` ravi boppanna, - chitraloka.com | Kannada Movie News, Reviews | Image

ravi boppanna,

  • ಆಗಸ್ಟ್ 12ಕ್ಕೆ ರವಿ ಬೋಪಣ್ಣ

    ಆಗಸ್ಟ್ 12ಕ್ಕೆ ರವಿ ಬೋಪಣ್ಣ

    ವಿ.ರವಿಚಂದ್ರನ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ ಸಿನಿಮಾ ರವಿ ಬೋಪಣ್ಣ. ಈಶ್ವರಿ ಸಂಸ್ಥೆಯ 50ನೇ ಚಿತ್ರವಿದು. 2016ರಲ್ಲ ಅಪೂರ್ವ ಚಿತ್ರ ನಿರ್ದೇಶಿಸಿದ್ದ ರವಿ ಸುದೀರ್ಘ ಗ್ಯಾಪ್ ನಂತರ ಈ ಚಿತ್ರ ನಿರ್ದೇಶಿಸಿದ್ದಾರೆ. ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿರೋ ಚಿತ್ರಕ್ಕೆ ಗಾಳಿಪಟ 2, ಅಬ್ಬರ ಸೇರಿದಂತೆ ಇನ್ನೂ ಕೆಲವು ಚಿತ್ರಗಳು ಪೈಪೋಟಿ ನೀಡಲಿವೆ.

    ರವಿ ಬೋಪಣ್ಣ ಚಿತ್ರಕ್ಕೆ ಕರ್ಮ ಈಸ್ ಕ್ರೇಝಿ ಅನ್ನೋ ಟ್ಯಾಗ್‍ಲೈನ್ ಇದೆ. ಇದು ವೊರಿಜಿನಲ್ ಚಿತ್ರವೇನಲ್ಲ. ಮಲಯಾಳಂನ ಜೋಸೆಫ್ ಚಿತ್ರದ ರೀಮೇಕ್. ಅಂಗಾಂಗ ಕಸಿ ದಂಧೆಯ ಕರಾಳ ಮುಖವನ್ನು ತೆರೆದಿಟ್ಟಿದ ಚಿತ್ರ ಜೋಸೆಫ್. ಫ್ಯಾಮಿಲಿ ಲವ್ ಸ್ಟೋರಿಯ ಜೊತೆ ಜೊತೆಗೇ ಅಂಗಾಂಗ ಕಸಿ ದಂಧೆಯನ್ನು ತೋರಿಸಿದ್ದರು. ಹಾಗೆ ನೋಡಿದರೆ, ಅಂಗಾಂಗ ಕಸಿಯಂತಾ ಸಬ್ಜೆಕ್ಟ್‍ನ್ನು ಇಂಡಿಯನ್ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ತೋರಿಸಿದ್ದವರು ಸ್ವತಃ ರವಿಚಂದ್ರನ್. ಶಾಂತಿ ಕ್ರಾಂತಿಯಲ್ಲಿ.

    ಜೋಸೆಫ್ ಚಿತ್ರದ ಕಥೆಯ ಒನ್ ಲೈನ್ ಮಾತ್ರ ಚಿತ್ರದಲಿರುತ್ತೆ. ಉಳಿದಂತೆ ಇದು ಕಂಪ್ಲೀಟ್ ರವಿಚಂದ್ರನ್ ಸಿನಿಮಾ ಎಂದಿದ್ದಾರೆ ರವಿಚಂದ್ರನ್. ಪ್ರೇಮಲೋಕ ಚಿತ್ರದ ಮೆಚ್ಯೂರ್ ವರ್ಷನ್ ಎನ್ನುತ್ತಿದ್ದಾರೆ. ಸುದೀಪ್ ಲಾಯರ್ ಪಾತ್ರ ಮಾಡಿದ್ದಾರೆ. ರಮ್ಯಾ ಕೃಷ್ಣ, ರಚಿತಾ ರಾಮ್, ಕಾವ್ಯಾ ಶೆಟ್ಟಿ, ಸಂಚಿತಾ ಪಡುಕೋಣೆ, ಮೋಹನ್ ಶಂಕರ್, ಜೈ ಜಗದೀಶ್ ಮುಖ್ಯ ಪಾತ್ರಗಳಲ್ಲಿದ್ದಾರೆ.

     

  • ಲೇ..ಲೇ.. ಬೋಪಣ್ಣ.. 7 ನಿಮಿಷದ ಟ್ರೇಲರ್ ಅಣ್ಣಾ..

    ಲೇ..ಲೇ.. ಬೋಪಣ್ಣ.. 7 ನಿಮಿಷದ ಟ್ರೇಲರ್ ಅಣ್ಣಾ..

    ಈಶ್ವರಿ ಸಂಸ್ಥೆ 50 ವರ್ಷ ಪೂರೈಸಿ, ರವಿಚಂದ್ರನ್ 60 ವರ್ಷ ತುಂಬಿರುವ ಈ ಸಂದರ್ಭದಲ್ಲಿ ಬರುತ್ತಿರೋ ಸಿನಿಮಾ ರವಿ ಬೋಪಣ್ಣ. ಇದು ಮಲಯಾಳಂನ ಜೋಸೆಫ್ ಚಿತ್ರದ ರೀಮೇಕ್. ಕರ್ಮ ಈಸ್ ಕ್ರೇಜಿ ಅನ್ನೋ ಟ್ಯಾಗ್‍ಲೈನ್‍ನಲ್ಲಿ ಬರುತ್ತಿರೋ ಚಿತ್ರ ವೊರಿಜಿನಲ್ ಕಥಾ ಹಂದರವನ್ನೇ ಇಟ್ಟುಕೊಂಡಿದೆ. ಉಳಿದದ್ದೆಲ್ಲ ಕ್ರೇಜಿ ಸೃಷ್ಟಿ. ಅದು ಚಿತ್ರಕ್ಕಾಗಿ ರಿಲೀಸ್ ಮಾಡಿರುವ 7 ನಿಮಿಷದ ಟ್ರೇಲರಿನಲ್ಲಿ ಗೊತ್ತಾಗುತ್ತಿದೆ.

    ಟ್ರೇಲರಿನಲ್ಲಿ ಕಥೆಯ ಸುಳಿವು ಕೊಡದೆ, ಕೇವಲ ಕುತೂಹಲ ಹುಟ್ಟಿಸಿದ್ದಾರೆ ರವಿ. ಮಧ್ಯೆ ಮಧ್ಯೆ ಗಹಗಹಿಸಿ ನಗುವ ಬೋಪಣ್ಣ.. ಲೇ..ಲೇ..ಲೇ.. ಬೋಪಣ್ಣ.. ಎಂಬ ಡೈಲಾಗ್. ಕ್ಲೀನ್ ಶೇವ್ ಲುಕ್ ಒಂದು.. ಹುರಿಮೀಸೆಯ ಲುಕ್ ಇನ್ನೊಂದು.. ಗಡ್ಡಧಾರಿಯ ಲುಕ್ ಇನ್ನೊಂದು.. ಕಾವ್ಯಾ ಶೆಟ್ಟಿ ಹಾಟ್ ಆಗಿದ್ದರೆ, ರಾಧಿಕಾ ಕುಮಾರಸ್ವಾಮಿ ಬೋಲ್ಡ್ ಆಗಿದ್ದಾರೆ. ರಚಿತಾರಾಮ್ ಕಾಣಿಸಿಲ್ಲ. ಕಿಚ್ಚ ಸುದೀಪ್ ಲಾಸ್ಟ್ ಎಂಟ್ರಿ ಸೀನ್ ಇದೆ. ಮಿಕ್ಕಂತೆ ಇದು ಕ್ರೇಜಿಮ್ಯಾನ್ ಒನ್ ಮ್ಯಾನ್ ಶೋ.. ಇಡೀ ಟ್ರೇಲರಿನಲ್ಲಿ ರವಿಚಂದ್ರನ್ ತಮ್ಮ ಕ್ರೇಜಿ ಶಾಟ್‍ಗಳನ್ನು ತೆಗೆಯೋಕೆ ಪಟ್ಟಿರುವ ಶ್ರಮ, ಕುಸುರಿ ಎದ್ದು ಕಾಣುತ್ತೆ.