` u n i, - chitraloka.com | Kannada Movie News, Reviews | Image

u n i,

  • ಉಪೇಂದ್ರ ಯು&ಐ ನಲ್ಲಿ ಸನ್ನಿ ಲಿಯೋನ್

    ಉಪೇಂದ್ರ ಯು&ಐ ನಲ್ಲಿ ಸನ್ನಿ ಲಿಯೋನ್

    ಸನ್ನಿ ಲಿಯೋನ್ ಹೆಸರಿಗೆ ಒಂದು ವಿಶೇಷ ವಿಶಿಷ್ಟ ಕ್ರೇಜ್ ಇದೆ. ಸನ್ನಿಯ ಹೆಸರಿನ ಮಾಯೆ ಇವತ್ತಿಗೂ ಚಾಲ್ತಿಯಲ್ಲಿದೆ. ಈ ಸನ್ನಿ ಲಿಯೋನ್ ಕನ್ನಡಕ್ಕೆ ಹೊಸಬರೇನೂ ಅಲ್ಲ. ಈ ಹಿಂದೆ ಸೇಸಮ್ಮ.. ಸೇಸಮ್ಮ ಹಾಡಿಗೆ ಸೊಂಟ ಬಳುಕಿಸಿದ್ದ ಸನ್ನಿ, ಕಾಮಾಕ್ಷಿ ಕಾಮಾಕ್ಷಿ ಹಾಡಿನಲ್ಲೂ ಹುಬ್ಬೇರುವಂತೆ ಮಾಡಿದ್ದರು. ಈಗ ಮತ್ತೊಮ್ಮೆ ಬೆಂಗಳೂರಿಗೆ ಬಂದು ಉಪ್ಪಿಯ ಯು&ಐನಲ್ಲಿ ಹಾಡಿ ಕುಣಿದು ನಟಿಸಿ ಹೋಗಿದ್ದಾರಂತೆ.

    ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಯು&ಐನಲ್ಲಿ ಸನ್ನಿ ಲಿಯೋನ್ ಡ್ಯಾನ್ಸ್ ಅಷ್ಟೇ ಅಲ್ಲ, ನಟಿಸಿಯೂ ಇದ್ದಾರಂತೆ. ಸನ್ನಿಗೊಂದು ಮೇನ್ ರೋಲ್ ಕೊಟ್ಟಿದ್ದಾರಂತೆ ಉಪ್ಪಿ. ಸನ್ನಿ ಲಿಯೋನ್ ಬಂದು ಹೋಗುವವರೆಗೆ ಸಣ್ಣ ಸುಳಿವೂ ಬಿಟ್ಟುಕೊಡದೆ ಚಿತ್ರೀಕರಣ ಮುಗಿದ ಮೇಲೆ ಮಾಹಿತಿ ಹೊರಹಾಕಿದೆ ಯು&ಐ ಟೀಂ.

    ಸದ್ಯಕ್ಕೆ ಉಪೇಂದ್ರ ಯು&ಐ ಚಿತ್ರದ ಸ್ಟಂಟ್ಸ್ ಚಿತ್ರೀಕರಣ ಮಾಡುತ್ತಿದ್ದು, ಮೋಹನ್ ಬಿ.ಕೆರೆಯಲ್ಲಿ ಹಾಕಿರುವ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ.

    ಹಲವು ವರ್ಷಗಳ ನಂತರ ಉಪೇಂದ್ರ ಮತ್ತೆ ನಿರ್ದೇಶನ ಮಾಡುತ್ತಿದ್ದು, ಅಪರೂಪದ ಕಥೆಯೊಂದನ್ನು ಈ ಚಿತ್ರಕ್ಕಾಗಿ ಹೆಣೆದಿದ್ದಾರಂತೆ. ನೂರಕ್ಕೂ ಹೆಚ್ಚು ಕಲಾವಿದರು ಈ ಸಿನಿಮಾದಲ್ಲಿ ಇರುವುದು ಮತ್ತೊಂದು ವಿಶೇಷ. ಉಪೇಂದ್ರ ಪಾತ್ರ ಕೂಡ ಹೊಸ ರೀತಿಯಲ್ಲಿ ಇದ್ದು, ಹೆಸರಾಂತ ಅನೇಕ ಕಲಾವಿದರು ತಾರಾಗಣದಲ್ಲಿ ಇದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್, ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಕೂಡ ಮೂಡಿದೆ

  • ಉಪ್ಪಿ ಸಿನಿಮಾ ಶೂಟಿಂಗ್ ಶುರು : ಹೀರೋಯಿನ್ ಯಾರು?

    ಉಪ್ಪಿ ಸಿನಿಮಾ ಶೂಟಿಂಗ್ ಶುರು : ಹೀರೋಯಿನ್ ಯಾರು?

    ಉಪೇಂದ್ರ ಮತ್ತೊಮ್ಮೆ ನಿರ್ದೇಶಕರಾಗಿರೋ ಸಿನಿಮಾ ಯುಐ ಚಿತ್ರದ ಶೂಟಿಂಗ್ ಶುರುವಾಗಿದೆ. ಇತ್ತೀಚೆಗಷ್ಟೇ ಬಂಡಿಕಾಳಮ್ಮ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿತ್ತು. ಬಹುತೇಕ ಚಿತ್ರರಂಗವೇ ಹಾಜರಿದ್ದು ಡೈರೆಕ್ಟರ್ ಉಪ್ಪಿಗೆ ಶುಭ ಕೋರಿತ್ತು.

    ಮಂಗಳವಾರದಿಂದ ಚಿತ್ರದ ಚಿತ್ರೀಕರಣ ಶುರುವಾಗಿದೆ. ಕೆ.ಪಿ.ಶ್ರೀಕಾಂತ್, ಲಹರಿ ಮನೋಹರ್ ಜಂಟಿ ನಿರ್ಮಾಣದ ಚಿತ್ರವಿದು.

    ಉಪೇಂದ್ರ ಚಿತ್ರಕ್ಕೆ ಈ ಬಾರಿಯೂ ದಕ್ಷಿಣ ಭಾರತದ ದೊಡ್ಡ ನಟಿಯೊಬ್ಬರು ಬರಲಿದ್ದಾರೆ ಎಂಬ ಸುದ್ದಿ ಇದೆ. ಮೂಲಗಳ ಪ್ರಕಾರ ಉಪೇಂದ್ರ ಟೀಂ ತಮನ್ನಾ ಭಾಟಿಯಾ ಅವರನ್ನು ಸಂಪರ್ಕಿಸಿದೆ ಎನ್ನಲಾಗಿದೆ.

  • ಉಪ್ಪಿಗೆ ರೀಷ್ಮಾ ನಾಣಯ್ಯ ಹೀರೋಯಿನ್

    ಉಪ್ಪಿಗೆ ರೀಷ್ಮಾ ನಾಣಯ್ಯ ಹೀರೋಯಿನ್

    ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಸೆನ್ಸೇಷನ್ ಯು&ಐ ಚಿತ್ರಕ್ಕೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಆಯ್ಕೆಯಾಗಿದ್ದಾರೆ. ಏಕ್ ಲವ್ ಯಾ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ರೀಷ್ಮಾಗೆ ಇದು ಬಂಪರ್ ಪ್ರೈಜ್. ಮೊದಲ ಚಿತ್ರದಲ್ಲೇ ಏಕ್ ಲವ್ ಯಾದಲ್ಲಿ ಜೋಗಿ  ಪ್ರೇಮ್ ಜೊತೆ ಕೆಲಸ ಮಾಡಿದ್ದ ರೀಷ್ಮಾ ನಾಣಯ್ಯ, ಅದಾದ ಮೇಲೆ ರಾಣ ಚಿತ್ರದಲ್ಲಿ ನಟಿಸಿದ್ದರು. ಈಗ ಗೋಲ್ಡನ್ ಸ್ಟಾರ್ ಜೊತೆ  ಬಾನ ದಾರಿಯಲ್ಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಯಲ್ಲೇ ರೀಷ್ಮಾ ನಾಣಯ್ಯಗೆ ಉಪ್ಪಿಗೆ ನಾಯಕಿಯಾಗುವ ಅವಕಾಶ ಒದಗಿ ಬಂದಿದೆ.

    ಉಪೇಂದ್ರ ಹೀರೋ ಆಗಿರುವ ಚಿತ್ರ ಎಂದಷ್ಟೇ ಅಲ್ಲ, ಅವರೇ ನಿರ್ದೇಶಕರಾಗಿರುವುದೂ ರೀಷ್ಮಾಗೆ ಪ್ಲಸ್ ಪಾಯಿಂಟ್. ಜೊತೆಗೆ ಲಹರಿ ಮನೋಹರ್, ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರ. ದೊಡ್ಡ ಬ್ಯಾನರ್. ಉಪ್ಪಿ ಚಿತ್ರದಲ್ಲಿ ನಟನೆಗೂ ಭರಪೂರ ಅವಕಾಶವಿರುತ್ತದೆ.