆ. ಸ್ಕ್ರಿಪ್ಟ್ ಕೆಲಸ ಮುಗಿದ ಮೇಲೆ ತಂತ್ರಜ್ಞರು ಮತ್ತು ಕಲಾವಿದರ ಆಯ್ಕೆ ಪ್ರಕ್ರಿಯೆ ಶುರುವಾಗಲಿದೆ.
ಅಂದಹಾಗೆ ಗೌರಿ ಲಂಕೇಶ್ ಮತ್ತು ಕಲಬುರ್ಗಿ ಹೆಸರಿನಲ್ಲಿ ಸಿನಿಮಾ ಟೈಟಲ್ ರಿಜಿಸ್ಟರ್ ಮಾಡಿಸಿರುವುದು ನಿರ್ಮಾಪಕ ಪ್ರವೀಣ್ ಕುಮಾರ್. ಪಾಂಡುರಂಗ ವಿಠಲ, ರಂಗೇನಹಳ್ಳಿಯಾಗೆ ರಂಗಾದ ರಂಗೇಗೌಡ, ಪಾಪಿಗಳ ಲೋಕದಲ್ಲಿ, ಮಹರ್ಷಿ..ಹೀಗೆ ಹಲವು ಚಿತ್ರಗಳನ್ನು ನಿರ್ಮಿಸಿರುವ ಪ್ರವೀಣ್ ಕುಮಾರ್, ಕತೆಗಾರರೂ ಹೌದು. ಚಿತ್ರದ ಉಳಿದ ವಿವರಗಳನ್ನು ತಿಳಿಯಲು ಇನ್ನಷ್ಟು ದಿನ ಕಾಯಬೇಕು.
Related Articles :-