` yogaraj bhat, - chitraloka.com | Kannada Movie News, Reviews | Image

yogaraj bhat,

 • ಪಡ್ಡೆಹುಲಿಯ ವಿಕಟ ಕವಿ ಇವರೇ ಕಣ್ರಪ್ಪಾ

  yogaraj bhat is philosopher to paddehuli

  ಪಡ್ಡೆಹುಲಿ ಟ್ರೇಲರ್ ನೋಡಿದವರಿಗೆ ಅರೆ.. ಇದೇನೋ.. ಯೋಗರಾಜ್ ಭಟ್ಟರ ಧ್ವನಿ ಇದ್ದ ಹಾಗಿದೆಯಲ್ಲ ಎನ್ನಿಸಿದ್ದರೆ ಖಂಡಿತಾ ಆಶ್ಚರ್ಯವಿಲ್ಲ. ಮಧ್ಯೆ ಮಧ್ಯೆ ಒಂದಿಷ್ಟು ವೇದಾಂತದ ಮಾತುಗಳು, ಉಡಾಫೆ ಎಂಬ ಮಸಾಲೆಯ ಜೊತೆ ಹದವಾಗಿ ಬೆರೆಸಿದಂತೆ ಕಿವಿಗೆ ಕೇಳಿಸಿರುವುದೂ ಸುಳ್ಳಲ್ಲ. ಅದು ಸುಳ್ಳೇನಲ್ಲ.. ಯೋಗರಾಜ್ ಭಟ್ಟರು ಇರೋದು ಸತ್ಯ.

  ಗುರು ದೇಶಪಾಂಡೆ ನಿರ್ದೇಶನದ ಪಡ್ಡೆಹುಲಿಯಲ್ಲಿ ಭಟ್ಟರು ವಿಕಟ ಕವಿ. ಅದೊಂದು ವಿಶೇಷವಾದ ಪಾತ್ರ. ಕ್ಲಬ್‍ನಲ್ಲಿಯೇ ಇರುವ ಭಟ್ಟರ ಪಾತ್ರ, ನಾಯಕನಿಗೆ ಹಾಡು, ಸಂಗೀತದ ಬಗ್ಗೆ ತಮ್ಮದೇ ಸ್ಟೈಲಿನಲ್ಲಿ ಕಿವಿ ಮಾತು ಹೇಳುತ್ತೆ. ಅರ್ಥಾತ್.. ಭಟ್ಟರ ಫಿಲಾಸಫಿ ತೆರೆಯ ಮೇಲೂ ಮುಂದುವರಿಯುತ್ತೆ.

  ಕೆ.ಮಂಜು ಪುತ್ರ ಶ್ರೇಯಸ್‍ಗೆ ಗುರು, ನಿರ್ದೇಶಕ ಗುರುದೇಶಪಾಂಡೆಯವರೇ ಆದರೂ, ತೆರೆಯ ಮೇಲೆ ಭಟ್ಟರೂ ಪಾಠ ಹೇಳ್ತಾರೆ. ರಮೇಶ್ ರೆಡ್ಡಿ ನುಂಗ್ಲಿ ನಿರ್ಮಾಣದ ಚಿತ್ರದಲ್ಲಿ ರವಿಚಂದ್ರನ್, ಸುಧಾರಾಣಿ, ಪುನೀತ್, ರಕ್ಷಿತ್ ಶೆಟ್ಟಿ ಮೊದಲಾದ ತಾರೆಯರ ದಂಡೇ ಇದೆ.

 • ಪದವಿಪೂರ್ವ ; ಇದು ಭಟ್ಟರ ಹೊಸ ಸಿನಿಮಾ

  yogaraj bhat;s next is padavi [oorva

  ಹದಿಹರೆಯದವರ ತಲ್ಲಣ ತವಕಗಳನ್ನು ಹೇಳುತ್ತಲೇ ದೊಡ್ಡವರ ಹೃದಯವನ್ನೂ ಮುಟ್ಟಿರುವ ಯೋಗರಾಜ್ ಭಟ್, ಈಗ ಪದವಿಪೂರ್ವ ಅನ್ನೋ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಗಾಳಿಪಟ 2 ನಿರ್ದೇಶನ, ಸೀರೆ ಚಿತ್ರದ ನಿರ್ಮಾಣದಲ್ಲಿ ಬ್ಯುಸಿಯಾಗಿರುವ ಯೋಗರಾಜ್ ಭಟ್, ಪದವಿಪೂರ್ವ ಅನ್ನೋ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಈ ಚಿತ್ರಕ್ಕೆ ಅವರು ನಿರ್ಮಾಪಕರು ಮಾತ್ರ, ನಿರ್ದೇಶಕರಲ್ಲ.

  ಭಟ್ಟರ ಜೊತೆಯಲ್ಲೇ ಕೆಲಸ ಮಾಡಿ ಅನುಭವ ಇರುವ ಹರಿಪ್ರಸಾದ್ ಜಯಣ್ಣ, ಈ ಚಿತ್ರಕ್ಕೆ ನಿರ್ದೇಶಕ. ದಾವಣಗೆರೆಯ ಪೃಥ್ವಿ ಶಾಮನೂರು ನಾಯಕ. ಆತ ಹೊಸ ಪ್ರತಿಭೆ. ಭಟ್ಟರ ಜೊತೆ ಪೃಥ್ವಿಯವರ ತಂದೆ ರವಿ ಶಾಮನೂರು ಕೂಡಾ ನಿರ್ಮಾಣದಲ್ಲಿ ಭಟ್ಟರ ಜೊತೆ ಕೈಜೋಡಿಸಿದ್ದಾರೆ. 2020ರ ಆರಂಭದಲ್ಲಿ ಸಿನಿಮಾ ಸೆಟ್ಟೇರಲಿದ್ದು, ಪಿಯು ವಿದ್ಯಾರ್ಥಿಗಳ ಕಥೆಯನ್ನೇ ಚಿತ್ರದಲ್ಲಿ ಹೇಳಲು ಕಥೆ ಸಿದ್ಧ ಮಾಡಿದ್ದಾರೆ ಯೋಗರಾಜ್ ಭಟ್.

 • ಪಿಯು ಎಕ್ಸಾಂ ಹೊತ್ತಲ್ಲೇ ``ಪರೀಕ್ಷೆನಾ ಬಡಿಯಾ.. '' ಹಾಡು ಬಿಟ್ಟ ಭಟ್ಟರು

  ಪಿಯು ಎಕ್ಸಾಂ ಹೊತ್ತಲ್ಲೇ ``ಪರೀಕ್ಷೆನಾ ಬಡಿಯಾ.. '' ಹಾಡು ಬಿಟ್ಟ ಭಟ್ಟರು

  ಇವತ್ತಿಂದಾನೇ ಪಿಯುಸಿ ಎಕ್ಸಾಂ ಶುರು. ವಿದ್ಯಾರ್ಥಿಗಳಿಗೆಲ್ಲ ಶುಭವಾಗಲಿ ಎನ್ನುವ ಹಾರೈಕೆ ಮಾಡುತ್ತಿರುವಾಗಲೇ ಭಟ್ಟರು ಹಾಡು ಬಿಟ್ಟಿದ್ದಾರೆ. ಅಲ್ಲಲ್ಲ.. ಹಾರಿಸಿದ್ದಾರೆ. ಗಾಳಿಪಟ 2 ಚಿತ್ರದ ಮೊದಲ ಹಾಡು ``ಪರೀಕ್ಷೆನಾ ಬಡಿಯಾ.. '' ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ.

  ಪರೀಕ್ಷೆನಾ ಬಡಿಯಾ.. ಪರೀಕ್ಷೆನಾ ಬಡಿಯಾ.. ಕ್ವಶ್ಚನ್ ಪೇಪರ್‍ಗೆ ಎಂಟ್ಹತ್ತು ನಾಗರ್‍ಹಾವ್ ಕಡಿಯಾ.. ಎಂದು ಶುರುವಾಗೋ ಹಾಡು.. ಮೂರೂವರೆ ನಿಮಿಷ ಇದೆ. ಸಾಹಿತ್ಯ ಕೇಳಿದ್ಮೇಲೆ ಬರೆದಿರೋದು ಯೋಗರಾಜ್ ಭಟ್ಟರೇ ಅನ್ನೋದು ಹೇಳಬೇಕಿಲ್ಲ. ಜಯಂತ್ ಕಾಯ್ಕಿಣಿ ಪ್ರಿನ್ಸಿಪಾಲ್ ಆಗಿ ನಟಿಸಿದ್ದಾರಾ? ಹಾಡು ನೋಡಿದಾಗ ಅನ್ನಿಸೋದು ಅದು.

  ಭಟ್ಟರ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ಕೊಟ್ಟಿದ್ದಾರೆ. ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ, ಯೋಗರಾಜ್ ಭಟ್ ಹಾಡಿದ್ದಾರೆ. ಗಣೇಶ್, ದಿಗಂತ್, ಪವನ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ ನಟಿಸಿರೋ ಚಿತ್ರಕ್ಕೆ  ಉಮಾ ರಮೇಶ್ ರೆಡ್ಡಿ ನಿರ್ಮಾಪಕರು.

 • ಪ್ರಭುದೇವ ಶಿವಣ್ಣ ಚಿತ್ರ ಜೂನ್ 9ರಿಂದ ಆರಂಭ : ಕಥೆಗಾರ ಯಾರು?

  ಪ್ರಭುದೇವ ಶಿವಣ್ಣ ಚಿತ್ರ ಜೂನ್ 9ರಿಂದ ಆರಂಭ : ಕಥೆಗಾರ ಯಾರು?

  ಹ್ಯಾಟ್ರಿಕ್ ಹೀರೋ.. ಸೆಂಚುರಿ ಸ್ಟಾರ್ ಶಿವಣ್ಣ ಒಂದು ಕಡೆ.

  ಇಂಡಿಯನ್ ಮೈಕೇಲ್ ಜಾಕ್ಸನ್ ಎಂದೇ ಫೇಮಸ್ ಆಗಿರೋ ಪ್ರಭುದೇವ ಮತ್ತೊಂದು ಕಡೆ. ಅವರಿಬ್ಬರೂ ಒಟ್ಟಿಗೇ ಸೇರಿರುವುದು ರಾಕ್‍ಲೈನ್ ವೆಂಕಟೇಶ್ ಬ್ಯಾನರ್‍ನಲ್ಲಿ. ಆ್ಯಕ್ಷನ್ ಕಟ್ ಹೇಳುತ್ತಿರುವುದು ಯೋಗರಾಜ್ ಭಟ್. ಸಿನಿಮಾ ಅಧಿಕೃತವಾಗಿ ಜೂನ್ 9ರಿಂದ ಶುರುವಾಗುತ್ತಿದೆ. ಇನ್ನೂ ಟೈಟಲ್ ಫೈನಲ್ ಆಗಿಲ್ಲ.

  ಇದು ಆ್ಯಕ್ಷನ್ ಡ್ರಾಮಾ ಸಬ್ಜೆಕ್ಟ್ ಎಂದಿದ್ದಾರೆ ಯೋಗರಾಜ್ ಭಟ್. ಶಿವಣ್ಣ ಮತ್ತು ಪ್ರಭುದೇವ ಇಬ್ಬರಿಗೂ ಸ್ಕ್ರೀನ್ ಪೇಸ್ ಸಮಾನವಾಗಿ ಇರಲಿದೆ ಅನ್ನೋದು ಅವರ ಪ್ರಾಮಿಸ್. ಜೂನ್ 9ರಂದು ಮುಹೂರ್ತ ಮುಗಿಸಿ ಮರುದಿನವೇ ಚಿತ್ರೀಕರಣ ಶುರು ಮಾಡಲಿದ್ದಾರಂತೆ ಭಟ್ಟರು.

  ಇತ್ತ ಶಿವಣ್ಣ ಕೈಲಿ ಅವರದ್ದೇ ನಿರ್ಮಾಣದ ವೇದ, ನೀ ಸಿಗೋವರೆಗೂ, ಘೋಸ್ಟ್.. ಹೀಗೆ ಸಾಲು ಸಾಲು ಚಿತ್ರಗಳಿವೆ. ಭಟ್ಟರ ಕಥೆ ಇಷ್ಟವಾಯ್ತು. ಕಮರ್ಷಿಯಲ್ ಎಲಿಮೆಂಟ್ ಇರುವ ಕಥೆ ನನಗಂತೂ ಸಿಕ್ಕಾಪಟ್ಟೆ ಇಷ್ಟವಾಯ್ತು. ಜೊತೆಗೆ ಪ್ರಭುದೇವ ಕಾಂಬಿನೇಷನ್. ಹೀಗಾಗಿ ಒಪ್ಪಿದೆ ಎಂದಿದ್ದಾರೆ ಶಿವರಾಜಕುಮಾರ್.

  ಈ ಚಿತ್ರಕ್ಕೆ ಭಟ್ಟರೆ ಜೊತೆ ಕಥೆ ಬರೆಯಲು ಕೈಜೋಡಿಸಿರುವುದು ಜಯಮ್ಮನ ಮಗ ಖ್ಯಾತಿಯ ನಿರ್ದೇಶಕ ವಿಕಾಸ್. ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಚಿತ್ರಕ್ಕಿನ್ನೂ ನಾಯಕಿಯರ ಆಯ್ಕೆ ಆಗಿಲ್ಲ.

 • ಭಟ್-ಶಶಾಂಕ್ ಸಿನಿಮಾಗೆ ರಚಿತಾ ರಾಮ್

  rachita in bhat shashank's movie

  ಡಿಂಪಲ್ ಕ್ವೀನ್ ರಚಿತಾ ರಾಮ್ ಇಂಡಸ್ಟಿçಗೆ ಬಂದು ಕೆಲವು ವರ್ಷಗಳೇ ಆಗಿವೆ. ಬಹುತೇಕ ಎಲ್ಲ ಸ್ಟಾರ್ ನಟರ ಜೊತೆಯಲ್ಲೂ ನಟಿಸಿರುವ ರಚಿತಾ ರಾಮ್, ಕನ್ನಡದ ಈ ಇಬ್ಬರೂ ಸ್ಟಾರ್ ಡೈರೆಕ್ಟರ್ ಚಿತ್ರಗಳಲ್ಲಿ ನಟಿಸಿರಲಿಲ್ಲ. ಯೋಗರಾಜ್ ಭಟ್ ಮತ್ತು ಶಶಾಂಕ್ ಇಬ್ಬರ ಚಿತ್ರಗಳಲ್ಲೂ ರಚಿತಾ ರಾಮ್ ಇರಲಿಲ್ಲ. ಈಗ ಸಮಯ ಕೂಡಿ ಬಂದಿದೆ. ಭಟ್ಟರು ಮತ್ತು ಶಶಾಂಕ್ ಇಬ್ಬರೂ ಒಟ್ಟಿಗೇ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ.

  ರಿಷಿ ನಾಯಕರಾಗಿರುವ ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ರಚಿತ ಇಲ್ಲಿ ಇಂಗ್ಲೆAಡಿನಿAದ ವಾಪಸ್ ಆದ ಎನ್‌ಆರ್‌ಐ ಪಾತ್ರದಲ್ಲಿದ್ದರೆ, ರಿಷಿ ಪಕ್ಕಾ ಲೋಕಲ್ ಹುಡುಗ. ರಿಷಿ ಜೊತೆಯಲ್ಲೂ ರಚಿತಾಗಿದು ಫಸ್ಟ್ ಸಿನಿಮಾ. ಇನ್ನು ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಅನಂತ್ ನಾಗ್ ಇದ್ದಾರೆ.

  ಚಿತ್ರಕ್ಕೆ ಭಟ್ಟರ ಕ್ಯಾಂಪಿನ ಹುಡುಗ ಮೋಹನ್ ಸಿಂಗ್ ನಿರ್ದೇಶಕರಾಗಿದ್ದಾರೆ. ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಚಿತ್ರೀಕರಣ ಶುರು ಮಾಡಲಿದೆ.

 • ಭಟ್ಟರ 2ನೇ ಗಾಳಿಪಟಕ್ಕೆ ಇಬ್ಬರು ಚೆಲುವೆಯರು

  two heroines for bhatt's gaalipata 2 ..?

  ಯೋಗರಾಜ್ ಭಟ್, ಗಾಳಿಪಟ 2 ಸಿನಿಮಾ ಮಾಡೋದಾಗಿ ಘೋಷಿಸಿಯೂ ಆಗಿದೆ. ಶರಣ್, ಲೂಸಿಯಾ ಪವನ್, ರಿಷಿ ನಾಯಕತ್ವದ ಗಾಳಿಪಟ 2 ಚಿತ್ರಕ್ಕೆ  ಪಂಚತಂತ್ರ ಬಿಡುಗಡೆ ಟೈಮಿನಲ್ಲೇ ಕೆಲಸ ಶುರು ಮಾಡಿದ್ದಾರೆ. ಒಂದು ಚಿತ್ರ ಮುಗಿಯುತ್ತಿರುವಾಗಲೇ ಇನ್ನೊಂದು ಚಿತ್ರದಲ್ಲಿ ಬ್ಯುಸಿಯಾಗುತ್ತಿರುವುದು ಭಟ್ಟರ ಚರಿತ್ರೆಯಲ್ಲಿ ಇದೇ ಮೊದಲು ಎನ್ನಬೇಕು. ಈಗ ಆ ಚಿತ್ರಕ್ಕೆ ಇಬ್ಬರು ನಾಯಕಿಯರು ಓಕೆ ಆಗಿದ್ದಾರೆ.

  ಶೃಂಗಾರದ ಹೊಂಗೆ ಮರದಲ್ಲಿ ಹೂ ಬಿಟ್ಟಿದ್ದ ಚೆಲುವೆ ಸೋನಾಲ್ ಓಕೆ ಆಗಿದ್ದಾರೆ. ಇನ್ನೊಂದು ಪಾತ್ರಕ್ಕೆ ಶರ್ಮಿಳಾ ಮಾಂಡ್ರೆ ಜೊತೆ ಮಾತುಕತೆ ನಡೆದಿದೆ. ಬೆಳಗಾವಿ ಮೂಲದ ಮಹೇಶ್ ಎಂಬುವರು ನಿರ್ಮಿಸುತ್ತಿರುವ ಗಾಳಿಪಟ 2ಗೆ ಸಂಗಿತ ಸಂಯೋಜನೆಗೆ ರೆಡಿಯಾಗಿದ್ಧಾರೆ ಭಟ್ಟರು.

  ಇದು ಕಂಪ್ಲೀಟ್ ನನ್ನ ಶೈಲಿಯ ಸಿನಿಮಾ. ಮನರಂಜನೆ ಮತ್ತು ಭಾವನಾತ್ಮಕ ಅಂಶಗಳನ್ನು ಹದವಾಗಿ ಬೆರೆಸಿರುವ ಸಿನಿಮಾ. ಈಗಿನ ಜನರೇಷನ್‍ಗೆ ಇಷ್ಟವಾಗುವ ಸಿನಿಮಾ ಎಂದಿದ್ದಾರೆ ಭಟ್ಟರು.

 • ಭಟ್ಟರ ಕನ್ನಡದ ತಪ್ಪಿನಲ್ಲೂ ಒಪ್ಪುವಂಥಾದ್ದೊಂದು ಮಾತಿದೆ..!

  yogaraj bhat clarifies rumors

  ಹುದ್ದಿಟಹಬ್ಬದ ಶುಶಾಭಯ..

  ಇದು ಯೋಗರಾಜ್ ಭಟ್ಟರು ಗಾಳಿಪಟ 2 ಚಿತ್ರದಿಂದ ಗಣೇಶ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದ ಜಾಹೀರಾತು. ಭಟ್ಟರಿಗೆ ಕನ್ನಡ ಗೊತ್ತಿಲ್ಲ ಎನ್ನುವಂತಿಲ್ಲ. ಸರಿಗನ್ನಡದ ಬಗ್ಗೆ.. ಕರ್ನಾಟಕದ ರಾಜ್ಯದಲ್ಲಿ ಬಳಕೆಯಲ್ಲಿರೋ ಕನ್ನಡವನ್ನು ಅಲ್ಲಲ್ಲಿನ ಪ್ರಾದೇಶಿಕ ಸೊಗಡಿನ ಸಮೇತ ವಿವರಿಸಬಲ್ಲ ಪಾಂಡಿತ್ಯವಿದೆ. ಅದನ್ನವರು ತಮ್ಮ ಸಾಹಿತ್ಯದಲ್ಲಿ ತೋರಿಸಿಯೂ ಇದ್ದಾರೆ. ಹೀಗಿರುವಾಗ.. ಭಟ್ಟರು ತಪ್ಪು ಮಾಡಿದ್ದೇಕೆ..? ಅದಕ್ಕೆ ಭಟ್ಟರೇ ಉತ್ತರ ಕೊಟ್ಟಿದ್ದಾರೆ.

  ಇದು ಗಾಳಿಪಟ 2 ಚಿತ್ರದ ಕಥೆಯ ಅಂಶವೂ ಹೌದು. ಗಾಳಿಪಟ 2 ಚಿತ್ರದಲ್ಲಿ ಕನ್ನಡದ ತಪ್ಪಾದ ಬಳಕೆಯೂ ಒಂದು ಭಾಗ. ಅದನ್ನು ಸೂಚಿಸುವ ಸಲುವಾಗಿ ಹೀಗೆ ಬರೆಯಲಾಯ್ತು. ಗಾಳಿಪಟ ಚಿತ್ರದಲ್ಲಿ ದಯವಿಟ್ಟು ಪದವನ್ನು ನಾಯಕ ದಯವಿಣ್ಣು ಎಂದು ಬರೆದಿರುತ್ತಾನೆ. ಅದನ್ನು ಜನ ಎಂಜಾಯ್ ಮಾಡಿದ್ದರು. ಇಲ್ಲಿಯೂ ಅಂತಹ ಮಜವಾದ ಅನೇಕ ಸಂಗತಿಗಳಿವೆ. ಈಗಿನ ಯುವಕರ ಕನ್ನಡದ ಬಳಕೆ, ಅವರ ಐಲುತನಗಳು, ಯೋಚನೆಗಳೆಲ್ಲವೂ ಈ ಚಿತ್ರದಲ್ಲಿರುತ್ತದೆ. ದಯವಿಟ್ಟು ಇದರ ಹಿಂದಿರುವ ವ್ಯಂಗ್ಯವನ್ನು ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ ಭಟ್ಟರು.

  ಸಿರಿಗನ್ನಡಂ ಗೆಲ್ಗೆ.. ಸರಿಗನ್ನಡಂ ಬಾಳ್ಗೆ ಅನ್ನೋದು ಭಟ್ಟರ ಕನ್ನಡ ಘೋಷ. ಭಟ್ಟರ ಈ ಜಾಹೀರಾತು ಕೆಲವರಿಗೆ ಇಷ್ಟವಾಗಿದೆ. ಕೆಲವರಿಗೆ ಇಷ್ಟವಾಗಿಲ್ಲ.

 • ಭಟ್ಟರ ಗರಡಿಗೆ ಕೌರವ ಪಾಟೀಲ್ ಎಂಟ್ರಿ

  ಭಟ್ಟರ ಗರಡಿಗೆ ಕೌರವ ಪಾಟೀಲ್ ಎಂಟ್ರಿ

  ಬಿ.ಸಿ.ಪಾಟೀಲ್. ಈಗ ಕೇವಲ ಶಾಸಕರಷ್ಟೇ ಅಲ್ಲ. ಕೃಷಿ ಸಚಿವರೂ ಹೌದು. ಇದೆಲ್ಲದರ ಮಧ್ಯೆಯೇ ಬಿಡುವು ಮಾಡಿಕೊಂಡು ಗರಡಿ ಚಿತ್ರ ನಿರ್ಮಿಸುತ್ತಿರೋ ಬಿ.ಸಿ.ಪಾಟೀಲ್ ಚಿತ್ರದಲ್ಲೊಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಗರಡಿ ಮನೆಯ ಗುರುವಾಗಿ ನಟಿಸುತ್ತಿರೋ ಬಿ.ಸಿ.ಪಾಟೀಲ್ ಈಗ ಅಖಾಡಕ್ಕೂ ಧುಮುಕಿದ್ದಾರೆ.

  ಗರಡಿ ಯೋಗರಾಜ್ ಭಟ್ಟರ ಸಿನಿಮಾ. ಯಶಸ್ ಹೀರೋ. ಸೋನಲ್ ಮಂಥೆರೋ ಹೀರೋಯಿನ್. ಬಿ.ಸಿ.ಪಾಟೀಲ್ ಜೊತೆಗೆ ಇನ್ನೊಬ್ಬ ಸಚಿವ ಎಸ್.ಟಿ.ಸೋಮಶೇಖರ್ ಕೂಡಾ ನಟಿಸುತ್ತಿರೋದು ವಿಶೇಷ.

  ನಟಿಸಲೆಂದೇ ಪೊಲೀಸ್ ಕೆಲಸ ಬಿಟ್ಟು ಬಂದವನು ನಾನು. ನಟಿಸುವುದು ನನ್ನ ಗೀಳು. ಕಲೆ ಬಗ್ಗೆ ವಿಶೇಷ ಆಸಕ್ತಿ ಇದೆ. ಹಾಗಾಗಿ ನಟಿಸುತ್ತಿದ್ದೇನೆ. ಚಿತ್ರದಲ್ಲಿ ನನ್ನದು ಗರಡಿ ಮನೆ ಯಜಮಾನ ರಂಗಪ್ಪ ಎಂಬ ಪಾತ್ರ  ಎನ್ನುತ್ತಾರೆ ಬಿ.ಸಿ.ಪಾಟೀಲ್. ಅಂದಹಾಗೆ ಈ ಚಿತ್ರಕ್ಕೆ ಪಾಟೀಲ್ ಪುತ್ರ ಸೌಮ್ಯ ಪಾಟೀಲ್ ನಿರ್ಮಾಪಕಿ.

 • ಭಟ್ಟರ ಗರಡಿಗೆ ಮಿನಿಸ್ಟರ್ ಬಿ.ಸಿ.ಪಾಟೀಲ್

  ಭಟ್ಟರ ಗರಡಿಗೆ ಮಿನಿಸ್ಟರ್ ಬಿ.ಸಿ.ಪಾಟೀಲ್

  ರಾಜಕೀಯದಲ್ಲಿ ಬ್ಯುಸಿಯಾಗಿರುವ ಸಚಿವ ಬಿ.ಸಿ.ಪಾಟೀಲ್, ಮತ್ತೆ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಪಾಟೀಲರ ಸಿನಿಮಾ ಎಂಟ್ರಿಗೆ ಕಥೆ ರೆಡಿ ಮಾಡಿರೋದು ಯೋಗರಾಜ್ ಭಟ್. ಈ ಚಿತ್ರಕ್ಕೆ ಅವರೇ ನಿರ್ಮಾಪಕರು. ಹೀರೋ ಆಗಿರೋದು ಯಶಸ್ ಸೂರ್ಯ.

  ಉತ್ತರ ಕರ್ನಾಟಕದಲ್ಲಿ ಹಳ್ಳಿಗಳಲ್ಲಿ ಸಾಮಾನ್ಯವಾಗಿರೋ ಗರಡಿ ಮನೆಗಳ ಸುತ್ತಲೇ ಭಟ್ಟರು ರೂಪಿಸಿರೋ ಕಥೆಯೇ ಗರಡಿ. ಹಾವೇರಿಯ ಹಿರೇಕರೂರಿನಲ್ಲಿ ಸಿನಿಮಾಗೆ ಓಂಕಾರವೂ ಬಿದ್ದಿದೆ. 

 • ಭಟ್ಟರ ಗರಡಿಗೆ ರಚಿತಾ ರಾಮ್

  ಭಟ್ಟರ ಗರಡಿಗೆ ರಚಿತಾ ರಾಮ್

  ಯೋಗರಾಜ್ ಭಟ್ ಮತ್ತು ಬಿ.ಸಿ.ಪಾಟೀಲ್ ಮೊದಲ ಬಾರಿಗೆ ಜೊತೆಯಾಗಿರುವ ಗರಡಿ ಚಿತ್ರಕ್ಕೆ ಈಗ ನಾಯಕಿಯಾಗಿ ರಚಿತಾ ರಾಮ್ ಎಂಟ್ರಿ ಕೊಟ್ಟಿದ್ದಾರೆ. ಸಚಿವ ಬಿ.ಸಿ.ಪಾಟೀಲ್ ನಿರ್ಮಾಣ ಮಾಡುತ್ತಿರುವ ಚಿತ್ರ ಗರಡಿ. ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ರಚಿತಾ, ಭಟ್ಟರ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಗರಡಿ ಚಿತ್ರಕ್ಕೆ ಯಶಸ್ ಸೂರ್ಯ ಹೀರೋ. ಪಕ್ಕಾ ಹಳ್ಳಿ ಸೊಗಡಿನ ಗರಡಿ ಮನೆಯ ಕಥೆ ಇರೋ ಗರಡಿ ಚಿತ್ರದಲ್ಲಿ ರಚಿತಾ ರಾಮ್ ಪಕ್ಕಾ ಹಳ್ಳಿ ಹುಡುಗಿಯಾಗಿ ನಟಿಸಲಿದ್ದಾರೆ.  

 • ಭಟ್ಟರ ಚಿತ್ರಕ್ಕೆ ಅರ್ಜುನ್ ಜನ್ಯಾ ಮ್ಯೂಸಿಕ್ಕು..!

  arjun janya's music for bhat's panchatantra

  ಪಂಚತಂತ್ರ ಚಿತ್ರದಿಂದ, ಶೃಂಗಾರದ ಹೊಂಗೆಮರದಲ್ಲಿ ಹೂ ಬಿಡಿಸಿ, ಚಳಿಗಾಲದಲ್ಲೂ ಮೈ ಬೆಚ್ಚಗಾಗಿಸಿರುವ ಯೋಗರಾಜ್ ಭಟ್, ಹೊಸ ಸಿನಿಮಾ ಆರಂಭಿಸುತ್ತಿದ್ದಾರೆ. ಗಾಳಿಪಟ-2. ಶರಣ್, ಪವನ್ ಕುಮಾರ್ (ಯು ಟರ್ನ್ ನಿರ್ದೇಶಕ), ರಿಷಿ (ಅಲಮೇಲಮ್ಮ ಖ್ಯಾತಿ) ಗಾಳಿಪಟ 2 ಹೀರೋಗಳು. ತಮ್ಮದೇ ನಿರ್ದೇಶನದ, ದಾಖಲೆ ಬರೆದಿದ್ದ ಗಾಳಿಪಟ ಚಿತ್ರದ ಟೈಟಲ್‍ನ್ನು ಮತ್ತೊಮ್ಮೆ ತಾವೇ ಕೈಗೆತ್ತಿಕೊಂಡಿದ್ದಾರೆ ಯೋಗರಾಜ್ ಭಟ್.

  ವಿಶೇಷದ ಮೇಲೆ ವಿಶೇಷವೆಂದರೆ, ಈ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯಾ. 

  ಭಟ್ಟರ ಚಿತ್ರಗಳಿಗೆ ಇದುವರೆಗೆ ಸಂಗೀತ ನೀಡಿರುವುದು ಮನೋಮೂರ್ತಿ, ಸಂದೀಪ್ ಚೌಟ ಹಾಗೂ ಭಟ್ಟರ ಆಪ್ತಮಿತ್ರರೂ ಆಗಿರುವ ಹರಿಕೃಷ್ಣ. ಭಟ್ಟರು ಮತ್ತು ಹರಿಕೃಷ್ಣ ಕಾಂಬಿನೇಷನ್, ಹಲವು ಚಿತ್ರಗಳ ನಂತರ ಇದೇ ಮೊದಲ ಬಾರಿಗೆ ಗ್ಯಾಪ್ ಆಗುತ್ತಿದೆ. 

  ಹಾಗಂತ ಅರ್ಜುನ್ ಜನ್ಯಾ, ಭಟ್ಟರಿಗೆ ಹೊಸಬರೇನಲ್ಲ. ಭಟ್ಟರ ಕ್ಯಾಂಪಿನ ಹಲವರ ಜೊತೆ ಜನ್ಯಾ ಕೆಲಸ ಮಾಡಿದ್ದಾರೆ. ಅರ್ಜುನ್ ಜನ್ಯಾ ಅವರ ಹಲವಾರು ಸೂಪರ್ ಹಿಟ್ ಹಾಡುಗಳಿಗೆ ಭಟ್ಟರು ಸಾಹಿತ್ಯ ಕೊಟ್ಟಿದ್ದಾರೆ. ಅವರ ನಿರ್ದೇಶನಕ್ಕೆ, ಇವರ ಸಂಗೀತ ನಿರ್ದೇಶನವಷ್ಟೇ ಓಂ ಪ್ರಥಮ.

  ಇದೆಲ್ಲದರ ಜೊತೆಗೆ ಚಿತ್ರದ ನಿರ್ಮಾಪಕ ಮಹೇಶ್ ದಾನಣ್ಣವರ್ ಹಾಗೂ ಅರ್ಜುನ್ ಜನ್ಯಾ, ಆಪ್ತಸ್ನೇಹಿತರು. ಇದೂ ಕೂಡಾ ಭಟ್ಟರ ಚಿತ್ರಕ್ಕೆ, ಅರ್ಜುನ್ ಜನ್ಯಾ ಸಂಗೀತ ನೀಡಲು ಕಾರಣವಾಗಿದೆ. 

   

 • ಭಟ್ಟರ ಚೆಕ್ ಬೌನ್ಸ್ - ಕನಕಪುರ ಶ್ರೀನಿವಾಸ್ ಹೇಳಿದ್ದೇನು..?

  cheque bounce case

  ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಿರ್ಮಾಪಕ ಕನಕಪುರ ಶ್ರೀನಿವಾಸ್ ನಡುವಣ ಚೆಕ್ ಬೌನ್ಸ್ ಕೇಸ್ ಈಗ ಕೋರ್ಟ್‍ನಲ್ಲಿದೆ. ಕನಕಪುರ ಶ್ರೀನಿವಾಸ್, ದನಕಾಯೋನು ಚಿತ್ರಕ್ಕೆ ಕೊಡಬೇಕಾದ ಸಂಭಾವನೆ ಚುಕ್ತಾ ಮಾಡಿಲ್ಲ. ಹಲವು ಬಾರಿ ಕೊಡುತ್ತೇನೆ ಎಂದು ಹೇಳಿ ಕೊಟ್ಟಿಲ್ಲ. ಕೊಟ್ಟಿದ್ದ ಚೆಕ್‍ಗಳೂ ಬೌನ್ಸ್ ಆಗಿವೆ ಎಂದು ಭಟ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಫಿಲಂ ಚೇಂಬರ್ ಸಂಧಾನವೂ ಯಶಸ್ವಿಯಾಗಲಿಲ್ಲ ಅನ್ನೋದು ಈಗಾಗಲೇ ಗೊತ್ತಿರುವ ವಿಚಾರ.  ಈ ಕುರಿತಂತೆ ಶ್ರೀನಿವಾಸ್ ಮಾತನಾಡಿದ್ದಾರೆ.

  ನಾನು 3 ತಿಂಗಳು ಟೈಂ ಕೇಳಿದ್ದೆ. ಕೊಡಲಿಲ್ಲ. ಆಗ ಅವರು ಕೋರ್ಟ್‍ಗೆ ಹೋಗ್ತೀನಿ ಅಂದ್ರು. ಹೋಗಿ ಅಂದೆ. ಅಷ್ಟೆ.. ಎಂದಿದ್ದಾರೆ ಶ್ರೀನಿವಾಸ್. ದನಕಾಯೋನು ಚಿತ್ರದಿಂದ ನನಗೆ ಲಾಭವಾಗಲಿಲ್ಲ ಎಂದು ಕೂಡಾ ಹೇಳಿಕೊಂಡಿದ್ದಾರೆ.

   

 • ಭಟ್ಟರ ಪಂಚತಂತ್ರಕ್ಕೆ ಜೋಗಿ ಪ್ರೇಮ್ ಜಬರ್ದಸ್ತ್ ಹಾಡು

  panchatantra title rack gets prem's voice

  ಯೋಗರಾಜ್ ಭಟ್ಟರ ಬಹುನಿರೀಕ್ಷಿತ ಚಿತ್ರ ಪಂಚತಂತ್ರಕ್ಕೆ ಜೋಗಿ ಪ್ರೇಮ್ ಹಾಡು ಬರೆದಿದ್ದಾರೆ. ಇದು ಎಂತಹ ಕಾಂಬಿನೇಷನ್ ಗೊತ್ತಾ..? ಪ್ರೇಮ್ ಅಂದ್ರೆ ರಾ.. ಕಾಯ್ಕಿಣಿ ಅಂದ್ರೆ ಕಾವ್ಯ. ಭಟ್ಟರು ಉಪ್ಪಿನಕಾಯ್ ಆದ್ರೆ ಹರಿಕೃಷ್ಣ ಮಸಾಲೆ.. ಹೀಗೆ.. ವಿಭಿನ್ನ ಶೈಲಿಯವರೆಲ್ಲ ಒಟ್ಟಿಗೇ ಮಿಕ್ಸ್ ಆಗಿ ಪಂಚತಂತ್ರದ ಟೈಟಲ್ ಸಾಂಗ್ ಆಗಿದೆ. ಆ ಹಾಡನ್ನು ಹಾಡಿರೋದು ಜೋಗಿ ಪ್ರೇಮ್ ಅನ್ನೊದೇ ವಿಶೇಷ.

  ಅಲೆಲೆಲಾ.. ಆಮೆ ಮೊಲ.. ಓಡ್ತಾವ್ ನೋಡ್ಲಾ.. ಎಂದು ಶುರುವಾಗೋ ಹಾಡಿನಲ್ಲಿ ಫುಲ್ ಜೋಶ್ ತುಂಬಿದ್ದಾರೆ ಪ್ರೇಮ್ ಮತ್ತು ಹರಿಕೃಷ್ಣ. ಇದು ಪಂಚತಂತ್ರದ ಥೀಮ್ ಸಾಂಗ್ ಎಂದೂ ಹೇಳಬಹುದು. 

  ವಿಹಾನ್, ಸೋನಲ್ ಜೋಡಿಯಾಗಿ ನಟಿಸಿರುವ ಚಿತ್ರದಲ್ಲಿ ಈಗಾಗಲೇ ಶೃಂಗಾರದ ಹೊಂಗೇ ಮರ ಹಾಡು ಚಳಿ ಬಿಡಿಸಿದ್ದರೆ, ಈ ಹಾಡು ಹುಚ್ಚೆಬ್ಬಿಸುತ್ತಿದೆ.

 • ಭಟ್ಟರ ಪಂಚತಂತ್ರದ ಕಗ್ಗ

  yogaraj bhat;s mankuthimma song

  ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ, ಯಾವುದೇ ಭಗವದ್ಗೀತೆ, ಈಸೋಪನ ನೀತಿ ಕಥೆಗಳು, ವಚನಾಮೃತಕ್ಕೂ ಕಡಿಮೆಯಿಲ್ಲ. ಅಂತಹ ಮಂಕುತಿಮ್ಮನನ್ನು ಪಂಚತಂತ್ರದ ಹಾಡಿಗೆ ತಂದಿದ್ದಾರೆ ಯೋಗರಾಜ್ ಭಟ್ಟರು. 

  ನೀನೇ ಹೇಳೋ ಮಂಕುತಿಮ್ಮ.. ಎಂದು ಶುರುವಾಗುವ ಈ ಹಾಡು, ಭಟ್ಟರ ಅಭಿಮಾನಿ ಬಳಗವನ್ನಷ್ಟೇ ಅಲ್ಲ, ಸಾಹಿತ್ಯಾಸಕ್ತರನ್ನೂ ಸೆಳೆಯುತ್ತಿದೆ. ಒನ್ಸ್ ಎಗೇಯ್ನ್, ಭಟ್ಟರು ಹೊಸದೊಂದು ಪ್ರೇಕ್ಷಕ ವರ್ಗಕ್ಕೆ ರೀಚ್ ಆಗುವತ್ತ ಹೆಜ್ಜೆಯಿಟ್ಟಿದ್ದಾರೆ.

  ಈ ಹಾಡಿಗಾಗಿ ಇದೇ ಮೊದಲ ಬಾರಿಗೆ ಯೋಗರಾಜ್ ಭಟ್, ಹರಿಕೃಷ್ಣ ಜೊತೆ ರಘು ದೀಕ್ಷಿತ್ ಕೂಡಾ ಸೇರಿದ್ದಾರೆ. 

 • ಭಟ್ಟರ ಪಂಚತಂತ್ರದಲ್ಲಿ ಮತ್ತೊಮ್ಮೆ ಅಂಬಿ

  bhat wants to vreate bombe adsornu magic once again

  ನಿರ್ದೇಶಕ ಯೋಗರಾಜ್ ಭಟ್, ಪಂಚತಂತ್ರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗ ಆ ಚಿತ್ರಕ್ಕೆ ರೆಬಲ್‍ಸ್ಟಾರ್ ಟಚ್ ಕೂಡಾ ಸಿಕ್ಕಿದೆ. ಚಿತ್ರದ ಹಾಡೊಂದರಲ್ಲಿ ಅಂಬರೀಷ್ ನಟಿಸಲಿದ್ದು, ಅದು ಅಂಬರೀಷ್ ಅವರಿಗೆ ಸೂಟ್ ಆಗುವ ಹಾಡು ಎಂದಿದ್ದಾರೆ ಯೋಗರಾಜ್ ಭಟ್.

  ಭಟ್ಟರ ಡ್ರಾಮಾ ಚಿತ್ರದಲ್ಲಿ ಅಂಬರೀಷ್, ಬೊಂಬೆ ಆಡಿಸುವವನ ಪಾತ್ರದಲ್ಲಿ ನಟಿಸಿದ್ದರು. ಬೊಂಬೆ ಆಡ್ಸೋನು ಹಾಡು ಅಂಬರೀಷ್‍ಗೆ ಹೊಸ ಲುಕ್ ಕೊಟ್ಟಿತ್ತು. ಈಗ ಪಂಚತಂತ್ರದಲ್ಲಿ ಅದಕ್ಕಿಂತ ಭಿನ್ನವಾದ, ಅಂಬರೀಷ್ ಅವರಿಗೆ ಸೂಟ್ ಆಗುವ ಹಾಡಿದೆ ಎಂದಿದ್ದಾರೆ ಯೋಗರಾಜ್ ಭಟ್.

  ಅಂಬರೀಷ್ ಗ್ರೀನ್ ಸಿಗ್ನಲ್ ಕೊಟ್ಟರೆ, ತಕ್ಷಣ ಹಾಡಿನ ಶೂಟಿಂಗ್ ಶುರುವಾಗಲಿದೆ.

 • ಭಟ್ಟರಿಗೆ ದನಕಾಯೋನಿಂದ ಮೂರಕ್ಕೆ ಮೂರೂ ಮೋಸ

  yograj bhat cheated by kanakpura srinivas

  ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ದನಕಾಯೋನು ಚಿತ್ರ ನಿರ್ದೇಶಿಸಿದ್ದಕ್ಕೆ ಬರಬೇಕಿದ್ದ ಸಂಭಾವನೆ ಇನ್ನೂ ಬಂದಿಲ್ಲ. ನಿರ್ಮಾಪಕ ಕನಕಪುರ ಶ್ರೀನಿವಾಸ್ ಚಿತ್ರವನ್ನು ರಿಲೀಸ್ ಮಾಡಿ, ಲಾಭವನ್ನು ಮಾಡಿಕೊಂಡರಾದರೂ ತಂತ್ರಜ್ಞರಿಗೆ ಕೊಡಬೇಕಾದ ಸಂಭಾವನೆಯನ್ನೇ ಕೊಡದೆ ಕೈ ಎತ್ತಿಬಿಟ್ಟಿದ್ದಾರೆ.

  ಈ ಬಗ್ಗೆ ನ್ಯಾಯಾಲಯಕ್ಕೆ ಹೋಗುವ ಸುಳಿವು ಕೊಟ್ಟಿದ್ದರು ಯೋಗರಾಜ್ ಭಟ್. ಏಕೆಂದರೆ, ಅದೇ ಕನಕಪುರ ಶ್ರೀನಿವಾಸ್ ಅವರ ಭರ್ಜರಿ ಚಿತ್ರ ರಿಲೀಸ್‍ಗೆ ರೆಡಿಯಾಗಿತ್ತು. ಆಗ ಮತ್ತೊಮ್ಮೆ ಸಂಧಾನಕ್ಕೆ ಬಂದ ಕನಕಪುರ ಶ್ರೀನಿವಾಸ್, ಫಿಲಂ ಚೇಂಬರ್‍ನಲ್ಲಿ ಭಟ್ಟರಿಗೆ ಮೂರು ಚೆಕ್ ಕೊಟ್ಟು, ಚಿತ್ರ ಬಿಡುಗಡೆಯಾಗುವಂತೆ ನೋಡಿಕೊಂಡಿದ್ದರು. ಭಟ್ಟರೂ ಕೂಡಾ ಭರವಸೆಯಿಲ್ಲದಿದ್ದರೂ ದೊಡ್ಡವರ ಮಾತಿಗೆ ಮಣಿದಿದ್ದರು.

  ಈಗ ಶ್ರೀನಿವಾಸ್ ಕೊಟ್ಟಿದ್ ಮೂರೂ ಚೆಕ್‍ಗಳು ಬೌನ್ಸ್ ಆಗಿವೆಯಂತೆ. ಇನ್ನು ಮುಂದಿನ ದಾರಿ ಕಾನೂನು ಹೋರಾಟ ಮಾತ್ರ ಎಂದಿದ್ದಾರೆ ಯೋಗರಾಜ್ ಭಟ್. ನ್ಯಾಯಾಲಯದ ಮೆಟ್ಟಿಲೇರುವುದು ಭಟ್ಟರಿಗೆ ಈಗ ಅನಿವಾರ್ಯವಾಗಿದೆ. ಅತ್ತ ಕನಕಪುರ ಶ್ರೀನಿವಾಸ್ ಭಟ್ಟರಿಗಾಗಲೀ, ಫಿಲಂ ಚೇಂಬರ್‍ನವರಿಗಾಗಲೀ ಕೈಗೆ ಸಿಗದೆ ಓಡಾಡಿಕೊಂಡಿದ್ದಾರೆ.

 • ಭಟ್ಟರಿಂದ ಮತ್ತೊಂದು ಗಾಳಿಪಟ

  yogaraj bhat ready for gaalipata sequel

  ಯೋಗರಾಜ್ ಭಟ್ಟರು ಗಾಳಿಪಟ ಹಾರಿಸೋಕೆ ರೆಡಿಯಾಗಿದ್ದಾರೆ. ಎರಡನೇ ಬಾರಿ. ಈ ಬಾರಿ ಗಾಳಿಪಟ ಹಾರಿಸೋಕೆ ಭಟ್ಟರು ಅಯ್ದುಕೊಂಡಿರೋದು ಶರಣ್, ಲೂಸಿಯಾ ಪವನ್ ಮತ್ತು ಅಲಮೇಲಮ್ಮ ಖ್ಯಾತಿಯ ರಿಷಿಯನ್ನು. ಅನುಮಾನವೇ ಇಲ್ಲ, ಇದು ಗಾಳಿಪಟ ಚಿತ್ರದ ಸೀಕ್ವೆಲ್.

  ಗಾಳಿಪಟದಲ್ಲಿ ಗಣೇಶ್, ದಿಗಂತ್, ರಾಜೇಶ್ ಕೃಷ್ಣ, ಡೈಸಿ ಬೋಪಣ್ಣ, ನೀತೂ, ಭಾವನಾ ರಾವ್ ಇದ್ದರು. ಈ ಗಾಳಿಪಟದಲ್ಲಿ ಸಂಪೂರ್ಣ ಹೊಸ ತಂಡ. ಭಟ್ಟರು ಈಗಾಗಲೇ ಕಥೆಯನ್ನೂ ರೆಡಿ ಮಾಡಿಟ್ಟುಕೊಂಡಿದ್ದಾರಂತೆ. ಪಂಚತಂತ್ರ ಮುಗಿಸಿದ ತಕ್ಷಣ, ಗಾಳಿಪಟ ಹಾರಿಸೋಕೆ ಭಟ್ಟರು ರೆಡಿಯಾಗಿದ್ದಾರೆ.

  2008ರಲ್ಲಿ ತೆರೆಕಂಡಿದ್ದ ಗಾಳಿಪಟ, ಸೂಪರ್ ಹಿಟ್ ಸಿನಿಮಾ. ಸರಿಯಾಗಿ 10 ವರ್ಷಗಳ ನಂತರ ಗಾಳಿಪಟ 2ಗೆ ಶ್ರೀಕಾರ ಹಾಕಿದ್ದಾರೆ ಭಟ್ಟರು. ಸದ್ಯಕ್ಕೆ ಪಂಚತಂತ್ರ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

 • ಭಟ್ಟರು ಗಾಳಿಪಟ ಹಾರಿಸೋಕೆ ಮುಹೂರ್ತ ಫಿಕ್ಸ್

  ಭಟ್ಟರು ಗಾಳಿಪಟ ಹಾರಿಸೋಕೆ ಮುಹೂರ್ತ ಫಿಕ್ಸ್

  ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ರಿಲೀಸ್‍ಗೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 12ಕ್ಕೆ ಗಾಳಿಪಟ 2 ರಿಲೀಸ್ ಆಗಲಿದೆ. ರಮೇಶ್ ರೆಡ್ಡಿ ನಿರ್ಮಾಣದ ಚಿತ್ರದಲ್ಲಿ ಗಾಳಿಪಟದಲ್ಲಿದ್ದ ಗಣೇಶ್, ದಿಗಂತ್ ಮತ್ತು ಅನಂತ್ ನಾಗ್ ಮುಂದವರೆದಿದ್ದರೆ, ಪವನ್ ಕುಮಾರ್ ಹೊಸದಾಗಿ ಸೇರಿದ್ದಾರೆ. ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್ ಮತ್ತು ನಿಶ್ವಿಕಾ ನಾಯ್ಡು ನಾಯಕಿಯರು.

  2008ರ ಜನವರಿಯಲ್ಲಿ ಗಾಳಿಪಟ ರಿಲೀಸ್ ಆಗಿತ್ತು.

  ಗಣೇಶ್, ದಿಗಂತ್ ಮತ್ತು ರಾಜೇಶ್ ಕೃಷ್ಣ ಹೀರೋ ಆಗಿದ್ದರೆ, ಡೈಸಿ ಬೋಪಣ್ಣ, ನೀತು ಮತ್ತು ಭಾವನಾ ರಾವ್ ನಾಯಕಿಯಾಗಿದ್ದರು. ಜೊತೆಗೆ ಅನಂತ್ ನಾಗ್, ಪದ್ಮಜಾ ರಾವ್ ಇದ್ದರು. ಮುಂಗಾರು ಮಳೆ ಭರ್ಜರಿ ಹಿಟ್ ಆದ ಮೇಲೆ ರಿಲೀಸ್ ಆಗಿದ್ದ ಸಿನಿಮಾ ಗಾಳಿಪಟ. ಆಗಿನ ಕಾಲಕ್ಕೆ 12 ಕೋಟಿ ಬಿಸಿನೆಸ್ ಮಾಡಿದ್ದ ಚಿತ್ರವದು.

  ಗಾಳಿಪಟಕ್ಕೆ ಹರಿಕೃಷ್ಣ ಸಂಗೀತವಿತ್ತು. ಗಾಳಿಪಟ 2ಗೆ ಅರ್ಜುನ್ ಜನ್ಯಾ ಸಂಗೀತವಿದೆ. ಡಿಸೆಂಬರ್ 2, 2019ರಲ್ಲಿ ಸೆಟ್ಟೇರಿದ ಗಾಳಿಪಟ 2 ಕೋವಿಡ್ 19ನಿಂದಾಗಿ ವಿಳಂಬವಾಗಿತ್ತು. ಈಗ ಹೆಚ್ಚೂ ಕಡಿಮೆ ಎರಡೂವರೆ ವರ್ಷಗಳ ನಂತರ ರಿಲೀಸ್ ಆಗುತ್ತಿದೆ. ನಿರೀಕ್ಷೆಗಳು ದೊಡ್ಡದಾಗಿವೆ.

 • ಭಟ್ಟರು ಸತೀಶ್ ಡಿಎನ್‍ಎ ಒಂದಾಯ್ತು..!

  ಭಟ್ಟರು ಸತೀಶ್ ಡಿಎನ್‍ಎ ಒಂದಾಯ್ತು..!

  ನೀನಾಸಂ ಸತೀಶ್ ಭಟ್ಟರ ಕ್ಯಾಂಪಿನ ಹುಡುಗರೇ. ಯೋಗರಾಜ್ ಭಟ್ಟರ ಚಿತ್ರಗಳಿಂದಲೇ ಹೀರೋ ಆದ ನೀನಾಸಂ ಸೀಶ್ ಈಗ ಸ್ಟಾರ್ ನಟ. ಅವರಿಬ್ಬರೂ ಈಗ ಇನ್ನೊಬ್ಬ ಹೊಸ ಪ್ರತಿಭೆಗಾಗಿ ಒಂದಾಗಿರುವುದೇ ಡಿಎನ್‍ಎ ವಿಶೇಷ.

  ಪ್ರಕಾಶ್ ಮೆಹು ರಾಜ್ ಎಂಬುವವರು ನಿರ್ದೇಶಿಸಿರುವ ಸಿನಿಮಾ ಡಿಎನ್‍ಎ. ಚಿತ್ರರಂಗದಲ್ಲಿ 25 ವರ್ಷ ಕೆಲಸ ಮಾಡಿದ ನಂತರ ಈಗ ನಿರ್ದೇಶಕರಾಗಿದ್ದಾರೆ. ಮಾತೃಶ್ರೀ ಬ್ಯಾನರಿನಲ್ಲಿ ಮೈಲಾರಿ ನಿರ್ಮಿಸಿರುವ ಚಿತ್ರದಲ್ಲಿ ಅಚ್ಯುತ್ ಕುಮಾರ್ ಅವರೇ ಹೀರೋ.  ಸಂಬಂಧಗಳ ಕುರಿತು ಇರುವ ಚಿತ್ರವಿದು ಎಂದಿದ್ದಾರೆ ಡೈರೆಕ್ಟರ್.

  ಅಂದಹಾಗೆ ಈ ಚಿತ್ರಕ್ಕೆ ಯೋಗರಾಜ್ ಭಟ್ ನಾವ್ಯಾರು.. ಎಲ್ಲಿಂದ ಬಂದಿದ್ದೀವಿ.. ನಾವ್ಯಾಕೆ ಸ್ವಾಮಿ.. ಹಿಂಗಿದ್ದೀವಿ..

  ಅನ್ನೋ ಹಾಡು ಬರೆದಿದ್ದಾರೆ. ಅವರದ್ದೇ ಸ್ಟೈಲಿನ ಫಿಲಾಸಫಿ ಸಾಹಿತ್ಯದ ಹಾಡು. ಈ ಹಾಡನ್ನು ಹಾಡಿರುವುದು ನೀನಾಸಂ ಸತೀಶ್ ಎನ್ನುವುದು ವಿಶೇಷ.

 • ಭಟ್ಟರು, ಹರಿಯ ಶೃಂಗಾರ ಶತಕ

  yograj bhatt's sringara kavya

  ಭರ್ತೃಹರಿಯ ಶೃಂಗಾರ ಶತಕ, ಶೃಂಗಾರ ಕಾವ್ಯಗಳಲ್ಲಿ ಬಹುದೊಡ್ಡ ಕೃತಿ. ಈಗ ಅಂತಾದ್ದೊಂದು ಶೃಂಗಾರ ಕಾವ್ಯ ಸೃಷ್ಟಿಸಿದ್ದಾರೆ ಯೋಗರಾಜ ಭಟ್ಟರು. ಭಟ್ಟರ ನಿರ್ದೇಶನದ ಪಂಚತಂತ್ರ ಸಿನಿಮಾದಲ್ಲೊಂದು ಶೃಂಗಾರ ಲೋಕ ಸೃಷ್ಟಿಸಿದ್ದಾರೆ ಯೋಗರಾಜ್ ಭಟ್.

  ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ

  ನಾಚಿಕೆ ನಮ್ಮ ಜೊತೆ ಠೂ ಬಿಟ್ಟಿದೆ

  ಕಳ್ಳಾಟಕ್ಕೆ ಮಳ್ಳಾ ಮನ ಛೀ ಎಂದಿದೆ

  ಚೆಲ್ಲಾಟಕೆ ಚೆಲುವು ಹೂ ಎಂದಿದೆ..

  ಹೀಗೆ ಶುರುವಾಗುವ ಹಾಡಿನಲ್ಲಿ ಎಲ್ಲಿಯೂ ಪೋಲಿತನವಿಲ್ಲ. ಪ್ರಣಯದ ದಿವ್ಯಾನುಭೂತಿಯ ಸ್ಪರ್ಶವಿದೆ. ಹಾಡಿಗೆ ಹಾಲಿವುಡ್ ಶೈಲಿಯ ಕಂಟೆಂಪೊರರಿ ನೃತ್ಯ ಸಂಯೋಜಿಸಿದ್ದಾರೆ ಇಮ್ರಾನ್ ಸರ್ದಾರಿಯಾ.

  ಶೃಂಗಾರ ಕಾವ್ಯದಲ್ಲಿ ವಿಹಾನ್ ಮತ್ತು ಸೋನಲ್ ಮೊಂತೆರೋ ಬಾಗಿ ಬಳುಕಿದ್ದಾರೆ. ಬಿಳಿ ಬಣ್ಣದ ತೆಳು ಬಟ್ಟೆಯಲ್ಲಿ ದೃಶ್ಯ ಶ್ರೀಮಂತಿಕೆಯ ಜೊತೆಗೆ ಶೃಂಗಾರ ವೈಭವವೂ ಎದ್ದು ಕಾಣುವಂತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery