` ‘ದರ್ಶನ್ ಬಿಲ್ಡಪ್’ ಸಂಜನಾ ಹೇಳಿಕೆ ಹಿಂದಿನ ಕಾರಣವೇ ಬಿಲ್ಡಪ್ - EXCLUSIVE - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sanjana's is pre planned gimmick
Sanjana Chidanand, Darshan Image

ದರ್ಶನ್ ಚಿತ್ರಗಳಲ್ಲಿ ಬಿಲ್ಡಪ್ ಜಾಸ್ತಿಯಿರುತ್ತೆ.. ಇದು ನಟಿ ಸಂಜನಾ ಹೇಳಿರೋ ಮಾತು. ಇಷ್ಟಕ್ಕೂ ಸಂಜನಾ ಹೇಳಿರೋ ಮಾತಿನ ಹಿಂದಿನ ಮರ್ಮವೇನು..? ಸಂಜನಾ ಈ ಹೇಳಿಕೆ ನೀಡಿದ್ದಾರಲ್ಲಾ.. ಇದು ಆಕಸ್ಮಿಕವಲ್ಲ. ಸಂಜನಾ ಉದ್ದೇಶಪೂರ್ವಕವಾಗಿಯೇ ಬಿಲ್ಡಪ್ ಉತ್ತರ ಕೊಟ್ಟಿದ್ದಾರೆ ಎನ್ನುವುದು ಚಿತ್ರಲೋ ಡಾಟ್ ಕಾಮ್​ಗೆ ಖಚಿತವಗಿದೆ.

ಸಂಜನಾ ಹೇಳಿಕೆ ನೀಡಿರೋದು ಕಲೡೞ ಕನ್ನಡ ವಾಹಿನಿಯ ಸೂಪರ್ ಟಾಕ್ ಟೈಂ ಶೋನಲ್ಲಿ. ನಿರೂಪಕ ಅಕುಲ್ ಬಾಲಾಜಿ. ಅದು ರೆಕಾರ್ಡೆಡ್ ಕಾರ್ಯಕ್ರಮ. ಆ ದಿನ ಇಂಥಹ ಪ್ರಶ್ನೆಗಳು ಬರುತ್ತವೆ ಎನ್ನುವುದು ಸಂಜನಾಗೆ ಗೊತ್ತಿತ್ತು. ಇಂತಹ ಪ್ರಶ್ನೆಗಳಿಗೆ ದೊಡ್ಡ ಸೆಲಬ್ರಿಟಿಗಳ ಹೆಸರು ಬಳಸಿಕೊಳ್ಳಬೇಕೆಂದು ಸಂಜನಾ ನಿರ್ಧರಿಸಿಯೂ ಆಗಿತ್ತು. ಅದನ್ನು ಅಲ್ಲಿದ್ದ ಕೆಲವರ ಜೊತೆ ಹೇಳಿಕೊಂಡಿದ್ದರು ಎನ್ನುವ ವಿಚಾರವನ್ನು  ಕೂಡಾ ಚಿತ್ರಲೋಕ ಡಾಟ್ ಕಾಮ್ ಸುದ್ದಿಮೂಲಗಳು ಸ್ಪಷ್ಟಪಡಿಸಿವೆ.

ಸಂಜನಾರ ನಿರ್ಧಾರದ ಬಗ್ಗೆ ಕೆಲವರು ಬುದ್ದಿಮಾತನ್ನು ಹೇಳಿದ್ದಾರೆ. ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡುತ್ತಾರೆ. ಟೀಕಿಸುತ್ತಾರೆ ಎಂದೆಲ್ಲ ತಿಳಿಸಿದ್ದಾರೆ. ಆದರೆ ಸಂಜನಾ ನನಗೆ ಬೇಕಿರುವುದೇ ಅದು. ಮಿನಿಮಮ್ ಒಂದು ವಾರ ಸುದ್ದಿಯಲ್ಲಿರುತ್ತೇನೆ. ಅದು ನೆಗೆಟಿವ್ ಆದರೂ ಆಗಲೀ, ಪಾಸಿಟಿವ್ ಆದರೂ ಆಗಲಿ. ನಾನು ಪ್ರಚಾರದಲ್ಲಿರುತ್ತೇನೆ ಎಂದಿದ್ದಾರೆ.

ಅಲ್ಲಿಗೆ ಸಂಜನಾರ ಈ ಮಾತಿನ ಹಿಂದಿರೋದು ಪ್ರಚಾರದ ಹುಚ್ಚೇ ಹೊರತು ಮತ್ತೇನೂ ಅಲ್ಲ ಅನ್ನೋದು ಪಕ್ಕಾ ಆಗಿದೆ. ಆಕೆಯ ನಿರೀಕ್ಷೆಯಂತೆಯೇ ಈಗ ದರ್ಶನ್ ಅಭಿಮಾನಿಗಳು ಸಂಜನಾಗೆ ಝಾಡಿಸುತ್ತಿದ್ದಾರೆ. ನ್ಯೂಸ್ ಚಾನೆಲ್ಲುಗಳಲ್ಲಿ ಸುದ್ದಿಯಾಗುತ್ತಿದೆ. ಆಕೆಯ ಪ್ರಚಾರದ ಬಯಕೆಯೂ ಈಡೇರಿದೆ. ಸಿಂಪಲ್ಲಾಗಿ ಹೇಳಬೇಕೆಂದರೆ, ಸಂಜನಾ ದರ್ಶನ್ ಹೆಸರಲ್ಲಿ ಪ್ರಚಾರದ ಬೇಳೆ ಬೇಯಿಸಿಕೊಂಡಿದ್ದಾರೆ.

ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಿರೋದು ಇಷ್ಟೆ. ಆಕೆಗೆ ದರ್ಶನ್ ಹೆಸರು ಹೇಳಿ ಫೇಮಸ್ ಆಗುವ, ಸುದ್ದಿಯಾಗುವ ಹುಚ್ಚು. ಸುದ್ದಿಯನ್ನು ತಾವೇ ಸೃಷ್ಟಿಸಿಕೊಂಡು, ಬೇಕೆಂದೇ ಮಾಡಿಕೊಳ್ಳುವ ಹುಚ್ಚು ಮನಸ್ಸುಗಳನ್ನು ನಿರ್ಲಕ್ಷಿಸುವುದೇ ಉತ್ತಮ ಅಲ್ಲವೇ..?