ಸಿದ್ದರಾಮಯ್ಯ, ರಾಜ್ಯದ ಕಲರ್`ಫುಲ್ ವ್ಯಕ್ತಿತ್ವದ ನಾಯಕ. ಸಿದ್ದು ಮಾತುಗಾರಿಕೆ, ಬಾಡಿ ಲಾಂಗ್ವೇಜ್ ವಿಶೇಷವಾಗಿರುತ್ತೆ. ಇದರ ಜೊತೆಗೆ ಎರಡು ಪಕ್ಷಗಳಲ್ಲಿ ದೊಡ್ಡ ಸ್ಥಾನಕ್ಕೆ ಏರಿದ ನಾಯಕನಾಗಿ, ಜನತಾ ಪರಿವಾರದಿಂದ ಶಾಸಕ, ಸಚಿವ, ಉಪಮುಖ್ಯಮಂತ್ರಿ, ಜೆಡಿಎಸ್‍ನಲ್ಲಿ ಉಪಮುಖ್ಯಮಂತ್ರಿ, ಕಾಂಗ್ರೆಸ್ ಸೇರಿ ವಿರೋಧ ಪಕ್ಷದ ನಾಯಕ, ಸಿಎಂ ಆಗಿರುವ ಸಿದ್ದರಾಮಯ್ಯ ಅವರ ಜರ್ನಿ ರೋಚಕ. ಸಿದ್ದರಾಮಯ್ಯ ಅವರ ಬಯೋಪಿಕ್ ತೆರೆಮೇಲೆ ಬರಲಿದೆ ಎಂಬ ವಿಚಾರ ಈಚೆಗಷ್ಟೇ ಭಾರಿ ಸುದ್ದಿ ಮಾಡಿತ್ತು. ಇದೀಗ ಸಿದ್ದರಾಮಯ್ಯ ಬಯೋಪಿಕ್ ಬಗ್ಗೆ ಒಂದು ಬಿಗ್ ಅಪ್ಡೇಟ್ ಸಿಕ್ಕಿದೆ. ಸಿದ್ದರಾಮಯ್ಯ ಅವರ ಬಯೋಪಿಕ್ಗೆ 'ಲೀಡರ್ ರಾಮಯ್ಯ' ಟೈಟಲ್ ಎಂದು ಟೈಟಲ್ ಇಡಲಾಗಿದೆ. ಅಂದಹಾಗೆ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ರಿಲೀಸ್ ಆಗಲಿದ್ದು, ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ.
ಶ್ರೀರಾಮ ನವಮಿ ಪ್ರಯುಕ್ತ ಸಿದ್ದರಾಮಯ್ಯ ಬಯೋಪಿಕ್ನ ಫಸ್ಟ್ ಲುಕ್ ಮತ್ತು ಟೈಟಲ್ ಘೋಷಣೆ ಮಾಡಲಾಗಿದೆ. ಸತ್ಯ ರತ್ನಂ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಈಗ ಭಾಗ ಒಂದು ಎಂದು ಸಿನಿಮಾ ಆರಂಭಿಸಿದ್ದೇವೆ. ಅದರಲ್ಲಿ ಸಿದ್ದರಾಮಯ್ಯ ಅವರ ಬಾಲ್ಯದ ದಿನಗಳು ಕಾಲೇಜು, ಲಾಯರ್ ಆಗಿದ್ದ ದಿನಗಳು, ನಂಜುಂಡಸ್ವಾಮಿ ಅವರ ಜೊತೆಗಿನ ಹೋರಾಟಗಳು, ರಾಜಕೀಯಕ್ಕೆ ಅವರು ಬಂದಿದ್ದು ಹೇಗೆ ಎಂಬುದರ ಕುರಿತಾಗಿ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ ಸತ್ಯರತ್ನಂ.
ಅಂದಹಾಗೆ ಪಾರ್ಟ್ 01ನಲ್ಲಿ ವಿಜಯ್ ಸೇತುಪತಿ ಇರಲ್ಲ. ಭಾಗ-01ರಲ್ಲಿ ಯಂಗ್ ಆಗಿರುವ ನಟ ಬೇಕು. ಹೀಗಾಗಿ ಕನ್ನಡದ ಒಬ್ಬ ಯುವನಟ ಆ ಪಾತ್ರ ಮಾಡುತ್ತಾರೆ. ಎರಡನೇ ಭಾಗಕ್ಕೆ ಸೇತುಪತಿ ಬರಲಿದ್ದಾರೆ ಎಂದು ಹೇಳಿದ್ದಾರೆ ಡೈರೆಕ್ಟರ್ ಸತ್ಯರತ್ನಂ.
ಅಂದಹಾಗೆ ಸಿದ್ದರಾಮಯ್ಯ ಅವರಿನ್ನೂ ಚಿತ್ರದ ಫಸ್ಟ್ ಲುಕ್, ಟೈಟಲ್ ಕಾರ್ಡ್ ನೋಡಿಲ್ಲವಂತೆ. ಆಕ್ಷನ್, ಲವ್, ತಂದೆ-ಮಗನ ಸೆಂಟಿಮೆಂಟ್ ಕೂಡಾ ಚಿತ್ರದಲ್ಲಿದೆಯಂತೆ.. ಸಿನಿಮಾ ರಿಲೀಸ್ ಆಗುವುದು ಅಕ್ಟೋಬರ್ 3ರಂದು ಸಿದ್ದರಾಮಯ್ಯ ಹುಟ್ಟುಹಬ್ಬದ ದಿನ.