` rana daggubathi, - chitraloka.com | Kannada Movie News, Reviews | Image

rana daggubathi,

  • ಚಾರ್ಲಿಗೆ ಬಲ್ಲಾಳದೇವನ ಬಲ..!

    ಚಾರ್ಲಿಗೆ ಬಲ್ಲಾಳದೇವನ ಬಲ..!

    ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಜೂನ್ 10ರಂದು ರಿಲೀಸ್ ಆಗುತ್ತಿದೆ. ಈಗಾಗಲೇ ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳಲ್ಲಿ ಭರ್ಜರಿ ಬಿಸಿನೆಸ್ ಮಾಡಿರುವ ರಕ್ಷಿತ್ ಶೆಟ್ಟಿ, ಚಿತ್ರವನ್ನು ಪ್ಯಾನ್ ಇಂಡಿಯಾ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ತೆಲುಗಿನಲ್ಲಿ ಚಿತ್ರವನ್ನು ರಿಲೀಸ್ ಮಾಡುತ್ತಿರುವುದು ಬಲ್ಲಾಳದೇವ ಅರ್ಥಾತ್ ರಾಣಾ ದಗ್ಗುಬಾಟಿ.

    ಆಂಧ್ರ ಮತ್ತು ತೆಲಂಗಾಣದಲ್ಲಿ ರಾಣಾ ಅವರ ಸಂಸ್ಥೆಯೇ ಚಾರ್ಲಿ 777 ರಿಲೀಸ್ ಮಾಡುತ್ತಿದೆ. ತಮಿಳಿನಲ್ಲಿ ಕಾರ್ತಿಕ್ ಸುಬ್ಬರಾಜು ರಿಲೀಸ್ ಮಾಡುತ್ತಿದ್ದಾರೆ.

    ಪರಂವಾ ಸ್ಟುಡಿಯೋಸ್‍ನ ಚಿತ್ರಕ್ಕೆ ಕಿರಣ್ ರಾಜ್ ನಿರ್ದೇಶಕರಾಗಿದ್ದಾರೆ. ನಿರ್ಮಾಣದಲ್ಲೂ ಪಾಲುದಾರರಾಗಿರೋ ರಕ್ಷಿತ್ ಶೆಟ್ಟಿ ಜೊತೆ ಹೀರೋ ಆಗಿರೋದು ನಾಯಿ. ಇದು ನಾಯಿ ಮತ್ತು ಹೀರೋನ ಸೆಂಟಿಮೆಂಟ್ ಸ್ಟೋರಿ. ಜಿ.ಎಸ್.ಗುಪ್ತಾ ಇನ್ನೊಬ್ಬ ನಿರ್ಮಾಪಕರು. ಸಂಗೀತಾ ಶೃಂಗೇರಿ ನಾಯಕಿಯಾಗಿರೋ ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ, ಡ್ಯಾನಿಷ್ ಸೇಠ್, ಬಾಬ್ಬಿ ಸಿಂಹ ಕೂಡಾ ನಟಿಸಿದ್ದಾರೆ.