ಲೂಸಿಯಾ, ಯು ಟರ್ನ್ ಖ್ಯಾತಿಯ ಪವನ್ ಕುಮಾರ್ ಮಲಯಾಳಂ ನಟ ಫಹಾದ್ ಫಾಸಿಲ್
ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಈ ಸಿನಿಮಾ ಬಗ್ಗೆ ಕುತೂಹಲಕಾರಿ ಮಾಹಿತಿಯೊಂದು ಹೊರಬಿದ್ದಿದೆ.ಹೊಂಬಾಳೆ ನಿರ್ಮಾಣದ ಕಾಂತಾರ ಚಿತ್ರವೂ ಸೂಪರ್ ಸಕ್ಸಸ್ ಕಾಣುತ್ತಿದ್ದು ಇದರ ಬೆನ್ನೇಲ್ಲೇ ಧೂಮಂ ಘೋಷಣೆಯಾಗಿದೆ.
ಫಹಾದ್ ಫಾಸಿಲ್ ಹಾಗೂ ಪವನ್ ಕುಮಾರ್ ಸಿನಿಮಾಕ್ಕೆ ಹೊಂಬಾಳೆ ಫಿಲ್ಮ್ಸ್ ಹಣ ಹೂಡಲಿದೆ.ಈ ಚಿತ್ರದಲ್ಲಿ 'ಸೂರರೈ ಪೋಟ್ರುಗೆ ರಾಷ್ಟ್ರ ಪ್ರಶಸ್ತಿ ಪಡೆದ ಅಪರ್ಣಾ ಬಾಲಮುರಳಿ ನಾಯಕಿ.
ಪ್ರೀತಾ ಜಯರಾಮನ್ ಕ್ಯಾಮರಾ ನಿರ್ವಹಸಿದರೆ, ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನೀಡುತ್ತಿದ್ದಾರೆ.
ಮಲಯಾಳಂ, ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.
ಹೊಂಬಾಳೆ ಕೈತುಂಬಾ ಚಿತ್ರಗಳಿವೆ. ಜಗ್ಗೇಶ್-ಸಂತೋಷ್ ಆನಂದರಾಮ್ ಕಾಂಬಿನೇಷನ್ನಿನ ರಾಘವೇಂದ್ರ ಸ್ಟೋರ್ಸ್ ತೆರೆಗೆ ಸಿದ್ಧವಾಗಿದೆ. ಪ್ರಶಾಂತ್ ನೀಲ್-ಪ್ರಭಾಸ್ ಜೊತೆಗಿನ ಚಿತ್ರ ಸಲಾರ್ ಅಂತಿಮ ಹಂತದಲ್ಲಿದೆ. ರಕ್ಷಿತ್ ಶೆಟ್ಟಿ ಜೊತೆಗೆ ರಿಚರ್ಡ್ ಆಂಟನಿ ತೆರೆಗೆ ಸಿದ್ಧವಾಗಬೇಕಿದೆ. ಇದರ ಜೊತೆ ಫಹಾದ್ ಫಾಸಿಲ್-ಪವನ್ ಕುಮಾರ್ ಸಿನಿಮಾ ಧೂಮಂ ಸಿದ್ಧವಾಗುತ್ತಿದೆ.
ಪವನ್ ಕುಮಾರ್ ದ್ವಿತ್ವ ಚಿತ್ರ ಮಾಡಬೇಕಿತ್ತು. ಪುನೀತ್ ಅವರಿಗೆ ಮಾಡಬೇಕಿದ್ದ ಅದೇ ಕಥೆಯನ್ನು ಪವನ್, ಫಹಾದ್ ಅವರಿಗೆ ನಿರ್ದೇಶಿಸುತ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಪವನ್ ಅವರಿಗೂ ಗಾಳಿಪಟ 2 ನಟರಾಗಿ ಸಕ್ಸಸ್ ಆದ ನಂತರ ಸಿದ್ಧವಾಗುತ್ತಿರುವ ಸಿನಿಮಾ ಧೂಮಂ.