` monsoon raga, - chitraloka.com | Kannada Movie News, Reviews | Image

monsoon raga,

 • ಆಗಸ್ಟ್ 19ಕ್ಕೆ ಮಾನ್ಸೂನ್ ರಾಗ : ತುಳು ಹಾಡು ಹೇಗಿದೆ ನೋಡಿದ್ರಾ?

  ಆಗಸ್ಟ್ 19ಕ್ಕೆ ಮಾನ್ಸೂನ್ ರಾಗ : ತುಳು ಹಾಡು ಹೇಗಿದೆ ನೋಡಿದ್ರಾ?

  ತುಳು, ಪರಭಾಷೆಯೇನಲ್ಲ. ಕನ್ನಡದ್ದೇ ಉಪಭಾಷೆ. ಕರಾವಳಿಯಲ್ಲಿ ಆ ಭಾಷೆಯ ಸೊಗಡು ಕೇಳುವುದೇ ಚೆಂದ. ಈಗ ಮಾನ್ಸೂನ್ ರಾಗ ಚಿತ್ರದಲ್ಲಿ ತುಳುವಿನಲ್ಲೇ ಒಂದು ಹಾಡು ಸಿದ್ಧವಾಗಿದೆ. ಡಾಲಿ ಧನಂಜಯ್ ಹೀರೋ ಆಗಿರುವ ಮಾನ್ಸೂನ್ ರಾಗ ಚಿತ್ರದಲ್ಲಿನ ರಾಗ ಸುಧಾ ಇಂಟ್ರೊ ಸೀನ್‍ನ ಹಾಡು ಇರೋದು ತುಳುವಿನಲ್ಲಿ. ಹಾಡಿಗೆ ಹೆಜ್ಜೆ ಹಾಕಿರೋದು ತುಳು ಚಿತ್ರರಂಗದ ಸೆನ್ಸೇಷನ್ ಯಶಾ ಶಿವಕುಮಾರ್.

  ಅನೂಪ್ ಸಿಳೀನ್ ಸಂಗೀತ ನೀಡಿದ್ದು, ಹಾಡಿಗೆ ಸಾಹಿತ್ಯ ಒದಗಿಸಿರೋದು ಗಣೇಶ್ ಉಪಾಧ್ಯ. ಎ.ಆರ್.ವಿಖ್ಯಾತ್ ನಿರ್ಮಾಪಕರಾಗಿದ್ದು ಎಸ್.ಎ.ರವೀಂದ್ರನಾಥ್ ನಿರ್ದೇಶನವಿದೆ. ಮಾನ್ಸೂನ್ ರಾಗ ಆಗಸ್ಟ್ 19ಕ್ಕೆ ರಿಲೀಸ್ ಆಗುತ್ತಿದೆ.

  ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಇದೇ ಮೊದಲ ಬಾರಿಗೆ ಜೊತೆಯಾಗಿ ನಟಿಸಿರೋ ಚಿತ್ರದಲ್ಲಿ ಸುಹಾಸಿನಿ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ.

 • ಕಣ್ಣಲ್ಲೇ ಪ್ರೇಮರಾಗ ಹಾಡಿದ ಡಾಲಿ-ಡಿಂಪಲ್

  ಕಣ್ಣಲ್ಲೇ ಪ್ರೇಮರಾಗ ಹಾಡಿದ ಡಾಲಿ-ಡಿಂಪಲ್

  ನಿಂಗ್ ಒಳ್ಳೆ ಹುಡ್ಗೀರು ಎಷ್ಟೋ ಜನ ಸಿಗ್ತಿದ್ರು. ನಾನ್ ಈ ಥರಾ ಅಂತ ಗೊತ್ತಿದ್ರೂ ಯಾಕ್ ನನ್ ಲವ್ ಮಾಡ್ದೆ..

  ಇಡೀ ಟ್ರೇಲರಿನಲ್ಲಿರೋದು ಅದೊಂದೇ ಒಂದು ಡೈಲಾಗ್. ಮಿಕ್ಕ ಸಂಭಾಷಣೆಯೆಲ್ಲ ಕೇವಲ ಕಣ್ಣಿನಲ್ಲೇ.. ರಚಿತಾ ರಾಮ್, ಡಾಲಿ ಧನಂಜಯ್, ಸುಹಾಸಿನಿ, ಅಚ್ಯುತ್.. ಎಲ್ಲರೂ ಕಣ್ಣಿನಲ್ಲೇ ಕೆಣಕಿ.. ನಗಿಸಿ.. ಅಳಿಸುವ ಸಕಲ ಸೂಚನೆಯನ್ನೂ ಕೊಟ್ಟುಬಿಡ್ತಾರೆ. ಮಾನ್ಸೂನ್ ರಾಗ ಟ್ರೇಲರ್, ಅದರೊಳಗಿನ ಕಲರ್ ಕಾಂಬಿನೇಷನ್.. ಬಿಜಿಎಂನಲ್ಲಿ ಅನೂಪ್ ಸಿಳೀನ್.. ಎಲ್ಲರೂ ಹೃದಯಕ್ಕೇ ಲಗ್ಗೆ ಹಾಕುತ್ತಾರೆ. ಸಿನಿಮಾ ರಿಲೀಸ್ ಆಗ್ತಿರೋದು ಆಗಸ್ಟ್ 19ಕ್ಕೆ.

