` rachita ram - chitraloka.com | Kannada Movie News, Reviews | Image

rachita ram

 • ನಿಮ್ಮ ಊರಿಗೇ ಬರ್ತಾನೆ ನಟಸಾರ್ವಭೌಮ. ಟೈಂ ತಿಳ್ಕೊಳಿ

  natasarvabhouma is coming to your city

  ನಟಸಾರ್ವಭೌಮ ಸೂಪರ್ ಸಕ್ಸಸ್ ಖುಷಿಯನ್ನು ಅಭಿಮಾನಿ ದೇವರೊಂದಿಗೆ ಹಂಚಿಕೊಳ್ಳಲು ಹೊರಟಿದ್ದಾರೆ ಪುನೀತ್ ರಾಜ್‍ಕುಮಾರ್. ಈಗಾಗಲೇ ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ ಯಾತ್ರೆ ಪೂರೈಸಿರುವ ಅಪ್ಪು, ಈ ಬಾರಿ ಉತ್ತರ ಕರ್ನಾಟಕ ಯಾತ್ರೆಗೆ ಹೊರಟಿದ್ದಾರೆ. ಮಾರ್ಚ್ 3ರಂದು ಭಾನುವಾರ ಪುನೀತ್ ಅಭಿಮಾನಿಗಳ ಜೊತೆಯಲ್ಲಿರ್ತಾರೆ.

  ಮಾರ್ಚ್ 3 : ಭಾನುವಾರ

  ಬೆಳಗ್ಗೆ 10ಕ್ಕೆ - ಹಾವೇರಿ

  ಬೆಳಗ್ಗೆ 11.30 - ರಾಣೆಬೆನ್ನೂರು

  ಮಧ್ಯಾಹ್ನ 1ಕ್ಕೆ - ದಾವಣಗೆರೆ

  ಮಧ್ಯಾಹ್ನ 2.30 - ಚಿತ್ರದುರ್ಗ

  ಮಧ್ಯಾಹ್ನ 3.30 - ಹಿರಿಯೂರು

  ಸಂಜೆ 4.30 - ಶಿರಾ 

  ಸಂಜೆ 5.30 - ತುಮಕೂರು

  ಈಗ ರೆಡಿಯಾಗಬೇಕಿರೋದು ನೀವು. ನಟಸಾರ್ವಭೌಮನನ್ನು ಕಣ್ತುಂಬಿಕೊಂಡ ಅಭಿಮಾನಿಗಳು, ಈಗ ರಿಯಲ್ಲಾಗಿಯೇ ಪುನೀತ್ ಜೊತೆ ಕೈ ಕುಲುಕಬಹುದು.

 • ನಿಮ್ಮ ರಾಜ, ರಾಣಿಯ ಜೊತೆ ಹಾಡು ಹಾಡಿ.. 6364741243ಗೆ ಕಳಿಸಿ.. ಬಹುಮಾನ ಗೆಲ್ಲಿ..!

  sing a song and win active

  ಸೀತಾರಾಮ ಕಲ್ಯಾಣ ಚಿತ್ರದ ಸೂಪರ್ ಹಿಟ್ ಹಾಡುಗಳಲ್ಲೊಂದು ನಿನ್ನ ರಾಜ ನಾನು.. ನನ್ನ ರಾಣಿ ನೀನು.. ಬಿಡುಗಡೆ ಹೊಸ್ತಿಲಲ್ಲಿರುವ ಸಿನಿಮಾ ತಂಡ, ಈಗ ಚಿತ್ರರಸಿಕರಿಗೊಂದು ಬ್ಯೂಟಿಫುಲ್ ಸ್ಪರ್ಧೆಯನ್ನಿಟ್ಟಿದೆ. ನೀವು ಮಾಡಬೇಕಾದ್ದು ಇಷ್ಟೆ..

  ನಿಮ್ಮ ಸಂಗಾತಿಯ ಜೊತೆ.. ನೀವು ರಾಜನಾಗಿದ್ದರೆ ರಾಣಿಯ ಜೊತೆ.. ರಾಣಿಯಾಗಿದ್ದರೆ ರಾಜನ ಜೊತೆ.. ನಿನ್ನ ರಾಜ ನಾನು.. ನನ್ನ ರಾಣಿ ನೀನು.. ಹಾಡಿಗೆ ನಿಮ್ಮದೇ ಸ್ಟೈಲ್‍ನಲ್ಲಿ ನೃತ್ಯ ಮಾಡಿ. ವಿಡಿಯೋ ಮಾಡಿ. 6364741243ಗೆ ಕಳಿಸಿ.. 

  ಕಳಿಸಿದ್ರೆ ಮುಂದ.. ಮುಂದೇನು ಅಂತೀರೇನು.. ನೀವು ಸೀತಾರಾಮ ಕಲ್ಯಾಣ ಚಿತ್ರತಂಡದ ಜೊತೆ ಔತಣಕೂಟದಲ್ಲಿ ಭಾಗವಹಿಸಬಹುದು. ಒಬ್ಬ ಅದೃಷ್ಟಶಾಲಿಗೆ ಹೋಂಡಾ ಆ್ಯಕ್ಟಿವಾ ಉಡುಗೊರೆಯಾಗಿ ಸಿಗಲಿದೆ. ಇನ್ನೇಕೆ ತಡ.. ಟಿಕ್ ಟಾಕ್ ಆ್ಯಪ್ ಆನ್ ಮಾಡಿ.

 • ನೋ ಲಾಜಿಕ್.. ಓನ್ಲಿ ನಗು ಟಾನಿಕ್.. ಜಾನಿ ಮ್ಯಾಜಿಕ್

  johnny johnny is a complete riot

  ಜಾನಿ ಜಾನಿ ಯೆಸ್ ಪಪ್ಪಾ ಚಿತ್ರದ ಸ್ಪೆಷಲ್ ಏನು..? ಕಾಮಿಡಿ. ಕಾಮಿಡಿ ಬಿಟ್ಟರೆ ಬೇರೆ ಏನಿದೆ..? ಕಾಮಿಡಿಯೇ ಎಲ್ಲ... ಇದರಲ್ಲಿ ನಗುವನ್ನು ಬಿಟ್ಟು ಬೇರೇನೂ ಹುಡುಕಬೇಡಿ. ಲಾಜಿಕ್‍ನ್ನು ಕೂಡಾ ಹುಡುಕಬೇಡಿ. ಇದು ದುನಿಯಾ ವಿಜಯ್ ಹೇಳೋ ಮಾತು.

  ಜಾನಿ ಮೇರಾ ನಾಮ್ ಬಂದ 7 ವರ್ಷಗಳ ನಂತರ ಜಾನಿ ಜಾನಿ ಯೆಸ್ ಪಪ್ಪಾ ಬರುತ್ತಿದೆ. ಈ 7 ವರ್ಷಗಳಲ್ಲಿ ಜಾನಿ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ಅವನದ್ದೇ ಒಂದು ವೆಬ್‍ಸೈಟ್ ಇದೆ. ಫುಲ್ ಇಂಗ್ಲಿಷ್ ಹೊಡಿತಾನೆ. ಸಖತ್ ಸ್ಟೈಲಿಶ್ ಆಗಿದ್ದಾನೆ. ಅಷ್ಟೇ ಅಲ್ಲ, ಅಲ್ಲಿ ರಮ್ಯಾಗೆ ಕಾಳು ಹಾಕಿದ್ದ ಜಾನಿ, ಇಲ್ಲಿ ರಚಿತಾಗೆ ಗಾಳ ಹಾಕ್ತಾನೆ. 

  ಆದರೆ, ಕಾಮಿಡಿಯ ಆಚೆ ಯಾವುದೂ ಹೋಗಲ್ಲ. ಥಿಯೇಟರ್ ಒಳಗೆ ಎಂಟ್ರಿ ಕೊಡುವ ಪ್ರೇಕ್ಷಕ ನಗೋಕೆ ಶುರು ಮಾಡಿದ್ರೆ, ಸಿನಿಮಾ ಮುಗಿಯುವವರೆಗೂ ನಗ್ತಾನೇ ಇರ್ತಾನೆ. ಸ್ಕ್ರಿಪ್ಟ್ ಹಾಗಿದೆ. ಅದರ ಕ್ರೆಡಿಟ್ಟು ಪ್ರೀತಮ್ ಗುಬ್ಬಿದು ಅಂತಾರೆ ವಿಜಯ್.

 • ಪದ್ಮಾವತಿ..ಹೊಸ ಪದ್ಮಾವತಿ.. ಯೆಸ್ ಪಪ್ಪಾ..

  hosa padmavathi craze

  ಇದು ಜಾನಿ ಜಾನಿ ಯೆಸ್ ಪಪ್ಪಾ ಚಿತ್ರದ ಹೊಸ ಹಾಡು. ಹೊಸ ಪದ್ಮಾವತಿಯಾಗಿ ಬಂದಿರೋ ರಚಿತಾ ರಾಮ್, ದುನಿಯಾ ವಿಜಯ್ ಜೋಡಿಯ ಹಾಡಿನ ಟೀಸರ್ ದೊಡ್ಡ ಹವಾ ಎಬ್ಬಿಸಿದೆ. ಊರಿಗೊಬ್ಳೇ ಪದ್ಮಾವತಿ ಹಾಡಿನಿಂದ ರಮ್ಯಾಗೆ ಪದ್ಮಾವತಿ ಇಮೇಜ್ ಕೊಟ್ಟಿದ್ದ ಪ್ರೀತಂ ಗುಬ್ಬಿ ನಿರ್ದೇಶನದ ಸಿನಿಮಾ ಜಾನಿ ಜಾನಿ ಯೆಸ್ ಪಪ್ಪಾ.

  ಚಿತ್ರದ ಹಾಡಿನಲ್ಲಿ ರಚಿತಾ ರಾಮ್, ಇದುವರೆಗೆ ಕಾಣಿಸದೇ ಇರುವಷ್ಟು ಗ್ಲಾಮರಸ್ಸಾಗಿ ಕಾಣಿಸಿಕೊಂಡಿದ್ದಾರೆ. ಹಾಡು ಎಂದಿನಂತೆ ಟಪ್ಪಾಂಗುಚ್ಚಿ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮೂಡಿ ಬಂದಿರುವ ಹಾಡಿಗೆ, ಸಾಹಿತ್ಯ ಕಿರಿಕ್ ಪಾರ್ಟಿ ಖ್ಯಾತಿಯ ಧನಂಜಯ್ ರಂಜನ್ ಅವರದ್ದು.

  Related Articles :-

  'Hosa Padmavathi' First Look Released

  ರಮ್ಯಾ ಪದ್ಮಾವತಿ.. ರಚಿತಾ ಹೊಸ ಪದ್ಮಾವತಿ..

 • ಪಿ.ವಾಸು ಬೇಸರಕ್ಕೆ ಕಾರಣವಾಯ್ತು ರಚಿತಾ ರಾಮ್ ಆಡಿದ ಆ ಮಾತು

  p vasu upset over rachita ram's words

  ಡಿಂಪಲ್ ಕ್ವೀನ್ ರಚಿತಾ ರಾಮ್ ಇತ್ತೀಚೆಗ್ಯಾಕೋ ಪದೇ ಪದೇ  ವಿವಾದಗಳಿಗೆ ಸಿಲುಕುತ್ತಿದ್ದಾರೆ. ಈ ಬಾರಿ ರಚಿತಾ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದು ಹಿರಿಯ ನಿರ್ದೇಶಕ ಪಿ.ವಾಸು. ಆಯುಷ್ಮಾನ್ ಚಿತ್ರದ ಸುದ್ದಿಗೋಷ್ಟಿ ವೇಳೆ ರಚಿತಾ ರಾಮ್ ಆಡಿದ್ದ ಅ ಒಂದು ಮಾತಿಗೆ ಪಿ.ವಾಸು ಅಸಮಾಧಾನ ಹೊರಹಾಕಿದ್ದಾರೆ.

  ಕೆಟ್ಟದ್ದಕ್ಕೂ.. ಒಳ್ಳೆಯದ್ದಕ್ಕೂ ನಾನೇ ಕಾರಣವಂತೆ. ಇದೆಲ್ಲ ಹೇಗೆ ಹೇಳೋಕೆ ಸಾಧ್ಯ..? ರಚಿತಾ ರಾಮ್ ಅವರಿಂದ ಇಂತಹ ಮಾತನ್ನು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ ವಾಸು. ಇಷ್ಟೆಲ್ಲ ಆಗಿಯೂ ಚಿತ್ರದಲ್ಲಿ ರಚಿತಾ ಒಳ್ಳೆಯ ಅಭಿನಯ ನೀಡಿದ್ದಾರೆ ಅನ್ನೋದನ್ನು ಮರೆಯೋದಿಲ್ಲ. ಪ್ರೇಕ್ಷಕರು ರಚಿತಾ ಅವರನ್ನು ಖಂಡಿತಾ ಮೆಚ್ಚಿಕೊಳ್ತಾರೆ ಎಂದಿದ್ದಾರೆ ವಾಸು.

  ಪಿ.ವಾಸು ಅವರ ಜೊತೆ ರಚಿತಾ ರಾಮ್ ಅವರಿಗೆ ಇದು ಮೊದಲ ಚಿತ್ರ. ಶಿವಣ್ಣ ಹೀರೋ ಆಗಿರುವ ಚಿತ್ರವಿದು. ದ್ವಾರಕೀಶ್ ಬ್ಯಾನರ್‍ಗೆ 50 ವರ್ಷ ತುಂಬಿರುವ ಈ ಹೊತ್ತಿನಲ್ಲಿ ಅವರ ಬ್ಯಾನರ್‍ನ 52ನೇ ಸಿನಿಮಾ ತೆರೆಗೆ ಬರುತ್ತಿದೆ. ನವೆಂಬರ್ 1ರಂದು ರಿಲೀಸ್ ಆಗುತ್ತಿದೆ ಆಯುಷ್ಮಾನ್ ಭವ.

 • ಪುನೀತ್ ಜೊತೆ #ರಚಿತಾಬೇಡ. ಅಭಿಮಾನಿಗಳ ಅಭಿಯಾನ..

  puneeth rajkumar, rachitha ram image

  ರಚಿತಾ ರಾಮ್, ಸ್ಯಾಂಡಲ್‍ವುಡ್‍ನ ಡಿಂಪಲ್ ಕ್ವೀನ್. ಪುನೀತ್ ಜೊತೆ ಎರಡನೇ ಬಾರಿ ನಾಯಕಿಯಾಗುತ್ತಿರುವ ಚೆಲುವೆ. ನಟಸಾರ್ವಭೌಮ ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದ ಪ್ರಿಯಾಂಕಾ ಜಾಗಕ್ಕೆ ಈಗ ರಚಿತಾ ಬಂದಿದ್ದಾರೆ. ನಾಯಕಿಯ ದಿಢೀರ್ ಬದಲಾವಣೆಗೆ ಡೇಟ್ಸ್ ಸಮಸ್ಯೆ ಕಾರಣ ಎಂದಿದ್ದರು ನಿರ್ದೇಶಕ ಪವನ್ ಒಡೆಯರ್. ಆದರೆ, ಈಗ ಅಭಿಮಾನಿಗಳ ಸಮಸ್ಯೆ ಶುರುವಾಗಿದೆ.

  ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ #ರಚಿತಾಬೇಡ ಎಂಬ ಅಭಿಯಾನವನ್ನೇ ನಡೆಸಿಬಿಟ್ಟಿದ್ದಾರೆ. ಚಕ್ರವ್ಯೂಹ ಚಿತ್ರದ ಪ್ರೊಮೋಷನ್ ವೇಳೆ, ಇದು ನಿಮ್ಮ ಅಪ್ಪು ಸಿನಿಮಾ, ನಿಮಗೆ ಇಷ್ಟವಾಗುತ್ತೆ ಎಂದು ಹೇಳಿದ್ದರು ರಚಿತಾ. ಹಾಗಾದರೆ, ಇದು ನಿಮ್ಮ ಸಿನಿಮಾ ಅಲ್ವಾ ಎಂದು ರೊಚ್ಚಿಗೆದ್ದಿದ್ದರು ಅಭಿಮಾನಿಗಳು. ಪುನೀತ್ ಮಧ್ಯಪ್ರವೇಶಿಸಿ ಅಭಿಮಾನಿಗಳನ್ನು ಸಮಾಧಾನಪಡಿಸಿದ್ದರು.

  ಆ ಘಟನೆಯನ್ನು ಪುನೀತ್ ಮರೆತಿದ್ದರೂ, ಅಭಿಮಾನಿಗಳು ಮರೆತಿಲ್ಲ. ಇನ್ನೂ ಸಿನಿಮಾ ಆರಂಭದ ಹಂತದಲ್ಲಿದೆ. ಈಗಲೇ ಬೇರೆ ನಾಯಕಿಯನ್ನು ಆಯ್ಕೆ ಮಾಡಿ ಎಂದು ನಿರ್ದೇಶಕ ಪವನ್ ಒಡೆಯರ್ ಬೆನ್ನು ಬಿದ್ದಿದ್ದಾರೆ. ಅಭಿಯಾನವನ್ನೇ ಆರಂಭಿಸಿಬಿಟ್ಟಿದ್ದಾರೆ.

 • ಪುನೀತ್ ಸ್ಟೈಲ್ ಹಿಂದಿನ ಸ್ಟಾರ್ ಯಾರು ಗೊತ್ತಾ..?

  he is the secret star behind puneeth's style

  ಪುನೀತ್ ರಾಜ್‍ಕುಮಾರ್ ಅಂದ್ರೆ ಪವರ್ ಸ್ಟಾರ್. ಆದರೆ ನಟಸಾರ್ವಭೌಮ ನೋಡಿದವರಿಗೆ ಅಚ್ಚರಿಯಾಗುತ್ತಿರುವುದು ಪುನೀತ್ ಸ್ಟೈಲ್. ಕಣ್ಣಿಗೊಂದು ಚೆಂದದ ಕನ್ನಡಕ ಹಾಕಿಕೊಂಡು ಸಿಕ್ಕಾಪಟ್ಟೆ ಸ್ಟೈಲಿಷ್ ಆಗಿ ಕಾಣುತ್ತಿದ್ದಾರೆ ಅಪ್ಪು. ಅಪ್ಪು ಬದಲಾಗುತ್ತಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ಅವರ ಸ್ಟೈಲ್, ಲುಕ್, ಮ್ಯಾನರಿಸಂ ಬದಲಾಗುತ್ತಲೇ ಇವೆ. ಈ ಎಲ್ಲದರ ಹಿಂದಿರುವ ಸೀಕ್ರೆಟ್ ಸ್ಟಾರ್ ಯಾರು ಗೊತ್ತಾ..?

  ಯೋಗಿ ಜಿ.ರಾಜ್. ಖುಷಿಖುಷಿಯಾಗಿ & ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದ ನಿರ್ದೇಶಕ ಯೋಗಿ, ಪುನೀತ್ ಅವರ ಸ್ಟೈಲ್ ಹಿಂದಿರೋ ಸೀಕ್ರೆಟ್ ಸ್ಟಾರ್. ಮೂಲತಃ ಯೋಗಿ ಕಾಸ್ಟ್ಯೂಮ್ ಡಿಸೈನರ್. ತಮ್ಮ ಕೈಚಳಕವನ್ನು ಪುನೀತ್ ಮೇಲೆ ಪ್ರಯೋಗಿಸಿರುವ ಯೋಗಿ, ಪುನೀತ್‍ರನ್ನು ಸ್ಟೈಲಿಷ್ ನಟಸಾರ್ವಭೌಮನಾಗಿಸಿದ್ದಾರೆ.

 • ಪುನೀತ್, ಸುದೀಪ್‍ಗೆ ಐ ಲವ್ ಯೂನಲ್ಲಿ ಇಷ್ಟವಾಗಿದ್ದೇನು..?

  upendra received dfferent reactions

  ಐ ಲವ್ ಯೂ ಚಿತ್ರ ಗೆದ್ದಿದೆ. ದಿನೇ ದಿನೇ ಥಿಯೇಟರುಗಳ ಸಂಖ್ಯೆ ಹೆಚ್ಚುತ್ತಿರುವುದು ಇದಕ್ಕೆ ಸಾಕ್ಷಿ. ಇದರ ಮಧ್ಯೆ ಹಾಡಿನ ಬಗ್ಗೆ ಭಾರಿ ಸುದ್ದಿಯಾಗುತ್ತಿದೆ. ಈ ಎಲ್ಲದರ ಮಧ್ಯೆ ಉಪೇಂದ್ರಗೆ ತಮ್ಮ ಪಾತ್ರದ ಬಗ್ಗೆ ಸಿಕ್ಕಿರುವ ಫೀಡ್‍ಬ್ಯಾಕ್ ಬಹಳ ಖುಷಿ ಕೊಟ್ಟಿದೆ. 40 ದಾಟಿರುವ ಹೀರೋಗೆ ನೀವು 15 ವರ್ಷ ಚಿಕ್ಕೋರಾಗಿ ಕಾಣ್ತಿದ್ದೀರಿ ಅಂದ್ರೆ ಖುಷಿಯಾಗದೇ ಇರೋದಿಲ್ವಾ..?

  ಪುನೀತ್, ಸುದೀಪ್, ನಿರ್ಮಾಪಕ ಮುನಿರತ್ನ ಅವರೆಲ್ಲರಿಗೂ ನನ್ನ ಡ್ಯಾನ್ಸ್ ಇಷ್ಟವಾಗಿದೆ. ನನ್ನ ಅತ್ತಿಗೆ ಎ ಮತ್ತು ಉಪೇಂದ್ರ ಚಿತ್ರದಲ್ಲಿರೋ ಹಾಗೆ ಯಂಗ್ ಆಗಿ ಕಾಣ್ತಿದ್ದೀಯ ಅಂದ್ರು. ನನ್ನ ಅಣ್ಣನ ಮಗ ನಿರಂಜನ್ ನನಗಿಂತ ಯಂಗ್ ಆಗಿ ಕಾಣ್ತಿದ್ದೀರಾ ಎಂದು ಹೇಳಿದ.

  ಚಿತ್ರ ನೋಡಿದ ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಫೋನ್ ಮಾಡಿ, ಸೋಷಿಯಲ್ ಮೀಡಿಯಾ ಮೂಲಕ, ಮೆಸೇಜ್ ಮಾಡುವ ಮೂಲಕ ಚಿತ್ರದ ಬಗ್ಗೆ ಒಳ್ಳೆ ರೆಸ್ಪಾನ್ಸ್ ಕೊಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಉಪೇಂದ್ರ. ಅಂದಹಾಗೆ ಸಿನಿಮಾ ಚೆನ್ನಾಗಿದೆ ಎಂದು ಹೇಳಿದವರೆಲ್ಲ ಕುಟುಂಬಸ್ಥರೇ ಎನ್ನುವುದನ್ನು ಒತ್ತಿ ಹೇಳ್ತಾರೆ ಉಪ್ಪಿ.

  ಅದೆಲ್ಲಕ್ಕಿಂತ ಉಪ್ಪಿಗೆ ಖುಷಿ ಕೊಟ್ಟಿರೋದು ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು ಫೀಡ್‍ಬ್ಯಾಕ್. ಯಾಕಂದ್ರೆ, ಚಿತ್ರದ ಕಲೆಕ್ಷನ್ನು ಭರ್ಜರಿಯಾಗಿದೆ.

 • ಪ್ರಜ್ವಲ್ ಜೊತೆ ರಚಿತಾ ರಾಮ್

  rachita ram to pair opposite prajwal devaraj

  ಅರ್ಜುನ್ ಚಿತ್ರದ ಮೂಲಕ ಪ್ರಜ್ವಲ್ ದೇವರಾಜ್‍ಗೆ ವಿಭಿನ್ನತೆಯ ಟಚ್ ಕೊಟ್ಟ ನಿರ್ದೇಶಕ ಪಿ.ಸಿ.ಶೇಖರ್, ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಹೀರೋ. ಚಿತ್ರದ ಕಥೆಗೆ ಪ್ರಜ್ವಲ್ ದೇವರಾಜ್ ಓಕೆ ಎಂದಿದ್ದಾರೆ. ನಾಯಕಿಯಾಗಿ ಆಯ್ಕೆಯಾಗಿರೋದು ರಚಿತಾ ರಾಮ್.

  ರಚಿತಾ ರಾಮ್ ಕಥೆ ಕೇಳಿ ಇಂಪ್ರೆಸ್ ಆಗಿದ್ದಾರಂತೆ. ಆದರೆ, ಇನ್ನೂ ಅಧಿಕೃತಗೊಂಡಿಲ್ಲ. ಜೋಡಿ ಪಕ್ಕಾ ಆದರೆ, ಪ್ರಜ್ವಲ್-ರಚಿತಾ ರಾಮ್ ಜೋಡಿಯ ಪ್ರಥಮ ಚಿತ್ರವಾಗಲಿದೆ ಪಿ.ಸಿ.ಶೇಖರ್ ಸಿನಿಮಾ.

 • ಪ್ರೀತಿಪ್ರೇಮ ಪುಸ್ತಕದ್ ಬದ್ನೇಕಾಯ್ ಎಂದಿದ್ದ ಜಾಗದಲ್ಲೇ ಐ ಲವ್ ಯೂ

  same place opposite scene in i love you shooting

  ನೀನ್ ಕೊಟ್ರೆ ನಾನ್ ಕೊಡ್ತೀನಿ. ನಾನ್ ಕೊಡ್ಲಿಲ್ಲ ಅಂದ್ರೆ ನೀನ್ ಕೊಡಲ್ಲ. ಇಷ್ಟು ವಿಶಾಲವಾದ ಪ್ರಪಂಚದಲ್ಲಿ ನೀನು ಪ್ರೀತಿ ಅನ್ನೋ ಪುಟ್ಟ ಸರ್ಕಲ್‍ನಲ್ಲಿ ನಿಂತಿದ್ದೀಯ. ಜೀವನದ ಪ್ರಾಬ್ಲಂ ಅನ್ನೋದು ಜೀಪ್ ರೂಪದಲ್ಲಿ ಬಂದ್ರೆ, ನೀನು ಸರ್ಕಲ್‍ನಿಂದ ಹೊರಗೆ ಬರ್ತೀಯಾ.. ಪ್ರೀತಿ ಪ್ರೇಮ ಎಲ್ಲ ಪುಸ್ತಕದ ಬದ್ನೇಕಾಯ್. ಹೀಗೆ ಡೈಲಾಗ್ ಹೊಡೆದಿದ್ದ ಉಪೇಂದ್ರರ ಎ ಚಿತ್ರ ನೆನಪಿದ್ಯಾ..?

  ಐ ಲವ್ ಯೂ ಎಂದು ಬೆನ್ನು ಬೀಳುವ ಚಾಂದಿನಿಗೆ, ಉಪೇಂದ್ರ ಜೀವನ ಪಾಠ ಮಾಡೋ ಎ ಚಿತ್ರದ ಆ ಸೀನ್ ಸೂಪರ್ ಹಿಟ್ ಆಗಿತ್ತು. ಈಗ.. ಅದೇ ಜಾಗದಲ್ಲಿ.. ಅದೇ ನಂದಿಬೆಟ್ಟದಲ್ಲಿ ಅದೇ ಉಪೇಂದ್ರ, ರಚಿತಾ ರಾಮ್‍ಗೆ ಐ ಲವ್ ಯೂ ಎಂದಿದ್ದಾರೆ. ಇದು ಐ ಲವ್ ಯೂ ಚಿತ್ರಕ್ಕಾಗಿ.

  ಆರ್. ಚಂದ್ರು ನಿದೇಶನದ ಐ ಲವ್ ಯೂ ಚಿತ್ರದಲ್ಲಿ ಎ ಚಿತ್ರದ ಸೀನ್ ನೆನಪಿಸುವಂತೆ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಇತಿಹಾಸವನ್ನು ನೆನಪಿಸಿಕೊಳ್ಳುವುದು ಯಾರಿಗಾದರೂ ಖುಷಿ ಕೊಡುತ್ತೆ. ಇದು ಎ ಚಿತ್ರದಂತೆ ತಲೆಗೆ ಹುಳ ಬಿಡಲ್ಲ. ನೋಡುಗನ ಹೃದಯ ತಟ್ಟುವ ಸಿನಿಮಾ ಎಂದಿದ್ದಾರೆ ಉಪೇಂದ್ರ.

 • ಫೆ.3ರಿಂದಲೇ ನಟಸಾರ್ವಭೌಮನ ಟಿಕೆಟ್ ಬುಕ್ ಮಾಡಿ

  natasarvabhouma booking from feb 3rd

  ನಟಸಾರ್ವಭೌಮ ಚಿತ್ರ ಕ್ರೇಜ್ ಸೃಷ್ಟಿಸುತ್ತಿದೆ. ಟ್ರೆಂಡಿಂಗ್‍ನಲ್ಲಿ ಈಗಲೂ ಟಾಪ್ 10ನಲ್ಲಿರೋ ನಟಸಾರ್ವಭೌಮ ಚಿತ್ರಕ್ಕೆ ಒಂದು ವಾರ ಮೊದಲೇ ಬುಕ್ಕಿಂಗ್ ಶುರುವಾಗಲಿದೆ. ಫೆಬ್ರವರಿ 3ನೇ ತಾರೀಕಿನಿಂದ ಅಂದರೆ, ಭಾನುವಾರದಿಂದಲೇ ನಟಸಾರ್ವಭೌಮ ಚಿತ್ರಕ್ಕೆ ಟಿಕೆಟ್ ಬುಕ್ ಮಾಡಬಹುದು.

  ಕನ್ನಡದಲ್ಲಿ ಮೊದಲ ದಿನವೇ ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಬರುವಂತೆ ಮಾಡುವ ಶಕ್ತಿ ಇರುವ ನಟ ಪುನೀತ್. ಇದರ ಜೊತೆಗೆ ವಾರಕ್ಕೆ ಮೊದಲೇ ಬುಕ್ಕಿಂಗ್ ಶುರುವಾದರೆ ಮೊದಲ ದಿನವೇ ಹೌಸ್‍ಫುಲ್ ಬೋರ್ಡ್ ಗ್ಯಾರಂಟಿ.

  ರಚಿತಾ ರಾಮ್, ಅನುಪಮಾ, ಬಿ.ಸರೋಜಾದೇವಿ, ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ ಅಭಿನಯದ ಸಿನಿಮಾಗೆ ಪವನ್ ಒಡೆಯರ್ ನಿರ್ದೇಶಕರಾದರೆ, ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ.

   

 • ಬಾಕ್ಸಾಫೀಸ್‍ನಲ್ಲಿ ಅಯೋಗ್ಯನ ಆರ್ಭಟ

  ayogya running successfully

  ನೀನಾಸಂ ಸತೀಶ್, ರಚಿತಾ ರಾಮ್, ರವಿಶಂಕರ್ ಅಭಿನಯದ ಅಯೋಗ್ಯ ಸಿನಿಮಾಗೆ ಅದ್ಭುತ ಓಪನಿಂಗ್ ಸಿಕ್ಕಿದೆ. ಇದೇ ಶುಕ್ರವಾರ ರಿಲೀಸ್ ಆಗಿರುವ ಸಿನಿಮಾ, ಮೂರೇ ದಿನಕ್ಕೆ 4 ಕೋಟಿ ಗಳಿಕೆ ಮಾಡಿದೆಯಂತೆ. ಹಳೇ ಮೈಸೂರು ಭಾಗದಲ್ಲಂತೂ ಚಿತ್ರ ಮಂದಿರಗಳು ತುಂಬಿ ತುಳುಕಿವೆ.

  ರಾಜ್ಯಾದ್ಯಂತ 280 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದ ಸಿನಿಮಾಗೆ ಎಲ್ಲೆಡೆ ಹೌಸ್‍ಫುಲ್ ಪ್ರದರ್ಶನದ ಭಾಗ್ಯ ಸಿಕ್ಕಿದೆ. ಮಂಡ್ಯ ಸೊಗಡಿನ ಚಿತ್ರಕ್ಕೆ ಉತ್ತರ ಕರ್ನಾಟಕ ಭಾಗದಲ್ಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಚಮಕ್ ಸಿನಿಮಾದಲ್ಲೂ ಗೆಲುವಿನ ಮ್ಯಾಜಿಕ್ ಮಾಡಿದ್ದ ನಿರ್ಮಾಪಕ ಚಂದ್ರಶೇಖರ್, ಅಯೋಗ್ಯ ಚಿತ್ರದಲ್ಲೂ ಯೋಗ ಕಂಡಿದ್ದಾರೆ.

 • ಬಾಲಯ್ಯ ಸಿನಿಮಾಗೆ ರಚಿತಾ ನಾಯಕಿಯಂತೆ..!

  rachita ram heroine for balakrishna;s movie

  ಕನ್ನಡದಲ್ಲಿ ಮಹಾರಾಣಿಯಂತೆ ಮೆರೆಯುತ್ತಿರುವ ರಚಿತಾ ರಾಮ್ ಅವರಿಗೆ ತೆಲುಗಿನಲ್ಲೂ ದೊಡ್ಡ ಅವಕಾಶದ ಬಾಗಿಲು ತೆರೆದಿದೆ. ತೆಲುಗು ಸೂಪರ್ ಸ್ಟಾರ್ ಬಾಲಕೃಷ್ಣ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ತೆಲುಗಿನಲ್ಲಿ ಬೊಯಪಟಿ ಸೀನು ನಿರ್ದೇಶನದ ಚಿತ್ರದಲ್ಲಿ ಬಾಲಯ್ಯ ಎದುರು ರಚಿತಾ ರಾಮ್ ಹೀರೋಯಿನ್ ಎನ್ನುತ್ತಿದೆ ಟಾಲಿವುಡ್.

  ಇತ್ತ ರಚಿತಾ ರಾಮ್ ಕೂಡಾ ಸುದ್ದಿಗೆ ಓಕೆ ಎಂದಿಲ್ಲ. ಅತ್ತಲಿಂದಲೂ ಅಧಿಕೃತ ಮಾಹಿತಿ ಇಲ್ಲ. ಬೊಯಪಟಿ ಚಿತ್ರಗಳೆಂದರೆ ಅಲ್ಲಿ ಫುಲ್ ಮಾಸ್. ಈ ಮೊದಲು ಬಾಲಯ್ಯಗಾಗಿ ಸಿಂಹ, ಲೆಜೆಂಡ್ ಚಿತ್ರಗಳನ್ನು ನಿರ್ದೇಶಿಸಿದ್ದವರು. ಈ ಚಿತ್ರದಲ್ಲಿ ನಟಿಸಿದರೆ ರಚಿತಾ ರಾಮ್ ಅಧಿಕೃತವಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಾಗಲಿದೆ.

 • ಬುಲ್‍ಬುಲ್ ರಚಿತಾ.. ಏಪ್ರಿಲ್ ಡಿಸೋಜಾ

  rachitha's next film is april

  ಮೈಯ್ಯೆಲ್ಲ ಕಪ್ಪು ಕಪ್ಪು.. ಕಣ್ಣಲ್ಲೇನೋ ಬಯ.. ಕೆದರಿದ ಕೂದಲು.. ನೋಡಿದ್ರೆ, ಇದು ಡಿಂಪಲ್ ಕ್ವೀನ್ ರಚಿತಾನಾ ಎನ್ನಬೇಕು..? ಹಾಗಿದೆ ಲುಕ್ಕು. ಇದು ಏಪ್ರಿಲ್ ಡಿಸೋಜಾ ಚಿತ್ರದಲ್ಲಿ ರಚಿತಾ ರಾಮ್ ಕಾಣಿಸಿಕೊಳ್ಳುತ್ತಿರುವ ಅವತಾರ. ನಾಯಕಿ ಪ್ರಧಾನ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ ಎಂದು ರಚಿತಾ ಹೇಳಿಕೊಂಡಿದ್ದು ನೆನಪಿದೆ ತಾನೇ.. ಆ ಚಿತ್ರವೇ ಇದು, ಏಪ್ರಿಲ್ ಡಿಸೋಜಾ.

  ಇದು ಸಸ್ಪೆನ್ಸ್ ಥ್ರಿಲ್ಲರ್. ಚಿತ್ರದಲ್ಲಿ ರಚಿತಾ ಪಾತ್ರ, ಏಪ್ರಿಲ್‍ನಲ್ಲಿ 2ನೇ ಬಾರಿಗೆ ಬದುಕುವ ಚಾನ್ಸ್ ಪಡೆಯುತ್ತೆ. ಹಾಗಾದರೆ, ಅವರು ಸತ್ತು ಹೋಗಿರ್ತಾರಾ..? ಸುಮ್ ಸುಮ್ನೆ ಪ್ರಶ್ನೆ ಕೇಳ್ಬೇಡಿ ಮತ್ತೆ. ಅದೇ ಸಿನಿಮಾ ಸಸ್ಪೆನ್ಸ್. ಏಪ್ರಿಲ್ ಅಂದ್ರೆ, ವಸಂತ ಮಾಸದ 2ನೇ ತಿಂಗಳು. ಹೀಗಾಗಿ ಚಿತ್ರ ಮತ್ತು ಪಾತ್ರಕ್ಕೆ ಏಪ್ರಿಲ್ ಡಿಸೋಜಾ ಎಂದು ಹೆಸರಿಟ್ಟಿದ್ದೇವೆ. ಡಿಸೋಜ ಎನ್ನುವುದು ಪುರುಷನ ಹೆಸರಲ್ಲವಾ..? ಪ್ರಶ್ನೆಗೆ ಉತ್ತರ ಈಗಲ್ಲ.

  ಇದು ಸತ್ಯ ರಾಯುಲು ಎಂಬುವವರು ನಿರ್ದೇಶಿಸುತ್ತಿರುವ ಸಿನಿಮಾ. ಯಾವತ್ತೋ ರೀಡರ್ಸ್ ಡೈಜೆಸ್ಟ್‍ನಲ್ಲಿ ಓದಿದ್ದ ಕಥೆ, ಈಗ ಸಿನಿಮಾ ರೂಪಕ್ಕಿಳಿದಿದೆ. ಚಿತ್ರದ ನಿರ್ಮಾಪಕರು ನಾರಾಯಣ್ ಬಾಬು.

  Related Articles :-

  Rachita Ram's next Film is 'April'

 • ಬುಲ್‍ಬುಲ್‍ಗೆ ಉಪ್ಪಿ ಪ್ರೇಮಪಾಠ.. 

  uppi turns love guru

  ಈ ಪ್ರೀತಿ ಪ್ರೇಮ ಅನ್ನೋದೆಲ್ಲ ಪುಸ್ತಕದ್ ಬದ್ನೇಕಾಯ್ ಅಂದಿದ್ದ ಉಪ್ಪಿ, ಈಗ ರಚಿತಾರಾಮ್‍ಗೆ ಮೋಡಿಯನ್ನೇ ಮಾಡಿಬಿಟ್ಟಿದ್ದಾರೆ. ಉಪ್ಪಿಗಿಂತ ರುಚಿ ಬೇರೆಯಿಲ್ಲ, ಒಪ್ಪಿಕೊಂಡೋರೂ ದಡ್ಡರಲ್ಲ ಎಂದಿದ್ದಕ್ಕೋ ಏನೋ.. ತಾನು ದಡ್ಡಿ ಅಲ್ಲ ಅಂತಾ ತೋರಿಸಿದ್ದಾರೆ ಬುಲ್‍ಬುಲ್. ಅಂದ್ರೆ ಇಷ್ಟೆ, ಉಪ್ಪಿ ಹೇಳಿದ್ದು ನಮ್ಮ ಬುಲ್‍ಬುಲ್‍ಗೆ ಇಷ್ಟವಾಗಿ ಹೋಗಿದೆ.

  ಉಪ್ಪಿ ಸರ್ ಮಾತು ಕೇಳಿದ್ಮೇಲೆ ಪ್ರೀತಿ ಅನ್ನೋದು ಜೀವನದ ಒಂದು ಭಾಗ ಅಷ್ಟೆ ಅನ್ನಿಸೋಕೆ ಶುರುವಾಗಿದೆ. ಒಬ್ಬ ಹುಡುಗ ಒಂದು ಹುಡುಗಿಯನ್ನ ಪ್ರೀತಿಸ್ತಿದ್ದಾನೆ ಅಂದ್ರೆ, ಅದಕ್ಕೆ ಏನ್ ಕಾರಣ ಇರಬಹುದು ಅನ್ನೋದನ್ನ ತಿಳಿದುಕೊಳ್ಳುವಷ್ಟು ಶಕ್ತಳಾಗಿದ್ದೇನೆ ಎಂದಿರೋದು ರಚಿತಾ ರಾಮ್. 

  ರಚಿತಾ ರಾಮ್‍ಗೆ ಉಪ್ಪಿ ಇಷ್ಟೆಲ್ಲ ಪ್ರೇಮೋದಯ ಮಾಡಿಸಿರೋದು ಐ ಲವ್ ಯು ಚಿತ್ರದ ಸೆಟ್‍ನಲ್ಲಿ. ಉಪೇಂದ್ರ ಒಂಥರಾ ನಂಗೆ ಲವ್‍ಗುರು ಇದ್ದಂತೆ ಎಂದಿದ್ದಾರೆ ರಚಿತಾ.

  ಆರ್.ಚಂದ್ರು ನಿರ್ದೇಶನದ ಐ ಲವ್ ಯು ಚಿತ್ರ, ತೆಲುಗಿನ ಅರ್ಜುನ್ ರೆಡ್ಡಿ ಮಾದರಿಯಲ್ಲಿ ಇರಲಿದೆಯಂತೆ. ಆದರೆ, ಅಷ್ಟು ಬೋಲ್ಡ್ ದೃಶ್ಯಗಳಿರಲ್ಲ. ಕಥೆ ಹೊಸದಾಗಿದೆ ಎಂದಿದ್ದಾರೆ ರಚಿತಾ ರಾಮ್.

 • ಭಟ್-ಶಶಾಂಕ್ ಸಿನಿಮಾಗೆ ರಚಿತಾ ರಾಮ್

  rachita in bhat shashank's movie

  ಡಿಂಪಲ್ ಕ್ವೀನ್ ರಚಿತಾ ರಾಮ್ ಇಂಡಸ್ಟಿçಗೆ ಬಂದು ಕೆಲವು ವರ್ಷಗಳೇ ಆಗಿವೆ. ಬಹುತೇಕ ಎಲ್ಲ ಸ್ಟಾರ್ ನಟರ ಜೊತೆಯಲ್ಲೂ ನಟಿಸಿರುವ ರಚಿತಾ ರಾಮ್, ಕನ್ನಡದ ಈ ಇಬ್ಬರೂ ಸ್ಟಾರ್ ಡೈರೆಕ್ಟರ್ ಚಿತ್ರಗಳಲ್ಲಿ ನಟಿಸಿರಲಿಲ್ಲ. ಯೋಗರಾಜ್ ಭಟ್ ಮತ್ತು ಶಶಾಂಕ್ ಇಬ್ಬರ ಚಿತ್ರಗಳಲ್ಲೂ ರಚಿತಾ ರಾಮ್ ಇರಲಿಲ್ಲ. ಈಗ ಸಮಯ ಕೂಡಿ ಬಂದಿದೆ. ಭಟ್ಟರು ಮತ್ತು ಶಶಾಂಕ್ ಇಬ್ಬರೂ ಒಟ್ಟಿಗೇ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ.

  ರಿಷಿ ನಾಯಕರಾಗಿರುವ ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ರಚಿತ ಇಲ್ಲಿ ಇಂಗ್ಲೆAಡಿನಿAದ ವಾಪಸ್ ಆದ ಎನ್‌ಆರ್‌ಐ ಪಾತ್ರದಲ್ಲಿದ್ದರೆ, ರಿಷಿ ಪಕ್ಕಾ ಲೋಕಲ್ ಹುಡುಗ. ರಿಷಿ ಜೊತೆಯಲ್ಲೂ ರಚಿತಾಗಿದು ಫಸ್ಟ್ ಸಿನಿಮಾ. ಇನ್ನು ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಅನಂತ್ ನಾಗ್ ಇದ್ದಾರೆ.

  ಚಿತ್ರಕ್ಕೆ ಭಟ್ಟರ ಕ್ಯಾಂಪಿನ ಹುಡುಗ ಮೋಹನ್ ಸಿಂಗ್ ನಿರ್ದೇಶಕರಾಗಿದ್ದಾರೆ. ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಚಿತ್ರೀಕರಣ ಶುರು ಮಾಡಲಿದೆ.

 • ಮಂಡ್ಯದ್ ಮೇಲೆ ರಚಿತಾಗೆ ಲವ್ವೋ.. ಲವ್ವು

  rachita is in love with mandya

  ಮಂಡ್ಯದ ಜನ ಯಾರಿಗೆ ಇಷ್ಟವಾಗಲ್ಲ ಹೇಳಿ. ಗಾಂಧಿನಗರದವರಿಗಂತೂ ಮಂಡ್ಯ ಅಂದ್ರೆ ಮನೆ ಇದ್ದಂಗೆ. ಮಂಡ್ಯದ ಮೇಲೆ ಸಿನಿಮಾ ಮಂದಿಗೆ ವಿಶೇಷ ಪ್ರೀತಿ ಇದೆ. ಈಗ.. ಮಂಡ್ಯದ ಮೇಲೆ ಸಿಕ್ಕಾಪಟ್ಟೆ ಲವ್ವಾಗಿ ಹೋಗಿದೆ. ಅದಕ್ಕೆ ಕಾರಣವಾಗಿದ್ದು ಅಯೋಗ್ಯ ಸಿನಿಮಾ.

  ಮಂಡ್ಯ ಭಾಷೆ, ಆ ಶೈಲಿ ನಂಗೆ ಹೊಸದು. ಹೀಗಾಗಿ ಹೇಗೆ ಮಾಡೋದು ಅನ್ನೋ ಟೆನ್ಷನ್‍ನಲ್ಲಿದ್ದೆ. ನಟ ಸತೀಶ್ ಮತ್ತು ನಿರ್ದೇಶಕ ಮಹೇಶ್, ಭಾಷೆಯನ್ನು ಹೇಳಿಕೊಟ್ರು. ಅವರಿಗೆ ಏನ್ ಬೇಕು ಅನ್ನೋದು ಪಕ್ಕಾ ಗೊತ್ತಿತ್ತು. ಹೀಗಾಗಿ ಈಸಿಯಾಗಿ ಹೋಯ್ತು. ಅಲ್ದೆ ಮಂಡ್ಯದ ಹುಡುಗೀರು ಹೇಗೆ ವರ್ತಿಸ್ತಾರೆ.. ಜಡೆ ಹೇಗ್ ಹಾಕ್ಕೊಳ್ತಾರೆ.. ಹುಡುಗರು ಚುಡಾಯಿಸಿದ್ರೆ ಯಾವ ರೀತಿ ರಿಯಾಕ್ಟ್ ಮಾಡ್ತಾರೆ ಅನ್ನೋದನ್ನೆಲ್ಲ ಮಂಡ್ಯದ ಹುಡುಗಿಯರಿಂದಲೇ ತಿಳಿದುಕೊಂಡೆ. ಶೂಟಿಂಗ್ ವೇಳೆ ಮಂಡ್ಯದ ಹುಡುಗಿಯೊಬ್ಬಳು ಗೆಳತಿಯಾಗಿ ಸಿಕ್ಕಳು. ಈಗ.. ನಂಗೆ ಮಂಡ್ಯದ ಮೇಲೆ ಲವ್ವಾಗಿ ಹೋಗಿದೆ ಅಂದೋರು ರಚಿತಾ ರಾಮ್. ಅವರು ಅಯೋಗ್ಯ ಚಿತ್ರದ ನಾಯಕಿ.

  ಚಿತ್ರದಲ್ಲಿ ನಂದಿನಿ ಅನ್ನೋ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಚಿತಾ, ಅಪ್ಪನನ್ನು ಪ್ರೀತಿಸುವ ಮಗಳಾಗಿ ನಟಿಸಿದ್ದಾರೆ. ಹಳ್ಳಿ ಹುಡುಗಿ, ವಿದ್ಯಾವಂತೆ. ಲಂಗ ದಾವಣಿ, ಸೆಲ್ವಾರ್ ಕಮೀಜ್‍ನಲ್ಲಿ ಜನ ನನ್ನನ್ನು ಟ್ರೆಡಿಷನಲ್ ಲುಕ್‍ನಲ್ಲಿ ಇಷ್ಟಪಡ್ತಾರೆ ಅನ್ನೋ ಕಾನ್ಫಿಡೆನ್ಸ್ ರಚಿತಾಗಿದೆ. ಚಮಕ್ ಚಂದ್ರಶೇಖರ್ ನಿರ್ಮಾಣದ ಸಿನಿಮಾ ಇದೇ ವಾರ ರಿಲೀಸ್ ಆಗ್ತಿದೆ.

 • ಮತ್ತೆ ಏಪ್ರಿಲ್ : ರಚಿತಾ ಜೊತೆ ಚಿರು

  chiranjeeivi joins rachita's april

  ಏಪ್ರಿಲ್ ಅನ್ನೋ ಹೆಸರಿನ ಚಿತ್ರದ ಪೋಸ್ಟರ್ ಕಳೆದ ವರ್ಷ ಭಾರಿ ಸದ್ದು ಮಾಡಿತ್ತು. ಪೋಸ್ಟರಿನಲ್ಲಿ ರಚಿತಾ ರಾಮ್ ಅವರನ್ನು ನೋಡಿದವರು ವ್ಹಾವ್.. ಎಂದಿದ್ದರು. ರಚಿತಾ ಕೂಡಾ ಸಖತ್ ಕಾನ್ಫಿಡೆನ್ಸಿನಲ್ಲಿದ್ದರು. ಆದರೆ, ಪೋಸ್ಟರಿಗೇ ಸುಮ್ಮನಾಗಿದ್ದ ಚಿತ್ರತಂಡ, ಸೈಲೆಂಟ್ ಆಗಿತ್ತು. ಕೊನೆಗೆ ರಚಿತಾ ಅವರೇ ಚಿತ್ರದಿಂದ ಹೊರಬಂದಿದ್ದೇನೆ ಎಂದಿದ್ದರು. ಆದರೆ, ಮುಗಿದೇ ಹೋಯ್ತು ಎಂದುಕೊಂಡಿದ್ದ ಸಿನಿಮಾ ಮತ್ತೆ ಶುರುವಾಗಿದೆ.

  8ಎಂಎಂ ಎಂಬ ಚಿತ್ರ ನಿರ್ಮಾಪಕರು ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಸತ್ಯರಾಯಲ್ ನಿರ್ದೇಶಕ. ವಿಶೇಷವೆಂದರೆ, ಚಿತ್ರಕ್ಕೆ ಚಿರಂಜೀವಿ ಸರ್ಜಾ ಎಂಟ್ರಿ ಆಗಿದೆ. ಮಹಿಳಾ ಪ್ರಧಾನ ಥ್ರಿಲ್ಲರ್ ಚಿತ್ರವಾದರೂ, ಚಿರು ಪಾತ್ರದ ವಿಶೇಷತೆಗಾಗಿ ಓಕೆ ಎಂದಿದ್ದಾರೆ. ಡಿಸೆಂಬರ್‍ನಲ್ಲಿ ಶೂಟಿಂಗ್ ಶುರುವಾಗಬಹುದು.

 • ಮತ್ತೆ ಸ್ಲಿಮ್ಮಾದರು ಡಿಂಪಲ್ ಕ್ವೀನ್

  rachita ram sheds 7 kgs in 25 days

  ರಚಿತಾ ರಾಮ್... ಈಗ ಹಿಟ್ ಮೇಲೆ ಹಿಟ್ ಕೊಟ್ಟು ಮಿನುಗುತ್ತಿರುವ ತಾರೆ. ಅಯೋಗ್ಯ ಚಿತ್ರ ಹಿಟ್ ಆಗುವುದರೊಂದಿಗೆ ರಚಿತಾ ಲಕ್ಕಿ ಅನ್ನೋದು ಮತ್ತೆ ಪ್ರೂವ್ ಆಗಿದೆ. ಆದರೆ, ಇಲ್ಲೊಂದು ವ್ಯತ್ಯಾಸ ಗಮನಿಸಬೇಕು. ಅಯೋಗ್ಯ ಸಿನಿಮಾದಲ್ಲಿ ರಚಿತಾ, ತುಸು ದಪ್ಪಗಾದಂತೆ ಕಂಡಿದ್ದರು. ಅಷ್ಟೇ ಅಲ್ಲ, ಸೀತಾರಾಮ ಕಲ್ಯಾಣ ಹಾಗೂ ನಟಸಾರ್ವಭೌಮ ಸಿನಿಮಾಗಳಲ್ಲೂ ಅಷ್ಟೆ. ಸಪೂರ ಸುಂದರಿ ರಚಿತಾ, ದುಂಡು ದುಂಡಗೆ ಕಾಣ್ತಾರೆ. ಆದರೆ, ಈಗ ರಚಿತಾ ಕಂಪ್ಲೀಟ್ ಚೇಂಜ್.

  ಸ್ವಲ್ಪ ದಪ್ಪಗಾಗಿದ್ದ ರಚಿತಾ, 25 ದಿನಗಳಲ್ಲಿ 7 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ನಾನು ಮೊದಲು ಇದ್ದಿದ್ದೇ ಸಣ್ಣಗೆ. ಅದೇಕೋ ಒಂದ್ಸಲ, ನಾನು ದಪ್ಪಗಾದರೆ ಹೇಗೆ ಕಾಣಬಹುದು ಎನ್ನಿಸಿತು. ಡಯಟ್ ಮತ್ತು ವರ್ಕೌಟ್ ಎರಡನ್ನೂ ಬಿಟ್ಟು, ದಪ್ಪಗಾದರೆ. ಊಟ ಜಾಸ್ತಿ ಆಯ್ತು. ಮೈಕೈ ತುಂಬಿಕೊಂಡು ಚಬ್ಬಿಚಬ್ಬಿಯಾಗಿಬಿಟ್ಟೆ. ಅಯೋಗ್ಯ, ಸೀತಾರಾಮ ಕಲ್ಯಾಣದಲ್ಲಿ ಹಾಗೆಯೇ ನಟಿಸಿದೆ. ಈಗ.. ದಪ್ಪಗಾಗಿದ್ದು ಸಾಕು ಎನ್ನಿಸಿದೆ. ಮತ್ತೆ ಡಯಟ್ ಶುರುವಾಗಿದೆ.

  65 ಕೆಜಿಯಿದ್ದ ನಾನು, ಮತ್ತೆ 58ಕ್ಕೆ ಇಳಿದಿದ್ದೇನೆ. ಇದು ಹೊಸ ಪ್ರಾಜೆಕ್ಟ್‍ಗಾಗಿ ನಡೆಸ್ತಾ ಇರೋ ಕಸರತ್ತೇನಲ್ಲ. ನನಗೆ ಅನ್ನಿಸಿದ್ದು ಅಷ್ಟೆ ಎಂದಿದ್ದಾರೆ ರಚಿತಾ. ರಚಿತಾ ಅವರಿಗೆ ಈಗ ಫಿಟ್‍ನೆಸ್ ಟ್ರೈನರ್ ಆಗಿರೋದು  360 ಶ್ರೀನಿವಾಸ್. ರಚಿತ ಆರೋಗ್ಯವಾಗಿದ್ದಾರೆ. ಹೀಗಾಗಿ ಸರಳ ವರ್ಕೌಟ್ ಮಾಡಿದರೆ ಸಾಕು. ಅವರು ತುಂಬಾ ಶ್ರದ್ಧೆಯಿಂದ ವರ್ಕೌಟ್ ಮಾಡಿ ತೂಕ ಇಳಿಸಿಕೊಂಡಿದ್ದಾರೆ ಎಂದು ಕ್ರೆಡಿಟ್ಟನ್ನೆಲ್ಲ ರಚಿತಾ ರಾಮ್ ಶ್ರದ್ಧೆಗೇ ಕೊಟ್ಟುಬಿಟ್ಟಿದ್ದಾರೆ 360 ಶ್ರೀನಿವಾಸ್.

 • ಮೀನಾಕ್ಷಿ ರಚಿತಾ ರಾಮ್

  meenakshi rachita ram

  ರಚಿತಾ ರಾಮ್ ತೆಲುಗಿಗೆ ಹೋಗಿದ್ದು ಬ್ರೇಕಿಂಗ್ ನ್ಯೂಸ್ ಅಲ್ಲ, ಅವರೀಗ ಮೀನಾಕ್ಷಿಯಾಗಿರೋದು ಸೆನ್ಸೇಷನ್ ನ್ಯೂಸ್. ಹೌದು, ತೆಲುಗಿನಲ್ಲಿ ಚಿರಂಜೀವಿಯವರ ಅಳಿಯ ಕಲ್ಯಾಣ್ ದೇವ್ ಜೊತೆ ರಚಿತಾ ರಾಮ್ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ಸೂಪರ್ ಮಚ್ಚಿ ಎಂದು ಟೈಟಲ್ ಎನ್ನಲಾಗಿತ್ತು. ಆದರೆ, ಟೈಟಲ್ ಅದಲ್ಲ, ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ ಎಂಬ ಟೈಟಲ್ ಫೈನಲ್ ಆಗಿದೆಯಂತೆ.

  ಮೀನಾಕ್ಷಿಯಾಗಿರೋದು ರಚಿತಾ ರಾಮ್. ಅಂದಹಾಗೆ ಈ ಚಿತ್ರ ಕನ್ನಡಕ್ಕೂ ಡಬ್ ಆಗಿ ಬರಲಿದೆ. ಪುಲಿ ವಾಸು ನಿರ್ದೇಶನದ...ಮೀನಾಕ್ಷಿ ಚಿತ್ರದ ಮೂಲಕ ರಚಿತಾ ರಾಮ್ ಟಾಲಿವುಡ್‍ನಲ್ಲಿ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery