` sunny leone - chitraloka.com | Kannada Movie News, Reviews | Image

sunny leone

  • Countdown Starts for Luv U Alia Release

    luv u aliya image

    The countdown for the release of Indrajith Lankesh's new film 'Love Tou Aalia' has started and the film is all set to release tomorrow on the auspicious day of Ganesha festival. 'Love You Aalia' features an ensemble star cast of V Ravichandran, Sudep, Chandan, Ravishankar, Shakeela, Sunny Leone, Nikisha Patel and others. Jessie Gift is the cameraman while Santhosh Rai Pathaje is the cameraman.

    The film is not only releasing in Indian and in three languages, but also will be releasing in Japan, Europe and Australia.

  • Luv U Alia in Three Languages

    luv u aliya image

    Indrajit Lankesh directed film Luv U Alia will be the first film of Crazy Star Ravichandran to release in three languages since Shanti Kranti more than 20 years ago. Ravichandran had made and released Shanti Kranti in Kannada, Tamil and Telugu. The Hindi version was not released.

    Indrajit has made Luv U Alia in Kannada, Telugu and Hindi. After a long time a Ravichandran film in another language other than Kannada will be seen. The film is slated for release on Ganesha Chaturti on September 17 this month.

    The Telugu and Hindi versions will release one week later. Indrajit has lined up a long list of top actors for the film. Apart from Ravichandran, the film has Bhoomika, Ravishankar, Chandan, Nikesha Patel, Sadhu Kokila, Sunny Leone and others. Indrajit said that after this film Ravichandran will have a huge transformation just like Amitabh Bachchan had after KBC. "Roles that were written for Amitabh like Pa and others will be written for Ravichandran. He is set on a new trajectory now," he said.

  • Luv U Alia Movie Review

    luv u alia image

    Indrajit Lankesh directed Luv U Alia is not only a romantic film but also a powerful family film. The film is a powerful combination of emotions, romance and family drama. The film starts as a love story with Chandan, a marriage consultant falling in love with an air hostess. He manages to win her love but in a strange twist she says she does not believe in marriage. It turns out that her parents had a troubled marriage. The rest of the film is about how Chandan manages to unite the divorced Ravichandran and Bhoomika and makes their daughter realise that marriage is not a bad thing after all.

    In his effort to reunite his future in-laws Chandan has to come up with many avatars and gets to showcase the best of his talents. Sangeetha also gets to don a lengthy role. Ravichandran and Bhoomika occupy the second half of the film and give seasoned performances. There is a rich star cast in the film including Sudharani, Ravishankar, Sadhu Kokila, Sunny Leone, Srujan Lokesh and others. Sudeep appears in a special role and there is an intimate interview with him in the film.

    The film has rich production values and is lavishly shot. Each scene is composed with great aesthetic sense. The song's are colourful, the imagery bold and the themes eye pleasing.

    Luv U Alia is one of those rare films that will be appreciated audience of all ages.

    Chitraloka Review 4/5

  • Srujan Lokesh to Dance With Sunny Leone

    love you aaliya image

    Director Indrajith Lankesh had earlier announced that Sunny Leone will be seen playing a guest role in his forthcoming film 'Love You Aaliya'. Though Indrajith had said that Sunny will be dancing with another artiste in the film, he had not disclosed who will be dancing with Sunny Leone. 

    Now Indrajith Lankesh has finally announced that Srujan will be dancing along with Sunny Leone for the song in 'Love You Aaliya'. For his appearance in the song, Srujan is busy building six pack abs and will soon participate in the song shooting.

    Earlier, Indrajith's father Lankesh had directed Srujan's father Lokesh in 'Ellidandalo Bandavaru'. Now Indrajith is joining hands with Srujan in 'Love You Aaliya'. Not only that, Srujan is planning to produce a film under the Lokesh Productions under the direction of Indrajith Lankesh. Srujan  will be playing hero in the film. The film i expected to be launched after the release of 'Love You Aaliya'.

  • Sunny Leone Song in Luv U Alia Leaked - Exclusive

    sunny leone image

    The song Kamakshi Kamakshi featuring Sunny Leone and Srujan Lokesh from the upcoming film Luv U Alia has been leaked. Nearly the entire song in its edit version has found its way to YouTube before the film's release.

    This is a big blow to director Indrajit Lankesh who did not allow even the media to capture the shooting of the song that was held at the Sanjay Khan resort.

    When contacted by Chitraloka, Indrajit Lankesh said he is trying to trace the culprit and take legal action. He said the entire song will be uploaded soon since some of the portion has been leaked which wanted to keep it secret. He did not want to release the song on tv or online so that everything was fresh for audience watching the film in theatres.

    Sources said including the remuneration paid to Sunny Leone the song cost more than Rs 1 crore to shoot, but this costly portion of the film itself has been leaked.

     

  • Sunny Leone to Star in Love You Aaliya - Exclusive

    love you aliya image

    Porn actress Sunny Leone who was last seen in an item song in Prem starrer 'DK' is all set to make a comeback to Kannada silver screen once again. This time she will be seen in an guest appearance in Indrajith Lankesh's 'Love You Aaliya'.

    There were rumours that Sunny Leone may act in 'Love You Aaliya'. However, Indrajith chose to keep it a secret as he didn't have the green signal from Sunny. Now it seems Sunny has given a final nod to act in the film and even Indrajith Lankesh has confirmed the news of Sunny Leone acting in the film.

    Sunny Leone' guest appearance includes a song as well as few scenes which will be shot in and around Bangalore. With the completion of Sunny Leone's portions the shooting for the film come to an end. Sunny is expected to come to Bangalore soon for the shooting of the film.

  • ಆದಿತಿ ಪ್ರಭುದೇವ ಚಿತ್ರದಲ್ಲಿ ಸನ್ನಿ ಲಿಯೋನ್ ಡಿಂಗರ ಬಿಲ್ಲಿ..

    ಆದಿತಿ ಪ್ರಭುದೇವ ಚಿತ್ರದಲ್ಲಿ ಸನ್ನಿ ಲಿಯೋನ್ ಡಿಂಗರ ಬಿಲ್ಲಿ..