  ಇದೇ ಮೊದಲ ಬಾರಿಗೆ ಡಾಲಿ & ಡಿಂಪಲ್ ಒಟ್ಟಿಗೇ ನಟಿಸಿದ್ದಾರೆ. ಅಚ್ಯುತ್ ಜೊತೆ ಸುಹಾಸಿನಿ. ಈ ಚಿತ್ರದಲ್ಲಿ ನನ್ನದು ಲೈಂಗಿಕೆ ಕಾರ್ಯಕರ್ತೆಯ ಪಾತ್ರ. ಹಾಡುಗಳಂತೂ ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಎನಿಸುವಂತಿವೆ. ಪ್ರತಿ ಪಾತ್ರವನ್ನು ನಿರ್ದೇಶಕರು ಅದ್ಭುತವಾಗಿ ತೋರಿಸಿದ್ದಾರೆ ಎಂದು ಡೈರೆಕ್ಟರ್ ರವೀಂದ್ರ ನಾಥ್ ಅವರಿಗೆ ನೀಡಿದ್ದಾರ ರಚಿತಾ.

  ದಯವಿಟ್ಟು ಸಿನಿಮಾ ನೋಡಿ. ರಚಿತಾ ಅವರದ್ದು ಲೈಂಗಿಕ ಕಾರ್ಯಕರ್ತೆಯ ಪಾತ್ರವಾದರೂ ಒಂದೇ ಒಂದು ಮುಜುಗರದ ದೃಶ್ಯ, ಸಂಭಾಷಣೆ ಇಲ್ಲ. ಇಡೀ ಸಿನಿಮಾವನ್ನು ಕುಟುಂಬದೊಂದಿಗೆ ಕೂತು ನೋಡಬಹುದು. ರಚಿತಾ ರಾಮ್ ಕಣ್ಣುಗಳ ಮಾತುಕತೆಗೆ ಚಿತ್ರದಲ್ಲಿ ಉತ್ತರ ಇದೆ ಎಂದಿದ್ದಾರೆ ಡಾಲಿ. ವಿಖ್ಯಾತ್ ನಿರ್ಮಾಣದ ಚಿತ್ರಕ್ಕೆ ಸಿಕ್ಕಿರುವ ಅಭೂತಪೂರ್ವ ಪ್ರತಿಕ್ರಿಯೆ ಚಿತ್ರತಂಡದವರಿಗಂತೂ ಖುಷಿ ಕೊಟ್ಟಿದೆ.

 • ಡಾಲಿ ಡಿಂಪಲ್ ಮಾನ್ಸೂರ್ ರಾಗ ರಿಲೀಸ್ ಡೇಟ್ ಫಿಕ್ಸ್

  ಡಾಲಿ ಡಿಂಪಲ್ ಮಾನ್ಸೂರ್ ರಾಗ ರಿಲೀಸ್ ಡೇಟ್ ಫಿಕ್ಸ್

  ಬಡವ ರಾಸ್ಕಲ್ ನಂತರ ಒಂದು ಕಡೆ ಹೊಸ ಹೊಸ ಚಿತ್ರಗಳಲ್ಲಿ ಬ್ಯುಸಿಯಾಗಿರೋ ಡಾಲಿ ಧನಂಜಯ್, ಥಿಯೇಟರ್‍ನ್ನು ಇಡೀ ವರ್ಷ ಆಕ್ರಮಿಸುವ ಸೂಚನೆಗಳಿವೆ. ಡಾಲಿಗೆ ಪೈಪೋಟಿ ಕೊಡುವಂತೆ ಬ್ಯಾಕ್ ಟು ಸಿನಿಮಾಗಳ ಮೂಲಕ ಥಿಯೇಟರಲ್ಲಿ ಕಾಣಿಸಿರೋದು ಡಿಂಪಲ್ ಕ್ವೀನ್ ರಚಿತಾ ರಾಮ್. ಅವರಿಬ್ಬರೂ ಜೊತೆಯಾಗಿ ನಟಿಸಿರೋ ಸಿನಿಮಾ ಮಾನ್ಸೂನ್ ರಾಗಕ್ಕೆ ಬಿಡುಗಡೆ ಸಮಯ ಹತ್ತಿರ ಬಂದಿದೆ. ಆಗಸ್ಟ್ 12ಕ್ಕೆ ಸಿನಿಮಾ ರಿಲೀಸ್ ಎಂದು ಘೋಷಿಸಿದೆ ಚಿತ್ರತಂಡ.

  ಸುಮಾರು 8 ತಿಂಗಳ ಹಿಂದೆ ಚಿತ್ರದ ಒಂದು ಪುಟ್ಟ ಟೀಸರ್ ಬಿಟ್ಟಿತ್ತು ಚಿತ್ರತಂಡ. ಒಂದೇ ಒಂದು ಡೈಲಾಗ್ ಇಲ್ಲದ ಆ ಟೀಸರ್‍ನಲ್ಲಿಯೇ ಹೃದಯ ಮುಟ್ಟುವಂತಾ ಪುಟ್ಟ ಕಥೆ ಹೇಳಿದ್ದರು ನಿರ್ದೇಶಕ ಎಸ್.ರವೀಂದ್ರನಾಥ್. ವಿಖ್ಯಾತ್ ನಿರ್ಮಾಣದ ಚಿತ್ರದಲ್ಲಿ ಅನೂಪ್ ಸಿಳೀನ್ ಅವರ ಸಂಗೀತವೂ ಅಷ್ಟೇ ಗಮನ ಸೆಳೆದಿತ್ತು. ಆ ಮಾನ್ಸೂನ್ ರಾಗದ ರಿಲೀಸ್ ಡೇಟ್ ಅನೌನ್ಸ್ ಮಾಡಿರೋ ಚಿತ್ರತಂಡದ ಎದುರು ಚಿತ್ರದ ಪ್ರಚಾರಕ್ಕೆ ಮುಂದಾಗಲು ಇನ್ನೂ 3 ತಿಂಗಳಿದೆ.

  ಇತ್ತ ಡಾಲಿ ನಟಿಸಿರುವ ಕನ್ನಡ ಮತ್ತು ಮಲಯಾಳಂನ 21 ಅವರ್ಸ್ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಡೇಟ್ ಘೋಷಿಸಿದೆ. ಶಿವಣ್ಣ ಜೊತೆ ನಟಿಸಿರೋ ಬೈರಾಗಿ, ತಮ್ಮದೇ ನಿರ್ಮಾಣದ ಹೆಡ್ ಬುಷ್, ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ, ಹೊಯ್ಸಳ, ತೋತಾಪುರಿ, ತೆಲುಗಿನಲ್ಲಿ ಪುಷ್ಪ 2.. ಹೀಗೆ ಡಾಲಿ ಚಿತ್ರಗಳ ಲಿಸ್ಟು ತುಂಬಾ ದೊಡ್ಡದು. ಇತ್ತ ರಚಿತಾ ನಟಿಸಿದ್ದ 4 ಚಿತ್ರಗಳು ಈ ವರ್ಷ ಈಗಾಗಲೇ ರಿಲೀಸ್ ಆಗಿವೆ. 8 ಚಿತ್ರಗಳು ಕ್ಯೂನಲ್ಲಿವೆ.

 • ಡಾಲಿ ರಚಿತಾ ರಾಗಕ್ಕೆ ಶುರುವಾಯ್ತು ಕ್ರೇಜ್

  ಡಾಲಿ ರಚಿತಾ ರಾಗಕ್ಕೆ ಶುರುವಾಯ್ತು ಕ್ರೇಜ್

  ಡಾಲಿ ಧನಂಜಯ್ ಎಂಥದ್ದೇ ಪಾತ್ರಕ್ಕಾದರೂ ಜೀವ ತುಂಬಬಲ್ಲ ನಟ. ಆದರೆ ಇತ್ತೀಚೆಗೆ ರಗಡ್ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡಿದ್ದ ಡಾಲಿ ಸ್ವಲ್ಪ ಹೋಮ್ಲಿಯಾಗಿ ಕಾಣಿಸಿಕೊಂಡಿರೋದು ಮಾನ್ಸೂನ್ ರಾಗ ಚಿತ್ರದಲ್ಲಿ. ಈ ಚಿತ್ರದಲ್ಲಿ ಡಾಲಿಗೆ ಇದೇ ಮೊದಲ ಬಾರಿಗೆ ಜೊತೆಯಾಗಿರೋದು ಡಿಂಪಲ್ ಕ್ವೀನ್ ರಚಿತಾ ರಾಮ್. ಇದರ ಮಧ್ಯೆ ಚಿತ್ರದ ಪ್ರಮೋಷನ್‍ಗಾಗಿ ಯಶಾ ಶಿವಕುಮಾರ್ ಅವರು ಹಾಡಿ ಕುಣಿದಿರೋ ರಾಗುಸುಧಾ ಥೀಮ್ ಸಾಂಗ್ ಸೂಪರ್ ಹಿಟ್ ಆಗಿದೆ. ಇದೆಲ್ಲದರ ಜೊತೆ ಫ್ಯಾನ್ಸ್ ಆಗಲೇ ಕಟೌಟ್ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಕ್ರೇಜ್ ಅಂದ್ರೆ ಇದು...

  ಚಿತ್ರದಲ್ಲಿ ರಚಿತಾ ಅವರದ್ದು ತುಂಬಾ ವಿಭಿನ್ನವಾದ ರೋಲ್. ಅಷ್ಟೇ ಚಾಲೆಂಜಿಂಗ್. ಅಂತಾದ್ದೊಂದು ಪಾತ್ ಒಪ್ಪಿಕೊಳ್ಳೋಕೂ ಧೈರ್ಯ ಬೇಕು ಎನ್ನುತ್ತಾರೆ ಡೈರೆಕ್ಟರ್ ರವೀಂದ್ರನಾಥ್. ತುಂಬಾ ಟಫ್ ರೋಲ್. ರಚಿತಾ ಅದನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡು ನಟಿಸಿದ್ದಾರೆ ಎಂದು ಖುಷಿಯಾಗಿದ್ದಾರೆ ರವೀಂದ್ರನಾಥ್.

  ಎ.ಆರ್. ವಿಖ್ಯಾತ್ ನಿರ್ಮಾಣದ ಚಿತ್ರವಿದು.

  ಚಿತ್ರಕ್ಕೆ ಸಂಗೀತ ನೀಡಿರುವುದು ಅನೂಪ್ ಸಿಳೀನ್. ರಾಗಸುಧಾ ಸಾಂಗ್‍ನಲ್ಲಿ ಚಂಡೆ ಮತ್ತು ವಯೊಲಿನ್ ಜುಗಲ್‍ಬಂದಿ ತಂದು ಗೆದ್ದಿರೋ ಅನೂಪ್ ಆ ಹಾಡಿನಲ್ಲಿ ತುಳು ಪದಗಳನ್ನೂ ಚೆಂದವಾಗಿ ಬಳಸಿಕೊಂಡಿದ್ದಾರೆ.

 • ಡಾಲಿ-ಡಿಂಪಲ್ ಲವ್ ಸ್ಟೋರಿ ನೋಡೋಕೆ ಇನ್ನೂ ಇನ್ನೂ ಕಾಯಬೇಕು..

  ಡಾಲಿ-ಡಿಂಪಲ್ ಲವ್ ಸ್ಟೋರಿ ನೋಡೋಕೆ ಇನ್ನೂ ಇನ್ನೂ ಕಾಯಬೇಕು..

  ಮಾನ್ಸೂನ್ ರಾಗ. ಎಲ್ಲವೂ ಪ್ಲಾನ್ ಪ್ರಕಾರವೇ ಆಗಿದ್ದರೆ ಆಗಸ್ಟ್ 19ಕ್ಕೆ ರಿಲೀಸ್ ಆಗಬೇಕಿತ್ತು. ಚಿತ್ರದ ಟ್ರೇಲರ್ ಅಂತೂ ಅದ್ಭುತವಾಗಿ ಮೂಡಿ ಬಂದಿತ್ತು. ಡಾಲಿ ಧನಂಜಯ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಕಣ್ಣಿನಲ್ಲೇ ಮಾತನಾಡಿದ್ದ ಲವ್ ಸ್ಟೋರಿ. ಪ್ರೇಕ್ಷಕರು ಫಿದಾ ಆಗಿಬಿಟ್ಟಿದ್ದರು. ಈಗ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ.

  ಸಿನಿಮಾದ ಟ್ರೇಲರಿನಲ್ಲಿ ಮಳೆ ಮತ್ತು ಸಂಗೀತ ಎರಡನ್ನೂ ಮಿಕ್ಸ್ ಮಾಡಲಾಗಿತ್ತು. ಈ ಅನುಭವವನ್ನು ಇಡೀ ಸಿನಿಮಾದಲ್ಲಿ ನೀಡುವುದಕ್ಕೆ ಚಿತ್ರತಂಡ ಮುಂದಾಗಿರುವುದೇ ಚಿತ್ರದ ಬಿಡುಗಡೆ ಮುಂದೆ ಹೋಗೋಕೆ ಕಾರಣ. ಚಿತ್ರದ ಕ್ವಾಲಿಟಿ ಹೆಚ್ಚಿಸಬೇಕು. ಮಳೆ ಮತ್ತು ಸಂಗೀತ ಎರಡೂ ಮಿಕ್ಸ್ ಆಗಿ ಪ್ರೇಕ್ಷಕರಿಗೆ ಥ್ರಿಲ್ ಕೊಡಬೇಕು. ಹೀಗಾಗಿ ಸ್ವಲ್ಪ ಸಮಯ ಕೊಡಿ ಎಂದು ಸಂಗೀತ ನಿರ್ದೇಶಕ  ಅನೂಪ್ ಸಿಳೀನ್ ಕೇಳಿರುವ ಹಿನ್ನೆಲೆಯಲ್ಲಿ ನಿರ್ಮಾಪಕ ವಿಖ್ಯಾತ್ ಚಿತ್ರದ ಬಿಡುಗಡೆಯನ್ನೇ ಮುಂದೆ ಹಾಕಿದ್ದಾರೆ.

  ರವೀಂದ್ರನಾಥ್ ನಿರ್ದೇಶನದ ಮಾನ್ಸೂನ್ ರಾಗ ಚಿತ್ರ ರೆಗ್ಯುಲರ್ ಚಿತ್ರಗಳಿಗಿಂತ ಹೊರತಾದ ಬೇರೆಯದೇ ಲೆವೆಲ್ಲಿನಲ್ಲಿದೆ. ಅದನ್ನೂ ಇನ್ನೂ ಒಂದು ಲೆವೆಲ್ ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿ ನಿರತವಾಗಿ ಮಾನ್ಸೂನ್ ರಾಗ ಟೀಂ.

 • ಡಾಲಿ-ರಚಿತಾ ರಾಗ.. ಹೃದಯಕಿಳಿದಂತೆ..

  ಡಾಲಿ-ರಚಿತಾ ರಾಗ.. ಹೃದಯಕಿಳಿದಂತೆ..

  ಮೇಘರಾಜನ ರಾಗ..

  ಹನಿಗಳಾದಂತೆ..

  ಧಮನಿ ಧಮನಿಯೂ ಸೇರಿ..

  ದನಿಗಳಾದಂತೆ..

  ಹಿನ್ನೆಲೆಯಲ್ಲಿ ಅರವಿಂದ್ ವೇಣುಗೋಪಾಲ್ ಅವರ ಕಂಠ ಹೃದಯದಿಂದಲೇ ಚಿಮ್ಮುತ್ತಿದೆಯೇನೋ ಎಂಬಂತೆ ಹಾಡುತ್ತಿದ್ದರೆ.. ಕೇಳುಗ ಅಲ್ಲೇ ಕಳೆದುಹೋಗುತ್ತಾನೆ. ಕೆ.ಕಲ್ಯಾಣ್ ಅವರ ಪದಗಳು ಚೆಂದವೋ.. ಅಜನೀಶ್ ಲೋಕನಾಥ್ ಮ್ಯೂಸಿಕ್ ಚೆಂದವೋ.. ಡಾಲಿ-ರಚಿತಾರ ನಗುಮೊಗವೇ ಚೆಂದವೋ.. ಮಾನ್ಸೂನ್ ರಾಗ ನೇರ ಹೃದಯಕ್ಕಿಳಿದಿದೆ.

  ಇತ್ತೀಚೆಗಷ್ಟೇ ಲವ್ 360 ಚಿತ್ರದ ಜಗವೇ ನೀನು ಗೆಳತಿಯೇ.. ಹಾಡು ಮೆಲೋಡಿ ಯುಗಕ್ಕೆ ಹೊತ್ತುಕೊಂಡು ಹೋಗಿತ್ತು. ಗಾಳಿಪಟದ ನಾನಾಡದ ಮಾತೆಲ್ಲವ.. ಹಾಡೂ ಮೋಡಿ ಮಾಡಿತ್ತು. ಕಾಂತಾರದ ಸಿಂಗಾರ ಸಿರಿಯೇ.. ಅಂತಹುದೇ ಸಿರಿ ಹೊತ್ತು ತಂದಿತ್ತು. ಈಗ.. ಮಾನ್ಸೂನ್ ರಾಗದ

  ಮೇಘರಾಜನ ರಾಗ..

  ಹನಿಗಳಾದಂತೆ..

  ಮೆಲೋಡಿ ಯುಗಕ್ಕೆ ಅಳಿವಿಲ್ಲ ಎನ್ನುವುದನ್ನು ಸಾಬೀತು ಪಡಿಸಿದೆ. ಸಂಗೀತ ಗುನುಗುನುಗುನುಗುವಂತಿದೆ. ಎಸ್.ರವೀಂದ್ರನಾಥ್ ನಿರ್ದೇಶನದ ಮಾನ್ಸೂನ್ ರಾಗ ಚಿತ್ರಕ್ಕೆ ಎ.ಆರ್.ವಿಖ್ಯಾತ್ ನಿರ್ಮಾಪಕ. ಡಾಲಿ ಧನಂಜಯ, ರಚಿತಾ ರಾಮ್, ಸುಹಾಸಿನಿ, ಅಚ್ಯುತ್ ಕುಮಾರ್, ಯಶಾ ಶಿವಕುಮಾರ್ ಮೊದಲಾದವರು ನಟಿಸಿರುವ ಮಾನ್ಸೂನ್ ರಾಗ ಸೆಪ್ಟೆಂಬರ್ 16ಕ್ಕೆ ರಿಲೀಸ್ ಆಗುತ್ತಿದೆ.

 • ಡಿಂಪಲ್ ಸ್ಟೆಪ್ಪಿಗೆ ಡಾಲಿ ಶಿಳ್ಳೆ ಹೊಡೆದು ಬಂದಾಗ..

  ಡಿಂಪಲ್ ಸ್ಟೆಪ್ಪಿಗೆ ಡಾಲಿ ಶಿಳ್ಳೆ ಹೊಡೆದು ಬಂದಾಗ..

  ಮುದ್ದು ಮುದ್ದು ಮುಖದ ಮುಗ್ಧ ಚೆಲುವೆ ರಚಿತಾ ರಾಮ್.. ಕಣ್ಣಿಗೆ ಕೂಲಿಂಗ್ ಗ್ಲಾಸು.. ಮುಖದ ತುಂಬಾ ನಗು.. ಎಂದಿನಂತೆ ನೋಡುವವರೆನ್ನೆಲ್ಲ ಹಳ್ಳಕ್ಕೆ ಬೀಳಿಸೋ ಗುಳಿಕೆನ್ನೆ.. ನಿಧಾನವಾಗಿ ಹುಡುಗರ ಹೆಜ್ಜೆ ಹಾಕುತ್ತಿದ್ದರೆ..

  ರೋಮಾಂಚನ ಹುಟ್ಟಿಸುವ ಅನೂಪ್ ಸಿಳೀನ್ ಮ್ಯೂಸಿಕ್.. ಮಾತಿಲ್ಲ.. ಕಥೆಯಿಲ್ಲ. ಬರೀ ಸಂಗೀತ ಸಿಂಚನ.. ನಡುವೆ ರೋಮಾಂಚನ..

  ಹಾಗೆ ರಚಿತಾ ಸ್ಟೆಪ್ಪು ಹಾಕುತ್ತಿದ್ದರೆ ಶಿಳ್ಳೆ ಹೊಡೆದು ಎಂಟ್ರಿ ಕೊಡ್ತಾರೆ ಡಾಲಿ ಧನಂಜಯ್. ಬಿಳಿ ಪಂಚೆ, ಬಿಳಿ ಶರಟಿನ ಕನ್ನಡದ ಸಂಸ್ಕøತಿಯ ಪ್ರತೀಕದಂತಿರೋ ಡಾಲಿ ಎಂಟ್ರಿಯಾದ ಮೇಲೆ ಇಬ್ಬರೂ ಸೇರಿ ಕುಣಿಯತೊಡಗುತ್ತಾರೆ. ಮಾನ್ಸೂನ್ ರಾಗ ಚಿತ್ರಕ್ಕೆ ಇಬ್ಬರೂ ಪ್ರೇಕ್ಷಕರನ್ನು ಕರೆಯುತ್ತಿರುವುದು ಹೀಗೆ..

  ಮುಂದಿನ ವಾರ ಮಾನ್ಸೂನ್ ರಾಗ ರಿಲೀಸ್ ಆಗುತ್ತಿದೆ. ಎಸ್.ಎ.ರವೀಂದ್ರನಾಥ್ ನಿರ್ದೇಶನದ ಚಿತ್ರಕ್ಕೆ ವಿಖ್ಯಾತ್ ನಿರ್ಮಾಪಕರಾಗಿದ್ದಾರೆ. ಇದೇ ಮೊದಲ ಬಾರಿಗೆ ರಚಿತಾ ರಾಮ್ ಮತ್ತು ಡಾಲಿ ಜೋಡಿಯಾಗಿದ್ದಾರೆ. ಕರಾವಳಿ ಸೆನ್ಸೇಷನ್ ಯಶಾ ಶಿವಕುಮಾರ್ ಕೂಡಾ ಇದ್ದಾರೆ. ಸುಹಾಸಿನಿ, ಅಚ್ಯುತ್ ಕುಮಾರ್ ಮೊದಲಾದ ಘಟಾನುಘಟಿ ತಾರಾಗಣದಲ್ಲಿ ಪ್ರೇಕ್ಷಕರಿಗೆ ಮೊದಲು ಸೆಳೆಯುತ್ತಿರೋದು ಅನೂಪ್ ಸಿಳೀನ್ ಸಂಗೀತವೇ.

 • ನನ್ನದು ಇಲ್ಲಿ ವೇಶ್ಯೆಯ ಪಾತ್ರ.. ಆದರೆ..

  ನನ್ನದು ಇಲ್ಲಿ ವೇಶ್ಯೆಯ ಪಾತ್ರ.. ಆದರೆ..

  ರಚಿತಾ ರಾಮ್ ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಮಾನ್ಸೂನ್ ರಾಗದಲ್ಲಿ. ಚಿತ್ರದ ಟ್ರೇಲರಿನಲ್ಲಿ ಇರೋ ಏಕೈಕ ಡೈಲಾಗ್ ಕೂಡ ಅವರದ್ದೇ. ಉಳಿದಂತೆ ಇಡೀ ಟ್ರೇಲರಿನಲ್ಲಿ ಗೆಲ್ಲೋದು ಅನೂಪ್ ಸಿಳೀನ್ ಮ್ಯೂಸಿಕ್ ಮತ್ತು ಡಾಲಿ, ರಚಿತಾ, ಸುಹಾಸಿನಿ, ಅಚ್ಯತ್, ಯಶಾ ಶಿವಕುಮಾರ್ ಅವರ ಕಣ್ಣುಗಳ ಆಟ.

  ನನಗೆ ಈ ತಂಡದೊಂದಿಗೆ ಇದು 2ನೇ ಸಿನಿಮಾ. ಚಿತ್ರದ ಕಥೆ ಮತ್ತು ನನ್ನ ಪಾತ್ರದ ಬಗ್ಗೆ ಕೇಳಿ ತಕ್ಷಣ ಒಪ್ಪಿಕೊಂಡೆ. ನನ್ನದು ಇಲ್ಲಿ ವೇಶ್ಯೆಯ ಪಾತ್ರ. ನಿರ್ದೇಶಕರೇನೋ ಶೂಟ್ ಆದ ನಂತರ ಒಮ್ಮೆ ನೋಡಿ. ಇಷ್ಟವಾಗದಿದ್ದರೆ ಬೇರೆ ಶೂಟ್ ಮಾಡುತ್ತೇವೆ ಎಂದಿದ್ದರು. ಆದರೆ.. ಪಾತ್ರವನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ನನಗೆ ಇಡೀ ತಂಡದ ಮೇಲೆ ನಂಬಿಕೆಯಿತ್ತು. ಪಾತ್ರಕ್ಕೆ ಯಾವ ಸಿದ್ಧತೆಯನ್ನೂ ಮಾಡಿಕೊಳ್ಳಲಿಲ್ಲ. ನಿರ್ದೇಶಕರು ಹೇಳಿದ್ದಷ್ಟನ್ನು ಮಾಡಿದ್ದೇನೆ ಎಂದಿದ್ದಾರೆ ರಚಿತಾ ರಾಮ್.

  ಡಾಲಿ ಧನಂಜಯ್ ಅವರನ್ನು ನಟರಾಕ್ಷಸ ಎಂದೇಕೆ ಕರೆಯುತ್ತಾರೆ ಅನ್ನೋದು ಅವರೊಂದಿಗೆ ನಟಿಸುವಾಗ ಅರ್ಥವಾಯಿತು. ನನ್ನ ಪಾತ್ರ ಮತ್ತು ಅಭಿನಯ ಚಿತ್ರದಲ್ಲಿ ಅಷ್ಟು ಚೆನ್ನಾಗಿದ್ದರೆ ಅದಕ್ಕೆ ಡಾಲಿ ಧನಂಜಯ್ ಕೂಡಾ ಕಾರಣ. ಅವರ ಜೊತೆ ನಟನೆಯಲ್ಲಿ ಸ್ಪರ್ಧಿಸೋದು ನಿಜಕ್ಕೂ ಸವಾಲು ಎಂದಿದ್ದಾರೆ ಡಿಂಪಲ್ ಕ್ವೀನ್.

  ರವೀಂದ್ರನಾಥ್ ನಿರ್ದೇಶನದ ಚಿತ್ರಕ್ಕೆ ವಿಖ್ಯಾತ್ ನಿರ್ಮಾಪಕ. ಆಗಸ್ಟ್ 19ರಂದು ರಿಲೀಸ್ ಆಗುತ್ತಿರುವ ಚಿತ್ರದ ಟ್ರೇಲರ್ ಒಂದೊಳ್ಳೆ ಕಂಟೆಂಟ್ ಚಿತ್ರದಲ್ಲಿದೆ ಅನ್ನೋದನ್ನ ಹೃದಯಕ್ಕೆ ತಟ್ಟುವಂತೆ ಹೇಳಿದೆ.

 • ಮುದ್ದಾದ ಮೂತಿ.. ಮನಸು ಮರಕೋತಿ.. ಅಚ್ಯುತ್ ಕುಮಾರ್ ಹಿಂಗೇಕಾದ್ರು?

  ಮುದ್ದಾದ ಮೂತಿ.. ಮನಸು ಮರಕೋತಿ.. ಅಚ್ಯುತ್ ಕುಮಾರ್ ಹಿಂಗೇಕಾದ್ರು?

  ಅಚ್ಯುತ್ ಕುಮಾರ್. ಅಪ್ಪ.. ಅಣ್ಣ.. ಹೀರೋ.. ವಿಲನ್.. ಕಾಮಿಡಿ.. ಪಾತ್ರ ಎಂಥದ್ದೇ ಇರಲಿ.. ಸೆಕೆಂಡುಗಳಷ್ಟು ಕಾಲ ತೆರೆ ಮೇಲಿದ್ದರೂ ತಮ್ಮದೇ ಛಾಪು ಮೂಡಿಸುವ ನಟ. ಅವರ ಮೂತಿ ಮುದ್ದು ಮುದ್ದಂತೆ. ಮನಸ್ಸು ಮರಕೋತಿಯಂತೆ. ಹೀಗಂತ ಹೇಳ್ತಿರೋದು ಎಸ್.ರವೀಂದ್ರನಾಥ್.

  ಮಾನ್ಸೂನ್ ರಾಗ ಚಿತ್ರದ ಇನ್ನೊಂದು ಹಾಡು ಬಿಡುಗಡೆಯಾಗಿದೆ. ಹಾಡು ಸೃಷ್ಟಿಯಾಗಿರೋದು ಮತ್ತು ಚಿತ್ರಿತವಾಗಿರೋದು ಅಚ್ಯುತ್ ಕುಮಾರ್. ಸುತ್ತಲ ಸುಂದರಿಯರು.. ಚೆಲುವೆಯರ ಭರತನಾಟ್ಯ.. ಅವರ ಮಧ್ಯೆ ಅಚ್ಯುತ್ ಅವರ ಮುದ್ದಾದ ಮೂತಿ. ಮನಸು ಮರಕೋತಿ. ಮದುವೆಯಾಗದ.. ಮದುವೆಯಾಗಬೇಕು ಅನ್ನೋ ಆಸೆಯಿದ್ದೂ ಮದುವೆಯಾಗದ.. ಮದುವೆಯಾದವರನ್ನು ನೋಡಿ ಬೇಸರಗೊಳ್ಳುವ.. ಹತಾಶನಾಗುವ.. ಆಮೇಲೆ ನನ್ನದೇ ಬೆಸ್ಟ್ ಲೈಫು ಎಂದು ನಗುವ ಪಾತ್ರ ಅನ್ನೋದಂತೂ ಹಾಡಿನಲ್ಲೇ ಗೊತ್ತಾಗಿ ಹೋಗುತ್ತೆ.

  ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಇದೇ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರೋ ಚಿತ್ರ ಮಾನ್ಸೂನ್ ರಾಗ. ಆಗಸ್ಟ್ 19ಕ್ಕೆ ರಿಲೀಸ್ ಆಗುತ್ತಿರೋ ಚಿತ್ರದ ಈ ಹಾಡಿಗೆ ಸಾಹಿತ್ಯ  ಪ್ರಮೋದ್ ಮರವಂತೆ ಅವರದ್ದು. ಅನೂಪ್ ಸಿಳೀನ್ ಸಂಗೀತದ ಹಾಡಿಗೆ ಗಾಯಕರಾಗಿ ಶಕ್ತಿ ತುಂಬಿರೋದು ವಾಸುಕಿ ವೈಭವ್. ವಿಖ್ಯಾತ್ ನಿರ್ಮಾಣದ ಚಿತ್ರದಲ್ಲಿ ಡಾಲಿ, ರಚಿತಾ ಜೊತೆ ಅಚ್ಯುತ್, ಸುಹಾಸಿನಿ, ಯಶಾ ಶಿವಕುಮಾರ್ ಕೂಡಾ ಇದ್ದಾರೆ.