` vinay rajkumar - chitraloka.com | Kannada Movie News, Reviews | Image

vinay rajkumar

 • ನೆಪೋಟಿಸಂ ಆರೋಪಕ್ಕೆ ವಿನಯ್ ರಾಜ್`ಕುಮಾರ್ ಕೊಟ್ಟರು ಮುಟ್ಟಿನೋಡಿಕೊಳ್ಳುವಂತಾ ಉತ್ತರ..!

  vinay rajkumar's answer to nepotism issue

  ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ನಂತರ ಬಾಲಿವುಡ್‍ನಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆ ಬಂದ ಪದ ನೆಪೋಟಿಸಂ. ಹೀಗಂದ್ರೆ ಇನ್ನೇನೂ ಅಲ್ಲ, ಚಿತ್ರಮಂದಿರದ ದೊಡ್ಡ ದೊಡ್ಡವರು ತಾವು ಮತ್ತು ತಮ್ಮ ಕುಟುಂಬದವರನ್ನೇ ಬೆಳೆಸುತ್ತಾರೆ. ಉಳಿದವರನ್ನು ತುಳಿಯುತ್ತಾರೆ ಎನ್ನೋದು ಈ ನೆಪೋಟಿಸಂ ಅನ್ನೋ ಪದದ ಆರ್ಥ ವಿವರಣೆ. ಸಿಂಪಲ್ಲಾಗ್ ಹೇಳ್ಬೇಕಂದ್ರೆ ಸ್ವಜನ ಪಕ್ಷಪಾತ.

  ಡಾ.ರಾಜ್ ಕುಟುಂಬವೂ ಇಂಥದ್ದನ್ನೇ ಮಾಡ್ತಿದೆ. ಉಪೇಂದ್ರರ ಮಕ್ಕಳೂ ಇಂಡಸ್ಟ್ರಿಗೆ ಬರ್ತಿದ್ದಾರೆ ಎಂದು ಒಂದು ಟ್ರೋಲ್ ಪೇಜ್‍ನವರು ನೆಪೋಟಿಸಂ ಪ್ರಸ್ತಾಪ ಮಾಡಿ ಪೋಸ್ಟ್ ಮಾಡಿದ್ದರು. ಇದಕ್ಕೆ ಡಾ.ರಾಜ್ ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್‍ಕುಮಾರ್ ಮಗ ವಿನಯ್ ರಾಜ್‍ಕುಮಾರ್ ಮುಟ್ಟಿನೋಡಿಕೊಳ್ಳುವಂತಾ ಉತ್ತರ ಕೊಟ್ಟಿದ್ದಾರೆ.

  `ಕನ್ನಡದಲ್ಲಿ ನೆಪೋಟಿಸಂ ಬಗ್ಗೆ ಮಾತಾಡ್ತಿದ್ದೀಯಾ.. ತಮ್ಮ ಮನೆ ಮಕ್ಕಳನ್ನಷ್ಟೇ ಬೆಳೆಸಿಲ್ಲ. ಹೊರಗಿನಿಂದ ಬಂದ ಎಷ್ಟೋ ಜನರನ್ನು ಸ್ವಂತ ಬ್ಯಾನರ್‍ನಲ್ಲಿ ಅವಕಾಶ ನೀಡಿ ಬೆಳೆಸುತ್ತಿದ್ದಾರೆ. ಟ್ಯಾಲೆಂಟ್ ಬಗ್ಗೆ ಮಾತಾಡ್ತಿದ್ದೀಯಾ.. ನಿನ್ ಹತ್ರ ಏನಿದೆ ಟ್ಯಾಲೆಂಟ್..? ನೆಪೋಟಿಸಂ ಇದ್ದಿದ್ದರೆ ಇವತ್ತು ಇಂಡಸ್ಟ್ರಿಯಲ್ಲಿ ಹೊರಗಿನವರು ಇರ್ತಾನೇ ಇರ್ಲಿಲ್ಲ. ಡಾ.ರಾಜ್ ಏನು ಅಂತ ಹೊರಗಿನಿಂದ ಬಂದ ಜಗ್ಗೇಶ್ ಅವರ ಬಳಿ ಕೇಳು. ರಾಜ್ ಮಕ್ಕಳು ಏನು ಅಂತ ಡಾರ್ಲಿಂಗ್ ಕೃಷ್ಣ, ಯಶ್‍ಗೆ ಕೇಳು, ಹೇಳ್ತಾರೆ. ಫಾಲೋವರ್ಸ್ ಹೆಚ್ಚು ಮಾಡಿಕೊಳ್ಳೋಕೆ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯಬೇಡ' ಎಂದು ಉತ್ತರ ಕೊಟ್ಟಿದ್ದಾರೆ ವಿನಯ್ ರಾಜ್‍ಕುಮಾರ್.

  ಅಫ್‍ಕೋರ್ಸ್..  ಡಾ.ರಾಜ್ ಧೈರ್ಯ ಮಾಡಿ ಮುಂದಾಳತ್ವ ವಹಿಸದೇ ಇದ್ದಿದ್ದರೆ, ಕನ್ನಡ ಚಿತ್ರರಂಗ ಮದ್ರಾಸ್ ಬಿಟ್ಟು ಬರುತ್ತಲೇ ಇರಲಿಲ್ಲ. ಆಗಿನ ಕಾಲಕ್ಕೇ ತಮ್ಮ ವೃತ್ತಿ ಜೀವನವನ್ನೇ ಪಣವಾಗಿಟ್ಟಿದ್ದರು ರಾಜ್. ಅದಾದ ನಂತರ ಕನ್ನಡ ಚಿತ್ರರಂಗದ ಬೆಳವಣಿಯಲ್ಲಿ ರಾಜ್ ಬೇರೆಯದ್ದೇ ಪಾತ್ರ ವಹಿಸಿದರು. ಅವರೂ ಬೆಳೆದರು. ಅವರ ಸಂಸ್ಥೆಗಳೂ ಬೆಳೆದವು. ಅವುಗಳ ಜೊತೆ ಜೊತೆಗೆ ನೂರಾರು ತಂತ್ರಜ್ಞರು, ಕಲಾವಿದರೂ ಬೆಳೆದರು. ಇದೆಲ್ಲದರ ನಡುವೆ ಚಿತ್ರರಂಗದ ಯುವ ಕಲಾವಿದರ ಸಿನಿಮಾಗಳಿಗೆ ಬೆನ್ನೆಲುಬಾಗುವುದರಲ್ಲಿ ರಾಜ್ ಮನೆತನ ಹಿಂದೆ ಬಿದ್ದಿಲ್ಲ. ರಾಜ್ ಮನೆತನ ಅಷ್ಟೇ ಅಲ್ಲ, ಕನ್ನಡದಲ್ಲಿ ಅಂಥಾದ್ದೊಂದು ಸಿಸ್ಟಂ ಇಲ್ಲ.

  ತಮ್ಮ ಮನೆಯವರ ಸಿನಿಮಾ ಎಂದಾಗ ವಿಶೇಷ ಕಾಳಜಿ ವಹಿಸುತ್ತಾರೆ. ಅದು ಅತ್ಯಂತ ಸಹಜ. ಆದರೆ ಬಾಲಿವುಡ್‍ನಲ್ಲಿ ಕೇಳಿ ಬರುತ್ತಿರುವಂತೆ ಬೇರೆಯವರ ಸಿನಿಮಾ ತುಳಿಯುವ, ಸೋಲಿಸುವ, ಅವಕಾಶ ಸಿಗದಂತೆ ಮಾಡುವ ಪ್ರಯತ್ನಗಳಿಲ್ಲ.

 • ಮಗನ ಚಿತ್ರಕ್ಕೆ ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ ಶುಭ ಹಾರೈಕೆ

  vinay rajkumar's new movie

  ಸಿದ್ಧಾರ್ಥ ನಂತರ ವಿನಯ್ ರಾಜ್​ಕುಮಾರ್ ನಟಿಸುತ್ತಿರುವ ಹೊಸ ಚಿತ್ರ ಅನಂತು ವರ್ಸಸ್ ನುಸ್ರತ್. ಲಾಯರ್ ವೇಷದಲ್ಲಿ ಕಾಣಿಸಿಕೊಳ್ತಿರೋ ವಿನಯ್ ರಾಜ್​ಕುಮಾರ್​ಗೆ ಇದು 3ನೇ ಚಿತ್ರ. ಚಿತ್ರಕ್ಕೆ ಮುಹೂರ್ತವಾಗಿದೆ. ವಿಶೇಷವೆಂದರೆ, ಮಗನ ಚಿತ್ರದ ಮುಹೂರ್ತಕ್ಕೆ ಅಪ್ಪ, ಚಿಕ್ಕಪ್ಪ ಮತ್ತು ದೊಡ್ಡಪ್ಪ ಸಾಕ್ಷಿಯಾಗಿದ್ದು.

  ಕಂಠೀರವ ಸ್ಟುಡಿಯೋದಲ್ಲಿ ನಡೆದ ಚಿತ್ರಕ್ಕೆ ಅಪ್ಪ ರಾಘವೇಂದ್ರ ರಾಜ್​ಕುಮಾರ್, ದೊಡ್ಡಪ್ಪ ಶಿವರಾಜ್ ಕುಮಾರ್, ಮತ್ತು ಚಿಕ್ಕಪ್ಪ ಪುನೀತ್ ರಾಜ್​ಕುಮಾರ್ ಶುಭ ಹಾರೈಸಿದರು. ಸುಧೀರ್ ಶಾನ್​ಭೋಗ್ ನಿರ್ದೇಶನದ ಚಿತ್ರ, ಮಾಣಿಕ್ಯ ಪ್ರೋಡಕ್ಷನ್ ನಿರ್ಮಾಣವಾಗುತ್ತಿದೆ.

  Related Articles :-

  ಲಾಯರ್ ಆದರಾ ವಿನಯ್ ರಾಜ್​ಕುಮಾರ್..?

 • ಮಗನ ಜೊತೆ ನಟಿಸ್ತಾರೆ ಶಿವಣ್ಣ..!

  shivarajkumar to act with vinay rajkumar

  ಶಿವ ರಾಜ್‍ಕುಮಾರ್ ಹಾಗೂ ವಿನಯ್ ರಾಜ್‍ಕುಮಾರ್ ಒಟ್ಟಿಗೇ ನಟಿಸಲಿದ್ದಾರೆ. ಎನ್.ಎಸ್.ರಾಜಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಶಿವಣ್ಣ ಓಕೆ ಎಂದಿದ್ದಾರಂತೆ. ಜಟ್ಟ, ಮೈತ್ರಿ, ಮೈನಾ ಮೊದಲಾದ ಚಿತ್ರಗಳ ನಿರ್ಮಾಪಕ ರಾಜ್‍ಕುಮಾರ್, ಆಗಸ್ಟ್‍ನಲ್ಲಿ ಚಿತ್ರದ ಶೂಟಿಂಗ್ ಆರಂಭಿಸಲಿದ್ದಾರಂತೆ.

  ವಿನಯ್ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಅವರ ಪುತ್ರ. ಶಿವರಾಜ್‍ಕುಮಾರ್ ಅವರಿಗೂ ಮಗನಂತೆಯೇ. ಇಬ್ಬರ ಕಾಂಬಿನೇಷನ್‍ನ ಸಿನಿಮಾ ಶುರುವಾಗೋದು ದಿ ವಿಲನ್, ರುಸ್ತುಂ, ಕವಚ, ಎಸ್‍ಆರ್‍ಕೆ ಚಿತ್ರಗಳೆಲ್ಲ ಕಂಪ್ಲೀಟ್ ಆದ ನಂತರ.

 • ಮೈಲಾರ್ಡ್ ನನ್ನ ವಾದ.. ಹಾಡು ಮತ್ತೆ ಬರಲಿದೆ..!

  chelisuva modagalu song to be remade

  ಮೈ ಲಾರ್ಡ್ ನನ್ನ ವಾದ ಕೇಳಿ ಕೇಳಿ ಕೇಳಿ.. ಹಾಡು ನೆನಪಿದೆಯಾ..? ಚಲಿಸುವ ಮೋಡಗಳು ಚಿತ್ರದಲ್ಲಿ ಡಾ.ರಾಜ್‍ಕುಮಾರ್, ಅಂಬಿಕಾ ಅವರ ಮೇಲೆ ಚಿತ್ರಿಸಲಾಗಿದ್ದ ಸುಂದರ ಗೀತೆಯದು. ನವಿರು ಹಾಸ್ಯವನ್ನೊಳಗೊಂಡಿದ್ದ ಆ ಯುಗಳ ಗೀತೆಯಲ್ಲಿ ಪುಟ್ಟ ಪುಟ್ಟ ಮಕ್ಕಳು ಆರ್ಡರ್ ಆರ್ಡರ್ ಎನ್ನುವುದನ್ನು ನೋಡುವುದೇ ಒಂದು ಚೆಂದ. ಈಗ ಆ ಹಾಡು ಮತ್ತೊಮ್ಮೆ ಬರುತ್ತಿದೆ.

  ಅನಂತು ವರ್ಸಸ್ ನುಸ್ರತ್ ಚಿತ್ರದಲ್ಲಿ ಈ ಹಾಡನ್ನು ಮರುಸೃಷ್ಟಿಸಲಾಗುತ್ತಿದೆ. ವಿನಯ್ ರಾಜ್‍ಕುಮಾರ್ ಅಭಿನಯದ ಚಿತ್ರದಲ್ಲಿ ಈ ಹಾಡನ್ನು ಆಗಿನ ಸ್ಟೆಪ್‍ಗಳನ್ನೇ ಇಟ್ಟುಕೊಂಡು ಚಿತ್ರೀಕರಿಸಲಾಗುತ್ತಿದೆ. ಈ ಸಿನಿಮಾದಲ್ಲಿಯೂ ನಾಯಕನದ್ದು ಲಾಯರ್ ಪಾತ್ರ. 36 ವರ್ಷಗಳ ನಂತರ ಆ ಸೂಪರ್ ಹಿಟ್ ಮರುಸೃಷ್ಟಿಯಾಗುತ್ತಿರುವುದು ವಿಶೇಷ.

 • ರವಿ ಬಸ್ರೂರು ಮತ್ತೆ ಡೈರೆಕ್ಟರ್

  ravi basrur to direct vinay rajkumar

  ಕೆಜಿಎಫ್ ಚಿತ್ರದ ನಂತರ ಮ್ಯೂಸಿಕ್‍ನಲ್ಲಿ ಬೇರೆಯದೇ ಎತ್ತರ ತಲುಪಿದ ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತೊಮ್ಮೆ ನಿರ್ದೇಶಕರಾಗುತ್ತಿದ್ದಾರೆ. ಚಿತ್ರಕ್ಕೆ ಹೀರೋ ಆಗುತ್ತಿರುವುದು ವಿನಯ್ ರಾಜ್‍ಕುಮಾರ್.

  ಅನಂತು ವರ್ಸಸ್ ನುಸ್ರತ್ ಚಿತ್ರದಲ್ಲಿ ವಿರ್ಮಶಕರ ಮನಗೆ ದ್ದ ವಿನಯ್ ರಾಜ್‍ಕುಮಾರ್ ನಟಿಸುತ್ತಿರುವ ಚಿತ್ರದ ಕಥೆ ಏನು..? ಅದು ಸದ್ಯಕ್ಕೆ ಸಸ್ಪೆನ್ಸ್.

  ರವಿ ಬಸ್ರೂರು ಗರ್‍ಗರ್ ಮಂಡ್ಲ, ಕಟಕದಂತಹ ಚಿತ್ರ ನೀಡಿದವರು. ಕಟಕ ಚಿತ್ರವಂತೂ ಅಪಾರ ಮೆಚ್ಚುಗೆ ಗಳಿಸಿದ್ದ ವಿಭಿನ್ನ ಶೈಲಿಯ ಥ್ರಿಲ್ಲರ್. ರವಿ-ವಿನಯ್ ಕಾಂಬಿನೇಷನ್ ಸಿನಿಮಾಗೆ ಬಂಡವಾಳ ಹೂಡುತ್ತಿರುವುದು ಪೃಥ್ವಿ, ಜಟ್ಟ, ಮೈತ್ರಿ ಸಿನಿಮಾ ಖ್ಯಾತಿಯ ರಾಜ್‍ಕುಮಾರ್.

  ಒಟ್ಟಿನಲ್ಲಿ ವಿಭಿನ್ನ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುವ ನಿರ್ದೇಶಕ-ನಟ-ನಿರ್ಮಾಪಕರು ಮತ್ತೊಮ್ಮೆ ಜೊತೆಯಾಗಿದ್ದಾರೆ. ಸ್ಪೆಷಲ್ ಗ್ಯಾರಂಟಿ.

 • ರಾಜ್ ಫ್ಯಾಮಿಲಿಗೆ ಪುಷ್ಕರ್ ಸಿನಿಮಾ

  pushkar to produce vinay rajkumar's movie

  ಕನ್ನಡ ಚಿತ್ರರಂಗದ ಪ್ರತಿಷ್ಠಿತ ಬ್ಯಾನರ್ ಆಗಿರುವ ಪುಷ್ಕರ್ ಫಿಲಂಸ್, ಇದೇ ಮೊದಲ ಬಾರಿಗೆ ರಾಜ್ ಫ್ಯಾಮಿಲಿಗೆ ಸಿನಿಮಾ ಮಾಡಲು ಮುಂದಾಗಿದೆ. ಹೀರೋ ಆಗುತ್ತಿರುವುದು ವಿನಯ್ ರಾಜ್‍ಕುಮಾರ್. ನಿರ್ದೇಶಕರಾಗಿ ಕರಮ್ ಚಾವ್ಲಾ ಆಯ್ಕೆಯಾಗಿದ್ದಾರೆ.

  ಕರಂ ಚಾವ್ಲಾ ಮೂಲತಃ ಸಿನಿಮಾಟೋಗ್ರಾಫರ್. ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್, ಅವನೇ ಶ್ರೀಮನ್ನಾರಾಯಣ ಹಾಗೂ ರನ್ ಆ್ಯಂಟನಿ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದವರು. ಈಗ ನಿರ್ದೇಶಕರಾಗುತ್ತಿದ್ದಾರೆ.

  ವಿನಯ್ ಈ ಚಿತ್ರದಲ್ಲಿ ಬಾಕ್ಸರ್ ಆಗಿ ನಟಿಸುತ್ತಿದ್ದು, ರಿಯಲೆಸ್ಟಿಕ್ ಕಮರ್ಷಿಯಲ್ ಮೂವಿ ಎಂದಿದ್ದಾರೆ ವಿನಯ್. ವಿನಯ್ ಹುಟ್ಟುಹಬ್ಬದಂದೇ ಚಿತ್ರದ ಪೋಸ್ಟರ್ ರಿಲೀಸ್ ಆಗುತ್ತಿದ್ದು, ಬಾಕ್ಸರ್ ಪಾತ್ರಕ್ಕೆ ವಿನಯ್ ತಯಾರಿ ಆರಂಭಿಸಿದ್ದಾರೆ.

  ರಾಜ್ ಕುಟುಂಬದ ಜೊತೆ ಇದು ನನ್ನ ಮೊದಲ ಸಿನಿಮಾ. ಅದೇ ದೊಡ್ಡ ಖುಷಿ. ವಿನಯ್‍ಗೆ ಹೇಳಿ ಮಾಡಿಸಿದಂತಹ ರಗಡ್ ಕಥೆ ಇದೆ. ಕನ್ನಡದ ಮಟ್ಟಿಗೆ ಇದು ಹೊಸ ಸಿನಿಮಾ ಆಗಲಿದೆ ಎಂಬ ಭರವಸೆ ಕೊಟ್ಟಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.

 • ಲಾಯರ್ ಆದರಾ ವಿನಯ್ ರಾಜ್​ಕುಮಾರ್..?

  vinay rajkumar image

  ನಟ ವಿನಯ್‌ ರಾಜಕುಮಾರ್‌ ಎರಡು ಹೊಸ ಸಿನಿಮಾಗಳಿಗೆ ಸಿದ್ಧರಾಗುತ್ತಿರುವುದು ಈಗಾಗಲೇ ಗೊತ್ತಿರುವ ವಿಚಾರ. ಒಂದು ‘ಅಚ್ಚರಿ’ ಇನ್ನೊಂದು ‘ಅನಂತು V/S ನುಸ್ರತ್‌. ಈ ಎರಡರಲ್ಲಿ ಅನಂತು V/S ನುಸ್ರತ್‌ ಚಿತ್ರಕ್ಕೆ ವರಮಹಾಲಕ್ಷ್ಮೀ ಹಬ್ಬದಂದು ಪೂಜೆ ನಡೆದಿತ್ತು. ಆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ವಿನಯ್ ರಾಜ್​ಕುಮಾರ್ ಲಾಯರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 

  ಲಾಯರ್ ಆಫೀಸ್​ನಲ್ಲಿ, ಅದಕ್ಕೇ ಸಂಬಂಧಿಸಿದ ಪುಸ್ತಕಗಳ ಮಧ್ಯೆ ಸ್ಟೈಲಿಶ್ ಆಗಿ ನಿಂತಿರುವ ವಿನಯ್ ರಾಜ್​ಕುಮಾರ್ ಗೆಟಪ್ ಕುತೂಹಲ ಹುಟ್ಟಿಸಿದೆ.ವಿನಯ್‌, ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಒಂದು ಸುದ್ದಿ ಮೂಲದ ಮಾಹಿತಿ. ಸುಧೀರ್‌ ಶಾನುಭೋಗ್‌ ನಿರ್ದೇಶನದ ಚಿತ್ರ, ಮಾಣಿಕ್ಯ ಪ್ರೊಡಕ್ಷನ್ಸ್‌ನಲ್ಲಿ ಸಿದ್ಧವಾಗುತ್ತಿದೆ. ನಾಯಕಿ ಯಾರು ಎನ್ನುವುದು ಇನ್ನೂ ಫೈನಲ್ ಆಗಿಲ್ಲ

 • ಲಾಯರ್ ಒಬ್ಬನ ಪ್ರೀತಿ ನಿವೇದನೆ ಹೀಗಿರುತ್ತೆ ನೋಡಿ.

  love songs of a lawyer in ananthu vs nushruth

  ಪ್ರೀತಿಯನ್ನು ಹೇಳಿಕೊಳ್ಳೋಕೆ ಇದುವರೆಗೆ ಹೂವು, ಹಣ್ಣು, ಸೂರ್ಯ, ಚಂದ್ರ, ಚಾಕೊಲೇಟು, ಮಂಜು, ಮಳೆಯನ್ನಷ್ಟೇ ನೋಡಿದ್ದ ಪ್ರೇಕ್ಷಕರಿಗೆ ಇದು ಹೊಸ ಭಾಷೆಯ ಪ್ರೀತಿ. ಅಪ್ಪಟ ಲಾಯರ್ ಭಾಷೆಯ ಪ್ರೀತಿ. ಹೀಗೂ ಲವ್ ಸಾಂಗ್ ಬರೆಯಬಹುದಾ ಎಂದು ಅಚ್ಚರಿ ಹುಟ್ಟಿಸುವಂತೆ ಒಂದು ಹಾಡು ಕಟ್ಟಿಕೊಟ್ಟಿದೆ ಅನಂತು V/s ನುಸ್ರತ್ ಸಿನಿಮಾ ತಂಡ.

  ಈಗ ತಾನೇ ಜಾರಿಯಾಗಿದೆ ಪ್ರೀತಿ ಎಂದು ಶುರುವಾಗುವ ಹಾಡಿನಲ್ಲಿ ಬಳಸಿರುವುದ ಅಪ್ಪಟ ಕೋರ್ಟ್ ಭಾಷೆ. ವಿಚಾರಣೆಯ ಹಂತ, ಪೂರ್ವಾಪರ, ಕಾನೂನು, ಆರೋಪಿ, ವಾದ ಮಂಡನೆ, ಮುಂದೂಡಿಕೆ, ಕರಾರು, ದಾಖಲಾತಿ, ಮೀಸಲಾತಿ, ಹಾಜರಾತಿ, ಪ್ರಕರಣ, ಜಾಮೀನು.. ಹೀಗೆ ಅಪ್ಪಟ ಕೋರ್ಟಿನಲ್ಲಿ ಬಳಸುವ ಪದಗಳನ್ನೇ ಇಟ್ಟುಕೊಂಡು ಚೆಂದದ ಹಾಡು ಕಟ್ಟಿಕೊಟ್ಟಿದ್ದಾರೆ ಗೀತ ಸಾಹಿತಿ ಸಿದ್ದು ಕೋಡಿಪುರ ಮತ್ತು ಸಂಗೀತ ನಿರ್ದೇಶಕ ಸುನಾದ್ ಗೌತಮ್.

  ವಿನಯ್ ರಾಜ್‍ಕುಮಾರ್, ಲತಾ ಹೆಗ್ಡೆ ಪ್ರಧಾನ ಪಾತ್ರದಲ್ಲಿರುವ ಚಿತ್ರದಲ್ಲಿ ವಿನಯ್, ಲಾಯರ್ ಅನಂತ ಕೃಷ್ಣ ಪಾತ್ರದಲ್ಲಿ ಕಾಣಿಸಿಕೊಂಡರೆ, ಜಡ್ಜ್ ನುಸ್ರತ್ ಫಾತಿಮಾ  ಪಾತ್ರದಲ್ಲಿ ಕಾಣಿಸಿಕೊಂಡಿರೋದು ಲತಾ ಹೆಗ್ಡೆ. ಹಾಸ್ಯ ಮಿಶ್ರಿತ ನವಿರು ಪ್ರೇಮಕಥೆಗೆ ಸುಧೀರ್ ಶಾನ್‍ಬೋಗ್ ನಿರ್ದೇಶನವಿದೆ. ಮಾಣಿಕ್ಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿನಿಮಾ ರೆಡಿಯಾಗುತ್ತಿದೆ.

 • ವಿನಯ್ ರಾಜ್ ಕುಮಾರ್ ಬಾಕ್ಸಿಂಗ್ ಚಿತ್ರಕ್ಕೆ ಟೈಟಲ್ 10

  vinay rajkumar's new film with pushkar titled ten

  ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ವಿನಯ್ ರಾಜ್ ಕುಮಾರ್ ಬಾಕ್ಸರ್ ಆಗಿ ನಟಿಸುತ್ತಿರುವ ಹೊಸ ಚಿತ್ರಕ್ಕೆ ಟೈಟಲ್ ಫೈನಲ್ ಆಗಿದೆ. ಟೆನ್ ಅನ್ನೋದು ಚಿತ್ರದ ಟೈಟಲ್. ಕರಮ್ ಚಾವ್ಲಾ ನಿರ್ದೇಶನದ ಚಿತ್ರಕ್ಕೆ ಅನುಷಾ ರಂಗನಾಥ್ ನಾಯಕಿ. ಇಷ್ಟಕ್ಕೂ 10 ಅನ್ನೋ ನಂಬರ್‍ನ್ನೇ ಟೈಟಲ್ ಆಗಿಟ್ಟಿದ್ದೇಕೆ..?

  ಬಾಕ್ಸಿಂಗ್‍ನಲ್ಲಿ ಎದುರಾಳಿ ನೆಲಕ್ಕೆ ಬಿದ್ದಾಗ, ರೆಫ್ರಿ 10ರವರೆಗೂ 1..2..3.. ಎಂದು ಕೌಂಟ್ ಮಾಡುತ್ತಾರೆ. 10 ಕೌಂಟ್ ಮುಗಿದ ನಂತರವೂ ಎದುರಾಳಿ ಮೇಲೇಳದಿದ್ದರೆ ಬಿದ್ದಿದ್ದವನು ಸೋತಂತೆ. ಅಷ್ಟರೊಳಗೆ ಬಿದ್ದಿದ್ದವನು ಎದ್ದು ಕಾದಾಡಬೇಕು. ಇನ್ನು ಬಾಕ್ಸಿಂಗ್‍ನಲ್ಲಿ ಸಾಮಾನ್ಯವಾಗಿ 10 ರೌಂಡ್ಸ್ ಫಿಕ್ಸ್ ಆಗಿರುತ್ತೆ. ಈ ಎಲ್ಲವನ್ನೂ ನೋಡಿಕೊಂಡೇ ಚಿತ್ರಕ್ಕೆ 10 ಅನ್ನೋ ಟೈಟಲ್ ಫಿಕ್ಸ್ ಮಾಡಿದೆವು' ಎನ್ನುತ್ತಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.

 • ವಿನಯ್ ರಾಜ್`ಕುಮಾರ್ 10 ಟೀಸರ್ ಔಟ್

  vinay rajkumar's ten teaser out

  ವಿನಯ್ ರಾಜ್‍ಕುಮಾರ್, ಪುಷ್ಕರ್ ಫಿಲಂಸ್ ಕಾಂಬಿನೇಷನ್ನಿನ ಸಿನಿಮಾ 10. ಚಿತ್ರದ ಟೀಸರ್ ಹೊರಬಿದ್ದಿದ್ದು, ಬೇರೆಯದೇ ಫೀಲ್ ಕೊಡುತ್ತಿದೆ. 57 ಸೆಕೆಂಡುಗಳ ಟೀಸರಿನಲ್ಲಿ ಬಾಕ್ಸಿಂಗ್ ರಿಂಗ್‍ನಲ್ಲಿ ವಿನಯ್ ಹೊಡೆದಾಡುವ ದೃಶ್ಯಗಳಿವೆ. ಜೊತೆಗೆ ಅನುಷಾ ರಂಗನಾಥ್ ಮತ್ತು ವಿನಯ್ ಕಾಂಬಿನೇಷನ್ನಿನ ದೃಶ್ಯಗಳು ಬೇರೆ ಏನನ್ನೋ ಹೇಳುತ್ತಿವೆ. ವಿಭಿನ್ನ ಚಿತ್ರ ಎನ್ನುವುದಕ್ಕೆ ಯಾವುದೇ ಅನುಮಾನಗಳಿಲ್ಲ.

  ಕರಮ್ ಚಾವ್ಲಾ ನಿರ್ದೇಶನದ ಚಿತ್ರದಲ್ಲಿ ಬಾಕ್ಸರ್ ಒಬ್ಬನ ಏಳುಬೀಳಿನ ಕಥೆಯಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ, ಚಿತ್ರವನ್ನು ಆಗಸ್ಟ್ ನಂತರ ತೆರೆಗೆ ತರುವ ಯೋಚನೆಯಲ್ಲಿದ್ದಾರೆ.

 • ವಿನಯ್ ರಾಜ್‍ಕುಮಾರ್ ಗೆ ಮಲ್ಲು ಚೆಲುವೆ ನಾಯಕಿ

  malyalam actress manasa in sandalwood

  ವಿನಯ್ ರಾಜ್‍ಕುಮಾರ್ ಅಭಿನಯದ ಹೊಸ ಚಿತ್ರಕ್ಕೆ ನಾಯಕಿಯಾಗಿ ಮಲೆಯಾಳಿ ಚೆಲುವೆ ಬರುತ್ತಿದ್ದಾರೆ. ಮಾನಸಾ ರಾಧಾಕೃಷ್ಣನ್ ಈ ನವನಾಯಕಿಯ ಹೆಸರು. ಅಪ್ಪ ಅಮ್ಮ ಪ್ರೀತಿ ಹೆಸರಿನ ಚಿತ್ರದಲ್ಲಿ ಮಾನಸಾ ಪ್ರೀತಿಯಾಗಲಿದ್ದಾರೆ. ಅಪ್ಪ ಅಮ್ಮನಾಗಿರುವುದು ಶರತ್ ಕುಮಾರ್ ಮತ್ತು ರಾಧಿಕಾ ಶರತ್ ಕುಮಾರ್.

  ಕನ್ನಡದಲ್ಲಿ ಮಲಯಾಳಿ ಚೆಲುವೆಯರು ಮಿಂಚುವುದು ಹೊಸದೇನಲ್ಲ. ಇತ್ತೀಚಿನ ಉದಾಹರಣೆಗಳನ್ನಷ್ಟೇ ಹೇಳಬೇಕೆಂದರೆ ಭಾವನಾ ಮೆನನ್ ಹಾಗೂ ನಿತ್ಯಾ ಮೆನನ್ ಇದ್ದಾರೆ. ರಮ್ಯಾ ನಂಬೀಸನ್, ಭಾಮಾ ಸೇರಿದಂತೆ ಹಲವರು ಕನ್ನಡ ಚಿತ್ರರಂಗದಲ್ಲಿ ನಟಿಸಿರುವ ಮಲೆಯಾಳಿ ಚೆಲುವೆಯರು. ಈಗ ಆ ದೊಡ್ಡ ಪಟ್ಟಿಗೆ ಸೇರ್ಪಡೆಯಾಗುತ್ತಿರುವುದು ಮಾನಸಾ ರಾಧಾಕೃಷ್ಣನ್.

 • ವಿನಯ್ ರಾಜ್‍ಕುಮಾರ್ ಜೊತೆ ಕಿಲಾಡಿ ನಯನಾ..

  nayana in ananthu vs nusruth

  ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಪ್ರತಿಭೆ ನಯನಾ. ಹಾಸ್ಯದಲ್ಲಂತೂ ಎತ್ತಿದ ಕೈ. ಹೀಗಾಗಿಯೇ ಚಿತ್ರರಂಗದಲ್ಲೂ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಈಗ ನಯನಾ, ವಿನಯ್ ರಾಜ್‍ಕುಮಾರ್ ಅಭಿನಯದ ಅನಂತು V/S ನುಸ್ರತ್‍ನಲ್ಲಿ ನಟಿಸುತ್ತಿದ್ದಾರೆ.

  ಅನಂತು.. ಚಿತ್ರದಲ್ಲಿ ಲತಾ ಹೆಗಡೆ ನಾಯಕಿ. ನಯನಾ ಅವರದ್ದು ಶಾಂತಿಲಕ್ಷ್ಮಿ ಎಂಬ ಪಾತ್ರ. ಕಾಮಿಡಿ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸುಧೀರ್ ನಿರ್ದೇಶನದ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ.

 • ವಿನಯ್ ರಾಜ್‍ಕುಮಾರ್‍ಗೆ ಖುಷ್‍ಬೂ ಅಮ್ಮ

  khusbhoo to act as vinay rajkumar's mother

  ನಟ ವಿನಯ್ ರಾಜ್‍ಕುಮಾರ್ ಅಭಿನಯದ ಅಪ್ಪ ಅಮ್ಮ ಪ್ರೀತಿ ಚಿತ್ರದಲ್ಲಿ ವಿನಯ್ ರಾಜ್‍ಕುಮಾರ್ ತಾಯಿಯ ಪಾತ್ರಕ್ಕೆ ಖುಷ್‍ಬೂ ಬರುತ್ತಿದ್ದಾರೆ. ಈ ಮೊದಲು ಈ ಪಾತ್ರಕ್ಕೆ ರಾಧಿಕಾ ಶರತ್‍ಕುಮಾರ್ ಬರಲಿದ್ದಾರೆ ಎನ್ನಲಾಗಿತ್ತು. ಆದರೆ, ಡೇಟ್ಸ್  ಸಮಸ್ಯೆಯಿಂದಾಗಿ ಆ ಜಾಗಕ್ಕೆ ಖುಷ್‍ಬೂ ಬಂದಿದ್ದಾರೆ.

  ಮಾನಸ ರಾಧಾಕೃಷ್ಣನ್ ನಾಯಕಿಯಾಗಿರು ಚಿತ್ರಕ್ಕೆ, ಶ್ರೀಧರ್ ನಿರ್ದೇಶನವಿದೆ. ಎಸ್.ಎಲ್.ಎನ್. ಮೂರ್ತಿ ನಿರ್ಮಾಪಕರು. ಚಿತ್ರದ ಚಿತ್ರೀಕರಣಕ್ಕಾಗಿ ಲೊಕೇಷನ್ ಹುಡುಕಾಟ ನಡೆಯುತ್ತಿದೆ.

 • ವಿನಯ್ ರಾಜ್‍ಕುಮಾರ್‍ಗೆ ಶರತ್, ರಾಧಿಕಾ ಅಪ್ಪ ಅಮ್ಮ

  vinay rajkumar;'s new movie

  ವಿನಯ್ ರಾಜ್‍ಕುಮಾರ್, ಸದ್ಯಕ್ಕೆ ಅನಂತು ವರ್ಸಸ್ ನುಸ್ರತ್ ಚಿತ್ರದಲ್ಲಿ ಬ್ಯುಸಿ. ಆ ಚಿತ್ರದಲ್ಲಿ ನಟಿಸುತ್ತಿರುವಾಗಲೇ ಅಪ್ಪ ಅಮ್ಮ ಪ್ರೀತಿ ಎಂಬ ಸಿನಿಮಾ ಓಕೆ ಎಂದಿದ್ದಾರೆ ವಿನಯ್. ಇದುವೇ ನನ್ನ ಪ್ರಪಂಚ ಅನ್ನೋದು ಚಿತ್ರದ ಟ್ಯಾಗ್‍ಲೈನ್. ಇದೊಂದು ಪಕ್ಕಾ ಲವ್‍ಸ್ಟೋರಿ ಸಬ್ಜೆಕ್ಟ್ ಸಿನಿಮಾ ಆಗಿದ್ದು, ಶ್ರೀಧರ್ ಎಂಬುವವರು ನಿರ್ದೇಶನದ ಹೊಣೆ ಹೊತ್ತಿದ್ದಾರೆ.

  ನಿರ್ದೇಶಕ ಶ್ರೀಧರ್, ಅಸಿಸ್ಟೆಂಟ್ ಕ್ಯಾಮೆರಾಮನ್ ಆಗಿದ್ದವರು. ಈ ಚಿತ್ರದಿಂದ ನಿರ್ದೇಶಕರಾಗುತ್ತಿದ್ದಾರೆ. ಮೂರ್ತಿ ಎಂಬುವರು ನಿರ್ಮಾಪಕರಾಗಿರುವ ಚಿತ್ರಕ್ಕೆ, ಜೂಡಾ ಸ್ಯಾಂಡಿ ಸಂಗೀತವಿದೆ. ಶರತ್ ಕುಮಾರ್ ಹಾಗೂ ರಾಧಿಕಾ ವಿನಯ್ ಅವರ ತಂದೆ ತಾಯಿಯ ಪಾತ್ರ ಮಾಡಲಿದ್ದಾರೆ. ಶರತ್ ಕುಮಾರ್ ಹಾಗೂ ರಾಧಿಕಾ ಇಬ್ಬರೂ ಕನ್ನಡದಲ್ಲಿ ನಟಿಸಿದ್ದಾರೆ. ಆದರೆ, ಒಂದೇ ಚಿತ್ರದಲ್ಲಿ ಜೋಡಿಯಾಗಿರಲಿಲ್ಲ. ಈ ಚಿತ್ರದ ಮೂಲಕ ಇಬ್ಬರೂ ಒಟ್ಟಿಗೇ ತೆರೆಯ ಮೇಲೂ ಜೋಡಿಯಾಗುತ್ತಿರುವುದು ವಿಶೇಷ. ಚಿತ್ರಕ್ಕೆ ಇನ್ನೂ ನಾಯಕಿಯ ಆಯ್ಕೆ ಆಗಿಲ್ಲ.

   

 • ವಿನಯ್ ರಾಜ್‍ಕುಮಾರ್‍ಗೆ ಹೀರೋಯಿನ್ ಸಿಕ್ಕಿದ್ರು..!

  latha hegde in ananthu vs nusruth

  ವಿನಯ್ ರಾಜ್‍ಕುಮಾರ್ ಅಭಿನಯದ 3ನೇ ಚಿತ್ರ ಅನಂತು ವ/ಸ ನುಸ್ರತ್ ಚಿತ್ರದ ಚಿತ್ರೀಕರಣ ಶುರುವಾಗಿದ್ದರೂ, ಹೀರೋಯಿನ್ ಯಾರು ಅನ್ನೋದು ಫೈನಲ್ ಆಗಿರಲಿಲ್ಲ. ಅತಿರಥ ಚಿತ್ರದಲ್ಲಿ ನಟಿಸುತ್ತಿರುವ ಲತಾ ಹೆಗಡೆ, ವಿನಯ್ ರಾಜ್‍ಕುಮಾರ್ ಅಭಿನಯದ ಅನಂತು ವ/ಸ ನುಸ್ರತ್ ಚಿತ್ರದ ನಾಯಕಿ.

  ಕನ್ನಡದ ಹುಡುಗಿಯಾದರೂ, ಹುಟ್ಟಿದ್ದು ಬೆಳೆದಿದ್ದು ಎಲ್ಲ ನ್ಯೂಜಿಲ್ಯಾಂಡ್‍ನಲ್ಲಿ. ಮೊದಲು ನಟಿಸಿದ್ದು ಟಾಲಿವುಡ್‍ನಲ್ಲಿ. ಕನ್ನಡದಲ್ಲಿ ಈತಾಗಲೇ ಅತಿರಥ ಚಿತ್ರದಲ್ಲಿ ನಟಿಸುತ್ತಿರುವ ಲತಾ ಹೆಗಡೆಗೆ, ಕನ್ನಡದಲ್ಲಿ ಇದು 2ನೇ ಚಿತ್ರ. ಅಧಿಕೃತ ಘೋಷಣೆಯೊಂದು ಬಾಕಿ ಇದೆ.

 • ಹುಟ್ಟೂರು ನೆನಪಿಸುತ್ತಿರುವ ಗ್ರಾಮಾಯಣ

  gramayana teaser recalls childhood memories

  ನೀವು ನಿಮ್ ಹಳ್ಳೀನ ಎಷ್ಟು ಮಿಸ್ ಮಾಡ್ಕೋತೀರೋ ಗೊತ್ತಿಲ್ಲ. ಆದರೆ, ನಿಮ್ ಹಳ್ಳಿ ನಿನ್ನಮ್ಮ ಎಷ್ಟು ಮಿಸ್ ಮಾಡ್ಕೊಂತಿದೆ ಅನ್ನೊದನ್ನ ಯಾವತ್ತಾದರೂ ಯೋಚ್ನೆ ಮಾಡಿದಿರಾ.. ಇಂತಾದ್ದೊಂದು ಪ್ರಶ್ನೆಯೊಂದಿಗೆ ಮುಗಿಯುತ್ತೆ ಗ್ರಾಮಾಯಣ ಟೀಸರ್.

  ಸುಮಾರು 5 ನಿಮಿಷಗಳ ಟೀಸರ್‍ನಲ್ಲಿ ಹಳ್ಳಿ ಬಿಟ್ಟು ಪಟ್ಟಣ ಸೇರಿರುವ ಹಲವು ಜನರ ಅಭಿಪ್ರಾಯಗಳಿವೆ. ಅವರು ತಮ್ಮ ಹಳ್ಳಿ ಹೇಳಿಕೊಳ್ಳುವುದು ಮುಗಿಯುತ್ತಿದ್ದಂತೆಯೇ, ಡಾ.ರಾಜ್, ತಮ್ಮ ಹುಟ್ಟೂರು ಗಾಜನೂರಿನ ಕಥೆ ಹೇಳ್ತಾರೆ. ಅದಾದ ಮೇಲೆ ತೆರೆದುಕೊಳ್ಳೋದು ಅಸಲಿ ಟೀಸರ್. ವಿನಯ್ ರಾಜ್‍ಕುಮಾರ್ ಪ್ರವೇಶವಾಗೋದು ಆಗಲೇ.

  ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣದಲ್ಲಿ ವಿನಯ್ ರಾಜ್‍ಕುಮಾರ್ ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅಮೃತಾ ಅಯ್ಯರ್, ಸಂಪತ್, ಮೈತ್ರಿಯಾ, ಅಪರ್ಣಾ ಮೊದಲಾದವರು ನಟಿಸಿರುವ ಸಿನಿಮಾಗೆ ಎಲ್.ಎನ್.ಮೂರ್ತಿ ನಿರ್ಮಾಪಕರು.

 • ಹೈಕೋರ್ಟ್‍ನಲ್ಲಿ ವಿನಯ್ ರಾಜ್‍ಕುಮಾರ್ ಫೋಟೋ ವಿವಾದ

  shooting in high court creates controversy

  ಇತ್ತೀಚೆಗಷ್ಟೇ ವಿನಯ್ ರಾಜ್‍ಕುಮಾರ್ ಅಭಿನಯದ ಅನಂತು ವ/ಸ ನುಸ್ರತ್ ಚಿತ್ರದ ಮುಹೂರ್ತವಾಗಿದ್ದು ನಿಮಗೆಲ್ಲ ಗೊತ್ತೇ ಇದೆ. ಹೀಗಿರೋವಾಗ್ಲೇ ಚಿತ್ರಕ್ಕೊಂದು ವಿವಾದ ಅಂಟಿಕೊಂಡಿದೆ. ಅದು ಚಿತ್ರದ ಫೋಟೋಶೂಟ್‍ಗೆ ಸಂಬಂಧಿಸಿದ್ದು.

  ಸಿನಿಮಾದಲ್ಲಿ ವಿನಯ್ ರಾಜ್‍ಕುಮಾರ್ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದ ಫೋಟೋಶೂಟ್ ಹೈಕೋರ್ಟ್ ಆವರಣ ಮತ್ತು ಲೈಬ್ರೆರಿಯಲ್ಲಿ ನಡೆಸಲಾಗಿದೆ. ವಿವಾದಕ್ಕೆ ಕಾರಣವಾಗಿರುವುದು ಇದೇ ವಿಚಾರ. ಏಕೆಂದರೆ, ಹೈಕೋರ್ಟ್ ಆವರಣದಲ್ಲಿ ಫೋಟೋ ಅಥವಾ ವಿಡಿಯೋ ತೆಗೆಯುವುದು ನಿಷಿದ್ಧ.

  ಭದ್ರತೆಗಾಗಿ ಹೈಕೋರ್ಟ್ ಆವರಣದಲ್ಲಿ ಮೊಬೈಲ್ ಕ್ಯಾಮೆರಾದಲ್ಲಿ ಫೋಟೋ ತೆಗೆಯುವುದನ್ನು ಕೂಡಾ ನಿಷೇಧಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮೊದಲಾದ ರಾಷ್ಟ್ರೀಯ ಹಬ್ಬಗಳ ದಿನ ನಡೆಯುವ ಧ್ವಜಾರೋಹಣದಲ್ಲಿ ಮಾಧ್ಯಮಗಳು ಕ್ಯಾಮೆರಾ ತರಬಹುದು, ವಿಡಿಯೋ ಶೂಟ್ ಮಾಡಬಹುದು. ನಿವೃತ್ತ ನ್ಯಾಯಮೂರ್ತಿಗಳ ಬೀಳ್ಕೊಡುಗೆ ಸಮಾರಂಭಗಳಲ್ಲಿ ಕೂಡಾ ಇದಕ್ಕೆ ಅವಕಾಶವಿದೆ. ಆದರೆ, ಅನಂತು ವ/ಸ ನುಸ್ರತ್ ಫೋಟೋಶೂಟ್ ನಡೆದಿರುವುದು ರಿಜಿಸ್ಟ್ರಾರ್ ಗಮನಕ್ಕೆ ಬಂದಿಲ್ಲ.

  ಈ ಕುರಿತು ವಕೀಲ ಜಿ.ಆರ್. ಮೋಹನ್ ಎಂಬುವರು ರಿಜಿಸ್ಟ್ರಾರ್ ಅವರಲ್ಲಿ ಮಾಹಿತಿ ಕೇಳಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ. ಆದರೆ, ಈ ಕುರಿತು ಬಾರ್ ಅಸೋಸಿಯೇಷನ್ ಅವರನ್ನು ಸಂಪರ್ಕಿಸಿದಾಗ ಗೊತ್ತಾಗಿರುವುದು ಇಷ್ಟು. ರಾಜ್ ಕುಟುಂಬ ಅನುಮತಿಯಿಲ್ಲದೆ ಶೂಟ್ ಮಾಡಿಲ್ಲ. ಫೋಟೋ ಶೂಟ್‍ಗೆ ಅನುಮತಿಗಾಗಿ ಸ್ವತಃ ರಾಘವೇಂದ್ರ ರಾಜ್ ಕುಮಾರ್ ಮನವಿ ಮಾಡಿದರು. ಕನ್ನಡ ಮತ್ತು ಕರ್ನಾಟಕಕ್ಕೆ ಇಷ್ಟು ದೊಡ್ಡ ಸೇವೆ ಮಾಡಿರುವ ರಾಜ್ ಕುಟುಂಬದವರ ಮನವಿಗೆ ಇಲ್ಲ ಎನ್ನುವುದು ನಮಗೆ ಸಾಧ್ಯವಿರಲಿಲ್ಲ. ಹೀಗಾಗಿ ಅನುಮತಿ ಕೊಟ್ಟೆವು. ಅವರು ಸಂಘದ ಲೈಬ್ರೆರಿ ಕೋಣೆಯಲ್ಲಿ ಹಾಗೂ ಸಂಘದ ಆವರಣದಲ್ಲಿ ಶೂಟ್ ಮಾಡಿದ್ದಾರೆ. ಇದರಲ್ಲಿ ಪ್ರಮಾದವೇನೂ ಆಗಿಲ್ಲ ಎಂದಿದ್ದಾರೆ.

  ಅಲ್ಲದೆ ಶೂಟಿಂಗ್ ನಡೆದಿರುವುದು ಆಗಸ್ಟ್ 15ರಂದು. ಸ್ವಾತಂತ್ರ್ಯ ದಿನಾಚರಣೆಯ ರಜೆ ವೇಳೆ ನಡೆದಿರುವ ಶೂಟಿಂಗ್‍ನಲ್ಲಿ ಭದ್ರತಾ ಲೋಪವೇನೂ ಆಗಿಲ್ಲ ಎಂಬ ವಾದವೂ ಇದೆ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery