` actor sharan, - chitraloka.com | Kannada Movie News, Reviews | Image

actor sharan,

 • ನಿಮಗೆ ಈ ಮಂಡಿಸ್ಟಾರ್ ಗೊತ್ತಾ..?

  sharan is now mandi star

  ರೆಬಲ್‍ಸ್ಟಾರ್ ಅಂದ್ರೆ ಅಂಬಿ, ಪವರ್ ಸ್ಟಾರ್ ಅಂದ್ರೆ ಪುನೀತ್, ಚಾಲೆಂಜಿಂಗ್ ಸ್ಟಾರ್ ಅಂದ್ರೆ ದರ್ಶನ್, ರೋರಿಂಗ್ ಸ್ಟಾರ್ ಅಂದ್ರೆ ಶ್ರೀಮುರಳಿ, ಗೋಲ್ಡನ್ ಸ್ಟಾರ್ ಅಂದ್ರೆ ಗಣೇಶ್.. ಆದ್ರೆ ಈ ಮಂಡಿ ಸ್ಟಾರ್ ಅಂದ್ರೆ ಏನ್ರಿ..? ಈ ಪ್ರಶ್ನೆಗೆ ಉತ್ತರ ಕಾಮಿಡಿ ಸ್ಟಾರ್ ಶರಣ್.

  ಇದು ಶರಣ್‍ಗೆ ಅವರ ಸಿನಿಮಾ ತಂಡದವರೆಲ್ಲ ಸೇರಿ ಕರೀತಿರೋ ಹೆಸರು. ಅದಕ್ಕೆ ಕಾರಣ, ಬೇರೇನಲ್ಲ. ಅವರ ಚಿತ್ರದಲ್ಲಿನ ಹಾಡುಗಳಲ್ಲಿ ಒಂದಲ್ಲ ಒಂದು ಹಾಡಿನಲ್ಲಿ ಮಂಡಿ ಮೇಲೆ ಡ್ಯಾನ್ಸ್ ಮಾಡುವ ಸ್ಟೆಪ್ಸ್ ಇದ್ದೇ ಇರುತ್ತೆ. ಹೀಗಾಗಿ ಅವರನ್ನು ಮಂಡಿಸ್ಟಾರ್ ಎಂದು ಚಿತ್ರತಂಡದವರು ರೇಗಿಸ್ತಾ ಇರ್ತಾರಂತೆ.

  ರೇಗಿಸಿದಾಗ ಸಂಕೋಚವಾಗುತ್ತೆ. ಆದರೆ ಮಂಡಿ ಮೇಲೆ ಡ್ಯಾನ್ಸ್ ಮಾಡಿ ಮುಗಿಸಿದ ಮೇಲೆ ಮಂಡಿಚಿಪ್ಪು ಅಯ್ಯೋ ಅಂತಿರುತ್ತೆ. ಇಷ್ಟೆಲ್ಲ ಆಗಿ ಡ್ಯಾನ್ಸ್ ನೋಡಿದವರು ಸೂಪರ್ ಎಂದಾಗ ಎಲ್ಲ ನೋವು ಮರೆಯಾಗಿಬಿಡುತ್ತೆ ಅಂತಾರೆ ಶರಣ್.

  ಈ ವಾರ ರಿಲೀಸ್ ಆಗ್ತಿರೋ ವಿಕ್ಟರಿ 2ನ ಕುಟ್ಟಪ್ಪ ಸಾಂಗ್‍ನಲ್ಲೂ ಮಂಡಿ ಡ್ಯಾನ್ಸ್ ಇದೆ. ಅದು ಚುಟು ಚುಟು ಹಾಡಿನಂತೆಯೇ ಹಿಟ್ ಆಗಿದೆ.

  ಮಂಡಿಸ್ಟಾರ್ ಶರಣ್‍ಗೆ ಮತ್ತೊಂದು ವಿಕ್ಟರಿ 2 ಮತ್ತೊಂದು ಸಕ್ಸಸ್ ಕೊಡುವ ಎಲ್ಲ ಸೂಚನೆಗಳೂ ಸಿಗುತ್ತಿವೆ.

 • ಬಂತೈ ಬಂತೈ ವಿಕ್ಟರಿ 2 ಟ್ರೈಲರ್ 

  victory 2 trailer released

  ಒಬ್ಬ ಅಮಾಯಕ ಯುವಕ, ಭಯ ಹುಟ್ಟಿಸುವ ಹೆಂಡತಿ, ಅಸಹಾಯಕ ಪ್ರೇಮಿ, ಅವರಿಬ್ಬರ ಮಧ್ಯೆ ಒಂದು ಹಾಟ್ ಕೇಕ್‍ನಂತಾ ಹುಡುಗಿ,  ಒಬ್ಬ ಡಮ್ಮಿ ಡಾನ್, ಸೀಡ್‍ಲೆಸ್ ಸಿಂಗಂನಂತಾ ಪೊಲೀಸ್, ಒಬ್ಬ ಸಿಕ್ಕಾಪಟ್ಟೆ ಸೀರಿಯಸ್ ಬಫೂನ್, ಡಬಲ್ ಆಕ್ಟಿಂಗ್, ಡಬಲ್ ತಮಾಷಾ.. ಇದು ವಿಕ್ಟರಿ 2 ಟ್ರೈಲರ್.

  ವಿಕ್ಟರಿ 2ನ ಟ್ರೈಲರ್ ರಿಲೀಸ್ ಆಗಿದೆ. ಅತ್ತ ಡಬಲ್ ಮೀನಿಂಗ್ ಅಲ್ಲದ, ಇತ್ತ ಸಿಂಗಲ್ ಮೀನಿಂಗೂ ಅಲ್ಲದ ಡೈಲಾಗುಗಳು ಕಚಗುಳಿ ಇಡುತ್ತಿವೆ. ಶರಣ್, ರವಿಶಂಕರ್, ಸಾಧು ಕೋಕಿಲ, ತಬಲಾ ನಾಣಿ, ಅಸ್ಮಿತಾ ಸೂದ್, ಅಪೂರ್ವ.. ಹೀಗೆ ತಾರಾಗಣದ ಪಟ್ಟಿ ದೊಡ್ಡದು.

  ತರುಣ್ ಶಿವಪ್ಪ ನಿರ್ಮಾಣದ ಸಿನಿಮಾಗೆ ಹರಿ ಸಂತು ನಿರ್ದೇಶನವಿದೆ. ಗೆಟ್ ರೆಡಿ ಟು ನಗೋಣ.

 • ಬ್ಲಾಕ್ ಮ್ಯಾಜಿಕ್ `ಅವತಾರ ಪುರುಷ' ಕೇರಳದಲ್ಲಿ

  avatar purusha in kerala

  ಚುಟುಚುಟು ಕಾಂಬಿನೇಷನ್ ಶರಣ್-ಅಶಿಕಾ ರಂಗನಾಥ್, ಸಿಂಪಲ್ ಸುನಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಷನ್ನಿನ ಅವತಾರ ಪುರುಷ ಸಿನಿಮಾದ ಶೂಟಿಂಗ್ ಕೇರಳದ ಪಾಲಕ್ಕಾಡ್‍ನಲ್ಲಿ ನಡೆಯುತ್ತಿದೆ. ವಿಶೇಷವೆಂದರೆ, ಶೂಟಿಂಗ್ ನಡೀತಿರೋದು 300 ವರ್ಷ ಹಳೆಯ ಪುರಾತನ ಬಂಗಲೆಯಲ್ಲಿ. ಅದು ಬಂಗಲೆಯಷ್ಟೇ ಅಲ್ಲ, ಅಲ್ಲಿ ತುಂಬಾ ಕಟ್ಟುನಿಟ್ಟಾಗಿರಬೇಕು.

  ಆ ಶೂಟಿಂಗ್ ಸ್ಪಾಟ್‍ನಲ್ಲಿ ಬಂಗಲೆ ಒಳಗೆ ಹೋಗುವವರು ಶೂ, ಚಪ್ಪಲಿ ಹಾಕಿಕೊಂಡು ಹೋಗುವಂತಿಲ್ಲ. ಮಾಂಸ ತಿನ್ನುವಂತಿಲ್ಲ. ಕೆಲವು ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಏಕೆಂದರೆ, ಬಂಗಲೆಯ ಒಳಗೆ ಪುಟ್ಟದೊಂದು ದೇವಸ್ಥಾನವೂ ಇದೆ. ನಾವು ಅವುಗಳನ್ನೆಲ್ಲ ಶಿಸ್ತುಬದ್ಧವಾಗಿ ಪಾಲಿಸುತ್ತಲೇ ಶೂಟಿಂಗ್ ಮಾಡಿದ್ದೇವೆ ಎಂದಿದ್ದಾರೆ ಪುಷ್ಕರ್.

  ಸಿಂಪಲ್ ಸುನಿ ಈ ಚಿತ್ರದಲ್ಲಿ ಶರಣ್‍ರನ್ನು ಜೂನಿಯರ್ ಆರ್ಟಿಸ್ಟ್ ಮಾಡಿದ್ದಾರೆ. ಚಿತ್ರ ವಿಚಿತ್ರ ವೇಷಗಳನ್ನು ತೊಡಿಸಿ ಅವತಾರ ಪುರುಷನನ್ನಾಗಿಸಿದ್ದಾರೆ. ಚಿತ್ರದಲ್ಲಿ ಬ್ಲಾಕ್ ಮ್ಯಾಜಿಕ್ ಕಥೆ ಇದೆಯಂತೆ. ಹಾಗಾದರೆ, ಇದು ಮಾಟಮಂತ್ರ ಚಿತ್ರವಾ..? ಹಾರರ್ ಚಿತ್ರವಾ..? ದೆವ್ವದ ಚಿತ್ರವಾ..? ಥ್ರಿಲ್ಲರ್ ಸಿನಿಮಾನಾ..? ವೇಯ್ಟ್ ಮಾಡಿ ನೋಡಿ.

 • ಮಂಜುನಾಥನ ಸನ್ನಿಧಿಯಲ್ಲಿ ಅಮೆರಿಕದ ಅಧ್ಯಕ್ಷ ಸಿಕ್ಕಿಬಿಟ್ಟ..!

  adhyaksha in america

  ಅಧ್ಯಕ್ಷ ಇನ್ ಅಮೆರಿಕ. ಬಿಡುಗಡೆಗೆ ರೆಡಿಯಾಗಿರುವ ಈ ಸಿನಿಮಾ ನಿರ್ದೇಶಕ ಯೋಗಾನಂದ್. ಚಿತ್ರರಂಗಕ್ಕೆ ಹೊಸಬರೇನಲ್ಲ. ಸ್ಟೈಲಿಷ್ ನಿರ್ದೇಶಕ ಹರ್ಷ ಜೊತೆ ಎಲ್ಲ ಚಿತ್ರಗಳಿಗೂ ಕೆಲಸ ಮಾಡಿರುವ ಯೋಗಾನಂದ್‍ಗೆ ಈ ಚಿತ್ರದ ಆಫರ್ ಸಿಕ್ಕಿದ್ದು ಧರ್ಮಸ್ಥಳದಲ್ಲಂತೆ. ಮಂಜುನಾಥನ ಸನ್ನಿಧಿಯಲ್ಲಿ ದರ್ಶನಕ್ಕೆ ನಿಂತಿದ್ದಾಗ ಫೋನ್ ಬಂತು. ಈ ಚಿತ್ರವನ್ನು ನೀವೇ ನಿರ್ದೇಶಿಸಬೇಕು ಎಂಬ ಆಫರ್ ಇತ್ತು. ಮಂಜುನಾಥ ಕಣ್ತೆರೆದಿದ್ದ ಎನ್ನುತ್ತಾರೆ ಯೋಗಾನಂದ್.

  ಶರಣ್ ಅಧ್ಯಕ್ಷನಾಗಿದ್ದರೆ, ಜೋಡಿಯಾಗಿರುವುದು ರಾಗಿಣಿ ದ್ವಿವೇದಿ. ಈ ಹಿಂದೆ ಶರಣ್‍ರ ಎರಡು ಚಿತ್ರಗಳಲ್ಲಿ ಸ್ಪೆಷಲ್ ಸಾಂಗುಗಳಿಗೆ ಕುಣಿದು ಕುಪ್ಪಳಿಸಿದ್ದ ರಾಗಿಣಿ, ಈ ಚಿತ್ರದಲ್ಲಿ ಶರಣ್‍ಗೇ ಹೀರೋಯಿನ್. 

  ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿದ್ದಾರಂತೆ ರಾಗಿಣಿ. ಶರಣ್ ಮತ್ತು ರಾಗಿಣಿ ಡ್ಯಾನ್ಸ್ ಕೂಡಾ ಬೊಂಬಾಟ್ ಆಗಿವೆಯಂತೆ. ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ನಗೋಕೆ ನೀವು ರೆಡಿಯಾಗಿ.

 • ಮತ್ತೆ ಗೆದ್ದೇ ಗೆಲ್ತೀನಿ - ಶರಣ್

  satya harishchandra

  ಶರಣ್. ಅಧ್ಯಕ್ಷ ನಂತರ ಅದೇಕೋ ಏನೋ.. ಶರಣ್‍ಗೆ ಬಿಗ್ ಹಿಟ್ ಎನ್ನುವುದು ಸಿಕ್ಕಿಲ್ಲ. ಹಾಗೆಂದು ಶರಣ್ ಚಿತ್ರಗಳು ಸೋತಿವೆ ಎನ್ನುವ ಹಾಗೂ ಇಲ್ಲ. ಒಂದು ಆ್ಯವರೇಜ್ ಮಟ್ಟಕ್ಕೆ ಮುಟ್ಟಿವೆ. ಶರಣ್ ಚಿತ್ರಗಳು ನಿರ್ಮಾಪಕರನ್ನು ನಷ್ಟಕ್ಕೆ ದೂಡಿಲ್ಲ ಎನ್ನುವುದು ಇನ್ನೊಂದು ಪ್ಲಸ್. ಆದರೆ, ಒಂದು ದೊಡ್ಡ ಹಿಟ್ ಸಿಕ್ಕಿಲ್ಲ ಎನ್ನುವ ಬೇಸರ ಶರಣ್‍ಗೂ ಇದೆ.

  ಗೆಲುವಿನ ಸೂತ್ರ ಇದೇ ಎಂದು ಗೊತ್ತಿದ್ದರೆ, ನಾವೆಲ್ಲ ದೇವರಾಗಿಬಿಡುತ್ತಿದ್ದೆವು. ಪ್ರಯತ್ನವಷ್ಟೇ ನಮ್ಮದು. ಆ ಪ್ರಯತ್ನವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದಿದ್ದಾರೆ ಶರಣ್. ಹಿಂದಿನ ತಪ್ಪುಗಳ ಬಗ್ಗೆ ವಿಷಾದವಿಲ್ಲ ಎನ್ನವ ಶರಣ್‍ಗೆ ಜೈಲಲಿತಾ ಚಿತ್ರದ ಸ್ತ್ರೀ ಪಾತ್ರಕ್ಕೆ ಸಿಕ್ಕಿರುವ ಮೆಚ್ಚುಗೆ ಖುಷಿ ಕೊಟ್ಟಿದೆ.

  ಈಗ ಶರಣ್ ಸತ್ಯ ಹರಿಶ್ಚಂದ್ರನನ್ನು ಎದುರು ನೋಡುತ್ತಿದ್ದಾರೆ. ಅದು ದೊಡ್ಡ ಮಟ್ಟದ ಹಿಟ್ ಆಗುತ್ತೆ ಎನ್ನುವ ನಂಬಿಕೆ ಶರಣ್‍ದು. ಕಾಮಿಡಿಯೇ ನನ್ನ ಟ್ರಂಪ್ ಕಾರ್ಡ್. ಅದನ್ನು ಬಿಟ್ಟಂತೂ ಸಿನಿಮಾ ಮಾಡುವುದಿಲ್ಲ. ಸತ್ಯ ಹರಿಶ್ಚಂದ್ರನಲ್ಲೂ ಕಾಮಿಡಿಗೆ ಕೊರತೆಯಿಲ್ಲ ಎನ್ನುತ್ತಾರೆ ಶರಣ್. 

  ಸತ್ಯ ಹರಿಶ್ಚಂದ್ರ, ಇದೇ ತಿಂಗಳು 20ಕ್ಕೆ ತೆರೆ ಕಾಣುತ್ತಿದೆ.

 • ಮತ್ತೆ ಹೆಣ್ಣಾದರು ಶರಣ್.. ಜೊತೆಗೆ ಅವರಿಬ್ಬರು..!

  sharan in women's avatar

  ಕಾಮಿಡಿ ಕಿಂಗ್ ಮತ್ತೊಮ್ಮೆ ಹೆಣ್ಣಾಗಿದ್ದಾರೆ. ಈ ಮೊದಲು ಜೈಲಲಿತಾ ಚಿತ್ರದಲ್ಲಿ ಹೆಣ್ಣಿನ ವೇಷ ತೊಟ್ಟಿದ್ದ ಶರಣ್, ಹಂಗಾಮಾ ಸೃಷ್ಟಿಸಿದ್ದರು. ಈ ಬಾರಿ ಅಧ್ಯಕ್ಷ-2 ಚಿತ್ರದಲ್ಲಿ ಐಯ್ಯಂಗಾರಿ ಮಹಿಳೆಯ ವೇಷ ತೊಟ್ಟಿದ್ದಾರೆ. ಇನ್ನೂ ಒಂದು ವಿಶೇಷ ಇದೆ. ಈ ಹೆಣ್ಣಿನ ವೇಷದಲ್ಲಿ ಈ ಬಾರಿ ಶರಣ್ ಒಬ್ಬರೇ ಅಲ್ಲ, ಅವರ ಜೊತೆ ಆರ್ಮುಗಂ ರವಿಶಂಕರ್ ಹಾಗೂ ಸಾಧುಕೋಕಿಲ ಕೂಡಾ ಇರ್ತಾರೆ. ಸಿನಿಮಾದಲ್ಲಿ ಸುಮಾರು 40 ನಿಮಿಷಗಳ ಕಾಲ ರವಿಶಂಕರ್ ಮತ್ತು ಶರಣ್ ಇಬ್ಬರೂ ಹೆಣ್ಣಿನ ವೇಷದಲ್ಲೇ ಇರ್ತಾರಂತೆ.

  ಆ ಪಾತ್ರಗಳಿಗಾಗಿ ಮೇಕಪ್ ಮಾಡೋಕೇ 3 ಗಂಟೆ ಬೇಕಾಗುತ್ತಿತ್ತು. ಶರಣ್, ಸಾಧು ಮತ್ತು ರವಿಶಂಕರ್ ಡೆಡಿಕೇಷನ್‍ನ್ನು ಮೆಚ್ಚಲೇಬೇಕು. ಸ್ವಲ್ಪವೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ಅಷ್ಟೇ ಅಲ್ಲ, ಇಡೀ ದಿನ ಮೇಕಪ್ ಹಾಳಾಗದಂತೆ ನೋಡಿಕೊಳ್ಳುತ್ತಿದ್ದರು. ಮೇಕಪ್ ತೆಗೆಯೋಕೇ 1 ಗಂಟೆ ಬೇಕಾಗುತ್ತಿತ್ತು ಎಂದು ಶೂಟಿಂಗ್ ಕತೆ ಹೇಳಿದ್ದಾರೆ ನಿರ್ದೇಶಕ ಹರಿ ಸಂತೋಷ್. ವಿದೇಶದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಈಗ ಸ್ವದೇಶಿ ಶೂಟಿಂಗ್‍ನಲ್ಲಿ ಬ್ಯುಸಿಯಾಗಬೇಕಿದೆ.

 • ಮತ್ತೊಮ್ಮೆ ಥೈಯ್ಯಕುದಾ..ತಕಥೈಯ್ಯೇ ಕುದಾ..!

  satya harishchandra

  ಡಾ. ರಾಜ್‌ಕುಮಾರ್‌ ಅಭಿನಯದ 'ಸತ್ಯ ಹರಿಶ್ಚಂದ್ರ' ಸಿನಿಮಾದ ಎವರಗ್ರೀನ್‌ ಹಾಡು 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ'. ಈ ಹಳೆಯ ಹಾಡು ಇಂದಿಗೂ ಆರ್ಕೆಸ್ಟ್ರಾಗಳಲ್ಲಿ ಹಾಟ್ ಫೇವರಿಟ್. ಹಾಡಿನ ಮ್ಯೂಸಿಕ್ ಶುರುವಾದೊಡನೆ ಹೆಜ್ಜೆ ಹಾಕುವವರಿಗೆ ಕಡಿಮೆಯಿಲ್ಲ. ಈಗ ಈ ಹಾಡು ಮತ್ತೊಮ್ಮೆ ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ಮಾಡರ್ನ್​ ಸ್ವರೂಪದಲ್ಲಿ ಬಂದಿದೆ.

  ಸ್ಯಾಂಡಲ್‌ವುಡ್‌ ಅಧ್ಯಕ್ಷ ಶರಣ್‌ ಅಭಿನಯದ 'ಸತ್ಯ ಹರಿಶ್ಚಂದ್ರ' ಚಿತ್ರದಲ್ಲಿ 'ಕುಲದಲ್ಲಿ ಕೀಳ್ಯಾವುದೋ' ಹಾಡನ್ನು ವಿಭಿನ್ನ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ. ವಿಡಿಯೋ ಸಾಂಗ್​ನಲ್ಲಿ ಸತ್ಯ ಹರಿಶ್ಚಂದ್ರ ದೃಶ್ಯಗಳನ್ನು ಮರುಸೃಷ್ಟಿಸಲಾಗಿದೆ. ಹಾಡಿನ ಕಿಕ್ಕನ್ನು ಇನ್ನಷ್ಟು ಹೆಚ್ಚಿಸಿರುವುದು ವಿಜಯ್‌ ಪ್ರಕಾಶ್‌ ಅವರ ಧ್ವನಿ. ಅರ್ಜುನ್‌ ಜನ್ಯ ಮೂಲ ಸಂಗೀತದಲ್ಲಿ ತುಂಬಾ ಬದಲಾವಣೆ ಮಾಡಿಲ್ಲ. ಬಿಟ್ಸ್​ಗಳಷ್ಟೇ ಹೊಸದು. ಶರಣ್ ಅವರ ಎನರ್ಜಿ ಖುಷಿ ಕೊಡುತ್ತೆ. ದಯಾಳ್‌ ಪದ್ಮನಾಭ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

 • ಮಾಟ, ಮಂತ್ರದ ಅವತಾರ್ ಪುರುಷನದ್ದೇ 2 ಅವತಾರ..!

  ಮಾಟ, ಮಂತ್ರದ ಅವತಾರ್ ಪುರುಷನದ್ದೇ 2 ಅವತಾರ..!

  ಮಾಟ, ಮಂತ್ರ, ತಂತ್ರಗಳ ಬಗ್ಗೆ ಒಂದಷ್ಟು ಜನ ಭಯ ಪಡುವುದು ಸತ್ಯವಾದರೂ, ಬಹಳಷ್ಟು ಜನ ಕೇರ್ ಮಾಡೋದಿಲ್ಲ. ಆದರೆ, ಅಂತಹ ಸಿನಿಮಾಗಳಿಗೆ ಒಂದಷ್ಟು ಖಾಯಂ ಪ್ರೇಕ್ಷಕರಿದ್ದೇ ಇರುತ್ತಾರೆ. ಅವತಾರ್ ಪುರುಷ ಇದೇ ಜಾನರ್‍ನ ಸಿನಿಮಾ.

  ಶರಣ್, ಶ್ರೀನಗರ ಕಟ್ಟಿ, ಅಶಿಕಾ ರಂಗನಾಥ್, ಸುಧಾರಾಣಿ, ಸಾಯಿ ಕುಮಾರ್, ಭವ್ಯಾ ಮೊದಲಾದ ಘಟಾನುಘಟಿ ಕಲಾವಿದರೇ ನಟಿಸಿರುವ ಅವತಾರ್ ಪುರುಷ ಚಿತ್ರದ ಚಿತ್ರೀಕರಣಕ್ಕೆ ಕುಂಭಳಕಾಯಿ ಬಿದ್ದಿದೆ.

  ವಿಶೇಷವೆಂದರೆ ಇದನ್ನು ವೆಬ್ ಸಿರೀಸ್‍ಗಾಗಿ ಮಾಡಲಾಗಿತ್ತಂತೆ. ಆದರೆ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ದೇಶಕ ಸಿಂಪಲ್ ಸುನಿಯವರನ್ನು ಒಪ್ಪಿಸಿ ಸಿನಿಮಾ ಮಾಡಿದ್ದಾರೆ. ಅಂದಹಾಗೆ ಅವತಾರ್ ಪುರುಷ, 2 ಭಾಗಗಳಲ್ಲಿ ಬರಲಿದೆ.

  ಅವತಾರ್ ಪುರುಷ ಭಾಗ 1ಕ್ಕೆ ಅಷ್ಟದಿಗ್ಬಂಧನ ಮಂಡಲಕ ಅನ್ನೋ ಟ್ಯಾಗ್‍ಲೈನ್ ಕೊಟ್ಟಿದ್ದರೆ, 2ನೇ ಭಾಗಕ್ಕೆ ತ್ರಿಶಂಕು ಅನ್ನೋ ಟೈಟಲ್ ಕೊಡಲಾಗಿದೆ. ಎರಡೂ ಭಾಗಗಳ ಚಿತ್ರೀಕರಣ ಮುಗಿಸಿದೆ ಅವತಾರ್ ಟೀಂ. ಎರಡೂ ಭಾಗಗಳನ್ನು ಒಟ್ಟಿಗೇ ತರುವ ಯೋಜನೆ ಚಿತ್ರತಂಡಕ್ಕಿದೆ.

  ಹೀಗಾಗಿಯೇ ಚಿತ್ರದ ಬಗ್ಗೆ ಟ್ವೀಟ್ ಮಾಡಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಮಾಟ, ಮಂತ್ರ ಅಂದ್ರೆ ಯಾರ್ಗೂ ನಂಬಿಕೆ, ಭಯ ಇಲ್ಲ. ಅಲ್ವಾ..? ಗೆಟ್ ರೆಡಿ ಫಾರ್ ದಿ ಸ್ಕೇರಿ ಡ್ರೈವ್ ಎಂದು ಟ್ವೀಟ್ ಮಾಡಿದ್ದಾರೆ.

 • ಮೇ 28ಕ್ಕಿಲ್ಲ ಅವತಾರ ಪುರುಷ

  ಮೇ 28ಕ್ಕಿಲ್ಲ ಅವತಾರ ಪುರುಷ

  ಕೊರೊನಾ ಹಾವಳಿ, ಲಾಕ್ ಡೌನ್ ಹಿನ್ನೆಲೆಯಲ್ಲಿ ಹಲವು ಚಿತ್ರಗಳ ಬಿಡಗಡೆ ಮುಂದಕ್ಕೆ ಹೋಗಿದೆ. ಶರಣ್-ಸಿಂಪಲ್ ಸುನಿ-ಅಶಿಕಾ ರಂಗನಾಥ್-ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಷನ್‍ನ ಅವತಾರ ಪುರುಷ ಚಿತ್ರದ ಬಿಡುಗಡೆಯೂ ಮುಂದಕ್ಕೆ ಹೋಗುತ್ತಿದೆ. ಅಫ್‍ಕೋರ್ಸ್, ಅಧಿಕೃತವಾಗಿ ಇನ್ನೂ ಘೋಷಣೆಯಾಗಿಲ್ಲವಾದರೂ ಚಿತ್ರದ ಬಿಡಗಡೆ ಮುಂದಕ್ಕೆ ಹಾಕೋಕೆ ಚಿತ್ರತಂಡ ನಿರ್ಧರಿಸಿರುವುದು ಸತ್ಯ.

  ಚಿತ್ರ ರಿಲೀಸ್ ಆಗೋಕೆ ಸಿದ್ಧವಾಗಿದೆ. ಅದೇ ಡೇಟ್‍ಗೆ ರಿಲೀಸ್ ಮಾಡೋ ಪ್ಲಾನ್ ಹಾಗೆಯೇ ಇದೆ. ಆದರೆ ಕೊರೊನಾ 2ನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿಲ್ಲ. ಹೀಗಾಗಿ ರಿಲೀಸ್ ಡೇಟ್ ಅನೌನ್ಸ್ ಮಾಡೋಕೆ ಆಗುತ್ತಿಲ್ಲ ಎಂದಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

  ಎಲ್ಲವೂ ಸಿದ್ಧವಾಗಿದ್ದರೂ ಚಿತ್ರದ ಬಿಡುಗಡೆ ಮೇ 28ಕ್ಕಿಲ್ಲ. ಅವತಾರ ಪುರುಷ 2 ಭಾಗಗಳಲ್ಲಿ ಬರುತ್ತಿದ್ದು, ಮೊದಲ ಭಾಗ ಅವತಾರ ಪುರುಷ ಅಷ್ಟದಿಗ್ಬಂಧನ ಮಂಡಲಕ ಮೇ 28ಕ್ಕೆ ಬರಬೇಕಿತ್ತು. ಈಗಾಗಲೇ ಚಿತ್ರದ ಟ್ರೇಲರ್ ಸಂಚಲನ ಸೃಷ್ಟಿಸಿದ್ದು, ಪ್ರೇಕ್ಷಕರು ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಆದರೆ, ಕೊರೊನಾ ಕಪಿಮುಷ್ಠಿಯಿಂದ ದೇಶ ಬಿಡುಗಡೆಯಾಗದ ಹೊರತು ಅವತಾರ ಪುರುಷನ ದರ್ಶನ ಭಾಗ್ಯ ಕಷ್ಟ.

 • ಮೇ 28ಕ್ಕೆ ಶರಣ್ ಅಷ್ಟಮಂಡಲಕ ದಿಗ್ಬಂಧನ

  ಮೇ 28ಕ್ಕೆ ಶರಣ್ ಅಷ್ಟಮಂಡಲಕ ದಿಗ್ಬಂಧನ

  ಫೆ.19ರಿಂದ ಶುರುವಾಗುತ್ತಿರೋ ಕನ್ನಡದ ಸ್ಟಾರ್ ನಟರ ಚಿತ್ರಗಳ ಜಾತ್ರೆ ಕಂಟಿನ್ಯೂ ಆಗಲಿದೆ. ಸರಾಸರಿ ಪ್ರತಿ 15 ದಿನಕ್ಕೊಂದು ಸ್ಟಾರ್ ಸಿನಿಮಾ ಆಗುತ್ತಿದೆ. ಮೇ 14ಕ್ಕೆ ಭಜರಂಗಿ 2 ಇದ್ದು, ಅದಾದ ನಂತರ ಮೇ 28ಕ್ಕೆ ಶರಣ್ ಎಂಟ್ರಿ ಕೊಡುತ್ತಿದ್ದಾರೆ.

  ಶರಣ್, ಅಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ನಟಿಸಿರುವ ಅವತಾರ ಪುರುಷ ಅಷ್ಟಮಂಡಲಕ ದಿಗ್ಬಂಧನ ಮೇ 28ಕ್ಕೆ ರಿಲೀಸ್ ಆಗುತ್ತಿದೆ. ಕಾಮಿಡಿ ಲವ್ ಸ್ಟೋರಿಗಳಿಗೆ ಫೇಮಸ್ ಆಗಿರೋ ಸಿಂಪಲ್ ಸುನಿ, ಈ ಬಾರಿ ಸಿಂಪಲ್ಲಾಗ್ ಒಂದಿಷ್ಟು ಹಾರರ್ ಮಿಕ್ಸ್ ಮಾಡಿದ್ದಾರೆ. ಅದೂ 2 ಭಾಗಗಳಲ್ಲಿ. ಅವತಾರ ಪುರುಷ ಚಿತ್ರದ ಭಾಗ 1 ಮೇ 28ಕ್ಕೆ ರಿಲೀಸ್ ಆದರೆ, 2ನೇ ಭಾಗ ಅದಾದ 2 ತಿಂಗಳ ನಂತರ ಥಿಯೇಟರ್‍ಗೆ ಬರಲಿದೆ.

  ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಸಿಂಪಲ್ ಸುನಿ ನಿರ್ದೇಶನ ಮತ್ತು ಶರಣ್ ನಟನೆ. ಎಲ್ಲವೂ ಹೊಚ್ಚ ಹೊಸ ಕಾಂಬಿನೇಷನ್ ಎನ್ನುವುದು ವಿಶೇಷ.

 • ಯಾರ್ ಯಾರು ಏನೇನು? ಇವರೇ ಗುರು ಶಿಷ್ಯರು

  ಯಾರ್ ಯಾರು ಏನೇನು? ಇವರೇ ಗುರು ಶಿಷ್ಯರು

  ಗುರು ಶಿಷ್ಯರು ಚಿತ್ರತಂಡ ವಿಭಿನ್ನವಾಗಿ ಪ್ಲಾನ್ ಮಾಡಿ ಇಡೀ ಚಿತ್ರತಂಡವನ್ನು ಸ್ಪೆಷಲ್ ಆಗಿ ಪರಿಚಯ ಮಾಡಿಕೊಟ್ಟಿದೆ.

  ಬಸವ : ಹರ್ಷಿತ್ ನವೀನ್ ಕೃಷ್ಣ

  ಚೆನ್ನಿಗರಾಯ : ಆಸಿಫ್ ಮುಲ್ಲಾ

  ಜೋಸೆಫ್ : ಸೂರ್ಯ ರವಿಶಂಕರ್

  ಬಾಷ : ರಕ್ಷಕ್ ಬುಲೆಟ್

  ಓಬಳೇಶ : ಸಾಂಬ ಶಿವ

  ನಟೇಶ-ಗಿರೀಶ : ಸಂದೇಶ್-ಸಾಗರ್

  ಕಾಡಸಿದ್ಧ : ರುದ್ರಗೌಡ

  ಟೈರ್ : ಅನೂಪ್ ರಮಣ

  ಕಿರಣ್ : ಅಮಿತ್ ಬಿ

  ಕಾರ್ತಿಕ್ : ಹೃದಯ್ ಶರಣ್

  ಸೀನ : ಏಕಾಂತ್ ಪ್ರೇಮ್

  ವೀರಣ್ಣ : ಮಣಿಕಂಠ ನಾಯಕ್

  ಇವರೆಲ್ಲರ ಗುರು ಶರಣ್. ಇದು 1995ರಲ್ಲಿ ನಡೆಯೋ ಕಥೆ. ಶರಣ್ ಎದುರು ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ. ಜಂಟಲ್‍ಮನ್ ಖ್ಯಾತಿಯ ಜಡೇಶ್ ಹಂಪಿ ನಿರ್ದೇಶನವಿದೆ.

 • ರಷ್ಯಾದಲ್ಲಿ ಶರಣ್ ಹುಲಿ ಕುಣಿತ

  sharan's huli kunitha in russia

  ಕನ್ನಡದ ಕಾಮಿಡಿ ಕಿಂಗ್ ಶರಣ್, ಈಗ ವಿಕ್ಟರಿ 2 ಚಿತ್ರದಲ್ಲಿ ಬ್ಯುಸಿ. ರ್ಯಾಂಬೋ2 ಸಕ್ಸಸ್ ಸಂಭ್ರಮದಲ್ಲಿರೋ ಶರಣ್ ಟೀಂ, ರಷ್ಯಾದಲ್ಲಿ ವಿಕ್ಟರಿ2 ಹಾಡನ್ನು ಅದ್ಧೂರಿಯಾಗಿ ಚಿತ್ರೀಕರಿಸಿದೆ. ರಷ್ಯಾದಲ್ಲಿ ಕನ್ನಡದ ಜನಪದ ಕಲೆಗಳಾದ ಹುಲಿ ಕುಣಿತ, ಯಕ್ಷಗಾನಗಳ ಹಿನ್ನೆಲೆಯಲ್ಲಿ ಹಾಡು ಚಿತ್ರೀಕರಿಸಿದೆ. ರಷ್ಯಾದ ಹಿನ್ನೆಲೆಯಲ್ಲಿ ಕನ್ನಡದ ಜಾನಪದ ಕಲೆಗಳ ಕುಣಿತ ವಿಶೇಷವಾಗಿ ಕಣ್ತುಂಬಿಕೊಳ್ಳಲಿದೆ.

  ಪ್ಲೀಸ್ ಟ್ರಸ್ಟು.. ನಾನು ಚೀಪ್ & ಬೆಸ್ಟು.. ಎಂಬ ಹಾಡಿಗೆ ಶರಣ್ ಹಾಗೂ ಅಸ್ಮಿತಾ ಸೂದ್ ಕುಣಿದು ಕುಪ್ಪಳಿಸಿದ್ದಾರೆ. ನಮ್ಮ ನೆಲದ ಜನಪದ ಕಲೆಗಳನ್ನು ವಿದೇಶದಲ್ಲಿ ಚಿತ್ರೀಕರಿಸುವುದೇ ಒಂದು ಸೊಗಸು. ಹೀಗಾಗಿ ಇಲ್ಲಿಂದಲೇ ಕಾಸ್ಟ್ಯೂಮ್ ಹಾಗೂ ನಾಲ್ವರು ನೃತ್ಯಗಾರರರನ್ನು ಕರೆದುಕೊಂಡು ಹೋಗಿದ್ದೆವು. ಎಂದು ವಿವರ ಹಂಚಿಕೊಂಡಿದ್ಧಾರೆ ಕ್ರಿಯೇಟಿವ್ ಹೆಡ್ ತರುಣ್ ಸುಧೀರ್. ರಷ್ಯಾದ ಬಾಕು ಎಂಬಲ್ಲಿ ಈ ಹಾಡು ಚಿತ್ರೀಕರಿಸಲಾಗಿದೆ. ತರುಣ್ ಶಿವಪ್ಪ ನಿರ್ಮಾಣದ ಚಿತ್ರಕ್ಕೆ, ಸಂತು ನಿರ್ದೇಶನವಿದೆ.

 • ರಾಗಿಣಿಗಾಗಿ ಅಮೆರಿಕಕ್ಕೆ ಸೇಲ್ ಆದ ಅಧ್ಯಕ್ಷ

  adhyaksha in america song

  ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಹಾಡೊಂದು ಹೊರಬಿದ್ದಿದೆ. ಅಮ್ಮ ನಾ ಸೇಲಾದೆ.. ಅಮೆರಿಕ ಪಾಲಾದೆ ಅನ್ನೋ.. ಹಾಡು. ಇದು ಕಾಶೀನಾಥ್ ಅವರ ಚಿತ್ರದ ಹಿಟ್ ಸಾಂಗ್‍ನ ತುಣುಕು. ಆದರೆ, ಅಧ್ಯಕ್ಷ ಇನ್ ಅಮೆರಿಕದಲ್ಲಿ ಅದೊಂದು ಸಾಲನ್ನಷ್ಟೇ ಎತ್ತಿಕೊಂಡು ಹೊಸ ಹಾಡನ್ನೇ ಸೃಷ್ಟಿಸಲಾಗಿದೆ. ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಹೊಸದೇ ಹಾಡು ಸೃಷ್ಟಿಯಾಗಿದ್ದು, ಹಾಡು ಶಿಳ್ಳೆ ಹೊಡೆಯುವಂತಿದೆ.

  ರಾಗಿಣಿಯ ಚೆಲುವಿಗೆ ಮಾರು ಹೋಗಿ ಅವರ ಹಿಂದೆ ಬೀಳೋ ತುಂಟನಾಗಿ ಹುಚ್ಚೆದ್ದು ಕುಣಿದಿದ್ದಾರೆ ಶರಣ್. ಶರಣ್ ಚಿತ್ರಕ್ಕೆ ವಿ. ಹರಿಕೃಷ್ಣ ಇದೇ ಮೊದಲ ಬಾರಿಗೆ ಸಂಗೀತ ಕೊಟ್ಟಿದ್ದಾರೆ. ಯೋಗಾನಂದ್ ಮದ್ದಾನ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ ಇದು. ವಿಶ್ವಪ್ರಸಾದ್ ಚಿತ್ರದ ನಿರ್ಮಾಪಕ. ಬಹುತೇಕ ಅಮೆರಿಕದಲ್ಲಿಯೇ ಚಿತ್ರೀಕರಣವಾಗಿರುವ ಸಿನಿಮಾದ ಹಾಡು, ಟ್ರೆಂಡ್ ಆಗಿದೆ.

 • ರಾಜ್ ವಿಷ್ಣುನಲ್ಲಿ ಸಾಧು ಮಹಾರಾಜ್ ಅವತಾರವೇ ಡಿಫರೆಂಟು..!

  raj vishnu

  ಸಿನಿಮಾ ಯಾವುದೇ ಇರಲಿ, ಸಾಧು ಕೋಕಿಲ ಕಾಣಿಸಿಕೊಂಡರೆ ಸಾಕು, ಶಿಳ್ಳೆ ಹೊಡೆಯೋ ಅಭಿಮಾನಿಗಳಿಗೆ ಬರವಿಲ್ಲ. ಸಾಧು ಮಹಾರಾಜ್ ಅನ್ನೋದು ಅದ್ಯಾವ ಸಿನಿಮಾದಲ್ಲಿ ಪ್ರಸ್ತಾಪವಾಯಿತೋ ಗೊತ್ತಿಲ್ಲ, ಈಗಂತೂ ಅಭಿಮಾನಿಗಳು ಅವರನ್ನು ಕರೆಯೋದೇ ಸಾಧು ಮಹಾರಾಜ್ ಅಂತಾ. ಇತ್ತೀಚೆಗಂತೂ ಸಾಧು ಕೋಕಿಲಾಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಇಂಥ ಸಾಧು ಕೋಕಿಲಾ ರಾಜ್ ವಿಷ್ಣು ಚಿತ್ರದಲ್ಲಿ ನಾಲ್ಕು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ರಾಜ್ ವಿಷ್ಣು ಚಿತ್ರದಲ್ಲಿ ಸಾಧು ಜ್ಯೋತಿಷ್ಯ ಹೇಳ್ತಾರೆ.. ಐಸ್‍ಕ್ರೀಂ ಮಾರ್ತಾರೆ.. ತಮಟೆ ಹೊಡೀತಾರೆ.. & ವಾಗಾಬಾಂಡ್. ಅದೊಂಥರಾ ಬೇರೆಯೇ ಎಕ್ಸ್‍ಪೀರಿಯನ್ಸ್ ಅಂತಾರೆ ಡೈರೆಕ್ಟರ್ ಮಾದೇಶ್. ಅಷ್ಟೂ ಪಾತ್ರಗಳಲ್ಲಿ ಸಾಧು ಅಭಿನಯ, ಒಂದನ್ನೊಂದು ಮೀರಿಸುವ ಹಾಗಿದೆ. ಚಿತ್ರದಲ್ಲಿ ಅದು ತುಂಬಾನೇ ಮುಖ್ಯ ಪಾತ್ರ ಎನ್ನುವ ಮಾತು ಚಿತ್ರ ತಂಡದಲ್ಲಿದೆ.

  ಶರಣ್ ಮತ್ತು ಚಿಕ್ಕಣ್ಣ ಮುಖ್ಯ ಪಾತ್ರದಲ್ಲಿರುವ ಸಿನಿಮಾದಲ್ಲಿ, ಶ್ರೀ ಮುರಳಿ ಅತಿಥಿ ನಟರಾಗಿದ್ದಾರೆ. ಇನ್ನು ಸಾಧು ಕೋಕಿಲ 4 ಅವತಾರಗಳಲ್ಲಿದ್ದಾರೆ ಎಂದರೆ ಅಭಿಮಾನಿಗಳ ನಿರೀಕ್ಷೆಯೂ 

 • ಲಡ್ಡು ಕಾಣಿಕೆ ಗುರು ಶಿಷ್ಯರು..!

  ಲಡ್ಡು ಕಾಣಿಕೆ ಗುರು ಶಿಷ್ಯರು..!

  ಗುರು ಶಿಷ್ಯರು. ಈ ಹೆಸರು ಕೇಳಿದರೆ ಸಾಕು, ಕನ್ನಡದ ಕ್ಲಾಸಿಕ್ ಸಿನಿಮಾ ನೆನಪಾಗುತ್ತೆ. ವಿಷ್ಣುವರ್ಧನ್, ಮಂಜುಳಾ, ದ್ವಾರಕೀಶ್ ಅಭಿನಯದ ಸಿನಿಮಾ. ದೊಡ್ಡವರೆಲ್ಲ ಜಾಣರಲ್ಲ ಹಾಡು, ಪೆದ್ದು ಶಿಷ್ಯರ ತರಲೆ ಆಟ.. ಎಲ್ಲವೂ ಈಗಲೂ ನಗು ಬರಿಸುತ್ತವೆ. ಅದೇ ಟೈಟಲ್ ಈಗ ಮತ್ತೊಮ್ಮೆ ಸಿನಿಮಾ ಆಗುತ್ತಿದೆ.

  ಇತ್ತೀಚೆಗೆ ಡಿ.21ಕ್ಕೆ ಲಡ್ಡು ಕೊಡ್ತೇನೆ ಎಂದು ವಿಜಿಲ್ ಊದಿದ್ದ ತರುಣ್ ಸುಧೀರ್ ಮತ್ತು ಶರಣ್ ಊದಿರುವ ವಿಜಲ್ ಇದು, ಗುರು ಶಿಷ್ಯರು. ಇದು ಲಡ್ಡು ಬ್ಯಾನರ್‍ನ ಹೊಸ ಸಿನಿಮಾ.

  ತರುಣ್ ಮತ್ತು ಶರಣ್ ನಿರ್ಮಾಪಕರಾಗಿರುವ ಚಿತ್ರಕ್ಕೆ ಶರಣ್ ಅವರೇ ಹೀರೋ. ಜಡೇಶ್ ಕುಮಾರ್ ಹಂಪಿ ನಿರ್ದೇಶಕ. ಜಂಟಲ್‍ಮನ್ ಮತ್ತು ರಾಜಹಂಸ ಚಿತ್ರಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಜಡೇಶ್, ಈ ಬಾರಿ ಕಾಮಿಡಿ ಸಬ್ಜೆಕ್ಟ್‍ಗೆ ಕೈ ಹಾಕಿದ್ದಾರೆ.

 • ವಿಕ್ಟರಿ 2ಗೆ ಧ್ರುವ ಸರ್ಜಾ ಎಂಟ್ರಿ..

  dhruva sarja lends voice to victory 2

  ವಿಕ್ಟರಿ 2 ಚಿತ್ರ ತಂಡಕ್ಕೆ ಧ್ರುವ ಸರ್ಜಾ ಸೇರ್ಪಡೆಯಾಗಿದ್ದಾರೆ. ನಟನಾಗಿ ಅಲ್ಲ, ಕಂಠದಾನ ಕಲಾವಿದನಾಗಿ. ಶರಣ್ ಅಭಿನಯದ ವಿಕ್ಟರಿ2 ಸಿನಿಮಾದ ಪಾತ್ರಧಾರಿಗಳನ್ನು ಹಿನ್ನೆಲೆಯಲ್ಲಿ ಪರಿಚಯಿಸುವುದು ಧ್ರುವ ಸರ್ಜಾ. ಕೆಲವು ದೃಶ್ಯಗಳ ಹಿನ್ನೆಲೆಗೂ ಧ್ರುವ ಸರ್ಜಾ ವಾಯ್ಸ್ ಓವರ್ ನೀಡಲಿದ್ದಾರೆ.

  ಶರಣ್ ಜೊತೆ ಅಪೂರ್ವ, ಅಸ್ಮಿತಾ ಸೂದ್ ಜೋಡಿಯಾಗಿ ನಟಿಸುತ್ತಿದ್ದಾರೆ. ರವಿಶಂಕರ್, ತಬಲಾ ನಾಣಿ, ಸಾಧು ಕೋಕಿಲ, ಪ್ರಶಾಂತ್ ಸಿದ್ಧಿ ಮೊದಲಾದವರ ದೊಡ್ಡ ತಂಡವೇ ಚಿತ್ರದಲ್ಲಿದೆ. ಹರಿ ಸಂತೋಷ್ ನಿರ್ದೇಶನದ ಚಿತ್ರಕ್ಕೆ ತರುಣ್ ಶಿವಪ್ಪ ನಿರ್ಮಾಪಕ.

 • ವಿಕ್ಟರಿ 2ನಲ್ಲಿ ಶರಣ್ 4..!

  sharan to play 4 roles in victory 2

  ಶರಣ್ ಅಭಿನಯದ ವಿಕ್ಟರಿ 2 ಚಿತ್ರದಲ್ಲಿ ಶರಣ್ ಹೀರೋ ಎನ್ನುವುದರಲ್ಲೇನೂ ಡೌಟಿಲ್ಲ. ಆದರೆ, ಅವರ ಪಾತ್ರ ಯಾವುದು..? ಅದೇ ದೊಡ್ಡ ಸಸ್ಪೆನ್ಸ್. ಚಿತ್ರದಲ್ಲಿ ಶರಣ್, 4 ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ವಿಕ್ಟರಿಯಲ್ಲಿ ಡಬಲ್ ಆಕ್ಟಿಂಗ್ ಮಾಡಿದ್ದ ಶರಣ್, ಈ ಚಿತ್ರದಲ್ಲಿ 4 ಪಾತ್ರಗಳಲ್ಲಿ ಮಿಂಚಲಿದ್ದಾರೆ.

  ರಾಜಕಾರಣಿಯಾಗಿ, ತರಲೆ ಯುವಕನಾಗಿ, ಹುಡುಗಿಯಾಗಿ, ಬ್ಯುಸಿನೆಸ್‍ಮ್ಯಾನ್ ಆಗಿ ಮಿಂಚಲಿದ್ದಾರೆ ಶರಣ್. ಒಂದೊಂದು ಪಾತ್ರಕ್ಕೂ ಒಂದೊಂದು ಹೆಸರೂ ಇದೆ. ಅಸ್ಮಿತಾ ಸೂದ್ ಮತ್ತು ಅಪೂರ್ವ ಚಿತ್ರಕ್ಕೆ ನಾಯಕಿಯರು. ಕಾಮಿಡಿ ಕಿಕ್ ಹೆಚ್ಚಿಸೋಕೆ ರವಿಶಂಕರ್ ಮತ್ತು ಸಾಧುಕೋಕಿಲ ಇಬ್ಬರೂ ಇದ್ದಾರೆ. 

  ಹರಿ ಸಂತೋಷ್ ನಿರ್ದೇಶನದ ಚಿತ್ರಕ್ಕೆ ತರುಣ್ ಶಿವಪ್ಪ ನಿರ್ಮಾಪಕ. ನಾಳೆ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

 • ವಿಕ್ಟರಿ-2 ಟೀಂ ಜೊತೆ ಚಾಲೆಂಜಿಂಗ್ ಸ್ಟಾರ್

  darshan visits victory 2

  ರ್ಯಾಂಬೋ 2 ಸಕ್ಸಸ್ ಖುಷಿಯಲ್ಲಿರುವ ಶರಣ್, ವಿಕ್ಟರಿ2ಗೆ ದೊಡ್ಡ ಮಟ್ಟದಲ್ಲಿ ರೆಡಿಯಾಗುತ್ತಿದ್ದಾರೆ. ಒನ್ಸ್ ಎಗೇಯ್ನ್, ಕಾಮಿಡಿ ಸಬ್ಜೆಕ್ಟ್. ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದೆ. ಬೆಂಗಳೂರಿನ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿರುವಾಗ ಶರಣ್ ಟೀಂಗೆ ದೊಡ್ಡ ಸರ್‍ಪ್ರೈಸ್ ಕೊಟ್ಟಿದ್ದಾರೆ ದರ್ಶನ್.

  ಚಿತ್ರದ ಶೂಟಿಂಗ್ ಸೆಟ್‍ಗೆ ಭೇಟಿ ಕೊಟ್ಟಿರೋ ದರ್ಶನ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.  ಕಾರಣ ಇಷ್ಟೇ, ದರ್ಶನ್ ಅವರ ಯಜಮಾನ ಚಿತ್ರದ ಶೂಟಿಂಗ್ ಕೂಡಾ ಅಲ್ಲಿಯೇ ನಡೆಯುತ್ತಿತ್ತು. ಶೂಟಿಂಗ್ ಮಧ್ಯೆಯೇ ವಿಕ್ಟರಿ 2 ತಂಡದ ಶೂಟಿಂಗ್ ಬಗ್ಗೆ ತಿಳಿದುಕೊಂಡ ದರ್ಶನ್, ತಕ್ಷಣ ವಿಕ್ಟರಿ ಸೆಟ್‍ಗೆ ಭೇಟಿ ಕೊಟ್ಟು ಸರ್‍ಪ್ರೆಸ್ ಕೊಟ್ಟಿದ್ಧಾರೆ.

  ದರ್ಶನ್ ಆಗಮನ ಸಹಜವಾಗಿಯೇ ವಿಕ್ಟರಿ2 ತಂಡದ ಖುಷಿ ಹೆಚ್ಚಿಸಿದೆ. ಶರಣ್ ನಾಯಕರಾಗಿರುವ ವಿಕ್ಟರಿ 2 ಸಿನಿಮಾಗೆ ತರುಣ್ ಶಿವಪ್ಪ ನಿರ್ಮಾಪಕ. ರವಿಶಂಕರ್ ಕೂಡಾ ಪ್ರಮುಖ ಪಾತ್ರದಲ್ಲಿರೋ ಚಿತ್ರಕ್ಕೆ ಸಂತು ನಿರ್ದೇಶಕ. ವಿಕ್ಟರಿ 2 ಸಿನಿಮಾ ನವೆಂಬರ್ 1ಕ್ಕೆ ರಿಲೀಸ್ ಆಗಲಿದೆ.

 • ಶರಣ್ ಅವತಾರಗಳಿಗೆ ಪ್ರೇಕ್ಷಕರ ಪ್ರೇಮ ದಿಗ್ಬಂಧನ

  ಶರಣ್ ಅವತಾರಗಳಿಗೆ ಪ್ರೇಕ್ಷಕರ ಪ್ರೇಮ ದಿಗ್ಬಂಧನ

  ತಮ್ಮ ರೆಗ್ಯುಲರ್ ಜಾನರ್ ಬಿಟ್ಟು ಬಂದ ಸಿಂಪಲ್ ಸುನಿ, ಅವತಾರ ಪುರುಷ ಅಷ್ಟದಿಗ್ಬಂಧನ ಮಂಡಲಕ ಸಿನಿಮ ಮೂಲಕವೂ ಗೆದ್ದಿದ್ದಾರೆ. ಸುನಿ ಶರಣ್ ಅವರನ್ನಿಟ್ಟುಕೊಂಡು ನಾನಾ ಬಗೆಯ ಅವತಾರ ಮಾಡಿಸಿ ನಕ್ಕು ನಲಿಸಿ, ಕುತೂಹಲ ಹುಟ್ಟಿಸಿ ಭಯಾನಕತೆ ಸೃಷ್ಟಿಸಿ ಪ್ರೇಕ್ಷಕರ ಹೃದಯ ಕದ್ದಿದ್ದಾರೆ.

  ಚಿಕ್ಕಂದಿನಲ್ಲಿ ತಪ್ಪಿಸಿಕೊಂಡು ಹೋದ ಮಗನ ಅವತಾರದಲ್ಲಿ ಬರುವ ಓವರ್ ಆಕ್ಟಿಂಗ್ ಸುನಿಲ ಕರ್ಣನಾಗುತ್ತಾನೆ. 500 ರುಪಾಯ್ ಕೊಟ್ರೆ ಮಗನಾಗ್ತಾನೆ. 1000 ರುಪಾಯ್ ಕೊಟ್ರೆ ಕಳ್‍ನನ್ ಮಗನೂ ಆಗ್ತಾನೆ ಎಂದು ಪರಿಚಯ ಮಾಡಿಸಿದಾಗ ಇವನೇ ಬೇಕು ಎಂದು ಖುಷಿಯಾಗುವ ಅಶಿಕಾ ರಂಗನಾಥ್ ನಗೆಯ ಲಡ್ಡುವನ್ನು ಬಾಯಲ್ಲೇ ಇಡ್ತಾರೆ. ಶರಣ್ ಪಾತ್ರದ ಟ್ವಿಸ್ಟು ಮತ್ತು ಶ್ರೀನಗರ ಕಿಟ್ಟಿಯ ಸಸ್ಪೆನ್ಸ್ ಎಂಟ್ರಿಯೊಂದಿಗೆ ಅಷ್ಟಮಂಡಲ ದಿಗ್ಬಂದನ ಮಂಡಲಕ ಮುಗಿದಿದೆ. ಪ್ರೇಕ್ಷಕರು ಖುಷ್ ಹುವಾ..

 • ಶರಣ್ ಇದ್ರೆ ರಾಗಿಣಿ ಅದೊಂದನ್ನು ತೆಗೆದಿಟ್ಟು ಬರ್ತಾರೆ..!

  ragini always takes care of her slipper while she is with ragini

  ರಾಗಿಣಿ ದ್ವಿವೇದಿ, ತುಪ್ಪದ ಹುಡುಗಿ. ಕೆಲವು ವರ್ಷಗಳ ಹಿಂದೆ ಅಧ್ಯಕ್ಷ ಶರಣ್‍ಗೆ ಅಕ್ಕನ ಮಗಳಾಗಿದ್ದ ರಾಗಿಣಿ,  ಈಗ ಅಧ್ಯಕ್ಷ ಅಮೆರಿಕಕ್ಕೆ ಹೋಗಿದ್ದೇ ತಡ.. ಜೊತೆಗಾತಿಯಾಗಿದ್ದಾರೆ. ರಾಗಿಣಿಗೆ ಹೋಲಿಸಿದ್ರೆ.. ಶರಣ್ ಕುಳ್ಳ. ಹೀಗಾಗಿ ರಾಗಿಣಿ, ಶರಣ್ ಇದ್ರೆ ಹೈ ಹೀಲ್ಡ್ ತೆಗೆದಿಟ್ಟು ಬರ್ತಾರಂತೆ.

  ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಸುದ್ದಿಗೋಷ್ಟಿಯಲ್ಲೂ ಅಷ್ಟೆ, ಹೈ ಹೀಲ್ಡ್‍ನ್ನೇ ಹಾಕಿಕೊಂಡು ಬಂದಿದ್ದವರಿಗೆ ತಕ್ಷಣ ಶರಣ್ ಇರುವುದು ನೆನಪಾಗಿ ಹೈಹೀಲ್ಡ್ ಬಿಚ್ಚಿಟ್ಟರಂತೆ.

  ಶರಣ್ ಅವರದ್ದು ಟ್ಯಾಲೆಂಟ್ ಪವರ್ ಹೌಸ್ ಎನ್ನುವ ರಾಗಿಣಿ, ನನ್ನ ಅವರ ಸ್ನೇಹ 10 ವರ್ಷಕ್ಕೂ ಹೆಚ್ಚು ಹಳೆಯದು. ನನ್ನ ಕೆರಿಯರ್‍ನಲ್ಲೇ ಫಸ್ಟ್ ಟೈಂ ಕಾಮಿಡಿ ಮಾಡಿದ್ದೇನೆ. ಚೆನ್ನಾಗಿ ಬಂದಿದೆ ಎನ್ನುವುದು ನನ್ನ ನಂಬಿಕೆ. ಉಳಿದದ್ದು ಪ್ರೇಕ್ಷಕರು ಹೇಳಬೇಕು ಎನ್ನುತ್ತಾರೆ.

  ಅಧ್ಯಕ್ಷ ಇನ್ ಅಮೆರಿಕ ಅಕ್ಟೋಬರ್ ಮೊದಲ ವಾರ ರಿಲೀಸ್ ಆಗುತ್ತಿದೆ. ಯೋಗಾನಂದ್ ಮುದ್ದಾನ್ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ವಿಶ್ವಪ್ರಸಾದ್ ನಿರ್ಮಾಪಕ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery