` actor sharan, - chitraloka.com | Kannada Movie News, Reviews | Image

actor sharan,

 • ಅವತಾರ ಪುರುಷನಿಗೆ ಅಶಿಕಾ ಟೀಚರ್

  ಅವತಾರ ಪುರುಷನಿಗೆ ಅಶಿಕಾ ಟೀಚರ್

  ಅವನು ಅವತಾರ ಪುರುಷ. ಓವರ್ ಌಕ್ಟಿಂಗ್ ಅನಿಲ ಎಂದೇ ಖ್ಯಾತಿ. ಏನು ಹೇಳಿದರೂ.. ಅದನ್ನ ಓವರ್ ಆಗಿಯೇ ಮಾಡುವ ಜೂನಿಯರ್ ಆರ್ಟಿಸ್ಟ್. ಅವನಿಗೊಬ್ಬಳು ಟೀಚರ್. ನಾನಾ ಅವತಾರ ತಾಳುವ ಅವತಾರ ಸ್ತ್ರೀ. ಇಲ್ಲಿ ಅವತಾರ ಪುರುಷ ಶರಣ್ ಆದರೆ, ಅವತಾರ ಸ್ತ್ರೀ ಅಶಿಕಾ ರಂಗನಾಥ್.

  ಱಂಬೋ 2 ನಂತರ ಹಿಟ್ ಕಾಂಬಿನೇಷನ್ ಆಗಿ ಗುರುತಿಸಿಕೊಂಡ ಶರಣ್ ಮತ್ತು ಅಶಿಕಾ ಮತ್ತೊಮ್ಮೆ ಜೊತೆಯಾಗಿರುವ ಸಿನಿಮಾ ಇದು. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಸಿನಿಮಾ ಅವತಾರ ಪುರುಷ ಅಷ್ಟದಿಗ್ಬಂಧನಮಂಡಲಕ ಡಿಸೆಂಬರ್ನಲ್ಲಿ ರಿಲೀಸ್ ಆಗುತ್ತಿದೆ. ಸಿಂಪಲ್ ಸುನಿ ಡೈರೆಕ್ಷನ್ನಿನಲ್ಲಿ ಬರುತ್ತಿರೋ ಸಿನಿಮಾದಲ್ಲಿ ಮಸ್ತ್ ಮಸ್ತ್ ಎಂಟರ್ಟೈನ್ಮೆಂಟ್ ಅಂತೂ ಇರಲಿದೆ.

 • ಅವತಾರ್ ಪುರುಷನ ಜೊತೆ ಶ್ರೀನಗರ ಕಿಟ್ಟಿ ಛೂಮಂತ್ರ

  srinagar kitty in avatar purusha

  ಶರಣ್-ಅಶಿಕಾ ರಂಗನಾಥ್-ಸಿಂಪಲ್ ಸುನಿ-ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಷನ್ನಿನ ಅವತಾರ್ ಪುರುಷ ಚಿತ್ರಕ್ಕೆ ಶ್ರೀನಗರ ಕಿಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಮಂತ್ರವಾದಿಯಾಗಿ. ಸುದೀರ್ಘ ಗ್ಯಾಪ್‍ನ ನಂತರ ಶ್ರೀನಗರ ಕಿಟ್ಟಿ ನಟಿಸುತ್ತಿರುವ ಚಿತ್ರವಿದು. ಅವರದ್ದು ಇಲ್ಲಿ ಅತಿಥಿ ಪಾತ್ರವಾದರೂ, ಚಿತ್ರದಲ್ಲಿ ಅವರ ಪಾತ್ರಕ್ಕೆ ಅತ್ಯಂತ ಪ್ರಮುಖ ಸ್ಥಾನವಿದೆ.

  ಚಿತ್ರದಲ್ಲಿ ಅವತಾರ್ ಪುರುಷ ಶರಣ್. ಅವರ ನಾನಾ ಅವತಾರ್‍ಗಳನ್ನು ಬಯಲು ಮಾಡುವ ಬ್ಲಾಕ್ ಮ್ಯಾಜಿಷಿಯನ್ ಶ್ರೀನಗರ ಕಿಟ್ಟಿ ಎಂದು ಕಿಟ್ಟಿ ಪಾತ್ರದ ಸಂಕ್ಷಿಪ್ತ ವಿವರ ನೀಡಿದ್ದಾರೆ ನಿರ್ದೇಶಕ ಸಿಂಪಲ್ ಸುನಿ.

  Related Articles :-

  Srinagara Kitty As Black Magician in Avatara Purusha

 • ಅವತಾರ್ ಪುರುಷನಿಗೆ ಅರ್ಜುನ್ ಜನ್ಯಾ ಬಂದಿದ್ದು ಏಕೆ..?

  reason behind arjun janya's music in avatara purusha

  ಶರಣ್, ಆಶಿಕಾ ರಂಗನಾಥ್ ಜೋಡಿಯ ಸಿನಿಮಾ ಅವತಾರ್ ಪುರುಷ. ಪುಷ್ಕರ್ ಬ್ಯಾನರ್‌ನಲ್ಲಿ ಇದೇ ಮೊದಲ ಬಾರಿಗೆ ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿರುವ ಚಿತ್ರ ಅವತಾರ್ ಪುರುಷ. ಶ್ರೀನಗರ ಕಿಟ್ಟಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಬೇಕಿತ್ತು. ಆರಂಭದಲ್ಲಿ ಚಿತ್ರತಂಡವೂ ಇದೇ ಮಾತು ಹೇಳಿತ್ತು. ಆದರೀಗ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

  ಇದಕ್ಕೆ ಕಾರಣವೂ ಇದೆ. ರವಿಚಂದ್ರನ್-ಹAಸಲೇಖ, ದರ್ಶನ್-ಹರಿಕೃಷ್ಣ ಜೋಡಿಯಂತೆ ಹಿಟ್ ಆಗಿರುವ ಜೋಡಿ ಶರಣ್-ಜನ್ಯಾ ಕಾಂಬಿನೇಷನ್. ರ‍್ಯಾಂಬೋ, ರ‍್ಯಾಂಬೋ-೨, ಅಧ್ಯಕ್ಷ, ವಿಕ್ಟರಿ, ವಿಕ್ಟರಿ-೨, ಬುಲೆಟ್ ಬಸ್ಯಾ, ಜೈ ಮಾರುತಿ ೮೦೦.. ಹೀಗೆ ಇಬ್ಬರ ಜೋಡಿಯ ಸಿನಿಮಾಗಳ ಎಲ್ಲ ಹಾಡುಗಳೂ ಹಿಟ್ ಆಗಿರುವುದು ಇದಕ್ಕೆ ಕಾರಣ. ಹಿಟ್ ಜೋಡಿಯನ್ನು ಬೇರೆ ಮಾಡೋದೇಕೆ ಎಂಬ ಕಾರಣಕ್ಕೆ ಜನ್ಯಾ, ಅವತಾರ್ ಪುರುಷನಿಗೆ ಸರಿಗಮಪ ಹೇಳುತ್ತಿದ್ದಾರೆ.

 • ಅಷ್ಟದಿಗ್ಬಂಧನ ಮಂಡಲಕ : ದೆವ್ವದ ಕಥೆಯೋ.. ಮಾಟ ಮಂತ್ರದ ಕಥೆಯೋ.. ಲವ್ ಸ್ಟೋರಿಯೋ..

  ಅಷ್ಟದಿಗ್ಬಂಧನ ಮಂಡಲಕ : ದೆವ್ವದ ಕಥೆಯೋ.. ಮಾಟ ಮಂತ್ರದ ಕಥೆಯೋ.. ಲವ್ ಸ್ಟೋರಿಯೋ..

  ಓವರ್ ಆ್ಯಕ್ಟಿಂಗ್ ಅನಿಲ : ಶರಣ್

  ಓವರ್ ಆಕ್ಟಿಂಗ್ ಮಾಡೋದೇ ಇವನಿಗೆ ಮುಳುವಾಗಬಹುದಾ..? ಶರಣ್ ಪಾತ್ರದಲ್ಲಿ ನಟಿಸಿದ್ದಾರೆ ಅನ್ನೋದಕ್ಕಿಂತ ಜೀವಿಸಿದ್ದಾರೆ. 100ನೇ ಸಿನಿಮಾದಲ್ಲಿ ಹೀರೋ ಆಗಿ ಗೆದ್ದ ಶರಣ್‍ಗೆ ಈ ಪಾತ್ರ ತಮ್ಮ ಆರಂಭದ ದಿನಗಳನ್ನು ನೆನಪಿಸಿದೆಯಂತೆ.

  ಸಿರಿ : ಅಶಿಕಾ ರಂಗನಾಥ್

  ಅನಿಲನನ್ನು ಕರ್ಣ ಎಂದು ಹೇಳ್ಕೊಂಡು ಕರೆದುಕೊಂಡು ಬರೋ ಚೆಲುವೆ. ಬೇಕಿತ್ತಾ ಇದೆಲ್ಲ ಅನ್ನೋವಾಗ್ಲೇ ಲವ್ವಾಗುತ್ತೆ.. ಮುಂದಿರೋದೇ ಚುಟು ಚುಟು..

  ರಾಮಾ ಜೋಯಿಸ್ : ಸಾಯಿಕುಮಾರ್

  ಸಕಲ ವಿದ್ಯಾಪಾರಂಗತರು.

  ಸುಶೀಲಾ : ಭವ್ಯ

  ಇವರು ಹುಡುಕುತ್ತಿರುವ ಮಗನೇ ಕರ್ಣ. ಆತ ಅನಿಲ್ ಅರ್ಥಾತ್ ಶರಣ್ ಅಲ್ಲ. ರಿಯಲ್ ಕರ್ಣ ಸಿಗ್ತಾನಾ..?

  ಯಶೋಧಾ : ಸುಧಾರಾಣಿ

  ತವರು ಮನೆಯ ಪ್ರೀತಿಗಾಗಿ ಕಾಯುತ್ತಿರೋ ಮಗಳು. ಇವರಿಗಾಗಿಯೇ ಸಿರಿ ಅನಿಲನನ್ನು ಕರ್ಣನನ್ನಾಗಿ ತೋರಿಸುವ ಸಾಹಸಕ್ಕೆ ಕೈ ಹಾಕೋದು.

  ಗಣಪ : ಸಾಧುಕೋಕಿಲ

  ಕಾಮಿಡಿಗಾಗಿಯೇ ಹುಟ್ಟಿದ ಅರ್ಧಂಬರ್ಧ ತಿಳಿದುಕೊಂಡಿರೋ ಗಾಂಪ

  ಇನ್ನು ಭೋಜರಾಜ, ಕಂಠೀ ಜೋಯಿಸ, ಬ್ರಹ್ಮ ಜೋಯಿಸ, ಹಿನ್ನುಡಿ.. ಹೀಗೆ ಹಲವು ಪಾತ್ರಗಳು ಬರುತ್ತವೆ. ಶಾಕ್ ಕೊಡಲೆಂದೇ ಬರುವವನು ಕುಮಾರ.

  ಕುಮಾರ : ಶ್ರೀನಗರ ಕಿಟ್ಟಿ

  ಈತನಿಗೆ ನಿಲುಕದ.. ಸಿಲುಕದ ಶಕ್ತಿಗಳೇ ಇಲ್ಲ..

  ಇವರನ್ನೆಲ್ಲ ಇಟ್ಟುಕೊಂಡೇ ಅವತಾರ ಪುರುಷನಿಗೆ ಅಷ್ಟದಿಗ್ಬಂಧನ ಮಂಡಲಕ ಹಾಕಿಸಿದ್ದಾರೆ ಸುನಿ. ಸೇಫ್ ಝೋನ್‍ನಿಂದ ಆಚೆ ಹೋಗಿ ಸೃಷ್ಟಿಸಿರೋ ಹೊಸತನದ ಕತೆ ಅವತಾರ ಪುರುಷ. ಪುಷ್ಕರ ಮಲ್ಲಿಕಾರ್ಜುನಯ್ಯ ಅವರ ನಿರೀಕ್ಷೆ ದೊಡ್ಡದು.

 • ಅಳು.. ನಗು.. ಕೋಪ.. ಮುನಿಸು.. ಎಲ್ಲೆಲ್ಲೂ ಅಧ್ಯಕ್ಷನದ್ದು ರೊಮ್ಯಾನ್ಸ್

  adhyaksha's various colors of romance

  ಅಧ್ಯಕ್ಷ ಇನ್ ಅಮೆರಿಕ ಚಿತ್ರದಲ್ಲಿ ರಾಗಿಣಿ ಜೊತೆ ನಟಿಸಿರುವ ಶರಣ್, ಚಿತ್ರದುದ್ದಕ್ಕೂ ಸಿಕ್ಕಾಪಟ್ಟೆ ರೊಮ್ಯಾನ್ಸ್ ಮಾಡಿದ್ದಾರೆ. ಸಿನಿಮಾದಲ್ಲಿ ರಾಗಿಣಿ ಗಂಡ.. ಅಲ್ಲಲ್ಲ.. ಹೆಂಡತಿ. ಶರಣ್ ಹೆಂಡತಿ.. ಅಲ್ಲಲ್ಲ.. ಗಂಡ. ಯೋಗಾನಂದ್ ಮುದ್ದಾನ್ ನಿರ್ದೇಶನದ ಚಿತ್ರದಲ್ಲಿ ಹೆಜ್ಜೆ ಹೆಜ್ಜೆಗೂ ಕಾಮಿಡಿ ಇದೆ.

  ಕೋಪದಲ್ಲಿ ರೊಮ್ಯಾನ್ಸ್ ಇದೆ. ಜಗಳದಲ್ಲಿ ರೊಮ್ಯಾನ್ಸ್ ಇದೆ. ವಿರಹದಲ್ಲೂ ರೊಮ್ಯಾನ್ಸ್ ಇದೆ. ಕಾಮಿಡಿಯಲ್ಲೂ ರೊಮ್ಯಾನ್ಸ್ ಇದೆ ಎನ್ನುವುದು ರಾಗಿಣಿ-ಶರಣ್ ಒಕ್ಕೊರಲ ಮಾತು.

  ಅಧ್ಯಕ್ಷದಲ್ಲಿ ಶರಣ್-ಚಿಕ್ಕಣ್ಣ ಜೋಡಿ ಸಕ್ಸಸ್ ಆಗಿತ್ತು. ಅದಾದ ಮೇಲೆ ಇಬ್ಬರೂ ಒಟ್ಟಿಗೇ ನಟಿಸಿದ್ದ ಚಿತ್ರಗಳೂ ಪ್ರೇಕ್ಷಕರಿಗೆ ಕಚಗುಳಿ ಕೊಟ್ಟಿದ್ದವು. ಈ ಚಿತ್ರದಲ್ಲಿ ಶರಣ್ ಜೊತೆ ಶಿವರಾಜ್ ಕೆ.ಆರ್.ಪೇಟೆ ನಟಿಸಿದ್ದಾರೆ. ನಗೋಕೆ ರೆಡಿಯಾಗಿ.

 • ಆಲ್ ಇಂಡಿಯಾ ರೋಡಲ್ಲಿ ರ್ಯಾಂಬೋ-2 ಸರ್ಕಸ್

  rambo 2 all india jounery

  Rambo- 2. ಇದು ಕಾಮಿಡಿ  ಥ್ರಿಲ್ಲರ್. ಜರ್ನಿಯಲ್ಲೇ ಸಾಗುವ ಕಥೆ. ಈ ಚಿತ್ರಕ್ಕಾಗಿ ಇಡೀ ಚಿತ್ರತಂಡ ಇಡೀ ಭಾರತವನ್ನು ರೌಂಡ್ ಹೊಡೆದಿದೆ. ಒಂಥರಾ ಲಾರಿ, ಕಾರುಗಳ ಮೇಲೆ ಆಲ್ ಇಂಡಿಯಾ ಪರ್ಮಿಟ್ ಅನ್ನೋ ಬೋರ್ಡ್ ಇರುತ್ತಲ್ಲಾ.. ಆ ಥರ.. ಹೀಗಾಗಿ ಸಿನಿಮಾ ಟೀಂ, ಕರ್ನಾಟಕ, ಜೋಧ್‍ಪುರ ಕಡೆಗೆಲ್ಲ ಹೋಗಿದೆ. ಆದರೆ, ಸಿನಿಮಾದಲ್ಲಿ ಕಥೆ ನಡೆಯೋದು ಉತ್ತರ ಕರ್ನಾಟಕ ಮತ್ತು ಗೋವಾ ಮಧ್ಯೆ ಜರ್ನಿಯಲ್ಲಿ. ಹಾಗಾದರೆ, ರಾಜಸ್ಥನಕ್ಕೆ ಹೋಗೋ ಅಗತ್ಯ ಏನಿತ್ತು ಅಂತೀರಾ..?

  ಸಿನಿಮಾ ಶೂಟಿಂಗ್ ವೇಳೆ ಕರ್ನಾಟಕದಲ್ಲಿ ಮಳೆಯೋ ಮಳೆ.. ಹಸಿರು ತುಂಬಿತ್ತು. ಹೀಗಾಗಿ ಕರ್ನಾಟಕದ ವಾತಾವರಣ ಹೋಲುವ ರಾಜಸ್ಥಾನದ ಪ್ರದೇಶಗಳಲ್ಲಿ ಶೂಟಿಂಗ್ ಮಾಡಲಾಯ್ತು. ಇನ್ನು ಕಥೆಯಲ್ಲಿ ಬರುವ ರಸ್ತೆಯ ಫಲಕಗಳನ್ನು ಕನ್ನಡದಲ್ಲಿ ಕಾಣುವಂತೆ ಮಾಡಲು ಅದೇನೇನು ಸರ್ಕಸ್ ಮಾಡಿದ್ದಾರೋ.. ನಿರ್ದೇಶಕ ಅನಿಲ್ ಚಿತ್ರೀಕರಣದ ರಸಘಳಿಗೆಗಳನ್ನು ಹೇಳಿಕೊಳ್ತಾರೆ.

  ನಾವು ಶೂಟಿಂಗ್‍ಗೆ ಪ್ಲಾನ್ ಮಾಡಿದ್ದು ಉತ್ತರ ಕರ್ನಾಟಕದಲ್ಲಿ. ಆದರೆ, ಶೂಟಿಂಗ್ ಶುರುವಾಗುವ ಹೊತ್ತಿಗೆ ಇಡೀ ಪ್ರದೇಶ ಹಸಿರೋ ಹಸಿರು. ಹೀಗಾಗಿ ರಾಜಸ್ಥಾನ ಹುಡುಕಿಕೊಂಡೆವು. ಗೋವಾದ ದೃಶ್ಯಗಳನ್ನೂ ಅಷ್ಟೆ.. ಕೆಲವು ಸೀನ್‍ಗಳನ್ನು ಗೋವಾ ಹೋಲುವ ರಾಮೇಶ್ವರಂನಲ್ಲಿ ಶೂಟ್ ಮಾಡಲಾಗಿದೆ. ಆದರೆ, ಇದು ಪ್ರೇಕ್ಷಕರಿಗೆ ಗೊತ್ತಾಗಲ್ಲ. ಎಷ್ಟರಮಟ್ಟಿಗೆ ಅಂದ್ರೆ, ರಸ್ತೆಯಲ್ಲಿ ಬರುವ ಫಲಕಗಳನ್ನೂ ಕೂಡಾ ನಾವು ಕನ್ನಡಮಯವಾಗಿಸಿದ್ದೇವೆ. ಹೀಗಾಗಿ ಯಾವುದು ಉತ್ತರ ಕರ್ನಾಟಕ.. ಯಾವುದು ರಾಜಸ್ಥಾನ.. ಎನ್ನುವುದು ಪ್ರೇಕ್ಷಕರಿಗೆ ಗೊತ್ತಾಗಲ್ಲ. ಜೋಧ್‍ಪುರ್, ಜೈಸಲ್ಮೇರ್, ಭಾರತ ಪಾಕಿಸ್ತಾನ ಗಡಿ ಪ್ರದೇಶದಲ್ಲೂ ಶೂಟಿಂಗ್ ಆಗಿದೆ ಎಂದು ಶೂಟಿಂಗ್ ಕಥೆ ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಅನಿಲ್.

  ಶರಣ್ ಜೊತೆ ಅಶಿಕಾ ರಂಗನಾಥ್ ಜೋಡಿಯಾಗಿದ್ದರೆ, ಚಿಕ್ಕಣ್ಣ ಕಾಂಬಿನೇಷನ್ ಕೂಡಾ ಸಿನಿಮಾದಲ್ಲಿದೆ. ನಾಳೆಯೇ ಸಿನಿಮಾ ರಿಲೀಸ್. ತರುಣ್ ಸುಧೀರ್ ಸಾರಥ್ಯದಲ್ಲಿ ತಂತ್ರಜ್ಞರು ಮತ್ತು ಕಲಾವಿದರು ಒಗ್ಗೂಡಿ ನಿರ್ಮಿಸಿರುವ ಸಿನಿಮಾ ಇದು. 

 • ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆದ ಶರಣ್ ಈಗ ಹೇಗಿದ್ದಾರೆ..?

  Sharan's Health Update

  ಕನ್ನಡದ ಕಾಮಿಡಿ ಕಿಂಗ್ ಶರಣ್ ಅವತಾರ್ ಪುರುಷ ಶೂಟಿಂಗ್ ವೇಳೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದು, ನಂತರ ಡಿಸ್‍ಚಾರ್ಜ್ ಆಗಿದ್ದು ಗೊತ್ತಿರೋ ವಿಷಯವೇ. ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದ ಶರಣ್ ಆರೋಗ್ಯ ಪರಿಸ್ಥಿತಿ ಸುಧಾರಿಸಿರುವುದು ಹೌದು. ಆದರೆ, ಶರಣ್ ಸಂಪೂರ್ಣ ಗುಣಮುಖರಾಗಬೇಕು ಎಂದರೆ ಅವರು ವೈದ್ಯರು ಹೇಳಿದ್ದನ್ನು ಪಾಲಿಸಲೇಬೇಕು.

  ಶರಣ್ ಈ ಮೊದಲು ಯಾರಾದರೂ ನೀರು ಕುಡಿಯಿರಿ ಎಂದರೆ ತಲೆಗೆ ಹಾಕಿಕೊಳ್ತಾ ಇರಲಿಲ್ಲ. ಈಗ ಅವರೇ ಯಾರಾದರೂ ನೀರು ಕುಡೀರಿ ಎಂದರೆ ಕಡೆಗಣಿಸಬೇಡಿ ಎನ್ನುತ್ತಿದ್ದಾರೆ. ಕಾರಣ ಇಷ್ಟೆ, ಶರಣ್ ಅವರಿಗೆ ಕಿಡ್ನಿ ಸ್ಟೋನ್ ಆಗಿದೆ. ನನಗೆ ನೀರು ಕುಡಿಯೋ ಅಭ್ಯಾಸವೇ ಇರಲಿಲ್ಲ. ಇದೇ ಮೊದಲು ಈ ರೀತಿ ತೊಂದರೆ ಕಾಣಿಸಿಕೊಂಡಿದ್ದು. ಮೊದಲು ಮಸಲ್ ಕ್ಯಾಚ್ ಎಂದುಕೊಂಡೆ. ಆದರೆ ಹೊಟ್ಟೆನೋವು ತೀವ್ರವಾದಾಗ ಆಸ್ಪತ್ರೆ ಸೇರಿಕೊಂಡೆ. ಈಗ ವೈದ್ಯರೇ ಸಲಹೆ ಕೊಟ್ಟಿದ್ದಾರೆ. ನಾವು ನಮ್ಮ ದೇಹವನ್ನು ಹೈಡ್ರೇಟ್ ಮಾಡಿಕೊಂಡು ಇಟ್ಟುಕೊಳ್ಳಬೇಕು ಎಂದಿದ್ದಾರೆ ಶರಣ್.

  ಅಕಸ್ಮಾತ್, ಇದರಿಂದ ಕಿಡ್ನಿ ಸ್ಟೋನ್ ಹೋಗದೇ ಇದ್ದಲ್ಲಿ ಸರ್ಜರಿ ಅನಿವಾರ್ಯವಂತೆ. 

 • ಎಲ್ಲ ಸಿನಿಮಾ ಎಂಡ್ ಆಗುವ ದೃಶ್ಯದಿಂದಲೇ ಅಧ್ಯಕ್ಷನ ಸ್ಟೋರಿ ಆರಂಭ..!

  adhyaksha in america has different story

  ಬಹುತೇಕ ಸಿನಿಮಾಗಳ ಕ್ಲೈಮಾಕ್ಸ್ ಏನಿರುತ್ತೆ ಹೇಳಿ.. ಆ್ಯಕ್ಷನ್ ಸಿನಿಮಾ ಬಿಟ್ಹಾಕಿ.. ಬೇರೆ ಸಿನಿಮಾಗಳ ವಿಚಾರಕ್ಕೆ ಬಂದರೆ ಹೀರೋ-ಹೀರೋಯಿನ್ ಮದುವೆಯ ದೃಶ್ಯ. ನಾಯಕ, ನಾಯಕಿಗೆ ತಾಳಿ ಕಟ್ಟಿದರೆ ಸಿನಿಮಾ ಶುಭಂ. ಆದರೆ, ಅಧ್ಯಕ್ಷ ಇನ್ ಅಮೆರಿಕ ಸಿನಿಮಾ ಶುರುವಾಗುವುದೇ ಮದುವೆಯಿಂದ.

  ಶರಣ್ ಕಾಮಿಡಿಗೆ ಕಿಂಗ್. ಆದರೆ ರಾಗಿಣಿಗೆ ಇದು ಮೊದಲ ಕಾಮಿಡಿ ಸಿನಿಮಾ. ಚಿತ್ರದ ಬಹುತೇಕ ಶೂಟಿಂಗ್ ಅಮೆರಿಕದಲ್ಲಿಯೇ ಆಗಿದೆ. ಗಂಡ-ಹೆಂಡತಿ ಸಂಬಂಧದ ಕಥೆಯನ್ನು ಕಾಮಿಡಿಯಾಗಿ ಹೇಳಿದ್ದಾರೆ ನಿರ್ದೇಶಕ ಯೋಗಾನಂದ್. ಚಿತ್ರಕ್ಕೆ ವಿಶ್ವಪ್ರಸಾದ್, ವಿವೇಕ್ ನಿರ್ಮಾಪಕರು.

 • ಐಟಂ ಸಾಂಗ್‍ಗೆ ಐಂದ್ರಿತಾ ಒಪ್ಪಿದ್ದು ಹೀಗೆ..

  special song in rambo 2 movie

  ರ್ಯಾಂಬೋ 2 ಚಿತ್ರ, ರಿಲೀಸ್‍ಗೂ ಮೊದಲೇ ಸದ್ದು ಮಾಡ್ತಿರೋದು ಹಾಡುಗಳಿಂದ. ಒಂದೊಂದು ಹಾಡೂ ಒಂದೊಂದು ರೀತಿ ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ. ಅದರಲ್ಲಿ ಒಂದು ಐಂದ್ರಿತಾ ಹೆಜ್ಜೆ ಹಾಕಿರುವ ಐಟಂ ಡ್ಯಾನ್ಸ್. ಚಿತ್ರದ ವಿಡಿಯೋ ಸಾಂಗ್‍ನ್ನು ಚಿತ್ರತಂಡ ಇನ್ನೂ ಬಿಡುಗಡೆ ಮಾಡಿಲ್ಲ. ಲಿರಿಕಲ್ ಹಾಡಿಗೇ ಚಿತ್ರರಸಿಕರು ಥ್ರಿಲ್ಲಾಗಿದ್ದಾರೆ.

  ಆದರೆ, ಈ ಹಾಡಿಗೆ ಹೆಜ್ಜೆ ಹಾಕಿಸೋಕೆ ನಿರ್ಮಾಪಕರು ಐಂದ್ರಿತಾ ಬೆನ್ನು ಬಿದ್ದು ಒಪ್ಪಿಸಿದ ಕಥೆ ಇದ್ಯಲ್ಲ, ಅದು ಐಟಂ ಹಾಡಿನಷ್ಟೇ ಇಂಟ್ರೆಸ್ಟಿಂಗ್. ಬಸಂತಿ, ಮೂರೇ ಮೂರು ಪೆಗ್ಗು, ಸೌಂದರ್ಯ ಸಮರದಂತಹಾ ಸಾಂಗ್‍ಗಳಲ್ಲಿ ಐಂದ್ರಿತಾ ರೈ ಮಿಂಚಿದ್ದರು. ಆದರೆ ಅದಾದ ಮೇಲೆ ಐಟಂ ಸಾಂಗುಗಳ ಸಹವಾಸವೇ ಬೇಡ ಎಂದುಬಿಟ್ಟಿದ್ದರು. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ತರುಣ್ ಸುಧೀರ್ ಐಂದ್ರಿತಾ ರೈ ಅವರನ್ನು ಕಾಂಟ್ಯಾಕ್ಟ್ ಮಾಡಿದಾಗ ನೋ ಎಂದು ಫೋನಿಟ್ಟಿದ್ದರಂತೆ ಐಂದ್ರಿತಾ.

  ಭೇಟಿ ಮಾಡಿ ಒಂದ್ಸಲ ಹಾಡು ಕೇಳಿ ಎಂದರೂ ಒಪ್ಪಿರಲಿಲ್ಲ. ಕೊನೆಗೆ ಹಠಕ್ಕೆ ಬಿದ್ದು, ಒಂದ್ಸಲ ಹಾಡು ಕೇಳಿ ಎಂದು ಇಯರ್ ಫೋನ್ ಕೊಟ್ಟು ಕೇಳಿಸಿದೆ. ಅರ್ಧ ಹಾಡು ಕೂಡಾ ಮುಗಿದಿರಲಿಲ್ಲ, ಐಂದ್ರಿತಾ ಎಸ್ ಎಂದಿದ್ದರು ಎಂದು ಹಾಡಿನ ಕಥೆ ಬಿಚ್ಚಿಟ್ಟಿದ್ದಾರೆ ತರುಣ್ ಸುಧೀರ್.

  ಚಿತ್ರದಲ್ಲಿ ಈ ಹಾಡಿಗೆ ಧ್ವನಿಯಾಗಿರುವುದು ಅರುಣ್ ಸಾಗರ್ ಅವರ ಪುತ್ರ ಆದಿತಿ ಸಾಗರ್. ಪುಟ್ಟ ಹುಡುಗಿಯಾದರೂ, ಧ್ವನಿ ಜಯಶ್ರೀ ಅವರನ್ನು ನೆನಪಿಸುವಂತಿದೆ ಎಂದು ಗುನುಗುತ್ತಿರುವುದು ಚಿತ್ರರಸಿಕರು.

 • ಒಂದೇ ಚಿತ್ರ.. ಏಳೆಂಟು ಅವತಾರ..

  sharan talks about avatara purusha specialty

  ಅಧ್ಯಕ್ಷನಾಗಿ.. ಕಳ್ಳನಾಗಿ.. ರೋಮಿಯೋ ಆಗಿ.. ಹುಡುಗಿಯಾಗಿ.. ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿರೋ ಶರಣ್, ಈ ಬಾರಿ ಒಂದೇ ಚಿತ್ರದಲ್ಲಿ ಏಳೆಂಟು ಅವತಾರ ಎತ್ತಿದ್ದಾರೆ. ಅವತಾರ ಪುರುಷ ಚಿತ್ರದಲ್ಲಿ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರದಲ್ಲಿ ಅವತಾರ್ ಪುರುಷ ಶರಣ್ಗೆ ಅಶಿಕಾ ರಂಗನಾಥ್ ಜೋಡಿಯಾಗಿದ್ದಾರೆ. ಇದು ಕಂಪ್ಲೀಟ್ ಸಿಂಪಲ್ ಸುನಿ ಎನ್ನುವ ಶರಣ್ ‘‘ಚಿತ್ರದಲ್ಲಿ ಏಳೆಂಟು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಎರಡು ಹಾಡು ಶೂಟಿಂಗ್ ಬ್ಯಾಲೆನ್ಸ್ ಇದೆ. ಲೆಕ್ಕಾಚಾರದ ಪ್ರಕಾರವೇ ಎಲ್ಲವೂ ನಡೆದರೆ, ಬೇಸಗೆಯಲ್ಲಿ ಸಿನಿಮಾ ರಿಲೀಸ್’’ ಎಂದು ಮಾಹಿತಿ ನೀಡಿದ್ದಾರೆ.

  ನಾನು ಈವರೆಗೆ ಮಾಡಿರುವ ಪಾತ್ರಗಳಿಗೆ ಹೋಲಿಸಿದರೆ ಇದು ತುಂಬಾ ವಿಭಿನ್ನ. ನಾನು ವಿಪರೀತ ಪ್ರಯೋಗಕ್ಕೆ ಹೋಗಲ್ಲ. ನನಗೆ ನನ್ನ ಲಿಮಿಟ್ ಗೊತ್ತಿದೆ. ಈ ಚಿತ್ರದಲ್ಲಿ ಲವ್‌, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್, ಮಿಸ್ಟರಿ, ಡ್ರಾಮಾ ಎಲ್ಲವೂ ಇದೆ. ಜೊತೆಯಲ್ಲಿ ಬ್ಲಾಕ್ ಮ್ಯಾಜಿಕ್ ಕೂಡಾ ಇದೆ. ಬ್ಲಾಕ್ ಮ್ಯಾಜಿಕ್ ಕಥಾ ಹಂದರದ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು ಎಂದಿದ್ದಾರೆ ಶರಣ್.

  ಬ್ಲಾಕ್ ಮೆಜಿಷಿಯನ್ ಅವತಾರದಲ್ಲಿ ಶ್ರೀನಗರ ಕಿಟ್ಟಿ ನಟಿಸಿದ್ದರೆ, ಭವ್ಯಾ ಅತ್ಯಂತ ಪ್ರಮುಕ ರೋಲ್ನಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ.

 • ಕಾಳಿದಾಸನ ಕಥೆ ಹೇಳೋದು ಶರಣ್..!

  sharan tells kaalidasa kannada mestru story

  ನವರಸ ನಾಯಕ ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಷ್ಟುç ಚಿತ್ರಕ್ಕೆ ಕವಿರಾಜ್ ನಿರ್ದೇಶಕ. ಮೇಘನಾ ಗಾಂವ್ಕರ್ ನಾಯಕಿ. ೯೦ರ ದಶಕದ ಕಥೆ ಇದು. ಕನ್ನಡ ಮೇಷ್ಟುç ಆಗ ಹೇಗಿದ್ದರು, ತೊಳಲಾಟಗಳೇನು.. ಎಲ್ಲವನ್ನೂ ಒಂದು ಕಾಮಿಡಿಯ ಚೌಕಟ್ಟಿನಲ್ಲಿ ಜೋಡಿಸಿದ್ದಾರೆ ಕವಿರಾಜ್. ಇದುವರೆಗೆ ಲವ್ಲಿ ಲವ್ಲಿ ಕ್ಯಾರೆಕ್ಟರುಗಳಲ್ಲಿ ಕಂಗೊಳಿಸಿದ್ದ ಮೇಘನಾ ಗಾಂವ್ಕರ್, ಈ ಚಿತ್ರದಲ್ಲಿ ಜಗ್ಗೇಶ್ ಪಾಲಿನ ಕಾಳಿಯಾಗಿದ್ದಾರೆ.

  ಇವೆಲ್ಲಕ್ಕಿಂತಲೂ ವಿಶೇಷ, ಚಿತ್ರದ ಹಿನ್ನೆಲೆ ಧ್ವನಿಯದ್ದು. ಏಕೆಂದರೆ, ಈ ಚಿತ್ರದಲ್ಲಿ ಪ್ರತಿ ಪಾತ್ರದ ಪರಿಚಯ ಮಾಡಿಕೊಟ್ಟಿರುವುದು ಶರಣ್. ಟ್ರೇಲರ್‌ನಲ್ಲಿ ಎಲ್ಲರ ಗಮನ ಸೆಳೆದಿರುವ ಶರಣ್ ಧ್ವನಿ, ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ.

 • ಗುರು ರಾಯರ ಹಾಡು ಹಾಡಿ ಶಾಸ್ತಿçÃಯ ಸಂಗೀತಗಾರನಾದ ಶರಣ್

  sharan sings dvotional song at an evernt in tumkur

  ಅದು ತುಮಕೂರಿನ ಗುಬ್ಬಿ ವೀರಣ್ಣ ರಂಗಮAದಿರ. ಹಾಡುತ್ತಿದ್ದವರು ಶರಣ್. ಜೊತೆಯಲ್ಲಿದ್ದವರು ಶಂಕರ್ ಶಾನ್‌ಬಾಗ್. ಎದುರಿನಲ್ಲಿದ್ದವರು ಭಾರತೀಯ ಜೈನ ಸಮುದಾಯದ ಯುಗಳ ಮುನಿ ಶ್ರೀ ಅಮೋಘತೀರ್ಥ ಮಹಾರಾಜರು ಮತ್ತು ಮುನಿ ಶ್ರೀ ಅಮರಕೀರ್ತಿ ಮಹಾರಾಜರು. ಆ ಜೈನ ಮುನಿಗಳೇನೂ ಸಾಮಾನ್ಯರಲ್ಲ, ಇಡೀ ದೇಶವನ್ನು ಕಾಲ್ನಡಿಗೆಯಲ್ಲೇ ಸುತ್ತುವ ತಪಸ್ವಿಗಳು. ಒಂದು ಪ್ರದೇಶಕ್ಕೆ ಕಾಲಿಟ್ಟರೆ, ಮತ್ತೆ ಅಲ್ಲಿಗೆ ಬರುವುದು ೧೨ ವರ್ಷಗಳ ನಂತರ. ಅಂತಹ ಸಾಧಕರ ಸಮ್ಮುಖದಲ್ಲಿ ಶಾಸ್ತಿçÃಯ ಸಂಗೀತದಲ್ಲಿ ಹಾಡು ಹಾಡಿದ್ದಾರೆ ನಟ ಶರಣ್.

  ಗುರು ರಾಯರಿಗಾಗಿ ಡಾ.ರಾಜ್ ಕುಮಾರ್ ಹಾಡಿರುವ ಏನೋ ದಾಹ.. ಯಾವ ಮೋಹ.. ತಿಳಿಯದಾಗಿದೆ.. ಸ್ವಾಮಿ.. ಹಾಡನ್ನು ಹಾಡಿದ್ದಾರೆ ಶರಣ್. ಅದು ಜಿನ ಭಜನೆ ಕಾರ್ಯಕ್ರಮ. ಯಾವ ಹಾಡು ಹಾಡುವುದು ಎಂಬ ಗೊಂದಲದಲ್ಲಿದ್ದೆ. ನನಗೆ ಜಿನ ಭಜನೆ ಗೊತ್ತಿಲ್ಲ. ಯಾವ ಹಾಡುವುದು ಎಂದಾಗ ನಮ್ಮ ತಂದೆ ನಾಟಕ ಕಂಪೆನಿಯಲ್ಲಿದ್ದಾಗ ಹಾಡುತ್ತಿದ್ದ ಹಾಡು ನೆನಪಾಯಿತು. ಹಾಡುವುದೇ ಬೇಡವೇ ಎಂಬ ಗೊಂದಲದಲ್ಲಿದ್ದೆ. ಆಗ ಸುರೇಂದ್ರ ಕುಮಾರ್ (ವೀರೇಂದ್ರ ಹೆಗ್ಗಡೆಯವರ ಸಹೋದರ. ಕಾರ್ಯಕ್ರಮದ ಆಯೋಜಕರು) ಅವರು ಎಲ್ಲರ ಗುರಿ ಒಂದೇ. ಪಥ ಬೇರೆ. ಭಕ್ತಿ ಮಾರ್ಗ ಬೇರೆಯಾದರೂ ಉದ್ದೇಶ ಒಂದೇ. ಹಾಡಿ ಎಂದು ಧೈರ್ಯ ತುಂಬಿದರು. ಹಾಡಿದೆ ಎಂದಿದಿದ್ದಾರೆ ಶರಣ್.

  ಅಂದಹಾಗೆ ಶರಣ್ ಶಾಸ್ತಿçÃಯ ಸಂಗೀತವನ್ನು ಶಾಸ್ತಿçÃಯವಾಗಿ ಕಲಿತಿಲ್ಲ. ಕೇಳಿದ್ದನ್ನು ನೋಡಿದ್ದನ್ನು ಸ್ವಯಂಕೃಷಿ ಮಾಡಿದ್ದಾರೆ ಅಷ್ಟೆ. ಹಾಡುವುದು ನಾನು ಕಲಿತಿದ್ದಲ್ಲ. ಗಳಿಸಿದ್ದಲ್ಲ. ವಂಶಪಾರAಪರ್ಯವಾಗಿ ನಾವು ಪಡೆದುಕೊಂಡ ಭಾಗ್ಯ ಎಂದಿದ್ದಾರೆ ಶರಣ್. 

 • ಗುರು ಶಿಷ್ಯರು : ಶರಣ್`ಗೆ ಠಕ್ಕರ್ ಕೊಡೋವ್ರೆಲ್ಲ ಸ್ಟಾರ್ ನಟರ ಮಕ್ಕಳೇ..

  ಗುರು ಶಿಷ್ಯರು : ಶರಣ್`ಗೆ ಠಕ್ಕರ್ ಕೊಡೋವ್ರೆಲ್ಲ ಸ್ಟಾರ್ ನಟರ ಮಕ್ಕಳೇ..

  ಗುರು ಶಿಷ್ಯರು. ಇತ್ತೀಚೆಗಷ್ಟೇ ಚಿತ್ರದ ಪುಟ್ಟ ಪುಟ್ಟ ಮಕ್ಕಳ ಪಾತ್ರಗಳನ್ನು ಪರಿಚಯ ಮಾಡಿಕೊಡಲಾಗಿದೆ. ಚಿತ್ರದಲ್ಲಿ ಶರಣ್ ಪಿಟಿ ಮಾಸ್ಟರ್ ಆಗಿ ನಟಿಸಿದ್ದಾರೆ. ಖೋಖೋ ಕಲಿಸ್ತಾರಂತೆ. ಖೋಖೋ ಕಲಿಸ್ತಾರಂತೆ ಅಂದ್ಮೇಲೆ ಖೋಖೋ ಹುಡುಗರ ಟೀಂ ಕೂಡಾ ಇರಬೇಕಲ್ವಾ? ಈಗ ಬಿಟ್ಟಿರೋ 13 ಹುಡುಗರ ಟೀಂ ಅದೇ. ಆದರೆ ವಿಶೇಷವೇನು ಗೊತ್ತೇ..? ಇವರೆಲ್ಲ ಸ್ಟಾರ್ ನಟರ ಮಕ್ಕಳು. 13ರಲ್ಲಿ 6 ಜನ ಕಲಾವಿದರ ಮಕ್ಕಳೇ..

  ಸ್ವತಃ ಶರಣ್ ತಮ್ಮ ಪುತ್ರ ಹೃದಯ್‍ನನ್ನು ತೆರೆಗೆ ತರುತ್ತಿದ್ದಾರೆ. ನೆನಪಿರಲಿ ಪ್ರೇಮ್ ಪುತ್ರ ಏಕಾಂತ್, ನಟ ರವಿಶಂಕರ್ ಗೌಡ ಪುತ್ರ ಸೂರ್ಯ, ನವೀನ್ ಕೃಷ್ಣ ಪುತ್ರ ಹರ್ಷಿತ್ ಹಾಗೂ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಇಲ್ಲಿ ನಟಿಸುತ್ತಿದ್ದಾರೆ. ಶಾಸಕ ರಾಜುಗೌಡ ಪುತ್ರ ಮಣಿಕಾಂತ್ ನಾಯಕ್ ಕೂಡಾ ಇಲ್ಲಿ ನಟಿಸುತ್ತಿರೋದು ಇನ್ನೊಂದು ಸ್ಪೆಷಲ್.

  ಸುಮಾರು 450 ಹುಡುಗರನ್ನು ಅಡಿಷನ್ ಮಾಡಿ ಫೈನಲ್ ಮಾಡಿರೋ 13 ಹುಡುಗರು ಇವರು. ಹಾಗಂತ ಇವರನ್ನು ಸುಮ್ಮನೆ ಆಕ್ಟ್ ಮಾಡಿಸಿಲ್ಲ. ವಿಜಯನಗರ ಖೋಖೋ ಫೆಡರೇಷನ್ ಕ್ಲಬ್‍ಗೆ ಸೇರಿಸಿ ಒಂದು ತಿಂಗಳು ಟ್ರೇನಿಂಗ್ ಕೂಡಾ ಕೊಡಿಸಿದ್ದಾರೆ ಕ್ರಿಯೇಟಿವ್ ಹೆಡ್ ತರುಣ್ ಸುಧೀರ್.

  ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಗುರು ಶಿಷ್ಯರು ಚಿತ್ರದಲ್ಲಿರೋದು ಖೋಖೋ ಕಥೆಯೇ ಅಂತೆ. ನಿಶ್ವಿಕಾ ನಾಯ್ಡು ಹೀರೋಯಿನ್ ಆಗಿದ್ದು ಲಡ್ಡು ಸಿನಿಮಾಸ್ ಮೂಲಕ ಗುರು ಶಿಷ್ಯರು ರೆಡಿಯಾಗುತ್ತಿದ್ದಾರೆ.

 • ಚುಟುಚುಟು ಅಂತಾನೇ ಸಕ್ಸಸ್ 50..

  rambo 2 completes 50days

  ರ್ಯಾಂಬೋ 2. ಈ ವರ್ಷದ ಮತ್ತೊಂದು ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ಬಾಕ್ಸಾಫೀಸ್‍ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಸಿನಿಮಾ, ಯಶಸ್ವಿಯಾಗಿ 50 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಟಗರು ನಂತರ ಈ ವರ್ಷ ದೊಡ್ಡಮಟ್ಟದ ಸಕ್ಸಸ್ ಕಂಡ ಸಿನಿಮಾ ರ್ಯಾಂಬೋ2. ವಿದೇಶಗಳಲ್ಲಿಯೂ ಯಶಸ್ವಿಯಾಗಿರುವ ಸಿನಿಮಾ, ಶತದಿನೋತ್ಸವ ಪೂರೈಸಿದರೂ ಅಚ್ಚರಿಯಿಲ್ಲ.

  ಶರಣ್, ಆಶಿಕಾ ರಂಗನಾಥ್, ರವಿಶಂಕರ್, ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸಿನಿಮಾಗೆ ಅನಿಲ್ ಕುಮಾರ್ ನಿರ್ದೇಶನವಿತ್ತು. ತರುಣ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿದ್ದರು. ತಂತ್ರಜ್ಞರೇ ನಿರ್ಮಾಪಕರಾಗಿದ್ದ ಸಿನಿಮಾ ಭರ್ಜರಿಯಾಗಿ ಗೆದ್ದಿದೆ.

  ಚಿತ್ರಲೋಕ ಡಾಟ್ ಕಾಮ್ ಮೂಲಕ ಅಭಿಮಾನಿಗಳ ಜೊತೆ ನೇರವಾಗಿ ಮಾತನಾಡಿದ ಚಿತ್ರದ ನಾಯಕ ಶರಣ್, ಚಿತ್ರವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

 • ಜೋಗಿ, ಆಪ್ತಮಿತ್ರ ಹಿಟ್ ನೆನಪಲ್ಲಿ ರಾಜ್ ವಿಷ್ಣು

  raj vishnu sweet memory

  ವರಮಹಾಲಕ್ಷ್ಮಿ ಹಬ್ಬ ಕನ್ನಡ ಚಿತ್ರರಂಗಕ್ಕೆ ಶುಭ ತಂದಿರುವುದೇ ಹೆಚ್ಚು. ಅದರಲ್ಲಿಯಂತೂ ಈ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆ ಕಾಣುತ್ತಿರುವ ರಾಜ್ ವಿಷ್ಣು ಚಿತ್ರ, ಆಪ್ತಮಿತ್ರ ಮತ್ತು ಜೋಗಿ ಚಿತ್ರಗಳ ನೆನಪಿನ ಗುಂಗಿನಲ್ಲಿದೆ. 

  ಅದಕ್ಕೆ ಕಾರಣ ಇಷ್ಟೆ. ಆ ಎರಡೂ ಚಿತ್ರಗಳು ವರಮಹಾಲಕ್ಷ್ಮಿ ಹಬ್ಬದಂದೇ ರಿಲೀಸ್ ಆಗಿದ್ದವು. ಸೂಪರ್ ಹಿಟ್ ಆಗಿದ್ದವು. ಈಗ ರಾಜ್ ವಿಷ್ಣು ಕೂಡಾ ಹಬ್ಬದ ದಿನವೇ ತೆರೆಕಾಣುತ್ತಿದೆ. ಶರಣ್, ಚಿಕ್ಕಣ್ಣ ಅಭಿನಯದ ಈ ಕಾಮಿಡಿ ಚಿತ್ರ ಈಗಾಗಲೇ ಕ್ರೇಝ್ ಸೃಷ್ಟಿಸಿದೆ. ರಾಮು ನಿರ್ಮಾಣದ ರಾಜ್ ವಿಷ್ಣು ಕೂಡಾ ಜೋಗಿ, ಆಪ್ತಮಿತ್ರದ ಹಾಗೆ ಸೂಪರ್ ಹಿಟ್ ಆಗುತ್ತಾ..? ಅಭಿಮಾನಿಗಳ ನಿರೀಕ್ಷೆಯಂತೂ ಹಾಗೇ ಇದೆ.

 • ಡಿ.21ಕ್ಕೆ ಲಡ್ಡು ಬಂದು ಬಾಯಿಗ್ ಬೀಳುತ್ತೆ..!

  Sharan And Tharun Sudhir To Join Hands Again

  ಡಿಸೆಂಬರ್ 21ಕ್ಕೆ ಅಭಿಮಾನಿಗಳ ಪಾಲಿಗೆ ಲಡ್ಡು ಬಂದು ಬಾಯಿಗೆ ಬೀಳುತ್ತೆ. ಲಡ್ಡು ಬಂದು ಬಾಯಿಗ್ ಬಿತ್ತಾ ಜಾಹೀರಾತು ಕಲ್ಪನೆ ಮಾಡಿಕೊಂಡು ಏನೇನೋ ಕನಸು ಕಾಣಬೇಡಿ. ಡಿಸೆಂಬರ್ 21ಕ್ಕೆ ಲಡ್ಡು ಸಿನಿಮಾ ಹೌಸ್, ತಮ್ಮ ಹೊಸ ಚಿತ್ರದ ಟೈಟಲ್‍ನ್ನು ತೋರಿಸುತ್ತೆ, ಅಷ್ಟೆ.

  ಕಾಮಿಡಿ ಅಧ್ಯಕ್ಷ ಶರಣ್, ನಿರ್ದೇಶಕ ತರುಣ್ ಸುಧೀರ್ ಇಬ್ಬರೂ ಸೇರಿ ನಿರ್ಮಿಸುತ್ತಿರೋ ಹೊಸ ಚಿತ್ರ ಇದು. ಒಂದು ದೊಡ್ಡ ವಿಜಲ್ ಮತ್ತದರ ಮೇಲೆ ಮೇಡ್ ಇನ್ ಕರ್ನಾಟಕ 1995 ಎಂದು ಬರೆಯಲಾಗಿದೆ. ಶರಣ್ ಇರೋದ್ರಿಂದ ಕಾಮಿಡಿ ಬೇಸ್ಡ್ ಸಬ್ಜೆಕ್ಟ್ ಇರಬಹುದು ಎಂದು ಊಹಿಸಿಕೊಳ್ಳಬಹುದು. ಆದರೆ, ಶರಣ್ ಆಗಲೀ, ತರುಣ್ ಸುಧೀರ್ ಆಗಲೀ.. ಪ್ರಯೋಗಗಳಿಗೆ ಒಡ್ಡಿಕೊಳ್ಳುವವರು. ಹೀಗಾಗಿ.. ಡಿ.21ರಂದು ರಿಲೀಸ್ ಆಗೋ ಟೈಟಲ್ ನೋಡುವವರೆಗೂ ಲಡ್ಡು ಟೇಸ್ಟ್ ಬಗ್ಗೆ ಕುತೂಹಲ ಮಾತ್ರ ಇಟ್ಟುಕೊಳ್ಳಿ.

 • ದರ್ಶನ್ ಹಾದಿಯಲ್ಲಿ ಶರಣ್

  sharan on darshan's way

  ಶರಣ್ ಅಭಿನಯದ ಚಿಕ್ಕಣ್ಣ ಜೋಡಿಯ ರಾಜ್-ವಿಷ್ಣು ಆಗಸ್ಟ್ 4ಕ್ಕೆ ಬಿಡುಗಡೆಯಾಗ್ತಾ ಇದೆ. ಅದು ಮುಗಿದ ನಂತರ ಸತ್ಯ ಹರಿಶ್ಚಂದ್ರ ಚಿತ್ರ ವೇಗ ಪಡೆದುಕೊಳ್ಳುತ್ತೆ.

  ಇದರ ಮಧ್ಯೆ ಶರಣ್ ಹೊಸ ಚಿತ್ರವೊಂದಕೆಕ ಸಜ್ಜಾಗುತ್ತಿದ್ದಾರೆ. ಶರಣ್ ಲಡ್ಡೂ ಬ್ಯಾನರ್‍ನಲ್ಲೇ ಹೊಸ ಚಿತ್ರ ಸೆಟ್ಟೇರಲಿದೆ. ಆ ಚಿತ್ರ ನಿರ್ಮಿಸಿದ್ದ ಅಟ್ಲಾಂಟಾ ನಾಗೇಂದ್ರ ಚಿತ್ರದ ನಿರ್ಮಾಪಕರು. ಅವರಷ್ಟೇ ಅಲ್ಲ, ಚಿತ್ರದ ತಂತ್ರಜ್ಞರೂ ಆ ಚಿತ್ರಕ್ಕೆ ನಿರ್ಮಾಪಕರಾಗುತ್ತಿದ್ದಾರೆ.

  ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಛಾಯಾಗ್ರಾಹಕ ಸುಧಾಕರ್ ರಾಜ್, ಸಂಕಲನಕಾರ ಕೆ.ಎಂ. ಪ್ರಕಾಶ್, ಕಲಾ ನಿರ್ದೇಶಕ ಮೋಹನ್ ಬಿ ಕರೆ, ಕ್ರಿಯೇಟಿವ್ ಹೆಡ್ ತರುಣ್ ಸುಧೀರ್, ಇವರೆಲ್ಲ ವರ್ಕಿಂಗ್ ಪಾರ್ಟ್‍ನರ್‍ಗಳಾಗುತ್ತಿದ್ದಾರೆ. ಚಿತ್ರದ ಲಾಭದಲ್ಲಿ ಅವರಿಗೂ ಶೇರು ಸಿಗಲಿದೆ.

  ಈ ಹಿಂದೆ ಇಂಥಾದ್ದೊಂದು ಪ್ರಯತ್ನ ಮಾಡಿದ್ದವರು ನಟ ದರ್ಶನ್. ತಮ್ಮ ಬುಲ್‍ಬುಲ್ ಚಿತ್ರಕ್ಕೆ ತಂತ್ರಜ್ಞರನ್ನೆಲ್ಲ ನಿರ್ಮಾಪಕರನ್ನಾಗಿಸಿದ್ದರು. ಲಾಭದಲ್ಲಿ ಪಾಲನ್ನೂ ಹಂಚಿದ್ದರು. ಅದೇ ಹಾದಿಯಲ್ಲಿ ಈಗ ಶರಣ್ ಹೆಜ್ಜೆಯಿಡುತ್ತಿದ್ದಾರೆ. ಶುಭವಾಗಲಿ.

  Related Articles:-

  Atlanta Nagendra Movie With Sharan

 • ದಸರಾಗೆ ಅಮೆರಿಕ ಅಧ್ಯಕ್ಷನ ಪಯಣ

  adhyakashya in america to release for dasara

  2014ರಲ್ಲಿ ತೆರೆ ಕಂಡಿದ್ದ ಅಧ್ಯಕ್ಷನಿಗೂ, ಈ ಅಮೆರಿಕದಲ್ಲಿರೋ ಅಧ್ಯಕ್ಷನಿಗೂ ಸಂಬಂಧವಿಲ್ಲ. ಈ ಅಧ್ಯಕ್ಷ ಇನ್ ಅಮೆರಿಕ ಬರ್ತಾ ಇರೋದು ದಸರಾಗೆ. ಅಕ್ಟೋಬರ್ 4ಕ್ಕೆ ಪ್ರತ್ಯಕ್ಷವಾಗೋ ಅಧ್ಯಕ್ಷ ನಗೆಯ ಹಬ್ಬದೂಟವನ್ನೇ ಬಡಿಸಲಿದ್ದಾನೆ.

  ಶರಣ್ ಜೊತೆಗೆ ತುಪ್ಪದ ಹುಡುಗಿ ರಾಗಿಣಿ ಇದ್ದಾರೆ. ದಿಶಾಪಾಂಡೆ, ಶಿವರಾಜ್ ಕೆ.ಆರ್.ಪೇಟೆ, ಸಾಧುಕೋಕಿಲ, ತಬಲಾನಾಣಿ.. ಹೀಗೆ ಕಾಮಿಡಿ ಕಿಲಾಡಿಗಳ ದಂಡೇ ಚಿತ್ರದಲ್ಲಿದೆ. ಹರಿಕೃಷ್ಣ ಇದೇ ಮೊದಲ ಬಾರಿಗೆ ಶರಣ್ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟಿದ್ದಾರೆ. ವಿಶ್ವಪ್ರಸಾದ್, ವಿವೇಕ್ ಕುಚಿಬೊಟ್ಲ ಚಿತ್ರದ ನಿರ್ಮಾಪಕರು.

   

 • ಧ್ರುವ ಸರ್ಜಾ ಪತ್ನಿ ಶರಣ್ ಫ್ಯಾನ್..!

  ಧ್ರುವ ಸರ್ಜಾ ಪತ್ನಿ ಶರಣ್ ಫ್ಯಾನ್..!

  ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವತಾರ ಪುರುಷ ಚಿತ್ರದ ಟ್ರೇಲರ್ ರಿಲೀಸ್ ವೇಳೆ ಹೇಳಿದ್ದಿದು. ಟ್ರೇಲರ್ ರಿಲೀಸ್‍ಗಾಗಿಯೇ ಬಂದಿದ್ದ ಧ್ರುವ ತಮ್ಮ ಮತ್ತು ಪ್ರೇರಣಾ ಅವರೇ ಡೇಟಿಂಗ್ ಡೇಸ್ ಸೀಕ್ರೆಟ್ ಹೇಳಿದರು.

  ಶರಣ್ ಸಿನಿಮಾ ಎಂದೊಡನೆ ನನಗೆ ನೆನಪಾಗೋದು ಪ್ರೇರಣಾ. ನಾವು ಡೇಟಿಂಗ್‍ನಲ್ಲಿದ್ದಾಗ ಪ್ರೇರಣಾ ಶರಣ್ ಚಿತ್ರಗಳನ್ನು ಮಾತ್ರ ತಪ್ಪಿಸುತ್ತಲೇ ಇರಲಿಲ್ಲ. ನಾನು ಬ್ಯುಸಿ ಇದ್ದರೂ ಶರಣ್ ಸರ್ ಚಿತ್ರಗಳನ್ನು ಮಿಸ್ ಮಾಡದೇ ನೋಡುತ್ತಿದ್ದೆವು. ಅಧ್ಯಕ್ಷ, ವಿಕ್ಟರಿ.. ಹೀಗೆ ಯಾವುದೇ ಚಿತ್ರಗಳನ್ನು ನಾವು ಮಿಸ್ ಮಾಡಿಕೊಂಡಿಲ್ಲ. ನನ್ನ ಪತ್ನಿ ಪ್ರೇರಣಾ ಶರಣ್ ಫ್ಯಾನ್ ಎಂದರು ಧ್ರುವ ಸರ್ಜಾ.

  ಎಲ್ಲ ನಟರ ಅಭಿಮಾನಿಗಳೂ ಎಲ್ಲ ನಟರ ಸಿನಿಮಾಗಳನ್ನೂ ನೋಡಬೇಕು ಎಂದರು ಧ್ರುವ ಸರ್ಜಾ. ನಾನು ನನ್ನ ಜೀವನದಲ್ಲಿ ದೇವರೇ.. ಈ ಚಿತ್ರಗಳನ್ನು ಗೆಲ್ಲಿಸಲೇಬೇಕು ಎಂದು ಕೇಳಿಕೊಂಡಿದ್ದೆ. ಅದರಲ್ಲಿ ಒಂದು ಉಳಿದವರು ಕಂಡಂತೆ. ಇನ್ನೊಂದು ಅವತಾರ ಪುರುಷ. ಪುಷ್ಕರ್ ಅವರಂತಹ ನಿರ್ಮಾಪಕರಿಗಾಗಿ ಈ ಸಿನಿಮಾ ಗೆಲ್ಲಬೇಕು ಎಂದವರು ಸಿಂಪಲ್ ಸುನಿ. ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.

 • ನಗಿಸೋದು ಶರಣ್ ಒಬ್ಬರೇ ಅಲ್ಲ.. ಮರಿ ಅಧ್ಯಕ್ಷರ ದಂಡೇ ಇದೆ..!

  adhyakasha in america movie speciality

  ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಮೂಲ ಶಕ್ತಿಯೇ ಕಾಮಿಡಿ. ಇಡೀ ಚಿತ್ರ ನಡೆಯುವುದೇ ಹಾಸ್ಯದ ಮೇಲೆ. ಮಲಯಾಳಂನ ಟು ಕಂಟ್ರೀಸ್ ಚಿತ್ರದ ರೀಮೇಕ್ ಇದು. ಅಧ್ಯಕ್ಷರಾಗಿರೋದು ಶರಣ್. ಅವರಿಗೆ ಜೋಡಿಯಾಗಿರೋದು ರಾಗಿಣಿ ದ್ವಿವೇದಿ. ಹಾಗಂತ ಯೋಗಾನಂದ್ ಮುದ್ದಾನ್ ಶರಣ್-ರಾಗಿಣಿ ಜೋಡಿಗಷ್ಟೇ ಸೀಮಿತವಾಗಿಲ್ಲ. ಇಡೀ ಚಿತ್ರದಲ್ಲಿ ಮರಿ ಅಧ್ಯಕ್ಷರ ದಂಡೇ ಇದೆ.

  ಸ್ವತಃ ಯೋಗಾನಂದ್ ಮುದ್ದಾನ್ ಕಾಮಿಡಿ ಚಿತ್ರಗಳಿಗೆ ಸಂಭಾಷಣೆ ಬರೆಯುವುದಕ್ಕೆ ಹೆಸರುವಾಸಿಯಾಗಿದ್ದವರು. ಇವರ ಜೊತೆಗೆ ಸಾಧುಕೋಕಿಲ, ರಂಗಾಯಣ ರಘು, ಶಿವರಾಜ್ ಕೆ.ಆರ್.ಪೇಟೆ, ತಬಲಾ ನಾಣಿ ಕೂಡಾ ಇದ್ದಾರೆ. ಒಬ್ಬೊಬ್ಬರೂ ನಕ್ಕು ನಗಿಸೋಕೇ ಫೇಮಸ್.

  ಇಷ್ಟೆಲ್ಲಾ ಆಗಿಯೂ ಚಿತ್ರದಲ್ಲಿರೋದು ಡೈಲಾಗ್ ಕಾಮಿಡಿಗಿಂತ ಸಿಚುಯೇಷನ್ ಕಾಮಿಡಿ. ಸೀನ್ ನೋಡ್ತಾ ನೋಡ್ತಾನೇ ನಗ್ತಾ ಇರ್ತೀರಿ ಅನ್ನೋದು ಶರಣ್ ಕಾನ್ಫಿಡೆನ್ಸಿನ ಮಾತು. ಜಸ್ಟ್ ಎಂಜಾಯ್ ದಿಸ್ ವೀಕ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery