` ellara kaal eliyuthe kaala, - chitraloka.com | Kannada Movie News, Reviews | Image

ellara kaal eliyuthe kaala,

  • ಎಲ್ರ ಕಾಲೆಳೆಯುತ್ತೆ ಕಾಲ.. : ಟೀಸರ್ ನೋಡಿದ್ರಾ?

    ಎಲ್ರ ಕಾಲೆಳೆಯುತ್ತೆ ಕಾಲ.. : ಟೀಸರ್ ನೋಡಿದ್ರಾ?

    ಹೀರೋ ಪೊಗರು ಸೆನ್ಸೇಷನ್ ಸ್ಟಾರ್ ಚಂದನ್ ಶೆಟ್ಟಿ. ಡೈರೆಕ್ಟರ್ ಸಗಣಿ ಪಿಂಟೋ ಖ್ಯಾತಿಯ ಸುಜಯ್ ಶಾಸ್ತ್ರಿ. ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರದ ಟೀಸರ್ ಹೊರಬಂದಿದೆ. ನಗದೇ ಇದ್ದವನಿಗೆ ಇದ್ನೋಡು ಗ್ರಾಮದ ಊರ್ಬಾಗ್ಲು ಟೀಸ್ಟಾಲ್‍ನಲ್ಲಿ ಎಲ್ಲ ಫ್ರೀ.. ಎನ್ನುವಷ್ಟು ತರಲೆ.. ತಮಾಷೆ ಇದೆ.

    ಮೂರೇ ಮೂರು ಪೆಗ್ಗಿಗೆ ತಲೆ ಗಿರಗಿರ ಎನ್ನಿಸಿದ್ದ ಚಂದನ್ ಶೆಟ್ಟಿ, ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಅವರ ತಲೆಯನ್ನೇ ಗಿರಗಿರ ಎನ್ನಿಸಿರೋದು ಸುಜಯ್ ಶಾಸ್ತ್ರಿ. ಏರಿದ ಕಿಕ್ ಇಳಿಸೋ ಹಾಗೆ ಸವಾಲ್ ಹಾಕಿರೋದು ನಾಯಕಿ ಅರ್ಚನಾ ಕೊಟ್ಟಿಗೆ.

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಮೂಲಕ ಡೈರೆಕ್ಟರ್ ಆದ ಸುಜಯ್ ಶಾಸ್ತ್ರ ಅವರಿಗೆ ಇದು 2ನೇ ಸಿನಿಮಾ. ಒಬ್ಬ ಸಂಗೀತ ನಿರ್ದೇಶಕ ನಾಯಕನಾಗಿರೋ ಚಿತ್ರಕ್ಕೆ ಸಂಗೀತ ನೀಡಿರೋ ಪ್ರವೀಣ್-ಪ್ರದೀಪ್ ಜೋಡಿ ಭರವಸೆ ಮೂಡಿಸಿದೆ. ಉಷಾ ಗೋವಿಂದರಾಜು ನಿರ್ಮಾಣದ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ತಾರಾ, ಮಂಡ್ಯ ರಮೇಶ್, ದತ್ತಣ್ಣ, ಮಂಜು ಪಾವಗಡ.. ಹೀಗೆ ಸೀನಿಯರ್ ಕಲಾವಿದರೇ ಚಿತ್ರದಲ್ಲಿದ್ದಾರೆ. ಟೀಸರ್‍ನಲ್ಲಿ ಕಥೆಯ ಗುಟ್ಟು ಬಿಡದ ಸುಜಯ್ ಶಾಸ್ತ್ರಿ, ಇದೊಂದು ಪಕ್ಕಾ ಕಾಮಿಡಿ ಮೂವಿ ಅನ್ನೋದನ್ನು ಮಾತ್ರ ಸ್ಪಷ್ಟವಾಗಿ ಹೇಳಿದ್ದಾರೆ.ನ

  • ಹುಡುಗ ಹೆಂಗತ ಕೇಳಬ್ಯಾಡಿರಿ.. ಗೋಲ್ಡ್ ಫ್ಯಾಕ್ಟರಿ ಹಾಡು ಕೇಳಿದ್ರಾ..

    ಹುಡುಗ ಹೆಂಗತ ಕೇಳಬ್ಯಾಡಿರಿ.. ಗೋಲ್ಡ್ ಫ್ಯಾಕ್ಟರಿ ಹಾಡು ಕೇಳಿದ್ರಾ..

    ಹುಡುಗ ಹೆಂಗತ ಕೇಳಬ್ಯಾಡಿರಿ..

    ಬೆನ್ನ ಹಿಂದೈತೆ ಹೆಸರು ಭರ್ಜರಿ..

    ಒಳ್ಳೆತನಕೆ ಇವನೆ ಗುರುತುರೀ..

    ಒಳಗಿನ್ ವಿಷ್ಯಾ ಯಾಕೆ ಬೇಕುರೀ..

    ಹುಡುಗ ಗೋಲ್ಡ್ ಅಲ್ಲ.. ಗೋಲ್ಡ್ ಫ್ಯಾಕ್ಟರಿ ಎಂದು ವರ್ಣಿಸುವ ರೆಟ್ರೋಶೈಲಿಯ ಹಾಡು.. ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರದ್ದು.

    ಹೀರೋ ಚಂದನ್ ಶೆಟ್ಟಿಯಾದರೂ.. ಹಾಡಿನಲ್ಲಿಯೂ ಅವರು ಪ್ರೇಕ್ಷಕ. ಗುರುರಾಜ್ ಹೊಸಕೋಟೆ, ಪ್ರವೀಣ್-ಪ್ರದೀಪ್ ಜೋಡಿ ಹಾಡಿರೋ ಹಾಡು. ಮ್ಯೂಸಿಕ್ಕೂ ಪ್ರವೀಣ್-ಪ್ರದೀಪ್ ಜೋಡಿಯದ್ದೇ.

    ಸುಜಯ್ ಶಾಸ್ತ್ರಿ ನಿರ್ದೇಶನದ ಚಿತ್ರಕ್ಕೆ ಉಷಾ ಗೋವಿಂದ ರಾಜು ನಿರ್ಮಾಪಕರು. ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಚಂದನ್ ಶೆಟ್ಟಿಯೆದುರು  ಅರ್ಚನಾ ಕೊಟ್ಟಿಗೆ ಹೀರೋಯಿನ್. ತಾರಾ, ಮಂಡ್ಯ ರಮೇಶ್, ದತ್ತಣ್ಣ, ಮಂಜು ಪಾವಗಡ.. ಹೀಗೆ ಪ್ರತಿಭಾವಂತರ ದಂಡೇ ಇರುವ ಚಿತ್ರದ ಕಥೆ ಕೂಡಾ ರೆಟ್ರೋ ಶೈಲಿಯಲ್ಲಿಯೇ ಇದೆ.