` krishna g rao, - chitraloka.com | Kannada Movie News, Reviews | Image

krishna g rao,

  • ಕೆಜಿಎಫ್ ತಾತಗೆ ಏನಾಗಿತ್ತು?

    ಕೆಜಿಎಫ್ ತಾತಗೆ ಏನಾಗಿತ್ತು?

    ಕೆಜಿಎಫ್ ಚಿತ್ರದ ಆ ಒಂದು ಪುಟ್ಟ ಪಾತ್ರ ಕೃಷ್ಣ ಜಿ. ರಾವ್ ಅವರನ್ನು ಜನಪ್ರಿಯತೆಯ ತುತ್ತುತುದಿಗೇರಿಸಿತ್ತು. ಪೋಷಕ ಕಲಾವಿದರಾಗಿ ಗುರುತಿಸಿಕೊಂಡಿದ್ದ ಅವರಿಗೆ ಐಡೆಂಟಿಟಿ ಕೊಟ್ಟ ಮೊದಲ ಸಿನಿಮಾ ಕೆಜಿಎಫ್. 73 ವರ್ಷದಲ್ಲಿ ಮೊದಲ ಜನಪ್ರಿಯತೆ ಪಡೆದ ಕೃಷ್ಣ ಜಿ.ರಾವ್ ಅವರಿಗೆ ಶ್ವಾಸಕೋಶದ ಸೋಂಕು ತಗುಲಿತ್ತು. ತಕ್ಷಣವೇ ಅವರನ್ನು ಸೀತಾ ಸರ್ಕಲ್‍ನಲ್ಲಿರೋ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಶ್ವಾಸಕೋಶದ ಸೋಂಕು ತೀವ್ರವಾಗಿತ್ತ. ಜೊತೆಗೆ ವಯಸ್ಸೂ ಆಗಿತ್ತು.

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾದಲ್ಲಿ ನಟ ಕೃಷ್ಣ ರಾವ್ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದರು. ಚಿಕ್ಕ ಪಾತ್ರವೇ ಆಗಿದ್ದರೂ, ಕೃಷ್ಣ ರಾವ್ ಅವರಿಗೆ ಅಪಾರ ಖ್ಯಾತಿ ತಂದುಕೊಟ್ಟಿತ್ತು. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ಕೃಷ್ಣ ರಾವ್ ಅವರ ಬಾಯಿಂದ ಬಂದ ಡೈಲಾಗ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ‘ಕೆಜಿಎಫ್’ ಸಿನಿಮಾದಿಂದಾಗಿ ನಟ ಕೃಷ್ಣ. ಜಿ. ರಾವ್ ಅವರು ‘ಕೆಜಿಎಫ್ ತಾತ’ ಎಂದೇ ಫೇಮಸ್ ಆಗಿದ್ದರು.

    ಕೆಜಿಎಫ್ ಬಳಿಕ ನ್ಯಾನೋ ನಾರಾಯಣಪ್ಪ ಚಿತ್ರದಲ್ಲಿ ನಟಿಸುತ್ತಿದ್ದ ಕೃಷ್ಣ ಜಿ.ರಾವ್ ಹತ್ತು ತಲೆಯ ರಾವಣನ ಅವತಾರದಲ್ಲಿ ಗ್ಲಾಸ್, ಕಿರೀಟ ಧರಿಸಿ ಫಸ್ಟ್ ಲುಕ್‍ಗೆ ಪೋಸು ಕೊಟ್ಟಿದ್ದರು. ಸಿನಿಮಾ ಕಂಪ್ಲೀಟ್ ಆಗುವ ಮುನ್ನವೇ ಕೃಷ್ಣ ಜಿ.ರಾವ್ ಇಹಲೋಕ ತ್ಯಜಿಸಿದ್ದಾರೆ.