` dr raj, - chitraloka.com | Kannada Movie News, Reviews | Image

dr raj,

  • Dr Rajkumar's 9th Anniversary

    dr rajkumar image

    It is the 9th anniversary of Dr Rajkumar leaving this world. From people in the film industry to the common man everyone is paying their respects to him. Since early morning people are making a beeline to his memorial. Rajkumar's birthday is just 12 days away and fans are eager to celebrate that.

    The absence of Rajkumar has affected the film industry which still pines for him.

  • ಅಂಬಿ ನೆನಪಲ್ಲಿ ಡಾ.ರಾಜ್ ಸಂಸ್ಕಾರ ದಿನವನ್ನು ನೆನಪಿಸಿಕೊಂಡ ಸಿಎಂ

    hd kumaraswamya remembers dr raj's funeral

    ಅಂಬರೀಷ್ ಅವರ ನಿಧನದ ನಂತರ ಇಡೀ ಪರಿಸ್ಥಿತಿಯನ್ನು ನಿಭಾಯಿಸಿದ ಸಿಎಂ ಕುಮಾರಸ್ವಾಮಿ ಹಾಗೂ ಪೊಲೀಸ್ ಸಿಬ್ಬಂದಿ ಎಲ್ಲೆಡೆ ಪ್ರಶಂಸೆಗೆ ಪಾತ್ರರಾದರು. ಅಂಬರೀಷ್ ಅವರ ಹೃದಯವೇ ಆಗಿದ್ದ ಮಂಡ್ಯದಲ್ಲಿ ಅಂಬರೀಷ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಕುಮಾರಸ್ವಾಮಿ, ನಂತರ ಅಂಬರೀಷ್ ಅವರನ್ನು ರಾಜನಂತೆಯೇ ಬೀಳ್ಕೊಟ್ಟರು. ಹೀಗೆ ಮೆಚ್ಚುಗೆ ಗಳಿಸಿದ ಇದೇ ಕುಮಾರಸ್ವಾಮಿಯವರೇ ಡಾ.ರಾಜ್ ನಿಧನರಾದಾಗಲೂ ಮುಖ್ಯಮಂತ್ರಿ. ಡಾ.ರಾಜ್ ಅಂತ್ಯ ಸಂಸ್ಕಾರದ ವೇಳೆ ನಡೆದ ಘಟನೆಗಳನ್ನು ಸ್ವತಃ ಕುಮಾರಸ್ವಾಮಿಯವರೇ ಅಂಬಿ ನಮನ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡರು.

    `ಅದೃಷ್ಟವೋ.. ದುರದೃಷ್ಟವೋ ಗೊತ್ತಿಲ್ಲ. ನಾನು ಸಿಎಂ ಆಗಿದ್ದಾಗಲೇ ಇಬ್ಬರು ಮೇರುನಟರು ನಮ್ಮನ್ನಗಲಿದರು. ಅಂತಹವರ ಅಂತ್ಯಕ್ರಿಯೆ ನಡೆಸುವ ಸಂದರ್ಭ ನನಗೆ ಒದಗಿಬಂತು. ಡಾ.ರಾಜ್ ಅಂತ್ಯಕ್ರಿಯೆಯಲ್ಲಿ ಆದ ಗೊಂದಲಗಳು, ನಡೆದ ಘಟನೆಗಳ ನೋವು ಇಂದಿಗೂ ನನ್ನನ್ನು ಕಾಡುತ್ತಿದೆ. ಆಸ್ಪತ್ರೆಯವರು ಸುದ್ದಿಯನ್ನು ಮೊದಲು ಸರ್ಕಾರಕ್ಕೆ ತಿಳಿಸದೆ ಮಾಧ್ಯಮಗಳಿಗೆ ತಿಳಿಸಿದ್ದು ಅಷ್ಟೆಲ್ಲ ದುರಂತಗಳಿಗೆ ಕಾರಣವಾಯಿತು. ಡಾ.ರಾಜ್ ಕುಟುಂಬಕ್ಕೂ ಸರಿಯಾಗಿ ಸಂಸ್ಕಾರ ಮಾಡಲು ಆಗಲಿಲ್ಲ.ಆದರೆ ಅಂಬರೀಷ್ ವಿಷಯದಲ್ಲಿ ಹಾಗಾಗಲಿಲ್ಲ. ಆಸ್ಪತ್ರೆಯಿಂದ ಸುದ್ದಿ ತಿಳಿದು, ಸಿದ್ಧತೆ ಮಾಡಿಕೊಳ್ಳಲಾಯ್ತು' ಎಂದು ತಿಳಿಸಿದರು.

  • ಅಣ್ಣಾವ್ರ ಸಿನಿಮಾ ಇಲ್ಲದಿದ್ರೂ ಡಾ.ರಾಜ್ ಕಟೌಟ್..!

    dr raj's cutout in nartaki theater

    ಸಾಮಾನ್ಯವಾಗಿ ಡಾ.ರಾಜ್ ಕುಮಾರ್ ಅವರ ಯಾವುದೇ ಹಳೆಯ ಸಿನಿಮಾ ರಿಲೀಸ್ ಆದರೂ, ಅಭಿಮಾನಿಗಳು ಈಗಲೂ ಹಬ್ಬ ಮಾಡ್ತಾರೆ. ಚಿತ್ರಮಂದಿರದ ಎದುರು ದೊಡ್ಡ ಕಟೌಟ್ ಹಾಕಿ, ಥಿಯೇಟರಿಗೆ ಅಲಂಕಾರ ಮಾಡಿ ಸಂಭ್ರಮಿಸ್ತಾರೆ. ಈಗಲೂ ಅಂಥಾದ್ದೊಂದು ಸಂಭ್ರಮ ನರ್ತಕಿ ಥಿಯೇಟರ್ ಎದುರು ಕಾಣುತ್ತಿದೆ. ನರ್ತಕಿಯ ಎದುರು ಇದೇ 24ರಂದು ಅಣ್ಣಾವ್ರ 80 ಅಡಿ ಎತ್ತರದ ಬೃಹತ್ ಕಟೌಟ್ ಎದ್ದು ನಿಲ್ಲಲಿದೆ. ನಿಮಗೆ ಗೊತ್ತಿರಲಿ, ಆ ದಿನ ಡಾ.ರಾಜ್‍ರ ಯಾವುದೇ ಸಿನಿಮಾ ಬಿಡುಗಡೆ ಇಲ್ಲ.

    ಅಣ್ಣಾವ್ರ ಕಟೌಟ್ ನಿಲ್ಲಿಸಿ, ತಮ್ಮ ಚಿತ್ರ ಬಿಡುಗಡೆ ಮಾಡುತ್ತಿರುವುದು ನಿರ್ಮಾಪಕ ನಿರ್ದೇಶಕ ಆರ್.ಚಂದ್ರು. ದುನಿಯಾ ವಿಜಯ್ ಅಭಿನಯದ `ಕನಕ' ಚಿತ್ರ ಜನವರಿ 26ರಂದು ತೆರೆ ಕಾಣುತ್ತಿದೆ. ಚಿತ್ರದಲ್ಲಿ ಹೀರೋ ಡಾ. ರಾಜ್ ಅಭಿಮಾನಿ. ಅಣ್ಣಾವ್ರ ಆದರ್ಶಗಳನ್ನಿಟ್ಟುಕೊಂಡು ಬದುಕುವ ಚಿತ್ರದ ನಾಯಕನಿಗಾಗಿ ಅಣ್ಣಾವ್ರ ಈ ಕಟೌಟ್ ನಿಲ್ಲಿಸುತ್ತಿದ್ದೇವೆ ಎಂದಿದ್ದಾರೆ ಚಂದ್ರು.

    ಕನಕ, ಸುಮಾರು 350ರಿಂದ 400 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಡಾ.ರಾಜ್ ಅಭಿಮಾನದ ಥೀಮ್ ಇಟ್ಟುಕೊಂಡು ನಿರ್ಮಿಸಿರುವ ಸಿನಿಮಾ ಎಲ್ಲರಿಗೂ ಇಷ್ಟವಾಗಲಿದೆ ಎಂಬ ಭರವಸೆಯಲ್ಲಿದ್ದಾರೆ ಚಂದ್ರು ಮತ್ತು ದುನಿಯಾ ವಿಜಯ್. ಚಿತ್ರದಲ್ಲಿ ಹರಿಪ್ರಿಯಾ ಹಾಗೂ ಮಾನ್ವಿತಾ ಹರೀಶ್ ನಾಯಕಿಯರು.

  • ಅಣ್ಣಾವ್ರ ಸಿನಿಮಾಗಳೂ.. ಜೀವನ ಪಾಠಗಳೂ..

    raj movies had lessong for life

    ಡಾ.ರಾಜ್ ಕುಮಾರ್, ಕೇವಲ ಕನ್ನಡ ಕಂಠೀರವನಷ್ಟೇ ಅಲ್ಲ, ಅವರೊಂದು ಜೀವನ ಪಾಠ. ರಾಜ್ ಅವರ ಹಲವು ಚಿತ್ರಗಳು ಹಲವರಿಗೆ ಸ್ಫೂರ್ತಿ ತುಂಬಿವೆ. ಬದುಕನ್ನೇ ಬದಲಾಯಿಸಿವೆ. ಹಾಗೆ ಬದುಕು ಕಟ್ಟಿಕೊಂಡವರ ನೂರಾರು ಉದಾಹರಣೆಗಳು ಇವು ಕನಸೋ.. ನನಸೋ ಎಂಬ ಪ್ರಶ್ನೆ ಮೂಡಿಸುವುದು ಸುಳ್ಳಲ್ಲ. 

    ಜೀವನ ಚೈತ್ರ : ಇದು ಕೌಟುಂಬಿಕ ಸಿನಿಮಾ ಆದರೂ, ಚಿತ್ರದ ಕೊನೆಯಲ್ಲಿ ಮದ್ಯದಂಗಡಿಗಳನ್ನು ಧ್ವಂಸ ಮಾಡುವ ದೃಶ್ಯವಿದೆ. ಊರು ನೆಮ್ಮದಿಯಾಗಿರಬೇಕು ಎಂದರೆ, ಮದ್ಯದಂಗಡಿ ಇರಬಾರದು ಎನ್ನುತ್ತಾನೆ ನಾಯಕ. ಆ ಸಿನಿಮಾ ಬಂದ ಮೇಲೆ ಉ.ಕರ್ನಾಟಕದ ಹಲವು ಹಳ್ಳಿಗಳಲ್ಲಿ ಡಾ.ರಾಜ್ ಫೋಟೋ ಹಿಡಿದುಕೊಂಡು ಹೆಣ್ಣು ಮಕ್ಕಳೇ ಬೀದಿಗಿಳಿದು ಸಾರಾಯಿ ಅಂಗಡಿ ಮುಚ್ಚಿಸಿದ್ದರು.

    ಬಂಗಾರದ ಮನುಷ್ಯ : ಈ ಸಿನಿಮಾ ನೋಡಿ, ಪಟ್ಟಣ ಬಿಟ್ಟು ಹಳ್ಳಿಗೆ ಹೋಗಿ ಮಾದರಿ ಕೃಷಿಕರಾದವರ ಸಂಖ್ಯೆ ಒಂದಲ್ಲ... ಎರಡಲ್ಲ.. ನೂರಾರು.

    ಹಾಲು ಜೇನು : ತುಮಕೂರು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ದಂಪತಿಗೆ ಡೈವೋರ್ಸ್ ಸಿಕ್ಕಿತು. ವಿಚಿತ್ರವೆಂದರೆ, ಆರ್ಡರನ್ನು ಬರೆಯಲು ಪೇಪರ್ ಇರಲಿಲ್ಲ. ಹೀಗಾಗಿ ನ್ಯಾಯಾಧೀಶರು ಸಂಜೆ ಬರಲು ಹೇಳಿ ದಂಪತಿಯನ್ನು ಕಳಿಸಿಕೊಟ್ಟರು. ಹೊರಬಂದ ದಂಪತಿ, ಹೇಗಿದ್ದರೂ ಬೇರೆಯಾಗುತ್ತೇವೆ. ಕೊನೆಯದಾಗಿ ಸಿನಿಮಾ ನೋಡೋಣ ಎಂದು ಟಾಕೀಸ್‍ಗೆ ಹೋದರು. ನೋಡಿದ್ದು ಹಾಲು ಜೇನು ಸಿನಿಮಾ. ಕ್ಯಾನ್ಸರ್‍ನಿಂದ ನರಳುವ ಪತ್ನಿಯನ್ನು ಉಳಿಸಿಕೊಳ್ಳಲು ಹೊಡೆದಾಡುವ ಪತಿಯಾಗಿದ್ದರು ರಾಜ್. ಹೊರಬಂದ ದಂಪತಿ, ನಮಗೆ ವಿಚ್ಛೇದನ ಬೇಡ ಎಂದು ನ್ಯಾಯಾಧೀಶರಲ್ಲಿ ಹೋಗಿ ಮನವಿ ಮಾಡಿಕೊಂಡಿದ್ದರಂತೆ.

    ಒಡಹುಟ್ಟಿದವರು : ಡಾ.ರಾಜ್ ಮತ್ತು ಅಂಬರೀಷ್ ಒಟ್ಟಿಗೇ ಅಭಿನಯಿಸಿದ್ದ ಏಕೈಕ ಸಿನಿಮಾ ಅದು. ಆ ಸಿನಿಮಾ, ಅದೆಷ್ಟೋ ಅಣ್ಣತಮ್ಮಂದಿರು ಒಟ್ಟಿಗೇ ಬಾಳುವಂತಾಯ್ತು. ಹಲವು ಕೋರ್ಟುಗಳಲ್ಲಿ ಅಣ್ಣ-ತಮ್ಮಂದಿರು ಆಸ್ತಿ ಹಂಚಿಕೆ ವ್ಯಾಜ್ಯಗಳನ್ನು ವಾಪಸ್ ತೆಗೆದುಕೊಂಡಿದ್ದರು.

    ಆಕಸ್ಮಿಕ : ಈ ಸಿನಿಮಾದಲ್ಲಿ ಹೆಂಗಸರನ್ನು ಅವಾಚ್ಯ ಶಬ್ಧಗಳಿಂದ ಬಯ್ಯುವವರನ್ನು ರಾಜ್ ಹಿಗ್ಗಾಮುಗ್ಗಾ ಜಾಡಿಸುತ್ತಾರೆ. ಆ ಸಿನಿಮಾ ನೋಡಿದ ಅಭಿಮಾನಿಗಳು ಇನ್ನು ಮುಂದೆ ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ಬಯ್ಯುವುದಿಲ್ಲ ಎಂಬು ಪ್ರತಿಜ್ಞೆ ಸ್ವೀಕರಿಸಿದ್ದರು.

    ಹೇಳುತ್ತಾ ಹೋದರೆ, ಇಂತಹ ಕಥೆಗಳು ನೂರಾರಿವೆ. ಒಬ್ಬೊಬ್ಬ ಅಭಿಮಾನಿಯ ಮನಸ್ಸಿನಲ್ಲೂ ಒಂದೊಂದು ರೀತಿ ಪ್ರಭಾವ ಬೀರಿದ್ದಾರೆ ಡಾ.ರಾಜ್ ಅಂದಹಾಗೆ ನೆನಪಿರಲಿ ಪ್ರೇಮ್ ಇದ್ದಾರಲ್ಲ. ಅವರೊಳಗೊಬ್ಬ ಜವಾಬ್ದಾರಿಯುತ ವ್ಯಕ್ತಿ ಹುಟ್ಟಿದ್ದೇ ಡಾ.ರಾಜ್‍ರ ಬಂಗಾರದ ಮನುಷ್ಯ ಚಿತ್ರದಿಂದ. ಅದು ಅವರೇ ಹೇಳಿಕೊಂಡಿರುವ ಸತ್ಯ.

  • ಅಮ್ಮನ ಹುಟ್ಟುಹಬ್ಬಕ್ಕೆ ಶಿವಣ್ಣ ಬರಲಿಲ್ಲ. ಏಕೆ ಗೊತ್ತಾ..?

    why was shivarajkumar absent from parvathamma's birthday award

    ಪಾರ್ವತಮ್ಮ ರಾಜ್‍ಕುಮಾರ್ ಅವರ ಹುಟ್ಟುಹಬ್ಬ, ಡಾ.ರಾಜ್‍ಕುಮಾರ್ ಸೌಹಾರ್ದ ಪ್ರಶಸ್ತಿ ವಿತರಣೆಯಲ್ಲಿ ಸಾಮಾನ್ಯವಾಗಿ ಇಡೀ ರಾಜ್ ಕುಟುಂಬ ಇರುತ್ತಿತ್ತು. ಆದರೆ, ಡಿಸೆಂಬರ್ 6ರಂದು ನಡೆದ ಆ ಕಾರ್ಯಕ್ರಮದಲ್ಲಿ ಶಿವರಾಜ್‍ಕುಮಾರ್ ಇರಲಿಲ್ಲ. ಶಿವಣ್ಣ ಗೈರು ಹಾಜರಿಯ ಕಾರಣವನ್ನು ಸ್ವತಃ ಪುನೀತ್ ರಾಜ್‍ಕುಮಾರ್ ಹೇಳಿದ್ದಾರೆ.

    ಶಿವರಾಜ್‍ಕುಮಾರ್, ಪಾರ್ವತಮ್ಮ ಹುಟ್ಟುಹಬ್ಬದ ದಿನ ಪೂನಾದಲ್ಲಿದ್ದರು. ರುಸ್ತುಂ ಚಿತ್ರದ ಚಿತ್ರೀಕರಣದಲ್ಲಿದ್ದರು. ಶಿವಣ್ಣ ಬಂದರೆ, ಇಡೀ ಚಿತ್ರತಂಡಕ್ಕೆ ನಷ್ಟವಾಗುತ್ತಿತ್ತು. ನಿರ್ಮಾಪಕರಿಗೆ ನಷ್ಟವಾಗದಂತೆ ನೋಡಿಕೊಳ್ಳಬೇಕಾದ್ದು ಕಲಾವಿದರ ಜವಾಬ್ದಾರಿ ಅನ್ನೋದು ಅಪ್ಪಾಜಿ ಪಾಲಿಸಿ. ಶಿವಣ್ಣ, ಅಪ್ಪಾಜಿಯ ಮಾತನ್ನು ಪಾಲಿಸಿದ್ದಾರೆ. ಹೀಗಾಗಿ ಅಮ್ಮನ ಹುಟ್ಟುಹಬ್ಬಕ್ಕೆ ಬರಲಿಲ್ಲ ಎಂದಿದ್ದಾರೆ ಪುನೀತ್.

  • ಗಾನಕೋಗಿಲೆ ರಾಜ್ ಶಾರೀರದ ಗುಟ್ಟು ಹೇಳಿದ ರಾಘಣ್ಣ

    secret behind dr raj's voice

    ಡಾ.ರಾಜ್‍ಕುಮಾರ್, ವರನಟನಷ್ಟೇ ಅಲ್ಲ, ಗಾನಕೋಗಿಲೆಯೂ ಹೌದು. ಡಾ.ರಾಜ್‍ರ ಕನ್ನಡ, ಕನ್ನಡದ ಉಚ್ಛಾರಣೆ, ಪದ ಪ್ರಯೋಗದಲ್ಲಿನ ಏರಿಳಿತ, ಹ್ರಸ್ವ, ದೀರ್ಘ, ಅನುಸ್ವಾರಗಳನ್ನು ಸಲೀಸಾಗಿ ಬಳಸುತ್ತಿದ್ದ ರೀತಿ.. ಪ್ರತಿಯೊಬ್ಬರಿಗೂ ಮಾದರಿ. ಅದ್ಭುತ ಗಾಯನಕ್ಕಾಗಿಯೇ ರಾಷ್ಟ್ರ ಪ್ರಶಸ್ತಿ ಪಡೆದಿರುವ ಡಾ.ರಾಜ್‍ಕುಮಾರ್ ಅವರ ಕಂಠಸಿರಿಯ ರಹಸ್ಯ ಏನು..? ಅದನ್ನು ಡಾ.ರಾಜ್‍ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್‍ಕುಮಾರ್ ಹೇಳಿಕೊಂಡಿದ್ದಾರೆ.

    ರಾಜ್ ಅವರ ಕಂಠ ಶುದ್ಧಿ ಮಾಡಿದ್ದವರು ಅವರ ತಾತ. ರಾಜ್ ಮನೆಯವರು ರಂಗಭೂಮಿ ಹಿನ್ನೆಲೆಯವರು. ಹೀಗಾಗಿ ಚಿಕ್ಕ ವಯಸ್ಸಿನಿಂದಲೇ ಅಭ್ಯಾಸ ಮಾಡಿಸಿದ್ದರಂತೆ. ರಾತ್ರಿ ವೇಳೆ ದೊಡ್ಡದೊಂದು ಮಡಕೆಯಲ್ಲಿ ನೀರನ್ನು ತುಂಬಿಸಿಡುತ್ತಿದ್ದರಂತೆ ತಾತ. ಬೆಳಗ್ಗೆಯ ಹೊತ್ತಿಗೆ ಆ ನೀರು ಐಸ್ ವಾಟರ್‍ನಷ್ಟು ತಣ್ಣಗಿರುತ್ತಿತ್ತು. ಮಡಕೆಯೂ ಫ್ರಿಜ್‍ನಂತಾಗಿರುತ್ತಿತ್ತು. ಆಗ ಬಾಲಕ ರಾಜ್, ಆ ಮಡಿಕೆಯನ್ನು ಬೆಳಗ್ಗೆಯೇ ತಬ್ಬಿ ಹಿಡಿಯಬೇಕಿತ್ತು. ಸಹಜವಾಗಿಯೇ ಮೈ ನಡುಕ ಶುರುವಾಗುತ್ತಿತ್ತು. ಆ ಮೈ ನಡುಕ ನಿಂತ ಮೇಲೆ ಸತತ ಒಂದು ಗಂಟೆ ಅಭ್ಯಾಸ ಮಾಡಿಸುತ್ತಿದ್ದರಂತೆ ಅವರ ತಾತ. 

    ಗಾನ ಕಂಠೀರವ ಡಾ.ರಾಜ್‍ಕುಮಾರ್ ಅವರ ಸುಶ್ರಾವ್ಯ ಕಂಠದ ರಹಸ್ಯವನ್ನು ಸ್ವತಃ ರಾಘವೇಂದ್ರ ರಾಜ್‍ಕುಮಾರ್, ರಿಯಾಲಿಟಿ ಶೋದಲ್ಲಿ ಬಹಿರಂಗಪಡಿಸಿದ್ದಾರೆ.

  • ಡಾ. ರಾಜ್ ಏಕೆ ಗ್ರೇಟ್..? ಕರ್ನಾಟಕ ರತ್ನ ಪ್ರಶಸ್ತಿಯ ಈ ಕಥೆ ಓದಿ..!

    dr rajkumar and karnataka ratna story

    ಭಾರತದಲ್ಲಿ ಹೇಗೆ ಭಾರತರತ್ನ ಅತ್ಯುನ್ನತ ಪ್ರಶಸ್ತಿಯೋ, ಹಾಗೆಯೇ ಕರ್ನಾಟಕದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ. ಆ ಪ್ರಶಸ್ತಿಯನ್ನು ಆರಂಭಿಸಿದವರು ಎಸ್.ಬಂಗಾರಪ್ಪ. ಆ ಪ್ರಶಸ್ತಿಯನ್ನು ಪಡೆದ ಮೊದಲಿಗರು ಇಬ್ಬರು, ಕುವೆಂಪು ಹಾಗೂ ಡಾ.ರಾಜ್.

    ವಿಧಿಯಾಟ ನೋಡಿ, ಆ ಪ್ರಶಸ್ತಿಯನ್ನು ನೀಡುವ ದಿನ, ಕುವೆಂಪು ಅನಾರೋಗ್ಯಕ್ಕೊಳಗಾಗಿದ್ದರು. ಹಾಸಿಗೆ ಹಿಡಿದಿದ್ದರು. ವೇದಿಕೆಯ ಮೇಲೆ ಆ ಪ್ರಶಸ್ತಿ ಸ್ವೀಕರಿಸಿದ್ದು ಡಾ.ರಾಜ್ ಮಾತ್ರ. ಆದರೆ, ಅದಕ್ಕೂ ಮುನ್ನ ಡಾ.ರಾಜ್ ಹಠ ಹಿಡಿದಿದ್ದರಂತೆ.

    ಕುವೆಂಪು ಅವರ ಮುಂದೆ ನಾನೆಷ್ಟರವನು..? ಮೊದಲು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನವಾಗಬೇಕು. ಪುರಸ್ಕಾರ ಪಡೆಯಲು ನನ್ನದೇನೂ ತಕರಾರಿಲ್ಲ. ಆದರೆ, ಪುಟ್ಟಪ್ಪನವರಿಗಿಂತ ಮೊದಲು ನನಗೆ ಕೊಡುವುದು ಬೇಡ. ಅವರು ಅಕ್ಷರ ಸರಸ್ವತಿ ಎಂದು ಹಠ ಹಿಡಿದುಬಿಟ್ಟರು ಡಾ.ರಾಜ್.

    ಕೊನೆಗೆ ಮೈಸೂರಿನಲ್ಲಿ ಕುವೆಂಪು ಅವರಿಗೆ, ಅವರ ಮನೆಯಲ್ಲಿಯೇ ಕರ್ನಾಟಕ ರತ್ನ ಪ್ರದಾನ ಮಾಡಲಾಯಿತು. ಅನಂತರ ಬೆಂಗಳೂರಿನಲ್ಲಿ ಡಾ.ರಾಜ್ ಅವರಿಗೆ ಕರ್ನಾಟಕ ರತ್ನ ಪುರಸ್ಕಾರ ನೀಡಿ ಗೌರವಿಸಲಾಯ್ತು. 

    ಅಂದಹಾಗೆ, ಅಭಿಮಾನಿಗಳನ್ನು ಅಭಿಮಾನಿ ದೇವರು ಎಂದು ಡಾ.ರಾಜ್ ಮೊದಲು ಸಂಬೋಧಿಸಿದ್ದು ಅಲ್ಲಿಯೇ..

  • ಡಾ. ರಾಜ್ ಕರ್ನಾಟಕಕ್ಕಷ್ಟೇ ಅಲ್ಲ, ಇಡೀ ಭಾರತಕ್ಕೇ ಸ್ಫೂರ್ತಿ - ಬಾಬಾ ರಾಮ್‍ದೇವ್

    baba ramdev praises dr rajkumar

    ಅಣ್ಣಾವ್ರ ಬಗ್ಗೆ ಭಾರತೀಯ ಚಿತ್ರರಂಗದ ಹಲವರು ಹೊಗಳಿದ್ದಾರೆ. ಅಮಿತಾಬ್ ಬಚ್ಚನ್‍ರಿಂದ ಹಿಡಿದು ಹೊಸ ಕಲಾವಿದರವರೆಗೆ, ರಾಷ್ಟ್ರಮಟ್ಟದ ರಾಜಕಾರಣಿಗಳು, ಉದ್ಯಮಿಗಳು ಹೀಗೆ ರಾಜ್ ಹಲವರಿಗೆ ಗೊತ್ತು.

    ಈಗ ಅಂತಾರಾಷ್ಟ್ರೀಯ ಖ್ಯಾತಿಯ ಯೋಗಗುರು ಬಾಬಾ ರಾಮ್‍ದೇವ್ ಅಣ್ಣಾವ್ರನ್ನ ನೆನಪಿಸಿಕೊಂಡಿದ್ದಾರೆ. ಡಾ. ರಾಜ್‍ಕುಮಾರ್ ಕರ್ನಾಟಕಕ್ಕಷ್ಟೇ ಅಲ್ಲ, ಇಡೀ ಭಾರತಕ್ಕೇ ಸ್ಫೂರ್ತಿ. ಭಾರತ ದೇಶಕ್ಕೆ ದೇವರು ಕೊಟ್ಟ ವರ ಡಾ. ರಾಜ್‍ಕುಮಾರ್ ಎಂದಿದ್ದಾರೆ ಬಾಬಾ ರಾಮ್‍ದೇವ್. ಅದು ಕಲರ್ಸ್ ಕನ್ನಡ ವಾಹಿನಿ ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್ ರಿಯಾಲಿಟಿ ಶೋನಲ್ಲಿ.

    ಯೋಗದ ಕುರಿತ ವಿಚಾರ ಬಂದಾಗ, ರಾಮ್‍ದೇವ್ ಡಾ.ರಾಜ್‍ರನ್ನು ನೆನಪಿಸಿಕೊಂಡಿದ್ದಾರೆ.

  • ಡಾ.ರಾಜ್ ಕುಮಾರ್ ರಸ್ತೆಗೆ ಬೆಳ್ಳಿ ಹಬ್ಬದ ಸಂಭ್ರಮ

    its silver jubilee for rajkumar road

    ಡಾ.ರಾಜ್‍ಕುಮಾರ್ ರಸ್ತೆಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಸರಿಯಾಗಿ 25 ವರ್ಷಗಳ ಹಿಂದೆ.. ಉದ್ಘಾಟನೆಯಾಗಿದ್ದ ಡಾ.ರಾಜ್ ಕುಮಾರ್ ರಸ್ತೆ ಈ ಬಾರಿ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿದೆ.

    1994ರ ಜನವರಿ ತಿಂಗಳಲ್ಲಿ ರಾಜಾಜಿನಗರದ ಪ್ರಸನ್ನ ಟಾಕೀಸ್‍ನಿಂದ ಸೋಪ್ ಫ್ಯಾಕ್ಟರಿವರೆಗಿನ 80 ಆಡಿ ರಸ್ತೆಗೆ ಡಾ.ರಾಜ್‍ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ಅದು ಡಾ.ರಾಜ್ ಹೆಸರಿನಲ್ಲಿಯೇ ಜನಮಾನಸದಲ್ಲಿ ನೆಲೆಸಿದೆ.

    ಆಗ ರಾಜ್ಯದ ಹಲವಾರು ಕನ್ನಡ ಸಂಘಟನೆಗಳು, ಉಮೇಶ್ ಬಣಕಾರ್ ಅವರ ತಂದೆ ಮಹದೇವ ಬಣಕಾರ್, ಭಾ.ಮಾ. ಹರೀಶ್, ಎಂ.ಜಿ. ರಾಮಮೂರ್ತಿ, ಉಮೇಶ್ ಬಣಕಾರ್, ಸಾ.ರಾ.ಗೋವಿಂದು ಸೇರಿದಂತೆ ಹಲವರು ಈ ರಸ್ತೆಗೆ ಡಾ.ರಾಜ್ ಕುಮಾರ್ ಹೆಸರು ಇಡುವಂತೆ ಆಗಿನ ಪಾಲಿಕೆಗೆ ಮನವಿ ಮಾಡಿದ್ದರು. ಪಾಲಿಕೆ ಒಪ್ಪಿಕೊಂಡಿತ್ತು.

    ಇದಾದ ಮೇಲೆ ಪಾಲಿಕೆ ಧನ್ಯವಾದ ಅರ್ಪಿಸಿ ಸಾ.ರಾ.ಗೋವಿಂದು ನೇತೃತ್ವದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಚಿತ್ರನಟ ಅಭಿಜಿತ್, ಪಾಲಿಕೆಯ ಕೆಲಸವನ್ನು ಅಭಿನಂದಿಸಿ ಬಿತ್ತಿಚಿತ್ರ ಮಾಡಿ ಹಂಚಿದ್ದರು.

    Related Articles :-

    It's Silver Jubilee For Dr.Rajkumar Road

  • ಡಾ.ರಾಜ್ ಜನ್ಮದಿನಕ್ಕೆ ಶಿವಣ್ಣ ರುಸ್ತುಂ

    shivarajkumar's rutum on april 24th

    ಡಾ.ರಾಜ್‍ಕುಮಾರ್ ಅವರ ಜನ್ಮದಿನ ಏಪ್ರಿಲ್ 24. ಆ ದಿನ ಶಿವರಾಜ್‍ಕುಮಾರ್ ಅಭಿನಯದ ರುಸ್ತುಂ ಸಿನಿಮಾ ಆರಂಭವಾಗಲಿದೆ. ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಸಿನಿಮಾ ರಸ್ತುಂ. ಜಯಣ್ಣ-ಭೋಗೇಂದ್ರ ನಿರ್ಮಾಣದ ಚಿತ್ರ.

    ಮಫ್ತಿ ಚಿತ್ರದ ಯಶಸ್ಸಿನ ನಂತರ ಜಯಣ್ಣ-ಭೋಗೇಂದ್ರ ಜೋಡಿ ಮತ್ತು ಶಿವಣ್ಣ ಕಾಂಬಿನೇಷನ್‍ನಲ್ಲಿ ಮೂಡಿ ಬರುತ್ತಿರುವ ಚಿತ್ರ ರುಸ್ತುಂ. ಮಫ್ತಿ ಚಿತ್ರದ ನವೀನ್ ಕುಮಾರ್ ಕೊರಿಯೋಗ್ರಫಿ, ರುಸ್ತುಂ ಚಿತ್ರಕ್ಕೆ ಮುಂದುವರಿಯಲಿದೆ. ಸಂಗೀತ ನಿರ್ದೇಶನ ಅನೂಪ್ ಸಿಳೀನ್ ಅವರದ್ದು.

    ಚಿತ್ರಕ್ಕೆ ಮುಹೂರ್ತವಾಗುವುದು ಏಪ್ರಿಲ್ 24ಕ್ಕೆ ಆದರೂ ಚಿತ್ರದ ಚಿತ್ರೀಕರಣ ಶುರುವಾಗುವುದು ಅದಾದ ಒಂದು ತಿಂಗಳ ನಂತರ. ಏಕೆಂದರೆ, ಶಿವಣ್ಣ ಕೈಯ್ಯಲ್ಲಿ ವಿಲನ್, ಕವಚ ಹಾಗೂ ಎಸ್‍ಆರ್‍ಕೆ ಚಿತ್ರಗಳಿವೆ. ಆ ಚಿತ್ರಗಳು ಮುಗಿದ ಮೇಲೆ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ

    Related Articles :-

    Shivanna's Rustum By Ravi Verma On April 24

  • ರಾಜ್ ಕೊಟ್ಟ ಜವಾಬ್ದಾರಿ ಮುಗಿಸಿದರೂ.. ಅವರ ಆಸೆ ಹಾಗೆಯೇ ಉಳಿಯಿತು..

    ambi fullfills dr raj's dream

    ಕಲಾವಿದರ ಸಂಘಕ್ಕೊಂದು ಕಟ್ಟಡ ಬೇಕು. ಅದು ಡಾ.ರಾಜ್ಕುಮಾರ್ ಅವರ ಕನಸು. ತಮ್ಮ ಕನಸನ್ನು ನನಸು ಮಾಡುವ ಹೊಣೆಯನ್ನು ಅವರು ಅಂಬಿಗೆ ವಹಿಸಿದ್ದರು. ಕೆಲವೇ ತಿಂಗಳ ಹಿಂದೆ ಕಲಾವಿದರ ಸಂಘದ ಕಟ್ಟಡ ಉದ್ಘಾಟನೆಗೊಂಡಿತ್ತು. ಭಾರತೀಯ ಚಿತ್ರರಂಗದ ಸ್ಟಾರ್ಗಳನ್ನೆಲ್ಲ ಕರೆಸಿಕೊಂಡು ಕಟ್ಟಡ ತೋರಿಸಿ ಸಂಭ್ರಮಿಸಿದ್ದರು ಅಂಬಿ.

    ಅದರ ಜೊತೆಗೆ ಅಂಬರೀಷ್ ಅವರ ಕನಸು ಇನ್ನೊಂದಿತ್ತು. ಆ ಕಟ್ಟಡಕ್ಕೆ ಡಾ.ರಾಜ್ಕುಮಾರ್ ಭವನ ಎಂದು ಹೆಸರಿಡಬೇಕು ಎನ್ನುವ ಕನಸು ಕಂಡಿದ್ದರು ಅಂಬಿ. ಅದು ನವೆಂಬರ್ 25ರಂದು ನನಸಾಗಬೇಕಿತ್ತು. ನಾಮ ಫಲಕ ಸಿದ್ಧವಾಗಿತ್ತು. ಎಲ್ಲವೂ ಸಿದ್ಧವಾಗಿರುವಾಗಲೇ ಇಹಲೋಕ ತ್ಯಜಿಸಿ ನಡೆದುಬಿಟ್ಟರು ಅಂಬರೀಷ್.

  • ರಾಜ್ ಸಮಾಧಿಗೆ ರಾಹುಲ್ ಗಾಂಧಿ ಭೇಟಿ

    rahul gandi visits dr rajkumar smaraka

    ಎಲೆಕ್ಷನ್ ಹೊತ್ತಿನಲ್ಲಿ ಎಲ್ಲ ರಾಜಕೀಯ ಪಕ್ಷದವರಿಗೂ ಕನ್ನಡ, ಕನ್ನಡ ಅಸ್ಮಿತೆಯ ನೆನಪಾಗುತ್ತೆ. ಕರ್ನಾಟಕದಲ್ಲಿ ಯಾವುದೇ ಹೊಸ ಸರ್ಕಾರ ಬಂದರೂ, ಮುಖ್ಯಮಂತ್ರಿಗಳು ಡಾ.ರಾಜ್ ಮನೆಗೆ ಹೋಗಿ ಬರುವುದು ಹೆಚ್ಚೂ ಕಡಿಮೆ ಸಂಪ್ರದಾಯವೇ ಆಗಿ ಹೋಗಿತ್ತು. ಈ ಬಾರಿ ಚುನಾವಣೆ ಪ್ರಚಾರದಲ್ಲೇ ಡಾ.ರಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ಕುವೆಂಪು, ಬೇಂದ್ರ, ಬಸವಣ್ಣ ಸೇರಿದಂತೆ ಕನ್ನಡ ಸಾಂಸ್ಕøತಿಕ ಲೋಕದ ತಾರೆಗಳು ರಾಜಕೀಯ ಭಾಷಣದಲ್ಲಿ ಬಂದು ಹೋಗುತ್ತಿದ್ದಾರೆ.

    ಚಾಮರಾಜನಗರದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದ ನರೇಂದ್ರ ಮೋದಿ, ಆ ದಿನವೇ ಡಾ.ರಾಜ್‍ಕುಮಾರ್‍ರನ್ನು ಸ್ಮರಿಸಿದ್ದರು. ಈಗ ರಾಹುಲ್ ಗಾಂಧಿ ಸರದಿ. ಅವರು ಡಾ.ರಾಜ್ ಸಮಾಧಿಗೆ ಭೇಟಿ ನೀಡಿ ನಮಸ್ಕರಿಸಿದ್ದಾರೆ.

    ಬುಧವಾರವಿಡೀ ಬೆಂಗಳೂರಿನಲ್ಲಿ ರೋಡ್ ಶೋ, ಸಂವಾದ, ಸಮಾವೇಶಗಳಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ, ರಾತ್ರಿ ರಾಜ್ ಸಮಾಧಿಗೆ ತೆರಳಿ ವರನಟನಿಗೆ ನಮನ ಸಲ್ಲಿಸಿದರು. ಪಾರ್ವತಮ್ಮ ರಾಜ್‍ಕುಮಾರ್ ಅವರ ಸಮಾಧಿಗೂ ಪುಷ್ಪನಮನ ಸಲ್ಲಿಸಿದ್ರು.

  • ಶಂಕರ್‍ನಾಗ್ ಅಭಿಮಾನಿಗಳಿಂದ `ಮಯೂರ' ಕೇಕ್ 

    dr raj 3d cake

    ಡಾ.ರಾಜ್ ಕುಮಾರ್ ಅವರನ್ನು ನವರಸಗಳಲ್ಲೂ ನೋಡಿರುವ ಅಭಿಮಾನಿಗಳು ಈ ವೇಷದಲ್ಲಿ ನೋಡಿರಲು ಸಾಧ್ಯವಿಲ್ಲ. ಏಕೆಂದರೆ, ಇಲ್ಲಿರುವ ಪ್ರತಿಮೆ ಅಂತಿಂಥಾ ಪ್ರತಿಮೆಯಲ್ಲ. ಕೇಕ್‍ನ ಪ್ರತಿಮೆ. 42ನೇ ಅಂತಾರಾಷ್ಟ್ರೀಯ ಕೇಕ್ ಸಮ್ಮೇಳನಕ್ಕಾಗಿ ಶಂಕರ್‍ನಾಗ್ ಅಭಿಮಾನಿಗಳು ರೂಪಿಸಿರುವ ಡಾ.ರಾಜ್ ಪ್ರತಿಮೆ.

    ಈ ಕೇಕ್ 5.7 ಅಡಿ ಎತ್ತರವಿದೆ. ಅಣ್ಣಾವ್ರು ಕೂಡಾ ಇಷ್ಟೇ ಎತ್ತರವಿದ್ದರು. ಶಂಕರ್‍ನಾಗ್ ಅಭಿಮಾನಿ ಟ್ರಸ್ಟ್ ರೂಪಿಸಿರುವ ಈ ಮಯೂರ ಕೇಕ್‍ನ್ನು ಇಂದು ಕಂಠೀರವ ಸ್ಟುಡಿಯೋದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಅನಾವರಣ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಚಿತ್ರಲೋಕ ಸಂಪಾದಕ ಕೆ.ಎಂ. ವೀರೇಶ್ ಭಾಗವಹಿಸಲಿದ್ದಾರೆ.

Geetha Movie Gallery

Ombattane Dikku Launch Meet Gallery