ಸಾರ್.. ನಾನೊಬ್ಬ ಒಳ್ಳೆ ಡೈರೆಕ್ಟರು.. ಹೀಗೆ ಶುರುವಾಗುವ ಕಥೆಯ ಟ್ರೇಲರ್ 2 ನಿಮಿಷ 40 ಸೆಕೆಂಡ್ ಮುಗಿದ ಮೇಲೂ ಮುಖದ ಮೇಲೊಂದು ಮುಗುಳ್ನಗೆ ಉಳಿಸುತ್ತೆ. ಚಿತ್ರದ ಟ್ರೇಲರಿನ ತಾಕತ್ತೇ ಅದು. ಅವನು ಹೇಳೋ ಯಾವ ಕಥೆ ಸತ್ಯ.. ಯಾವ ಕಥೆ ಸುಳ್ಳು ಅನ್ನೋದು ಅರ್ಥವೇ ಆಗಲ್ಲ.
ರಿಷಬ್ ಕಥೆ ಹೇಳೋದು ಯೋಗರಾಜ್ ಭಟ್ಟರಿಗೆ. ಆದರೆ, ಆಕ್ಚುಯಲಿ ಕಥೆ ಹೇಳೋದು ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್. ಜಾಯಿಂಟ್ ಡೈರೆಕ್ಷನ್.
ಟ್ರೇಲರಿನ ಮಧ್ಯೆ ಇಣುಕಿ ಹೋಗುವ ನಾಯಕಿಯರಾದ ತಪಸ್ವಿನಿ ಪೂಣಚ್ಚ ಮತ್ತು ರಚನಾ ಇಂದರ್ ಮತ್ತೆ ಮತ್ತೆ ನೋಡಬೇಕು ಎನ್ನುವಷ್ಟು ಮುದ್ದಾಗಿ ಕಾಣುತ್ತಾರೆ. ಹೊನ್ನವಳ್ಳಿ ಕೃಷ್ಣ ನಿಜಕ್ಕೂ ಗಿರಿಯ ಅಪ್ಪನಾ? ಪ್ರಮೋದ್ ಶೆಟ್ಟಿ ಅದ್ಯಾಕೆ ಅಷ್ಟು ರಗಡ್ ಆಗ್ತಾರೆ. ಅಷ್ಟು ರಗಡ್ ಆಗಿ ಕಾಣ್ತಿದ್ದರೂ.. ನಮಗ್ಯಾಕೆ ನಗು ಬರುತ್ತೆ.. ಗೊತ್ತಾಗೋಕೆ ಸಿನಿಮಾ ನೋಡಬೇಕಷ್ಟೆ.
ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾ ಜೂನ್ 23ಕ್ಕೆ ರಿಲೀಸ್ ಆಗುತ್ತಿದೆ.