    ಆದಿತಿ ಪ್ರಭುದೇವ ಪ್ರಧಾನ ಪಾತ್ರದಲ್ಲಿರೋ ಚಿತ್ರ ಚಾಂಪಿಯನ್.. ಈ ಚಿತ್ರದ ಒಂದು ಹಾಡಿಗೆ ಹರೆಯದ ಹುಡುಗರ ಫೇವರಿಟ್ ಸನ್ನಿ ಲಿಯೋನ್ ಹಾಡಿ ಕುಣಿದಿದ್ದಾರೆ. ಸೇಸಮ್ಮಳಾಗಿ ಕನ್ನಡಕ್ಕೆ ಬಂದಿದ್ದ ಸನ್ನಿ.. ಅದಾದ ಮೇಲೆ ಒಂದೆರಡು ಚಿತ್ರಗಳಲ್ಲಿ ಸೊಂಟ ಬಳುಕಿಸಿದ್ದರು. ಈಗ ಮತ್ತೊಮ್ಮೆ ಚಾಂಪಿಯನ್ ಚಿತ್ರದ ಮೂಲಕ ಡಿಂಗರ್ ಬಿಲ್ಲಿ ಹಾಡಿಗೆ ಬಂದು ಕುಣಿದು ಕುಪ್ಪಳಿಸಿದ್ದಾರೆ.

    ಚಾಂಪಿಯನ್ ಚಿತ್ರಕ್ಕೆ ನಾಯಕಿ ಆದಿತಿ ಪ್ರಭುದೇವ. ಸನ್ನಿ ಲಿಯೋನ್ ಬಂದು ಹೋಗೋದು ಒಂದು ಹಾಡಿನಲ್ಲಿ ಮಾತ್ರ. ಸೈನ್ಯದಲ್ಲಿದ್ದು ಬಂದು, ಉದ್ಯಮಿಯಾಗಿರೋ ಸಚಿನ್ ಧನ್‍ಪಾಲ್‍ನಾಯಕರಾಗಿದ್ದಾರೆ. ದೇವರಾಜ್, ರಂಗಾಯಣ ರಘು, ಸುಮನ್, ಶೋಭರಾಜ್, ಚಿಕ್ಕಣ್ಣ.. ಮೊದಲಾದವರು ನಟಿಸಿರೋ ಚಿತ್ರಕ್ಕೆ  ಶಿವಾನಂದ್ ಎಸ್. ನೀಲಣ್ಣವರ್ ನಿರ್ಮಾಪಕರಾಗಿದ್ದಾರೆ. ಶಾಹುರಾಜಾ ಶಿಂಧೆ ಡೈರೆಕ್ಟರ್. ಅಂದಹಾಗೆ ಸನ್ನಿ ಹಾಡಿ ಕುಣಿದಿರೋ ಹಾಡಿಗೆ ಸಂಗೀತ ನೀಡಿರೋದು ಅಜನೀಶ್ ಲೋಕನಾಥ್. ಸಾಹಿತ್ಯ ಶಿವು ಬೇರ್ಗಿ ಅವರದ್ದು.

  • ಉಪೇಂದ್ರ ಯು&ಐ ನಲ್ಲಿ ಸನ್ನಿ ಲಿಯೋನ್

    ಉಪೇಂದ್ರ ಯು&ಐ ನಲ್ಲಿ ಸನ್ನಿ ಲಿಯೋನ್

    ಸನ್ನಿ ಲಿಯೋನ್ ಹೆಸರಿಗೆ ಒಂದು ವಿಶೇಷ ವಿಶಿಷ್ಟ ಕ್ರೇಜ್ ಇದೆ. ಸನ್ನಿಯ ಹೆಸರಿನ ಮಾಯೆ ಇವತ್ತಿಗೂ ಚಾಲ್ತಿಯಲ್ಲಿದೆ. ಈ ಸನ್ನಿ ಲಿಯೋನ್ ಕನ್ನಡಕ್ಕೆ ಹೊಸಬರೇನೂ ಅಲ್ಲ. ಈ ಹಿಂದೆ ಸೇಸಮ್ಮ.. ಸೇಸಮ್ಮ ಹಾಡಿಗೆ ಸೊಂಟ ಬಳುಕಿಸಿದ್ದ ಸನ್ನಿ, ಕಾಮಾಕ್ಷಿ ಕಾಮಾಕ್ಷಿ ಹಾಡಿನಲ್ಲೂ ಹುಬ್ಬೇರುವಂತೆ ಮಾಡಿದ್ದರು. ಈಗ ಮತ್ತೊಮ್ಮೆ ಬೆಂಗಳೂರಿಗೆ ಬಂದು ಉಪ್ಪಿಯ ಯು&ಐನಲ್ಲಿ ಹಾಡಿ ಕುಣಿದು ನಟಿಸಿ ಹೋಗಿದ್ದಾರಂತೆ.

    ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಯು&ಐನಲ್ಲಿ ಸನ್ನಿ ಲಿಯೋನ್ ಡ್ಯಾನ್ಸ್ ಅಷ್ಟೇ ಅಲ್ಲ, ನಟಿಸಿಯೂ ಇದ್ದಾರಂತೆ. ಸನ್ನಿಗೊಂದು ಮೇನ್ ರೋಲ್ ಕೊಟ್ಟಿದ್ದಾರಂತೆ ಉಪ್ಪಿ. ಸನ್ನಿ ಲಿಯೋನ್ ಬಂದು ಹೋಗುವವರೆಗೆ ಸಣ್ಣ ಸುಳಿವೂ ಬಿಟ್ಟುಕೊಡದೆ ಚಿತ್ರೀಕರಣ ಮುಗಿದ ಮೇಲೆ ಮಾಹಿತಿ ಹೊರಹಾಕಿದೆ ಯು&ಐ ಟೀಂ.

    ಸದ್ಯಕ್ಕೆ ಉಪೇಂದ್ರ ಯು&ಐ ಚಿತ್ರದ ಸ್ಟಂಟ್ಸ್ ಚಿತ್ರೀಕರಣ ಮಾಡುತ್ತಿದ್ದು, ಮೋಹನ್ ಬಿ.ಕೆರೆಯಲ್ಲಿ ಹಾಕಿರುವ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ.

    ಹಲವು ವರ್ಷಗಳ ನಂತರ ಉಪೇಂದ್ರ ಮತ್ತೆ ನಿರ್ದೇಶನ ಮಾಡುತ್ತಿದ್ದು, ಅಪರೂಪದ ಕಥೆಯೊಂದನ್ನು ಈ ಚಿತ್ರಕ್ಕಾಗಿ ಹೆಣೆದಿದ್ದಾರಂತೆ. ನೂರಕ್ಕೂ ಹೆಚ್ಚು ಕಲಾವಿದರು ಈ ಸಿನಿಮಾದಲ್ಲಿ ಇರುವುದು ಮತ್ತೊಂದು ವಿಶೇಷ. ಉಪೇಂದ್ರ ಪಾತ್ರ ಕೂಡ ಹೊಸ ರೀತಿಯಲ್ಲಿ ಇದ್ದು, ಹೆಸರಾಂತ ಅನೇಕ ಕಲಾವಿದರು ತಾರಾಗಣದಲ್ಲಿ ಇದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್, ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಕೂಡ ಮೂಡಿದೆ

  • ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು - ಸನ್ನಿ ಸೇಸಮ್ಮ

    sunny leone's show comes to bangalore despite protests

    ಬಾಲಿವುಡ್ ನಟಿ ಸನ್ನಿಲಿಯೋನ್ ಕೆಲವು ಕನ್ನಡ ಪರ ಸಂಘಟನೆಗಳ ವಿರೋಧದ ನಡುವೆಯೋ ಬೆಂಗಳೂರಿನಲ್ಲಿ ಫ್ಯೂಷನ್ ನೈಟ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಸೇಸಮ್ಮ ಸೇಸಮ್ಮ ಬಾಗ್ಲು ತೆಗೆಯಮ್ಮ.. ಅನ್ನೋ ತಮ್ಮದೇ ಕನ್ನಡ ಹಾಡಿನ ಮೂಲಕ ಪ್ರೇಕ್ಷಕರ ಎದೆಗೆ ಕಿಚ್ಚು ಹಚ್ಚಿದ ಸನ್ನಿಲಿಯೋನ್, ಪ್ರೇಕ್ಷಕರನ್ನು ರಂಜಿಸಿದ್ರು.

    ನಾನು ನಿಮ್ಮನ್ನು ತುಂಬಾ ತುಂಬಾ ಪ್ರೀತಿಸ್ತೀನಿ. ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು ಎಂದು ಕನ್ನಡದಲ್ಲಿಯೇ ಶುಭ ಕೋರಿದರು. ಕನ್ನಡದ ಪದಗಳನ್ನು ಹೇಳಿಕೊಟ್ಟ ನಿರೂಪಕ ರಿಯಾಜ್‍ಗೆ ಧನ್ಯವಾದ ಹೇಳಿದರು ಸನ್ನಿ ಲಿಯೋನ್.

  • ಕನ್ನಡಕ್ಕೆ ನಾಯಕಿಯಾಗಿ ಸನ್ನಿ ಲಿಯೋನ್

    sunny leone in kannada

    ಸನ್ನಿ ಲಿಯೋನ್ ಎಂದರೆ ಹುಡುಗರ ಕಣ್ಣುಗಳು ಅರಳುತ್ತವೆ. ಮನಸು ಎಲ್ಲೆಲ್ಲೋ ಹರಿದಾಡುತ್ತದೆ. ಹಾಗೆಂದು ಈಕೆ ಕನ್ನಡಿಗರಿಗೆ ಅಪರಿಚಿತಳೇನಲ್ಲ. ಪ್ರೇಮ್ ಅಭಿನಯದ ಡಿಕೆ ಚಿತ್ರದಲ್ಲಿ  ಸೇಸಮ್ಮ ಸೇಸಮ್ಮ ಹಾಡಿನಲ್ಲಿ ಕುಣಿದಿದ್ದವರು. ಇಂದ್ರಜಿತ್ ಲಂಕೇಶ್ ಲವ್ ಯು ಅಲಿಯಾ  ಚಿತ್ರದ ಹಾಡಿನಲ್ಲೂ ಕಾಣಿಸಿಕೊಂಡಿದ್ದವರು. ಆದರೆ, ಈ ಬಾರಿ ಅವರು ಐಟಂ ಸಾಂಗ್​ಗಾಗಿ ಬರುತ್ತಿಲ್ಲ. ಚಿತ್ರವೊಂದರ ನಾಯಕಿಯಾಗಿ ಬರುತ್ತಿದ್ದಾರೆ.

    ಮೋಹನ್ ಹಾಸನ್ ಎಂಬುವರ ನಿರ್ದೇಶನದ ನಿನ್ನದೇ ಹೆಜ್ಜೆ.ಕಾಂ ಸಿನಿಮಾದಲ್ಲಿ ಸನ್ನಿ ಲಿಯೋನ್ ನಾಯಕಿಯಾಗಿ ನಟಿಸಲು ಒಪ್ಪಿಕೊಂಡಿದ್ದಾರಂತೆ. ಈ ವರ್ಷದ ಕೊನೆಯಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಚಿತ್ರದ ಕಥೆ ಏನು..? ಸದ್ಯಕ್ಕೆ ಸೀಕ್ರೆಟ್.

  • ಕಾಟನ್`ಪೇಟೆಗೆ ಸನ್ನಿಲಿಯೋನ್ : COMING SOON

    ಕಾಟನ್`ಪೇಟೆಗೆ ಸನ್ನಿಲಿಯೋನ್ : COMING SOON

    sಸನ್ನಿ ಲಿಯೋನ್ ಅಂದ್ರೇನೇ ಹಾಟ್.. ಸೆನ್ಸೇಷನ್. ಅವರೀಗ ಮತ್ತೊಮ್ಮೆ ಸ್ಯಾಂಡಲ್‍ವುಡ್‍ಗೆ ಅದರಲ್ಲೂ ಕಾಟನ್`ಪೇಟೆಗೆ ಬರುತ್ತಿದ್ದಾರೆ. ಹಾಗಂಟ ಕಾಟನ್`ಪೇಟೆಯಲ್ಲಿ ಟೆಂಟ್ ಹಾಕಬೇಡಿ.

