` yogaraj bhat, - chitraloka.com | Kannada Movie News, Reviews | Image

yogaraj bhat,

 • ಹಂಸಲೇಖಾಗೆ ಭಟ್ಟರಿಂದ ಹಾರ್ಮೋನಿಯಂ ಕಾಣಿಕೆ

  yogaraj bhatt starts new venture with hamsalekha

  ಯೋಗರಾಜ್ ಭಟ್ಟರು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಪಂಚರಂಗಿ ಅನ್ನೋ ಸಿನಿಮಾ ನಿರ್ದೇಶಿಸುತ್ತಿರುವ ಯೋಗರಾಜ್ ಭಟ್, ಈಗ ಅದೇ ಹೆಸರಿನಲ್ಲಿ ಆಡಿಯೋ ಕಂಪೆನಿ ಹುಟ್ಟುಹಾಕಿದ್ದಾರೆ. ಆ ಕಂಪೆನಿ ಉದ್ಘಾಟಿಸಿದ್ದು ನಾದಬ್ರಹ್ಮ ಹಂಸಲೇಖ ಅನ್ನೋದು ವಿಶೇಷ. ಹಾಗೆ ತಮ್ಮ ಆಡಿಯೋ ಕಂಪೆನಿ ಉದ್ಘಾಟಿಸಿದ ಸಂಗೀತ ಸಾಮ್ರಾಟನಿಗೆ ಯೋಗರಾಜ್ ಭಟ್ ಕೊಟ್ಟ ಉಡುಗೊರೆ ಹಾರ್ಮೋನಿಯಂ.

  ಕಂಪೆನಿಯಿಂದ ಮೊದಲನೆಯದಾಗಿ ಬಿಡುಗಡೆಯಾದ ಆಡಿಯೋ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ್ದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಚಿತ್ರದ ಆಡಿಯೋ ಬಿಡುಗಡೆ ಮೂಲಕ ಭಟ್ಟರು ಹೊಸ ಸಾಹಸ ಆರಂಭಿಸಿಬಿಟ್ಟಿದ್ದಾರೆ. ಶುಭವಾಗಲಿ.

 • ಹಾಡಿನ ಟೀಸರ್`ನಲ್ಲೇ ಸಖತ್ ಗಾಳಿಪಟ ಬಿಟ್ರು ಭಟ್ರು..!

  ಹಾಡಿನ ಟೀಸರ್`ನಲ್ಲೇ ಸಖತ್ ಗಾಳಿಪಟ ಬಿಟ್ರು ಭಟ್ರು..!

  ಯೋಗರಾಜ್ ಭಟ್ಟರ ಸಿನಿಮಾ ಎಂದ ಮೇಲೆ ಒಂದಿಷ್ಟು ತರಲೆ.. ವೇದಾಂತ.. ಇರಲೇಬೇಕು. ಚಿತ್ರ ವಿಚಿತ್ರ ಅನ್ನಿಸುವಂತಾದ್ದು ಏನೊಂದಾದರೂ ಇರಲಾಕಾ ಬೇಕು.  ಗಾಳಿಪಟ 2 ನಲ್ಲೂ ಅಂತಹದ್ದೊಂದು ಬರೋಬ್ಬರಿ ತರಲೆ ಪಂಚ್ ಇಟ್ಟೇ ಹಾಡಿನ ಟೀಸರ್ ಬಿಟ್ಟಾರಾ ಯೋಗರಾಜ್ ಭಟ್ರು. ಇದು ಗಾಳಿಪಟ 2 ಚಿತ್ರದಿಂದ ಹೊರಬರುತ್ತಿರೋ ಮೊದಲನೇ ಸಾಂಗ್ನ ಟೀಸರು.

  ಫೇಲ್ ಆಗುವ ಹುಡುಗ ಒಂದೊಂದೇ ಸಬ್ಜೆಕ್ಟ್ ಹೋಯ್ತು.. ಹೋಯ್ತು.. ಅಂತ ಗೆಳೆಯನಿಗೆ ಹೇಳ್ತಿರೋವಾಗ.. ಟೋಟಲ್ ಆಗಿ ಹೋಯ್ತ್ ಅಂತಾ ಹೇಳ್ಬಾರ್ದಾ ಎನ್ನೋ ಸಲಹೆ.. ಬಿಡಿ ಬಿಡಿಯಾಗಿ ಹೇಳಿದ್ರೆ ಯಾವ್ದಾದ್ರೂ ಒಂದ್ ಪಾಸಾಗೇತಿ ಅಂದ್ಕೋತಾರೆ ಅನ್ನೋ ಬುದ್ದಿವಂತನ ಮಾತಿನೊಂದಿಗೆ ಹಾಡಿನ ಟೀಸರ್ ಕೊಟ್ಟಿದ್ದಾರೆ ಭಟ್ಟರು. ಜೊತೆಗೆ ಬಾಯ್ ಬಡ್ಕೊಳ್ಳೋ ಸ್ಟೂಡೆಂಟ್ಸು.

  ಭಟ್ಟರೊಂದಿಗೆ 2ನೇ ಗಾಳಿಪಟ ಹಾರಿಸ್ತಿರೋದು ಗಣೇಶ್, ಅನಂತ ನಾಗ್, ದಿಗಂತ್, ಲೂಸಿಯಾ ಪವನ್, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ.. ಮತ್ತಿತರರು. ಬುಲೆಟ್ ಪ್ರಕಾಶ್ ನಟಿಸೊರೋ ಕೊನೆಯ ಸಿನಿಮಾ ಇದು.

  ಉಮಾ ಎಂ. ರಮೇಶ್ ರೆಡ್ಡಿ ನಿರ್ಮಾಣದ ಸಿನಿಮಾವಿದು. ಅರ್ಜುನ್ ಜನ್ಯಾ ಸಂಗೀತ ಇದೆ. ಹಾಡು ರಿಲೀಸ್ ಆಗೋದು ಏಪ್ರಿಲ್ 21ಕ್ಕೆ. ಕಾಯ್ತಾ ಇರಿ.

 • ಹಿಮಾಚಲದಲ್ಲೇ ಗಾಳಿಪಟ

  yogaraj bhat plans gaalipata 2 shooting in himachal pradesh

  ಎಲ್ಲವೂ ಪ್ಲಾನ್ ಪ್ರಕಾರವೇ ನಡೆದಿದ್ದರೆ ಇಷ್ಟು ಹೊತ್ತಿಗೆ ಗಾಳಿಪಟ 2 ಚಿತ್ರ ವಿದೇಶದಲ್ಲೂ ಶೂಟಿಂಗ್ ಮುಗಿಸಿಕೊಂಡು ಬಂದು ಪೋಸ್ಟ್ ಪ್ರೊಡಕ್ಷನ್ ಫೈನಲ್ ಸ್ಟೇಜ್‍ನಲ್ಲಿರುತ್ತಿತ್ತು. ಎಲ್ಲ ಯೋಜನೆಗಳನ್ನೂ ನುಂಗಿಹಾಕಿದ್ದು ಕಣ್ಣಿಗೆ ಕಾಣದ ಕೊರೊನಾ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಿದೆ.

  `ಮೊದಲು ನಮ್ಮ ಪ್ಲಾನ್ ಇದ್ದದ್ದು ಉತ್ತರ ಭಾರತದಲ್ಲಿ ಶೂಟಿಂಗ್ ಅಂತ. ಆದರೆ ಅದು ಆನಂತರ ಯೂರೋಪ್‍ಗೆ ಶಿಫ್ಟ್ ಆಗಿತ್ತು. ಈಗ ವಿದೇಶಗಳಿಗೆ ಹೋಗೋ ಹಾಗಿಲ್ಲ. ಹೀಗಾಗಿ ಹಿಮಾಚಲ ಪ್ರದೇಶದಲ್ಲಿ ಶೂಟಿಂಗ್ ಮಾಡೋ ಪ್ಲಾನ್ ಇದೆ. ಲೊಕೇಷನ್ ಕೂಡಾ ಹೊಂದಾಣಿಕೆಯಾಗುತ್ತಿದೆ' ಎಂದಿದ್ದಾರೆ ಯೋಗರಾಜ್ ಭಟ್.

  ಗಣೇಶ್, ದಿಗಂತ್, ಲೂಸಿಯಾ ಪವನ್ ಮತ್ತು ಅನಂತ್ ನಾಗ್ ಪ್ರಧಾನ ಭೂಮಿಕೆಯಲ್ಲಿರುವ ಚಿತ್ರವಿದು.

 • ಹೀರೋಯಿನ್ ಯಕ್ಷಗಾನದ ಗಾಳಿಪಟ 2

  gaalipata 2 will have yakshagana by heroine

  ಗಾಳಿಪಟ 2 ಚಿತ್ರದಲ್ಲಿ ಡಿಫರೆಂಟ್ ಡಿಫರೆಂಟ್ ಲವ್ ಸ್ಟೋರಿಗಳಿವೆ ಅನ್ನೊದನ್ನು ಭಟ್ಟರು ಹೇಳಿದ್ದರು. ಅಲ್ಲೊಂದು ಯಕ್ಷಗಾನ ಲವ್ ಸ್ಟೋರಿ ಇದೆ ಅನ್ನೋ ಸುಳಿವು ಈಗ ಬರ್ತಾ ಇದೆ. ಪಂಚತಂತ್ರದ ಶೃಂಗಾರದ ಹೊಂಗೆಮರದ ಹೂವು ಸೋನಲ್, ಈಗ ಯಕ್ಷಗಾನ ಕಲಿಯೋಕೆ ಹೊರಟಿದ್ದಾರೆ.

  ಗಾಳಿಪಟ 2 ಚಿತ್ರದ ನಾಯಕಿಯಾಗಿರೋ ಸೋನಲ್ ಅವರಿಗೆ ಗಾಳಿಪಟ 2ನದಲ್ಲಿರೋದು ಯಕ್ಷಗಾನ ಕಲಾವಿದೆಯ ಪಾತ್ರ. ಕರಾವಳಿಯವರಾದರೂ ಯಕ್ಷಗಾನ ನೋಡಿದ್ದರೂ.. ಯಕ್ಷಗಾನ ಕಲಿತಿಲ್ಲ. ಆದರೆ, ಈಗ ಪಾತ್ರಕ್ಕಾಗಿ 2 ವಾರ ತರಬೇತಿ ಪಡೆದುಕೊಳ್ಳುತ್ತಿದ್ದಾರೆ ಸೋನಲ್.

  ನಾಯಕಿಯೊಬ್ಬಳು ಯಕ್ಷಗಾನ ಕಲಾವಿದೆಯಾಗಿ ನಟಿಸುವುದು ಕನ್ನಡ ಚಿತ್ರರಂಗಕ್ಕೆ ಹೊಸದು. ಯಕ್ಷಗಾನದಲ್ಲಿ ಹಲವಾರು ಮಹಿಳಾ ಕಲಾವಿದೆಯರಿದ್ದರೂ, ಸಿನಿಮಾದಲ್ಲಿ ಯಕ್ಷಗಾನ ಮಾಡುವ ಸಾಹಸಕ್ಕೆ ಯಾವುದೇ ಕಲಾವಿದೆ ಪ್ರಯತ್ನ ಮಾಡಿಲ್ಲ. ಹೀಗಾಗಿ ನನಗೆ ಇದು ಚಾಲೆಂಜಿಂಗ್ ಎಂದಿದ್ದಾರೆ ಸೋನಲ್.

 • ಹೊಂಗೆಮರದ ಶೃಂಗಾರದಲ್ಲಿ.. ಯೋಗರಾಜ್ ಭಟ್ಟರ ಸೌಂದರ್ಯ ಸಮರ

  yogaraj bhatt's hongemaradha sringaradhalli song

  ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ.. ನಾಚಿಕೆಯು ನನ್ನಾ ಜೊತೆ ಠೂ ಬಿಟ್ಟಿದೆ.. ಎಂಬ ಸಾಲುಗಳ ಮೂಲಕವೇ ಶೃಂಗಾರದ ಪರಾಕಾಷ್ಠೆಗೆ ಕೊಂಡೊಯ್ದಿದ್ದ ಭಟ್ಟರು, ಈಗ ಹಾಡಿನ ಲಿರಿಕಲ್ ವಿಡಿಯೋದಲ್ಲೂ ಶೃಂಗಾರಧಾರೆಯನ್ನೇ ಸುರಿಸಿಬಿಟ್ಟಿದ್ದಾರೆ. ಅದು ಅದ್ಭುತ ಎನ್ನಿಸುವ ಪೇಂಟಿಂಗುಗಳ ಮೂಲಕ.

  ಇದುವರೆಗೆ ಯಾರೂ ಇಂತಹದ್ದೊಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ. ಆದರೆ, ಭಟ್ಟರೇ ಬೇರೆ.. ಭಟ್ಟರ ಸ್ಟೈಲೇ ಬೇರೆ.. ಭಟ್ಟರ ಶೃಂಗಾರವೂ ಬೇರೆ.. ಹೀಗಾಗಿಯೇ ಪಂಚತಂತ್ರ ಚಿತ್ರದ ಈ ಹಾಡಿನ ಜೊತೆ 4 ಪೇಂಟಿಂಗ್ ಹೊರತಂದಿದ್ದಾರೆ ಭಟ್ಟರು. ಆ ಪೇಂಟಿಂಗುಗಳ ಮೇಲೆ ಹಾಡಿನ ಸಾಹಿತ್ಯವೂ ಇರಲಿದೆ. 

  ಹಾಡು ಓದಿಕೊಳ್ಳೋದಾ.. ಪೇಂಟಿಂಗ್ ನೋಡಿ ಶೃಂಗಾರದ ಹೂವು ಅರಳಿಸೋದಾ.. ಕಲ್ಪನೆಯ ಶೃಂಗಾರ ಲೋಕದಲ್ಲಿ ಏರಿ ಹೋಗೋದ.. ಅದು ಚಿತ್ರರಸಿಕರಿಗೆ ಬಿಟ್ಟ ಮಾತು.

  ವಿಹಾನ್ ಮತ್ತು ಸೋನಲ್ ಅಷ್ಟೇ ಅದ್ಭುತವಾಗಿ ನಟಿಸಿದ್ದಾರಂತೆ. ಆ ಶೃಂಗಾರ ಕಾವ್ಯವನ್ನು ನೋಡಲು ಚಿತ್ರ ಬಿಡುಗಡೆವರೆಗೂ ಕಾಯಬೇಕಂತೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery