` dildar - chitraloka.com | Kannada Movie News, Reviews | Image

dildar

  • ಸೆಟ್ಟೇರಿತು ದಿಲ್`ದಾರ್.. : ಪವರ್ ಕೊಟ್ಟರು ಕ್ರೇಜಿ ಸ್ಟಾರ್

    ಸೆಟ್ಟೇರಿತು ದಿಲ್`ದಾರ್.. : ಪವರ್ ಕೊಟ್ಟರು ಕ್ರೇಜಿ ಸ್ಟಾರ್

    ಪಡ್ಡೆಹುಲಿ ಮಂಜು ಅಭಿನಯದ ಇನ್ನೊಂದು ಹೊಸ ಸಿನಿಮಾ ಸೆಟ್ಟೇರಿದೆ. ಕೆಲವೇ ದಿನಗಳ ಹಿಂದೆ ಮಧುಗೌಡ ನಿರ್ದೇಶನದಲ್ಲಿ ಹೊಸ ಸಿನಿಮಾ ಮಾಡಲಿದ್ದಾರೆ ಎಂಬುದು ಸುದ್ದಿಯಾಗಿತ್ತು. ಆ ಸಿನಿಮಾಗೆ ಮುಹೂರ್ತವಾಗಿದ್ದು, ಚಿತ್ರಕ್ಕೆ ದಿಲ್`ದಾರ್ ಎಂದು ಟೈಟಲ್ ಇಡಲಾಗಿದೆ. ಬೆಂಗಳೂರಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ನಡೆದ ಅದ್ಧೂರಿ ಮುಹೂರ್ತದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡಿ, ಟೈಟಲ್ ರಿವೀಲ್ ಮಾಡಿದರು. ನಾಗತಿಹಳ್ಳಿ ಚಂದ್ರಶೇಖರ್ ಕ್ಯಾಮೆರಾ ಆನ್ ಮಾಡಿ ಚಿತ್ರಕ್ಕೆ ಚಾಲನೆ ಕೊಟ್ಟರು.

    ಈ ಸಿನಿಮಾ ಕೇವಲ ನನ್ನಿಂದ ಅಲ್ಲ. ನನ್ನ ತಂಡದ ಸಪೋರ್ಟ್ ನಿಂದ ಸಾಧ್ಯವಾಗಿದೆ. ಕತೆ ರೆಡಿ ಮಾಡಿದಾಗ ದಿಲ್ದಾರ್ ಟೈಟಲ್ ಫಿಕ್ಸ್ ಮಾಡಿದಾಗ, ಯಾರು ಇದ್ದಾರೆ ದಿಲ್ದಾರ್ ಅಂತ ಥಿಂಕ್ ಮಾಡಿದಾಗ ಶ್ರೇಯಸ್ ಮಂಜು ನೆನಪಾದರು ಎಂದು ಶ್ರೇಯಸ್ ಮಂಜು ಅವರೇ ಈ ಕಥೆಗೆ ಪರ್ಫೆಕ್ಟ್ ಎಂದು ಹೇಳಿದರು. ಮಧುಗೌಡ ಅವರಿಗೆ ಇದು ಮೊದಲ ಸಿನಿಮಾ. ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸೈಕಲ್ ಹೊಡೆದಿರೋ ಮಧುಗೌಡ, ದುರ್ಗ, ನೀಲಿ ಮೊದಲಾದ ಸೀರಿಯಲ್ಲುಗಳಿಗೆ ಸಹಾಯಕ ನಿರ್ದೇಶರಾಗಿದ್ದವರು.

    ನಿರ್ಮಾಪಕ ಸಂತೋಷ್ ಅವರಿಗೆ ಇಷ್ಟವಾಗಿದ್ದು ಚಿತ್ರದ ಕಥೆ. ಅದ್ಧೂರಿ ಲವರ್ ಮತ್ತು ಬ್ಯಾಡ್ ಮ್ಯಾನರ್ಸ್ ಚಿತ್ರಗಳ ನಂತರ ಈ ಚಿತ್ರಕ್ಕೂ ಹೀರೋಯಿನ್ ಆಗಿರುವ ಪ್ರಿಯಾಂಕಾ, ಪ್ರೇಕ್ಷಕರ ಆಶೀರ್ವಾದ ಕೋರಿದರು. ಹೀರೋ ಶ್ರೇಯಸ್ ಮಂಜು ರವಿಚಂದ್ರನ್ ಕೊಟ್ಟ ಭರವಸೆ, ಯಶ್ ಕೊಟ್ಟ ಸಪೋರ್ಟ್ ನೆನಪಿಸಿಕೊಂಡರು.