` rachita ram - chitraloka.com | Kannada Movie News, Reviews | Image

rachita ram

 • ಸೆಕೆಂಡ್ ಶೋನ ಟೈಮಲ್ಲಿ ನಟಸಾರ್ವಭೌಮ ಫಸ್ಟ್ ಶೋ

  natasarvabhouma released last night itself

  ನಟಸಾರ್ವಭೌಮ ಸಿನಿಮಾ, ನಿನ್ನೆ ರಾತ್ರಿಯೇ ರಿಲೀಸ್ ಆಗಿಬಿಟ್ಟಿದೆ. ಹೌದು, 7ನೇ ತಾರೀಕು ಅಂದರೆ ಇವತ್ತು ರಿಲೀಸ್ ಆಗಬೇಕಿದ್ದ ಸಿನಿಮಾವನ್ನು 6ನೇ ತಾರೀಕು ಪ್ರದರ್ಶನವಾಗುವಂತೆ ಮಾಡಿರೋದು ಅಪ್ಪು ಫ್ಯಾನ್ಸ್.

  ದೇವರು ಭಕ್ತರ ಎದುರು ಶರಣಾಗುವಂತೆ ಅಪ್ಪು ಅಭಿಮಾನಿಗಳ ಎದುರು ರಾಕ್‍ಲೈನ್ ಶರಣಾಗಿದ್ದಾರೆ. ಹೀಗಾಗಿ ರಾತ್ರಿ 10.30ಕ್ಕೆ ಪ್ರಸನ್ನ ಥಿಯೇಟರ್‍ನಲ್ಲಿ ಮೊದಲ ಶೋ ಪ್ರದರ್ಶನಗೊಂಡಿದೆ. 

  ಇನ್ನು ಶ್ರೀನಿವಾಸ, ಊರ್ವಶಿ ಹಾಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಧ್ಯರಾತ್ರಿಯೇ ನಟಸಾರ್ವಭೌಮನಿಗೆ ಉಘೇ ಉಘೇ ಎಂದಿದ್ದಾರೆ ಪ್ರೇಕ್ಷಕರು. ಅಪ್ಪು ಜೊತೆ ರಚಿತಾ ರಾಮ್, ಅನುಪಮಾ ಜೋಡಿ ಮೋಡಿಯನ್ನೇ ಮಾಡುತ್ತಿದೆ. ಪವನ್ ಒಡೆಯರ್ ಮತ್ತೊಮ್ಮೆ ಗೆದ್ದಿದ್ದಾರೆ.

 • ಸ್ಸಾರಿ ಪಪ್ಪಾ.. ಇನ್ಮುಂದೆ ತಪ್ಪು ಮಾಡಲ್ಲ - ಕಣ್ಣೀರಿಟ್ಟ ರಚಿತಾ ರಾಮ್

  rachita ram cries over her role in i love you

  ಡಿಂಪಲ್ ಕ್ವೀನ್ ರಚಿತಾ ರಾಮ್ ಕಣ್ಣೀರಿಟ್ಟಿದ್ದಾರೆ. ಅದೂ ಮಾಧ್ಯಮವೊಂದರ ಸಂದರ್ಶನದಲ್ಲಿ. ಸದಾ ನಗುವಿಗೆ ಹೆಸರಾದ ಡಿಂಪಲ್ ಕ್ವೀನ್ ಅಪ್ಪನ ಕ್ಷಮೆ ಕೇಳಿ ಕಣ್ಣೀರಿಟ್ಟಿದ್ದಾರೆ. ಅವರ ಕಣ್ಣೀರಿಗೆ ಕಾರಣ ಐ ಲವ್ ಯೂ ಸಿನಿಮಾ ಹಾಗೂ ಆ ಬೋಲ್ಡ್ ದೃಶ್ಯಗಳು.

  ರಚಿತಾ ಅವರ ತಾಯಿ, ಅಕ್ಕ ಸಿನಿಮಾ ನೋಡಿ ಮೆಚ್ಚಿಕೊಂಡರೂ ರಚಿತಾ ಅವರ ತಂದೆ ಸಿನಿಮಾ ನೋಡಿಲ್ಲವಂತೆ. ಅದಕ್ಕೆ ಕಾರಣ ಇಷ್ಟೆ, ರಚಿತಾ ರಾಮ್‍ನನ್ನು ಹೀರೋಯಿನ್ ಆಗಿ ಹಾಗೆ ನೋಡಬಹುದೇನೋ.. ಆದರೆ, ಒಬ್ಬ ತಂದೆಯಾಗಿ ಹಾಗೆ ನೋಡಲು ಸಾಧ್ಯವಿಲ್ಲ ಎಂದಿದ್ದಾರಂತೆ ರಚಿತಾ ಅವರ ತಂದೆ. ಇನ್ನು ಮುಂದೆ ಹಾಗೆ ಮಾಡಲ್ಲ ಎಂದಿರುವ ರಚಿತಾ ರಾಮ್‍ಗೆ, ಅಪ್ಪ ಒಂದು ಮಾತು ಹೇಳಿದ್ರಂತೆ.

  ನೀನು ಸಿನಿಮಾ ಇಂಡಸ್ಟ್ರಿಗೆ ರಚಿತಾ ರಾಮ್ ಇರಬಹುದು. ನನಗೆ ಪುಟ್ಟ ಮಗು ಎಂದರಂತೆ. ಅದನ್ನು ನೆನಪಿಸಿಕೊಂಡು ಕಣ್ಣೀರಿಟ್ಟು ಕ್ಷಮೆ ಕೇಳಿದ್ದಾರೆ ರಚಿತಾ ರಾಮ್.

  ಇದೆಲ್ಲದರ ನಡುವೆಯೂ ಐ ಲವ್ ಯೂ ಸಿನಿಮಾ ಬಾಕ್ಸಾಫೀಸ್‍ನಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಸೂಪರ್ ಹಿಟ್ ಸಾಲಿಗೆ ಸೇರಿದೆ.

 • ಹೀರೋ ಪ್ರೊಡ್ಯೂಸರ್ ಆಮೇಲೆ ಸರಿ ಹೋಗ್ತಾರೆ : ರಚಿತಾ ರಾಮ್

  ಹೀರೋ ಪ್ರೊಡ್ಯೂಸರ್ ಆಮೇಲೆ ಸರಿ ಹೋಗ್ತಾರೆ : ರಚಿತಾ ರಾಮ್

  ಲವ್ ಯೂ ರಚ್ಚು ಸಿನಿಮಾ ರಿಲೀಸ್ ಹತ್ತಿರವಾಗುತ್ತಿದೆ. ಮುಂದಿನ ವಾರ ರಿಲೀಸ್ ಆಗ್ತಿರೋ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಮತ್ತು ನಾಯಕ ನಟ ಅಜಯ್ ರಾವ್ ಮಧ್ಯೆ ಮನಸ್ತಾಪ ಶುರುವಾಗಿದೆ. ಯಾವ ವಿಷಯಕ್ಕೆ ಅನ್ನೋದನ್ನ ಇಬ್ಬರೂ ಹೇಳ್ತಿಲ್ಲ. ಮನಸ್ತಾಪ ಇರೋದು ನಿಜ. ಪ್ರೊಡ್ಯೂಸರ್ ಮತ್ತು ಚಿತ್ರತಂಡದ ಜೊತೆ ನನಗೆ ಇಷ್ಟ ಇಲ್ಲ, ನಾನೇ ಸಿಂಗಲ್ ಆಗಿ ಪ್ರಚಾರ ಮಾಡ್ತೀನಿ ಅಂದಿರೋದು ಅಜಯ್ ರಾವ್. ಕುಳಿತು ಮಾತನಾಡಿದರೆ ಸರಿ ಹೋಗುತ್ತೆ. ಆದರೆ ಅಜಯ್ ರಾವ್ ಬರ್ತಿಲ್ಲ ಅನ್ನೋದು ಗುರು ದೇಶಪಾಂಡೆ ವಾದ. ಯಾರ ವಾದ ಸರಿ ಅಂದ್ರೆ ರಚ್ಚು ಹೇಳೊದೇ ಬೇರೆ.

  ನಾನು ಇಬ್ಬರಲ್ಲಿ ಯಾರ ಪರವೂ ಇಲ್ಲ. ಅವರ ಮಾತು ಕೇಳಿದರೆ ಅವರು ಸರಿ ಅನ್ನಿಸುತ್ತೆ. ಇವರ ಮಾತು ಕೇಳಿದರೆ ಇವರ ಮಾತು ಸರಿ ಅನ್ನಿಸುತ್ತೆ. ಇಬ್ಬರ ಜಗಳದಲ್ಲಿ 3ನೇಯವರು ಎಂಟ್ರಿಯಾಗೋದೇ ತಪ್ಪು. ಅದು ಸರಿ ಹೋಗುತ್ತೆ. ಸ್ವಲ್ಪ ಟೈಂ ಬೇಕಾಗುತ್ತೆ. ಅವರಿಬ್ಬರ ಜಗಳಕ್ಕೆ ಪರ್ಸನಲ್ ರೀಸನಲ್ ಇಲ್ಲ. ಸಿನಿಮಾನೇ ಕಾರಣ. ಸಿನಿಮಾ ಸಕ್ಸಸ್ ಆದರೆ ಇಬ್ಬರೂ ಸರಿ ಹೋಗ್ತಾರೆ ಅನ್ನೋದು ರಚಿತಾ ರಾಮ್ ಮಾತು.

 • ಹೀರೋ..ಹೀರೋಯಿನ್ ಬಿಡಿ. ಸಿನಿಮಾ ಚೆನ್ನಾಗಿದೆ : ರಚ್ಚು ನಿರ್ಮಾಪಕ ಗುರು ದೇಶಪಾಂಡೆ

  ಹೀರೋ..ಹೀರೋಯಿನ್ ಬಿಡಿ. ಸಿನಿಮಾ ಚೆನ್ನಾಗಿದೆ : ರಚ್ಚು ನಿರ್ಮಾಪಕ ಗುರು ದೇಶಪಾಂಡೆ

  ಲವ್ ಯೂ ರಚ್ಚು ರಿಲೀಸ್ ಆಗಿದೆ. ಪ್ರೇಕ್ಷಕರಿಗೆ ಇಷ್ಟವಾಗಿರೋದು ಚಿತ್ರದ ಕಥೆ. ರೊಮ್ಯಾಂಟಿಕ್ ಥ್ರಿಲ್ಲರ್ ಜಾನರ್‍ನ ಕಥೆ ಕಡೆಯ ಕ್ಷಣದವರೆಗೂ ಥ್ರಿಲ್ಲಿಂಗ್ ಕೊಟ್ಟಿದೆ. ಎಲ್ಲಿಯೂ ನಿಲ್ಲದೆ ಕ್ಷಣ ಕ್ಷಣವೂ ವೇಗವಾಗಿ ಓಡುತ್ತಲೇ ಹೋಗುವ ಲವ್ ಯೂ ರಚ್ಚು ಆರಂಭದಿಂದ ಒಂದಿಷ್ಟು ವಿವಾದಕ್ಕೆ ಸಿಲುಕಿತ್ತು. ಸಿನಿಮಾ ರಿಲೀಸ್ ಆದ ದಿನವೂ ಅದು ಬಿಡಲಿಲ್ಲ. ಪ್ರೇಕ್ಷರ ರೆಸ್ಪಾನ್ಸ್ ತಿಳಿಯಲು ಥಿಯೇಟರಿಗೆ ಬಂದ ಚಿತ್ರತಂಡದ ಜೊತೆ ನಾಯಕ ಅಜಯ್ ರಾವ್ ಅವರಾಗಲೀ, ನಾಯಕಿ ರಚಿತಾ ರಾಮ್ ಅವರಾಗಲಿ ಇರಲಿಲ್ಲ.

  ಅವರ ಬಗ್ಗೆಯೇ ಎಷ್ಟು ಕೇಳ್ತೀರಿ. ಚಿತ್ರ ತಂಡದವರೆಲ್ಲ ಇಲ್ಲೇ ಇದ್ದಾರೆ. ನಿರ್ಮಾಪಕನಾದ ನಾನು, ನಿರ್ದೇಶಕರು, ಆರುಗೌಡ, ಸಂಗೀತ ನಿರ್ದೇಶಕರು.. ಎಲ್ಲರೂ ಇದ್ದಾರೆ. ನಾನು ಒಳ್ಳೆಯದು ಮಾಡಿದ್ದೇನೆ. ಒಳ್ಳೆಯದೇ ಆಗುತ್ತೆ ಎಂದಿದ್ದಾರೆ ನಿರ್ಮಾಪಕ ಗುರು ದೇಶಪಾಂಡೆ.

 • ಹುಬ್ಬಳ್ಳಿಯಲ್ಲಿಂದು ನಟಸಾರ್ವಭೌಮ ಬರೋದು ಗ್ಯಾರಂಟಿ

  puneeth at natasarvabhouma audio launch in hubbali

  ಐಟಿ ದಾಳಿ ಹಿನ್ನೆಲೆಯಲ್ಲಿ ಪುನೀತ್ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್, ಹುಬ್ಬಳ್ಳಿಗೆ ಬರುತ್ತಾರೋ ಇಲ್ಲವೋ.. ನಟಸಾರ್ವಭೌಮ ಆಡಿಯೋ ರಿಲೀಸ್ ಆಗುತ್ತೋ.. ಇಲ್ಲವೋ ಎಂಬ ಎಲ್ಲ ಗೊಂದಲಗಳಿಗೆ ಈಗ ತೆರೆ ಬಿದ್ದಿದೆ. ಪುನೀತ್ ರಾಜ್‍ಕುಮಾರ್ ಮನೆಯಲ್ಲಿ ಗುರುವಾರ ಬೆಳಗ್ಗೆ ಶುರುವಾದ ಐಟಿ ತನಿಖೆ, ಶುಕ್ರವಾರ ರಾತ್ರಿ ಮುಗಿದಿದೆ. ಎಲ್ಲ ತನಿಖೆ, ವಿಚಾರಣೆ ಮುಗಿದ ಮೇಲೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪುನೀತ್ ರಾಜ್‍ಕುಮಾರ್, ತನಿಖೆಗೆ ಎಲ್ಲ ಸಹಕಾರ ನೀಡಿದ್ದೇವೆ. ಅವರ ಕರ್ತವ್ಯ ಅವರು ಮಾಡಿದ್ದಾರೆ ಎಂದಿದ್ದಾರೆ.

  ಇಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ನಟಸಾರ್ವಭೌಮ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಹೋಗುವುದಾಗಿಯೂ ಹೇಳಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಪುನೀತ್ ಜೊತೆ ಯುವರಾಜ್ ಕುಮಾರ್ ಕೂಡಾ ಸ್ಟೆಪ್ ಹಾಕಲಿದ್ದಾರೆ. ಪವನ್ ಒಡೆಯರ್ ಈಗಾಗಲೇ ತಮ್ಮ ದೊಡ್ಡ ತಂಡದ ಜೊತೆ ಹುಬ್ಬಳ್ಳಿ ತಲುಪಿದ್ದಾರೆ. ರಾಕ್‍ಲೈನ್ ವೆಂಕಟೇಶ್ ಮನೆಯಲ್ಲಿ ಐಟಿ ವಿಚಾರಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಅವರು ಬರುವ ಸಾಧ್ಯತೆ ಇನ್ನೂ ಅನುಮಾನ.

 • ಹ್ಯಾಟ್ರಿಕ್ ಹೀರೋಗೆ ಬುಲ್‍ಬುಲ್ ಜೋಡಿ

  rachita ram in shivanna's next

  ಆರಂಭದಿಂದಲೂ ಸ್ಟಾರ್ ಚಿತ್ರಗಳಿಗೇ ಹೀರೋಯಿನ್ ಆಗುತ್ತಾ ಬಂದಿರೋ ರಚಿತಾ ರಾಮ್, ಈಗ ಕನ್ನಡದ ಸೆಂಚುರಿ ಸ್ಟಾರ್‍ಗೂ ಹೀರೋಯಿನ್ ಆಗುತ್ತಿದ್ದಾರೆ. ದ್ವಾರಕೀಶ್ ಬ್ಯಾನರ್‍ನಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿರುವ ಶಿವರಾಜ್‍ಕುಮಾರ್‍ಗೆ ರಚಿತಾ ರಾಮ್ ನಾಯಕಿ. ಆಪ್ತಮಿತ್ರ, ಆಪ್ತರಕ್ಷಕ, ದೃಶ್ಯಂ, ಶಿವಲಿಂಗ ಖ್ಯಾತಿಯ ಪಿ.ವಾಸು ನಿರ್ದೇಶನದ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.

  ಶಿವರಾಜ್‍ಕುಮಾರ್ ಜೊತೆ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದಾಗ ಅವರ ವ್ಯಕ್ತಿತ್ವ ಅರ್ಥವಾಯಿತು. ಇವರ ಜೊತೆಗೆ ನಟಿಸಲೇಬೇಕು ಎಂದು ನಿರ್ಧರಿಸಿದೆ. ಅದಾದ ಕೆಲವೇ ದಿನಗಳಲ್ಲಿ ರುಸ್ತುಂ ಚಿತ್ರದಲ್ಲಿ ಅವಕಾಶ ಬಂತು. ಈಗ.. ಪಿ.ವಾಸು ನಿರ್ದೇಶನದ ಚಿತ್ರದಲ್ಲಿ ಅವರಿಗೇ ಜೋಡಿಯಾಗಿ ನಟಿಸುತ್ತಿದ್ದೇನೆ. ಹೀಗಾಗಿ ಇದೊಂದು ಸ್ಪೆಷಲ್ ಸಿನಿಮಾ ಎಂದಿದ್ದಾರೆ ರಚಿತಾ ರಾಮ್.

  ವಾಸು ಅವರು ರಚಿತಾ ಅವರಿಗೆ ಚಿತ್ರದ ಕಥೆ ಮತ್ತು ಪಾತ್ರದ ಬಗ್ಗೆ ಹೇಳಿದಾಗ ರಚಿತಾ ಪಾತ್ರದೊಳಗೇ ಜಾರಿಬಿಟ್ಟರಂತೆ. ಮನೆಗೆ ಬಂದು ಎರಡು ಗಂಟೆಯಾದರೂ ಆ ಕಥೆ ಮತ್ತು ಪಾತ್ರದ ಗುಂಗಿನಿಂದ ಹೊರಬರೋಕೆ ಸಾಧ್ಯವಾಗಿರಲಿಲ್ಲ ಅನ್ನೋ ಮೂಲಕ ಚಿತ್ರದ ಕುರಿತು ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದ್ದಾರೆ ರಚಿತಾ ರಾಮ್.