` rachita ram - chitraloka.com | Kannada Movie News, Reviews | Image

rachita ram

 • ಐ ಲವ್ ಅಯೋಗ್ಯ

  ninasam sathish loves ayogya

  ಅಯೋಗ್ಯ ಅಂದ್ರೆ ಏನು..? ಒಂದು ಸಿನಿಮಾಗೆ ಆ ಹೆಸರು ಯಾಕಿಟ್ರು..? ಅದಕ್ಕೆ ನೀನಾಸಂ ಸತೀಶ್ ಕಾರಣ ಕೊಟ್ಟಿದ್ದಾರೆ. ಸರಿಯಾಗಿ ಕೆಲಸ ಮಾಡಿ, ತಿಂಗ್ಳಾ ತಿಂಗ್ಳು ಸಂಬಳ ತೆಗೆದುಕೊಳ್ಳೋವ್ರು ಯೋಗ್ಯರು. ಪಟ್ಟಾಂಗ ಹೊಡ್ಕೊಂಡು ತಿರುಗುವವರು ಅಯೋಗ್ಯರು. ಈ ಚಿತ್ರದಲ್ಲಿ ಅಯೋಗ್ಯ, ಚಿತ್ರದ ಹೀರೋ ನೀನಾಸಂ ಸತೀಶ್.

  ನಾನು ಮಂಡ್ಯ ಸ್ಟೈಲ್‍ನಲ್ಲಿ ಸಿನಿಮಾ ಮಾಡಿದಾಗಲೆಲ್ಲ ಗೆದ್ದಿದ್ದೇನೆ. ಜನ ಗೆಲ್ಲಿಸಿದ್ದಾರೆ. ಹೀಗಾಗಿ ಅಯೋಗ್ಯ ಚಿತ್ರ ಕೂಡಾ ಸ್ಪೆಷಲ್ ಆಗಿ ಇಷ್ಟವಾಗುತ್ತೆ. ರಚಿತಾ ರಾಮ್ ಮತ್ತು ನನ್ನ ಕಾಂಬಿನೇಷನ್‍ನ್ನು ಜನ ಖಂಡಿತಾ ಇಷ್ಟಪಡ್ತಾರೆ ಅನ್ನೋದು ಹೀರೋ ನೀನಾಸಂ ಸತೀಶ್ ಮಾತು.

  ಸಿನಿಮಾ ಮುಂದಿನ ವಾರ ರಿಲೀಸ್ ಆಗುತ್ತಿದೆ. ಸಿನಿಮಾ ರಿಲೀಸ್‍ಗೂ ಮುನ್ನ ಹಾಡುಗಳು ಹಿಟ್ ಆಗಿರುವುದು ಚಿತ್ರತಂಡದ ನಿರೀಕ್ಷೆ ಹೆಚ್ಚಿಸಿದೆ. ಮಹೇಶ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಬಂಡವಾಳ ಹೂಡಿರುವುದು ಚಂದ್ರಶೇಖರ್. ಸತತವಾಗಿ ಹಿಟ್ ಕೊಡುತ್ತಾ ಬಂದಿರುವ ಚಂದ್ರಶೇಖರ್, ಈ ಚಿತ್ರದಲ್ಲೂ ಗೆಲುವು ಎದುರು ನೋಡುತ್ತಿದ್ದಾರೆ.

 • ಐ ಲವ್ ಯೂ 22 ಕೋಟಿ ಲೂಟಿ..!

  i love you loots box office

  ಬಿಡುಗಡೆಯಾದ ದಿನದಿಂದಲೂ ಸುದ್ದಿಯಲ್ಲಿದೆ ಐ ಲವ್ ಯೂ. ಸಿನಿಮಾ ಡಿಫರೆಂಟ್ ಆಗಿ ಪ್ರೇಕ್ಷಕರಿಗೆ ಇಷ್ಟವಾಗಿದ್ದು ಒಂದು ಕಾರಣವಾದರೆ, ರಚಿತಾ ರಾಮ್ ಉಪೇಂದ್ರ ಅಭಿನಯದ ಬೋಲ್ಡ್ ದೃಶ್ಯಗಳ ವಿವಾದ ಇನ್ನೊಂದು ಕಾರಣ. ಇದೆಲ್ಲದರ ಮಧ್ಯೆ ಗೆಲುವಿನ ನಗು ಬೀರಿರುವುದು ನಿರ್ದೇಶಕ ಕಂ ನಿರ್ಮಾಪಕ ಆರ್. ಚಂದ್ರು.

  ಕನ್ನಡ ಮತ್ತು ತೆಲುಗು, ಎರಡೂ ಭಾಷೆಯಲ್ಲಿ ಏಕಕಾಲದಲ್ಲಿ 3 ರಾಜ್ಯಗಳಲ್ಲಿ ರಿಲೀಸ್ ಆದ ಐ ಲವ್ ಯೂ ಗಳಿಕೆ 22 ಕೋಟಿಯ ಗಡಿ ದಾಟಿದೆ. ಅದ್ಧೂರಿ ಸಿನಿಮಾ ಮಾಡಿದ ಚಂದ್ರು, ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಇದರ ಜೊತೆಗೆ ಥಿಯೇಟರ್‍ಗಳ ಸಂಖ್ಯೆ ಹೆಚ್ಚುತ್ತಿದೆ. ಈ ವಾರದ ಅಂತ್ಯಕ್ಕೆ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎನ್ನುತ್ತಿವೆ ಚಿತ್ರತಂಡದ ಮೂಲಗಳು.

 • ಐ ಲವ್ ಯೂ ಅಡ್ವಾನ್ಸ್ ಬುಕ್ಕಿಂಗ್ ಓಪನ್

  i love you advanced booking starts

  ಉಪೇಂದ್ರ, ರಚಿತಾ ರಾಮ್, ಸೋನುಗೌಡ ನಟನೆಯ, ಆರ್.ಚಂದ್ರು ನಿರ್ದೇಶನದ ಐ ಲವ್ ಯೂ ಚಿತ್ರ, ಜೂನ್ 14ಕ್ಕೆ ರಿಲೀಸ್ ಆಗುತ್ತಿದೆ. 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾಗೆ, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲೂ ಭರ್ಜರಿ ಬೇಡಿಕೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆ ಕಾಣುತ್ತಿರುವ ಸಿನಿಮಾಗೆ ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ.

  ಐ ಲವ್ ಯೂ ಚಿತ್ರದಲ್ಲಿ ರಚಿತಾ ರಾಮ್, ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದು, ಟ್ರೇಲರ್ ಹಾಗೂ ಚಿತ್ರದ ಹಾಡುಗಳು ಕ್ರೇಜ್ ಹುಟ್ಟಿಸಿವೆ. 

 • ಐ ಲವ್ ಯೂ ಆ ಹಾಡು ನೋಡಿದ ರಚಿತಾ ಅಮ್ಮ, ಅಕ್ಕ ಹೇಳಿದ್ದೇನು..?

  rachita ram's mother and sister appreciates her for her role in i love you

  ಉಪ್ಪಿ-ರಚಿತಾರ ಬೋಲ್ಡ್ ಆ್ಯಕ್ಟಿಂಗ್, ಐ ಲವ್ ಯೂ ರಿಲೀಸ್ ವೇಳೆ ಭಾರಿ ಸದ್ದು ಮಾಡಿದ್ದ ವಿಷಯ. ಒಂದು ಹಂತದಲ್ಲಂತೂ ಅದು ಪ್ರಿಯಾಂಕಾ ಉಪೇಂದ್ರ ಮತ್ತು ರಚಿತಾ ರಾಮ್ ನಡುವೆ ಸಣ್ಣದೊಂದು ಸಮರಕ್ಕೂ ಸಾಕ್ಷಿಯಾಗಿತ್ತು. ಪಡ್ಡೆಗಳ ನಿದ್ದೆಗೆಡಿಸಿದ್ದ ರಚಿತಾ ರಾಮ್, ಇನ್ನು ಮುಂದೆ ಇಂತಹ ದೃಶ್ಯಗಳಲ್ಲಿ ನಟಿಸಲ್ಲ ಎಂದಿದ್ದರು. ಇಷ್ಟೆಲ್ಲ ಆಗಿ, ಸಿನಿಮಾ ಹಿಟ್ ಆಗಿದೆ. ರಚಿತಾಗೆ ಅತಿದೊಡ್ಡ ಸರ್ಟಿಫಿಕೇಟ್ ಸಿಕ್ಕಿದೆ. ಅದು ಅವರ ತಾಯಿ ಹಾಗೂ ಅಕ್ಕನ ಮೆಚ್ಚುಗೆಯ ಸರ್ಟಿಫಿಕೇಟ್.

  ಐ ಲವ್ ಯೂ ಸಿನಿಮಾ ನೋಡಿದ ರಚಿತಾ ರಾಮ್ ತಾಯಿ ಹಾಗೂ ಅಕ್ಕ ನಿತ್ಯಾ ರಾಮ್ ಒಟ್ಟಿಗೇ ನೋಡಿದ್ದಾರೆ. ಇದು ನನ್ನ ಮಗಳ ಸಿನಿಮಾ ಎನ್ನುವುದಕ್ಕಿಂತ ಉಪೇಂದ್ರ-ರಚಿತಾ ರಾಮ್ ಸಿನಿಮಾ ಎಂದು ನೋಡೋಕೆ ಹೋಗಿದ್ದೆವು ಎಂದಿರೋ ಇಬ್ಬರೂ ಕೂಡಾ ರಚಿತಾರ ಅಭಿನಯ ಸೂಪರ್ ಎಂದಿದ್ದಾರೆ. ಅದರಲ್ಲೂ ಆ ಹಾಡಿನಲ್ಲಿ  ಅದ್ಭುತ ಪರ್ಫಾಮೆನ್ಸ್. ಎಕ್ಸ್‍ಪ್ರೆಷನ್ಸ್ ಚಿಂದಿ. ಯೂ ಕಿಲ್ಡ್ ಇಟ್ ಎಂದು ಹೊಗಳಿದ್ದಾರೆ.

  ಅಮ್ಮನೇ ಒಪ್ಪಿಕೊಂಡ ಮೇಲೆ ಇನ್ಯಾರು ಏನಂದರೂ ನನಗೆ ಚಿಂತೆ ಇಲ್ಲ ಎಂದಿದ್ದಾರೆ ರಚಿತಾ ರಾಮ್. ನಿರ್ದೇಶಕ ಹಾಗೂ ನಿರ್ಮಾಪಕ ಆರ್.ಚಂದ್ರು ತುಂಬುತ್ತಿರುವ ಗಲ್ಲಾಪೆಟ್ಟಿಗೆ ನೋಡಿ ಖುಷಿಯಾಗಿದ್ದಾರೆ.

 • ಐ ಲವ್ ಯೂ ಉಪ್ಪಿ ಅಂದಿದ್ದು ರಚಿತಾ ರಾಮ್

  rachitha in i love you

  ಐ ಲವ್ ಯೂ. ಆರ್.ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್ನಿನ ಸಿನಿಮಾ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 

  ಈ ಮೊದಲು ಚಂದ್ರು ನಿರ್ದೇಶನದ ಕನಕ ಚಿತ್ರದಲ್ಲಿ ರಚಿತಾ ನಟಿಸಬೇಕಿತ್ತು. ಆಗಿರಲಿಲ್ಲ. ಉಪೇಂದ್ರ ಜೊತೆ ಉಪ್ಪಿರುಪ್ಪಿ ಚಿತ್ರದಲ್ಲಿ ರಚಿತಾ ನಾಯಕಿ. ಚಿತ್ರ ಶೂಟಿಂಗ್ ಹಂತದಲ್ಲಿದೆ. ಈಗ ಉಪೇಂದ್ರ ಮತ್ತು ಆರ್.ಚಂದ್ರು ಜೊತೆಯಾಗಿದ್ದಾರೆ ರಚಿತಾ ರಾಮ್.

  ಜೂನ್ 10ರಿಂದ ಚಿತ್ರೀಕರಣ ಶುರುವಾಗಲಿದೆ. ಪ್ರೀತಿ, ಪ್ರೇಮ ಎಲ್ಲ ಪುಸ್ತಕದ ಬದ್ನೇಕಾಯ್ ಎಂದಿದ್ದ ಉಪೇಂದ್ರ, ಇಲ್ಲಿ ಬೇರೆಯದ್ದೇ ಸಂದೇಶ ಕೊಡಲಿದ್ದಾರೆ. ಎ, ಉಪೇಂದ್ರ ಮತ್ತು ಪ್ರೀತ್ಸೆ.. ಉಪ್ಪಿ ಅಭಿನಯದ ಮೂರು ಚಿತ್ರಗಳೂ ನೆನಪು ಮಾಡುವಂತಾ ಕಥೆ ಚಿತ್ರದಲ್ಲಿದೆಯಂತೆ.

 • ಐ ಲವ್ ಯೂ ನೋಡಿ ಮನೆಗೆ ಹೋದ ಮೇಲೆ.. 

  i love you is a tota domesticate love story

  ಐ ಲವ್ ಯೂ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಸೀನ್‍ಗಳಿವೆ. ರಚಿತಾ ರಾಮ್ ಹಿಂದೆಂದೂ ಇಷ್ಟು ಹಾಟ್ ಆಗಿ ಕಾಣಿಸಿಕೊಂಡಿರಲಿಲ್ಲ. ಅದೇನದು.. ಸೋನು ಗೌಡರ ಪಾತ್ರ, ಥೇಟು 100% ಗೃಹಿಣಿ. ಆ ಬೋಲ್ಡ್‍ನೆಸ್‍ಗೂ, ಇದಕ್ಕೂ ತದ್ವಿರುದ್ಧ ಇದೆಯಲ್ಲ. ಉಪೇಂದ್ರ ಕಾಲೇಜ್ ಸ್ಟೂಡೆಂಟು, ಕ್ರಿಕೆಟ್ ಪ್ಲೇಯರು, ಬ್ಯುಸಿನೆಸ್‍ಮ್ಯಾನು, ಪ್ರೇಮಕ್ಕೆ ಅಂಗಲಾಚುವ ಯುವಕ.. ಏನಿದೆಲ್ಲ..

  ಹೀಗೆ ಐ ಲವ್ ಯೂ ಟ್ರೇಲರ್ ನೋಡಿದವರ ಮನದಲ್ಲಿ ಮೂಡುತ್ತಿರೋ ಪ್ರಶ್ನೆಗಳಿವು. ಬೋಲ್ಡ್ ಸೀನ್ ನೋಡಿದವರಿಗೆ ಕಾಡ್ತಿರೋ ಪ್ರಶ್ನೆ ಒಂದೇ. ಫ್ಯಾಮಿಲಿ ಜೊತೆ ಬರಬಹುದಾ ಅನ್ನೋದು. ನಿರ್ದೇಶಕ ಆರ್.ಚಂದ್ರು ಆ ಪ್ರಶ್ನೆಗೆ ಕೊಡೋ ಯೆಸ್. ಆ ಕೆಲವು ದೃಶ್ಯಗಳು ಚಿತ್ರದಲ್ಲಿವೆ.ಅವು ಏಕೆ ಬರುತ್ತವೆ ಅನ್ನೋದು ಸಿನಿಮಾ ನೋಡಿದ ಮೇಲೆ ನಿಮಗೇ ಗೊತ್ತಾಗುತ್ತೆ ಎನ್ನುತ್ತಾರೆ ಚಂದ್ರು.

  ಅಷ್ಟೆ ಅಲ್ಲ, ಸಿನಿಮಾ ನೋಡಿ ಮನೆಗೆ ಬಂದ ಮೇಲೆ ನಾವು ಯಾರನ್ನು ಪ್ರೀತಿ ಮಾಡಬೇಕು, ನಮ್ಮನ್ನು ಪ್ರೀತಿಸುತ್ತಿರೋದು ಯಾರು ಎಂಬ ಬಗ್ಗೆ ನಾವು ಖಂಡಿತಾ ಯೋಚನೆ ಮಾಡ್ತೇವೆ ಎನ್ನುವ ಭರವಸೆ ಚಂದ್ರು ಕಡೆಯಿಂದ ಬರುತ್ತೆ.

 • ಐ ಲವ್ ಯೂ ಬಾಕ್ಸಾಫೀಸ್ ಲೂಟಿ

  i love you successmeet

  2 ವರ್ಷಗಳ ನಂತರ ತೆರೆ ಕಂಡಿರುವ ಉಪೇಂದ್ರ ಅಭಿನಯದ ಸಿನಿಮಾ ಐ ಲವ್ ಯೂ. ಬಾಕ್ಸಾಫೀಸ್‍ನ್ನು ಅಕ್ಷರಶಃ ಲೂಟಿ ಹೊಡೆಯುತ್ತಿದೆ. ಕರ್ನಾಟಕ, ಆಂಧ್ರ, ತೆಲಂಗಾಣ ಎಲ್ಲ ಕಡೆಯಲ್ಲೂ ಒಂದೇ ರೆಸ್ಪಾನ್ಸ್. ಚಿತ್ರ ಸಕ್ಸಸ್.

  ಇದೇ ಕಾರಣಕ್ಕಾಗಿ ಚಿತ್ರತಂಡ ಸಕ್ಸಸ್ ಮೀಟ್ ನಡೆಸಿತ್ತು. ಆರ್.ಚಂದ್ರು ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡರೆ, ಉಪೇಂದ್ರ ಎ ಚಿತ್ರ ರಿಲೀಸ್ ಮಾಡುವಾಗ ಅನುಭವಿಸಿದ್ದ ಕಷ್ಟಗಳನ್ನು ಮೆಲುಕು ಹಾಕಿದರು.

  ಇನ್ನು ಬಿಡುಗಡೆಗೆ ಮುನ್ನ ಭಾರಿ ಸಂಚಲನ ಸೃಷ್ಟಿಸಿದ್ದ ಉಪೇಂದ್ರ, ರಚಿತಾ ರಾಮ್ ಹಾಟ್ ಸಾಂಗ್, ನಿರ್ದೇಶಕರು ಹೇಳಿದಂತೆ ಬಿಡುಗಡೆಯಾದ ಮೇಲೆ ತಣ್ಣಗಾಗಿದೆ. ಚಿತ್ರದಲ್ಲಿ ಬಂದು ಹೋಗುವ ಆ ದೃಶ್ಯ, ಚಿತ್ರದ ಕಥೆಗೆ ಬೇಕಿತ್ತು ಎಂದಿದ್ದರು. ಅಷ್ಟೇ ಅಲ್ಲ, ಇನ್ನೊಬ್ಬ ನಾಯಕಿ ಸೋನು ಗೌಡ ಅವರ ಪಾತ್ರವನ್ನೇಕೆ ಬಿಡುಗಡೆಗೆ ಮುನ್ನ ಸೀಕ್ರೆಟ್ ಆಗಿ ಇಡಲಾಯ್ತು ಎಂಬುದಕ್ಕೂ ಚಿತ್ರದಲ್ಲಿ ಉತ್ತರ ಸಿಕ್ಕಿದೆ.

  ಸದ್ಯಕ್ಕೆ ಆರ್.ಚಂದ್ರು ಹ್ಯಾಪಿ ಹ್ಯಾಪಿ. ಉಪೇಂದ್ರ, ರಚಿತಾ ರಾಮ್, ಸೋನು ಗೌಡ ಎಲ್ಲರಿಗೂ ಖುಷಿಯೋ ಖುಷಿ.

 • ಐ ಲವ್ ಯೂ ರಿಲೀಸ್ ಹಬ್ಬದ ಸ್ಪೆಷಲ್

  fans planning a festival celebrations for uppi's i love you

  ಐ ಲವ್ ಯೂ ಚಿತ್ರದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ. ಉಪೇಂದ್ರ ಅಭಿಮಾನಿಗಳಂತೂ ಜೂನ್ 14ನ್ನ ಹಬ್ಬದಂತೆ ಆಚರಿಸಲು ಸಿದ್ಧರಾಗಿದ್ದಾರೆ. 

  ಸಿನಿಮಾ ಜೂನ್ 14ರಂದು ತ್ರಿವೇಣಿ ಚಿತ್ರಮಂದಿರದಲ್ಲಿ ರಿಲೀಸ್ ಆಗುತ್ತಿದೆ. ಅದೇ ಮೇಯ್ನ್ ಥಿಯೇಟರ್. ಅದಕ್ಕೂ ಮುನ್ನ ಜೂನ್ 10ರಂದು ಚಿತ್ರದ ಸ್ಪೆಷಲ್ ಕಟೌಟ್‍ನ್ನು ಮೆರವಣಿಗೆ ಮೂಲಕ ತಂದು ನಿಲ್ಲಿಸಲಿದ್ದಾರೆ. ಆ ದಿನ ಅಣ್ಣಮ್ಮ ದೇವಸ್ಥಾನದಿಂದ ತ್ರಿವೇಣಿ ಚಿತ್ರಮಂದಿರದವರಗೆ ಕಟೌಟ್ ಮೆರವಣಿಗೆ ನಡೆಯಲಿದೆ.

  ಚಿತ್ರದ ಮೊದಲ ಟಿಕೆಟ್‍ನ್ನು ಹರಾಜಿಗಿಡಲಾಗುತ್ತಿದ್ದು, ಟಿಕೆಟ್‍ನ್ನು ಹರಾಜಿನಲ್ಲಿ ಖರೀದಿಸಬಹುದು. ಆ ಹಣವನ್ನು ಅನಾಥಾಶ್ರಮವೊಂದಕ್ಕೆ ನೀಡಲು ನಿರ್ಧರಿಸಲಾಗಿದೆ.

  ಉಪೇಂದ್ರ, ರಚಿತಾ ರಾಮ್, ಸೋನು ಗೌಡ ಅಭಿನಯಿಸಿರುವ ಚಿತ್ರಕ್ಕೆ ಆರ್.ಚಂದ್ರು ನಿರ್ದೇಶಕ ಹಾಗೂ ನಿರ್ಮಾಪಕ.

 • ಐ ಲವ್ ಯೂ ಹಾರ್ಟು ನಾನೇ - ಸೋನು ಗೌಡ

  i am the heart of i love you movie

  ಐ ಲವ್ ಯೂ ರಿಲೀಸ್ ಆಗುತ್ತಿದೆ. ಚಿತ್ರದ ಟ್ರೇಲರ್‍ನಲ್ಲಿ ಸೋನು ಗೌಡ ಅವರನ್ನು ನೋಡಿದ ಕಿಚ್ಚ ಸುದೀಪ್, ಏನಿದು ಅಚ್ಚರಿ, ಏನು ಕಥೆ ಎಂದಿದ್ದಾರೆ. ಸೋನುಗೆ ಮೆಚ್ಚುಗೆ ಸಿಕ್ಕಿದೆ. ಆದರೆ, ಚಿತ್ರದ ಮೊದಲ ಟೀಸರ್, ಪೋಸ್ಟರ್, ಟ್ರೇಲರುಗಳಲ್ಲಿ ಸೋನು ಗೌಡ ಇರಲಿಲ್ಲ. ಏಕೆ ಎಂದರೆ, ಅದನ್ನು ನಿರ್ದೇಶಕರು ಹೇಳಿದ್ದರು. ಹಾಗಾಗಿ ನನಗೇನೂ ಬೇಸರವಿಲ್ಲ ಎಂದಿದ್ದಾರೆ ಸೋನು ಗೌಡ.

  ಚಿತ್ರದ ಮುಖ್ಯ ಭೂಮಿಕೆಯಲ್ಲಿರೋದು ಉಪೇಂದ್ರ ಮತ್ತು ರಚಿತಾ ರಾಮ್. ಅವರ ಮೇಲೆಯೇ ಇಡೀ ಕಥೆ ಫೋಕಸ್ ಆಗಿದೆ. ಆದರೆ, ನನ್ನದು ಚಿತ್ರದ ಅತ್ಯಂತ ಪ್ರಮುಖವಾದ ಪಾತ್ರ. ಒಂದು ರೀತಿಯಲ್ಲಿ ನನ್ನದು ಚಿತ್ರದ ಹೃದಯದಂತಾ ಪಾತ್ರ ಎಂಬ ಭರವಸೆ ಸೋನು ಅವರದ್ದು.

  ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರು ಅತಿ ಹೆಚ್ಚು ನೆನಪಿಸಿಕೊಳ್ಳೋದು ನನ್ನನ್ನೇ ಎಂಬ ಭರವಸೆಯಲ್ಲಿಯೇ ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ ಸೋನು ಗೌಡ.

 • ಐ ಲವ್ ಯೂ.. ಉಪ್ಪಿ ಡೈಲಾಗ್‍ನೆಲ್ಲ ಹೇಳಿದ್ದು ರಚಿತಾ..!

  i love you trailer goes viral

  ಎಷ್ಟೇ ಎಷ್ಟೇ ಪ್ರೀತಿಸ್ತೀಯಾ ನೀನು ನನ್ನ.. ತಿಳ್ಕೋ.. ಈ ಪ್ರೀತಿ ಪ್ರೇಮ ಎಲ್ಲ ಪುಸ್ತಕದ್ ಬದ್ನೇಕಾಯಿ..ಇದು ಎ ಚಿತ್ರದಲ್ಲಿ ಉಪ್ಪಿ ಹೇಳುವ ಡೈಲಾಗುಗಳು. ಅದೇ ಉಪ್ಪಿ.. ಡೈರೆಕ್ಟರ್ ಬೇರೆ.. ಚಿತ್ರ ಐ ಲವ್ ಯೂ. ಉಪ್ಪಿಗೆ ಆ ಡೈಲಾಗ್ ಹೇಳೋದು ರಚಿತಾ ರಾಮ್.

  ಪ್ರೇಮ ಕಾಮ ಆ ಭಗವಂತನ ಡ್ರಾಮ.. ಎಂದು ಶುರುವಾಗುವ ಐ ಲವ್ ಯೂ ಟ್ರೇಲರ್, ನೋಡ್ತಾ ನೋಡ್ತಾ ನೋಡುಗರಿಗೆ ಶಾಕ್ ಕೊಡುತ್ತಾ ಹೋಗುತ್ತೆ. ಚಿತ್ರದ ಕಥೆ ಏನು.. ಎಂಬ ಕುತೂಹಲ ಹುಟ್ಟುತ್ತೆ. ಇದು ಉಪ್ಪಿ ಸಿನಿಮಾನೋ.. ಚಂದ್ರು ಸಿನಿಮಾನೋ ಎಂಬ ಪ್ರಶ್ನೆ ಹುಟ್ಟುತ್ತೆ. ರಚಿತಾ ರಾಮ್ ರಗಡ್ ಲುಕ್‍ನಲ್ಲಿ ಬೆಚ್ಚಿಬೀಳಿಸ್ತಾರೆ. ರಗಡ್ ಲುಕ್ ಅಂದ್ರೆ, ಆ ಮಾಸ್ ಡೈಲಾಗ್ಸ್.

  ಇಷ್ಟೆಲ್ಲ ಡೈಲಾಗುಗಳ ನಂತರ ಉಪ್ಪಿ, ರೋಸ್ ತಗೊಂಡ್ ಹೋಗ್ತಾನೆ.. ಐ ಲವ್  ಯೂ ಹೇಳೋಕೆ.. ಯಾರಿಗೆ.. ಏಕೆ.. ಅಲ್ಲಿ ಏನ್ ನಡೆಯುತ್ತೆ.. ರೋಸ್ ತಗೊಂಡ್ ಹೋಗಿ ಐ ಲವ್ ಯೂ ನೇ ಹೇಳ್ತಾನಾ.. ಅಥವಾ..?????

  ಸ್ಟಾಪ್. ಫೆಬ್ರವರಿ 14ಕ್ಕೆ ರಿಲೀಸ್ ಆಗ್ತಿದೆ. ವ್ಯಾಲೆಂಟೈನ್ಸ್ ಡೇಗೆ. ಆ ದಿನ ಉತ್ತರ ಸಿಗುತ್ತೆ.

 • ಓಪನ್ ದ ಬಾಟಲ್.. ಕಿಕ್ಕು ಹೆಚ್ಚಿಸಿದ ನಟಸಾರ್ವಭೌಮ

  powerstar kicks up new year party with open the bottle

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಪವನ್ ಒಡೆಯರ್, ಯೋಗರಾಜ್ ಭಟ್, ವಿಜಯ್ ಪ್ರಕಾಶ್, ಡಿ.ಇಮ್ಮಾನ್.. ಇವ್ರೆಲ್ಲ ಸೇರ್ಕೊಂಡು ಹೊಸ ವರ್ಷದ ಕಿಕ್ಕೇರಿಸಿಬಿಟ್ಟಿದ್ದಾರೆ. ನಟಸಾರ್ವಭೌಮ ಚಿತ್ರದ ಓಪನ್ ದ ಬಾಟಲ್ ಹಾಡಿನ ಲಿರಿಕಲ್ ವಿಡಿಯೋ ಹೊರ ಬಿಟ್ಟಿದೆ ರಾಕ್‍ಲೈನ್ ಪ್ರೊಡಕ್ಷನ್ಸ್. ಹಾಡು ಕಿಕ್ಕೇರಿಸುವಂತಿದೆ.

  ಏಳೂವರೆ ತುಟಿ ಒಣಗತೈತೆ ಏನ್ ಮಾಡಣ.. ಹಾಳು ಎಣ್ಣಿ ಚಟ ಬಿಡಬೇಕು.. ಕಮ್ಮಿ ಕುಡ್ಯಣ.. ಎಣ್ಣೆ ಬಿಡೋದಕ್ಕೆ ಇಟ್ಟಿರೋ ಪಾರ್ಟಿ ಇದು.. ಫ್ರೆಂಡ್ಸೆಲ್ಲ ಕೈ ಹಾಕ್ರಿ.. ಜೋಡಿಸ್ರೋ ಟೇಬಲ್.. ಓಪನ್ ದ ಬಾಟಲ್.. ಎಂದು ಶುರುವಾಗುವ ಹಾಡಿನಲ್ಲಿ ಮೈಮರೆತು ಕುಣಿಯೋಕೆ ಬೇಕಾದ ಎಲ್ಲ ಸರಕುಗಳೂ ಇವೆ.

  ಹಾಡು ಕೇಳೋಕಷ್ಟೇ ಅಲ್ಲ, ನೋಡೋಕೂ ಮಜವಾಗಿದೆ. ಪುನೀತ್ ಚಿಂದಿಯಾಗಿ ಕುಣಿದಿದ್ದಾರೆ. ಅವರು ಇದುವರೆಗೂ ಅಂತಹ ಸ್ಟೆಪ್ಪುಗಳನ್ನು ಹಾಕಿಯೇ ಇಲ್ಲ. ವಿಡಿಯೋನೂ ಬಿಡ್ತೇವೆ ನೋಡ್ತಾ ಇರಿ ಎಂದು ಆಸೆಯ ಕಿಕ್ಕು ಕೊಟ್ಟಿದ್ದಾರೆ ಪವನ್ ಒಡೆಯರ್.

 • ಕಥೆಯ ಗುಟ್ಟು ಬಿಡಲಿಲ್ಲ ಆಯುಷ್ಮಾನ್ ಭವ ಟ್ರೇಲರ್

  ayushmanbhava trailer out

  ಶಿವರಾಜ್ ಕುಮಾರ್, ರಚಿತಾ ರಾಮ್, ಅನಂತ ನಾಗ್, ಸುಹಾಸಿನಿ, ನಿಧಿ ಸುಬ್ಬಯ್ಯ ಅಭಿನಯದ ಆಯುಷ್ಮಾನ್ ಭವ ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್. ರಾಜ್ಯೋತ್ಸವಕ್ಕೆ ಪ್ರೇಕ್ಷಕ ಪ್ರಭುಗಳ ಮಂದೆ ಬರ್ತಿರೋ ಚಿತ್ರದ ಟ್ರೇಲರ್ ಹೊರಬಿದ್ದಿದೆ. ಆದರೆ, ಟ್ರೇಲರ್ ಎಷ್ಟು ಸಸ್ಪೆನ್ಸ್ ತುಂಬಿಕೊಂಡಿದೆಯೆಂದರೆ ಕಥೆಯ ಎಳೆ ಹೀಗಿರಬಹುದಾ ಎಂಬ ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ.

  ನಿರ್ದೇಶಕ ಪಿ.ವಾಸು ಮತ್ತೊಮ್ಮೆ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿ ಸೈಕಲಾಜಿಕಲ್ ಕಥೆ ಇದೆಯಾ..? ಟ್ರೇಲರ್ ಏನೆಂದರೆ ಏನೂ ಗುಟ್ಟು ಬಿಟ್ಟುಕೊಡಲ್ಲ. ಒಂದು ತುಂಬು ಸಂಸಾರ, ಅಲ್ಲೇನೋ ಒಂದು ನಿಗೂಢತೆ ಇದೆ. ಟ್ರೇಲರ್ ಹೇಳುವುದು ಇಷ್ಟೆ. ಉಳಿದಂತೆ ಒಂದೊಂದೇ ಸೀನ್‍ನಲ್ಲಿ ಎಲ್ಲರೂ ಕುತೂಹಲ ಹುಟ್ಟಿಸುತ್ತಾರೆ.

  ದ್ವಾರಕೀಶ್ ಬ್ಯಾನರ್‍ನ 52ನೇ ಸಿನಿಮಾ, ಗುರುಕಿರಣ್ ಸಂಗೀತ ನಿರ್ದೇಶನದ 100ನೇ ಸಿನಿಮಾ ಅಯುಷ್ಮಾನ್ ಭವ. ಶಿವಣ್ಣ ಚಿತ್ರದ ಮ್ಯೂಸಿಷಿಯನ್ ಆಗಿದ್ದಾರಾ..? ಊಹೂಂ.. ಅದೂ ಗೊತ್ತಾಗಲ್ಲ. ಕಾಯಬೇಕಷ್ಟೆ..

 • ಕನಕ ಚಿತ್ರದ ರಚಿತಾ ರಾಮ್ ಸ್ಥಾನಕ್ಕೆ ಹರಿಪ್ರಿಯಾ

  haripriya in kanaka

  ದುನಿಯಾ ವಿಜಯ್ ಅಭಿನಯಿಸುತ್ತಿರುವ ಆರ್. ಚಂದ್ರು ನಿರ್ದೇಶನದ ಕನಕ ಚಿತ್ರಕ್ಕೆ ಹರಿಪ್ರಿಯಾ ನಾಯಕಿಯಾಗಿ ಬಂದಿದ್ದಾರೆ.

  ಇದೇ ಪಾತ್ರಕ್ಕೆ ಈ ಹಿಂದೆ ರಚಿತಾ ರಾಮ್ ಆಯ್ಕೆಯಾಗಿದ್ದರು. ಆದರೆ, ಡೇಟ್ ಸಮಸ್ಯೆಯಿಂದಾಗಿ ಹಿಂದೆ ಸರಿದಿದ್ದರು.'ಕನಕ' ಚಿತ್ರದಲ್ಲಿ ವಿಜಯ್ ಗೆ ಇಬ್ಬರು ನಾಯಕಿಯರು. ಚಿತ್ರದ ಮತ್ತೊಬ್ಬ ನಾಯಕಿ ಮಾನ್ವಿತಾ ಹರೀಶ್. ಚಿತ್ರದ ಬಹುತೇಕ ಭಾಗದ ಶೂಟಿಂಗ್ ಮುಗಿದಿದ್ದು, ಹರಿಪ್ರಿಯಾ-ದುನಿಯಾ ವಿಜಯ್ಪೋರ್ಷನ್ ಮಾತ್ರ ಬಾಕಿ ಇದೆಯಂತೆ

  .ಈ ಮೊದಲು ದುನಿಯಾ ವಿಜಯ್ ಅಭಿನಯದ ಜಾನಿ ಜಾನಿ ಯೆಸ್ ಪಪ್ಪಾ ಚಿತ್ರದಿಂದಲೂ ರಚಿತಾರಾಮ್ ಮೊದಲು ಒಪ್ಪಿಕೊಂಡು ನಂತರ ಹಿಂದೆ ಸರಿದಿದ್ದರು. ಆ ಜಾಗಕ್ಕೆ ಶ್ರದ್ಧಾಶ್ರೀನಾಥ್ ಬಂದಿದ್ದಾರೆ. ಅಲ್ಲಿಗೆ ದುನಿಯಾ ವಿಜಯ್ ಅಭಿನಯದ ಎರಡೂ ಚಿತ್ರಗಳಲ್ಲಿನರಚಿತಾ ರಾಮ್ ಪಾತ್ರಕ್ಕೆ ನಾಯಕಿಯರು ಸಿಕ್ಕಂತಾಗಿದೆ.

  Related Articles :-

  Haripriya Is Vijay's Heroine In Kanaka

  K P Nanjundi To Act In Kanaka

  Rachita Ram Is Vijay's Heroine In Kanaka

  Manvita Is Vijay's Heroine In Kanaka

  First Look Of Kanaka Released

  Kanaka Shooting Starts From Today

   

 • ಕನ್ನಡ ಚಿತ್ರಗಳ ಪರವಾಗಿ ರೊಚ್ಚಿಗೆದ್ದ ರಚ್ಚು

  ಕನ್ನಡ ಚಿತ್ರಗಳ ಪರವಾಗಿ ರೊಚ್ಚಿಗೆದ್ದ ರಚ್ಚು

  ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೇ ನೆಲೆ ಇಲ್ಲದಂತಾಗಿದೆ. ಡಬ್ಬಿಂಗ್ ಹೆಸರು ಹೇಳಿಕೊಂಡು ಪರಭಾಷೆಯ ಚಿತ್ರಗಳು ನೂರಾರು ಚಿತ್ರ ಮಂದಿರಗಳಲ್ಲಿ ರಿಲೀಸ್ ಆಗುತ್ತಿವೆ. ಕರ್ನಾಟಕದಲ್ಲಿಯೇ ಕನ್ನಡ ಚಿತ್ರಗಳಿಗಾಗಿ ಚಿತ್ರಮಂದಿರಗಳನ್ನು ಬೂದುಗನ್ನಡಿ ಹಾಕಿಕೊಂಡು ಹುಡುಕಬೇಕು. ನಮ್ಮದು ಅಚ್ಚ ಕನ್ನಡ ಸಿನಿಮಾ. ನಿಜವಾದ ಕನ್ನಡ ಸಿನಿಮಾಗಳನ್ನು ನೋಡಿ.. ಬೆಂಬಲಿಸಿ..

  ರಚಿತಾ ರಾಮ್ ಗುಡುಗಿದ ಈ ಮಾತು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ರಚಿತಾ ರಾಮ್ ಇಷ್ಟೆಲ್ಲ ರೊಚ್ಚಿಗೆದ್ದು ಮಾತನಾಡಿದ್ದು ತಮ್ಮದೇ ನಟನೆಯ ಲವ್ ಯೂ ರಚ್ಚು ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ. ಆ ಸಿನಿಮಾ ಡಿಸೆಂಬರ್ 31ರಂದು ರಿಲೀಸ್ ಆಗುತ್ತಿದೆ.

  ರಚಿತಾ ರಾಮ್ ಹೇಳಿಕೆಯನ್ನು ರಶ್ಮಿಕಾ ಮಂದಣ್ಣಗೆ ಕೊಟ್ಟ ಟಾಂಗ್ ಎಂದು ಸಂತಸ ಪಡುತ್ತಿರುವವರೂ ಇದ್ದಾರೆ. ಹೆಣ್ಣು ಮಗಳೊಬ್ಬಳಾದರೂ ಸಿಡಿದು ನಿಂತಳಲ್ಲ ಎನ್ನುವವರೂ ಇದ್ದಾರೆ. ಆದರೆ.. ಸಮಸ್ಯೆ..?

  ಸದ್ಯಕ್ಕಂತೂ ಪರಿಸ್ಥಿತಿ ಬದಲಾಗಿಲ್ಲ. ಬೇರೆ ಬೇರೆ ಭಾಷೆಗಳ ಚಿತ್ರಗಳ ಎದುರು ಕನ್ನಡ ಚಿತ್ರಗಳು ಡಲ್ಲು ಹೊಡೆಯುತ್ತಿವೆ ಅನ್ನೋದು ಒಪ್ಪಿಕೊಳ್ಳಲು ಇಷ್ಟವಾಗದ ಸತ್ಯ

 • ಕಲ್ಲು ಕ್ವಾರಿಗಳಲ್ಲಿ ಬ್ಯಾಡ್ ಮ್ಯಾನರ್ಸ್

  ಕಲ್ಲು ಕ್ವಾರಿಗಳಲ್ಲಿ ಬ್ಯಾಡ್ ಮ್ಯಾನರ್ಸ್

  ಅಭಿಷೇಕ್ ಅಂಬರೀಷ್-ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿರೋ ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಕನಕಪುರ ಸುತ್ತಮುತ್ತ ಬೀಡುಬಿಟ್ಟಿದೆ. ಇಲ್ಲಿನ ಕಲ್ಲು ಕ್ವಾರಿಗಳಲ್ಲಿ ಧೂಳು, ಹಳೇ ಕಾರು, ಟೀ ಅಂಗಡಿ, ಉರಿಯುತ್ತಿರುವ ಟೈರ್ಗಳ ಮಧ್ಯೆ ಶೂಟಿಂಗ್ ನಡೆಯುತ್ತಿದೆ. ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕಾಗಿ ಈಗಾಗಲೇ 100ಕ್ಕೂ ಹೆಚ್ಚಿನ ದಿನಗಳ ಚಿತ್ರೀಕರಣ ಮಾಡಿರುವ ಸೂರಿ, ಕೊನೆಯ ಹಂತದ ಚಿತ್ರೀಕರಣಕ್ಕೆ ಕನಕಪುರಕ್ಕೆ ಶಿಫ್ಟ್ ಆಗಿದ್ದಾರೆ. ಬರೀ ಫೈಟ್ ಅಲ್ಲ, ಚಿತ್ರದ ಹಾಡಿಗೆ ಮಾಂಟೇಜ್ ಸೀನ್ಗಳ ಚಿತ್ರೀಕರಣವೂ ನಡೆಯುತ್ತಿದೆ.

  ಕನಕಪುರದ ಕಲ್ಲು ಕ್ವಾರಿಯಲ್ಲಿ ಸಣ್ಣ ಸೆಟ್ ಹಾಕಿಸಿದ್ದೇವೆ. ಇದಾದ ಮೇಲೆ ಬೆಂಗಳೂರಿನಲ್ಲಿ ಒಂದಿಷ್ಟು ಪ್ಯಾಚ್ವರ್ಕ್ ಇದೆ. ನಂತರ ನಾಯಕನ ಇಂಟ್ರೋ ಸಾಂಗ್ ಶೂಟಿಂಗ್ ನಡೆಯಲಿದೆ. ಅಭಿಷೇಕ್ ಮತ್ತು ಅಂಬರೀಶ್ ಫ್ಯಾನ್ಸ್ ಥ್ರಿಲ್ ಆಗುವಂತಹ ಹಲವು ಅಂಶಗಳಿವೆ. ಸಣ್ಣ ವಿಷಯದ ಮೂಲಕ ದೊಡ್ಡ ಕಥೆಯನ್ನು ಹೇಳುತ್ತಿದ್ದೇವೆ ಎನ್ನುತ್ತಾರೆ ಸೂರಿ.

  ನಿರ್ದೇಶಕರು ಕೇಳಿದ್ದನ್ನು ಕೊಡುವುದು ನನ್ನ ಕೆಲಸ. ನಾನೂ ಒಬ್ಬ ಫ್ಯಾನ್ ಆಗಿ ಸಿನಿಮಾಗಾಗಿ ಕಾಯುತ್ತಿದ್ದೇನೆ ಎನ್ನುವುದು ನಿರ್ಮಾಪಕ ಸುಧೀರ್ ಕೆ ಎಂ ಮಾತು.

  ನಿರ್ದೇಶಕರು ಹೇಳಿದಂತೆ ಮಾಡುತ್ತಿದ್ದೇನೆ. ಒಂದೊಂದು ಶಾಟ್ ಕೂಡಾ ಚೆನ್ನಾಗಿಯೇ ಬರಬೇಕು ಎಂದು ಅನ್ನೋ ಉದ್ದೇಶ ಸೂರಿಯವರದ್ದು. ಅವರು ಹೇಳಿದ್ದನ್ನು ಮಾಡುವುದು ನನ್ನ ಕೆಲಸ ಎಂದು ಎಲ್ಲ ಭಾರವನ್ನೂ ನಿರ್ದೇಶಕರ ಹೆಗಲಿಗೇ ವರ್ಗಾಯಿಸಿದ್ದಾರೆ ಅಭಿಷೇಕ್ ಅಂಬರೀಷ್.

 • ಕಸ್ತೂರಿ ಮಹಲ್`ನಿಂದ ರಚಿತಾ ರಾಮ್ ಔಟ್

   Rachita Ram Walks Out Of Katuri Mahal

  ಡಿಂಪಲ್ ಕ್ವೀನ್ ರಚಿತಾ ರಾಮ್ ಕಸ್ತೂರಿ ಮಹಲ್ ಚಿತ್ರದಿಂದ ದಿಢೀರನೆ ಹೊರನಡೆದಿದ್ದಾರೆ. ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರವಿದು. ಆರಂಭದಲ್ಲಿ ಕಸ್ತೂರಿ ನಿವಾಸ ಎಂದು ಟೈಟಲ್ ಇಟ್ಟುಕೊಂಡಿದ್ದ ಚಿತ್ರತಂಡ, ರಾಜ್ ಅಭಿಮಾನಿಗಳ ಒತ್ತಡಕ್ಕೆ ಮಣಿದು ಟೈಟಲ್‍ನ್ನು ಬದಲಿಸಿತ್ತು. ಈಗ ನಾಯಕಿಯನ್ನೇ ಬದಲಾಯಿಸಬೇಕಾಗಿದೆ.

  ಜಸ್ಟ್ ಒಂದು ಮೆಸೇಜ್ ಮಾಡಿ ಚಿತ್ರತಂಡದಿಂದ ಹೊರ ಹೋಗಿದ್ದಾರಂತೆ ರಚಿತಾ ರಾಮ್. ಅವರು ಸ್ಪಷ್ಟ ಕಾರಣಗಳನ್ನೇ ಕೊಟ್ಟಿಲ್ಲ ಎನ್ನುತ್ತಿದೆ ಚಿತ್ರತಂಡ. ಮೂಲಗಳ ಪ್ರಕಾರ ತಮ್ಮ ಕ್ಯಾರೆಕ್ಟರ್‍ನಲ್ಲಿ ಬದಲಾವಣೆಗೆ ರಚಿತಾ ರಾಮ್ ಕೇಳಿಕೊಂಡಿದ್ದರು. ಆದರೆ ಸ್ಕ್ರಿಪ್ಟ್ ಬದಲಾವಣೆಗೆ ದಿನೇಶ್ ಬಾಬು ಒಪ್ಪಲಿಲ್ಲ. ಹೀಗಾಗಿ ರಚಿತಾ ರಾಮ್ ಚಿತ್ರವನ್ನೇ ಕೈಬಿಟ್ಟರು ಎನ್ನಲಾಗುತ್ತಿದ.

  ನಾನು ಸ್ಕ್ರಿಪ್ಟ್‍ನ್ನೇ ನಂಬಿಕೊಂಡಿರುವವನು. ನನ್ನ ನಂಬಿಕೆ, ಗೌರವ ಎರಡೂ ನನ್ನ ಸ್ಕ್ರಿಪ್ಟ್. ಹೀಗಾಗಿ ಚಿತ್ರದ ಹೀರೋ, ಹೀರೋಯಿನ್‍ಗಾಗಿ ಬದಲಾವಣೆ ಮಾಡಿಕೊಳ್ಳಲಾರೆ ಎಂದಿದ್ದಾರೆ ದಿನೇಶ್ ಬಾಬು. ರಚಿತಾ ರಾಮ್ ಹೊರನಡೆದಿರುವುದಕ್ಕೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

  ಅಕ್ಟೋಬರ್ 5ರಿಂದ ಚಿತ್ರದ ಚಿತ್ರೀಕರಣಕ್ಕೆ ಪ್ಲಾನ್ ಮಾಡಿಕೊಳ್ಳಲಾಗಿದ್ದು, ಈಗ ಚಿತ್ರತಂಡ ಹೊಸ ನಾಯಕಿಯ ಹುಡುಕಾಟದಲ್ಲಿದೆ. ರಚಿತಾ ರಾಮ್ ಬಿಟ್ಟು ಹೋದ ಪಾತ್ರವನ್ನು ಯಾರು ಒಪ್ಪಿಕೊಳ್ತಾರೆ..?

 • ಕಾಲೇಜು ಕ್ವೀನ್ ಆಗಿ ಬರ್ತಿದ್ದಾರೆ ಡಿಂಪಲ್ ಕ್ವೀನ್..!

  rachita ram to act with prajwal devaraj in veeram

  ಸ್ಯಾಂಡಲ್ವುಡ್ ಗುಳಿಕೆನ್ನೆ ಚೆಲುವೆ ರಚಿತಾ ರಾಮ್, ಈಗ ಕಾಲೇಜು ಸ್ಟೂಡೆಂಟ್ ಆಗಿ ಬರಲು ರೆಡಿಯಾಗಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ ವೀರಂ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ರಚಿತಾ. ಈ ಚಿತ್ರದಲ್ಲಿ ಅವರದ್ದು ಕಾಲೇಜು ಸ್ಟೂಡೆಂಟ್ ಪಾತ್ರ.

  ಯೋಗರಾಜ್ ಭಟ್-ಶಶಾಂಕ್ ನಿರ್ಮಾಣದ ಸೀರೆ, ನಾಗೇಂದ್ರ ಪ್ರಸಾದ್ ನಿರ್ದೇಶನದ ಪಂತ್ರ, ರಮೇಶ್ ಅರವಿಂದ್ ನಿರ್ದೇಶನದ 100, ಜೋಗಿ ಪ್ರೇಮ್ ಅವರ ಏಕ್ ಲವ್ ಯಾ, ಏಪ್ರಿಲ್, ಸಂಜು ಅಲಿಯಾಸ್ ಸಂಜು, ದಾಳಿ.. ಹೀಗೆ ಹಲವು ಚಿತ್ರಗಳ ನಡುವೆಯೇ ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರೆ ರಚಿತಾ ರಾಮ್.

  ಅಂದಹಾಗೆ ಇನ್ನೇನು ಕೆಲವೇ ದಿನಗಳಲ್ಲಿ ರಚಿತಾ ರಾಮ್ ಅಭಿನಯದ ಆಯುಷ್ಮಾನ್ ಭವ ತೆರೆ ಕಾಣುತ್ತಿದೆ. ಇದು ಈ ವರ್ಷ ರಚಿತಾ ರಾಮ್ ನಟಿಸಿರುವ 7ನೇ ಸಿನಿಮಾ. ಈ ವರ್ಷ ಸೀತಾರಾಮ ಕಲ್ಯಾಣ, ಐ ಲವ್ ಯೂ, ರುಸ್ತುಂ, ನಟಸಾರ್ವಭೌಮ ಚಿತ್ರಗಳಲ್ಲಿ ನಟಿಸಿರುವ ರಚಿತಾ ರಾಮ್, ಅಮರ್ ಹಾಗೂ ಭರಾಟೆಯಲ್ಲಿ ಗೆಸ್ಟ್ ರೋಲ್ ಮಾಡಿದ್ದರು. ಎಲ್ಲವೂ ಸೇರಿದರೆ ಮುಂದಿನ ವಾರ ಬರುತ್ತಿರುವ ಆಯುಷ್ಮಾನ್ ಭವ 7ನೇ ಸಿನಿಮಾ.

  ಈಗ ಓಕೆ ಎಂದಿರುವ ವೀರಂ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಹೀರೋ. ಆ ಚಿತ್ರದಲ್ಲಿ ಪ್ರಜ್ವಲ್ ವಿಷ್ಣು ಅಭಿಮಾನಿಯಾಗಿ ಕಾಣಿಸಿಕೊಂಡಿದ್ಧಾರೆ ಖಾದರ್ ಕುಮಾರ್ ನಿರ್ದೇಶನದ ಚಿತ್ರ ವಿಷ್ಣು ಹುಟ್ಟುಹಬ್ಬದಂದೇ ಲಾಂಚ್ ಆಗಿದೆ.

 • ಕೊರಗಜ್ಜನ ಆಶೀರ್ವಾದ ಪಡೆದ ರಚಿತಾ ರಾಮ್

  ಕೊರಗಜ್ಜನ ಆಶೀರ್ವಾದ ಪಡೆದ ರಚಿತಾ ರಾಮ್

  ಡಿಂಪಲ್ ಕ್ವೀನ್ ರಚಿತಾ ರಾಮ್ ದೈವಭಕ್ತೆ. ಇದೀಗ ಆ ದೈವಭಕ್ತಿ ದೈವಗಳ ಮೇಲೆಯೂ ಹೆಚ್ಚಾಗಿರುವಂತೆ ಕಾಣುತ್ತಿದೆ. ನಾನು ಆಂಜನೇಯನ ಭಕ್ತೆ ಎಂದ ಹೇಳಿಕೊಳ್ಳೋ ರಚಿತಾ ರಾಮ್, ಇದೇ ಮೊದಲ ಬಾರಿ ಕೊರಗಜ್ಜನ ಪೂಜೆ ಮಾಡಿದ್ಧಾರೆ. ಮಂಗಳೂರು ಹೊರವಲಯದ ಕುತ್ತಾರು ಕೊರಗಜ್ಜನ ಆದಿಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

  ಕೊರಗಜ್ಜನಿಗೆ ನನ್ನ ಸಿನಿಮಾಗಳು ಯಶಸ್ಸು ಕಾಣಲಿ ಎಂದು ಪ್ರಾರ್ಥನೆ ಮಾಡಿದೆ ಎಂದಿದ್ದಾರೆ ರಚಿತಾ ರಾಮ್. ನನ್ನ ಸ್ನೇಹಿತರೆಲ್ಲರೂ ಕೊರಗಜ್ಜ ದೈವದ ಕಾರ್ಣಿಕದ ಬಗ್ಗೆ ಹೇಳಿದ್ದರು. ಹಾಗಾಗಿ ನನಗೂ ಇಲ್ಲಿಗೆ ಬರಬೇಕು ಅನ್ನಿಸಿತು, ಬಂದ್ಬಿಟ್ಟೆ. ಕೊರಗಜ್ಜನ ಕ್ಷೇತ್ರವು ಪ್ರಾಕೃತಿಕ ಸೌಂದರ್ಯವನ್ನೊಳಗೊಂಡಿದ್ದು, ತುಂಬಾ ಚೆನ್ನಾಗಿದೆ.  ಮುಂದಿನ ಜೂನ್ ತಿಂಗಳಲ್ಲಿ ಮ್ಯಾಟ್ನಿ ಮತ್ತು ಬ್ಯಾಡ್ ಮ್ಯಾನರ್ಸ್ ಚಿತ್ರಗಳು ತೆರೆ ಕಾಣಲಿದೆ. ಆ ಚಿತ್ರಗಳು ಯಶಸ್ಸು ಕಾಣಲಿ ಎಂದು ಕೊರಗಜ್ಜನಲ್ಲಿ ಪ್ರಾರ್ಥಿಸಿದೆ' ಎಂದು ಹೇಳಿದ್ದಾರೆ.

  ಎಲ್ಲವೂ ಕಾಂತಾರ ಮಹಿಮೆ. ಇದೇ ದೇವಸ್ಥಾನಕ್ಕೆ ಇತ್ತೀಚೆಗೆ ಶಿವಣ್ಣ-ಗೀತಾ ದಂಪತಿ ಭೇಟಿ ನೀಡಿದ್ದರು. ಚಿತ್ರರಂಗದ ಹಲವರು ಕೊರಗಜ್ಜನ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಾಂತಾರದ ನಂತರ ಕರಾವಳಿ ದೈವಗಳ ಬಗ್ಗೆ ಜನರಲ್ಲಿ ಕುತೂಹಲ ಮತ್ತು ಭಕ್ತಿ ಎರಡೂ ಹೆಚ್ಚುತ್ತಿದೆ.

   

 • ಕ್ರೇಜಿ ಸ್ಟಾರ್ ಚಿತ್ರಕ್ಕೆ ಡಿಂಪಲ್ ಕ್ವೀನ್

  rachita ram in ravi bopanna

  ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶಿಸುತ್ತಿರುವ ರವಿ ಬೋಪಣ್ಣ ಚಿತ್ರಕ್ಕೆ ಇನ್ನೊಬ್ಬ ಸ್ಟಾರ್ ಆಗಮನವಾಗಿದೆ. ಈಗಾಗಲೇ ಚಿತ್ರದಲ್ಲಿ ಅತಿಥಿ ನಟರಾಗಿ ಕಿಚ್ಚ ಸುದೀಪ್ ನಟಿಸಿದ್ದಾರೆ. ಈಗ ಮತ್ತೊಂದು ಪುಟ್ಟ ಪಾತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ ರಚಿತಾ ರಾಮ್.

  ಈ ಚಿತ್ರದಲ್ಲಿ ರವಿಚಂದ್ರನ್ ಸಂಪೂರ್ಣ ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದು, ರವಿ ಗೆಟಪ್ಪಿಗೆ ಮಸ್ತ್ ಮೆಚ್ಚುಗೆ ಸಿಕ್ಕಿದೆ. ಕಾವ್ಯಾಶೆಟ್ಟಿ ಮತ್ತು ಸಂಚಿತಾ ಪಡುಕೋಣೆ ಚಿತ್ರದ ನಾಯಕಿಯರು. ಸೈಬರ್ ಕ್ರೈಂ ಕಥಾ ಹಂದರವಿರುವ ಚಿತ್ರ ರವಿ ಬೋಪಣ್ಣ. 

 • ಕ್ಷಮೆ ಕೇಳಿದ ಶಿವಣ್ಣನಿಗೆ ಅಭಿಮಾನಿಗಳಿಂದಲೇ ಸಮಾಧಾನ

  fans console shivanna regarding ayushmanbahava release

  ಆಯುಷ್ಮಾನ್ ಭವ, ಈಗ ರಿಲೀಸ್ಗೆ ಕಂಪ್ಲೀಟ್ ರೆಡಿ. ಶಿವರಾಜ್ ಕುಮಾರ್ ಇದೇ ಮೊದಲ ಬಾರಿಗೆ ದ್ವಾರಕೀಶ್ ಬ್ಯಾನರಿನಲ್ಲಿ ನಟಿಸಿರುವ ಚಿತ್ರವಿದು. ಪಿ.ವಾಸು, ದ್ವಾರಕೀಶ್, ರಚಿತಾ ರಾಮ್, ಅನಂತ್ ನಾಗ್, ಸುಹಾಸಿನಿ, ನಿಧಿ ಸುಬ್ಬಯ್ಯ ಕಾಂಬಿನೇಷನ್ ಇರುವ ಸಿನಿಮಾ. ಹೀಗಾಗಿ ನಿರೀಕ್ಷೆಗಳೋ.. ಮೌಂಟ್ ಎವರೆಸ್ಟ್ ಲೆಕ್ಕದಲ್ಲಿವೆ. ಇಷ್ಟಿದ್ದರು ಸಿನಿಮಾ ಅಂದುಕೊಂಡಂತೆ ರಿಲೀಸ್ ಮಾಡಲು ಆಗಿರಲಿಲ್ಲ.

  ಚಿತ್ರದಲ್ಲಿ ಬಳಸಿದ್ದ ಗ್ರಾಫಿಕ್ಸ್ ಟೈಗರ್ ದೃಶ್ಯಕ್ಕೂ ಅನಿಮಲ್ ಬೋರ್ಡ್ ಅನುಮತಿ ಬೇಕಿದ್ದ ಕಾರಣ, ಸೆನ್ಸಾರ್ ತಡವಾಗಿತ್ತು. ಈಗ ಎಲ್ಲ ಕ್ಲಿಯರ್ ಆಗಿ ಬರುತ್ತಿದೆ. ಈ ಕುರಿತು ಮಾತನಾಡಿದ್ದ ಶಿವಣ್ಣ ನವೆಂಬರ್ 1ರಂದು ರಿಲೀಸ್ ಮಾಡುವಂತೆ ನಾನೇ ಹೇಳಿದ್ದೆ. ಯೋಗಿಯೂ ಅದಕ್ಕಾಗಿ ಕೆಲಸ ಮಾಡಿದ್ದರು. ಆದರೆ, ಆಗಲಿಲ್ಲ. ಅಭಿಮಾನಿಗಳ ನಿರೀಕ್ಷೆ ಸುಳ್ಳಾಯ್ತು. ಅದಕ್ಕಾಗಿ ಅಭಿಮಾನಿಗಳ ಕ್ಷಮೆ ಕೇಳುತ್ತೇನೆ ಎಂದಿದ್ದರು.

  ಇದಕ್ಕೆ ಅಭಿಮಾನಿಗಳೂ ಅಷ್ಟೇ ಬೊಂಬಾಟ್ ಉತ್ತರ ಕೊಟ್ಟಿದ್ದಾರೆ. ಕ್ಷಮೆ ಕೇಳೋಕೆ ನೀವು ತಪ್ಪು ಮಾಡಿಲ್ಲ. ಸಿನಿಮಾ ಲೇಟ್ ಆದರೂ ನಾವು ನೋಡಿಯೇ ನೋಡ್ತೇವೆ. ಚಿತ್ರ ಖಂಡಿತಾ ಚೆನ್ನಾಗಿರುತ್ತೆ. ಇಂಥದ್ದಕ್ಕೆಲ್ಲ ನೀವು ಕ್ಷಮೆ ಕೇಳಬಾರದು ಎಂದು ಕೆಲವು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಉತ್ತರಿಸಿದ್ದಾರೆ. ಇನ್ನೂ ಕೆಲವರು ಎಷ್ಟಂದ್ರೂ ನೀವು ಅಣ್ಣಾವ್ರ ಮಗ. ಅದಕ್ಕೇ ಕ್ಷಮೆ ಕೇಳಿದ್ದೀರಿ. ಗ್ರೇಟ್ ಸರ್. ಡೋಂಟ್ ವರಿ ಎಂದು ಸಮಾಧಾನ ಹೇಳಿದ್ದಾರೆ. ಯಥಾ ಸ್ಟಾರ್.. ತಥಾ ಫ್ಯಾನ್ಸ್..