` rachita ram - chitraloka.com | Kannada Movie News, Reviews | Image

rachita ram

 • ಮುದ್ದಾದ ಮೂತಿ.. ಮನಸು ಮರಕೋತಿ.. ಅಚ್ಯುತ್ ಕುಮಾರ್ ಹಿಂಗೇಕಾದ್ರು?

  ಮುದ್ದಾದ ಮೂತಿ.. ಮನಸು ಮರಕೋತಿ.. ಅಚ್ಯುತ್ ಕುಮಾರ್ ಹಿಂಗೇಕಾದ್ರು?

  ಅಚ್ಯುತ್ ಕುಮಾರ್. ಅಪ್ಪ.. ಅಣ್ಣ.. ಹೀರೋ.. ವಿಲನ್.. ಕಾಮಿಡಿ.. ಪಾತ್ರ ಎಂಥದ್ದೇ ಇರಲಿ.. ಸೆಕೆಂಡುಗಳಷ್ಟು ಕಾಲ ತೆರೆ ಮೇಲಿದ್ದರೂ ತಮ್ಮದೇ ಛಾಪು ಮೂಡಿಸುವ ನಟ. ಅವರ ಮೂತಿ ಮುದ್ದು ಮುದ್ದಂತೆ. ಮನಸ್ಸು ಮರಕೋತಿಯಂತೆ. ಹೀಗಂತ ಹೇಳ್ತಿರೋದು ಎಸ್.ರವೀಂದ್ರನಾಥ್.

  ಮಾನ್ಸೂನ್ ರಾಗ ಚಿತ್ರದ ಇನ್ನೊಂದು ಹಾಡು ಬಿಡುಗಡೆಯಾಗಿದೆ. ಹಾಡು ಸೃಷ್ಟಿಯಾಗಿರೋದು ಮತ್ತು ಚಿತ್ರಿತವಾಗಿರೋದು ಅಚ್ಯುತ್ ಕುಮಾರ್. ಸುತ್ತಲ ಸುಂದರಿಯರು.. ಚೆಲುವೆಯರ ಭರತನಾಟ್ಯ.. ಅವರ ಮಧ್ಯೆ ಅಚ್ಯುತ್ ಅವರ ಮುದ್ದಾದ ಮೂತಿ. ಮನಸು ಮರಕೋತಿ. ಮದುವೆಯಾಗದ.. ಮದುವೆಯಾಗಬೇಕು ಅನ್ನೋ ಆಸೆಯಿದ್ದೂ ಮದುವೆಯಾಗದ.. ಮದುವೆಯಾದವರನ್ನು ನೋಡಿ ಬೇಸರಗೊಳ್ಳುವ.. ಹತಾಶನಾಗುವ.. ಆಮೇಲೆ ನನ್ನದೇ ಬೆಸ್ಟ್ ಲೈಫು ಎಂದು ನಗುವ ಪಾತ್ರ ಅನ್ನೋದಂತೂ ಹಾಡಿನಲ್ಲೇ ಗೊತ್ತಾಗಿ ಹೋಗುತ್ತೆ.

  ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಇದೇ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರೋ ಚಿತ್ರ ಮಾನ್ಸೂನ್ ರಾಗ. ಆಗಸ್ಟ್ 19ಕ್ಕೆ ರಿಲೀಸ್ ಆಗುತ್ತಿರೋ ಚಿತ್ರದ ಈ ಹಾಡಿಗೆ ಸಾಹಿತ್ಯ  ಪ್ರಮೋದ್ ಮರವಂತೆ ಅವರದ್ದು. ಅನೂಪ್ ಸಿಳೀನ್ ಸಂಗೀತದ ಹಾಡಿಗೆ ಗಾಯಕರಾಗಿ ಶಕ್ತಿ ತುಂಬಿರೋದು ವಾಸುಕಿ ವೈಭವ್. ವಿಖ್ಯಾತ್ ನಿರ್ಮಾಣದ ಚಿತ್ರದಲ್ಲಿ ಡಾಲಿ, ರಚಿತಾ ಜೊತೆ ಅಚ್ಯುತ್, ಸುಹಾಸಿನಿ, ಯಶಾ ಶಿವಕುಮಾರ್ ಕೂಡಾ ಇದ್ದಾರೆ.

 • ಮೂರು ಗೊಂಬೆಗಳ ಜೊತೆ ಧ್ರುವ ರೊಮ್ಯಾನ್ಸ್

  3 heroines in bharjari

  ಧ್ರುವ ಸರ್ಜಾ ಮತ್ತು ಚೇತನ್‌ ಕಾಂಬಿನೇಷನ್‌ನ 2ನೇ ಚಿತ್ರ, ಧ್ರುವ ಸರ್ಜಾರ ಮೂರನೇ ಚಿತ್ರ ಭರ್ಜರಿ. ಹಿಂದಿನ ಎರಡೂ ಚಿತ್ರಗಳಲ್ಲಿ ಧ್ರುವಾಗೆ ನಾಯಕಿ ಒಬ್ಬರೇ. ರಾಧಿಕಾ ಪಂಡಿತ್. ಆದರೆ, 3ನೇ ಚಿತ್ರದಲ್ಲಿ ಧ್ರುವ ಮೂರು ಗೊಂಬೆಗಳ ಜೊತೆ ರೊಮ್ಯಾನ್ಸ್ ಮಾಡುತ್ತಿದ್ಧಾರೆ. 

  ಆರ್‌.ಎಸ್‌. ಪ್ರೊಡಕ್ಷನ್ಸ್‌ನ ಈ ಸಿನಿಮಾದಲ್ಲಿ ರಚಿತಾ ರಾಮ್‌, ಹರಿಪ್ರಿಯಾ ಹಾಗೂ ವೈಶಾಲಿ ನಾಯಕಿಯರು. ಪ್ರಮುಖ ನಾಯಕಿ ರಚಿತಾರಾಮ್‌. ಇನ್ನೊಂದು ಪ್ರಮುಖ ಪಾತ್ರದಲ್ಲಿ ಹರಿಪ್ರಿಯಾ ನಟಿಸಿದ್ದರೆ, ಮತ್ತೊಂದು ಮುಖ್ಯ  ಪಾತ್ರದಲ್ಲಿ ವೈಶಾಲಿ ದೀಪಕ್‌ ನಟಿಸಿದ್ದಾರೆ. ಈ ಮೂರೂ ಗೊಂಬೆಗಳು ಒಂದೇ ಹಾಡಿನಲ್ಲಿ ಧ್ರುವ ಜತೆ ಹೆಜ್ಜೆ ಹಾಕಿರುವುದು ವಿಶೇಷ. 

  ಏನಿದು ವಿಶೇಷದ ಹಿಂದಿನ ರಹಸ್ಯ ಎಂದು ಹುಡುಕಿದರೆ, ನಿರ್ದೇಶಕ ಚೇತನ್ ಉತ್ತರ ಕೊಡಲ್ಲ. ಸಿನಿಮಾ ನೋಡಿ, ಎಲ್ಲ ಪಾತ್ರಗಳಿಗೂ ಸ್ಪೇಸ್ ಇದೆ. ಕತೆ ಸಾಗುತ್ತಿರುವಾಗ ಹರಿಪ್ರಿಯಾ ಮತ್ತು ವೈಶಾಲಿ ಪಾತ್ರ ಬರುತ್ತದೆ. ರಚಿತಾ ಅವರದ್ದು ಜಡ್ಜ್‌ಮೆಂಟ್‌ ಸಿಗದೇ ಇರುವ ಪಾತ್ರ. ಹರಿಪ್ರಿಯಾ ಅವರದ್ದು ಸ್ವಲ್ಪ ಸಸ್ಪೆನ್ಸ್‌ ಉಳ್ಳ ಪಾತ್ರ. ಇವತ್ತಿನ ಜನರೇಶನ್‌ಗೆ ತಕ್ಕಂತೆ ಸಿಕ್ಕಾಪಟ್ಟೆ ಎನರ್ಜಿಟಿಕ್‌ ಪಾತ್ರದಲ್ಲಿ ವೈಶಾಲಿ ನಟಿಸಿದ್ದಾರೆ ಅಂತಾರೆ. 

  ಅಂದಹಾಗೆ ಧ್ರುವ ಸಿನಿಮಾಗಳಲ್ಲಿ ಮಾಸ್​ಗೆ ಇಷ್ಟವಾಗುವ ಡೈಲಾಗ್​ಗಳು ಕಾಮನ್. ಆದರೆ, ಧ್ರುವಗಿಂತಾ ನಾನೇ ಹೆಚ್ಚು ಮಾತನಾಡಿದ್ದೇನೆ ಎನ್ನುತ್ತಾರೆ ರಚಿತಾ. ಅವರ ಪಾತ್ರದ ಹೆಸರು ಗೌರಿಯಂತೆ. ಹೀಗಾಗಿಯೇ ಪುಟ್ಟಗೌರಿ ಹಾಡು ರೆಡಿಯಾಗಿರೋದು. ಸೆಕೆಂಡ್‌ ಆಫ್‌ನಲ್ಲಿ ಅಯ್ಯೋ ಗೌರಿಗೆ ಹೀಗೆ ಆಗಬಾರದಿತ್ತು ಅಂತಾ ನೀವು ಬೇಜಾರ್ ಮಾಡ್ಕೋತೀರಾ ಅಂತಾನೇ ಇನ್ನೊಂದು ಡಿಂಪಲ್ ಬೀಳಿಸ್ತಾರೆ ರಚಿತಾ. 

  ಭರ್ಜರಿ ಚಿತ್ರದಲ್ಲಿ ನಾಯಕನಿಗಿರುವಷ್ಟೇ ಪ್ರಾಮುಖ್ಯತೆ ಮೂವರು ನಾಯಕಿಯರಿಗೂ ಇದೆ. ಮೂವರಿಗೂ ಒಟ್ಟಿಗೆ ನಟಿಸುವ ಸಾಕಷ್ಟು ದೃಶ್ಯಗಳಿವೆ. ಯಾರೂ ತಮ್ಮ ಸ್ಟಾರ್‌ಗಿರಿಯನ್ನು ತೋರಿಸಿಕೊಂಡಿಲ್ಲ. ಇದು ಭರ್ಜರಿ ಹೈಲೈಟ್ಸ್.

 • ಮೈಸೂರಿನಲ್ಲಿ ಜ.19ಕ್ಕೆ ಸೀತಾರಾಮ ಕಲ್ಯಾಣ ವೈಭವ

  seetharama kalyana pre release event in mysore

  ಸೀತಾರಾಮ ಕಲ್ಯಾಣ ಚಿತ್ರದ ಬಿಡುಗಡೆಗೂ ಮುನ್ನ ಭರ್ಜರಿ ಕಾರ್ಯಕ್ರಮ ಇಟ್ಟುಕೊಂಡಿರುವ ಚಿತ್ರತಂಡ, ಜನವರಿ 19ರಂದು ಮೈಸೂರಿನಲ್ಲಿ ಅದ್ಧೂರಿ ಕಾರ್ಯಕ್ರಮ ಇಟ್ಟುಕೊಂಡಿದೆ. ನಿಖಿಲ್ ಕುಮಾರಸ್ವಾಮಿ ಮತ್ತು ರಚಿತಾ ರಾಮ್ ನಟಿಸಿರುವ ಚಿತ್ರಕ್ಕೆ ಎ. ಹರ್ಷ ನಿರ್ದೇಶನವಿದೆ.

  ಮೊದಲಿನ ಪ್ಲಾನ್ ಪ್ರಕಾರ ಈ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿತ್ತು. ಜನವರಿ 15ಕ್ಕೆ ಮಾಂಗಲ್ಯಂ ತಂತು ನಾನೇನ ಹಾಡು ರಿಲೀಸ್ ಆಗುತ್ತಿದ್ದು, ಜನವರಿ 25ಕ್ಕೆ ಸಿನಿಮಾ ತೆರೆಗೆ ಬರಲಿದೆ.

 • ಮೊಗ್ಗಿನ ಮನಸ್ಸು ಶಶಾಂಕ್`ಗೆ ಥ್ಯಾಂಕ್ಯೂ ಹೇಳಿದ ರಚ್ಚು

  ಮೊಗ್ಗಿನ ಮನಸ್ಸು ಶಶಾಂಕ್`ಗೆ ಥ್ಯಾಂಕ್ಯೂ ಹೇಳಿದ ರಚ್ಚು

  ಲವ್ ಯೂ ರಚ್ಚು ಚಿತ್ರ ಇನ್ನೇನು ರಿಲೀಸ್ ಆಗೋಕೆ ರೆಡಿ. ಡಿ.31ಕ್ಕೆ ರಿಲೀಸ್ ಆಗಲಿರೋ ಚಿತ್ರ ಒಂದಿಷ್ಟು ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದೆ. ಚಿತ್ರೀಕರಣ ವೇಳೆ ನಡೆದ ಅಪಘಾತದ ಕಥೆ ಒಂದೆಡೆಯಾದರೆ, ಚಿತ್ರ ರಿಲೀಸ್ ಡೇಟ್ ಅನೌನ್ಸ್ ಆದ ಮೇಲೆ ಗುರು ದೇಶಪಾಂಡೆ, ಅಜಯ್ ರಾವ್ ಮಧ್ಯೆ ಶುರುವಾದ ಮನಸ್ತಾಪ ಇನ್ನೊಂದು ಕಡೆ. ಚಿತ್ರವನ್ನು ಡೈರೆಕ್ಟ್ ಮಾಡಿದ್ದೇ ನಾನು ಅನ್ನೋ ಅರ್ಥದಲ್ಲಿ ಅಜಯ್ ರಾವ್ ಮಾತನಾಡಿದ್ದಾರೆ. ಹಾಗಾದರೆ ಶಂಕರ್ ಎಸ್.ರಾಜ್ ಪಾತ್ರವೇನು?

  ಜೊತೆಗೆ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಸ್ವತಃ ನಿರ್ದೇಶಕ. ಯಶಸ್ವೀ ಚಿತ್ರಗಳನ್ನು ಕೊಟ್ಟ ದಾಖಲೆ ಇರುವವರು. ಅವರೇ ನಿರ್ಮಾಪಕರಾಗಿ ತಮ್ಮ ಚಿತ್ರಕ್ಕೆ ತಮ್ಮ ಅಸಿಸ್ಟೆಂಟ್ ಆಗಿದ್ದ ಶಂಕರ್ ಎಸ್.ರಾಜ್ ಅವರಿಗೆ ನಿರ್ದೇಶನ ಕೊಟ್ಟಿದ್ದಾರೆ. ಜೊತೆಗೆ ಚಿತ್ರದ ಕ್ರಿಯೇಟಿವ್ ಹೆಡ್ ಕೂಡಾ ಅವರೇ. ಇದೆಲ್ಲದರ ಮಧ್ಯೆ ರಚಿತಾ ರಾಮ್ ಥ್ಯಾಂಕ್ಸ್ ಹೇಳಿರೋದು ನಿರ್ದೇಶಕ ಶಶಾಂಕ್ ಅವರಿಗೆ. ಮೊಗ್ಗಿನ ಮನಸ್ಸು ಶಶಾಂಕ್ ಅವರಿಗೆ.

  ನನಗೆ ಶಶಾಂಕ್ ಸರ್ ಚಿತ್ರದಲ್ಲಿ ನಟಿಸೋ ಆಸೆ ಇತ್ತು. ಅವರ ಮೊಗ್ಗಿನ ಮನಸ್ಸು, ಬಚ್ಚನ್, ಕೃಷ್ಣಲೀಲಾ.. ಹೀಗೆ ಹಲವು ಚಿತ್ರಗಳು ನನಗೆ ಇಷ್ಟ. ಈ ಚಿತ್ರಕ್ಕೆ ಕಥೆ ಬರೆದಿರುವುದು ಅವರು. ಅವರ ನಿರ್ದೇಶನದಲ್ಲಿ ನಟಿಸಿದ್ದಷ್ಟೇ ಖುಷಿ ಅವರ ಸ್ಕ್ರಿಪ್ಟ್ ಇರೋ ಚಿತ್ರದಲ್ಲಿ ಸಿಕ್ಕಿದೆ. ಇದು ಅವರು ಅಜಯ್ ರಾವ್ ಅವರಿಗಾಗಿಯೇ ಬರೆದ ಕಥೆ. ಅವರ ಚಿತ್ರದಲ್ಲಿ ನಾಯಕಿಗೂ ಪ್ರಾಮುಖ್ಯತೆ ಇರುತ್ತೆ. ನನಗೆ ಆ ಅವಕಾಶ ಸಿಕ್ಕಿದೆ. ಥ್ಯಾಂಕ್ಯೂ ಶಶಾಂಕ್ ಸರ್ ಎಂದಿದ್ದಾರೆ ರಚಿತಾ ರಾಮ್.

