` toofan, - chitraloka.com | Kannada Movie News, Reviews | Image

toofan,

  • ಜಸ್ಟ್ ಒಂದೂವರೆ ಗಂಟೆ : ತೂಫಾನ್ ಹಾಡು ದಾಖಲೆ

    ಜಸ್ಟ್ ಒಂದೂವರೆ ಗಂಟೆ : ತೂಫಾನ್ ಹಾಡು ದಾಖಲೆ

    ಕೆಜಿಎಫ್ ಚಾಪ್ಟರ್ 2. ಇಡೀ ಇಂಡಿಯಾ ಬಹುನಿರೀಕ್ಷೆಯಿಂದ ಕಾಯ್ತಿರೋ ಸಿನಿಮಾ. ಏಪ್ರಿಲ್ 14ಕ್ಕೆ ರಿಲೀಸ್ ಆಗಲಿರೋ ಸಿನಿಮಾ, ಬಾಕ್ಸಾಫೀಸ್ನಲ್ಲಿ ದಾಖಲೆ ಬರೆಯೋಕೆ ತುದಿಗಾಲಲ್ಲಿ ನಿಂತಿದೆ. ರಾಕಿಂಗ್ ಸ್ಟಾರ್ ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ.. ಮೊದಲಾದವರು ನಟಿಸಿರೋ ಚಿತ್ರದ ತೂಫಾನ್ ಹಾಡು ರಿಲೀಸ್ ಆಗಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಬಂದಿರೋ ಚಿತ್ರದ ಲಿರಿಕಲ್ ಸಾಂಗ್ ವಿಡಿಯೋ, ಮೇಕಿಂಗ್ ಇನ್ನೂ ಅದ್ಭುತವಾಗಿದೆ ಅನ್ನೋದನ್ನು ಸಾರಿ ಹೇಳುತ್ತಿದೆ.

    ಇದೇ ದಿನ 11 ಗಂಟೆ 7 ನಿಮಿಷಕ್ಕೆ ರಿಲೀಸ್ ಆದ ಹಾಡು ಒಂದೂವರೆ ಗಂಟೆಯಲ್ಲೇ ದಾಖಲೆ ಬರೆದಿದೆ. ಎಲ್ಲ ಭಾಷೆಗಳಲ್ಲೂ ರಿಲೀಸ್ ಆದ ಹಾಡು ಕನ್ನಡದಲ್ಲಿಯೇ ಒಂದೂವರೆ ಗಂಟೆಯಲ್ಲಿ ಒಂದು ಮಿಲಿಯನ್ ವೀಕ್ಷಣೆ ಪಡೆದಿದೆ. ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲೂ ದಾಖಲೆ ಸಂಖ್ಯೆಯ ಪ್ರೇಕ್ಷಕರು ಹಾಡು ಇಷ್ಟಪಟ್ಟಿದ್ದಾರೆ.

    ಸಂಗೀತ ನಿರ್ದೇಶಕ ರವಿ ಬಸ್ರೂರು ಅವರೇ ಹಾಡಿಗೆ ಸಾಹಿತ್ಯ ಕೊಟ್ಟಿದ್ದಾರೆ. ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರು, ರವಿ ಬಸ್ರೂರು, ಪುನೀತ್ ರುದ್ರನಾಗ್, ಮನೀಷ್ ದಿನಕರ್ ಪುರುಷ ಗಾಯಕರಾದರೆ, ವರ್ಷ ಆಚಾರ್ಯ ಗಾಯಕಿ. ಲಹರಿ ಮ್ಯೂಸಿಕ್ ರಿಲೀಸ್ ಮಾಡಿರೋ ಹಾಡು ಬೇರೆಯದೇ ಲೆವೆಲ್ಲಿನಲ್ಲಿದೆ. ವಿಜಯ್ ಕಿರಗಂದೂರು ನಿರ್ಮಾಣದ ಹೊಂಬಾಳೆ ಬ್ಯಾನರ್ನ ಸಿನಿಮಾ ರಿಲೀಸ್ ಆಗಲಿರುವುದು ಏಪ್ರಿಲ್ 14ಕ್ಕೆ.

  • ಸರ್ರನೆ ಬಂದ ತೂಫಾನ್ ವೇಗಕ್ಕೆ ರೆಕಾರ್ಡುಗಳು ಚಿಂದಿಚಿಂದಿ

    ಸರ್ರನೆ ಬಂದ ತೂಫಾನ್ ವೇಗಕ್ಕೆ ರೆಕಾರ್ಡುಗಳು ಚಿಂದಿಚಿಂದಿ

    ಕೆಜಿಎಫ್ ಚಿತ್ರದ ಹವಾ ಇರೋದೇ ಹಾಗೆ. ಕೆಜಿಎಫ್ ಚಾಪ್ಟರ್ 2 ರಿಲೀಸ್ ಯಾವಾಗ ಎಂದು ಕಾಯುತ್ತಿರೋ ಅಭಿಮಾನಿಗಳು ಚಿತ್ರದ ಬಗ್ಗೆ ಸಣ್ಣದೊಂದು ಸುದ್ದಿ, ತುಣುಕು ಸಿಕ್ಕರೂ ಥ್ರಿಲ್ಲಾಗುತ್ತಾರೆ. ಅಂತಾದ್ದರಲ್ಲಿ 21ನೇ ತಾರೀಕು ಕೆಜಿಎಫ್ ಚಾಪ್ಟರ್ 2, ತೂಫಾನ್ ಸಾಂಗ್‍ನ ಲಿರಿಕಲ್ ವಿಡಿಯೋ ಬಿಟ್ಟು ಊಟದ ಮೊದಲ ಉಪ್ಪಿನಕಾಯಿ ಕೊಟ್ಟಿದೆ. ದಾಖಲೆಗಳು ಉಡೀಸ್ ಆಗುತ್ತಿವೆ.

    ಒಂದೇ ದಿನದಲ್ಲಿ ಕೆಜಿಎಫ್ ಚಾಪ್ಟರ್ 2ನ ತೂಫಾನ್ ಹಾಡು 10 ಮಿಲಿಯನ್‍ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವಿದು. ಚಿತ್ರದ ಪ್ರಚಾರವೂ ಭರ್ಜರಿಯಾಗಿಯೇ ಶುರುವಾಗಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ನಟಿಸಿರೋ ಚಿತ್ರಕ್ಕೆ ವಿಜಯ್ ಕಿರಗಂದೂರು ನಿರ್ಮಾಪಕ. ಅಂದಹಾಗೆ ಇನ್ನೂ ಒಂದು ಸ್ಪೆಷಲ್ ನ್ಯೂಸ್. ಮಾರ್ಚ್ 27ಕ್ಕೆ ಕೆಜಿಎಫ್ ಟ್ರೇಲರ್ ರಿಲೀಸ್ ಆಗಲಿದೆಯಂತೆ.