` rachita ram - chitraloka.com | Kannada Movie News, Reviews | Image

rachita ram

  • ಕ್ರೇಜಿ ಸ್ಟಾರ್ ಚಿತ್ರಕ್ಕೆ ಡಿಂಪಲ್ ಕ್ವೀನ್

    rachita ram in ravi bopanna

    ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶಿಸುತ್ತಿರುವ ರವಿ ಬೋಪಣ್ಣ ಚಿತ್ರಕ್ಕೆ ಇನ್ನೊಬ್ಬ ಸ್ಟಾರ್ ಆಗಮನವಾಗಿದೆ. ಈಗಾಗಲೇ ಚಿತ್ರದಲ್ಲಿ ಅತಿಥಿ ನಟರಾಗಿ ಕಿಚ್ಚ ಸುದೀಪ್ ನಟಿಸಿದ್ದಾರೆ. ಈಗ ಮತ್ತೊಂದು ಪುಟ್ಟ ಪಾತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ ರಚಿತಾ ರಾಮ್.

    ಈ ಚಿತ್ರದಲ್ಲಿ ರವಿಚಂದ್ರನ್ ಸಂಪೂರ್ಣ ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದು, ರವಿ ಗೆಟಪ್ಪಿಗೆ ಮಸ್ತ್ ಮೆಚ್ಚುಗೆ ಸಿಕ್ಕಿದೆ. ಕಾವ್ಯಾಶೆಟ್ಟಿ ಮತ್ತು ಸಂಚಿತಾ ಪಡುಕೋಣೆ ಚಿತ್ರದ ನಾಯಕಿಯರು. ಸೈಬರ್ ಕ್ರೈಂ ಕಥಾ ಹಂದರವಿರುವ ಚಿತ್ರ ರವಿ ಬೋಪಣ್ಣ. 

  • ಕ್ಷಮೆ ಕೇಳಿದ ಶಿವಣ್ಣನಿಗೆ ಅಭಿಮಾನಿಗಳಿಂದಲೇ ಸಮಾಧಾನ

    fans console shivanna regarding ayushmanbahava release

    ಆಯುಷ್ಮಾನ್ ಭವ, ಈಗ ರಿಲೀಸ್ಗೆ ಕಂಪ್ಲೀಟ್ ರೆಡಿ. ಶಿವರಾಜ್ ಕುಮಾರ್ ಇದೇ ಮೊದಲ ಬಾರಿಗೆ ದ್ವಾರಕೀಶ್ ಬ್ಯಾನರಿನಲ್ಲಿ ನಟಿಸಿರುವ ಚಿತ್ರವಿದು. ಪಿ.ವಾಸು, ದ್ವಾರಕೀಶ್, ರಚಿತಾ ರಾಮ್, ಅನಂತ್ ನಾಗ್, ಸುಹಾಸಿನಿ, ನಿಧಿ ಸುಬ್ಬಯ್ಯ ಕಾಂಬಿನೇಷನ್ ಇರುವ ಸಿನಿಮಾ. ಹೀಗಾಗಿ ನಿರೀಕ್ಷೆಗಳೋ.. ಮೌಂಟ್ ಎವರೆಸ್ಟ್ ಲೆಕ್ಕದಲ್ಲಿವೆ. ಇಷ್ಟಿದ್ದರು ಸಿನಿಮಾ ಅಂದುಕೊಂಡಂತೆ ರಿಲೀಸ್ ಮಾಡಲು ಆಗಿರಲಿಲ್ಲ.

    ಚಿತ್ರದಲ್ಲಿ ಬಳಸಿದ್ದ ಗ್ರಾಫಿಕ್ಸ್ ಟೈಗರ್ ದೃಶ್ಯಕ್ಕೂ ಅನಿಮಲ್ ಬೋರ್ಡ್ ಅನುಮತಿ ಬೇಕಿದ್ದ ಕಾರಣ, ಸೆನ್ಸಾರ್ ತಡವಾಗಿತ್ತು. ಈಗ ಎಲ್ಲ ಕ್ಲಿಯರ್ ಆಗಿ ಬರುತ್ತಿದೆ. ಈ ಕುರಿತು ಮಾತನಾಡಿದ್ದ ಶಿವಣ್ಣ ನವೆಂಬರ್ 1ರಂದು ರಿಲೀಸ್ ಮಾಡುವಂತೆ ನಾನೇ ಹೇಳಿದ್ದೆ. ಯೋಗಿಯೂ ಅದಕ್ಕಾಗಿ ಕೆಲಸ ಮಾಡಿದ್ದರು. ಆದರೆ, ಆಗಲಿಲ್ಲ. ಅಭಿಮಾನಿಗಳ ನಿರೀಕ್ಷೆ ಸುಳ್ಳಾಯ್ತು. ಅದಕ್ಕಾಗಿ ಅಭಿಮಾನಿಗಳ ಕ್ಷಮೆ ಕೇಳುತ್ತೇನೆ ಎಂದಿದ್ದರು.

    ಇದಕ್ಕೆ ಅಭಿಮಾನಿಗಳೂ ಅಷ್ಟೇ ಬೊಂಬಾಟ್ ಉತ್ತರ ಕೊಟ್ಟಿದ್ದಾರೆ. ಕ್ಷಮೆ ಕೇಳೋಕೆ ನೀವು ತಪ್ಪು ಮಾಡಿಲ್ಲ. ಸಿನಿಮಾ ಲೇಟ್ ಆದರೂ ನಾವು ನೋಡಿಯೇ ನೋಡ್ತೇವೆ. ಚಿತ್ರ ಖಂಡಿತಾ ಚೆನ್ನಾಗಿರುತ್ತೆ. ಇಂಥದ್ದಕ್ಕೆಲ್ಲ ನೀವು ಕ್ಷಮೆ ಕೇಳಬಾರದು ಎಂದು ಕೆಲವು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಉತ್ತರಿಸಿದ್ದಾರೆ. ಇನ್ನೂ ಕೆಲವರು ಎಷ್ಟಂದ್ರೂ ನೀವು ಅಣ್ಣಾವ್ರ ಮಗ. ಅದಕ್ಕೇ ಕ್ಷಮೆ ಕೇಳಿದ್ದೀರಿ. ಗ್ರೇಟ್ ಸರ್. ಡೋಂಟ್ ವರಿ ಎಂದು ಸಮಾಧಾನ ಹೇಳಿದ್ದಾರೆ. ಯಥಾ ಸ್ಟಾರ್.. ತಥಾ ಫ್ಯಾನ್ಸ್..

  • ಗುರು ದೇಶಪಾಂಡೆ ಒನ್ ಪೆಗ್ ಒನ್ ಶಾಟ್'ಗೆ ರಚಿತಾ ಬೆಂಬಲ

    ಗುರು ದೇಶಪಾಂಡೆ ಒನ್ ಪೆಗ್ ಒನ್ ಶಾಟ್'ಗೆ ರಚಿತಾ ಬೆಂಬಲ

    ಜಂಟಲ್‍ಮೆನ್ ಎಂಬ ಡಿಫರೆಂಟ್ ಚಿತ್ರವನ್ನು ನಿರ್ಮಿಸಿದ್ದ ಗುರು ದೇಶಪಾಂಡೆ ಈಗ ಐವರು ನಿರ್ದೇಶಕರ ಮೂಲಕ ಐದು ಕಥೆಗಳನ್ನು ಒಂದೇ ಚಿತ್ರದಲ್ಲಿ ಹೇಳೋ ಸಾಹಸಕ್ಕೆ ಕೈ ಹಾಕಿದ್ದಾರೆ. ಸಿಂಪಲ್ಲಾಗಿ ಹೇಳ್ಬೇಕಂದ್ರೆ, ರಿಷಬ್ ಶೆಟ್ಟಿಯವರ ಕಥಾ ಸಂಗಮ ದಂತಹ ಪ್ರಯೋಗ. ಈ ಸಾಹಸದ ಸಿನಿಮಾಗೆ ಅವರು ಕೊಟ್ಟಿರೋ ಟೈಟಲ್ ಪೆಂಟಗನ್.

    ಪೆಂಟಗನ್ ಚಿತ್ರದಲ್ಲಿ ಈಗ ಒಂದು ಕಥೆಯ ಥೀಮ್ ಪೋಸ್ಟರ್ ರಿಲೀಸ್ ಆಗಿದೆ. `ಒನ್ ಶಾಟ್ ಒನ್ ಪೆಗ್' ಕಥೆಯ ಥೀಮ್ ಪೋಸ್ಟರ್‍ನ್ನು ರಚಿತಾ ರಾಮ್ ರಿಲೀಸ್ ಮಾಡಿದ್ದಾರೆ. ಇದಕ್ಕೂ ಮುನ್ನ ಟೈಟಲ್‍ನ್ನು ಡಾರ್ಲಿಂಗ್ ಕೃಷ್ಣ ರಿಲೀಸ್ ಮಾಡಿದ್ದರು. ಜನವರಿ 18ರ ವೇಳೆಗೆ ಎಲ್ಲ 5 ನಿರ್ದೇಶಕರೂ ಗೊತ್ತಾಗಲಿದ್ದಾರೆ

  • ಗುಳಿಕೆನ್ನೆ ಸುಂದರಿ ತೆಲುಗಿನತ್ತ ಸವಾರಿ

    rachita ram flies to telugu film industry

    ಸ್ಯಾಂಡಲ್‌ವುಡ್‌ನ ಬುಲ್ ಬುಲ್ ಕಾಲಿವುಡ್‌ಗೆ ಹೊರಟು ನಿಂತಿದೆ. ಗುಳಿಕೆನ್ನೆ ಚೆಲುವೆಯ ಸವಾರಿ ತೆಲುಗು ಚಿತ್ರರಂಗದ ಕಡೆ ಹೊರಟಿದ್ದು, ಮೆಗಾಸ್ಟಾರ್ ಫ್ಯಾಮಿಲಿ ಹೀರೋಗೆ ಹೀರೋಯಿನ್. ಚಿರಂಜೀವಿ ಅವರ ಕುಟುಂಬದ ಕಲ್ಯಾಣ್ ದೇವ್ ಅವರ ಚಿತ್ರಕ್ಕೆ ರಚಿತಾ ರಾಮ್ ನಾಯಕಿ.

    ನವೆಂಬರ್ ೨೨ರಿಂದ ಶೂಟಿಂಗ್ ಶುರುವಾಗಲಿದೆ. ಪುಲಿ ವಾಸು ಚಿತ್ರದ ನಿರ್ದೇಶಕ. ಚಿತ್ರಕ್ಕೆ ಸೂಪರ್ ಮಚ್ಚಿ ಎಂದು ಟೈಟಲ್ ಇಡಲಾಗಿದೆ. ಅಂದಹಾಗೆ ಬಾಲಕೃಷ್ಣ ಅಭಿನಯದ ಚಿತ್ರಕ್ಕೆ ಸೆಲೆಕ್ಟ್ ಆಗಿದ್ದಾರೆ ಎಂಬ ಸುದ್ದಿ ತಣ್ಣಗಾಗಿದೆ.

  • ಗೌಡ್ರ ಹುಡ್ಗನ್ನೇ ಮದ್ವೆ ಆಗ್ತಾರೆ ರಚಿತಾ

    rachita ram clarifies about her marriage rumors

    ಡಿಂಪಲ್ ಕ್ವೀನ್ ಎಲ್ಲಿ ಹೋದ್ರೂ.. ಎಲ್ಲಿಗೆ ಬಂದ್ರೂ.. ಅವರಿಗೆ ಎದುರಾಗುತ್ತಿರುವ ಪ್ರಶ್ನೆ ಒಂದೇ.. ರಚಿತಾ ಮದ್ವೆ ಯಾವಾಗ.. ಹುಡುಗ ಯಾರು.. ಲವ್ ಮ್ಯಾರೇಜಾ.. ಅರೇಂಜ್ ಮ್ಯಾರೇಜಾ.. ರಾಜಕೀಯ ನಾಯಕರೊಬ್ಬರ ಮಗನೊಬ್ಬನ ಜೊತೆ ಮದುವೆ ಫಿಕ್ಸ್ ಆಗಿದ್ಯಂತೆ ನಿಜಾನಾ.. ಹೀಗೆ ಸೃಷ್ಟಿಯಾಗುತ್ತಿರುವ ಪ್ರಶ್ನೆಗಳಿಗೆ ಲೆಕ್ಕವೇ ಇಲ್ಲ. ಸೀತಾರಾಮ ಕಲ್ಯಾಣ ರಿಲೀಸ್ ಹೊತ್ತಲ್ಲೂ ಕಾಡಿದ ಇದೇ ಪ್ರಶ್ನೆಗೆ ರಚಿತಾ ಬೋಲ್ಡ್ ಉತ್ತರ ಕೊಟ್ಟಿದ್ದಾರೆ.

    `ಮದುವೆ ವಿಚಾರವನ್ನ ನನ್ನ ತಂದೆ ಇದ್ದಾರೆ. ಅವರೇ ನೋಡಿಕೊಳ್ತಾರೆ. ನಾನು ಲವ್ ಮ್ಯಾರೇಜ್ ಅಂದ್ರೂ ಯೆಸ್ ಅಂತಾರೆ. ಅರೇಂಜ್ ಮ್ಯಾರೇಜ್ ಅಂದ್ರೂ ಯೆಸ್ ಅಂತಾರೆ. ನಾನು ಗೌಡ್ರ ಹುಡುಗಿ. ಗೌಡ್ರ ಹುಡುಗನ್ನೇ ಮದ್ವೆ ಆಗ್ತೀನಿ. ಸದ್ಯಕ್ಕೆ ಸಿನಿಮಾ ನೋಡಿಕೊಳ್ತಿದ್ದೀನಿ' ಎಂದಿದ್ದಾರೆ ರಚಿತಾ.

  • ಜನವರಿ 25ಕ್ಕೆ ಸೀತಾರಾಮ ಕಲ್ಯಾಣ

    seetharama kalyana will release on jan 25th

    ಜನವರಿಯಲ್ಲಿ ಸ್ಟಾರ್ ನಟರ ಚಿತ್ರಗಳು ಚಿತ್ರಮಂದಿರಗಳಲ್ಲಿ ತುಂಬಿ ತುಳುಕಲಿವೆ. ಶಿವಣ್ಣ, ಪುನೀತ್ ಚಿತ್ರಗಳು ರಿಲೀಸ್‍ಗೆ ರೆಡಿಯಾಗಿರುವಾಗಲೇ ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರ, ಬಿಡುಗಡೆ ದಿನಾಂಕ ಘೋಷಿಸಿದೆ.

    ಜನವರಿ 25ಕ್ಕೆ ನಾವು ತೆರೆಗೆ ಬರುವುದು ಖಚಿತ. ಚಿತ್ರದ ಬಿಡುಗಡೆಗೆ ಸಿದ್ಧರಾಗುತ್ತಿದ್ದೇವೆ ಎಂದು ಘೋಷಿಸಿದ್ದಾರೆ ನಿಖಿಲ್.

    ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ ಚಿತ್ರಕ್ಕೆ ರಚಿತಾ ರಾಮ್ ನಾಯಕಿ. ಸಿಎಂ ಕುಮಾರಸ್ವಾಮಿ ಬ್ಯಾನರ್‍ನ ಕೌಟುಂಬಿಕ ಕಥಾ ಹಂದರದ ಚಿತ್ರವಿದು.

  • ಜನವರಿ 4ಕ್ಕೆ ಮೈಸೂರಿನಲ್ಲಿ ಏಕ್ ಲವ್ ಯಾ ಟ್ರೇಲರ್

    ಜನವರಿ 4ಕ್ಕೆ ಮೈಸೂರಿನಲ್ಲಿ ಏಕ್ ಲವ್ ಯಾ ಟ್ರೇಲರ್

    ಜೋಗಿ ಪ್ರೇಮ್ ಡೈರೆಕ್ಷನ್‍ನಲ್ಲಿ ಶುರುವಾದ ಏಕ್ ಲವ್ ಯಾ ಸೆಟ್ಟೇರಿದ ದಿನದಿಂದಲೂ ಸುದ್ದಿ ಮಾಡುತ್ತಿದೆ. ರಕ್ಷಿತಾ ಪ್ರೇಮ್ ತಮ್ಮ ರಾಣಾ ಹೀರೋ ಆಗಿ ಬರುತ್ತಿರೋ ಮೊದಲ ಚಿತ್ರವಿದು. ಚಿತ್ರದ ಒಂದೊಂದು ಹಾಡುಗಳೂ ಸೂಪರ್ ಹಿಟ್ ಆಗಿವೆ. ಹಾಡುಗಳು ಅದ್ಭುತ ಎನ್ನುತ್ತಿದ್ದಾರೆ ಕೇಳಿದವರು. ಅದು ಪ್ರೇಮ್ ಸ್ಪೆಷಾಲಿಟಿ. ಈಗ ಚಿತ್ರದ ಟ್ರೇಲರ್ ರಿಲೀಸ್ ಮಾಡೋಕೆ ಡೇಟ್ ಫಿಕ್ಸ್ ಮಾಡಿದ್ದಾರೆ ಪ್ರೇಮ್.

    ಒಂದೊಂದು ಹಾಡುಗಳ ಬಿಡುಗಡೆಯನ್ನು ಒಂದೊಂದು ರೀತಿ ಮಾಡಿದ್ದ ಪ್ರೇಮ್ ಈಗಾಗಲೇ ಗದಗ, ಧಾರವಾಡ, ಶಿವಮೊಗ್ಗ ರೌಂಡ್ಸ್ ಹಾಕಿದ್ದಾರೆ. ಟ್ರೇಲರ್ ರಿಲೀಸ್ ಮಾಡೋಕೆ ಹೋಗುತ್ತಿರುವುದು ಮೈಸೂರಿಗೆ. ಮೈಸೂರಿನ ಡಿಆರ್‍ಸಿ ಪರದೆಯಲ್ಲಿಟ್ರೇಲರ್ ರಿಲೀಸ್ ಆಗಲಿದೆ. ಅದೇ ವೇಳೆ ಅವರ ಯೂಟ್ಯೂಬ್ ಚಾನೆಲ್‍ನಲ್ಲೂ ಟ್ರೇಲರ್ ಬರಲಿದೆ.

    ರಾಣಾ ಎದುರು ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ ನಟಿಸಿರೋ ಚಿತ್ರದಲ್ಲಿ ಯೂತ್‍ಫುಲ್ ಲವ್ ಸ್ಟೋರಿ ಇದೆ. ಈಗಿನ ಜನರೇಷನ್‍ನ ಲವ್ ಸ್ಟೋರಿಯನ್ನು ಪ್ರೇಮ್ ಹೇಗೆ ತೆರೆ ಮೇಲೆ ತರಲಿದ್ದಾರೆ ಅನ್ನೋ ಕುತೂಹಲಕ್ಕೆ ಉತ್ತರ ಜನವರಿ 21ರಂದು ಸಿಗಲಿದೆ.

  • ಜನವರಿ 5ಕ್ಕೆ ಆಡಿಯೋ.. ಫೆಬ್ರವರಿ 7ಕ್ಕೆ ವಿಡಿಯೋ..

    natasarvabhouma audio on jan 5th

    ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 2019ರ ಆರಂಭದಲ್ಲೇ ತೆರೆಗೆ ಬರುವುದು ಅಧಿಕೃತವಾಗಿದೆ. ನಟಸಾರ್ವಭೌಮ ಚಿತ್ರದ ಬಿಡುಗಡೆಗೆ ವೇದಿಕೆ ಸಿದ್ಧಗೊಳ್ಳುತ್ತಿದ್ದು, ಜನವರಿ 5ರಂದು ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಸಿನಿಮಾ ರಿಲೀಸ್ ಆಗುವುದು ಫೆಬ್ರವರಿ 7ನೇ ತಾರೀಕಿಗೆ. ಅಂದರೆ, ಆಡಿಯೋ ರಿಲೀಸ್ ಆದ ಬರೋಬ್ಬರಿ 1 ತಿಂಗಳ ಚಿತ್ರ, ಪ್ರೇಕ್ಷಕರ ಎದುರು ಬರಲಿದೆ. ಕಳೆದ ವರ್ಷವಿಡೀ ಪುನೀತ್ ಸಿನಿಮಾ ಇರಲಿಲ್ಲ. ಹೀಗಾಗಿ ಅಪ್ಪು ಅಭಿಮಾನಿಗಳ ನಿರೀಕ್ಷೆ ಆಕಾಶದಲ್ಲಿದೆ.

    ಪವನ್ ಒಡೆಯರ್ ನಿರ್ದೇಶನದ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ. ರಚಿತಾ ರಾಮ್ ಮತ್ತೊಮ್ಮೆ ಅಪ್ಪು ಜೋಡಿಯಾಗಿದ್ದರೆ, ಅನುಪಮಾ ಪರಮೇಶ್ವರ್ ಗಮನ ಸೆಳೆಯುತ್ತಿದ್ದಾರೆ. ಬಿ.ಸರೋಜಾದೇವಿ ಹಲವು ವರ್ಷಗಳ ನಂತರ ತೆರೆ ಮೇಲೆ ಬರುತ್ತಿದ್ದಾರೆ. ಅಪ್ಪು ಜೊತೆ ಡ್ಯಾನ್ಸ್ ಮಾಡೋಕೆ ಸಿದ್ಧರಾ

  • ಜೋಗಿ ಪ್ರೇಮ್ ಜೊತೆ ಡಿಂಪಲ್ ಕ್ವೀನ್

    rachita ram in ek love ya

    ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೊಮ್ಮೆ ಜೋಗಿ ಪ್ರೇಮ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ರಕ್ಷಿತಾ ಅವರ ತಮ್ಮನನ್ನು ಪರಿಚಯಿಸುತ್ತಿರುವ ಏಕ್ ಲವ್ ಯಾ ಚಿತ್ರದಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಹಾಗಂತ, ರಚಿತಾ ರಾಮ್ ಹೀರೋಯಿನ್ ಅಲ್ಲ, ಅರ್ಥಾತ್ ಹೀರೋನ ಪ್ರೇಯಸಿ ಅಲ್ಲ. ಆದರೆ, ಅತ್ಯಂತ ಪ್ರಮುಖವಾದ ಪಾತ್ರವಂತೆ.

    ವಿಲನ್ ಚಿತ್ರದ ಹಾಡೊಂದರಲ್ಲಿ ನಾನು ನಟಿಸಿದ್ದೆ. ಆದರೆ, ಪ್ರೇಮ್ ಅವರ ಡೆಡಿಕೇಷನ್ ಬಹಳ ಇಷ್ಟವಾಗಿತ್ತು. ಅವರು ಬಹಳ ಒಳ್ಳೆಯ ನಿರ್ದೇಶಕ. ಅವರು ನನ್ನನ್ನು ಸೆಟ್‍ನಲ್ಲಿ ಗೌಡ್ತಿ  ಅಂತಾ ಕರೀತಿದ್ರೆ, ನಾನು ಗೌಡಾ ಸರ್ ಅಂತ ಕೂಗ್ತಿದ್ದೆ. ಈ ಚಿತ್ರದಲ್ಲಿ ನನ್ನದು ಅತ್ಯಂತ ಮುಖ್ಯ ಪಾತ್ರ ಎಂದಿದ್ದಾರೆ ರಚಿತಾ ರಾಮ್.

    ರಕ್ಷಿತಾ ಪ್ರೇಮ್ ಅವರ ಸೋದರ ರಾಣಾ  ಏಕ್ ಲವ್ ಯಾ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಕ್ಷಿತಾ ಅವರೇ ಚಿತ್ರದ ನಿರ್ಮಾಪಕಿ.

  • ಜೋಪಾನ.. ಹೃದಯ ಕದ್ದೇಬಿಟ್ಟ ನಟಸಾರ್ವಭೌಮ

    natasarvabhouma duet song wins lover's heart

    ನಟಸಾರ್ವಭೌಮ ಚಿತ್ರದ ಯುಗಳ ಗೀತೆ ಹೊರಬಿದ್ದಿದೆ. ಪವರ್ ಸ್ಟಾರ್ ಪುನೀತ್-ಪವನ್ ಒಡೆಯರ್-ರಾಕ್‍ಲೈನ್ ವೆಂಕಟೇಶ್-ರಚಿತಾ ರಾಮ್ ಕಾಂಬಿನೇಷನ್ನಿನ ಸಿನಿಮಾ. ಫೆಬ್ರವರಿ 7ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾದ ಯುಗಳ ಗೀತೆಯನ್ನು ತೇಲಿಬಿಟ್ಟಿದೆ ಚಿತ್ರತಂಡ.

    ಜೋಪಾನ.. ಜೋಕೆ ಜೋಪಾನ.. ನನ್ನ ಹೃದಯ ಕದಿಯೋ ಕಳ್ಳ ಬಂದ ಜೋಪಾನ.. ಸೋತೆ ನಾ.. ಪೂರ್ತಿ ಸೋತೆ ನಾ.. ಇವನ ನಡತೆ ನೋಡಿ ಮತ್ತೆ ಮತ್ತೆ ಸೋತೆ ನಾ.. ಸುಳಿದರು ಕಣ್ಣ ಮುಂದೆ.. ಹುಡುಗರು ನೂರು.. ಸರಿಸಮ ಯಾರಿಲ್ಲ ಇವನಿಗೆ ಚೂರು.. ಇವನನು ಹೆತ್ತವರು ಯಾರು.. 

    ಯಾರೋ ನಾನು.. ಯಾರೋ ನೀನು.. ನಂದೂ ನಿಂದೂ ಒಂದೇ ಏನು..?

    ಕವಿರಾಜ್ ಬರೆದಿರುವ ಹಾಡಿಗೆ ಅಷ್ಟೇ ಮಧುರ ಧ್ವನಿ ಕೊಟ್ಟಿರೋದು ಶ್ರೇಯಾ ಘೋಷಾಲ್. ಇಮಾನ್ ಮ್ಯೂಸಿಕ್ ನೀಡಿರುವ ಸಿನಿಮಾದ ಹಾಡು, ಹೃದಯ ಕದಿಯುವಂತಿದೆ.

  • ಟೀಚರ್ಸ್ ಡೇ ರಚಿತಾ, ಧೃವಾಗೆ ಸಿಕ್ಕಾಪಟ್ಟೆ ಸ್ಪೆಷಲ್

    rachitha ram, dhruva sarja reveals secret

    ಪ್ರತಿಯೊಬ್ಬರಿಗೂ ಗುರುಗಳಿರುತ್ತಾರೆ. ಗುರುಗಳ ಮೂಲಕವೇ ದೊಡ್ಡದೊಂದು ಸಾಧನೆಯ ಮೆಟ್ಟಿಲೇರುವುದು ಸಾಧ್ಯ. ಅಂಥಾ ಗುರುಗಳು ಧೃವ ಸರ್ಜಾ  ಮತ್ತು ರಚಿತಾ ರಾಮ್‍ಗೂ ಇದ್ದಾರೆ. ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಇಬ್ಬರೂ ಹೇಳಿಕೊಂಡಿರುವ ವಿಷಯಗಳು ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್.

    ನಿಮಗೆಲ್ಲ ಗೊತ್ತಿರುವಂತೆ ಕನ್ನಡದ ಖ್ಯಾತ ಖಳನಟ ಶಕ್ತಿಪ್ರಸಾದ್, ಶಿಕ್ಷಕರೂ ಆಗಿದ್ದವರು. ಹಾಗೆ ಶಿಕ್ಷಕರಾಗಿದ್ದವರ ಬಳಿ ಶಿಷ್ಯನಾಗಿದ್ದವರು ರಚಿತಾ ರಾಮ್ ತಂದೆ. ಧೃವ ಸರ್ಜಾ ಅವರ ತಾತ, ನನ್ನ ಅಪ್ಪನಿಗೆ ಮೇಷ್ಟ್ರು ಅನ್ನೋದನ್ನು ಖುಷಿಯಿಂದ ಹೇಳಿಕೊಂಡಿದ್ದಾರೆ ರಚಿತಾ ರಾಮ್.

    ಇನ್ನು ಧೃವ ಸರ್ಜಾಗೆ ಕೂಡಾ ಮೊದಲ ಗುರು ಮತ್ತು ಸ್ಫೂರ್ತಿ ಅವರ ತಾತ. ಇಂತಹ ಧೃವ ಚಿಕ್ಕವನಿದ್ದಾಗ ರಚಿತಾ ರಾಮ್ ತಂದೆ ಕೈಲಿ ಏಟನ್ನೂ ತಿಂದಿದ್ದಾರಂತೆ. ಏಕೆಂದರೆ ಅವರು ಡ್ಯಾನ್ಸ್ ಟೀಚರ್ ಆಗಿದ್ದವರು. ವಾಲಿಬಾಲ್ ಆಡುವಾಗ ಬಾಲು ಪದೇ ಪದೇ ಅವರ ಡ್ಯಾನ್ಸ್ ಸ್ಕೂಲ್ ಆವರಣಕ್ಕೆ ಹೋಗಿ ಬೀಳುತ್ತಿತ್ತಂತೆ. ಧೃವ ಹೋಗಿ ಬಾಲ್ ತೆಗೆದುಕೊಂಡು ಬರುತ್ತಿದ್ದರಂತೆ. ನಿನಗೆ ನಮ್ಮಪ್ಪ ಹೊಡೆದಿದ್ದಾರಂತೆ ಗೊತ್ತಾ ಅಂದ್ರೆ, ನಾವ್ ಬಿಡಿ.. ತುಂಬಾ ಮೇಷ್ಟ್ರು ಕೈಲಿ ಏಟು ತಿಂದಿದ್ದೀವಿ. ಹೊಡೆದಿದ್ದರೂ ಹೊಡೆದಿರಬಹುದು ಎಂದು ನಗುತ್ತಾರೆ ಧೃವಾ.

    ಹೀಗಾಗಿಯೇ ಧೃವ ಸರ್ಜಾ ಮತ್ತು ರಚಿತಾ ರಾಮ್, ಶಿಕ್ಷಕರ ದಿನಾಚರಣೆಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. 

  • ಟೈಟಲ್ ಕೇಳಿದ ಕೂಡ್ಲೇ ರಚಿತಾ ಓಕೆ ಅನ್ನೋಕೆ ಅವನೇ ಕಾರಣ..!

    rachita ram reveals her hanuman bhakthi secret

    ಸೀತಾರಾಮ ಕಲ್ಯಾಣ ಚಿತ್ರ, ಆಂಜನೇಯನ ಪರಮಭಕ್ತರ ಸಂಗಮವೇನೋ ಎನ್ನಿಸುವ ಹಾಗಿದೆ. ಹೇಳಿ ಕೇಳಿ.. ನಿರ್ದೇಶಕ ಹರ್ಷ ಭಜರಂಗಿಯ ಭಕ್ತ. ಇದುವರೆಗೆ ಅವರು ನಿರ್ದೇಶಿಸಿರುವ ಪ್ರತಿ ಚಿತ್ರದ ಹೆಸರಲ್ಲೂ ಆಂಜನೇಯ ಇರೋದೇ ಅದಕ್ಕೆ ಸಾಕ್ಷಿ. ಇನ್ನು ಸೀತಾರಾಮ ಕಲ್ಯಾಣದಲ್ಲೂ ಅಷ್ಟೆ, ಅದು ಆಂಜನೇಯನ ಆರಾಧ್ಯ ದೈವಗಳ ಹೆಸರು. ಹೀಗಿರುವಾಗ ಈ ಚಿತ್ರವನ್ನು ರಚಿತಾ ಒಪ್ಪಿಕೊಂಡಿದ್ದು ಹೇಗೆ..?

    ``ಕಥೆ ಕೇಳಲಿಲ್ಲ, ಕೇವಲ ಟೈಟಲ್ ಕೇಳಿದೆ. ಸೀತಾರಾಮ ಕಲ್ಯಾಣ ಅನ್ನೋ ಟೈಟಲ್ ಬಹಳ ಇಷ್ಟವಾಯ್ತು. ಟೈಟಲ್ ಕೇಳಿದವಳೇ ಓಕೆ ಎಂದುಬಿಟ್ಟೆ, ಏಕಂದ್ರೆ ನಾನು ಆಂಜನೇಯನ ಭಕ್ತೆ'' ಎಂಬ ಕಥೆ ಒಪ್ಪಿಕೊಂಡ ರಹಸ್ಯ ಹೇಳಿದ್ದಾರೆ ರಚಿತಾ.

    ಚಿತ್ರದಲ್ಲಿ ನನ್ನದು ಹಳ್ಳಿ ಹುಡುಗಿಯ ಪಾತ್ರ. ಲಂಗ, ದಾವಣಿ, ಬಿಂದಿ, ತಲೆ ತುಂಬಾ ಹೂವು.. ಹೀಗೆ ಪಕ್ಕಾ ಹಳ್ಳಿ ಹುಡುಗಿ. ಅಯೋಗ್ಯದ ನಂತರ ಮತ್ತೊಮ್ಮೆ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಹಳ್ಳಿ ಹುಡುಗಿಯಾಗಿ ಚೆಂದವಾಗಿ ಕಾಣಿಸ್ತೀನಂತೆ. ಹಾಗಾಗಿ ಇನ್ನು ಮುಂದೆ ಇನ್ನೊಂದಿಷ್ಟು ಹಳ್ಳಿ ಕ್ಯಾರೆಕ್ಟರ್‍ಗಳಲ್ಲಿ ನಟಿಸುವ ಆಸೆ ಇದೆ ಎಂದು ಬಯಕೆ ಹೇಳಿಕೊಂಡಿದ್ದಾರೆ ರಚಿತಾ.

    ನಿಖಿಲ್ ಅವರಿಗೆ ಇದು 2ನೇ ಸಿನಿಮಾ. ಆದರೆ, ಅಭಿನಯ ನೋಡಿದರೆ ಹಾಗನ್ನಿಸೋದಿಲ್ಲ. ಪಾತ್ರಕ್ಕೆ ತಕ್ಕಂತೆ ಚೆನ್ನಾಗಿ ನಟಿಸಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಅಭಿನಯಕ್ಕೂ ಮೆಚ್ಚುಗೆ ಕೊಟ್ಟಿದ್ದಾರೆ ಡಿಂಪಲ್ ಕ್ವೀನ್.

  • ಡಯಲ್ 100

    ಡಯಲ್ 100

    100. ಇದು ಪೊಲೀಸ್ ಎಮರ್ಜೆನ್ಸಿ ಡಯಲ್ ನಂಬರ್. ಯಾರಿಗೆ ಏನೇ ಸಮಸ್ಯೆ ಆದರೂ 100ಗೆ ಕಾಲ್ ಹೋಗುತ್ತೆ. ಆ ಸಮಸ್ಯೆಗೆ ಪರಿಹಾರ ಹುಡುಕಬೇಕಾದವರು ಪೊಲೀಸ್. ಅಂತಹ ಪೊಲೀಸ್ ಅಧಿಕಾರಿ ವಿಷ್ಣು. ರಮೇಶ್ ಅರವಿಂದ್.

    ಆ ವಿಷ್ಣುವಿಗೆ ಒಬ್ಬಳು ಮುದ್ದಿನ ತಂಗಿ. ಅಣ್ಣನನ್ನು ಗೋಳು ಹೊಯ್ದುಕೊಳ್ಳೋ ತರಲೆ.. ತುಂಟಿ.. ರಚಿತಾ ರಾಮ್.

    ಪೂರ್ಣ ಆ ಕುಟುಂಬದ ಯಜಮಾನಿ.

    ಆ ಮನೆಗೊಬ್ಬ ಕ್ರಿಮಿನಲ್ ಎಂಟ್ರಿ ಕೊಡ್ತಾನೆ. ಅವನು ಸೈಬರ್ ಕ್ರಿಮಿನಲ್. ಇನ್ಸ್‍ಸ್ಟಾ ಮೂಲಕ ಎಂಟ್ರಿ ಕೊಡೋ ಆತ ಇಡೀ ಕುಟುಂಬದ ನೆಮ್ಮದಿಯನ್ನೇ ಕಿತ್ತುಕೊಂಡು ಬಿಡ್ತಾನೆ.. ಅದರಿಂದ ಹೊರಬರೋಕೆ ವಿಷ್ಣು ಪಡೋ ಸಾಹಸವೇ 100 ಸ್ಟೋರಿ.

    ನಿರ್ಮಾಪಕ ರಮೇಶ್ ರೆಡ್ಡಿ ಅವರ ಫ್ರೆಂಡ್ ಮನೆಯಲ್ಲಿ ರಿಯಲ್ಲಾಗಿ ನಡೆದ ಘಟನೆಗೆ ಸಿನಿಮಾಟಿಕ್ ಟಚ್ ಕೊಟ್ಟಿದ್ದಾರೆ ರಮೇಶ್. ಚಿತ್ರದ ಡೈರೆಕ್ಟರ್ ಅವರೇ. ಇದೇ ವಾರ ರಿಲೀಸ್ ಆಗುತ್ತಿರೊ 100 ಚಿತ್ರದ ಮೇಕಿಂಗ್ ಕೂಡಾ ಭರ್ಜರಿಯಾಗಿದೆ. ಚೇಸಿಂಗ್ ದೃಶ್ಯಗಳು ಉಸಿರು ಬಿಗಿ ಹಿಡಿದು ನೋಡುವಂತಿವೆ. ವೇಯ್ಟ್.. ಫಾರ್.. 100.

  • ಡಾ.ರಾಜ್‍ಕುಮಾರ್ ಸಿನಿಮಾ ನೆನಪಿಸಿದ ಮಗನ ಚಿತ್ರ - ಸಿಎಂ ಕುಮಾರಸ್ವಾಮಿ

    cm hd kumaraswamy remembers dr raj's movie after seetharama kalyana

    ನನ್ನ ಮಗನ ಸಿನಿಮಾ ಪ್ರದರ್ಶನವಿದೆ. ದಯವಿಟ್ಟು ಎಲ್ಲರೂ ಬರಬೇಕು. ಹೀಗೆಂದು ಸಿಎಂ ಕುಮಾರಸ್ವಾಮಿ ಮಾಡಿದ ಆಹ್ವಾನಕ್ಕೆ ಬಹುತೇಕ ಎಲ್ಲ ಗಣ್ಯರೂ ಆಗಮಿಸಿ, ಥಿಯೇಟರಿಗೆ ಬಂದು ಚಿತ್ರವನ್ನು ನೋಡಿ ಮೆಚ್ಚಿ ಕೊಂಡಾಡಿದ್ದಾರೆ.

    ಸಿದ್ದರಾಮಯ್ಯ, ಜಮೀರ್ ಅಹ್ಮದ್, ಶಿವರಾಮೇ ಗೌಡ, ಈಶ್ವರಪ್ಪ, ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್ ಸೇರಿದಂತೆ ಹಲವರು ಸಿನಿಮಾ ನೋಡಿ ಮೆಚ್ಚಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಚಿತ್ರಕ್ಕೆ ಬರಲು ಸಾಧ್ಯವಾಗದಿದ್ದರೂ, ಮಗನ ಸಿನಿಮಾ ನೋಡಿ ಖುಷಿ ಪಡಿ. ರಾಜಕೀಯ ಜಂಜಾಟ ಮರೆತುಬಿಡಿ ಎಂದು ಶುಭ ಹಾರೈಸಿದ್ದಾರೆ.

    ಎಲ್ಲರ ನಡುವೆ ಸಿನಿಮಾ ನೋಡಿದ ಕುಮಾರಸ್ವಾಮಿ `ಮಗನ ಸಿನಿಮಾ ತುಂಬಾ ಚೆನ್ನಾಗಿದೆ. ಹಾಡು, ಡ್ಯಾನ್ಸು, ಫೈಟು, ಅಭಿನಯ ಎಲ್ಲದರಲ್ಲೂ ಮಗ ನಿಖಿಲ್ ತುಂಬಾ ಚೆನ್ನಾಗಿ ಮಾಡಿದ್ದಾನೆ. ನನಗಂತೂ ಸಿನಿಮಾ ಡಾ.ರಾಜ್ ಸಿನಿಮಾಗಳನ್ನು ನೆನಪಿಸಿತು. ಮಗನಿಗೆ ನಾನು 100ಕ್ಕೆ 100 ಅಂಕ ಕೊಡುತ್ತೇನೆ' ಎಂದಿದ್ದಾರೆ.

  • ಡಾಕ್ಟರ್ ಡಿಂಪಲ್ ಕ್ವೀನ್

    rachita ram to act as doctor

    ಬುಲ್ ಬುಲ್, ಡಿಂಪಲ್ ಕ್ವೀನ್, ರಚ್ಚು.. ಹೀಗೆಲ್ಲ ಅಭಿಮಾನಿಗಳಿಂದ ಕರೆಯಿಸಿಕೊಳ್ಳೋ ರಚಿತಾ ರಾಮ್ ಈಗ ಡಾಕ್ಟರ್ ಆಗೋಕೆ ಹೊರಟಿದ್ದಾರೆ. ಆಯುಷ್ಮಾನ್ ಭವ ಚಿತ್ರದಲ್ಲಿ ಮನೋವೈದ್ಯೆಯ ಬಳಿ ಹೋಗುವ ರೋಗಿಯಾಗಿದ್ದ ರಚಿತಾ ರಾಮ್, ಇಲ್ಲಿ ಸೈಕಾಲಜಿಸ್ಟ್. ಡಾಕ್ಟರ್ ಲಿಲ್ಲಿ.

    ವಿಜಯ್ ಎಸ್.ಗೌಡ ಎಂಬುವವರು ಹೆಣೆದಿರುವ ಸೈಕಲಾಜಿಕಲ್ ಮಿಸ್ಟರಿ ಕಥೆಯಲ್ಲಿ ಬೇರೆಯದ್ದೇ ರೀತಿಯ ಕಥೆಯಿರುತ್ತೆ. ಪುಟ್ಟ ವಯಸ್ಸಿನಲ್ಲಿ ಮಕ್ಕಳನ್ನು ನಿರ್ಲಕ್ಷಿಸಿದರೆ, ಹಿಂಸೆ ಕೊಟ್ಟರೆ ಮುಂದಿನ ದಿನಗಳಲ್ಲಿ ಅವರು ದೊಡ್ಡವರಾದ ಮೇಲೆ ಅದು ಬೀರುವ ಪರಿಣಾಮವನ್ನು ಹೇಳುವ ಕಥೆ ಚಿತ್ರದಲ್ಲಿದೆಯಂತೆ. ಎಲ್ಲವೂ ರೆಡಿಯಿದ್ದು, ಲಾಕ್ ಡೌನ್ ಮುಗಿಯುವುದನ್ನೇ ಕಾಯುತ್ತಿದೆ ಲಿಲ್ಲಿ ಟೀಂ.

  • ಡಾರ್ಲಿಂಗ್ ಕೃಷ್ಣ-ಡಿಂಪಲ್ ಕ್ವೀನ್ ರಚಿತಾ ರಾಮ್ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್

    ಡಾರ್ಲಿಂಗ್ ಕೃಷ್ಣ-ಡಿಂಪಲ್ ಕ್ವೀನ್ ರಚಿತಾ ರಾಮ್ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್

    ಡಾರ್ಲಿಂಗ್ ಕೃಷ್ಣ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ನಟನೆಯ ಮೊದಲ ಚಿತ್ರ ಬಿಡುಗಡೆಗೆ ಸಿದ್ಧತೆಗಳೂ ಜೋರಾಗಿವೆ. ಇಬ್ಬರೂ ಒಟ್ಟಿಗೇ ನಟಿಸಿರುವ ಮೊದಲ ಸಿನಿಮಾ ಲವ್ ಮೀ ಆರ್ ಹೇಟ್ ಮಿ. ಡಾ.ರಾಜ್ ಹಾಡಿರುವ ಸೂಪರ್ ಹಿಟ್ ಗೀತೆಯ ಮೊದಲ ಸಾಲು ಲವ್ ಮೀ ಆರ್ ಹೇಟ್ ಮಿ. ಚಿತ್ರದ ಬಿಡುಗಡೆಗೆ ಸೆಪ್ಟೆಂಬರ್ 29ರ ಡೇಟ್ ಫಿಕ್ಸ್ ಮಾಡಿದೆ ಚಿತ್ರತಂಡ.

    ದೀಪಕ್ ಗಂಗಾಧರ್ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ದೀಪಕ್ ಗಂಗಾಧರ್ ಮೂವೀಸ್ ಲಾಂಛನದಲ್ಲಿ ದೀಪಕ ಗಂಗಾಧರ್ ಅವರ ಜೊತೆಗೆ ಸುನೀಲ್ ಬಿ.ಎನ್, ಮದನ್ ಗಂಗಾಧರ್, ಚಂದನ್ ಜೆ ಹಾಗೂ ನಾಗರಾಜ್ ಗೌಡ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಲವ್ ಸ್ಟೋರಿ ಜಾನರ್ ಈ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ರಚಿತಾರಾಮ್ ನಟಿಸುತ್ತಿದ್ದಾರೆ. ರೂಪೇಶ್ ಶೆಟ್ಟಿ, ನಂದಿನಿ, ರಾಕೇಶ್ ಪೂಜಾರಿ, ದೀಪಿಕಾ, ಪ್ರವೀಣ್, ಸುಂದರ್ ವೀಣಾ, ರಮೇಶ್ ಭಟ್ ಮುಂತಾದವರು “ಲವ್ ಮೀ ಆರ್ ಹೇಟ್ ಮೀ” ಚಿತ್ರದ ತಾರಾಬಳಗದಲ್ಲಿದ್ದಾರೆ.

    ಇತ್ತೀಚೆಗೆ ಕೃಷ್ಣ ನಟನೆಯ ಲವ್ ಬಡ್ರ್ಸ್, ಮಿ.ಬ್ಯಾಚುಲರ್ ರಿಲೀಸ್ ಆಗಿದ್ದರೂ ದೊಡ್ಡ ಮಟ್ಟದ ಸದ್ದೇನೂ ಮಾಡಿಲ್ಲ. ಲವ್ ಬಡ್ರ್ಸ್ ಚಿತ್ರದ ಬಗ್ಗೆ ಒಳ್ಳೆಯ ರಿಯಾಕ್ಷನ್ ಬಂದಿತ್ತು. ಆದರೆ ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಬರಲಿಲ್ಲ. ರಚಿತಾ ರಾಮ್ ಅವರ ಇತ್ತೀಚಿನ ಚಿತ್ರವೂ ಅಷ್ಟೆ. ಪ್ರಚಾರವನ್ನೇ ಮಾಡದೆ ಸಿನಿಮಾ ರಿಲೀಸ್ ಮಾಡುತ್ತಿರುವ ಪ್ರಜ್ವಲ್ ದೇವರಾಜ್ ಚಿತ್ರಗಳು ಬರುವುದೂ ಹೋಗುವುದೂ ಜನರಿಗೆ ಗೊತ್ತಾಗುತ್ತಿಲ್ಲ. ಆ ನಷ್ಟವನ್ನು ರಚಿತಾ ರಾಮ್ ಕೂಡಾ ಎದುರಿಸಿದ್ದಾರೆ. ಚಿತ್ರದ ಪ್ರಚಾರವನ್ನೂ ದೊಡ್ಟ ಮಟ್ಟದಲ್ಲಿ ಮಾಡದೆ ಸೀಮಿತ ಸಂಖ್ಯೆಯಲ್ಲಿರುವ ಸೋಷಿಯಲ್ ಮೀಡಿಯಾದಲ್ಲಿಯೇ ನಡೆಸುತ್ತಿದ್ದಾರೆ. ಹೀಗಾಗಿ ಚಿತ್ರದ ಸೋಲಿಗೆ ಇದೂ ಒಂದು ಕಾರಣ ಇರಬಹುದು. ಇದೀಗ ಲವ್ ಮೀ ಆರ್ ಹೇಟ್ ಮಿ ಚಿತ್ರಕ್ಕೆ ಜೋರಾದ ತಯಾರಿ ನಡೆಯುತ್ತಿದೆ.

  • ಡಾರ್ಲಿಂಗ್ ಜೊತೆ ಡಿಂಪಿ

    ಡಾರ್ಲಿಂಗ್ ಜೊತೆ ಡಿಂಪಿ

    ಡಿಂಪಲ್ ಕ್ವೀನ್, ಲಕ್ಕಿ ಕ್ವೀನ್ ಎಂದೆಲ್ಲ ಫೇಮಸ್ ಆಗಿರೋ ಬುಲ್ ಬುಲ್ ರಚಿತಾ ರಾಮ್, ಕನ್ನಡದ ಬಹುತೇಕ ಎಲ್ಲ ಸ್ಟಾರ್‍ಗಳಿಗೂ ನಾಯಕಿಯಾಗಿ ನಟಿಸಿದ್ದಾರೆ. ಯಶ್ ಒಬ್ಬರನ್ನು ಬಿಟ್ಟು. ಈಗ ರಚಿತಾ ರಾಮ್ ಕನ್ನಡದ ಇನ್ನೊಬ್ಬ ಸ್ಟಾರ್ ನಟ ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗುತ್ತಿದ್ದಾರೆ.

    ಲವ್ ಮಾಕ್‍ಟೇಲ್ ನಂತರ ತಮ್ಮದೇ ವಿಶಿಷ್ಟ ಫ್ಯಾನ್ಸ್ ಗ್ರೂಪ್ ಸೃಷ್ಟಿಸಿಕೊಂಡಿರುವ ಡಾರ್ಲಿಂಗ್ ಕೃಷ್ಣ, ರಚಿತಾ ರಾಮ್ ಜೊತೆ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ದೀಪಕ್ ಗಂಗಾಧರ್ ನಿರ್ದೇಶಕ.

    ಅತ್ತ ಮದುವೆ.. ಇತ್ತ ಹೊಸ ಹೊಸ ಸಿನಿಮಾ.. ಎಲ್ಲದರ ನಡುವೆ ಡಾರ್ಲಿಂಗ್ ಕೃಷ್ಣ ಬ್ಯುಸಿಯಾಗಿದ್ದರೆ, ಕೈತುಂಬಾ 10ಕ್ಕೂ ಹೆಚ್ಚು ಸಿನಿಮಾ ಇಟ್ಟುಕೊಂಡಿರೋ ರಚಿತಾ ರಾಮ್ ಇನ್ನಷ್ಟು ಬ್ಯುಸಿಯಾಗುತ್ತಲೇ ಇದ್ದಾರೆ.

  • ಡಾರ್ಲಿಂಗ್ ಡಿಂಪಲ್ ಚಿತ್ರದ ಟೈಟಲ್ ಕಾಂಟ್ರವರ್ಸಿ : ಅಸಲಿ ಕಥೆ ಏನು?

    ಡಾರ್ಲಿಂಗ್ ಡಿಂಪಲ್ ಚಿತ್ರದ ಟೈಟಲ್ ಕಾಂಟ್ರವರ್ಸಿ : ಅಸಲಿ ಕಥೆ ಏನು?

    ಮೊನ್ನೆ ಮೊನ್ನೆಯಷ್ಟೇ ಡಾರ್ಲಿಂಗ್ ಕೃಷ್ಣ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಂಬಿನೇಷನ್ನಿನ ಬಹುನಿರೀಕ್ಷಿತ ಚಿತ್ರಕ್ಕೆ ಲವ್ ಮೀ ಆರ್ ಹೇಟ್ ಮಿ ಚಿತ್ರ ಘೋಷಣೆಯಾಗಿತ್ತು. ಟೈಟಲ್ ಹೊರಬಿದ್ದ ಬೆನ್ನಲ್ಲೇ ವಿವಾದ ಸುತ್ತಿಕೊಂಡಿದೆ.

    ಈ ಚಿತ್ರದ ಟೈಟಲ್ ನನ್ನದು ಎಂದು ತಗಾದೆ ತೆಗೆದಿದ್ದಾರೆ ನಿರ್ದೇಶಕ ವಿ.ದೇವದತ್ತ. ವಿ. ದೇವದತ್ತ ಸೈಕೋ ಚಿತ್ರವನ್ನು ನಿರ್ದೇಶಿಸಿದ್ದವರು. ಚಿತ್ರದ ಟೈಟಲ್ ಪ್ರಶ್ನಿಸಿ ದೇವದತ್ತ ಫಿಲಂ ಚೇಂಬರ್ ಮೆಟ್ಟಿಲೇರಿದ್ದಾರೆ.

    ಇತ್ತ ನಿರ್ದೇಶಕ ದೀಪಕ್ ಗಂಗಾಧರ್. ಲವ್ ಮೀ ಆರ್ ಹೇಟ್ ಚಿತ್ರವನ್ನು ಶ್ರೀ ವೆಂಕಟೇಶ್ವರ ಇಂಟರ್‍ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಮಾಡುತ್ತಿದ್ದು, ಬಿ.ಕೆ.ರವಿಕಿರಣ್ ನಿರ್ಮಾಪಕರಾಗಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಮತ್ತು ಪ್ರೋಮೋ ಶೂಟಿಂಗ್ ಆಗಿದೆ. ಹೀಗಾಗಿ ಚಿತ್ರದ ಟೈಟಲ್ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ದೀಪಕ್ ಗಂಗಾಧರ್.

    ವಿವಾದಕ್ಕೆ ಕಾರಣ ಏನೆಂದು ಹುಡುಕಿದರೆ ಎರಡು ಫಿಲಂ ಚೇಂಬರ್‍ಗಳ ಕಥೆ ಹೊರಬಿದ್ದಿದೆ. ಕರ್ನಾಟಕ ಫಿಲಂ ಚೇಂಬರ್, ರಾಜ್ಯದ ಅಧಿಕೃತ ಮೂಲ ಸಂಸ್ಥೆ. ಚಿತ್ರರಂಗದ ಬಹುತೇಕ ವ್ಯವಹಾರಗಳು ನಡೆಯುವುದು ಈ ಸಂಸ್ಥೆಯ ಅಡಿಯಲ್ಲಿ. ದೇಶದ ಹಾಗೂ ದಕ್ಷಿಣ ಭಾರತದ ಫಿಲಂ ಚೇಂಬರ್‍ಗಳಲ್ಲಿಯೂ ಈ ಸಂಸ್ಥೆಗೆ ಅಧಿಕೃತ ಮಾನ್ಯತೆ ಇದೆ.  ಇದರ ನಡುವೆ ಕೆಲವು ವರ್ಷಗಳ ಹಿಂದೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಎಂಬ ಮತ್ತೊಂದು ಪರ್ಯಾಯ ಚೇಂಬರ್ ಹುಟ್ಟುಹಾಕಲಾಯಿತು.

    ಈಗ ದೀಪಕ್ ಗಂಗಾಧರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ನೋಂದಾಯಿಸಿದ್ದಾರೆ. ಅತ್ತ ದೇವದತ್ತ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ರಿಜಿಸ್ಟ್ರಾರ್ ಮಾಡಿಸಿದ್ದಾರೆ. ಎರಡು ಫಿಲಂ ಚೇಂಬರುಗಳಲ್ಲಿ ಯಾವ ಚೇಂಬರ್‍ನಲ್ಲಿರುವ ಟೈಟಲ್‍ಗೆ ಮಾನ್ಯತೆ ಸಿಗಲಿದೆ ಎನ್ನುವುದು ಕುತೂಹಲಕಾರಿ.

  • ಡಾಲಿ ಧನಂಜಯ್‌ಗೆ ರಚಿತಾ ರಾಮ್ ಜೋಡಿ

    rachita ram to pair opposite dolly dhananjay

    ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಆಯುಷ್ಮಾನ್ ಭವ ಇದೇ ವಾರ ರಿಲೀಸ್. ಇದು ಮುಗಿಯುತ್ತಿದ್ದಂತೆಯೇ ಮತ್ತೆ ಬೆನ್ನು ಬೆನ್ನಿಗೆ ರಚಿತಾ ಚಿತ್ರಗಳ ಭರಾಟೆ ಶುರುವಾಗುತ್ತೆ. ಈಗಾಗಲೇ ಏಕ್ ಲವ್ ಯಾ, ೧೦೦, ಏಪ್ರಿಲ್, ಪಂಥ, ಸೀರೆ, ವೀರಂ ಚಿತ್ರಗಳಲ್ಲಿ ತೊಡಗಿಸಿಕೊಂಡಿರೋ ರಚಿತಾ ರಾಮ್, ತೆಲುಗಿನತ್ತಲೂ ಕಾಲಿಟ್ಟಿದ್ದಾರೆ. ಇದರ ಜೊತೆಯಲ್ಲೇ ಒಪ್ಪಿಕೊಂಡಿರೋ ಚಿತ್ರ ಡಾಲಿ.

    ಇದು ಡಾಲಿ ಧನಂಜಯ್ ಅಭಿನಯದ ಸಿನಿಮಾ. ಪ್ರಭು ಶ್ರೀನಿವಾಸ್ ನಿರ್ದೇಶನದ ಚಿತ್ರ ಡಾಲಿ. ಡಿಸೆಂಬರ್‌ನಲ್ಲಿ ಸಿನಿಮಾ ಸೆಟ್ಟೇರುತ್ತಿದೆ. ಧನಂಜಯ್ ಮತ್ತು ರಚಿತಾ ರಾಮ್ ಜೋಡಿ ಹೇಗಿರಲಿದೆ..? ಜಸ್ಟ್ ವೇಯ್ಟ್.

  • ಡಾಲಿ ರಚಿತಾ ರಾಗಕ್ಕೆ ಶುರುವಾಯ್ತು ಕ್ರೇಜ್

    ಡಾಲಿ ರಚಿತಾ ರಾಗಕ್ಕೆ ಶುರುವಾಯ್ತು ಕ್ರೇಜ್

    ಡಾಲಿ ಧನಂಜಯ್ ಎಂಥದ್ದೇ ಪಾತ್ರಕ್ಕಾದರೂ ಜೀವ ತುಂಬಬಲ್ಲ ನಟ. ಆದರೆ ಇತ್ತೀಚೆಗೆ ರಗಡ್ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡಿದ್ದ ಡಾಲಿ ಸ್ವಲ್ಪ ಹೋಮ್ಲಿಯಾಗಿ ಕಾಣಿಸಿಕೊಂಡಿರೋದು ಮಾನ್ಸೂನ್ ರಾಗ ಚಿತ್ರದಲ್ಲಿ. ಈ ಚಿತ್ರದಲ್ಲಿ ಡಾಲಿಗೆ ಇದೇ ಮೊದಲ ಬಾರಿಗೆ ಜೊತೆಯಾಗಿರೋದು ಡಿಂಪಲ್ ಕ್ವೀನ್ ರಚಿತಾ ರಾಮ್. ಇದರ ಮಧ್ಯೆ ಚಿತ್ರದ ಪ್ರಮೋಷನ್‍ಗಾಗಿ ಯಶಾ ಶಿವಕುಮಾರ್ ಅವರು ಹಾಡಿ ಕುಣಿದಿರೋ ರಾಗುಸುಧಾ ಥೀಮ್ ಸಾಂಗ್ ಸೂಪರ್ ಹಿಟ್ ಆಗಿದೆ. ಇದೆಲ್ಲದರ ಜೊತೆ ಫ್ಯಾನ್ಸ್ ಆಗಲೇ ಕಟೌಟ್ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಕ್ರೇಜ್ ಅಂದ್ರೆ ಇದು...

    ಚಿತ್ರದಲ್ಲಿ ರಚಿತಾ ಅವರದ್ದು ತುಂಬಾ ವಿಭಿನ್ನವಾದ ರೋಲ್. ಅಷ್ಟೇ ಚಾಲೆಂಜಿಂಗ್. ಅಂತಾದ್ದೊಂದು ಪಾತ್ ಒಪ್ಪಿಕೊಳ್ಳೋಕೂ ಧೈರ್ಯ ಬೇಕು ಎನ್ನುತ್ತಾರೆ ಡೈರೆಕ್ಟರ್ ರವೀಂದ್ರನಾಥ್. ತುಂಬಾ ಟಫ್ ರೋಲ್. ರಚಿತಾ ಅದನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡು ನಟಿಸಿದ್ದಾರೆ ಎಂದು ಖುಷಿಯಾಗಿದ್ದಾರೆ ರವೀಂದ್ರನಾಥ್.

    ಎ.ಆರ್. ವಿಖ್ಯಾತ್ ನಿರ್ಮಾಣದ ಚಿತ್ರವಿದು.

    ಚಿತ್ರಕ್ಕೆ ಸಂಗೀತ ನೀಡಿರುವುದು ಅನೂಪ್ ಸಿಳೀನ್. ರಾಗಸುಧಾ ಸಾಂಗ್‍ನಲ್ಲಿ ಚಂಡೆ ಮತ್ತು ವಯೊಲಿನ್ ಜುಗಲ್‍ಬಂದಿ ತಂದು ಗೆದ್ದಿರೋ ಅನೂಪ್ ಆ ಹಾಡಿನಲ್ಲಿ ತುಳು ಪದಗಳನ್ನೂ ಚೆಂದವಾಗಿ ಬಳಸಿಕೊಂಡಿದ್ದಾರೆ.