    ಕಾಟನ್`ಪೇಟೆ ಅನ್ನೋದು ಚಿತ್ರದ ಹೆಸರು. ಶೂಟಿಂಗ್ ನಡೆಯೋದು ಹೈದರಾಬಾದಿನಲ್ಲಿ. ಜುಲೈ 29ರಿಂದ 30ರವರೆಗೆ ಶೂಟಿಂಗ್ ನಡೆಯಲಿದೆ. ಅದೊಂದು ಐಟಮ್ ಸಾಂಗ್`ಗೆ ಸನ್ನಿ 50 ಲಕ್ಷ ಸಂಭಾವನೆ ಪಡೆಯುತ್ತಾರಂತೆ.

    ಕನಕಪುರ ಶ್ರೀನಿವಾಸ್ ನಿರ್ಮಾಣದ ಈ ಚಿತ್ರ ತೆಲುಗಿನಲ್ಲಿ ಸೀತಣ್ಣ ಪೇಟೆ ಗೇಟ್ ಅನ್ನೋ ಹೆಸರಲ್ಲಿ ಡಬ್ ಆಗಲಿದೆ.

    ವಿ.ರಾಜ್‍ಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರದ ಈ ಹಾಡಿನಲ್ಲಿ ನಿರ್ಮಾಪಕ ಶ್ರೀನಿವಾಸ್ ಕೂಡಾ ಸನ್ನಿ ಜೊತೆ ಸ್ಪೆಪ್ ಹಾಕಲಿದ್ದಾರಂತೆ.

  • ದಾವಣಗೆರೆ ಬೆಣ್ಣೆ ಚಿತ್ರದಲ್ಲಿ ಮತ್ತೊಮ್ಮೆ ಸನ್ನಿ..

    ದಾವಣಗೆರೆ ಬೆಣ್ಣೆ ಚಿತ್ರದಲ್ಲಿ ಮತ್ತೊಮ್ಮೆ ಸನ್ನಿ..

    ಕಳೆದೊಂದು ದಶಕದಿಂದ ಯಂಗ್ ಸ್ಟರ್ಸ್ ಹಾರ್ಟ್ ಫೇವರಿಟ್. ಈ ಚೆಲುವೆ ಈಗ ಮತ್ತೊಮ್ಮೆ ಕನ್ನಡಕ್ಕೆ ಬಂದಿದ್ದಾರೆ. ಅದೂ ದಾವಣಗೆರೆ ಬೆಣ್ಣೆ ದೋಸೆಯ ಚಿತ್ರದಲ್ಲಿ. ಆದಿತಿ ಪ್ರಭುದೇವ ಪ್ರಧಾನ ಪಾತ್ರದಲ್ಲಿರೋ ಸಿನಿಮಾ ಚಾಂಪಿಯನ್. ಈ ಚಿತ್ರದಲ್ಲಿ ಸನ್ನಿ ಲಿಯೋನ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ಹಿಂದೆ ಜೋಗಿ ಪ್ರೇಮ್ ಅವರ ಡಿಕೆ ಹಾಗೂ ಇಂದ್ರಜಿತ್ ಲಂಕೇಶ್ ಅವರ ಲವ್ ಯೂ ಅಲಿಯಾ ಚಿತ್ರದಲ್ಲಿಯೂ ಹಾಡಿ ಕುಣಿದಿದ್ದ ಸನ್ನಿ ಲಿಯೋನ್, ಚಾಂಪಿಯನ್ ಚಿತ್ರದಲ್ಲೂ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.

    ಇದು ಶಾಹುರಾಜ್ ಶಿಂಧೆ ನಿರ್ದೇಶನದ ಸಿನಿಮಾ. ಸಚಿನ್ ಧನ್ಪಾಲ್ ಹೀರೋ ಆಗಿರೋ ಚಿತ್ರದಲ್ಲಿ ಆದಿತಿ ಪ್ರಭುದೇವ ಹೀರೋಯಿನ್. ಇಬ್ಬರೂ ಚಿತ್ರದಲ್ಲಿ ಎಂಜಿನಿಯರ್ ಸ್ಟೂಡೆಂಟ್ಸ್ ಆಗಿ ಕಾಣಿಸಿಕೊಂಡಿದ್ದು, ಕ್ರೀಡೆಯನ್ನಾಧರಿಸಿದ ಚಿತ್ರವಿದು. ಕನ್ನಡ ಮತ್ತು ಮರಾಠಿ ಎರಡೂ ಭಾಷೆಯಲ್ಲಿ ನಿರ್ಮಾಣವಾಗುತ್ತಿರೋ ಚಿತ್ರದಲ್ಲಿ ಕನ್ನಡದ ಚಾಂಪಿಯನ್ ಚಿತ್ರಕ್ಕೆ ಆದಿತಿ ಪ್ರಭುದೇವ ನಾಯಕಿ.

  • ಬರಲ್ಲ ಬಿಡಿ ಸನ್ನಿಲಿಯೋನ್

    sunny leone refuses to come to bangalore

    ಸನ್ನಿ ಲಿಯೋನ್, ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸನ್ನಿ ನೈಟ್ಸ್‍ಗೆ ಬರ್ತಾರಾ..? ಬರಲ್ವಾ.. ಇಂಥಾದ್ದೊಂದು ಅನುಮಾನ ಇದುವರೆಗೂ ಇದ್ದೇ ಇತ್ತು. ಈಗ ಸ್ವತಃ ಸನ್ನಿಲಿಯೋನ್ ಅವರೇ ಸ್ಪಷ್ಟಪಡಿಸಿಬಿಟ್ಟಿದ್ದಾರೆ. ನಾನು ಬೆಂಗಳೂರಿಗೆ ಬರೋದಿಲ್ಲ ಎಂದು ಹೇಳಿಯೂಬಿಟ್ಟಿದ್ದಾರೆ.

    ನನಗೆ & ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸುವ ಎಲ್ಲರಿಗೂ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಬೆಂಗಳೂರು ಪೊಲೀಸರು ಸಾರ್ವಜನಿಕವಾಗಿ ಹೇಳಿದ್ದಾರೆ. ನನಗೆ ಮತ್ತು ನನ್ನ ತಂಡಕ್ಕೆ ಸಾರ್ವಜನಿಕರ ಸುರಕ್ಷತೆಯೇ ಮುಖ್ಯ. ಹೀಗಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸೋದಿಲ್ಲ. ಎಲ್ಲರೂ ಸುರಕ್ಷಿತವಾಗಿ ಹೊಸ ವರ್ಷ ಆಚರಿಸಿ. ದೇವರು ಒಳ್ಳೆಯದು ಮಾಡಲಿ.

    ಕೇವಲ ಇಷ್ಟು ಹೇಳಿ ಸನ್ನಿ ಸುಮ್ಮನಾಗಿಲ್ಲ. ಯುವಕರಿಗೆ ಕರೆಯೊಂದನ್ನು ನೀಡಿರುವ ಸನ್ನಿ, ನಿಮಗಾಗಿ ನೀವೇ ಧ್ವನಿಯೆತ್ತಿ. ನಿಮ್ಮ ಮಾತನ್ನು ಇನ್ಯಾರೋ ಆಡುವ ರೀತಿ ನೋಡಿಕೊಳ್ಳಬೇಡಿ ಎಂದೂ ಹೇಳಿದ್ದಾರೆ.

    ಈಗ ಕಾರ್ಯಕ್ರಮದ ಆಯೋಜಕರು, ತಮಗೆ ನಷ್ಟ ಭರಿಸಿಕೊಡುವಂತೆ ಕೋರ್ಟ್ ಮೊರೆ ಹೋಗಿದ್ದಾರೆ.

  • ರಾಜ್ಯದಲ್ಲಿ ಶುರುವಾಯ್ತು ಸನ್ನಿ ಲಿಯೋನ್ ಅಭಿಮಾನಿಗಳ ಸಂಘ

    Sunny Leon fans association image

    ಮಾಜಿ ಪೋರ್ನ್ ಸ್ಟಾರ್, ಹಾಲಿ ಬಾಲಿವುಡ್ ನಟಿ ಸನ್ನಿಲಿಯೋನ್ ಹೆಸರಲ್ಲಿ ಅಭಿಮಾನಿಗಳ ಸಂಘವೊಂದು ಶುರುವಾಗಿದೆ. ಅರೆ.. ಸನ್ನಿಲಿಯೋನ್ ಅಭಿಮಾನಿಗಳ ಸಂಘನಾ ಎಂದು ಅಚ್ಚರಿ ಪಡಬೇಡಿ, ನೀವು ಓದುತ್ತಿರುವುದು ಖರೆ ಐತಿ. ಇಂಥಾದ್ದೊಂದು ಸಾಹಸ ಮಾಡಿರುವುದು ಕರ್ನಾಟಕದ ಜವಾರಿ ಹುಡುಗರು. ಜವಾರಿ ಅಂದ್ರೆ ಬೇರೇನಲ್ಲ, ಉತ್ತರ ಕರ್ನಾಟಕದ ಹುಡುಗರು.

    ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಈ ಸಂಘ ರಚನೆಯಾಗಿದೆ. ಇತ್ತೀಚೆಗೆ ಇಲ್ಲಿ ನಡೆದ ಅಂಬಾದೇವಿ ಜಾತ್ರೆಯಲ್ಲಿ ಈ ಸಂಘ ಎಲ್ಲರ ಗಮನ ಸೆಳೆದಿದೆ. ಸುಮಾರು 15 ಯುವಕರು ಸೇರಿಕೊಂಡು ಈ ಸಂಘ ಸೃಷ್ಟಿಸಿದ್ದಾರೆ.

    ಸನ್ನಿಲಿಯೋನ್ ಪ್ರಕೃತಿ ವಿಕೋಪ, ಅನಾಥ ಮಕ್ಕಳಿಗೆ ನೆರವು ನೀಡುವ ಮೂಲಕ ಔದಾರ್ಯ ಮೆರೆಯುತ್ತಿದ್ದಾರೆ. ಹೀಗಾಗಿ ನಾವು ಸನ್ನಿಲಿಯೋನ್ ಹೆಸರಲ್ಲಿ ಸನ್ನಿಲಿಯೋನ್ ಯುವಕ ಮಂಡಳಿ ಸ್ಥಾಪಿಸಿದ್ದೇವೆ. ಅವರ ನಟನೆಗಿಂತಲೂ ಅವರ ಹೃದಯ ವೈಶಾಲ್ಯತೆಯೇ ನಮಗೆ ಇಷ್ಟವಾಯ್ತು ಎಂದಿದ್ದಾರೆ ಸಂಘದ ಅಧ್ಯಕ್ಷ ಗೋಪಾಲ.

  • ವಿವಾದ ತಣ್ಣಗಾದ ಮೇಲೆ ಸನ್ನಿ ಪ್ರವೇಶ

    sunny leaone to act in kannada

    ಬಾಲಿವುಡ್ ನಟಿ, ಮಾಜಿ ಪೋರ್ನ್ ಸ್ಟಾರ್ ಸನ್ನಿಲಿಯೋನ್ ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿದ್ದಾರೆ. ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಬೆಂಗಳೂರಿನಲ್ಲಿ ಡ್ಯಾನ್ಸ್ ಶೋ ಕೊಡಬೇಕಿದ್ದ ಸನ್ನಿಲಿಯೋನ್, ಪ್ರತಿಭಟನೆ ಮತ್ತು ಸರ್ಕಾರದ ಅಸಮ್ಮತಿಯಿಂದಾಗಿ ಹಿಂದೆ ಸರಿದಿದ್ದರು. ಈಗ ವಿವಾದ ತಣ್ಣಗಾದ ಮೇಲೆ ನಾಯಕಿಯಾಗಿ ಕನ್ನಡಕ್ಕೆ ಬರುತ್ತಿದ್ದಾರೆ.

    `ನಿನ್ನದೇ ಹೆಜ್ಜೆ ಡಾಟ್ ಕಾಮ್' ಅನ್ನೋ ಸಿನಿಮಾಗೆ ಸನ್ನಿಲಿಯೋನ್ ನಾಯಕಿ. ಇದು ಕನ್ನಡದಲ್ಲಷ್ಟೇ ಅಲ್ಲ, ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರದ ಶೂಟಿಂಗ್ ಮಾರ್ಚ್‍ನಲ್ಲಿ ಶುರುವಾಗಲಿದೆ ಎಂದು ಹೇಳಿಕೊಂಡಿದೆ ಚಿತ್ರತಂಡ.

     

     

  • ವೀರಮಹಾದೇವಿಯಾಗಿ ಬರುತ್ತಾರೆ ಸನ್ನಿಲಿಯೋನ್

    sunny leone in veerahadevi

    ಸನ್ನಿಲಿಯೋನ್.. ಆ ಹೆಸರು ಕೇಳಿದರೆ ಯುವಕರ ಮನಸು ಎತ್ತೆತ್ತಲೋ ಜಾರುತ್ತೆ. ಸನ್ನಿ ಲಿಯೋನ್ ತಮ್ಮ ಮಾಜಿ ವೃತ್ತಿಯನ್ನು ಮರೆತಿರಹುದೇನೋ.. ಆದರೆ, ಸನ್ನಿ ಎಂದರೆ ಇವತ್ತಿಗೂ ಯುವಕರು ನೆನಪಿಸಿಕೊಳ್ಳೋದು ಮಾತ್ರ.. ಆ ಕನಸುಗಳನ್ನೇ... ಅಂತಹಾ ಸನ್ನಿ ಲಿಯೋನ್, ಈಗಾಗಲೇ ಕನ್ನಡಕ್ಕೆ ಬಂದು ಹೋಗಿದ್ದಾರೆ. ಐಟಂ ಸಾಂಗುಗಳಲ್ಲಿ ಸೇಸಮ್ಮಳಾಗಿ ಕುಣಿದು ಕುಪ್ಪಳಿಸಿದ್ದಾಗಿದೆ. ಆದರೆ, ಈ ಬಾರಿ ಅವರು ವೀರ ಮಹಾದೇವಿಯಾಗಿ ಬರುತ್ತಿದ್ದಾರಂತೆ.

    ತಮಿಳಿನಲ್ಲಿ ತಯಾರಾಗುತ್ತಿರುವ ವೀರಮಹಾದೇವಿ ಅನ್ನೋ ಸಿನಿಮಾದಲ್ಲಿ ಸನ್ನಿಲಿಯೋನ್ ರಾಣಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕುದುರೆಯ ಮೇಲೆ ಕುಳಿತಿರುವ ಸನ್ನಿಯ ಪೋಸ್ಟರ್, ಸಂಚಲನ ಸೃಷ್ಟಿಸಿರುವುದಂತೂ ನಿಜ.

    ಈ ಸಿನಿಮಾ ಕನ್ನಡದಲ್ಲೂ ಬರಲಿದೆಯಂತೆ. ಅಂದರೆ ತಮಿಳಿನಲ್ಲಿ ತಯಾರಾಗುವ ಸಿನಿಮಾ ಕನ್ನಡಕ್ಕೆ ಡಬ್ ಆಗಿ ಬರಲಿದೆ. ತೆಲುಗು, ಮಲಯಾಳಂ ಭಾಷೆಗೂ ಹೋಗಲಿದೆ. ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾಗಳ ಮೇಲಿದ್ದ ನಿರ್ಬಂಧ ತೆರವಾಗಿದ್ದರೂ, ಪ್ರೇಕ್ಷಕರೇ ಡಬ್ಬಿಂಗ್ ಸಿನಿಮಾಗಳನ್ನು ನೋಡುತ್ತಿಲ್ಲ. ಹಠಕ್ಕೆ ಬಿದ್ದು ರಿಲೀಸ್ ಆದ ಕೆಲವು ಡಬ್ಬಿಂಗ್ ಸಿನಿಮಾಗಳು ಫ್ಲಾಪ್ ಆಗಿವೆ. ಹೀಗಿರುವಾಗ ಸನ್ನಿಲಿಯೋನ್‍ರ ವೀರಮಹಾದೇವಿ ಡಬ್ಬಿಂಗ್ ಸಿನಿಮಾ ನೋಡ್ತಾರಾ..? ಕಾದು ನೋಡಿ.

  • ಸನ್ನಿ ನೈಟ್ಸ್ ಇರುತ್ತಾ..? ಇರಲ್ವಾ..? ಗೊಂದಲ ಬಗೆಹರಿದಿಲ್ಲ..!

    sunny nights in white orchids

    ಡಿ.31ರ ರಾತ್ರಿ ಬೆಂಗಳೂರಿನಲ್ಲಿ ಆಯೋಜಿಸಿರುವ ಸನ್ನಿ ನೈಟ್ಸ್ ಕಾರ್ಯಕ್ರಮ, ನಮ್ಮ ಸಂಸ್ಕøತಿಗೆ ತಕ್ಕುದಲ್ಲ ಎಂದು ಸರ್ಕಾರ ನಿಷೇಧಿಸಿದೆ. ಪೊಲೀಸ್ ಇಲಾಖೆ ಅನುಮತಿ ಕೊಟ್ಟಿಲ್ಲ. ಸ್ವತಃ ಗೃಹ ಸಚಿವರೇ ಕಾರ್ಯಕ್ರಮ ರದ್ದು ಮಾಡಲು ಸೂಚಿಸಿದ್ದಾರೆ.

    ಆದರೆ, ಕಾರ್ಯಕ್ರಮದ ಆಯೋಜಕರು ಟಿಕೆಟ್‍ಗಳನ್ನು ಮಾರುತ್ತಲೇ ಇದ್ದಾರೆ. ನಾಗವಾರ ರಿಂಗ್ ರಸ್ತೆಯಲ್ಲಿರುವ ವೈಟ್ ಆರ್ಕಿಡ್‍ನಲ್ಲಿ ಟೈಮ್ ಕ್ರಿಯೇಷನ್ಸ್ ಈ ಕಾರ್ಯಕ್ರಮ ಆಯೋಜಸಿದೆ. ಪೊಲೀಸರ ಅನುಮತಿ ಇಲ್ಲದಿದ್ದರೂ, 3ರಿಂದ 8 ಸಾವಿರ ರೂ. ನಿಗದಿಪಡಿಸಲಾಗಿದೆ. ಬಿಯರ್, ದೇಸಿ ಮದ್ಯ, ಅನಿಯಮಿತ ಊಟದ ಆಫರ್‍ನ್ನೂ ನೀಡಲಾಗಿದೆ.

    ಹೇಗೆ..? ಮತ್ತೇನಾದರೂ ಅನುಮತಿ ಕೊಟ್ಟಿದ್ದಾರಾ ಎಂದು ನೋಡಿದರೆ, ಹಾಗೇನಿಲ್ಲ. ಇದುವರೆಗೆ ಯಾರೂ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿಯೇ ಇಲ್ಲ. ಇನ್ನು ಮೇಲೆ ಅನುಮತಿಗಾಗಿ ಅರ್ಜಿ ಹಾಕಿದರೂ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಬೆಂಗಳೂರು ಕಮಿಷನರ್ ಸುನಿಲ್ ಕುಮಾರ್.

    ಸನ್ನಿ ಲಿಯೋನ್ ಕಾರ್ಯಕ್ರಮ ನಡೆಯುವುದಿಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ, ಟಿಕೆಟ್ ಮಾರಾಟವಾಗುತ್ತಿರುವುದು ಹೇಗೆ..? ಅದೇ ಸನ್ನಿ ಸಸ್ಪೆನ್ಸ್.

  • ಸನ್ನಿ ಲಿಯೋನ್ ನಿರೂಪಣೆ ಶೋನಲ್ಲಿ ಕಿರಿಕ್ ಸಂಯುಕ್ತಾ..!

    kirik samyuktha enters mtv splitsvilla

    ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಸಂಯುಕ್ತಾ ಹೆಗಡೆ, ಆನಂತರ ಕಿರಿಕ್ಕುಗಳಿಂದಲೇ ಸುದ್ದಿ, ಸದ್ದು ಮಾಡಿದ ನಟಿ. ಕನ್ನಡದ ಬಿಗ್‍ಬಾಸ್ ಶೋನಲ್ಲಿ ಭಾಗವಹಿಸಿದ್ದ ಸಂಯುಕ್ತಾ, ಅಲ್ಲಿಯೂ ವಿವಾದವೊಂದನ್ನು ಮೈಮೇಲೆಳೆದುಕೊಂಡಿದ್ದರು. ನಂತರ, ಎಂಟಿವಿಯ ರೊಡೀಸ್ ರಿಯಾಲಿಟಿ ಶೋನಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಿಂಚಿದ್ದರು. ಈಗ.. ಹಿಂದಿಯ `ಸ್ಪ್ಲಿಟ್ ವಿಲ್ಲಾ' ರಿಯಾಲಿಟಿ ಶೋಗೆ ಹೋಗುತ್ತಿದ್ದಾರೆ.

    ಸ್ಪ್ಲಿಟ್ ವಿಲ್ಲಾ ಅನ್ನೋದು ಡೇಟಿಂಗ್ ಮತ್ತು ಫ್ರೆಂಡ್‍ಶಿಪ್‍ನ್ನು ಇಟ್ಟುಕೊಂಡಿರುವ ರಿಯಾಲಿಟಿ ಶೋ. ಈ ಶೋಗೆ ಸಂಯುಕ್ತಾ ಹೆಗಡೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದಾರೆ. ಈ ಶೋನ ನಿರೂಪಕರು ಸನ್ನಿ ಲಿಯೋನ್ ಮತ್ತು ರಣ್ ವಿಜಯ್.

  • ಸನ್ನಿಲಿಯೋನ್ ಖುಷ್ ಹುವಾ..  

    ಸನ್ನಿಲಿಯೋನ್ ಖುಷ್ ಹುವಾ..  

    ಸನ್ನಿಲಿಯೋನ್ ಅದೆಷ್ಟು ಅಭಿಮಾನಿಗಳನ್ನು ಖುಷಿಪಡಿಸಿದ್ದಾರೋ.. ಅಂತಹ ಸನ್ನಿಲಿಯೋನ್‍ರನ್ನು ಖುಷಿಪಡಿಸಿದ್ದು ಮಂಡ್ಯದ ಹೈಕ್ಳು. ಇತ್ತೀಚೆಗೆ 41ನೇ ವರ್ಷಕ್ಕೆ ಕಾಲಿಟ್ಟ ಸನ್ನಿಲಿಯೋನ್ ಹುಟ್ಟುಹಬ್ಬವನ್ನು ಮಂಡ್ಯದ ಸನ್ನಿ ಫ್ಯಾನ್ಸ್ ಸ್ಪೆಷಲ್ ಆಗಿ ಸೆಲಬ್ರೇಟ್ ಮಾಡಿದ್ದರು.

    ಅದನ್ನು ಥ್ರಿಲ್ಲಾಗಿ ಹೇಳಿಕೊಂಡಿದ್ದ ಬೆಂಗಳೂರಿಗೆ ಬಂದಿದ್ದರು. ಕನ್ನಡದ ಚಾಂಪಿಯನ್ ಸಿನಿಮಾದ ಸ್ಪೆಷಲ್ ಸಾಂಗ್‍ನಲ್ಲಿ ಸನ್ನಿಲಿಯೋನ್ ಡ್ಯಾನ್ಸ್ ಮಾಡುತ್ತಿದ್ದು, ಆ ಹಾಡಿನ ಶೂಟಿಂಗಿಗೆ ಬಂದಿದ್ದರು ಸನ್ನಿ. ಚಾಂಪಿಯನ್ ಚಿತ್ರದಲ್ಲಿ ಆದಿತಿ ಪ್ರಭುದೇವ, ಸಚಿನ್ ಧನ್‍ಪಾಲ್ ನಾಯಕಿ, ನಾಯಕರಾಗಿದ್ದಾರೆ. ಶಿವರಾಜ್ ಶಿಂಧೆ ನಿರ್ದೇಶನದ ಚಿತ್ರವಿದು. 

    ಡಿಂಗರ್‍ಬಿಲ್ಲಿ ಹಾಡಿನ ಲಿರಿಕಲ್ ವಿಡಿಯೋವನ್ನೂ ರಿಲೀಸ್ ಮಾಡಲಾಗಿದೆ. ಇದೇ ವೇಳೆ ಮಾತನಾಡಿದ ಸನ್ನಿ ಲಿಯೋನ್ ಶಿವು ಬೇರ್ಗಿ ಅವರ ಸಾಹಿತ್ಯವನ್ನೂ ಮೆಚ್ಚಿಕೊಂಡರು. ಶಶಾಂಕ್ ಮತ್ತು ಇಂದು ನಾಗರಾಜ್ ಅವರ ಗಾಯನವನ್ನೂ ಮೆಚ್ಚಿಕೊಂಡರು. ಅಜನೀಶ್ ಲೋಕನಾಥ್ ಮ್ಯೂಸಿಕ್ಕೂ ಸನ್ನಿಗೆ ಇಷ್ಟವಾಗಿತ್ತು. ಅಭಿಮಾನಿಗಳು ತಮ್ಮ ಹುಟ್ಟುಹಬ್ಬ ಸೆಲಬ್ರೇಟ್ ಮಾಡಿದ ರೀತಿ ಖುಷಿ ಕೊಟ್ಟಿತು ಎಂದ ಸನ್ನಿ, ಅಭಿಮಾನಿಯೊಬ್ಬ ತಮ್ಮ ಹೆಸರಿನಲ್ಲಿ ಮಟನ್ ಸ್ಟಾಲ್ ತೆಗೆದಿರುವುದನ್ನು ತಿಳಿದು ಖುಷಿಯಾದರು. ಆದರೆ ನಾನು ಪ್ಯೂರ್ ವೆಜಿಟೇರಿಯನ್ ಎಂದರು. ಅಭಿಮಾನಿಯೊಬ್ಬನ ಎದೆ ಮೇಲೆ ಆಟೋಗ್ರಾಫ್ ಕೊಟ್ಟರು. ಟೋಟ್ಟಲ್ಲಿ.. ಸನ್ನಿ ಖುಷ್ ಹುವಾ.

  • ಸನ್ನಿಲಿಯೋನ್ ಹುಟ್ಟುಹಬ್ಬದ ಸೆಲಬ್ರೇಷನ್ ಹೇಗಿತ್ತು ಗೊತ್ತಾ?

    ಸನ್ನಿಲಿಯೋನ್ ಹುಟ್ಟುಹಬ್ಬದ ಸೆಲಬ್ರೇಷನ್ ಹೇಗಿತ್ತು ಗೊತ್ತಾ?

    ಸನ್ನಿಲಿಯೋನ್, ಮಾಜಿ ಪೋರ್ನ್‍ಸ್ಟಾರ್. ಬ್ಲೂಫಿಲಂಗಳಲ್ಲಿ ನಟಿಸಿ.. ಬಿಗ್‍ಬಾಸ್‍ಗೆ ಬಂದು.. ಈಗ ಹಿಂದಿ ಚಿತ್ರಗಳಲ್ಲಿ ನಟಿಸುತ್ತಿರೋ ಸನ್ನಿ ಲಿಯೋನ್ ಅವರಿಗೆ ನಿನ್ನೆ ಹುಟ್ಟುಹಬ್ಬವಿತ್ತು. ಆ ಹುಟ್ಟುಹಬ್ಬವನ್ನು ಅಭಿಮಾನಿಗಳು ಹೇಗೆಲ್ಲ ಆಚರಿಸಿದರು ಎಂದು ನೋಡಿದರೆ ಅಚ್ಚರಿಯಾಗುವುದು ಸತ್ಯ.

    ಮಂಡ್ಯದ ಕೊಮ್ಮೇರಹಳ್ಳಿಯಲ್ಲಿ ಸನ್ನಿಲಿಯೋನ್ ಅಭಿಮಾನಿಗಳ ಸಂಘದವರು ರಕ್ತದಾನ ಶಿಬಿರ ಏರ್ಪಡಿಸಿದ್ದರು. ಅಷ್ಟೇ ಅಲ್ಲ, ಅಭಿಮಾನಿಗಳಿಗೆ ಬಾಡೂಟದ ವ್ಯವಸ್ಥೆಯೂ ಇತ್ತು.

    ಇನ್ನೊಂದೆಡೆ 20 ಅಡಿ ಉದ್ದದ ಬ್ಯಾನರ್ ಹಾಕಿಸಿ, ಸನ್ನಿಗೆ ಶುಭ ಕೋರಿದರು. ಬಡ ಅನಾಥ ಮಕ್ಕಳ ಪಾಲಿನ ದೇವತೆ ಅನ್ನೋ ಬಿರುದು ಕೊಟ್ಟು, ಆ ಬ್ಯಾನರ್ ಕೆಳಗೆ ಅನಾಥ ಮಕ್ಕಳಿಂದ ಕೇಕ್ ಕಟ್ ಮಾಡಿಸಿದರು.

    ಇನ್ನು ಸನ್ನಿಲಿಯೋನ್‍ಗೆ ಉತ್ತರ ಕರ್ನಾಟಕದ ಗದಗ, ಹಾವೇರಿ, ಬಳ್ಳಾರಿಯಲ್ಲಿ ನೋಂದಾಯಿತ ಅಭಿಮಾನಿ ಸಂಘಟನೆಗಳೇ ಇವೆ. ಆ ಸಂಘಟನೆಗಳೂ ವಿಭಿನ್ನವಾಗಿ ಸನ್ನಿ ಹುಟ್ಟುಹಬ್ಬ ಸೆಲಬ್ರೇಟ್ ಮಾಡಿವೆ.

    ಅಂದಹಾಗೆ ಸನ್ನಿಲಿಯೋನ್ ಈಗ 40 ತುಂಬಿ.. 41ಕ್ಕೆ ಕಾಲಿಟ್ಟಿದ್ದಾರೆ.