 • ಮೊದಲು ಅಯೋಗ್ಯ.. ಆಮೇಲೆ ಯೋಗ್ಯ..

  ayogya releasing today

  ಅಯೋಗ್ಯ ಅನ್ನೋ ಟೈಟಲ್ ಕೇಳಿದವರಿಗೆ, ಏನಿದು.. ಚಿತ್ರಕ್ಕೇಕೆ ಇಂಥಾ ನೆಗೆಟಿವ್ ಟೈಟಲ್ ಇಟ್ಟರು ಅನ್ನೋ ಪ್ರಶ್ನೆ ಮೂಡದೇ ಇರದು. ಆದರೆ ಸಿನಿಮಾ ನೋಡಿದ ಮೇಲೆ ಕಥೆಗೆ ಅದೇ ಟೈಟಲ್ ಸೂಕ್ತ ಅಂತಾ ಪ್ರತಿಯೊಬ್ಬರೂ ಹೇಳ್ತಾರೆ. ಅದು ಕಥೆಯ ಶಕ್ತಿ ಅನ್ನೋದು ನಾಯಕ ನಟ ನೀನಾಸಂ ಸತೀಶ್ ವಿಶ್ವಾಸ. ರಿಲೀಸ್ ಆಗುವ ಮುನ್ನ ಅವರೇ ಚಿತ್ರವನ್ನು 15ಕ್ಕೂ ಹೆಚ್ಚು ಸಲ ನೋಡಿದ್ದಾರಂತೆ.

  ಒಬ್ಬ ಹಳ್ಳಿ ಹುಡುಗ. ಪುಂಡ. ಆದರೆ ಅವನ ಬಳಿ ಹಳ್ಳಿಯ ಎಷ್ಟೋ ಸಮಸ್ಯೆಗಳಿಗೆ ಪರಿಹಾರಗಳಿವೆ. ಅವನ ಮಾತುಗಳನ್ನು ಯಾರೂ ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ. ಆದರೆ, ಹೋಗ್ತಾ ಹೋಗ್ತಾ ಅವನೇ ಕರೆಕ್ಟ್ ಅನ್ನಿಸೋಕೆ ಶುರುವಾಗುತ್ತೆ. ಅಲ್ಲೊಂದು ಪ್ರೀತಿ ಹುಟ್ಟಿ ಖುಷಿಯಾಗುತ್ತೆ. ಸಿನಿಮಾ ಕಲರ್‍ಫುಲ್. ಹಾಸ್ಯದ ಮೂಲಕವೇ ಇಡೀ ಸಿನಿಮಾ ಕಟ್ಟಿಕೊಟ್ಟಿದ್ದೇವೆ ಅಂತಾರೆ ನಿರ್ದೇಶಕ ಮಹೇಶ್. ಅವರಿಗೆ ಇದು ಚೊಚ್ಚಲ ಸಿನಿಮಾ.

  ಇದುವರೆಗೆ ತಮ್ಮ ಗುಳಿಕೆನ್ನೆಯಿಂದ, ನಗುವಿನಿಂದ ಮೋಡಿ ಮಾಡಿದ್ದ ರಚಿತಾ ರಾಮ್, ಈ ಚಿತ್ರದಲ್ಲಿ ಕಣ್ಣುಗಳಲ್ಲೇ ಕೊಲ್ತಾರಂತೆ. ಅವರ ಕಣ್ಣುಗಳೇ ಅವರ ಪ್ಲಸ್ ಪಾಯಿಂಟ್ ಅನ್ನೋದು ಸತೀಶ್ ಕೊಟ್ಟಿರುವ ಸರ್ಟಿಫಿಕೇಟ್.

  ನಿರ್ಮಾಪಕ ಟಿ.ಆರ್. ಚಂದ್ರಶೇಖರ್ ಸಿನಿಮಾವನ್ನು ಅದ್ಧೂರಿಯಾಗಿ ರಿಲೀಸ್ ಮಾಡುತ್ತಿದ್ದಾರೆ. ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರ, 60 ದೇಶಗಳಲ್ಲಿ ರಿಲೀಸ್ ಆಗುತ್ತಿದೆ. 

 • ಮೊಬೈಲ್ ಮೂಲಕ ಆಗಂತುಕರು ಕುಟುಂಬದೊಳಕ್ಕೆ ಎಂಟ್ರಿ ಕೊಟ್ಟಾಗ..

  ಮೊಬೈಲ್ ಮೂಲಕ ಆಗಂತುಕರು ಕುಟುಂಬದೊಳಕ್ಕೆ ಎಂಟ್ರಿ ಕೊಟ್ಟಾಗ..

  ಇದು ವಿಚಿತ್ರ.. ಆದರೂ ನಿಜ.. ಈಗಿನ ಜನರೇಷನ್‍ನಲ್ಲಿ ಜನ ಮುಖಾಮುಖಿ ಮಾತುಗಳಿಗಿಂತ ಮೊಬೈಲ್ ಮಾತುಕತೆಯಲ್ಲೇ ಬ್ಯುಸಿ. ಮೊಬೈಲ್ ಒಂದಿದ್ದರೆ ಸಾಕು.. ಮೊಬೈಲೇ ಮನೆ. ಇಂತಹ ಹೊತ್ತಿನಲ್ಲಿ ಅಪರಿಚಿತರು ಮನೆಯೊಳಗೆ ಎಂಟ್ರಿ ಕೊಟ್ಟರೆ.. ಅದೂ ಮೊಬೈಲ್ ಮೂಲಕವೇ ಆಗಂತುಕರು ಮನೆಯೊಳಗೆ ನುಗ್ಗಿಬಿಟ್ಟರೆ.. 100 ಚಿತ್ರದ ಕಾನ್ಸೆಪ್ಟೇ ಅದು. ಸೈಬರ್ ಕ್ರೈಂ ಮಿಸ್ಟರಿ.

  ಆನ್‍ಲೈನ್ ಜಗತ್ತಿನ ಮೂಲಕ ಮನೆಯೊಳಗೆ ನುಗ್ಗುವ ಅಪರಿಚಿತರು ಒಂದು ಕುಟುಂಬ, ಆ ಕುಟುಂಬದ ಯಜಮಾನ ಪ್ರತಿಪಾದಿಸುವ ಮೌಲ್ಯಗಳನ್ನು ಬ್ರೇಕ್ ಮಾಡ್ತಾರೆ. ಆಗ ಯಾವ್ಯಾವ ರೀತಿ ಮೋಸ ಹೋಗಬಹುದು ಅನ್ನೋದೇ ಚಿತ್ರದ ಕಥೆ ಎನ್ನುತ್ತಾರೆ ರಮೇಶ್.

  ರಮೇಶ್`ಗೆ ಇಲ್ಲಿ ರಚಿತಾ ರಾಮ್ ತಂಗಿಯಾಗಿದ್ದಾರೆ. ಪೂರ್ಣಿಮಾ ಇನ್ನೊಬ್ಬ ನಾಯಕಿ. ರಮೇಶ್ ರೆಡ್ಡಿ ನಿರ್ಮಾಣದ ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿದ್ದು, ಚೇಸಿಂಗ್ ಸೀನ್‍ಗಳು ಉಸಿರು ಬಿಗಿಹಿಡಿದು ನೋಡುವಂತಿವೆ. ಚಿತ್ರ ನವೆಂಬರ್ 19ಕ್ಕೆ ರಿಲೀಸ್ ಆಗುತ್ತಿದೆ.

 • ಮೊಬೈಲ್.. ಸೋಷಿಯಲ್ ಮೀಡಿಯಾ ಹುಚ್ಚರಿಗೆ 100 ವಾರ್ನಿಂಗ್

  ಮೊಬೈಲ್.. ಸೋಷಿಯಲ್ ಮೀಡಿಯಾ ಹುಚ್ಚರಿಗೆ 100 ವಾರ್ನಿಂಗ್

  ಇತ್ತೀಚೆಗೆ ಜನ ಮೊಬೈಲುಗಳಲ್ಲೇ ಕಳೆದುಹೋಗುತ್ತಿದ್ದಾರೆ. ಅದರಲ್ಲೂ ಯುವ ಜನಾಂಗ.. ಲೈಕು, ಕಮೆಂಟುಗಳ ಹುಚ್ಚಿನಲ್ಲಿ ತೇಲಿ ಹೋಗಿದೆ. ಈಗ ಹುಡುಗಿಯರನ್ನು ಚುಡಾಯಿಸೋವ್ರು, ಪಟಾಯಿಸೋವ್ರು.. ರೋಡ್ ಸೈಡಿನಲ್ಲಿ ಇರೋದಿಲ್ಲ. ನಿಮ್ಮ ಮೊಬೈಲ್‍ಗೇ ಬಂದುಬಿಡ್ತಾರೆ. ನಿಮ್ಮ ಮನೆಗೇ ಬರುತ್ತಾರೆ.. ಜಸ್ಟ್ ಮೊಬೈಲ್ ಮೂಲಕ. ಅಂತಹ ಸೈಬರ್ ಕ್ರಿಮಿನಲ್‍ಗಳ ಜಾಲಕ್ಕೆ ಬೀಳೋ ಹೆಣ್ಣು ಮಕ್ಕಳ ಭವಿಷ್ಯ ಯಾವ್ಯಾವ ರೀತಿಯಲ್ಲಿ ನರಳಬಹುದು ಅನ್ನೋ ಕಾನ್ಸೆಪ್ಟಿನಲ್ಲೇ ಸೃಷ್ಟಿಯಾಗಿರೋ ಕಥೆ 100.

  ನಿರ್ಮಾಪಕ ರಮೇಶ್ ರೆಡ್ಡಿ, ತಮ್ಮ ಫ್ರೆಂಡ್ ಮನೆಯಲ್ಲಿ ನಡೆದ ಘಟನೆಯನ್ನೇ ರಮೇಶ್ ಅವರಿಗೆ ಹೇಳಿದ್ದರಂತೆ. ಯುವ ಜನಾಂಗಕ್ಕೆ ಎಚ್ಚರಿಕೆಯೂ ಇರಬೇಕು. ಪೋಷಕರಿಗೂ ತಿಳಿಯಬೇಕು.. ಅಂತಾದ್ದೊಂದು ಸಿನಿಮಾ ಮಾಡಿಕೊಡಿ ಎಂದಾಗ.. ಅದನ್ನು ಮನರಂಜನೆಯ ಚೌಕಟ್ಟಿನಲ್ಲಿ ಹೇಳದಿದ್ದರೆ ಜನರಿಗೆ ರೀಚ್ ಆಗಲ್ಲ ಎಂದೇ ಒಂದು ಚೆಂದದ ಕಥೆ, ಚಿತ್ರಕಥೆ ಬರೆದು, ನಿರ್ದೇಶಿಸಿ ನಾಯಕರಾಗಿದ್ದಾರೆ ರಮೇಶ್ ಅರವಿಂದ್.

  ರಚಿತಾ ರಾಮ್, ಪೂರ್ಣ ರಮೇಶ್ ಜೊತೆಗೆ ನಟಿಸಿದ್ದಾರೆ. ಆ್ಯಕ್ಷನ್ ಸೀಕ್ವೆನ್ಸ್ ಮೈನವಿರೇಳಿಸುತ್ತಿವೆ. ಸಿನಿಮಾ ನವೆಂಬರ್ 19ಕ್ಕೆ ರಿಲೀಸ್ ಆಘುತ್ತಿದೆ. ಡಯಲ್ 100.

 • ಮೋದಿ ಬಂದುಹೋಗುವ ದೇಗುಲದಲ್ಲಿ ರಚಿತಾ  ರಾಮ್

  rachitha ram

  ಇತ್ತೀಚೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್, ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿರುವ ದಸರೀಘಟ್ಟದಲ್ಲಿರುವ ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದರು. ವಿಶೇಷ ಪೂಜೆ ನೆರವೇರಿಸಿರುವ ರಚಿತಾ ರಾಮ್, ವೈಯಕ್ತಿಕ ವಿಚಾರಗಳ ಕುರಿತು ಹರಕೆ ಹೊತ್ತಿದ್ದಾರೆ ಎನ್ನಲಾಗಿದೆ. ಅದರ ಹೊರತಾಗಿ ಬೇರೆ ಯಾವ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ.

  ದಸರೀಘಟ್ಟ ಅಂತಿಂಥಾ ದೇವಸ್ಥಾನವಲ್ಲ. ಅದು ಖುದ್ದು ನರೇಂದ್ರ ಮೋದಿ ಬಂದು ಹೋಗಿದ್ದ ದೇವಸ್ಥಾನ. ಇನ್ನೂ ಗುಜರಾತ್ ಸಿಎಂ ಆಗಿದ್ದ ಮೋದಿಯವರಿಗೆ ಆಗಲೇ ದೇಶದ ಉನ್ನತ ಪದವಿಗೆ ಏರುತ್ತೀರಾ ಎಂದು ಭವಿಷ್ಯ ಹೇಳಿದ್ದ ದೇಗುಲ ಅದು. ಅವರಷ್ಟೇ ಅಲ್ಲ, ಮೈಸೂರಿನ ಮಹಾರಾಜರು, ಯಡಿಯೂರಪ್ಪ, ಉಪೇಂದ್ರ, ಯಶ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಕಲಾವಿದರೂ ಈ ದೇಗುಲದ ಭಕ್ತರು. 

  ಇಂಥ ದೇಗುಲಕ್ಕೆ ರಚಿತಾ ರಾಮ್ ಹೋಗಿದ್ದೇಕೆ ಎಂಬುದೇ ಕುತೂಹಲ.

 • ಮ್ಯಾಟ್ನಿ ಶೋನಲ್ಲಿ ಸತೀಶ್ ಜೊತೆ ರಚಿತಾ ರಾಮ್

  ಮ್ಯಾಟ್ನಿ ಶೋನಲ್ಲಿ ಸತೀಶ್ ಜೊತೆ ರಚಿತಾ ರಾಮ್

  ಅಯೋಗ್ಯ ಹಿಟ್ ಆದ ನಂತರ ರಚಿತಾ ರಾಮ್ ಮತ್ತು ಸತೀಶ್ ನೀನಾಸಂ ಜೋಡಿ ಮತ್ತೊಮ್ಮೆ ಒಂದಾಗಿದೆ. ಅದು ಮ್ಯಾಟ್ನಿ ಚಿತ್ರದಲ್ಲಿ. ಚಿತ್ರ ಈಗ ಸೆಟ್ಟೇರಿದ್ದು, ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರದ ಹಾಡೊಂದರ ಶೂಟಿಂಗ್ ಕೂಡಾ ಶುರುವಾಗಿದೆ. ಅಂದಹಾಗೆ ಇದು ಮನೋಹರ್ ಕಂಪಳ್ಳಿ ಡೈರೆಕ್ಷನ್ ಇರೋ ಸಿನಿಮಾ.

  ರಚಿತಾ ರಾಮ್ ಕೈತುಂಬಾ ಚಿತ್ರಗಳಿವೆ. ಏಕ್ ಲವ್ ಯಾ ಮುಗಿಸಿರುವ ರಚಿತಾ, ಬ್ಯಾಡ್ ಮ್ಯಾನರ್ಸ್, ಲವ್ ಯೂ ರಚ್ಚು, ಲಿಲ್ಲಿ, ವೀರಂ.. ಹೀಗೆ ಒಂದರ ಹಿಂದೊಂದು ಚಿತ್ರಗಳಲ್ಲಿ ಕಂಪ್ಲೀಟ್ ಬ್ಯುಸಿಯಾಗಿದ್ದಾರೆ. ಅತ್ತ ನೀನಾಸಂ ಸತೀಶ್ ಕೂಡಾ ಅತ್ತ ತಮಿಳು ಚಿತ್ರವನ್ನು ಮುಗಿಸಿ, ಇತ್ತ ಕನ್ನಡದಲ್ಲಿ ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಮ್ಯಾಟ್ನಿ ಸೆಟ್ಟೇರಿದೆ.

 • ರಚಿತಾ ಕಣ್ಣೀರು - ಉಪೇಂದ್ರ ಹೇಳಿದ್ದೇನು..?

  rachita ram cries, upendra replies

  ಇನ್ನು ಮುಂದೆ ಹೀಗೆಲ್ಲ ಮಾಡಲ್ಲ ಎನ್ನುತ್ತಲೇ ರಚಿತಾ ರಾಮ್, ನ್ಯೂಸ್ ಚಾನೆಲ್ಲೊಂದರಲ್ಲಿ ಕಣ್ಣೀರಿಟ್ಟಿದ್ದು ದೊಡ್ಡ ಸುದ್ದಿಯಾಗಿದೆ. ಐ ಲವ್ ಯೂ ಚಿತ್ರ ಸಕ್ಸಸ್ ಆಗಿರುವ ವೇಳೆಯಲ್ಲಿ ಚಿತ್ರದ ನಾಯಕಿ ಕಣ್ಣೀರಿಟ್ಟಿರುವುದು ಸಹಜವಾಗಿಯೇ ಚಿತ್ರತಂಡದವರಲ್ಲಿ ಸ್ವಲ್ಪ ಟೆನ್ಷನ್ ಸೃಷ್ಟಿಸಿದೆ. ಅದರಲ್ಲೂ ಚಿತ್ರದ ನಾಯಕ ಉಪೇಂದ್ರ ಅವರಿಗೆ. ಇದಕ್ಕೆ ಅವರು ನೀಡಿರುವ ಪ್ರತಿಕ್ರಿಯೆ ಇಷ್ಟು.

  ``ಹಾಗೇನಿಲ್ಲ, ತಪ್ಪು ಮಾಡಿದೆ ಎನ್ನುವಂತಹ ಯಾವುದೇ ಅಭಾಸ ಜರುಗಿಲ್ಲ. ಪ್ರಚೋದನಾತ್ಮಕವಾಗಿ ಪ್ರಶ್ನೆ ಕೇಳಿದಾಗ ಎಮೋಷನಲ್ ಆಗಿ ಹಾಗೆ ಹೇಳಿರಬಹುದು. ರಚಿತಾ ತುಂಬಾ ಎಮೋಷನಲ್ ಹುಡುಗಿ. ಅವರ ತಾಯಿಯೇ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಿ, ಇಡೀ ಸಿನಿಮಾ ಬಗ್ಗೆ ಕೇಳದೆ ಅದೊಂದು ದೃಶ್ಯದ ಬಗ್ಗೆಯೇ ಕೇಳುತ್ತಾ ಹೋಗಿದ್ದಕ್ಕೆ ಹೀಗೆಲ್ಲ ಆಗಿದೆ'' ಎಂದಿದ್ದಾರೆ ಉಪೇಂದ್ರ.

  ಇಡೀ ಸಿನಿಮಾದಲ್ಲಿ ರಚಿತಾ ರಾಮ್ ಅವರ ಪಾತ್ರ ಚೆನ್ನಾಗಿದೆ. ತೂಕದಿಂದ ಕೂಡಿದೆ. ಆದರೆ, ಅವರ ಇಡೀ ಪಾತ್ರವನ್ನು ಬಿಟ್ಟು ಅದೊಂದು ಹಾಡಿನ ಬಗ್ಗೆಯೇ ಕೇಳುತ್ತಾ ಹೋದಾಗ ರಚಿತಾ ಸ್ವಲ್ಪ ಕನ್‍ಫ್ಯೂಸ್ ಆಗಿರಬಹುದು ಎಂದಿದ್ದಾರೆ ಉಪೇಂದ್ರ.

 • ರಚಿತಾ ರಾಮ್ ಅಭಿನಯಕ್ಕೆ ಪ್ರಿಯಾಂಕಾ ಉಪೇಂದ್ರ ಫಿದಾ : ಮಾಯವಾಯ್ತಾ ಮುನಿಸು..?

  priyanka upendra praises rachita's performance in ayushmanbhava

  ರಚಿತಾ ರಾಮ್ ಮತ್ತು ಪ್ರಿಯಾಂಕಾ ಉಪೇಂದ್ರ ಮಧ್ಯೆ ಸಣ್ಣದೊಂದು ಗೋಡೆ ಸೃಷ್ಟಿಯಾಗಿತ್ತು. ಐ ಲವ್ ಯೂ ಸಿನಿಮಾ ರಿಲೀಸ್ ವೇಳೆ ರಚಿತಾ ರಾಮ್, ಉಪೇಂದ್ರ ಅಭಿನಯದ ಮಾತನಾಡಿ ಮಾಯವಾದೆ ಹಾಡು ಸಖತ್ ಗ್ಲಾಮರಸ್ ಆಗಿತ್ತು. ಅದನ್ನು ಉಪೇಂದ್ರ ಅವರೇ ನಿರ್ದೇಶಿಸಿದ್ದು ಎಂಬ ರಚಿತಾ ಹೇಳಿಕೆಗೆ ಪ್ರಿಯಾಂಕಾ ಗರಂ ಆಗಿದ್ದರು. ಅದಾದ ಮೇಲೆ ಆ ವಿವಾದ ಎಲ್ಲೆಲ್ಲಿಗೋ ಹೋಯ್ತು. ಆದರೆ.. ಈಗ ರಚಿತಾ ರಾಮ್ ಅಭಿನಯಕ್ಕೆ ಪ್ರಿಯಾಂಕಾ ಶಹಬ್ಬಾಸ್ ಎಂದಿದ್ದಾರೆ.

  ಆಯುಷ್ಮಾನ್ ಭವ ಚಿತ್ರದಲ್ಲಿನ ರಚಿತಾ ರಾಮ್ ಅಭಿನಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಪ್ರಿಯಾಂಕಾ ಕೂಡಾ ಆಯುಷ್ಮಾನ್ ಭವ ನೋಡಿ, ರಚಿತಾ ರಾಮ್ ಅಭಿನಯವನ್ನು ಹೊಗಳಿದ್ದಾರೆ. ಶಿವಣ್ಣ ಎನರ್ಜಿ ಮತ್ತು ಚಾರ್ಮಿಂಗ್ ಸಖತ್ತಾಗಿದೆ. ಗುರುಕಿರಣ್ ಅದ್ಭುತ ಸಂಗೀತ ಕೊಟ್ಟಿದ್ದಾರೆ. ಅವರಿಗೆ ಸ್ಪೆಷಲ್ ವಂದನೆ ಎಂದಿರೋ ಪ್ರಿಯಾಂಕಾ, ರಚಿತಾ ರಾಮ್ ಅವರ ಅಭಿನಯಕ್ಕೆ ಫಿದಾ ಆಗಿದ್ದಾರೆ.

  ಅಂದಹಾಗೆ ಇದುವರೆಗಿನ ರಚಿತಾ ರಾಮ್ ಚಿತ್ರಗಳಲ್ಲಿಯೇ ಇದು ರಚಿತಾ ಅವರ ಬೆಸ್ಟ್ ಆ್ಯಕ್ಟಿಂಗ್ ಎಂಬ ಪ್ರಶಂಸೆ ಎಂಬ ಮಾತುಗಳು ಚಿತ್ರರಂಗದಿAದಲೇ ಕೇಳಿಬರುತ್ತಿವೆ. ಅತ್ತ.. ಆಯುಷ್ಮಾನ್ ಭವ ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

 • ರಚಿತಾ ರಾಮ್ ಆಸ್ಪತ್ರೆಗೆ ದಾಖಲು

  rachita ram image

  ನಟಿ ರಚಿತಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯಕ್ಕೆ ರಚಿತಾ ರಾಮ್ ಅತ್ಯಂತ ಬ್ಯುಸಿ ಹೀರೋಯಿನ್. ಇದೇ ತಿಂಗಳು ಡಿ.31ಕ್ಕೆ ಅವರ ಅಭಿನಯದ ಲವ್ ಯೂ ರಚ್ಚು ರಿಲೀಸ್ ಆಗುತ್ತಿದೆ. ಜನವರಿಯಲ್ಲಿ ಏಕ್ ಲವ್ ಯಾ ರಿಲೀಸ್ ಇದೆ. ಹಿಂದಿನ ತಿಂಗಳು 100 ಮೂವಿ ರಿಲೀಸ್ ಆಗಿತ್ತು. ಮತ್ತೊಂದೆಡೆ ಚಂದನ್ ಶೆಟ್ಟಿ ಜೊತೆಗೆ ಲಕಲಕ ಲ್ಯಾಂಬೋರ್ಗಿನಿ ಶೂಟಿಂಗ್ ಆಗಿದ್ದು, ಆ ಹಾಡು ಕೂಡಾ ಈಗ ರಿಲೀಸ್ ಹಂತದಲ್ಲಿದೆ.

  ಒಂದೆಡೆ ನಿರಂತರವಾಗಿ ಲವ್ ಯೂ ರಚ್ಚು ಮತ್ತು ಏಕ್ ಲವ್ ಯಾ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ರಚಿತಾ ರಾಮ್, ನಿರಂತರ ಶೂಟಿಂಗ್ ಮತ್ತು ಪ್ರಚಾರದ ಒತ್ತಡದಲ್ಲಿ ಸುಸ್ತಾಗಿದ್ದರು. ಶೀತಜ್ವರಕ್ಕೆ ತುತ್ತಾಗಿದ್ದ ರಚಿತಾ ರಾಮ್, ಶಿವಮೊಗ್ಗಕ್ಕೆ ಹೋಗಿ ಬಂದ ಮೇಲೆ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಆರೋಗ್ಯ ಸುಧಾರಿಸಿದ್ದು, ರಚಿತಾ ಅವರಿಗೆ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಹೀಗಾಗಿ ರಚಿತಾ ಸದ್ಯಕ್ಕೆ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ.

 • ರಚಿತಾ ರಾಮ್ ಡೇಟಿಂಗ್

  ರಚಿತಾ ರಾಮ್ ಡೇಟಿಂಗ್

  ಸ್ಯಾಂಡಲ್`ವುಡ್ ಡಿಂಪಲ್ ಕ್ವೀನ್ ರಚಿತಾ ರಾವ್ ಅವರಿಗೀಗ 30 ವರ್ಷ. ಆಗಲೇ ರಚಿತಾ ಅವರಿಗೆ ಮದುವೆ ಯಾವಾಗ ಅನ್ನೋ ಪ್ರಶ್ನೆಗಳು ದಿನೇ ದಿನೇ ಎದುರಾಗುತ್ತಿವೆ. ಪ್ರಶ್ನೆ ಕೇಳುವವರಿಗಿಂತ ಬೋಲ್ಡ್ ಆಗಿರುವ ರಚಿತಾ, ಪ್ರತಿಪ್ರಶ್ನೆಗಳಿಗೆ ಪ್ರಶ್ನೆ ಕೇಳುವವರೇ ಸುಮ್ಮನಾಗುತ್ತಿದ್ದಾರೆ. ಇಂತಹ ರಚಿತಾ ರಾಮ್ ಅವರೀಗ ಡೇಟಿಂಗ್ ಆಪ್ ಒಂದಕ್ಕೆ ರಾಯಭಾರಿ ಆಗಿದ್ದಾರೆ.

  ಇಷ್ಟಕ್ಕೂ ರಚಿತಾ ರಾಮ್ ಅವರಿಗೆ ಡೇಟಿಂಗ್ ಯಾಕೆ? ಹುಡುಗರನ್ನ ಹುಡುಕೋಕೆ ಅವರೇಕೆ ಕಷ್ಟ ಪಡಬೇಕು.. ಅನ್ನೋವ್ರಿಗೆ ಕೊರತೆಯೇನೂ ಇರಲ್ಲ. ಹುಡುಗ ಬೇಕು ಅಂತ ಹೇಳಿದ್ರೆ ಸಾಕು, ಕ್ಯೂ ನಿಲ್ತಾರೆ ಅನ್ನೋವ್ರಿಗೇನೂ ಕೊರತೆ ಇಲ್ಲ. ಇಷ್ಟಕ್ಕೂ ರಚಿತಾ ಅವರು ಮಾಡಿರೋದು ಇಷ್ಟೆ, ಒಂದು ಡೇಟಿಂಗ್ ಆಪ್`ನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನೀನೇಯೆಟ್.ಗೋ ಅನ್ನೋ ಆಪ್ ಅದು, ಇದು ಡೇಟಿಂಗ್ ಆಪ್ ಅಲ್ಲ. ಸಿಂಗಲ್ ಇರೋವ್ರಿಗೆ ಎಂದೇ ರೂಪಿಸಿರುವ ಆಪ್. ನಿಜವಾದ ಪ್ರೀತಿ ಹುಡುಕುವರಿಗಾಗಿ.. ಎಂದು ಹೇಳಿದ್ದಾರೆ ರಚಿತಾ ರಾಮ್. ನಿಜವಾದ ಪ್ರೀತಿ ಹುಡುಕುವವರು ಆಪ್ ನೋಡೋಕೆ ಯಾಕೆ ಹೋಗ್ತಾರೆ ಅನ್ನೋದು ಪ್ರಶ್ನೆ. ಆದರೆ ರಚಿತಾ ರಾಮ್ ಡೇಟಿಂಗ್ ಆಪ್ ಪ್ರಮೋಷನ್ ಮಾಡಿರುವುದು ಹಲವರ ಹುಬ್ಬೇರಿಸಿರುವುದಂತೂ ನಿಜ.

 • ರಚಿತಾ ರಾಮ್ ಲವ್ ಫೇಲ್ಯೂರ್

  rachita ram ek love ya heart break song

  ಒಂದರ ಹಿಂದೊAದು ಚಿತ್ರಗಳಲ್ಲಿ ಸದಾ ಬ್ಯುಸಿಯಾಗಿರುವ ರಚಿತಾ ರಾಮ್ ಅವರಿಗೆ ಪ್ರೇಮ ಭಗ್ನವಾಗಿದೆ. ಅದೆಷ್ಟು ಹುಡುಗರ ಹೃದಯ ಭಗ್ನ ಮಾಡಿದ ಶಾಪ ತಟ್ಟಿತೋ ಏನೋ.. ಈಗ ಅವರ ಲವ್ವೇ ಫೇಲ್ಯೂರು. ಕೈ ಕೊಟ್ಟ ಹುಡುಗ ಯಾರಿರಬಹುದು ಅನ್ನೋ ಡೌಟಾ..? ಅದನ್ನು ಜೋಗಿ ಪ್ರೇಮ್ ಅವರೇ ಹೇಳಬೇಕು. ರಚಿತಾಗೆ ಲವ್ ಫೇಲ್ಯೂರ್ ಮಾಡಿಸಿರೋದೇ ಅವರು. ಎಣ್ಣೆ ಹೊಡೆಸ್ತಿರೋದೂ ಅವರೇನೇ..

  ಇದೆಲ್ಲ ಏಕ್ ಲವ್ ಯಾ ಚಿತ್ರಕ್ಕಾಗಿ ನಡೆದಿರೋ ಹಾಡಿನ ಶೂಟಿಂಗ್ ಕಥೆ. ಈ ಚಿತ್ರದಲ್ಲಿ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೋ ಭಗವಂತ ಅನ್ನೋ ಹಾಡಿದೆ. ಇಲ್ಲಿ ಪ್ಯಾಥೋ ಸಾಂಗ್ ಹಾಡೋದು ಹೀರೋ ಅಲ್ಲ, ರಚಿತಾ ರಾಮ್. ಹೀಗಾಗಿ ಈ ಹಾಡು ಲವ್ ಫೇಲ್ಯೂರ್ ಆಗಿರೋ ಎಲ್ಲ ಹೆಣ್ಮಕ್ಳಿಗೆ ಅರ್ಪಣೆ ಎಂದಿದ್ದಾರೆ ಪ್ರೇಮ್.

 • ರಚಿತಾ ರಾಮ್ ಸೋಷಿಯಲ್ ಮೀಡಿಯಾದಲ್ಲಿರೋದು ಸುಳ್ಳು..!!

  rachita ram not on soical media except instagram

  ಡಿಂಪಲ್ ಕ್ವೀನ್ ರಚಿತಾ ರಾಮ್ ಸೋಷಿಯಲ್ ಮೀಡಿಯಾದಲ್ಲಿದ್ದಾರಾ..? ಇದ್ದಾರೆ, ಇದೇ ಅವರ ಅಫಿಷಿಯಲ್ ಅಕೌಂಟ್ ಎನ್ನುವವರಿಗೇನೂ ಕೊರತೆಯಿಲ್ಲ. ಫೇಸ್‍ಬುಕ್‍ನಲ್ಲು 400ಕ್ಕೂ ಹೆಚ್ಚು ಪೇಜ್, ಟ್ವಿಟ್ಟರ್‍ನಲ್ಲಿ ನೂರಾರು ಅಕೌಂಟುಗಳು ರಚಿತಾ ರಾಮ್ ಹೆಸರಲ್ಲಿವೆ. ಆ ಎಲ್ಲ ಖಾತೆಗಳೂ ಕಾಲ ಕಾಲಕ್ಕೆ ಅಪ್‍ಡೇಟ್ ಆಗುತ್ತಲೇ ಇವೆ. ಆದರೆ, ಇವ್ಯಾವುದೂ ರಚಿತಾ ರಾಮ್ ಅವರದ್ದಲ್ಲ.

  ನಾನು ಸೋಷಿಯಲ್ ಮೀಡಿಯಾದಲ್ಲಿರೋದು ಇನ್‍ಸ್ಟಾಗ್ರಾಂನಲ್ಲಿ ಮಾತ್ರ. ಅಲ್ಲಿಯೂ ನಾನು ಆ್ಯಕ್ಟಿವ್ ಆಗಿಲ್ಲ. ಉಳಿದಂತೆ ಫೇಸ್‍ಬುಕ್, ಟ್ವಿಟ್ಟರ್‍ನಲ್ಲಿ ನಾನಿಲ್ಲ. ನನಗೆ ಸೋಷಿಯಲ್ ಮೀಡಿಯಾ ಎಂದರೆ ದೂರ ದೂರ. ಆಸಕ್ತಿಯೂ ಇಲ್ಲ. ಬೇರೆಯವರ ಬಗ್ಗೆ ತಿಳಿದುಕೊಳ್ಳುವ ಕುತೂಹಲವೂ ಇಲ್ಲ ಎಂದಿದ್ದಾರೆ ರಚಿತಾ ರಾಮ್.

 • ರಚಿತಾ ರಾಮ್`ಗೆ ಸಂಜೆ ಮೇಲೆ ಕಾಳ್ ಹಾಕ್ತಾವ್ರೆ ನೀನಾಸಂ ಸತೀಶ್

  ರಚಿತಾ ರಾಮ್`ಗೆ ಸಂಜೆ ಮೇಲೆ ಕಾಳ್ ಹಾಕ್ತಾವ್ರೆ ನೀನಾಸಂ ಸತೀಶ್

  ಸಂಜೆ ಮೇಲೆ ಸುಮ್ನೆ ಹಂಗೆ ಫೋನು ಮಾಡ್ಲ ನಿಂಗೆ..

  ನಿನ್ನ ಜೊತೆಗೆ ಸುತ್ತಬೇಕು ಊರ ತುಂಬ ಹಾಗೆ..

  ಎಂದು ಕರೆಯುತ್ತಾ ನೀನಾಸಂ ಸತೀಶ್, ರಚಿತಾ ರಾಮ್`ಗೆ ಕಾಳು ಹಾಕ್ತಿದ್ದಾರೆ. ಅದೂ ಮ್ಯಾಟ್ನಿಗೆ ಕರೆದುಕೊಂಡು ಹೋಗೋಕೆ..ಮ್ಯಾಟ್ನಿ ಚಿತ್ರದ ಮೊದಲ ಹಾಡು ಮೋಡಿಯನ್ನೇ ಮಾಡಿದೆ.

  ರಚಿತಾ ರಾಮ್ ಮುದ್ದು ಮುದ್ದಾಗಿ ಕಾಣ್ತಿದ್ದರೆ, ಮ್ಯಾಟ್ನಿಗೆ ಕರೆಯೋ ಹುಡುಗನಾಗಿ ಲವ್ಲಿ ಬಾಯ್ ಆಗಿದ್ದಾರೆ ನೀನಾಸಂ ಸತೀಶ್. ಮನೋಹರ್ ಕಾಂಪಲ್ಲಿ ನಿರ್ದೇಶನದ ಮ್ಯಾಟ್ನಿ ಚಿತ್ರದ ಈ ಹಾಡು, ಪ್ರೇಮಿಗಳ ಮನಸ್ಸು ಗೆದ್ದಿದೆ. ಲವರ್ಸ್‍ಗಳಿಗೆ ಹುಡುಗಿಯರನ್ನ ಕರೆಯೋಕೆ ಹೊಸ ಲಿರಿಕ್ಸು ಕೊಟ್ಟಿರೋದು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ. ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿ ಹಾಡು ಚೆಂದವಾಗಿ ಮೂಡಿ ಬಂದಿದೆ.

  ಚಿತ್ರದ ಕೊರಿಯೋಗ್ರಫಿ, ಸೆಟ್ ಕೂಡಾ ಡಿಫರೆಂಟ್ ಆಗಿದ್ದು, ಸುಧಾಕರ್ ರಾಜ್ ಅವರ ಪ್ರತಿಭೆ ಮತ್ತು ಶ್ರಮ ಜೊತೆಗೆ ಪ್ರತಾಪ್ ಮೆಂಡನ್ ಅವರ ಕ್ರಿಯೇಟಿವಿಟಿ ಎದ್ದು ಕಾಣುತ್ತಿದೆ. ಪಾರ್ವತಿ ಎಸ್. ಗೌಡ ಅವರು ಚಿತ್ರದ ನಿರ್ಮಾಪಕರು.

 • ರಚಿತಾ ರಾಮ್`ರ 100 ಅತ್ತಿಗೆ ಯಾರು ಗೊತ್ತಾ..? ಘೋಸ್ಟ್ ಕ್ವೀನ್

  ರಚಿತಾ ರಾಮ್`ರ 100 ಅತ್ತಿಗೆ ಯಾರು ಗೊತ್ತಾ..? ಘೋಸ್ಟ್ ಕ್ವೀನ್

  100. ಇದೇ ವಾರ ರಿಲೀಸ್ ಆಗುತ್ತಿರೋ ರಮೇಶ್ ನಟಿಸಿ ನಿರ್ದೇಶಿಸಿರುವ ಸಿನಿಮಾ. ಈ ಚಿತ್ರದಲ್ಲಿ ಸೈಬರ್ ಕ್ರೈಂ ಕಥೆ ಇದೆ. ಫ್ಯಾಮಿಲಿ ಥ್ರಿಲ್ಲರ್ ಸ್ಟೋರಿ ಎಂದು ರಮೇಶ್ ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ರಮೇಶ್ ಅವರಿಗೆ ತಂಗಿಯಾಗಿರೋದು ರಚಿತಾ ರಾಮ್. ಪುಷ್ಪಕವಿಮಾನದಲ್ಲಿ ಮಗಳಾಗಿದ್ದ ರಚಿತಾ, ಈಗ ತಂಗಿಯಾಗಿ ಪ್ರಮೋಷನ್ ಪಡೆದಿದ್ದಾರೆ. ಅವರಿಗೆ ಅತ್ತಿಗೆಯಾಗಿ ಬಂದಿರೋದು ಪೂರ್ಣ.

  ಈ ಪೂರ್ಣ ಮೂಲತಃ ಕೇರಳದವರು. ವೊರಿಜಿನಲ್ ಹೆಸರು ಶಮ್ನಾ ಕಾಸಿಮ್. ಹೆಚ್ಚು ಪ್ಯಾಪುಲರ್ ಆಗಿದ್ದು ತೆಲುಗಿನಲ್ಲಿ. ಅಲ್ಲಿ ಪೂರ್ಣ ಅವರನ್ನು ಘೋಸ್ಟ್ ಕ್ವೀನ್ ಎಂದೇ ಬ್ರಾಂಡ್ ಮಾಡಿದ್ದರು. ಕೆಲವು ದೆವ್ವದ ಚಿತ್ರಗಳಲ್ಲಿ ನಟಿಸಿ, ಅವೆಲ್ಲವೂ ಹಿಟ್ ಆದ ಕಾರಣ ಪೂರ್ಣ ಘೋಸ್ಟ್ ಕ್ವೀನ್ ಆಗಿದ್ದರು. ಕನ್ನಡದಲ್ಲಿ ಜೋಶ್ ಮತ್ತು ರಾಧನ್ ಗಂಡ ಚಿತ್ರದಲ್ಲಿ ನಟಿಸಿ ಹೋಗಿದ್ದವರು. ಈಗ 100 ಮೂಲಕ ಮತ್ತೆ ಬಂದಿದ್ದಾರೆ.

  ಚಿತ್ರದಲ್ಲಿ ನನ್ನದು ಗೃಹಿಣಿಯ ಪಾತ್ರ. ರಮೇಶ್ ಅವರಿಗೆ ಪತ್ನಿ. ಹಳ್ಳಿ ಬ್ಯಾಕ್‍ಗ್ರೌಂಡ್‍ನಿಂದ ಬಂದಿರೋ ಮುಗ್ಧೆ. ಗಂಡನಿಗಿಂತ ಹೆಚ್ಚು ನಾದಿನಿ ರಚಿತಾ ರಾಮ್ ಜೊತೆ ಒಳ್ಳೆ ಬಾಂಧವ್ಯ ಇರೋ ಅತ್ತಿಗೆಯ ಪಾತ್ರ. ಚಿತ್ರದ ಕಥೆ ಮತ್ತು ನನ್ನ ಪಾತ್ರ ಚೆನ್ನಾಗಿದೆ. ಥ್ರಿಲ್ ಆಗಿದ್ದೇನೆ ಎನ್ನುವ ಪೂರ್ಣ, ಅವಕಾಶ ಕೊಟ್ಟ ರಮೇಶ್ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ 100 ಇದೇ ವಾರ ರಿಲೀಸ್ ಆಗುತ್ತಿದೆ.

 • ರಚಿತಾ ರಾಮ್‍ಗೆ ಡೋಂಟ್‍ವರಿ ಎಂದ ಪುನೀತ್ 

  puneeth boosts rachitha's confidence

  ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರಕ್ಕೆ ರಚಿತಾ ರಾಮ್ ನಾಯಕಿ. ಇದನ್ನು ಪುನೀತ್ ಅವರ ಅಭಿಮಾನಿಗಳು ಸ್ವಾಗತಿಸಿದ್ದಾರೆ. ಆದರೆ, ಕೆಲವೇ ಕೆಲವು ಅಭಿಮಾನಿಗಳು ರಚಿತಾ ಬೇಡ ಎಂದು ಅಭಿಯನ ನಡೆಸಿರುವುದಕ್ಕೆ ಸ್ವತಃ ನಟಿ ರಚಿತಾ ರಾಮ್ ಆಘಾತ ವ್ಯಕ್ತಪಡಿಸಿದ್ದಾರೆ.

  ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಹೀಗೇಕೆ ಆಗುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ನನಗೆ ಡಾ.ರಾಜ್‍ಕುಮಾರ್ ಫ್ಯಾಮಿಲಿ ಬಗ್ಗೆ ಗೌರವ ಇದೆ. ಪುನೀತ್ ರಾಜ್‍ಕುಮಾರ್ ಜೊತೆ ನಟಿಸುತ್ತಿರುವುದಕ್ಕೆ ಖುಷಿಯೂ ಇದೆ. ದಯವಿಟ್ಟು ವಿನಾಕಾರಣ ನನ್ನ ಮೇಲೆ ಆರೋಪ ಹೊರಿಸಬೇಡಿ. ನಾನು ನಿಮ್ಮ ಮನೆಯ ಹೆಣ್ಣು ಮಗಳು ಎಂದಿದ್ದಾರೆ ರಚಿತಾ.

  ಸ್ವತಃ ಪುನೀತ್ ರಾಜ್‍ಕುಮಾರ್ ಕೂಡಾ ರಚಿತಾ ಅವರಿಗೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡು ಹೋಗಿ ಎಂದು ಧೈರ್ಯ ಹೇಳಿದ್ದಾರಂತೆ.

  Related Articles :-

  #ರಚಿತಾಬೇಡ ಅಭಿಯಾನ.. ನೈಜ ಅಭಿಮಾನಿಗಳದ್ದಲ್ಲ..!

  ಪುನೀತ್ ಜೊತೆ #ರಚಿತಾಬೇಡ. ಅಭಿಮಾನಿಗಳ ಅಭಿಯಾನ..

 • ರಚಿತಾ ರಾಮ್‍ಗೆ ಶಾಪ ವಿಮೋಚನೆ..!

  rachitha comes out of jinx

  ರಚಿತಾ ರಾಮ್‍ಗೆ ಶಾಪವಿತ್ತಾ..? ಎಂಥ ಶಾಪ ಅದು..? ಏನು ಸಮಸ್ಯೆ ಆಗಿತ್ತು..? ಯಾರು ಶಾಪ ಹಾಕಿದ್ದರು..? ಯಾವಾಗ..? ಆದರೆ, ಸ್ಪೆಷಲ್ ಏನು ಗೊತ್ತಾ..? ಅದು ಶಾಪವಷ್ಟೇ ಅಲ್ಲ, ವರವೂ ಹೌದು. ಸುಮ್ನೆ ತಲೆಗೆ ಹುಳ ಬಿಟ್ಕೋಬೇಡಿ. 

  ರಚಿತಾ ರಾಮ್ ಇಷ್ಟು ದಿನ ಸ್ಟಾರ್ ನಟರಿಗಷ್ಟೇ ನಾಯಕಿಯಾಗ್ತಾರೆ ಅನ್ನೋ ಅಪವಾದವಿತ್ತು. ಅದಕ್ಕೆ ತಕ್ಕಂತೆ ರಚಿತಾ ನಟಿಸಿದ್ದೆಲ್ಲವೂ ಸ್ಟಾರ್ ನಟರ ಜೊತೆಗೆ. ಈಗ ಆ ಶಾಪ ವಿಮೋಚನೆಯಾಗುತ್ತಿದೆ.

  ನಿಖಿಲ್ ಅಭಿನಯದ, ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ ಚಿತ್ರಕ್ಕೆ ರಚಿತಾ ನಾಯಕಿ. ಬಹುಶಃ ಸ್ಟಾರ್ ಅಲ್ಲದ, ಕೇವಲ 2ನೇ ಚಿತ್ರದಲ್ಲಿ ನಟಿಸುತ್ತಿರುವ ನಾಯಕನ ಜೊತೆ ನಟಿಸುತ್ತಿರುವುದು ರಚಿತಾ ಫಿಲ್ಮಿ ಲೈಫಲ್ಲಿ ಇದೇ ಮೊದಲು.

  ಇದರ ಮಧ್ಯೆ ರಚಿತಾ ಮತ್ತೆ ದರ್ಶನ್‍ಗೆ ನಾಯಕಿಯಾಗ್ತಾರೆ ಅನ್ನೋ ಸುದ್ದಿಯಿದೆ. ತೆಲುಗು ಚಿತ್ರವೊಂದರಲ್ಲಿ ನಟಿಸಲು ಒಪ್ಪಿದ್ದಾರೆ ಎನ್ನುವ ಸುದ್ದಿಯೂ ಇದೆ. ದುನಿಯಾ ವಿಜಿ ಜೊತೆ ಜಾನಿ ಜಾನಿ ಯೆಸ್ ಪಪ್ಪಾ ಹಾಗೂ ನೀನಾಸಂ ಸತೀಶ್ ಜೊತೆ ಅಯೋಗ್ಯ ಚಿತ್ರದಲ್ಲಿ ನಟಿಸುತ್ತಿರುವ ರಚಿತಾ, ಈಗ ಫುಲ್ ಬ್ಯುಸಿ.

 • ರಚಿತಾ ರಾಮ್‍ಗ್ಯಾಕೋ ಇಂಗ್ಲಿಷ್ ಮೋಹ

  rachitha ram speaks in kanglish

  ಕನ್ನಡವನ್ನು ಇಂಗ್ಲಿಷ್‍ನಲ್ಲಿ ಹೇಳೋದು, ಇಂಗ್ಲಿಷ್ ಸ್ಟೈಲಲ್ಲಿ ಕನ್ನಡ ಮಾತನಾಡೋದು ಒಂಥರಾ ಕೆಟ್ಟ ಟ್ರೆಂಡ್ ಆಗಿದೆ. ಇತ್ತೀಚೆಗೆ ಇದೇ ರೀತಿ ಕನ್ನಡವನ್ನು ಇಂಗ್ಲಿಷ್‍ನಲ್ಲಿ ಮಾತನಾಡುತ್ತಲೇ ಖ್ಯಾತಿ ಪಡೆದಿರುವುದು ಬಿಗ್‍ಬಾಸ್ ನಿವೇದಿತಾ ಗೌಡ. ಅದೇ ಹಾದಿಯಲ್ಲಿ ಹೆಜ್ಜೆ ಹಾಕ್ತಿರೋದು ರಚಿತಾ ರಾಮ್.

  ಆದರೆ, ಒಂದ್ ವಿಷ್ಯ. ರಚಿತಾ ರಾಮ್‍ಗೆ ತುಂಬಾ ಒಳ್ಳೆಯ ಕನ್ನಡ ಬರುತ್ತೆ. ಅದ್ಭುತವಾಗಿ ಕನ್ನಡದಲ್ಲಿಯೇ ಅರಳು ಹುರಿದಂತೆ ಮಾತನಾಡ್ತಾರೆ. ಇಷ್ಟಿದ್ದರೂ ಅವರು ಕನ್ನಡವನ್ನು ಇಂಗ್ಲಿಷ್ ಸ್ಟೈಲಲ್ಲಿ ಮಾತನಾಡೋಕೆ ಹೊರಟಿರೋದು ಸಿನಿಮಾದಲ್ಲಿ.

  ಜಾನಿ ಜಾನಿ ಯೆಸ್ ಪಪ್ಪಾ ಚಿತ್ರಕ್ಕೆ ಸ್ಪೆಷಲ್ ಫೋಟೋ ಶೂಟ್ ಮಾಡಿಸಿರುವ ರಚಿತಾ ರಾಮ್, ಇನ್ನಷ್ಟು ಬ್ಯೂಟಿಫುಲ್ಲಾಗಿ ಕಂಗೊಳಿಸುತ್ತಿದ್ದಾರೆ. ಆ ವೇಳೆಯಲ್ಲೇ ಚಿತ್ರದಲ್ಲಿನ ಅವರ ಪಾತ್ರದ ಕಲ್ಪನೆಯೂ ಗೊತ್ತಾಗಿದೆ.

  ಕನ್ನಡವನ್ನು ಇಂಗ್ಲಿಷ್ ಸ್ಟೈಲಲ್ಲಿ ಮಾತನಾಡುವ ಇಂಗ್ಲಿಷ್ ವ್ಯಾಮೋಹಿ ಕನ್ನಡತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ರಚಿತಾ. ಫಾರಿನ್ ರಿಟರ್ನ್‍ಡ್ ಹುಡುಗಿ. ರಚಿತಾ ಅವರ ಕನ್ನಡ್ ಕೇಳಲು ಸಿದ್ಧರಾಗಿ.