` rachana indar, - chitraloka.com | Kannada Movie News, Reviews | Image

rachana indar,

 • ಈ ವಾರ ತೆರೆಗೆ "ಲವ್ 360". 

  ಈ ವಾರ ತೆರೆಗೆ "ಲವ್ 360". 

  " ಸಿಕ್ಸರ್" , "ಮೊಗ್ಗಿನ ಮನಸ್ಸು", "ಕೃಷ್ಣನ್ ಲವ್ ಸ್ಟೋರಿ" ಯಂತಹ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಶಶಾಂಕ್ ನಿರ್ದೇಶಿಸಿರುವ "ಲವ್ 360" ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 

  ಶಶಾಂಕ್ ಸಿನಿಮಾಸ್ ಲಾಂಛನದಲ್ಲಿ ಶಶಾಂಕ್ ಹಾಗೂ ಮಂಜುಳಾಮೂರ್ತಿ ಈ ಚಿತ್ರವನ್ನು  ನಿರ್ಮಿಸಿದ್ದಾರೆ. ನೂತನ ಪ್ರತಿಭೆ ಪ್ರವೀಣ್ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ರಚನಾ ಇಂದರ್ ನಾಯಕಿಯಾಗಿದ್ದಾರೆ. 

  ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ. ಅದರಲ್ಲೂ ಸಿದ್ದ್  ಶ್ರೀರಾಮ್ ಹಾಡಿರುವ "ಜಗವೇ ನೀನು ಗೆಳತಿಯೆ" ಹಾಡಂತೂ ಭಾರೀ‌ ಮಟ್ಟದಲ್ಲಿ ಜನಪ್ರಿಯವಾಗಿದೆ. ಅಭಿಷೇಕ್ ಕಲ್ಲತ್ತಿ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗಿರಿಮಹೇಶ್ ಅವರ ಸಂಕಲನವಿದೆ

 • ಗಣೇಶ್ ಚೆಲುವೆಯರ ಚಿತ್ತಾರ

  ಗಣೇಶ್ ಚೆಲುವೆಯರ ಚಿತ್ತಾರ

  ಗೋಲ್ಡನ್ ಸ್ಟಾರ್  ಗಣೇಶ್ ಮೂರು ಜನ ಬ್ಯೂಟಿಫುಲ್ ಹೀರೋಯಿನ್ಸ್ ಜೊತೆ ತ್ರಿಬಲ್ ರೈಡಿಂಗ್ ಮಾಡಿದ್ದಾರೆ. ನಗುವಿನಲ್ಲೇ ಸಂಭ್ರಮದ ಅಲೆ ಎಬ್ಬಿಸೋ ಆದಿತಿ ಪ್ರಭುದೇವ, ಮುಗ್ಧತೆಯ ಮತ್ತೊಂದು ಅವತಾರ ರಚನಾ ಇಂದರ್, ಅಮಾಯಕತೆಯನ್ನು ಕಣ್ಣುಗಳಲ್ಲಿ ತುಂಬಿಕೊಂಡಿರೊ ಮೇಘಾ ಶೆಟ್ಟಿ ಜೊತೆ ಗಣೇಶ್ ತ್ರಿಬ್ಬಲ್ ರೈಡಿಂಗ್ ಮಾಡಿರುವುದು ಸ್ಪೆಷಲ್ಲು. ಗಣೇಶ್ ನಟನೆಯ ತ್ರಿಬಲ್ ರೈಡಿಂಗ್ ಸಿನಿಮಾ ಇದೇ ನವೆಂಬರ್ 25ಕ್ಕೆ ಬೆಳ್ಳಿತೆರೆಗೆ ಬರಲಿದೆ. ಸಿನಿಮಾದ ಪ್ರಚಾರವನ್ನ ವಿಭಿನ್ನವಾಗಿ ಮಾಡಿರೋ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಚೆಲುವಿನ ಚಿತ್ತಾರ ಸಿನಿಮಾದ ಸ್ಟೈಲ್ನಲ್ಲೇ ಅಭಿಮಾನಿಗಳ ಜೊತೆ ಸೇರಿ ಬೈಕ್ ರೈಡಿಂಗ್ ಮಾಡಿದ್ದಾರೆ.

  ಗೋಲ್ಡನ್ ಸ್ಟಾರ್ ಗಣೇಶ್, ಚೆಲುವೆಯರ ಚಿತ್ತಾರವಿದು. ಸ್ಟೈಲು, ಸ್ಮೈಲಿಗಷ್ಟೇ ಅಲ್ಲ, ಟ್ರೆಂಡ್ ಸೆಟ್ಟರ್ ಕೂಡ ಆಗಿರೋ ಗಣೇಶ್ ಈಗ ಬೈಕ್ ಕ್ರೇಜ್ ಸೃಷ್ಟಿಸಿದ್ದಾರೆ. ಮುಂಗಾರು ಮಳೆ ಸಿನಿಮಾ ಬಂದಾಗ ಗಣೇಶ್ ಹಾಕಿದ್ದ ಕಾಸ್ಟ್ಯೂಮ್ಗಳು ಟ್ರೆಂಡ್ ಆಗಿದ್ದರೆ, ಚೆಲುವಿನ ಚಿತ್ತಾರದಲ್ಲಿ ಗಣೇಶ್ ಬೈಕ್ ಓಡಿಸಿದ್ದ ಸ್ಟೈಲ್ ಟ್ರೆಂಡ್ ಆಗಿತ್ತು. ಈಗ ಅದೇ ಸ್ಟೈಲ್ನಲ್ಲಿ ತ್ರಿಬ್ಬಲ್ ರೈಡಿಂಗ್ ಮಾಡಿದ್ದಾರೆ ಗಣೇಶ್.

  ಮಹೇಶ್ ಹೌಡ ನಿರ್ದೇಶನದ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಯಟ್ಟ ಯಟ್ಟ ಅನ್ನೋ ಸಾಂಗ್ ಇದೆ. ಈ ಹಾಡಿನಲ್ಲಿ ಗಣಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡಿನ ಹುಕ್ ಸ್ಟೆಪ್ಸ್ ಯಾರು ಚನ್ನಾಗಿ ಡಾನ್ಸ್ ಮಾಡುತ್ತಾರೋ ಅವರಲ್ಲಿ 25 ಜನರನ್ನ ಆಯ್ಕೆ ಮಾಡಿಕೊಂಡು ಅವರ ಜೊತೆ ರೈಡಿಂಗ್ ಹೋಗುತ್ತೇನೆ ಅಂತ ಗಣೇಶ್ ಹೇಳಿದ್ರು. ಹೀಗಾಗಿ ಈ ಡೈಹಾರ್ಡ್ ಪ್ಯಾನ್ಸ್ ಜೊತೆ ಗಣಿ ಬೈಕ್ ರೈಡ್ ಮಾಡಿದ್ದಾರೆ ಎಲ್ಲ 25 ಜನರ ಜೊತೆಯಲ್ಲೂ ರೈಡಿಂಗ್ ಹೋಗಿದ್ದು ವಿಶೇಷ.

  ತ್ರಿಬಲ್ ರೈಡಿಂಗ್ ಹೀರೋಯಿನ್ಸ್ ಕೂಡ ನಾವೇನು ಕಮ್ಮಿ ಅನ್ನೋ ತರಾ  ಫ್ಯಾನ್ಸ್ ಜೊತೆ ಬೈಕ್ ಹತ್ತಿ ರೈಡ್ ಮಾಡಿದ್ದಾರೆ. ನಟಿ ಆದಿತಿ ಪ್ರಭುದೇವ, ರಚನಾ ಇಂದರ್, ಮೇಘಾ ಶೆಟ್ಟಿ ರೈಡ್ ಮಾಡಿ ಸಂಭ್ರಮಿಸಿದ್ದಾರೆ. ಅಂದಹಾಗೆ ನಾಯಕಿಯರೆಲ್ಲ ಹುಡುಗರ ಜೊತೆ ರೈಡಿಂಗ್ ಹೋದರೆ, ಗಣೇಶ್ ಹುಡುಗರು-ಹುಡುಗಿಯರು ಎಂಬ ಭೇದ ಭಾವ ಮಾಡಲಿಲ್ಲ.

 • ಮುಗ್ಧ ಪ್ರೇಮಿಗಳು V/s ಕ್ರೌರ್ಯ : ಪ್ರೇಕ್ಷಕರ ಹೃದಯ ಗೆದ್ದ ಥ್ರಿಲ್ಲರ್ ಕಥೆ

  ಮುಗ್ಧ ಪ್ರೇಮಿಗಳು V/s ಕ್ರೌರ್ಯ : ಪ್ರೇಕ್ಷಕರ ಹೃದಯ ಗೆದ್ದ ಥ್ರಿಲ್ಲರ್ ಕಥೆ

  ಇಬ್ಬರು ಮುಗ್ಧ ಪ್ರೇಮಿಗಳು. ಅನಾಥರು. ಅವಳಿಗೋ ನೆನಪಿನ ಶಕ್ತಿಯೇ ಕಡಿಮೆ. ಅವಳನ್ನು ಚೆನ್ನಾಗಿ ನೋಡಿಕೊಳ್ಳುವುದೊಂದೇ ಅವನ ಬದುಕಿನ ಗುರಿ. ಅವನೂ ಮುಗ್ಧ. ಅವಳೂ ಮುಗ್ಧೆ. ಅವರಿಬ್ಬರ ಮಧ್ಯೆ ಕ್ರೌರ್ಯವನ್ನೇ ತಿಂದು..ಕುಡಿದು ತೇಗಿರುವ ವಿಲನ್ಸ್ ಬರುತ್ತಾರೆ. ನಂತರ ಇಡೀ ಕಥೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಾ ಹೋಗುತ್ತೆ. ಪ್ರೇಕ್ಷಕರಿಗೆ ಲವ್ ಸ್ಟೋರಿ ಮೂಲಕ ಎಷ್ಟು ಕಚಗುಳಿ ಕೊಟ್ಟು, ಭಾವುಕರನ್ನಾಗಿಸುವ ಶಶಾಂಕ್.. ಆಮೇಲಾಮೇಲೆ ಭಾವುಕತೆಯ ದರ್ಬಾರ್ ನಡೆಸುತ್ತಾರೆ.

  ಹೆಜ್ಜೆ ಹೆಜ್ಜೆಗೂ ಕುತೂಹಲ ಸೃಷ್ಟಿಸುತ್ತಾರೆ. ನಡುವೆ ಬರುವ ಹಾಡುಗಳು ಹೃದಯಕ್ಕೆ ತಂಪರೆಯುತ್ತವೆ. ಮುಗ್ಧ ಪ್ರೇಮಿಗಳ ಪಾತ್ರದಲ್ಲಿ ಪ್ರವೀಣ್ ಮತ್ತು ರಚನಾ ಇಂದರ್ ಹೃದಯಕ್ಕೇ ಲಗ್ಗೆಯಿಡುತ್ತಾರೆ.

  ಶಶಾಂಕ್ ಅವರ ಲವ್ 360 ಸಿನಿಮಾ ರಿಲೀಸ್ ಆಗಿದ್ದು ಪ್ರೇಕ್ಷಕರ ಮನಸ್ಸು ಗೆದ್ದಿದೆ. ಫ್ಯಾಮಿಲಿ ಸಮೇತ ನೋಡಬಹುದಾದ ಲವ್ ಥ್ರಿಲ್ಲರ್ ಸಿನಿಮಾ ಲವ್ 360.

 • ಲವ್ 360ಗೆ ಗಾಳಿಪಟ 2 ಬಲ.. ಬೆಂಬಲ

  ಲವ್ 360ಗೆ ಗಾಳಿಪಟ 2 ಬಲ.. ಬೆಂಬಲ

  ಲವ್ 360 ಚಿತ್ರ ಈ ಶುಕ್ರವಾರ ಬಿಡುಗಡೆಯಾಗಿರುವ ಸಿನಿಮಾ. ಶಶಾಂಕ್ ನಿರ್ದೇಶನದ ಲವ್ 360 ಚಿತ್ರದಲ್ಲಿ ನಟಿಸಿರುವುದು ಪ್ರವೀಣ್ ಎಂಬ ಹೊಸ ಹುಡುಗ ಮತ್ತು ಹೆಂಗೆ ನಾವು ಖ್ಯಾತಿಯ ರಚನಾ ಇಂದರ್. ಬಿಡುಗಡೆಗೂ ಮುನ್ನ ಜಗವೇ ನೀನು ಗೆಳತಿಯೇ ಹಾಡು ಸೂಪರ್ ಹಿಟ್ ಎನಿಸಿಕೊಂಡಿತ್ತು. ಚಿತ್ರದ ಹಾಡುಗಳೆಲ್ಲ ಹಿಟ್ ಆಗಿದ್ದವು. ಶಿವಣ್ಣ, ಉಪೇಂದ್ರ, ಸುದೀಪ್ ಚಿತ್ರದ ಹಾಡುಗಳನ್ನು ರಿಲೀಸ್ ಮಾಡಿಕೊಟ್ಟಿದ್ದರು. ಇಷ್ಟೆಲ್ಲ ಆಗಿಯೂ ಚಿತ್ರಕ್ಕೆ ಅಂದುಕೊಂಡಿದ್ದ ಓಪನಿಂಗ್ ಸಿಗಲಿಲ್ಲ. ಚಿತ್ರದ ಬಗ್ಗೆ ಪಾಸಿಟಿವ್ ವಿಮರ್ಶೆಗಳು ಬಂದವಾದರೂ ಪ್ರೇಕ್ಷಕರ ಸಂಖ್ಯೆ ಏರಲಿಲ್ಲ.

  ಲವ್ 360 ಚಿತ್ರಕ್ಕೆ ಗಾಳಿಪಟ 2 ಟೀಂ ಬೆಂಬಲ ನೀಡಿರುವುದು ವಿಶೇಷ. ಇದು ಹೊಸಬರ ಚಿತ್ರ. ಈ ಹಿಂದೆಯೂ ನಾನು ಹೊಸಬರೊಂದಿಗೆ ಸಿನಿಮಾ ಮಾಡಿದ್ದಾಗ ಪ್ರೇಕ್ಷಕರು ಕೈ ಹಿಡಿದಿದ್ದರು. ಹೊಸಬರಿದ್ದ ಕಾರಣ ಹೌಸ್‍ಫುಲ್ ನಿರೀಕ್ಷೆ ಇರಲಿಲ್ಲ. ಆದರೆ ಪಿಕಪ್ ಆಗುವ ಭರವಸೆ ಇತ್ತು. ಆದರೆ ವೀರೇಶ್ ಚಿತ್ರಮಂದಿರ ಹೊರತುಪಡಿಸಿದರೆ ಬೇರೆ ಕಡೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಬರುತ್ತಿಲ್ಲ. ಹೀಗೇ ಆದರೆ ಥಿಯೇಟರ್ ಕಳೆದುಕೊಳ್ಳುತ್ತೇವೆ. ದಯವಿಟ್ಟು ಒಳ್ಳೆಯ ಚಿತ್ರವನ್ನು ಪ್ರೀತಿಸಿ.. ನೋಡಿ.. ಪ್ರೋತ್ಸಾಹಿಸಿ ಎಂದಿದ್ದಾರೆ ನಿರ್ದೇಶಕ ಶಶಾಂಕ್.

  ಚಿತ್ರವನ್ನು ನೋಡಿ ಬಂದ ಪ್ರೇಕ್ಷಕರೇನೋ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ವಿಶೇಷವೆಂದರೆ ಶಶಾಂಕ್ ಚಿತ್ರಕ್ಕೆ ಗಾಳಿಪಟ 2 ಟೀಂ ಬೆಂಬಲ ಮತ್ತು ಬಲ ನೀಡಿರುವುದು. ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ರಮೇಶ್ ರೆಡ್ಡಿ ಸೇರಿದಂತೆ  ಇಡೀ ಗಾಳಿಪಟ 2 ಚಿತ್ರತಂಡ ಲವ್ 360 ಸಿನಿಮಾ ನೋಡಿ. ಒಂದೊಳ್ಳೆ ಸಿನಿಮಾ ಸೋಲಬಾರದು. ಗೆಲ್ಲಿಸುವ ಹೊಣೆ ಪ್ರೇಕ್ಷಕರದ್ದು ಎಂದು ಮನವಿ ಮಾಡಿದೆ. ಹಾಗೆ ನೋಡಿದರೆ ಗಾಳಿಪಟ 2ಗೆ ಥಿಯೇಟರುಗಳಲ್ಲಿ ಎದುರಾಳಿ ಲವ್ 360.  ಎರಡೂ ಚಿತ್ರಗಳು ಕ್ಲಾಷ್ ಆಗಬಾರದೆಂದು ಮಾತನಾಡಿಕೊಂಡೇ ಒಂದು ವಾರ್ ಗ್ಯಾಪ್ ತೆಗೆದುಕೊಂಡು ರಿಲೀಸ್ ಆದ ಚಿತ್ರಗಳು. ಗಾಳಿಪಟ 2 ಚಿತ್ರದ ಬಗ್ಗೆ ಖುದ್ದು ಶಶಾಂಕ್ ಕೂಡಾ ಪ್ರೀತಿಯ ಮಾತುಗಳನ್ನಾಡಿದ್ದರು. ಈಗ ಗಾಳಿಪಟ 2 ಟೀಂ ಕೂಡಾ ಲವ್ 360 ಚಿತ್ರವನ್ನು ನೋಡಿ ಎಂದು ಮನವಿ ಮಾಡಿದೆ.