` rachita ram - chitraloka.com | Kannada Movie News, Reviews | Image

rachita ram

 • ರಚಿತಾ ಹೋದ್ರು.. ಅಶಿಕಾ ಬಂದ್ರು..!

  ashika ranganath replaces rachita ram in pc shekar's movie

  ಅಶಿಕಾ ರಂಗನಾಥ್, ಸ್ಯಾಂಡಲ್‍ವುಡ್‍ನ ಮೋಸ್ಟ್ ಡಿಮ್ಯಾಂಡಿಂಗ್ ಹೀರೋಯಿನ್. ಈಗಾಗಲೇ ಕೈತುಂಬಾ ಚಿತ್ರಗಳಿರುವ ಅಶಿಕಾ ರಂಗನಾಥ್, ಮತ್ತೊಂದು ಹೊಸ ಚಿತ್ರಕ್ಕೆ ಸೆಲೆಕ್ಟ್ ಆಗಿದ್ದಾರೆ. ಪಿ.ಸಿ.ಶೇಖರ್ ನಿರ್ದೇಶನದ ಹೊಸ ಗ್ಯಾಂಗ್‍ಸ್ಟರ್ ಚಿತ್ರಕ್ಕೆ ಅಶಿಕಾ ರಂಗನಾಥ್ ಹೀರೋಯಿನ್.

  ಪ್ಲಾನ್ ಪ್ರಕಾರ ಆ ರೋಲ್‍ನಲ್ಲಿ ರಚಿತಾ ರಾಮ್ ನಟಿಸಬೇಕಿತ್ತು.  ಆದರೆ ಡೇಟ್ಸ್ ಸಮಸ್ಯೆಯಿಂದಾಗಿ ರಚಿತಾ ಹಿಂದೆ ಸರಿದಿದ್ದಾರೆ. ಅಶಿಕಾ, ರಚಿತಾ ರಾಮ್ ಜಾಗ ತುಂಬುತ್ತಿದ್ದಾರೆ.

  ನನ್ನ ಚಿತ್ರಕ್ಕೆ ಕಣ್ಣಿನಲ್ಲೇ ಭಾವನೆಗಳನ್ನು ವ್ಯಕ್ತಪಡಿಸಬಲ್ಲ ನಾಯಕಿ ಬೇಕಿತ್ತು. ಅಶಿಕಾ ಆ ರೋಲ್‍ಗೆ ತುಂಬಾ ಚೆನ್ನಾಗಿ ಸೂಟ್ ಆಗುತ್ತಾರೆ. ರಚಿತಾ ರಾಮ್ ಕೂಡಾ ಸೂಟ್ ಆಗುತ್ತಿದ್ದರು. ಆದರೆ, ಡೇಟ್ಸ್ ಮ್ಯಾಚ್ ಆಗಲಿಲ್ಲ ಎನ್ನುವ ಶೇಖರ್, ಅಶಿಕಾ ಪಾತ್ರ ಸವಾಲಿನದ್ದು. ಆ ಪಾತ್ರಕ್ಕೆ ಹೆಚ್ಚು ಡೈಲಾಗ್‍ಗಳಿಲ್ಲ. ಮೌನದಲ್ಲೇ ಮಾತನಾಡಬೇಕು. ಕ್ಯಾರೆಕ್ಟರ್ ಗೊತ್ತಾದ ಮೇಲೂ ಅಶಿಕಾ ಕಾನ್ಫಿಡೆನ್ಸ್‍ನಲ್ಲಿದ್ದಾರೆ ಎನ್ನುತ್ತಾರೆ ಶೇಖರ್.

 • ರಚಿತಾಗೆ ಪ್ರೇಮದ ಗೆಜ್ಜೆ ಕಟ್ಟಿದ ಸತೀಶ್

  ರಚಿತಾಗೆ ಪ್ರೇಮದ ಗೆಜ್ಜೆ ಕಟ್ಟಿದ ಸತೀಶ್

  ಅಯೋಗ್ಯ ಚಿತ್ರದ ನಂತರ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಮತ್ತೊಮ್ಮೆ ಒಂದಾಗಿರುವ ಚಿತ್ರ ಮ್ಯಾಟ್ನಿ. ಪ್ರೇಮಿಗಳ ದಿನಕ್ಕಾಗಿ ಚಿತ್ರದ ಪುಟ್ಟ ಟೀಸರ್ ಬಿಡುಗಡೆಯಾಗಿದ್ದು, ಟೀಸರ್‍ನಲ್ಲಿ ರಚಿತಾಗೆ ಗೆಜ್ಜೆ ಕಟ್ಟಿದ್ದಾರೆ ಸತೀಶ್. ಒಂದು ಪುಟ್ಟ ಕವನದೊಂದಿಗೆ..

  ಪಾರ್ವತಿ ಎಸ್.ಗೌಡ ನಿರ್ಮಾಣದ ಚಿತ್ರಕ್ಕೆ ಮನೋಹರ್ ಕಂಪಳ್ಳಿ ನಿರ್ದೇಶಕರಾಗಿದ್ದಾರೆ. ಈ ರೀತಿ ಕವಿತೆಗಳ ಮೂಲಕ ಕನ್ನಡ ಟೀಸರ್ ಬಿಟ್ಟಿರುವ ರೀತಿಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಟೀಸರ್ ಲವ್ಲಿಯಾಗಿದೆ.

 • ರಚಿತಾನಾ.. ರಶ್ಮಿಕಾನಾ.. ಆಶಿಕಾನಾ.. ಶ್ರೀನಿಧಿನಾ.. ಯಾರು ಮದಗಜ..?

  top 4 heroines and who will pair up wih madagaja

  ಮದಗಜ. ಶ್ರೀಮುರಳಿ, ಅನಿಲ್ ಕುಮಾರ್ ಕಾಂಬಿನೇಷನ್ನಿನ ಸಿನಿಮಾ. ಈ ಚಿತ್ರಕ್ಕೆ ನಾಯಕಿ ಯಾರು ಅಂದ್ರೆ, ನಾಲ್ವರ ಹೆಸರು ಕೇಳಿ ಬರ್ತಿದೆ.

  ಡಿಂಪಲ್ ಕ್ವೀನ್ ರಚಿತಾ ರಾಮ್, ರಥಾವರದಲ್ಲಿ ಶ್ರೀಮುರಳಿಗೆ ಜೋಡಿಯಾಗಿದ್ದವರು. ಅನಿಲ್ ಕುಮಾರ್ ಅವರ ಅಯೋಗ್ಯ ಚಿತ್ರದ ನಾಯಕಿಯೂ ಅವರೇ.

  ರಶ್ಮಿಕಾ ಮಂದಣ್ಣ ಹೆಸರೂ ಮುಂಚೂಣಿಯಲ್ಲಿಯೆ ಇದೆ. 

  ಚುಟು ಚುಟು ಚೆಲುವೆ ಆಶಿಕಾ ರಂಗನಾಥ್ ಕೂಡಾ ಕ್ಯೂನಲ್ಲಿದ್ದಾರೆ.

  ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿಗೂ ಡಿಮ್ಯಾಂಡ್ ಇದೆ.

  `ನಾಲ್ವರ ಜೊತೆಯೂ ಒಂದು ಸುತ್ತಿನ ಮಾತುಕತೆ ನಡೆದಿದೆ. ಶೀಘ್ರದಲ್ಲೇ ಯಾರು ಹೀರೋಯಿನ್ ಅನ್ನೋದನ್ನು ಫೈನಲ್ ಮಾಡ್ತೇವೆ' ಎಂದಿದ್ದಾರೆ ನಿರ್ದೇಶಕ ಅನಿಲ್ ಕುಮಾರ್.

  ಇದು ಹೆಬ್ಬುಲಿ ಉಮಾಪತಿ ನಿರ್ಮಾಣದ ಸಿನಿಮಾ. 

 • ರಚ್ಚು ಮತ್ತೊಮ್ಮೆ ಬೋಲ್ಡ್.. ನೋಡಿದವರೆಲ್ಲ ಕ್ಲೀನ್ ಬೌಲ್ಡ್..!

  ರಚ್ಚು ಮತ್ತೊಮ್ಮೆ ಬೋಲ್ಡ್.. ನೋಡಿದವರೆಲ್ಲ ಕ್ಲೀನ್ ಬೌಲ್ಡ್..!

  ಐ ಲವ್ ಯೂ ಚಿತ್ರದಲ್ಲಿ ರಚಿತಾ ರಾಮ್ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಒಂದಿಷ್ಟು ವಿವಾದ.. ಮತ್ತೊಂದಿಷ್ಟು ಕಣ್ಣೀರು.. ಕ್ಷಮೆ.. ಇತ್ಯಾದಿ ಇತ್ಯಾದಿಗಳಾಗಿದ್ದವು. ಇನ್ನು ಮುಂದೆ ನಾನು ಬೋಲ್ಡ್ ಅವತಾರದಲ್ಲಿ ಕಾಣಿಸೋದಿಲ್ಲ ಎಂದಿದ್ದ ರಚಿತಾ, ಈಗ ಲವ್ ಯೂ ರಚ್ಚು ಚಿತ್ರದಲ್ಲಿ ಬೋಲ್ಡ್ ಆಗಿದ್ದಾರೆ. ನೋಡುವವರನ್ನೂ ಬೌಲ್ಡ್ ಮಾಡಿದ್ದಾರೆ. ಇದು ಲವ್ ಯೂ ರಚ್ಚು ಚಿತ್ರದ ಹಾಡಿನ ಝಲಕ್.

  ಮುದ್ದು ನೀನು.. ಅನ್ನೋ ಹಾಡು ಹೊರಬಂದಿದೆ. ಅಜೇಯ್ ರಾವ್ ಮತ್ತು ರಚಿತಾ ರಾಮ್ ನಟಿಸಿರೋ ಚಿತ್ರವಿದು. ಗುರು ದೇಶಪಾಂಡೆ ನಿರ್ಮಾಣದ ಚಿತ್ರಕ್ಕೆ ಶಂಕರ್ ರಾಜ್ ನಿರ್ದೇಶಕ. ಈ ಮುದ್ದು ನೀನು ಹಾಡಿನಲ್ಲೇ ರಚಿತಾ ರಾಮ್ ಮುದ್ದು ಮುದ್ದಾಗಿ.. ಬೋಲ್ಡ್ ಆಗಿ ಕಾಣಿಸಿರೋದು. ಲವ್ ಮೇಕಿಂಗ್ ದೃಶ್ಯಗಳಿರೋ ಹಾಡಿನಲ್ಲಿ ರಚಿತಾ ರಾಮ್ ಕಿಕ್ಕೇರಿಸುತ್ತಿದ್ದಾರೆ. ಅಫ್‍ಕೋರ್ಸ್.. ಐ ಲವ್ ಯೂ ನಂತರ ರಚಿತಾ ರಾಮ್, ಏಕ್ ಲವ್ ಯಾದಲ್ಲಿ ಲಿಪ್ ಲಾಕ್ ಕೂಡಾ ಮಾಡಿದ್ದಾರೆ. ನಟನೆ ಅಂದ ಮೇಲೆ ಎಲ್ಲವನ್ನೂ ಮಾಡಬೇಕು. ತಪ್ಪೇನೂ ಇಲ್ಲ. ಮತ್ತೊಮ್ಮೆ ವಿವಾದವಾಗಬಾರದಷ್ಟೆ..

 • ರಚ್ಚೂಗಾಗಿ ರಚ್ಚೆ ಹಿಡಿದು ಲವ್ ಯೂ ಅಂದ್ರು..!

  ರಚ್ಚೂಗಾಗಿ ರಚ್ಚೆ ಹಿಡಿದು ಲವ್ ಯೂ ಅಂದ್ರು..!

  ರಚ್ಚು ಅಲಿಯಾಸ್ ರಚಿತಾ ರಾಮ್ ಅಲಿಯಾಸ್ ಡಿಂಪಲ್ ಕ್ವೀನ್ ಅಲಿಯಾಸ್ ಬುಲ್‍ಬುಲ್.. ಇಷ್ಟಪಡದೇ ಇರೋರು ಯಾರು? ಅವರನ್ನೀಗ ಲವ್ ಯೂ ರಚ್ಚು ಎಂದು ರಚ್ಚೆ ಹಿಡಿದಿದ್ದಾರೆ ನವೀನ್ ಸಜ್ಜು ಮತ್ತು ಅಜಯ್ ರಾವ್. ಡಿಂಪಲ್ ಡಿಂಪಲ್ ಹುಡುಗಿ ನಿನ್ನ ಡಾರ್ಲಿಂಗ್ ಅನ್ಬೋದಾ.. ಅಂತಾ ಬೆನ್ನು ಹತ್ತಿದ್ದಾರೆ.

  ಇವರೆಲ್ಲ ರಚ್ಚು ಬೆನ್ನು ಹತ್ತೋಕೆ ಸಾಹಿತ್ಯ ಕೊಟ್ಟವರು ಡೈರೆಕ್ಟರ್ ಚೇತನ್ ಕುಮಾರ್. ಮ್ಯೂಸಿಕ್ ಕೊಟ್ಟವರು ಮಣಿಕಾಂತ್ ಕದ್ರಿ. ಶಶಾಂಕ್ ನಿರ್ದೇಶನದಲ್ಲಿ ರೆಡಿಯಾಗುತ್ತಿರೋ ಲವ್ ಯೂ ರಚ್ಚು ಸಿನಿಮಾದ ಹಾಡಿದು. ನಿರ್ದೇಶಕ ಗುರು ದೇಶಪಾಂಡೆ ನಿರ್ಮಾಣದ ಲವ್ ಯೂ ರಚ್ಚು, ವರ್ಷದ ಕೊನೆಗೆ ರಿಲೀಸ್ ಆಗುತ್ತಿದೆ.

 • ರಮೇಶ್ ಅರವಿಂದ್ ತಂಗಿ ರಚಿತಾ ರಾಮ್

  rachita plays ramesh's sister in 100

  ರಚಿತಾ ರಾಮ್ ಅವರಿಗೆ ಹೊಸ ಅಣ್ಣ ಸಿಕ್ಕಿದ್ದಾರೆ. ಅದು ರಮೇಶ್ ಅರವಿಂದ್ ರೂಪದಲ್ಲಿ. ಶಿವಾಜಿ ಸುರತ್ಕಲ್ ಸಕ್ಸಸ್ ಜೋಶ್‍ನಲ್ಲಿರುವ ರಮೇಶ್, 100 ಚಿತ್ರವನ್ನು ನಿರ್ದೇಶಿಸುತ್ತಿರುವುದು ಗೊತ್ತಿದೆಯಷ್ಟೇ.. ಆ ಚಿತ್ರದಲ್ಲಿ ರಮೇಶ್ ತಂಗಿಯ ಪಾತ್ರ ರಚಿತಾ ರಾಮ್ ಅವರದ್ದು.

  ಕಥೆ ಕೇಳಿದೆ, ರಮೇಶ್ ಸರ್ ಅವರದ್ದೇ ಡೈರೆಕ್ಷನ್ ಎಂದು ಗೊತ್ತಾಯ್ತು. ತಕ್ಷಣ ಓಕೆ ಎಂದೆ, ನಾನಿಲ್ಲಿ ರಮೇಶ್ ಸರ್ ತಂಗಿ. ಸೆಲ್ಫಿ ಹುಚ್ಚು, ಸೋಷಿಯಲ್ ಮೀಡಿಯಾ ಹುಚ್ಚು. ಮನೆಯಲ್ಲಿನ ಪ್ರತಿಯೊಂದನ್ನೂ ಸೆಲ್ಫಿ ತೆಗೆದು ಸೋಷಿಯಲ್ ಮೀಡಿಯಾಗೆ ಹಾಕುತ್ತಿರುತ್ತೇನೆ. ಅದು ಹೇಗೆ ಮಿಸ್ ಯೂಸ್ ಆಗುತ್ತೆ, ಅದರಿಂದ ಬಚಾವ್ ಆಗೋಕೆ ಏನೇನೆಲ್ಲ ಮಾಡಬೇಕಾಗುತ್ತೆ ಅನ್ನೋದು ಚಿತ್ರದ ಕಥೆ ಎನ್ನುತ್ತಾರೆ ರಚಿತಾ ರಾಮ್.

  ಅಂದಹಾಗೆ ಚಿತ್ರದಲ್ಲಿ ಇಷ್ಟೆಲ್ಲ ಸೆಲ್ಫಿ, ಸೋಷಿಯಲ್ ಮೀಡಿಯಾ ಹುಚ್ಚಿಯಾಗಿ ಕಾಣಿಸಿಕೊಳ್ತಿರೋ ರಚಿತಾ, ರಿಯಲ್ ಲೈಫಲ್ಲಿ ಸೆಲ್ಫಿ, ಸೋಷಿಯಲ್ ಮೀಡಿಯಾದಿಂದ ದೂರ ದೂರ. ಇನ್‍ಸ್ಟಾಗ್ರಾಮ್ ಬಿಟ್ಟರೆ, ಬೇರೆ ಯಾವುದೇ ಪೇಜ್‍ನಲ್ಲಿ ಅವರಿಲ್ಲ. ಇನ್‍ಸ್ಟಾಗ್ರಾಮ್‍ನಲ್ಲಿ ಕೂಡಾ ರೆಗ್ಯುಲರ್ ಆಕ್ಟಿವ್ ಇರಲ್ಲ. ಟ್ವಿಟರ್, ಎಫ್‍ಬಿಯಲ್ಲಿರೋ ರಚಿತಾ ರಾಮ್ ಪೇಜ್‍ಗಳು ಅವರದ್ದಲ್ಲ. 

   

 • ರಮೇಶ್ ರಚಿತಾ 100 ನ.19ಕ್ಕೆ

  ರಮೇಶ್ ರಚಿತಾ 100 ನ.19ಕ್ಕೆ

  ರಮೇಶ್ ಅರವಿಂದ್, ರಚಿತಾ ರಾಮ್ ಮತ್ತೊಮ್ಮೆ ಜೊತೆಯಾಗಿರೋ ಸಿನಿಮಾ 100. ಇದು ಸೈಬರ್ ಕ್ರೈಂ ಕಥೆ ಇರೋ ಸಿನಿಮಾ. ಸೋಷಿಯಲ್ ಮೀಡಿಯಾ, ಸೈಬರ್ ಅಪರಾಧ, ಕೌಟುಂಬಿಕ ಸಂಬಂಧಗಳ ಸುತ್ತ ಇರೋ ಸಿನಿಮಾದ ನಿರ್ದೇಶಕ ಸ್ವತಃ ರಮೇಶ್ ಅರವಿಂದ್.

  ರಮೇಶ್, ರಚಿತಾ ರಾಮ್ ಜೊತೆ ನಟಿಸಿರುವ ಇನ್ನೊಬ್ಬ ನಟಿ ಪೂರ್ಣಿಮಾ. ಗಾಳಿಪಟ 2 ಚಿತ್ರ ನಿರ್ಮಾಪಕರೂ ಆಗಿರೋ ರಮೇಶ್ ರೆಡ್ಡಿ, ಈ ಚಿತ್ರಕ್ಕೂ ನಿರ್ಮಾಪಕರು. ನಮ್ಮ ಸೂರಜ್ ಪ್ರೊಡಕ್ಷನ್ಸ್‍ನ ದೊಡ್ಡ ಚಿತ್ರವಿದು. ಪ್ರತಿಯೊಬ್ಬರೂ ನೋಡಬೇಕಾದ, ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ಸಿನಿಮಾ 100. ರಮೇಶ್ ಅರವಿಂದ್ ಪೊಲೀಸ್ ಪಾತ್ರ, ರಚಿತಾ, ಪೂರ್ಣಿಮಾ ಕಾಂಬಿನೇಷನ್ ಚಿತ್ರದ ಹೈಲೈಟ್ ಎನ್ನುತ್ತಾರೆ ರಮೇಶ್ ರೆಡ್ಡಿ. ಚಿತ್ರ ನವೆಂಬರ್ 19ಕ್ಕೆ ರಿಲೀಸ್.

 • ರಮ್ಯಾ ಪದ್ಮಾವತಿ.. ರಚಿತಾ ಹೊಸ ಪದ್ಮಾವತಿ..

  rachitha ram is the new padmavathi

  ಊರಿಗೊಬ್ಳೇ ಪದ್ಮಾವತಿ.. ಅಂದ್ರೆ ಸಾಕು.. ರಮ್ಯಾ ನೆನಪಾಗ್ತಾರೆ. ಜಾನಿ ಮೇರಾ ನಾಮ್ ಚಿತ್ರದಲ್ಲಿ ದುನಿಯಾ ವಿಜಿ ಮತ್ತು ರಮ್ಯಾ ಕುಣಿದು ಕುಪ್ಪಳಿಸಿದ್ದ ಹಾಡು, ಸೂಪರ್ ಹಿಟ್ ಆಗಿತ್ತು. ಈಗ ಹೊಸ ಪದ್ಮಾವತಿ ಹಾಡು ಬರ್ತಾ ಇದೆ. ಅದು ಜಾನಿ ಜಾನಿ ಎಸ್ ಪಪ್ಪಾ ಚಿತ್ರದಲ್ಲಿ.

  ಆ ಹಾಡಿಗೆ ಹೆಜ್ಜೆ ಹಾಕಿರುವುದು ರಚಿತಾ ರಾಮ್. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ರೈನ್ ಬೋ ಕಾಲೊನಿ ಸೆಟ್ ಹಾಕಿ ಹಾಡನ್ನು ಚಿತ್ರೀಕರಿಸಲಾಗುತ್ತಿದೆ. ಮುರಳಿ ನೃತ್ಯ ನಿರ್ದೇಶನದಲ್ಲಿ ರಚಿತಾ ಸೌಂದರ್ಯಕ್ಕೆ, ದುನಿಯಾ ವಿಜಿ ಅವರ ಸಿಕ್ಸ್‍ಪ್ಯಾಕ್ ಬಾಡಿಯ ಅನಾವರಣವೂ ಆಗಲಿದೆ.

  ಪ್ರೀತಮ್ ಗುಬ್ಬಿ ನಿರ್ದೇಶನದ ಜಾನಿ ಜಾನಿ ಎಸ್ ಪಪ್ಪಾದಲ್ಲಿ ಹೊಸ ಪದ್ಮಾವತಿ ಹೇಗೆ ಕಾಣಿಸಿಕೊಳ್ತಾರೋ.. ನೋಡಬೇಕು.

   

 • ರಾಕ್‍ಲೈನ್ ಬ್ಯಾನರ್ ನಮ್ದೇ - ಪುನೀತ್

  rockline banner is like family banner says puneeth

  ರಾಕ್‍ಲೈನ್ ವೆಂಕಟೇಶ್ ಬ್ಯಾನರ್‍ನಲ್ಲಿ ನಟಿಸುವಾಗ ನಾವು ಬೇರೆ ನಿರ್ಮಾಪಕರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎನ್ನಿಸುವುದಿಲ್ಲ. ಅದು ನಮ್ಮದೇ ಬ್ಯಾನರ್ ಎನಿಸುತ್ತೆ. ಹೀಗಾಗಿಯೇ ಅವರು ಆಫರ್ ಕೊಟ್ಟಾಗ ಮರುಮಾತಿಲ್ಲದೆ ಒಪ್ಪಿಕೊಂಡೆ. ಇದು ಪುನೀತ್ ರಾಜ್‍ಕುಮಾರ್ ಮಾತು.

  ರಾಕ್‍ಲೈನ್ ವೆಂಕಟೇಶ್ ಮತ್ತು ಡಾ.ರಾಜ್ ಮನೆತನದ ಸಂಬಂಧ, ಗೆಳೆತನ, ಬಾಂಧವ್ಯ ಇಡೀ ಕರ್ನಾಟಕಕ್ಕೇ ಗೊತ್ತು. ಹೀಗಾಗಿಯೇ, 

  ಪುನೀತ್ ರಾಜ್‍ಕುಮಾರ್ ಈ ಮಾತು ಹೇಳಿದ್ದಾರೆ.

  ನಟಸಾರ್ವಭೌಮ, ರಾಕ್‍ಲೈನ್ ಮತ್ತು ಪುನೀತ್ ಕಾಂಬಿನೇಷನ್‍ನ 3ನೇ ಸಿನಿಮಾ. ಈ ಹಿಂದೆ ಅಪ್ಪು ಅವರಿಗಾಗಿ ಅಜಯ್ ಮತ್ತು ಮೌರ್ಯ ಚಿತ್ರಗಳನ್ನು ರಾಕ್‍ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದರು.

 • ರಾಜಾರಾಣಿ ಹಾಡು ಬಂತು ನೋಡಿದ್ರಾ..

  ninna raja video song from seetharama kalyana

  ಬಾಕ್ಸಾಫೀಸ್‍ನಲ್ಲಿ ಮೋಹದ ಅಲೆ ಎಬ್ಬಿಸುತ್ತಿರುವ ಸೀತಾರಾಮ ಕಲ್ಯಾಣ ಚಿತ್ರ ತಂಡ, ಅದೇ ಖುಷಿಯಲ್ಲಿ ಸೂಪರ್ ಹಿಟ್ ಹಾಡು ನಿನ್ನ ರಾಜ ನಾನು.. ನನ್ನ ರಾಣಿ ನೀನು ಹಾಡಿನ ವಿಡಿಯೋ ಹೊರಬಿಟ್ಟಿದೆ.

  ಲಹರಿ ವಿಡಿಯೋದಿಂದ ಹೊರಬಂದಿರುವ ಚಿತ್ರ ಹಾಡಿನಲ್ಲಿ ರಚಿತಾ ರಾಮ್ ಮುಗ್ಧ ಹುಡುಗಿಯಾಗಿ, ಪೆದ್ದು ಪೆದ್ದಾಗಿ ನಟಿಸಿ ಇಷ್ಟವಾದರೆ, ರಚಿತಾರ ಬೆನ್ನ ಹಿಂದೆ ಕನಸು ಕಾಣುವ ಹುಡುಗನಾಗಿ ಕುಣಿಯುವ ನಿಖಿಲ್ ಅವರ ಡ್ಯಾನ್ಸ್ ಗಮನ ಸೆಳೆಯುತ್ತದೆ.

  ನಿರ್ದೇಶಕ ಹರ್ಷ.. ತಾವು ಅದ್ಭುತ ಕೊರಿಯೋಗ್ರಫರ್ ಎಂಬುದನ್ನು ಮತ್ತೊಮ್ಮೆ ಪ್ರೂವ್ ಮಾಡುತ್ತಾರೆ. ಪ್ರೀತಿಯ ಅಲೆಯಲ್ಲಿ ಮಿಂದೇಳುವವರಿಗೆ ಈ ಹಾಡು ರಿಲ್ಯಾಕ್ಸ್ ಕೊಡುತ್ತದೆ ಅನ್ನೋದ್ರಲ್ಲಿ ಅನುಮಾನವಿಲ್ಲ.

 • ರಾಜ್ ಸಿನಿಮಾ ಸ್ಫೂರ್ತಿ.. ಅಪ್ಪನ ಸಿನಿಮಾಗಳೇ ಪ್ರೇರಣೆ - ನಿಖಿಲ್ ಕುಮಾರಸ್ವಾಮಿ

  nikhil kumaraswamy talks about seetharama kalyana

  ಡಾ.ರಾಜ್‍ಕುಮಾರ್ ಸಿನಿಮಾಗಳನ್ನು ನೋಡಿ ಬೆಳೆದವನು ನಾನು.. ಹೀಗಾಗಿಯೇ ನನ್ನ ಚಿತ್ರಗಳಲ್ಲಿ ಅಶ್ಲೀಲತೆ ಇರುವುದಿಲ್ಲ. ಸಮಾಜಕ್ಕೆ ಒಂದು ಸಂದೇಶವಿರುವಂತ ಕೌಟುಂಬಿಕ ಮನರಂಜನಾತ್ಮಕ ಸಿನಿಮಾಗಳನ್ನು ಮಾಡುತ್ತೇನೆ.. ಸಿಎಂ ಕುಮಾರಸ್ವಾಮಿ, ತಮ್ಮ ನಿರ್ಮಾಣದ ಸಿನಿಮಾಗಳ ಬಗ್ಗೆ ಆಗಾಗ್ಗೆ ಈ ಮಾತು ಹೇಳುತ್ತಲೇ ಇರುತ್ತಾರೆ. ಅದೇ ಮಾತನ್ನು ಈಗ ನಿಖಿಲ್ ಕೂಡಾ ಹೇಳಿದ್ದಾರೆ.

  `ನಾನು ರಾಜಕಾರಣವನ್ನು ಚಿಕ್ಕಂದಿನಿಂದಲೇ ನೋಡಿಕೊಂಡು ಬೆಳೆದವನು. ಅದು ನನಗೆ ಹೊಸದಲ್ಲ. ನಾನು ನನ್ನ ತಂದೆಯಂತೆಯೇ ರಾಜಕಾರಣ ಹಾಗೂ ಸಿನಿಮಾ.. ಎರಡೂ ಕ್ಷೇತ್ರಗಳಲ್ಲಿರುತ್ತೇನೆ. ನನಗೂ ಡಾ.ರಾಜ್ ಸಿನಿಮಾಗಳೆಂದರೆ ಇಷ್ಟ. ಅವರ ಹಾಗೆ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಸಿನಿಮಾ ಮಾಡಬೇಕು ಎನ್ನುವುದು ನನ್ನ ಆಸೆ' ಎಂದು ಹೇಳಿಕೊಂಡಿದ್ದಾರೆ ನಿಖಿಲ್.

  ಸೀತಾರಾಮ ಕಲ್ಯಾಣ ಚಿತ್ರವೂ ಕೂಡಾ ಅದೇ ಮಾದರಿಯದ್ದು. ಕೌಟುಂಬಿಕ ಹಿನ್ನೆಲೆಯ ಮನರಂಜನಾತ್ಮಕ ಸಿನಿಮಾ. ಚಿತ್ರದಲ್ಲೊಂದು ಸುಂದರ ಸಂದೇಶವೂ ಇದೆ. ನಿರ್ದೇಶಕ ಹರ್ಷ ಚಿತ್ರವನ್ನು ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ. ನಾನು ನನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ ನಿಖಿಲ್.

 • ರಾವಣನ ಹುಡುಕಾಟದಲ್ಲಿ ರಚಿತಾ ರಾಮ್

  ರಾವಣನ ಹುಡುಕಾಟದಲ್ಲಿ ರಚಿತಾ ರಾಮ್

  ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಅರ್ಜೆಂಟ್ ಆಗಿ ರಾವಣ ಬೇಕು. ರಾವಣನ ಹುಡುಕಾಟಕ್ಕೆ ಹೊರಟಿರುವ ರಚಿತಾ, ರಾಮನವಮಿಯಂದೇ ಅದಕ್ಕೆ ಓಂನಾಮ ಬರೆದಿದ್ದಾರೆ. ಇದು ರಚಿತಾ ರಾಮ್ ಅಭಿನಯಿಸುತ್ತಿರುವ ಹೊಸ ಸಿನಿಮಾ ಶಬರಿ ಸರ್ಚಿಂಗ್ ಫಾರ್ ರಾವಣ ಸ್ಟೋರಿ.

  ಸಂಕಲನಕಾರ ನವೀನ್ ಶೆಟ್ಟಿ, ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರದ ಮೂಲಕ ಡೈರೆಕ್ಟರ್ ಆಗುತ್ತಿದ್ದಾರೆ. ಕೆಕೆ ಪ್ರೊಡಕ್ಷನ್ಸ್ ಮತ್ತು ಎಟಿಎಂ ಸ್ಟುಡಿಯೋಸ್ ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಕಿರಣ್ ಕುಮಾರ್ ಪ್ರೊಡ್ಯೂಸರ್.

  ಮಹಿಳಾ ಕೇಂದ್ರಿತ ಚಿತ್ರವಿದು. ಕಥೆ ತುಂಬಾ ಚೆನ್ನಾಗಿದೆ. ಚಿತ್ರದ ಘೋಷಣೆಗೆ ವಿಶೇಷ ದಿನಕ್ಕಾಗಿ ಕಾಯ್ದು, ರಾಮನವಮಿ ದಿನ ಬಹಿರಂಗಪಡಿಸಿದ್ದೇವೆ ಎಂದಿರುವ ರಚಿತಾ ರಾಮ್, ನವೀನ್ ಶೆಟ್ಟಿ ಚಿತ್ರದ ಮೇಲೆ ಭರವಸೆ ಇಟ್ಟಿದ್ದಾರೆ.

  ಅಂದಹಾಗೆ ಇದು ರಚಿತಾ ಅವರ 36ನೇ ಸಿನಿಮಾ ಅಂತೆ. ಸದ್ಯಕ್ಕೆ ರಚಿತಾ ಸಿಕ್ಕಾಪಟ್ಟೆ ಅಂದ್ರೆ ಸಿಕ್ಕಾಪಟ್ಟೆ ಬ್ಯುಸಿ. ಅವರ ಕೈಲೀಗ ಅಭಿಷೇಕ್ ಅಂಬರೀಷ್ ಅವರ ಬ್ಯಾಡ್ ಮ್ಯಾನರ್ಸ್, ಅಜಯ್ ರಾವ್ ಜೊತೆ ಲವ್ ಯೂ ರಚ್ಚು, ಪ್ರಜ್ವಲ್ ದೇವರಾಜ್ ಜೊತೆ ವೀರಂ, ಸತೀಶ್ ನೀನಾಸಂ ಜೊತೆ ಮ್ಯಾಟ್ನಿ ಚಿತ್ರಗಳಿವೆ. ಡಾಲಿ ಧನಂಜಯ್ ಮತ್ತು ಡಾರ್ಲಿಂಗ್ ಕೃಷ್ಣ ಜೊತೆಗೆ ತಲಾ ಒಂದು ಚಿತ್ರಗಳಿವೆ.

  100, ಏಕ್ ಲವ್ ಯಾ ಮತ್ತು ತೆಲುಗಿನ ಸೂಪರ್ ಮಚ್ಚಿ ರಿಲೀಸ್ ಆಗಬೇಕಿವೆ.  

 • ರೌಡಿ ಬೇಬಿ ಧಮ್ ಹೊಡೆಯೋಕೆ ಡಾಲಿ ಮಾಡೆಲ್ ಅಂತೆ..!

  Rachita Ram Shares Her Power Packed Look From Her Upcoming Movie

  ಡಿಂಪಲ್ ಕ್ವೀನ್ ರಚಿತಾ ರಾಮ್ ಸಿಗಾರ್ ಸೇದುತ್ತಿರುವ ಫೋಟೋ ವೈರಲ್ ಆಗಿದೆ. ಅದು ಜೋಗಿ ಪ್ರೇಮ್ ಅವರ ಏಕ್ ಲವ್ ಯಾ ಚಿತ್ರದ ಫೋಟೋ. ರಕ್ಷಿತಾ ಪ್ರೇಮ್ ಅವರ ಸೋದರ ನಾಯಕನಾಗಿ ಎಂಟ್ರಿ ಕೊಡ್ತಿರೋ ಚಿತ್ರದಲ್ಲಿ ರಚಿತಾ ಬೋಲ್ಡ್ ಕ್ಯಾರೆಕ್ಟರ್ ಮಾಡಿದ್ದಾರೆ. ಅಕ್ಷರಶಃ ರೌಡಿ ಬೇಬಿ.

  ಜೋಗಿ ಪ್ರೇಮ್ ಮೊದಲು ಗಣೇಶ ಬೀಡಿ ಕೊಟ್ಟರು. ನಂತರ ಸಿಗರೇಟು.. ಕೊನೆಗೆ ಸಿಗಾರ್‍ನ್ನೂ ಸೇದಿಸಿದರು ಎನ್ನುವ ರಚಿತಾ ರಾಮ್, ಪಾತ್ರಕ್ಕಾಗಿ ಅದನ್ನು ಮಾಡಿದ್ದೇನೆ ಅನ್ನೋದನ್ನ ಮರೆಯೋದಿಲ್ಲ.

  ಸಿಗರೇಟು ಸೇದುವ ಹಾಗೂ ರಿವಾಲ್ವರ್ ಹಿಡಿಯುವ ದೃಶ್ಯಗಳ ಬಿಟ್ಸ್‍ಗಳಲ್ಲಿ ಡಾಲಿ ಧನಂಜಯ್ ಅವರನ್ನು ಫಾಲೋ ಮಾಡಿದ್ದೇನೆ ಎಂದು ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳೋ ರಚಿತಾ ರಾಮ್, ಈಗ ಸಿಕ್ಕಾಪಟ್ಟೆ ಬ್ಯುಸಿ ಹೀರೋಯಿನ್. ಹೆಚ್ಚೂ ಕಡಿಮೆ ಒಂದು ಡಜನ್ ಚಿತ್ರಗಳು ರಚಿತಾ ರಾಮ್ ಬತ್ತಳಿಕೆಯಲ್ಲಿವೆ.

 • ಲಕಲಕ ಲ್ಯಾಂಬೊರ್ಗಿನಿ ರಿಲೀಸ್

  ಲಕಲಕ ಲ್ಯಾಂಬೊರ್ಗಿನಿ ರಿಲೀಸ್

  ಹೊಸ ವರ್ಷಕ್ಕೊಂದು ಪಾರ್ಟಿ ಸಾಂಗ್ ಕೊಡೋ ಪದ್ಧತಿ ಇಟ್ಟುಕೊಂಡಿರೋ ಚಂದನ್ ಶೆಟ್ಟಿ 2022ರ ವೆಲ್‍ಕಂ ವೇಳೆಯೂ ಒಂದು ಸಾಂಗ್ ಕೊಟ್ಟಿದ್ದಾರೆ. ಲಕಲಕ ಲ್ಯಾಂಬೊರ್ಗಿನಿ ಹಾಡಿದು. ಈ ಹಾಡಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರೋದು ರಚಿತಾ ರಾಮ್. ಅಲೆಲೆಲೆಲೆ.. ಇವ್ಳು ಚೆಂದಾಗವ್ಳೆ.. ಎಂದು ಶುರುವಾಗುವ ಹಾಡಿನಲ್ಲಿ ರಚಿತಾ ಪಡ್ಡೆಗಳ ಹೃದಯಕ್ಕೆ.. ಮೆದುಳಿಗೆ.. ಹಾಡಿನಲ್ಲಿ ಹೇಳೋ ಹಾಗೆ ಸೌಟು ಹಾಕಿ ತಿರುವಿಬಿಡುತ್ತಾರೆ.. ಅಷ್ಟು ಹಾಟ್..

  ಚಂದನ್ ಶೆಟ್ಟಿ ಮ್ಯೂಸಿಕ್ ನೀಡಿರೋ ಹಾಡಿಗೆ ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಆರ್.ಕೇಶವ್ ಎಂಬುವವರು ಈ ಹಾಡಿಗೆ ಪ್ರೊಡ್ಯೂಸರ್. ಬೇಬಿ ಬಿಂದಿಯಾ ಕೆ.ಗೌಡ ಈ ಹಾಡಿನ ಮೂಲಕ ಹೊಸ ಪರಿಚಯವಾಗಿ ಎಂಟ್ರಿ ಕೊಟ್ಟಿದ್ದಾರೆ.

 • ಲಕಲಕ ಲ್ಯಾಂಬೋರ್ಗಿಣಿ ಡಿಂಪಲ್ ರಾಣಿ

  ಲಕಲಕ ಲ್ಯಾಂಬೋರ್ಗಿಣಿ ಡಿಂಪಲ್ ರಾಣಿಲಕಲಕ ಲ್ಯಾಂಬೋರ್ಗಿಣಿ ಡಿಂಪಲ್ ರಾಣಿ

  ಪ್ರತೀ ಹೊಸ ವರ್ಷದ ಸಂಭ್ರಮಕ್ಕೊಂದು ಕಿಕ್ ಕೊಡೋ ಹಾಡು ಸೃಷ್ಟಿಸುವ ಸಂಪ್ರದಾಯ ಪಾಲಿಸುತ್ತಿರೋದು ಚಂದನ್ ಶೆಟ್ಟಿ. ಪೊಗರು ನಂತರ ದೊಡ್ಡ ಮಟ್ಟದ ಹೆಸರು ಮಾಡಿದರೂ.. ತಮ್ಮ ಸಂಪ್ರದಾಯವನ್ನು ಮುಂದುವರೆಸಿದ್ದಾರೆ ಚಂದನ್. 2022ರ ಹೊಸ ವರ್ಷದ ಸಂಭ್ರಮದ ಕಿಚ್ಚಿಗೆ ಲಕಲಕ ಲ್ಯಾಂಬೋರ್ಗಿಣಿ ಹಾಡು ಹೊರತರುತ್ತಿದ್ದಾರೆ. ಆ ಲ್ಯಾಂಬೋರ್ಗಿಣಿ ಬೇರಿನ್ಯಾರೂ ಅಲ್ಲ, ಡಿಂಪಲ್ ಕ್ವೀನ್ ರಚಿತಾ ರಾಮ್.

  ಲ್ಯಾಂಬೋರ್ಗಿಣಿ, ನಮ್ಮ ಹಾಡಿನ ಲೇಡಿ ಲೀಡ್ ಹೆಸರು. ಮೊದಲು ಒಂದು ಹಾಡಿಗೆ ಹೆಜ್ಜೆ ಹಾಕಬೇಕಾ ಎಂದು ರಚಿತಾ ರಾಮ್ ಹಿಂದೇಟು ಹಾಕಿದರು. ಆದರೆ, ಹಾಡಿನ ಸಾಹಿತ್ಯ ಮತ್ತು ನಮ್ಮ ಪ್ರೆಸೆಂಟೇಷನ್ ಪ್ಲಾನ್ ಕೇಳಿದ ಮೇಲೆ ಓಕೆ ಎಂದರು. ಈ ಹಾಡಿಗೆ ನಂದ ಕಿಶೋರ್ ಅವರೇ ಡೈರೆಕ್ಷನ್ ಮಾಡಿದ್ದು, ಮುರಳಿ ಕೊರಿಯೋಗ್ರಫಿ ಮಾಡಿದ್ದಾರೆ. ಮಾಸ್ ಬೀಟ್ಸ್, ಕ್ಯಾಚಿ ಲಿರಿಕ್ಸ್ ಮತ್ತು ಸಖತ್ ಕಾಸ್ಟ್ಯೂಮ್ ಬಳಸುತ್ತಿದ್ದೇವೆ ಎಂದಿದ್ದಾರೆ ಚಂದನ್ ಶೆಟ್ಟಿ..

 • ಲಕ್ಷಾಂತರ ಜನರ ಎದುರು ಸೀತಾ ರಾಮ ಕಲ್ಯಾಣ

  seetharama kalyana teaser today

  ಸೀತಾರಾಮ ಕಲ್ಯಾಣ. ನಿಖಿಲ್ ಕುಮಾರಸ್ವಾಮಿ ಹಾಗೂ ರಚಿತಾ ರಾಮ್ ಅಭಿನಯದ ಹರ್ಷ ನಿರ್ದೇಶನದ ಸಿನಿಮಾ. ಹರ್ಷ ಚಿತ್ರಗಳು ಸತತವಾಗಿ ಗೆದ್ದಿರೋ ಕಾರಣ, ಈ ಚಿತ್ರದ ಮೇಲೂ ಕುತೂಹಲ ಸಹಜ. ಜೊತೆಗೆ ಕುಮಾರಸ್ವಾಮಿ ಸಿಎಂ ಆದ ಮೇಲೆ ರಿಲೀಸ್ ಆಗುತ್ತಿರುವ ನಿಖಿಲ್ ಅಭಿಯನದ ಮೊದಲ ಸಿನಿಮಾ. ಇವತ್ತು, ಸೀತಾ ರಾಮ ಕಲ್ಯಾಣದ ಟೀಸರ್ ರಿಲೀಸ್ ಆಗುತ್ತಿದೆ.

  ರಾಮನಗರದಲ್ಲಿಯೇ ಟೀಸರ್ ರಿಲೀಸ್ ಮಾಡೋಕೆ ರಾಜಕೀಯ ಕಾರಣವೂ ಇದೆ. ರಾಮನಗರ ಕುಮಾರಸ್ವಾಮಿಯವರ ರಾಜಕೀಯ ತವರು. ರಾಮನಗರದ ಜ್ಯೂ.ಕಾಲೇಜು ಮೈದಾನದಲ್ಲಿ ಸಂಜೆ 7 ಗಂಟೆಗೆ ಟೀಸರ್ ಬಿಡುಗಡೆಯಾಗುತ್ತಿದೆ. ಟೀಸರ್ ರಿಲೀಸ್ ಮಾಡುತ್ತಿರುವುದು ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ. 

  ಅದೂ ಲಕ್ಷಾಂತರ ಜನರ ಸಮ್ಮುಖದಲ್ಲಿ ಟೀಸರ್ ಬಿಡುಗಡೆಯಾಗುತ್ತಿದೆ. ಇಡೀ ಚಿತ್ರತಂಡ ಹಾಜರ್ ಇರುತ್ತದೆ. ಜೊತೆಗೆ ಭರಪೂರ ಮನರಂಜನೆಯೂ ಇರುತ್ತೆ.

 • ಲವ್ ಕಲ್ಯಾಣದಲ್ಲಿ ವೈರಲ್ ಆಗಿದ್ದು ಅಣ್ಣ-ತಂಗಿ ಡೈಲಾಗು..!

  seetharama kalyana auto dialogue goes viral

  ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಮುದ್ದು ಮುದ್ದು ಜೋಡಿಯಿದೆ. ನಿಖಿಲ್ ಮತ್ತು ರಚಿತಾ ರಾಮ್ ಜೊತೆಯಾಗಿ ನಟಿಸಿರುವ ಸಿನಿಮಾ, ಲವ್ ಸ್ಟೋರಿ. ಆ ಚಿತ್ರದಲ್ಲೇ ಅವರೇ ಪ್ರೇಮಿಗಳು ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. 

  ಆದರೂ ಚಿತ್ರದ ಟ್ರೇಲರ್‍ನಲ್ಲಿ ಬರೋ ಒಂದು ಡೈಲಾಗು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆಟೋದಲ್ಲಿ ಕುಳಿತು, ಆಟೋಡ್ರೈವರ್‍ಗೆ ರಚಿತಾ ರಾಮ್ ಹೇಳೋ ಡೈಲಾಗ್ ಅದು. ``ಲವರ್ಸಾ.. ಯಾಕೆ.. ನಿಮ್ ಕಣ್ಣಿಗೆ ನಾವಿಬ್ರೂ ಅಣ್ಣ ತಂಗಿ ಥರಾ ಕಾಣಿಸ್ತಿಲ್ವಾ..' ಅಂತಾ ಹೇಳೋ ಡೈಲಾಗ್ ಅದು.

  ಎ.ಹರ್ಷ, ತಮ್ಮ ಚಿತ್ರದಲ್ಲಿ ಇಂಥಾದ್ದೊಂದು ಸಣ್ಣ ನಗೆ ಉಕ್ಕಿಸೋದ್ರಲ್ಲಿ ಫೇಮಸ್. 

 • ಲವ್ ಮೀ ಆರ್ ಹೇಟ್ ಮಿ : ರಚಿತಾ-ಕೃಷ್ಣ ಜೋಡಿ ಜೊತೆ ರೂಪೇಶ್ ಶೆಟ್ಟಿ..!

  ಲವ್ ಮೀ ಆರ್ ಹೇಟ್ ಮಿ : ರಚಿತಾ-ಕೃಷ್ಣ ಜೋಡಿ ಜೊತೆ ರೂಪೇಶ್ ಶೆಟ್ಟಿ..!

  ಡಾರ್ಲಿಂಗ್ ಕೃಷ್ಣ-ರಚಿತಾ ರಾಮ್ ಜೋಡಿಯ ಚಿತ್ರ ಲವ್ ಮೀ ಆರ್ ಹೇಟ್ ಮಿ. ಕನ್ನಡದ ಸೂಪರ್ ಹಿಟ್ ಗೀತೆಯ ಸಾಲನ್ನೇ ಚಿತ್ರದ ಟೈಟಲ್ ಆಗಿಟ್ಟಿದ್ದಾರೆ ನಿರ್ದೇಶಕ ದೀಪಕ್ ಗಂಗಾಧರ್. ಈಗ ಈ ಚಿತ್ರತಂಡದ ಜೊತೆ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಸೇರಿಕೊಂಡಿದ್ದಾರೆ.

  ಇದು ನನ್ನ ಮೊದಲ ಸಿನಿಮಾವಾದ್ದರಿಂದ ಕೊಂಚ ತಡವಾಗಿದೆ. ಉತ್ತಮ ಕಲಾವಿದರು ಮತ್ತು ಅತ್ಯುತ್ತಮ ತಂತ್ರಜ್ಞರ ತಂಡ ನಮ್ಮ ಚಿತ್ರದ ಜತೆಗಿದ್ದು, ಸಿನಿಮಾ ಬಹಳ ಚೆನ್ನಾಗಿ ಮೂಡಿಬರುತ್ತಿದೆ. ರೂಪೇಶ್ ಶೆಟ್ಟಿಯವರು ಬಹಳ ಒಳ್ಳೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಬೆಂಗಳೂರು, ಶಿರಸಿ ಮತ್ತು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿದ್ದಾರೆ ನಿರ್ದೇಶಕ ದೀಪಕ್ ಗಂಗಾಧರ್.

  ಗಂಗಾಧರ್ ಈ ಮೊದಲು ಅಸಿಸ್ಟೆಂಟ್ ಡೈರೆಕ್ಟರ್ ಆಗಿ, ವಿತರಕರಾಗಿ ಕೆಲಸ ಮಾಡಿದ್ದವರು. ನಿರ್ದೇಶಕರಾಗಿ ಅವರಿಗೂ ಇದು ಹೊಸ ಅನುಭವ.

  ಇನ್ನು ಈಗ ತಂಡಕ್ಕೆ ಎಂಟ್ರಿ ಕೊಟ್ಟಿರುವ ರೂಪೇಶ್ ಶೆಟ್ಟಿ, ತುಳು ನಾಡಿನ ಪ್ರತಿಭೆ. ಹಲವು ತುಳು ಚಿತ್ರಗಳಲ್ಲಿ ನಟಿಸಿರುವ ರೂಪೇಶ್ ಶೆಟ್ಟಿ ಅವರಿಗೆ ಲವ್ ಮಿ ಆರ್ ಹೇಟ್ ಮಿ ಚಿತ್ರದಲ್ಲಿ ಪ್ರಮುಖ ಪಾತ್ರವಿದೆಯಂತೆ.

 • ಲವ್ ಯೂ ಎನ್ನಲಾ.. ಕಲ್ಯಾಣ ಎನ್ನಲಾ.. ರಚಿತಾ ರಾಮ್ ಗೊಂದಲ

  one day two events

  ಎರಡು ದೊಡ್ಡ ಸಿನಿಮಾಗಳು. ಎರಡೂ ಚಿತ್ರಗಳ ಮೇಲೆ ಭರ್ಜರಿ ನಿರೀಕ್ಷೆ. ಎಲ್ಲಿ ಹೋಗೋದು.. ಏನ್ ಮಾಡೋದು.. ಸಂಪೂರ್ಣ ಗೊಂದಲದಲ್ಲಿರೋದು ಡಿಂಪಲ್ ಚೆಲುವೆ ರಚಿತಾ ರಾಮ್. ಅವರಿಗೆ ಈಗ ಜನವರಿ 19ರ ಟೆನ್ಷನ್.

  ಜನವರಿ 19ಕ್ಕೆ ಮೈಸೂರಿನಲ್ಲಿ ಸೀತಾರಾಮ ಕಲ್ಯಾಣ ಚಿತ್ರದ ಟ್ರೇಲರ್ ಬಿಡುಗಡೆ ಮತ್ತು ಪ್ರಿ-ರಿಲೀಸ್ ಈವೆಂಟ್ ಇದೆ. ಜನವರಿ 25ಕ್ಕೇ ರಿಲೀಸ್ ಆಗುತ್ತಿರುವ ಚಿತ್ರವದು. ನಿಖಿಲ್ ಕುಮಾರಸ್ವಾಮಿ ಜೊತೆ ನಟಿಸಿರುವ ಚಿತ್ರ. ಸಿಎಂ ಕುಮಾರಸ್ವಾಮಿ ಬ್ಯಾನರ್‍ನ ಸಿನಿಮಾ. ಎ. ಹರ್ಷ ನಿರ್ದೇಶನದ ಸಿನಿಮಾ. 

  ಅದೇ ದಿನ.. ಇತ್ತ ದಾವಣಗೆರೆಯಲ್ಲಿ ಐ ಲವ್ ಯೂ ಸಿನಿಮಾದ ಆಡಿಯೋ ಬಿಡುಗಡೆ. ಕನ್ನಡ ಮತ್ತು ತೆಲುಗು ಚಿತ್ರರಂಗದ ಸ್ಟಾರ್‍ಗಳು ಆ ದಿನ ದಾವಣಗೆರೆಯಲ್ಲಿರುತ್ತಾರೆ. ರಾಜಮೌಳಿ ಸೇರಿದಂತೆ.. ಉಪೇಂದ್ರ ಹೀರೋ. ಆರ್.ಚಂದ್ರು ನಿರ್ದೇಶಕ. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಪ್ರೇಮಿಗಳ ದಿನಕ್ಕೆ ರಿಲೀಸ್ ಆಗುತ್ತಿರುವ ಚಿತ್ರ. 

  ಈಗ.. ರಚಿತಾ ರಾಮ್ ಕನ್‍ಫ್ಯೂಸ್ ಇದೇ. ಮೈಸೂರಿಗೆ ಹೋಗೋದೊ.. ದಾವಣಗೆರೆಗೆ ಹೋಗೋದೋ.. 

 • ಲವ್ ಯೂ ರಚ್ಚು : ಹೀರೋ ಅಜಯ್ ರಾವ್`ಗೆ ನಿರ್ಮಾಪಕರು ಅವಮಾನ ಮಾಡಿದ್ರಾ?

  ಲವ್ ಯೂ ರಚ್ಚು : ಹೀರೋ ಅಜಯ್ ರಾವ್`ಗೆ ನಿರ್ಮಾಪಕರು ಅವಮಾನ ಮಾಡಿದ್ರಾ?

  ಲವ್ ಯೂ ರಚ್ಚು, ಈ ವರ್ಷದ ಕೊನೆಗೆ ರಿಲೀಸ್ ಆಗುತ್ತಿದೆ. ಟ್ರೇಲರ್ ಮತ್ತು ಹಾಡುಗಳು ಉತ್ತಮ ಪ್ರತಿಕ್ರಿಯೆ ಪಡೆದಿರೋದ್ರಿಂದ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಗೋ ಎಲ್ಲ ನಿರೀಕ್ಷೆಗಳೂ ಇವೆ. ಇದರ ನಡುವೆ ಚಿತ್ರದ ನಿರ್ಮಾಪಕರು ಮತ್ತು ಹೀರೋ ನಡುವೆ ಗುದ್ದಾಟ ಶುರುವಾಗಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಧ್ರುವ ಸರ್ಜಾ ರಿಲೀಸ್ ಮಾಡಿದ್ದರು. ಆದರೆ, ಕಾರ್ಯಕ್ರಮಕ್ಕೆ ಹೀರೋ ಅಜಯ್ ರಾವ್ ಅವರೇ ಇರಲಿಲ್ಲ. ಚಿತ್ರತಂಡದ ಸ್ಪಷ್ಟನೆಗಳು ಗೊಂದಲ ಹುಟ್ಟಿಸಿದ್ದವು.

  ನನಗೆ ಚಿತ್ರದ ನಿರ್ಮಾಪಕರಿಂದ ಅವಮಾನವಾಗಿದೆ. ನನಗೂ ಆತ್ಮಗೌರವ ಇದೆ. ಹೀಗಾಗಿ ಚಿತ್ರತಂಡದವರ ಜೊತೆ, ನಿರ್ಮಾಪಕರ ಜೊತೆ ನಾನು ಪ್ರಚಾರ ಮಾಡಲ್ಲ. ವೈಯಕ್ತಿಕವಾಗಿ ಚಿತ್ರದ ಬಗ್ಗೆ ಪ್ರಚಾರ ಮಾಡ್ತೇನೆ. ಅವಮಾನವಾಗಿರೋ ಜಾಗಕ್ಕೆ ಮತ್ತೆ ನಾನು ಹೋಗಲ್ಲ ಎಂದಿರುವ ಅಜಯ್ ರಾವ್, ಯಾವ ಕಾರಣಕ್ಕೆ ಇದೆಲ್ಲ ಶುರುವಾಯ್ತು ಅನ್ನೋದನ್ನ ಬಹಿರಂಗಪಡಿಸುವುದಿಲ್ಲವಂತೆ. ಅದರ ಬಗ್ಗೆ ಮುಂದೆ ಕೂಡಾ ಮಾತನಾಡಲ್ಲ ಎಂದಿದ್ದಾರೆ ಹೀರೋ.

  ವೈಮನಸ್ಯ, ಮನಸ್ತಾಪ ಇರುತ್ತೆ. ಆದರೆ ಅವಮಾನ ಮಾಡಿಲ್ಲ. 4 ಜನ ಇರೋ ಕುಟುಂಬದಲ್ಲೇ ಮನಸ್ತಾಪ ಬರುತ್ತೆ, 150 ಜನರ ತಂಡ ಇರೋವಾಗ ಬರೋದಿಲ್ವೇ? ಕೂತು ಮಾತನಾಡಿ, ವಿವಾದ ಬಗೆಹರಿಸಿಕೊಳ್ಳೋಕೆ ನಾನು ಸಿದ್ಧ. 25ನೇ ತಾರೀಕು ಪ್ರೆಸ್‍ಮೀಟ್ ಇದೆ. 29ರಂದು ಈವೆಂಟ್ ಇದೆ. ಅಜಯ್ ರಾವ್ ಅವರಿಗೆ ನಾನೇ ಖುದ್ದು ಫೋನ್ ಮಾಡಿ ಕರೆದಿದ್ದೇನೆ ಎಂದಿದ್ದಾರೆ ನಿರ್ಮಾಪಕ, ಕ್ರಿಯೇಟಿವ್ ಡೈರೆಕ್ಟರ್ ಗುರು ದೇಶಪಾಂಡೆ.

  ಇಡೀ ಚಿತ್ರತಂಡವೇ ಒಂದು ಮಾತು ಹೇಳ್ತಿರೋವಾಗ, ಒಂದು ನಿರ್ಣಯದ ಮೇಲೆ ನಿಂತಿರೋವಾಗ ಇವರೊಬ್ಬರೇ ಒಂದು ಮಾತು ಹೇಳ್ತಿದ್ದರೆ ಅದು ಸರಿಹೋಗಲ್ಲ. ಅದು ಅವರ ಸಂಸ್ಕøತಿಯನ್ನು ತೋರಿಸುತ್ತೆ ಎಂದಿದ್ದಾರೆ ಗುರು ದೇಶಪಾಂಡೆ.