` guru shishyaru, - chitraloka.com | Kannada Movie News, Reviews | Image

guru shishyaru,

 • 2ನೇ ವಾರಕ್ಕೆ ಕಾಂತಾರ. 3ನೇ ವಾರಕ್ಕೆ ಗುರು ಶಿಷ್ಯರು

  2ನೇ ವಾರಕ್ಕೆ ಕಾಂತಾರ. 3ನೇ ವಾರಕ್ಕೆ ಗುರು ಶಿಷ್ಯರು

  ಕನ್ನಡ ಚಿತ್ರರಂಗದಲ್ಲೀಗ ಸಂಭ್ರಮ. ದಸರೆಗೂ ಮುಂಚೆ ಬಂದ ಗುರು ಶಿಷ್ಯರು ಸೂಪರ್ ಹಿಟ್. ಶರಣ್-ನಿಶ್ವಿಕಾ ಜೋಡಿಯ ಖೋಖೋ ಆಟದ ಹಿನ್ನೆಲೆಯಲ್ಲಿ ಮೂಡಿ ಬಂದ ಸಿನಿಮಾ ಗುರು ಶಿಷ್ಯರು. ಜಡೇಶ್ ಕುಮಾರ್ ಹಂಪಿ ಭರವಸೆಯ ನಿರ್ದೇಶಕ ಅನ್ನೋದನ್ನ ಸಾಬೀತು ಮಾಡಿದರು. ಕಾಮಿಡಿ ಟ್ರ್ಯಾಕ್ ಜೊತೆ ಜೊತೆಗೇ ಸಾಗಿದ ಖೋಖೋ ಸಿನಿಮಾ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿತು. ಸಿನಿಮಾ ಈಗಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ವಾರ ಭರ್ಜರಿ 3ನೇ ವಾರಕ್ಕೆ ಹೆಜ್ಜೆಯಿಟ್ಟಿದ್ದಾರೆ ಗುರು ಶಿಷ್ಯರು.

  ಮತ್ತೊಂದೆಡೆ ಕನ್ನಡ ಚಿತ್ರರಂಗದಲ್ಲೇ ದಾಖಲೆ ಬರೆಯುತ್ತಿರುವ ಕಾಂತಾರ. 2ನೇ ವಾರಕ್ಕೆ ಕಾಲಿಟ್ಟಿದೆ. ಕಿರಿಕ್ ಪಾರ್ಟಿ ಸಿನಿಮಾ ಇಡೀ ಜರ್ನಿಯಲ್ಲಿ ಗಳಿಸಿದ್ದ ಹಣವನ್ನೆಲ್ಲ ಕಾಂತಾರಾ ಮೂರು ದಿನಗಳಲ್ಲೇ ಗಳಿಸಿದೆ. ಈಗಲೂ ಹೌಸ್ ಹೌಸ್ ಫುಲ್. ರಿಷಬ್ ಶೆಟ್ಟಿಗೆ ಹೋದಲ್ಲಿ ಬಂದಲ್ಲಿ ದೈವ ನಮಸ್ಕಾರ ಸಿಗುತ್ತಿದೆ. ಅದು ಅವರಿಗಲ್ಲ, ಅವರೊಳಗಿನ ದೈವಕ್ಕೆ. ಸಪ್ತಮಿ ಗೌಡ ರೋಮಾಂಚನ ಹುಟ್ಟಿಸಿದ್ದಾರೆ. ಹೊಂಬಾಳೆ ಈಗ ಸಿನಿಮಾವನ್ನು ಬೇರೆ ಭಾಷೆಯಲ್ಲೂ ತರೋಕೆ ಮುಂದಾಗಿದ್ದು ಅಕ್ಟೋಬರ್ 9ರಂದು ಹಿಂದಿಯ ಟ್ರೇಲರ್ ರಿಲೀಸ್ ಆಗಲಿದೆ. ಶೀಘ್ರದಲ್ಲೆ ಇತರೆ ಭಾಷೆಗಳಿಗೂ ಡಬ್ ಆಗಲಿದೆ.

 • Guru Shishyaru Movie Review, Chitraloka Rating 4/5

  Guru Shishyaru Movie Review, Chitraloka Rating 4/5

  Film: Guru Sishyaru

  Cast: Sharan, Nishvika Naidu, Suresh Heblikar, Dattanna, Apurva Kasaravalli, Hruday, Ekanth, Harshit

  Director: Jadesh Kumar Hampi

  Duration: 2 Hours 43 minutes

  Language: Kannada

  Certificate: U

  Stars: 4

  An unwilling hero’s heroics

  Sports films aren’t very common in Sandalwood. Over the decades, we have seen only a handful of them. Sports being central to the plot have never been a popular subject. Guru Sishyaru is however a welcome change. It is an oasis in this drought of such stories.

  Guru Sishyaru is undoubtedly one of the best sports films to come out of Sandalwood and an perfect entertainer for the entire family. It is a film that is made for the big screen where you get to become part of the action.  There is tremendous effort that has gone into making this a a big-screen experience and it shows.

  Manohara (Sharan) is a lazy dandy who is ageing but does not find any work interesting. He is forced to take up a drill instructor’s job in a village school and reluctantly agrees for the sake of his old master. The village he goes to turns out to be in the midst of all kinds of problems. The school especially, where he is to become an instructor is falling apart, literally. Not surprisingly, our hero has to mentor it.

  In the meantime, there is a kho-kho team in the village which comes under his mentorship. But our hero has a easier plan to make it look successful. Things come crashing down and it is not just Manohara’s reputation at stake now. It is the entire village. How the underdog master, trains the underdog team of Kho-kho players to emerge successful forms the rest of the story.  

  It is a clear-cut narrative which does not deviate from its motive. There is of-course a love angle that Manohara has to deal with and the usual capers that village life brings about. But when what he had not bargained for hits him, it is for the tough man in him to do the talking. Manohara has to fight for his self-pride and to save the village.

  We know from the beginning that he is destined for this task. How he does it and how Jadesh Kumar showcases this heroic act of the underdog is the more serious, but also more entertaining second half of the film. Almost the entire second half of the film is dedicated to the kho-kho match. To the director’s credit he makes it worthwhile. The fun, thrills, excitement of the game and it being central to the plot brings out the cheering from the audience.

  The script does not stick just to Sharan. There are stories of all the other characters entwined in the narrative. Each young player in the team has a story of his own and so do many of the other characters. That is what makes the film believable. It does not go over the top but uses interesting incidents to prop up the main plot.

  Technically, the film is bang on and provides the right impetus to the narrative. The performances of the actors are also on the spot. Star kids making their debut in this film have performed well and should make these Sandalwood stars proud.

  And Jadesh Kumar should be proud for having made a sensible, entertaining and worthy film.

  -S Shyam Prasad

 • ಖೋಖೋ ಸಿನಿಮಾ ಗುರು ಶಿಷ್ಯರು ನೋಡಬೇಕಾದ ಸಿನಿಮಾ : ಶರಣ್ ಕೊಟ್ಟರು ಕಾರಣ

  ಖೋಖೋ ಸಿನಿಮಾ ಗುರು ಶಿಷ್ಯರು ನೋಡಬೇಕಾದ ಸಿನಿಮಾ : ಶರಣ್ ಕೊಟ್ಟರು ಕಾರಣ

  ಗುರು ಶಿಷ್ಯರು ಥಿಯೇಟರುಗಳಲ್ಲಿದೆ. ಮೊದಲಿಗೆ ಗಮನ ಸೆಳೆದಿದ್ದು ಗುರು ಶಿಷ್ಯರು ಚಿತ್ರದ ಟೈಟಲ್. ಅದು ವಿಷ್ಣುವರ್ಧನ್-ಮಂಜುಳಾ-ದ್ವಾರಕೀಶ್ ಸೇರಿದಂತೆ ನವರಸರತ್ನಗಳು ನಟಿಸಿದ್ದ 80ರ ದಶಕದ ಅದ್ಭುತ ಕಾಮಿಡಿ ಸಿನಿಮಾ. ಆ ಟೈಟಲ್ ಇಟ್ಟುಕೊಂಡು ಮಾಡಿದ ಸಿನಿಮಾದಲ್ಲಿರೋದು ಕಾಮಿಡಿ ಕಥೆಯಲ್ಲ.. ಖೋಖೋ ಕಥೆ.  

  ಅಲ್ಲದೆ ಮಾರ್ಗದರ್ಶಿ ಅನ್ನೋ ಚಿತ್ರದಲ್ಲಿ ಡಾ.ರಾಜ್ ಹಾಡಿದ್ದ ಹಾಡನ್ನು.. ಅದೂ ಕುವೆಂಪು ವಿರಚಿತ ಗೀತೆ ನಡೆ ಮುಂದೆ.. ನಡೆ ಮುಂದೆ.. ಹಾಡನ್ನು ಈ ಚಿತ್ರದಲ್ಲಿ ಮತ್ತೆ ಬಳಸಿಕೊಳ್ಳಲಾಗಿದೆ. ಆ ಗೀತೆಗೆ ಹೆಚ್ಚು ಕಡಿಮೆ ಶತಮಾನದ ಇತಿಹಾಸವಿದೆ.

  ಚಿತ್ರದಲ್ಲಿ ನಾಯಕ ಶರಣ್. ನಾಯಕಿ ನಿಶ್ವಿಕಾ ನಾಯ್ಡು. ನಿರ್ದೇಶಕ ಜಡೇಶ್ ಕುಮಾರ್ ಹಂಪಿ. ಅಲ್ಲದೆ ಚಿತ್ರದಲ್ಲಿ ನೆನಪಿರಲಿ ಪ್ರೇಮ್, ಶರಣ್, ನವೀನ್ ಕೃಷ್ಣ, ರವಿಶಂಕರ್ ಗೌಡ, ಬುಲೆಟ್ ಪ್ರಕಾಶ್ ಹಾಗೂ ಶಾಸಕ ರಾಜೂಗೌಡ ಪುತ್ರರು ನಟಿಸಿದ್ದಾರೆ.

  ಚಿತ್ರದ ಹಾಡುಗಳು ನಡೆ ಮುಂದೆ.. ನಡೆ ಮುಂದೆ.., ಆಣೆ ಮಾಡಿ ಹೇಳುತೀನಿ ನೀನು ನನ್ನವಳು.. ಹಾಡು ಹಿಟ್ ಆಗಿವೆ. ಆದರೆ.. ಇವೆಲ್ಲವನ್ನೂ ಮೀರಿದ ಇನ್ನಷ್ಟು ಕಾರಣಗಳನ್ನು ಕೊಟ್ಟಿದ್ದಾರೆ ಚಿತ್ರದ ಹೀರೋ ಕಂ ನಿರ್ಮಾಪಕ ಶರಣ್.

  ಈ ಚಿತ್ರದಲ್ಲಿ ನಿಮಗೆ ಶರಣ್ ಸಿಗಲ್ಲ. ದೈಹಿಕ ಶಿಕ್ಷಕ ಮನೋಹರ್ ಸಿಗುತ್ತಾರೆ. ಅಷ್ಟರಮಟ್ಟಿಗೆ ಚಿತ್ರದಲ್ಲಿ ಕಥೆಯೇ ಹೀರೋ. ಚಿತ್ರದ ಪಾತ್ರ ಗಂಭೀರವಾದದ್ದು. ಅದರೂ ಕಾಮಿಡಿ ಇದೆ. ಹಾಸ್ಯ ನನ್ನ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿದೆ ಎನ್ನುತ್ತಾರೆ ಶರಣ್.

  ಮನೋಹರನನ್ನು ನನ್ನೊಳಗೆ ಇಳಿಸಿದ್ದು ಜಡೇಶ್ ಮತ್ತು ತರುಣ್ ಸುಧೀರ್. ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಕ್ರೀಡೆಯನ್ನು ಬಳಸಿಕೊಂಡಿದ್ದೇವೆ. ಚಿತ್ರದಲ್ಲಿ ಖೋಖೋಗಾಗಿ ನಾನು ತರಬೇತಿ ಪಡೆದುಕೊಂಡು ನಟಿಸಿದ್ದೇನೆ. ಚಿತ್ರ ನೋಡಿ ಬಂದವರು ಖೋಖೋ ಮತ್ತು ಸಿನಿಮಾ ಎರಡನ್ನೂ ಮೆಚ್ಚಿಕೊಳ್ಳುತ್ತಾರೆ ಎನ್ನುವುದು ಶರಣ್ ನಂಬಿಕೆ.

 • ಗುರು ಶಿಷ್ಯರ ಆಟ..ಓಟ ಚೆನ್ನಾಗಿದ್ದರೂ.. ತಮಿಳು ಚಿತ್ರಕ್ಕೇಕೆ ಮನ್ನಣೆ?

  ಗುರು ಶಿಷ್ಯರ ಆಟ..ಓಟ ಚೆನ್ನಾಗಿದ್ದರೂ.. ತಮಿಳು ಚಿತ್ರಕ್ಕೇಕೆ ಮನ್ನಣೆ?

  ಗುರು ಶಿಷ್ಯರು ಚೆನ್ನಾಗಿದೆ.

  ಶರಣ್-ನಿಶ್ವಿಕಾ ನಾಯ್ಡು ಅಭಿನಯ ಬೊಂಬಾಟ್.

  ಖೋಖೋ ಆಟದ ಗಮತ್ತಂತೂ ಸಖತ್ತಾಗಿದೆ. 12 ಹುಡುಗರೂ ಅಷ್ಟೇ ಜೋಶ್‍ನಲ್ಲಿ ನಟಿಸಿದ್ದಾರೆ.

  ಕನ್ನಡಿಗರು ಚಿತ್ರವನ್ನು ಬಾಚಿ ಅಪ್ಪಿಕೊಂಡಿದ್ದಾರೆ.  ಕಲೆಕ್ಷನ್ ಕೂಡಾ ಭರ್ಜರಿಯಾಗಿಯೇ ಇದೆ.

  ಆದರೆ..

  ತಮಿಳು ಚಿತ್ರದ ಎದುರು ಶರಣಾಗುವ ಪರಿಸ್ಥಿತಿ ಬಂತಾ? ಬುಕ್ ಮೈ ಶೋನಲ್ಲಿ ನರ್ತಕಿ ಥಿಯೇಟರಲ್ಲಿ ಹಾಗೂ ಗುರು ಶಿಷ್ಯರು ಪ್ರದರ್ಶನವಾಗುತ್ತಿರುವ ಹಲವು ಚಿತ್ರಮಂದಿರಗಳಲ್ಲಿ ತಮಿಳು ಸಿನಿಮಾ ಪೊನ್ನಿಯನ್ ಸೆಲ್ವನ್ ರೀಪ್ಲೇಸ್ ಆಗಿದೆ. ಗುರು ಶಿಷ್ಯರು ಇಲ್ಲಿನ ಮಣ್ಣಿನ ಸೊಗಡಿನ ಸಿನಿಮಾ. ಸ್ಪೋಟ್ರ್ಸ್ ಸಿನಿಮಾ. ಪೊನ್ನಿಯನ್ ಸೆಲ್ವನ್ ತಮಿಳು ಚಿತ್ರ.  ಆದರೆ.. ಆ ಚಿತ್ರ ಕನ್ನಡದ ಚಿತ್ರಕ್ಕೂ ಎತ್ತಂಗಡಿ ಮಾಡಿದೆ.

  ಪೊನ್ನಿಯನ್ ಸೆಲ್ವನ್ ಮಣಿರತ್ನಂ ನಿರ್ದೇಶನದ ಸಿನಿಮಾ. ಐಶ್ವರ್ಯಾ ರೈ, ತ್ರಿಷಾ, ಕಾರ್ತಿ, ವಿಕ್ರಂ, ಜಯಂ ರವಿ, ಕಿಶೋರ್.. ಹೀಗೆ ಘಟಾನುಘಟಿಗಳೇ ಇರುವ ಸಿನಿಮಾ. ಎ.ಆರ್.ರೆಹಮಾನ್ ಮ್ಯೂಸಿಕ್ಕೂ ಇದೆ. ಪ್ಯಾನ್ ಇಂಡಿಯಾ ಸಿನಿಮಾ.  ಆದರೆ.. ಚಿತ್ರವನ್ನು ಕನ್ನಡದಲ್ಲಿ ಕೇವಲ 2 ಶೋಗಳಿಗೆ ಸೀಮಿತಗೊಳಿಸಲಾಗಿದೆ. ತೆಲುಗು ಹಾಗೂ ಮಲಯಾಳಂ ವರ್ಷನ್‍ಗಳೂ ಅಷ್ಟೆ.  ತಮಿಳು ವರ್ಷನ್ ಸಿನಿಮಾ ಎಲ್ಲೆಡೆ ರಿಲೀಸ್ ಆಗುತ್ತಿದೆ.

  ಅವರು ಎಲ್ಲಾದರೂ ಮಾಡಿಕೊಳ್ಳಲಿ.. ಆದರೆ.. ಒಳ್ಳೆಯ ಕಲೆಕ್ಷನ್ ಮತ್ತು ಪ್ರೇಕ್ಷಕರು ಹಾಗೂ ವಿಮರ್ಶಕ ಮೆಚ್ಚುಗೆ ಇರುವ ಗುರು ಶಿಷ್ಯರಿಗೇಕೆ ಖೋ ಕೊಡಬೇಕು ಎನ್ನುವುದು ಕನ್ನಡಿಗರ ಪ್ರಶ್ನೆ.

 • ಗುರು ಶಿಷ್ಯರ ಖೋಖೋ ಮೆಚ್ಚಿಕೊಂಡ ಬಸವರಾಜ ಬೊಮ್ಮಾಯಿ

  ಗುರು ಶಿಷ್ಯರ ಖೋಖೋ ಮೆಚ್ಚಿಕೊಂಡ ಬಸವರಾಜ ಬೊಮ್ಮಾಯಿ

  ಗುರು ಶಿಷ್ಯರು ಚಿತ್ರ ಇಷ್ಟವಾಗೋಕೆ ಹಲವು ಕಾರಣಗಳಿವೆ. ಚೆಂದದ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ.. ಶರಣ್, ನಿಶ್ವಿಕಾ ಹಾಗೂ 12 ಹುಡುಗರ ಗತ್ತು ಗೈರತ್ತಿನ ಅಭಿನಯ.. ಇವೆಲ್ಲವನ್ನೂ ಮೀರಿ ಇಷ್ಟವಾಗಿದ್ದು ಖೋಖೋ ಆಟದ ಹಿನ್ನೆಲೆಯ ಕಥೆ ಇರುವ ಕಾರಣಕ್ಕೆ. ಚಿತ್ರವನ್ನು ಪ್ರೇಕ್ಷಕರು ಕೈಚಾಚಿ ಮನದುಂಬಿ ಅಪ್ಪಿಕೊಂಡಿದ್ದಾರೆ. ಮೆಚ್ಚಿಕೊಂಡಿದ್ದಾರೆ. ಇಂಥಾದ್ದೊಂದು ಚಿತ್ರ ಕನ್ನಡದಲ್ಲಿ ಬರಬೇಕಿತ್ತು. ಇನ್ನು ಮುಂದೆಯೂ ಇಂತಹ ಚಿತ್ರಗಳು ಬರಲಿ ಎಂದು ಹಾರೈಸುತ್ತಿದ್ದಾರೆ.

  ನಿರ್ದೇಶಕ ಜಡೇಶ್ ಕುಮಾರ್ ಹಂಪಿ, ಶರಣ್, ನಿಶ್ವಿಕಾ  ನಾಯ್ಡು, ತರುಣ್ ಸುಧೀರ್ ಎಲ್ಲರೂ ಮೆಚ್ಚುಗೆಯ ಸುರಿಮಳೆಯಲ್ಲಿ ಮಿಂದೇಳುತ್ತಿದ್ದಾರೆ. ಚಿತ್ರ ಬಿಡುಗಡೆ ದಿನವೇ ಚಿತ್ರವನ್ನು ರಾಜ್ಯದ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವರಿಗೆ ತೋರಿಸುವುದಾಗಿ ಶರಣ್ ಹೇಳಿಕೊಂಡಿದ್ದರು. ಇದೀಗ ಶರಣ್ ಖುದ್ದು ಮುಖ್ಯಮಂತ್ರಿಗಳನ್ನು  ಭೇಟಿ ಸಿನಿಮಾ ನೋಡಲು ಆಹ್ವಾನ ಕೊಟ್ಟಿದ್ದಾರೆ.

  ಸಿನಿಮಾ ಬಗ್ಗೆ ಕೇಳಿದ್ದೇನೆ. ಖೋಖೋ ಆಟವನ್ನು ಹೈಲೈಟ್ ಮಾಡಿ ತೋರಿಸಿದ್ದೀರಂತೆ. ಖಂಡಿತಾ ಬಿಡುವು ಮಾಡಿಕೊಂಡು ಈ ಸಿನಿಮಾ ನೋಡುತ್ತೇನೆ. ಇಂತಹ ಇನ್ನಷ್ಟು ಚಿತ್ರಗಳು ಬರಲಿ ಎಂದಿದ್ದಾರೆ ಬಸವರಾಜ ಬೊಮ್ಮಾಯಿ. ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ನಮ್ಮ ಚಿತ್ರತಂಡದ ಭೇಟಿಗೆ ಸಮಯ ನೀಡಿದ ಮುಖ್ಯಮಂತ್ರಿಗಳಿಗೆ ನಟ ಶರಣ್, ತರುಣ್ ಸುಧೀರ್, ಜಡೇಶ್ ಕುಮಾರ್ ಹಂಪಿ ಹಾಗೂ ಗುರು ಶಿಷ್ಯರು ಚಿತ್ರತಂಡ ಧನ್ಯವಾದ ಅರ್ಪಿಸಿದೆ.

 • ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ.. : ಶಿಷ್ಯರಿಗೆ ಗುರುವಿನ ಪಾಠ

  ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ.. : ಶಿಷ್ಯರಿಗೆ ಗುರುವಿನ ಪಾಠ

  ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ..

  ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ..

  ಈ ಪದ್ಯವನ್ನು ಬರೆದವರು ಕುವೆಂಪು. ಸ್ವಾತಂತ್ರ್ಯ ಹೋರಾಟಗಾರ ಜತೀಂದ್ರನಾಥ ದಾಸ್ ಬ್ರಿಟಿಷರ ಸೆರೆಯಲ್ಲಿ ಸಾವನ್ನಪ್ಪಿದರು. 1929 ಸೆಪ್ಟೆಂಬರ್ 13. ಸತತ 2 ತಿಂಗಳು ಉಪವಾಸ ಸತ್ಯಾಗ್ರಹ ಮಾಡಿ ಜತೀಂದ್ರನಾಥರು ಮೃತಪಟ್ಟ ದಿನ. ಆಗ ಕುವೆಂಪು ಯುವಜನತೆಗೆ ಸ್ಫೂರ್ತಿ ನೀಡಲು ಬರೆದಿದ್ದ ಕವಿತೆ

  ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ..

  ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ..

  ಈ ಕವಿತೆಯನ್ನು 1969ರಲ್ಲಿ ಮಾರ್ಗದರ್ಶಿ ಅನ್ನೋ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿತ್ತು. ರಾಜಕುಮಾರ್, ಚಂದ್ರಕಲಾ ನಟಿಸಿದ್ದ ಚಿತ್ರದ ಹಾಡಿಗೆ ಸಂಗೀತ ನೀಡಿದ್ದವರು ಎಂ.ರಂಗರಾವ್. ಹಾಡಿದ್ದವನು ಪಿ.ಬಿ.ಶ್ರೀನಿವಾಸ್. ಇತಿಹಾಸ ಪ್ರಸಿದ್ಧವಾದ ಹಾಡಿನ ಸಾಲುಗಳನ್ನು ನೆನಪಿಸಿಕೊಳ್ಳೋಕೆ ಕಾರಣವಿದೆ. ಈ ಹಾಡಿನ ಅದ್ಭುತ ಸಾಲುಗಳನ್ನಷ್ಟೇ ಹೆಕ್ಕಿಕೊಂಡು ಮತ್ತೊಂದು ಸ್ಫೂರ್ತಿಯ ಗೀತೆ ಹೊರತಂದಿದ್ದಾರೆ ಗುರು ಶಿಷ್ಯರು.

  ಆಣೆ ಮಾಡಿ ಹೇಳುತೀನಿ, ಗುರುಗಳು ನಮ್ಮ ಗುರುಗಳು ಎಂಬ ಎರಡು ಹಾಡುಗಳನ್ನು ಹೊರತಂದಿದ್ದ ಗುರು ಶಿಷ್ಯರು ಈಗ ನಡೆ ಮುಂದೆ ನಡೆ ಮುಂದೆ.. ಹಾಡನ್ನು ಹೊರತಂದಿದ್ದಾರೆ. ಚಿತ್ರದಲ್ಲಿ ಖೋಖೋ ಆಟ ಪ್ರಧಾನ ನಾಯಕನಾಗಿದ್ದು ಖೋಖೋ ಮಾಸ್ಟರ್ ಆಗಿ ಶರಣ್ ನಟಿಸಿದ್ದಾರೆ. ತನ್ನ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವಂತೆ ಮಾಡುವ ಈ ಹಾಡು ಪವರ್‍ಫುಲ್ ಆಗಿದೆ. ಕುವೆಂಪು ಸಾಹಿತ್ಯವನ್ನು ಅದೇ ರೀತಿ ಬಳಸಿಕೊಳ್ಳಲಾಗಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರೆ, ಕೈಲಾಶ್ ಖೇರ್ ಧ್ವನಿ ತುಂಬಿದ್ದಾರೆ.

  ಶರಣ್, ನಿಶ್ವಿಕಾ ನಾಯ್ಡು, ದತ್ತಣ್ಣ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಜಡೇಶ್ ಕೆ ಹಂಪಿ ನಿರ್ದೇಶನವಿದೆ. ತರುಣ್ ಸುಧೀರ್ ಮತ್ತು ಶರಣ್ ಸ್ವತಃ ನಿರ್ಮಾಪಕರಾಗಿರೋ ಚಿತ್ರ ಸೆ.27ಕ್ಕೆ ಬಿಡುಗಡೆಯಾಗುತ್ತಿದೆ.