` bharathi vishnuvardhan, - chitraloka.com | Kannada Movie News, Reviews | Image

bharathi vishnuvardhan,

 • Suhasini Talks on Vishnuvardhan Bandana - Exclusive Video

  bandana image

  Actress Suhasini Maniratnam Talks on Vishnuvardhan and how they were associated in the movie Bandana directed by Rajendra Singh Babu. Watch Video

 • Vishnu Trust Collects Fund For Nepal

  nepal relief fund collection image

  The Vibha Trust founded by late star Vishnuvardhan collected relief for Nepal earthquake victims on May 1. Bharati Vishnuvardhan, Aniruddha, Hema Choudari and over 100s fans and well wishers started from Town Hall and went around SP Road, city market and other areas collecting donations.

  Since it is a registered trust donations were exempt from tax. Hundreds of people donated and sources say a substantial sum amounting to at least a few lakh was collected.

 • Vishnuvardhan's Memorial Work To Start On Sep 18th

  anirudh, hema choudry, bharathi vishnuvardhan image

  The rift between Dr Vishnuvardhan's fans and family regarding the memorial of the late actor is likely to come to an end soon, with Bharathi Vishnuvardhan deciding to build the memorial in Mysore and even the Government is said to have making prior preparations to start the work on September 18th, which is incidentally Dr Vishnuvardhan's birthday.

  Earlier, there was a news that the Dr Vishnuvardhan memorial will be shifted from Bangalore's Abhiman Studio to Mysore. Even Vishnuvardhan's family including Bharathi Vishnuvardhan and Aniruddh had said that it is better to build the memorial in Mysore rather than Bangalore because of various legal problems. But the fans of the actor, protested against it. Now Bharathi Vishnuvardhan is all set to take the memorial to Mysore and has already talked to the Chief Minister regarding this. The Government on the other hand has located a five acre land five kilometers far from Mysore on the Hunsur Road.

  Sources say, the memorial work is likely to start on Dr Vishnuvardhan's birthday.

 • Vishnuvardhana Memorial issue Likely to be Resolved

  vishnuvardhan memorial image

  The Dr Vishnuvardhana Memorial issue at the Abhiman Studio is likely to be resolved soon with actor Balakrishna's daughter Geetha Bali agreeing to let go two acres of land for the memorial.

  The Dr Vishnuvardhan memorial at the Abhiman Studio in Bangalore was in problem as there was a legal tussle between Balakrishna's daughter Geeta Bali and son Ganesh. The row between the two was for 10 acre land at the studio. Because of the row between the two, there was problem for building the memorial.

  The fans of Vishnuvardhan on Monday met Geetha Bali and requested to let go off only two acres of land for the memorial, for which Geetha Bali has readily agreed and is likely to appeal to the court said sources close to Geetha Bali.

 • ಅಪ್ಪ ಇದ್ದಿದ್ರೆ ಹೀಗೆಲ್ಲ ಮಾತನಾಡ್ತಿದ್ರಾ..? - ಕೀರ್ತಿ ವಿಷ್ಣುವರ್ಧನ್ ಕಣ್ಣೀರು

  keerthi vishnuvardhan lashes out at veerakaputra srinivas

  ``ಅಪ್ಪ ಇದ್ದಿದ್ದರೆ ಈಗ ನಮ್ಮ ವಿರುದ್ಧ ಮಾತನಾಡುತ್ತಿರುವವರೆಲ್ಲ ಎಲ್ಲಿರ್ತಾ ಇದ್ರು. ಈಗ ಎಲ್ಲರೂ ನಮ್ಮ ಬಗ್ಗೆ, ಅಮ್ಮನ ಬಗ್ಗೆ ಮಾತನಾಡ್ತಾರೆ. 9 ವರ್ಷದಿಂದ ಅಲೆದಾಡಿದ್ದೇವೆ. 5 ಮುಖ್ಯಮಂತ್ರಿಗಳು ಬದಲಾಗಿದ್ದಾರೆ. ಎಷ್ಟು ಜನ ಡಿಸಿಗಳು ಬಂದು ಹೋದರೋ.. ಲೆಕ್ಕವಿಲ್ಲ. ಎಲ್ಲರಿಗೂ ಮನವಿ ಪತ್ರ ಕೊಟ್ಟಿದ್ದೇವೆ. ಕಚೇರಿಯಿಂದ ಕಚೇರಿಗೆ ತಿರುಗಿದ್ದೇವೆ. ಸ್ಮಾರಕದ ಕೆಲಸ ಶುರುವಾಗಿಲ್ಲ. ಈಗ ನೋಡಿದರೆ, ನಮ್ಮನ್ನೇ ಟೀಕಿಸ್ತಾರೆ. ಅಪ್ಪ ಇದ್ದಿದ್ರೆ ಹೀಗೆಲ್ಲ ಆಗ್ತಾ ಇರಲಿಲ್ಲ'' ವಿಷ್ಣುವರ್ಧನ್ ಪುತ್ರ ಕೀರ್ತಿ ವಿಷ್ಣುವರ್ಧನ್ ಹೇಳಿದ ಮಾತಿದು.

  ವಿಷ್ಣು ಸ್ಮಾರಕ ವಿವಾದದ ಹಿನ್ನೆಲೆಯಲ್ಲಿ ಮಾತನಾಡಿದ ಕೀರ್ತಿ, ವೀರಕಪುತ್ರ ಶ್ರೀನಿವಾಸ್ ಯಾರು..? ನಮ್ಮ ಕುಟುಂಬದ ವಿಚಾರದಲ್ಲಿ ಅವರೇಕೆ ತಲೆ ಹಾಕಬೇಕು ಎಂದು ಪ್ರಶ್ನಿಸಿದ್ದಾರೆ.

 • ಇಷ್ಟ ಇದ್ರೆ ಮಾಡಿ.. ಇಲ್ಲದಿದ್ರೆ ಏನೂ ಬೇಡ ಬಿಡಿ - ಭಾರತಿ ವಿಷ್ಣುವರ್ಧನ್

  bharathi vishnuvardhan talks about vishnu memorial issue

  ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿವಾದ ಮತ್ತೆ ಜೋರಾಗಿದೆ. ವಿಷ್ಣುವರ್ಧನ್ ಸ್ಮಾರಕ ಎಲ್ಲಿ ಮಾಡಬೇಕು ಅನ್ನೋದು ದೊಡ್ಡ ವಿವಾದವನ್ನೇ ಎಬ್ಬಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಭಾರತಿ ವಿಷ್ಣುವರ್ಧನ್ `ವಿಷ್ಣು ನಮ್ಮ ಮನೆಯಲ್ಲಿ, ಅಭಿಮಾನಿಗಳ ಹೃದಯದಲ್ಲಿ ಜೀವಂತವಿದ್ದಾರೆ. ನಮಗೂ ಕೇಳಿ ಕೇಳಿ ಸಾಕಾಗಿದೆ. ಇಷ್ಟ ಇದ್ರೆ ಸ್ಮಾರಕ ಮಾಡಿ. ಇಲ್ಲದಿದ್ರೆ ಬಿಟ್ಟು ಬಿಡಿ. ವಿವಾದವೂ ಬೇಡ. ಸ್ಮಾರಕವೂ ಬೇಡ' ಎಂದಿದ್ದಾರೆ.

  ಹತಾಶೆಯಿಂದಲೇ ಮಾತನಾಡಿರುವ ಭಾರತಿ ಗೀತಾಬಾಲಿ ಕುಟುಂಬದ ಆಸ್ತಿ ಜಗಳ ಮುಗಿಯುವುದಿಲ್ಲ. ವಿಷ್ಣು ಪುಣ್ಯಭೂಮಿಯಲ್ಲಿ ಈಗಿರುವ ಸ್ಮಾರಕವನ್ನು ನಾವೇ ನಮ್ಮ ಸ್ವಂತ ಖರ್ಚಿನಲ್ಲೇ ಕಟ್ಟಿದ್ದೇವೆ. ಸರ್ಕಾರವನ್ನೇ ನಂಬಿಕೊಂಡಿದ್ದರೆ ಅದೂ ಆಗುತ್ತಿರಲಿಲ್ಲ. ಸರ್ಕಾರಕ್ಕೆ ಎಲ್ಲಿ ಇಷ್ಟವಿದೆಯೋ ಅಲ್ಲಿಯೇ ಸ್ಮಾರಕ ಮಾಡಲಿ. ನಮ್ಮ ಅಭ್ಯಂತರವೇನಿಲ್ಲ. ಇಷ್ಟೆಲ್ಲ ವಿವಾದ ಮಾಡಿಕೊಂಡು ಸ್ಮಾರಕ ಮಾಡಿಸಿಕೊಳ್ಳಬೇಕೆ..? ಎಂದು ಪ್ರಶ್ನಿಸಿದ್ದಾರೆ ಭಾರತಿ.

  ಇಂದು ಭಾರತಿ ಕುಟುಂಬ ಶಾಸಕ ಮುನಿರತ್ನ ಅವರ ಮನೆಗೆ ತೆರಳಿ ವಿವಾದ ಬಗೆಹರಿಸುವಂತೆ ಮನವಿ ಮಾಡಿಕೊಳ್ಳಲಿದೆ.

 • ಎಡಕಲ್ಲು ಗುಡ್ಡದ ಮೇಲೆ ಕಲಾವಿದರ ಸಮಾಗಮ

  artists unite in edakallu guddadamle

  ಎಡಕಲ್ಲು ಗುಡ್ಡದ ಮೇಲೆ.. ಚಂದ್ರಶೇಖರ್ ಅಭಿನಯದ ಕೊನೆಯ ಸಿನಿಮಾ. ಚಂದ್ರಶೇಖರ್, ತಮಗೆ ಹೆಸರು ತಂದುಕೊಟ್ಟ ಸಿನಿಮಾದ ಟೈಟಲ್‍ನಲ್ಲಿಯೇ ಕೊನೆಯ ಸಿನಿಮಾ ಮಾಡಿರುವುದು ವಿಶೇಷ. ಸಿನಿಮಾದಲ್ಲಿ ಚಂದ್ರಶೇಖರ್ ಒಬ್ಬರೇ ಅಲ್ಲ, ಹಿರಿಯ ಕಲಾವಿದರ ದೊಡ್ಡ ದಂಡೇ ಇದೆ. ಭಾರತಿ ವಿಷ್ಣುವರ್ಧನ್, ಶ್ರೀನಾಥ್, ದತ್ತಣ್ಣ, ಸಿಹಿಕಹಿ ಚಂದ್ರು, ಸುಮಿತ್ರಾ, ಚಿದಾನಂದ್, ವೀಣಾ ಸುಂದರ್, ಭವ್ಯಶ್ರೀ, ಪದ್ಮಜಾ ರಾವ್, ಉಷಾ ಭಂಡಾರಿ ಮೊದಲಾದವರು ನಟಿಸಿದ್ದಾರೆ. 

  ತಾಯಿಯ ಪ್ರೀತಿಯಿಂದ ವಂಚಿತಳಾದ ಬಾಲಕಿಯೊಬ್ಬಳ ಬದುಕನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಚಿತ್ರದಲ್ಲಿದೆ. ವಿವಿನ್ ಸೂರ್ಯ ನಿರ್ದೇಶನದ ಚಿತ್ರಕ್ಕೆ ಜಿ.ಪ್ರಕಾಶ್ ನಿರ್ಮಾಪಕರು. ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ.

 • ಓಂಪ್ರಕಾಶ್ ರಾವ್ V/s ಧನಂಜಯ್ - ಧನಂಜಯ್ ಹೇಳೋದೇ ಬೇರೆ

  om prakash rao vs dhananjay

  ನಿರ್ದೇಶಕ ಓಂ ಪ್ರಕಾಶ್ ರಾವ್ ಇತ್ತೀಚೆಗಷ್ಟೇ ನಟ ಧನಂಜಯ್ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದರು. ಅಡ್ವಾನ್ಸ್ ಕೊಟ್ಟೆ. ಫೋಟೋ ಶೂಟ್ ಮಾಡಿಸಿದೆ. ಆದರೆ, ಧನಂಜಯ್ ಕೈಕೊಟ್ಟುಬಿಟ್ಟರು. ಕೈಗೇ ಸಿಗುತ್ತಿಲ್ಲ ಎಂದೆಲ್ಲ ಹೇಳಿಕೊಂಡಿದ್ದರು. ಓಂಪ್ರಕಾಶ್ ರಾವ್ ಅವರ ಪ್ರತಿ ಮಾತಿಗೂ ಧನಂಜಯ್ ಉತ್ತರ ಕೊಟ್ಟಿದ್ದಾರೆ.

  ಓಂ ಪ್ರಕಾಶ್ ರಾವ್ ನನಗೆ ಅಡ್ವಾನ್ಸ್ ಕೊಟ್ಟ ಮೊದಲ ನಿರ್ದೇಶಕ. ಅದರಲ್ಲಿ ತಪ್ಪೇನಿಲ್ಲ. ಆದರೆ, ಅವರು ಸಿನಿಮಾ ಶುರು ಮಾಡಲೇ ಇಲ್ಲ. ನಾನು ಹಲವು ಬಾರಿ ಅವರ ಮನೆಗೆ ಹೋಗಿ ಕೇಳಿದಾಗಲೂ, ಮಾಡೋಣ ಮಾಡೋಣ ಎಂದು ಮುಂದೆ ಹಾಕುತ್ತಲೇ ಬಂದರು. ಮಧ್ಯೆ ರಾಟೆ ಚಿತ್ರದಲ್ಲಿ ಅವಕಾಶ ಸಿಕ್ಕಿತು. ಚಿತ್ರದ ಶೂಟಿಂಗ್‍ನಲ್ಲಿದ್ದಾಗಲೇ ಸೆಟ್‍ಗೆ ಬಂದ ಓಂಪ್ರಕಾಶ್ ರಾವ್, ಅಡ್ವಾನ್ಸ್ ಹಣವನ್ನು ವಾಪಸ್ ಕೇಳಿದರು. ತೊಂದರೆಯಲ್ಲಿದ್ದೇನೆ ಎಂದರು. ಅದಾದ ನಂತರ ಅವರಿಗೆ ನಾನು ಹಣವನ್ನು ವಾಪಸ್ ಕೊಟ್ಟಿದ್ದೇನೆ. ಅವರ ಮನೆಗೇ ಹೋಗಿ ಅಡ್ವಾನ್ಸ್ ಹಣವನ್ನು ವಾಪಸ್ ಕೊಟ್ಟು ಬಂದಿದ್ದೇನೆ. 

  ಇನ್ನು ಓಂ ಪ್ರಕಾಶ್ ಹೇಳಿದಂತೆ ಫೋಟೋ ಶೂಟ್ ಆಗಿದ್ದು, ಹೀರೋ ಚಿತ್ರಕ್ಕಲ್ಲ. ಹುಚ್ಚ-2 ಚಿತ್ರಕ್ಕೆ. ಹೀರೋ ಚಿತ್ರಕ್ಕೆ ನಾನು ನನ್ನ ಬಳಿಯಿದ್ದ ಕೆಲವು ಫೋಟೋಗಳನ್ನೇ ಕಳಿಸಿಕೊಟ್ಟಿದ್ದೆ. ಅದರಲ್ಲೇ ಪೋಸ್ಟರ್ ಡಿಸೈನ್ ಮಾಡಿದರು. ನಿರ್ದೇಶಕ ಓಂಪ್ರಕಾಶ್ ರಾವ್ ಅವರ ಬಗ್ಗೆ ನನಗೆ ಗೌರವವಿದೆ. ಅವರೂ ಅಷ್ಟೆ, ಒಬ್ಬ ನಟನನ್ನು ಪ್ರಾಮಾಣಿಕತೆಯನ್ನು ಗೌರವಿಸಬೇಕು. 

 • ವಿಷ್ಣು ಅಭಿಮಾನದ ಉತ್ಸವದಲ್ಲಿ ಏನಿದು ವಿವಾದ..?

  what is vishnuvardhan's birthday controversy

  ಇದೇ ಸೆಪ್ಟೆಂಬರ್ 18ಕ್ಕೆ ವಿಷ್ಣುವರ್ಧನ್ ಅವರ 68ನೇ ಹುಟ್ಟುಹಬ್ಬವಿದೆ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನ ವಿಷ್ಣು ಅಭಿಮಾನಿಗಳ ಸಂಘ ವಿಷ್ಣು ಸೇನಾ ಸಮಿತಿ ಅದ್ಧೂರಿಯಾಗಿ ಆಚರಿಸುತ್ತಿದೆ. ಇದರ ನಡುವೆಯೇ ಭಾರತಿ ವಿಷ್ಣುವರ್ಧನ್ ನೀಡಿರುವ ಹೇಳಿಕೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.

  ಯಜಮಾನರು ಆಡಂಬರದ ಕಾರ್ಯಕ್ರಮ ಇಷ್ಟಪಡುತ್ತಿರಲಿಲ್ಲ. ಕೆಲವರು ಅವರ ಹೆಸರಿನಲ್ಲಿ ಉತ್ಸವ, ಕಾರ್ಯಕ್ರಮ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು ಭಾರತಿ ವಿಷ್ಣುವರ್ಧನ್.

  ಈ ಕುರಿತು ಪ್ರತಿಕ್ರಿಯೆ ನೀಡಿರುವು ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಆಚರಿಸಲು ಯಾರಿಂದಲೂ ಹಣ ಸ್ವೀಕರಿಸಿಲ್ಲ. ನಮ್ಮ ಸ್ವಂತ ಹಣದಿಂದ, ಕೇವಲ ಅಭಿಮಾನದಿಂದ ಖರ್ಚು ಮಾಡುತ್ತಿದ್ದೇವೆ. ಅಷ್ಟೇ ಅಲ್ಲ, ವಿಷ್ಣು ಅವರ ಹುಟ್ಟುಹಬ್ಬವನ್ನು ಅದ್ಧೂರಿತನಕ್ಕಿಂತ ಹೆಚ್ಚಾಗಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದ್ದೇವೆ ಎಂದಿದ್ದಾರೆ.

  ಇದರ ನಡುವೆ ಸ್ಮಾರಕ ವಿವಾದವೂ ಮತ್ತೊಮ್ಮೆ ಕೇಳಿಸಿದೆ. ವಿಷ್ಣು ಸ್ಮಾರಕ ಕುರಿತಂತೆ ಇದುವರೆಗೆ 6 ಸಿಎಂಗಳನ್ನು ಭೇಟಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಣದ ಕೈಗಳು ಅಡ್ಡಿಪಡಿಸುತ್ತಿವೆ ಎಂದು ದೂರಿದ್ದಾರೆ ಭಾರತಿ.

  ಈ ಕುರಿತು ಅಭಿಮಾನಿ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹೇಳುವುದು ಇಷ್ಟು. ಸ್ಮಾರಕ ಮೈಸೂರಿನಲ್ಲಿ ಆಗುವುದಕ್ಕೆ ನಮ್ಮ ವಿರೋಧವಿದೆ. ಅವರ ಸಂಸ್ಕಾರ ನಡೆದ ಸ್ಥಳದಲ್ಲೇ ಸ್ಮಾರಕವೂ ಆಗಲಿ ಎನ್ನುವುದು ನಮ್ಮ ಬಯಕೆ. ಅಷ್ಟೇ ಹೊರತು ಮತ್ತೇನಿಲ್ಲ. ಇನ್ನು ವಿಷ್ಣು ಅವರ ಹುಟ್ಟುಹಬ್ಬವನ್ನು ನಮ್ಮ ಉಸಿರು ಇರುವವರೆಗೂ ಆಚರಿಸುತ್ತೇವೆ. ನಮ್ಮ ಅಭಿಮಾನ ಎಂಥದ್ದು ಎಂದು ಯಾರಿಗೂ ಹೇಳಬೇಕಿಲ್ಲ. ಭಾರತಿ ಅವರ ಮಾತು ನೋವು ತಂದಿದೆ ಎಂದಿದ್ದಾರೆ.

 • ಸಿಎಂ ಕುಮಾರಸ್ವಾಮಿ ಜೊತೆ ಭಾರತಿ ವಿಷ್ಣುವರ್ಧನ್ ಭೇಟಿ

  bharathi vishnuvardhan meets cm hdk

  ಮುಖ್ಯಮಂತ್ರಿಯಾದ ಮೇಲೆ ಪ್ರತಿಕ್ಷಣವೂ ಬ್ಯುಸಿಯಾಗಿರುವ ಕುಮಾರಸ್ವಾಮಿ, ಒಂದು ಕಡೆ ಸಂಪುಟದ ಸಂಕಟ, ಸಾಲಮನ್ನಾ ಸಂಕಟದಲ್ಲಿ ಮುಳುಗಿ ಹೋಗಿದ್ದಾರೆ. ಈ ನಡುವೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದಾರೆ. ಅಳಿಯ ಅನಿರುದ್ಧ ಅವರೊಂದಿಗೆ ಭೇಟಿ ಮಾಡಿದ ಭಾರತಿ, ವಿಷ್ಣುವರ್ಧನ್ ಸ್ಮಾರಕದ ಕುರಿತು ಪ್ರಸ್ತಾಪವನ್ನಿಟ್ಟಿದ್ದಾರೆ.

  ಸ್ಮಾರಕದ ಕುರಿತು ಇನ್ನೊಂದು ವಾರದ ನಂತರ ನಾನೇ ನಿಮ್ಮನ್ನು ಭೇಟಿ ಮಾಡುತ್ತೇನೆ. ಸದ್ಯಕ್ಕೆ ಬ್ಯುಸಿ ಇದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರಂತೆ. ಸ್ಮಾರಕವನ್ನು ಮೈಸೂರಿನಲ್ಲೇ ಮಾಡಬೇಕು ಎನ್ನುವುದು ನಮ್ಮ ಆಸೆ ಎಂದು ಹೇಳಿಕೊಂಡಿದ್ದಾರೆ ಭಾರತಿ.

  ವಿಷ್ಣುವರ್ಧನ್ ಅಭಿನಯದ ಸೂರ್ಯವಂಶ ಚಿತ್ರದ ನಿರ್ಮಾಪಕರೂ ಆಗಿದ್ದ ಕುಮಾರಸ್ವಾಮಿ, ವಿಷ್ಣುವರ್ಧನ್ ಅವರ ಅತಿದೊಡ್ಡ ಅಭಿಮಾನಿಯೂ ಹೌದು. ವಿಷ್ಣು ಸ್ಮಾರಕದ ಗೊಂದಲ, ಕುಮಾರಸ್ವಾಮಿ ಅವಧಿಯಲ್ಲಿ ಬಗೆಹರಿಯುತ್ತಾ..? ಸಮಯ ಇನ್ನೂ ಇದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery