` nagathihalli chandrashekar, - chitraloka.com | Kannada Movie News, Reviews | Image

nagathihalli chandrashekar,

  • Title Of Nagatihalli's New Movie On July 13th

    nagathihalli chandrashekar's new movie title will be announced tomorrow

    Nagatihalli Chandrashekhar has completed the shooting of his latest film and is busy with the post-production work. Meanwhile, the title of the film is all set to be revealed on Saturday in London.

    Nagatihalli is planning to reveal the title during the first song launch of the film in London. The event is scheduled during the Karnataka Samskrithi Siri programme held at Fltham in London on July 13th. Nagatihalli will be releasing a song called 'Kannada Kali' composed by Arjun Janya. The song is composed by Mattur Nandakumar and Supriya Lohith has composed the music.

    The film is an adventure mystery love story between an NRI and a patriotic resident with a missing diamond thrown in the mix. The film stars Vasishta Simha, Manvitha Harish, Ananth Nag, Sadhu Kokila, Sumalatha Ambarish, Prakash Belawadi and others in prominent roles.

  • Writer- Director Nagatihalli Chandrashekhar In Belli Hejje

    nagathihalli chandrashekar in belli hejje

    Well known writer and director Nagatihalli Chandrashekhar Chandrashekhar is all set to share his experiences in 'Belli Hejje' organised by the Karnataka Chalanachitra Academy.

    Nagatihalli Chandrashekhar who was a lecturer by profession came to Kannada film industry as a writer. He wrote dialogues for 'Ushakirana', 'Udbhava' and other films. He went on to become director with 'Undu Hoda Kondoo Hoda' and directed films like 'America America', 'Parish Pranaya', 'Nanna Preethiya Hudugi', 'Mathad Mathadu Mallige', 'Olave Jeevana Lekkachara' and others.

    The 'Belli Hejje' programme is organised at the Mahadeva Desai Auditorium in Gandhi Bhavan on 15th of March at evening 5 PM.

  • ಅಕಾಡೆಮಿ ಅಧ್ಯಕ್ಷರಾಗಿ ನಾಗತಿಹಳ್ಳಿ ಚಂದ್ರಶೇಖರ್ ಅಧಿಕಾರ ಸ್ವೀಕಾರ

    nagathihalli chandrashekar takes over as kca president

    ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನಾಗತಿಹಳ್ಳಿಯವರು ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರು, ಕಲಾವಿದರು ತಂತ್ರಜ್ಞರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದ್ದು ವಿಶೇಷ. 

    ಹಿರಿಯ ನಟರಾದ ದತ್ತಣ್ಣ, ಅಕಾಡೆಮಿಯ ಮಾಜಿ ಅಧ್ಯಕ್ಷರಾದ ನಾಗಾಭರಣ, ನಿರ್ದೇಶಕರಾದ ಭಗವಾನ್, ನಂಜುಂಡೇಗೌಡ, ರಾಮದಾಸ ನಾಯ್ಡು, ಶಶಿಕುಮಾರ್, ಆದಿಚುಂಚನಗಿರಿ ಮಠದ ಸಿಇಒ ರಾಮಕೃಷ್ಣ ಗೌಡ ಸೇರಿದಂತೆ ಹಲವರು ನಾಗತಿಹಳ್ಳಿಯವರಿಗೆ ಶುಭ ಕೋರಿದರು.

  • ಇಂಗ್ಲೆಂಡಿಗೆ ಹೊರಟ ಇಂಡಿಯಾ V/s ಇಂಗ್ಲೆಂಡ್

    india vs england to premiere ln london

    ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇಂಡಿಯಾ ವರ್ಸಸ್ ಇಂಗ್ಲೆಂಡ್, ಇದು ಕ್ರಿಕೆಟ್ ಅಲ್ಲ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದೆ. ಚಿತ್ರದ ಪ್ರಚಾರ ಕಾರ್ಯ ಆರಂಭಿಸಿರುವ ನಾಗತಿಹಳ್ಳಿ, ಪ್ರಮೋಷನ್ ಕೆಲಸವನ್ನು ಇಂಗ್ಲೆಂಡಿನಿಂದಲೇ ಆರಂಭಿಸಿದ್ದಾರೆ. ನಾಳೆಯಿಂದ ಚಿತ್ರದ ಪ್ರೀಮಿಯರ್ ಶೋ ಶುರುವಾಗುತ್ತಿವೆ. ನವೆಂಬರ್ 2 ಮತ್ತು 3ರಂದು ಇಂಗ್ಲೆಂಡಿನ ಲಂಡನ್ ಮತ್ತು ಕಾರ್ಡಿಫ್‍ನಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆಯಲಿವೆ.

    ಚಿತ್ರದಲ್ಲಿ ಟಗರು ಚಿಟ್ಟೆ ಖ್ಯಾತಿಯ ವಸಿಷ್ಠ ಸಿಂಹ, ಟಗರು ಪುಟ್ಟಿ ಮಾನ್ವಿತಾ ಹರೀಶ್ ನಟಿಸಿರುವ ಚಿತ್ರವಿದು. ಸುಮಲತಾ, ಅನಂತ್ ನಾಗ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಪ್ರೀಮಿಯರ್ ಶೋಗಳಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಜೊತೆ ಸುಮಲತಾ, ಮಾನ್ವಿತಾ ಹರೀಶ್ ಪಾಲ್ಗೊಳ್ಳುತ್ತಿದ್ದಾರೆ. ಇಂಗ್ಲೆಂಡಿನಲ್ಲಿರುವ ಹಲವಾರು ಅನಿವಾಸಿ ಕನ್ನಡಿಗರು ಕೂಡಾ ಚಿತ್ರದಲ್ಲಿ ನಟಿಸಿದ್ದು, ಈಗಾಗಲೇ ಶೋನ ಟಿಕೆಟ್ ಭರ್ತಿಯಾಗಿವೆ.

  • ಇಂಡಿಯಾ V/s ಇಂಗ್ಲೆಂಡ್ ಇದು ಕ್ರಿಕೆಟ್ ಅಲ್ಲ

    india vs england image

    ಇಂಡಿಯಾ ವಿಶ್ವಕಪ್‍ನಿಂದ ಹೊರಬಿದ್ದು, ಇಂಗ್ಲೆಂಡ್ ಇದೇ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿದೆ. ಇಂಥಾ ಹೊತ್ತಲ್ಲಿ ಈ ಟೈಟಲ್ ಹೊರಬಿದ್ದಿದೆ. ಇಂಡಿಯಾ  V/s  ಇಂಗ್ಲೆಂಡ್ ಇದು ಕ್ರಿಕೆಟ್ ಅಲ್ಲ. ಇದು, ನಾಗತಿಹಳ್ಳಿ ಚಂದ್ರಶೇಖರ್ ಅವರ ಹೊಸ ಚಿತ್ರದ ಟೈಟಲ್. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿಸಿರುವ ನಾಗತಿಹಳ್ಳಿ, ಅಮೆರಿಕಾ, ಪ್ಯಾರಿಸ್ ನಂತರ ಮತ್ತೊಂದು ದೇಶದ ಹೆಸರನ್ನು ತಮ್ಮ ಚಿತ್ರಕ್ಕಿಟ್ಟಿದ್ದಾರೆ.

    ವಸಿಷ್ಠ ಸಿಂಹ ಹಾಗೂ ಮಾನ್ವಿತಾ ಹರೀಶ್ ನಟಿಸಿರುವ ಚಿತ್ರದಲ್ಲಿ ಅನಂತ್‍ನಾಗ್, ಸುಮಲತಾ, ಸಾಧುಕೋಕಿಲ, ಪ್ರಕಾಶ್ ಬೆಳವಾಡಿ ಮೊದಲಾದವರು ನಟಿಸಿದ್ದಾರೆ. ಈ ಚಿತ್ರ ಕನ್ನಡದಲ್ಲಷ್ಟೇ ಅಲ್ಲ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗೂ ಡಬ್ ಆಗಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ.

  • ಚಲನಚಿತ್ರ ಅಕಾಡೆಮಿಗೆ ನಾಗತಿಹಳ್ಳಿ ಅಧ್ಯಕ್ಷ

    nagathihalli chandrashekar appointmed as kca president

    ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ರಾಜ್ಯ ಸರ್ಕಾರ ಈ ಕುರಿತು ಅಧಿಕೃತವಾಗಿ ಆದೇಶ ಹೊರಡಿಸಿದೆ. ಸಿನಿಮಾ, ಸಾಹಿತ್ಯ, ಅಂಕಣ, ಕಿರುತೆರೆ, ಶಿಕ್ಷಣ, ಸಮಾಜಸೇವೆ.. ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್ ಬಹುಮುಖ ಪ್ರತಿಭೆ. ರಾಜೇಂದ್ರ ಸಿಂಗ್ ಬಾಬು ಅವರು 3 ವರ್ಷಗಳಿಂದ ನಿರ್ವಹಿಸುತ್ತಿದ್ದ ಸ್ಥಾನವನ್ನು ಈಗ ನಾಗತಿಹಳ್ಳಿ ಚಂದ್ರಶೇಖರ್ ತುಂಬಲಿದ್ದಾರೆ.

    ಬಾ ನಲ್ಲೆ ಮಧುಚಂದ್ರಕೆ, ಉಂಡೂಹೋದ ಕೊಂಡೂಹೋದ, ಕೊಟ್ರೇಶಿ ಕನಸು, ನನ್ನ ಪ್ರೀತಿಯ ಹುಡುಗಿ, ಅಮೆರಿಕ ಅಮೆರಿಕ, ಅಮೃತಧಾರೆ.. ಹೀಗೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ನಾಗತಿಹಳ್ಳಿಯವರಿಗೆ 3 ರಾಷ್ಟ್ರಪ್ರಶಸ್ತಿ, 13 ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ 2 ಫಿಲಂಫೇರ್ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್, ಜೀವಮಾನ ಸಾಧನೆಗಾಗಿ ಪುಟ್ಟಣ್ಣ ಕಣಗಾಲ್ ಪುರಸ್ಕಾರವನ್ನೂ ಪಡೆದಿರುವ ನಾಗತಿಹಳ್ಳಿ ಚಂದ್ರಶೇಖರ್, ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಕುಟುಂಬಕ್ಕೂ ಆಪ್ತರು.

  • ಚಿತ್ರಲೋಕಗೆ ಕೂಡ್ಲು ಮನವಿ - ನಾಗತಿಹಳ್ಳಿ ಚಂದ್ರಶೇಖರ್ ಗೆ ಕ್ಷಮೆ ಕೇಳಿದ ಕೂಡ್ಲು

    kodlu apology to nagathi

    ಕನ್ನಡದ ಖ್ಯಾತ ನಿರ್ದೇಶಕ ಕೂಡ್ಲು ರಾಮಕೃಷ್ಣ ಅವರ ಸಂದರ್ಶನಗಳು ಚಿತ್ರಲೋಕದಲ್ಲಿ ಮೂಡಿ ಬರುತ್ತಿದೆ. ಚಿತ್ರಲೋಕ ಮೂರು ಬಾರಿ ಕೂಡ್ಲು ಅವರನ್ನ ಸಂದರ್ಶ ಮಾಡಿತು. ಪ್ರತಿ ಬಾರಿಯೂ ಕೂಡ್ಲು ನಾಗತಿಹಳ್ಳಿಯ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದನ್ನ ಚಿತ್ರಲೋಕ ಪ್ರಸಾರ ಮಾಡಿದೆ. ಈಗ ಕೂಡ್ಲು ಚಿತ್ರಲೋಕ ಗೆ ಮನವಿ ಮಾಡಿದ್ದಾರೆ. ಅವರು ನಾಗತಿಹಳ್ಳಿ ಬಗ್ಗೆ ಮಾತನಾಡಿರುವ ಎರಡು ಎಪಿಸೋಡ್ ಗಳನ್ನು ತೆಗೆದು ಹಾಕಲು ಮನವಿ ಮಾಡಿದ್ದಾರೆ ಮತ್ತು ಅವರ ಸ್ನೇಹಿತ ನಾಗತಿಹಳ್ಳಿಗೆ ಕ್ಷಮೆ ಕೋರಿದ್ದಾರೆ..

     

  • ಜಪಾನೀಯನಿಗೆ ಅಣ್ಣಾವ್ರ ಹಾಡು ಕಲಿಸಿದ ಮೇಷ್ಟ್ರು

    nagathihalla turns teacher again

    ನಾಗತಿಹಳ್ಳಿ ಚಂದ್ರಶೇಖರ್, ತಾವು ಮೂಲತಃ ಮೇಷ್ಟ್ರು ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿಬಿಟ್ಟಿದ್ದಾರೆ. ಸದ್ಯಕ್ಕೆ ಜಪಾನ್ ಪ್ರವಾದಲ್ಲಿರುವ ನಾಗತಿಹಳ್ಳಿ, ತಮ್ಮ ಕ್ಯಾಬ್ ಚಾಲಕನಿಗೆ ಅಣ್ಣಾವ್ರ ಹಾಡು ಕಲಿಸುತ್ತಿದ್ದಾರೆ. ಜಪಾನ್‍ನಲ್ಲಿರುವ ಮಂಗೋಲಿಯ ಮೂಲದ ಕ್ಯಾಬ್ ಚಾಲಕನಿಗೆ ಪ್ರೇಮದ ಕಾಣಿಕೆ ಚಿತ್ರದ ಬಾನಿಗೊಂದು ಎಲ್ಲೆ ಎಲ್ಲಿದೆ ಹಾಡು ಕಲಿಸುತ್ತಿದ್ದಾರೆ ನಾಗತಿಹಳ್ಳಿ.

    ನಾನೀಗ ಒಂದು ಹಾಡು ಹಾಡುತ್ತೇನೆ, ಈ ಹಾಡು ಹಾಡಿದ್ದು ಕನ್ನಡದ ಲೆಜೆಂಡ್ ಡಾ.ರಾಜ್‍ಕುಮಾರ್ ಎಂದು ಆ ಚಾಲಕನಿಗೆ ಹೇಳಿ, ತಾವು ಹಾಡು ಹಾಡುತ್ತಾರೆ. ಆ ಹಾಡನ್ನು ಚಾಲಕನಿಂದ ಹೇಳಿಸುವ ಪ್ರಯತ್ನ ಮಾಡ್ತಾರೆ ನಾಗತಿ. ಆ ವಿಡಿಯೋ ಈಗ ವೈರಲ್.

  • ಡಿಸ್ಟಿçಬ್ಯೂಷನ್ ಪ್ರಪಂಚಕ್ಕೂ ಕಾಲಿಟ್ಟ ಮೇಷ್ಟುç..!

    nagathihalli chandrashekar turns distriutor

    ನಾಗತಿಹಳ್ಳಿ ಚಂದ್ರಶೇಖರ್, ಮೊದಲಿಗೆ ಕಥೆಗಾರ. ಸಾಹಿತಿ. ಆಮೇಲೆ ಮೇಷ್ಟುç.ಮಂಡ್ಯದ ಪುಟ್ಟ ಹಳ್ಳಿಯಿಂದ ಬಂದು, ಹುಟ್ಟಿದೂರಿಗೇ ದೊಡ್ಡ ಹೆಸರು ತಂದುಕೊಟ್ಟವರು. ನಿರ್ದೇಶಕ, ನಿರ್ಮಾಪಕ ಹಾಗೂ ನಟರಾಗಿಯೂ ಗುರುತಿಸಿಕೊಂಡಿರುವ ಚಂದ್ರಶೇಖರ್, ಈಗ ವಿತರಣಾ ಲೋಕಕ್ಕೂ ಕಾಲಿಡುತ್ತಿದ್ದಾರೆ.

    ಇಂಡಿಯಾ ವ/ಸ ಇಂಗ್ಲೆAಡ್ ಚಿತ್ರವನ್ನು ಸ್ವತಃ ತಾವೇ ವಿತರಣೆ ಮಾಡಲು ಮುಂದಾಗಿದ್ದಾರೆ. ವಸಿಷ್ಠ ಸಿಂಹ, ಮಾನ್ವಿತಾ ಕಾಮತ್ ಜೋಡಿಯಾಗಿರುವ ಚಿತ್ರವನ್ನು ವಿಶ್ವದಾದ್ಯಂತ ರಿಲೀಸ್ ಮಾಡುತ್ತಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್.

    ಇAಗ್ಲೆAಡ್, ಅಮೆರಿಕ, ನೈಜೀರಿಯಾ, ತಾಂಜೇನಿಯಾ, ದ.ಆಫ್ರಿಕಾ, ಬ್ಯಾಂಕಾAಕ್, ಟೋಕಿಯೋಗಳಲ್ಲಿಯೂ ಚಿತ್ರ ಏಕಕಾಲಕ್ಕೆ ತೆರೆಕಾಣುತ್ತಿದೆ.

     

  • ನಾಗತಿಹಳ್ಳಿ ಚಂದ್ರಶೇಖರ್ ಆರ್.ಎಸ್.ಎಸ್. ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ

    ನಾಗತಿಹಳ್ಳಿ ಚಂದ್ರಶೇಖರ್ ಆರ್.ಎಸ್.ಎಸ್. ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ

    ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ, ನಿರ್ಮಾಪಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಹೆಸರು ಆರ್.ಎಸ್.ಎಸ್.ನವರ ಒಂದು ಆಹ್ವಾನ ಪತ್ರಿಕೆಯಲ್ಲಿ ಮುದ್ರಿತವಾಗಿತ್ತು. ಜುಲೈ 16ರಂದು ನಿಜಗುಣ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿದ್ದ ಗುರುಪೂಜಾ ಉತ್ಸವದಲ್ಲಿ ನಾಗತಿಹಳ್ಳಿ ಭಾಗಿಯಾಗಬೇಕಿದ್ದ ಕಾರ್ಯಕ್ರಮ ಅದು. ನಾಗತಿಹಳ್ಳಿ ಮೇಷ್ಟ್ರಾಗಿದ್ದ ಕಾರಣ ಇದ್ದರೂ ಇರಬಹುದು ಎಂದುಕೊಂಡವರಿದ್ದರು. ಆದರೆ ಇದು ಎಡಪಂಥೀಯರ ಕೆಂಗಣ್ಣಿಗೆ ಬಿತ್ತು.

    ಧರ್ಮ ಸಾಮರಸ್ಯದ ಪರ, ದ್ವೇಷ ರಾಜಕಾರಣದ ವಿರೋಧಿಯಾಗಿ ಗುರುತಿಸಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್, ಧರ್ಮ ದ್ವೇಷದ ಮೂಲ ಎಂದು ಆರೋಪಿಸಲಾಗುವ ಆರ್ಎಸ್ಎಸ್ನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಬಗ್ಗೆ  ಎಡಪಂಥೀಯರು ಅಕ್ರೋಶಗೊಂಡರು. ನಾಗತಿಹಳ್ಳಿ ಒಳ ಬಲಪಂಥೀಯ ಎಂದು ಟೀಕೆ ಮಾಡಿದ್ರು.

    ಈ (ಆರ್ಎಸ್ಎಸ್) ಸಮಾರಂಭದಲ್ಲಿ ನಾನು ಭಾಗವಹಿಸುತ್ತಿಲ್ಲ. ಅದನ್ನು ನಾನು ಸ್ಪಷ್ಟಪಡಿಸಿಯೂ ಆಮಂತ್ರಣದಲ್ಲಿ ನನ್ನ ಹೆಸರು ಅಚ್ಚಾಗಿದೆ. ಅದು ‘ಆಕಸ್ಮಿಕ’ಎಂದು ಅವರು ಕ್ಷಮೆ ಯಾಚಿಸಿದ್ದಾರೆ. ಅಲ್ಲಿಗೆ ವಿಷಯ ಮುಕ್ತಾಯಗೊಂಡಿದೆ. ಆ ದಿನಾಂಕದಂದು ನಾನು ದೂರದ ದೇಶದಲ್ಲಿ ಚಿತ್ರೀಕರಣದಲ್ಲಿರುವುದು ನನ್ನನ್ನು ಬಲ್ಲವರಿಗೆಲ್ಲ ತಿಳಿದಿದೆ. ನನ್ನನ್ನು ಅತ್ಯಂತ ಹತ್ತಿರದಿಂದ ಬಲ್ಲ, ನನ್ನನ್ನು ನಂಬುವ,ನನ್ನನ್ನು ಪ್ರೀತಿಸುವ, ನನ್ನನ್ನು ಬೆಳೆಸಿರುವ, ನನ್ನೊಂದಿಗೆ ಹಳ್ಳಿಯ ಕೆಲಸದಲ್ಲಿ ಕೈಜೋಡಿಸಿರುವ ಅಕ್ಕರೆಯ ಎಲ್ಲ ಮನಸ್ಸುಗಳಿಗೆ ಹೇಳುವ ಒಂದು ಮಾತು: ನಾನು ಏನಾಗಿದ್ದೀನೋ ಅದೇ ಆಗಿ ಇರುತ್ತೇನೆ. ನಾನು ಏನು ಮಾಡುತ್ತಿದ್ದೀನೋ ಅದು ಸರಿ ಇದೆ. ಅದನ್ನೇ ಮುಂದುವರೆಸುತ್ತೇನೆ  ಎಂದು ಸ್ಪಷ್ಟನೆ ಕೊಟ್ಟರು.

    ಟೀಕೆ ಮಾಡಿದವರಿಗೆ ತಪ್ಪು ತಿಳಿಯಲು,ತಪ್ಪು ಹರಡಲು ತುದಿಗಾಲಲ್ಲಿ ನಿಂತವರನ್ನು, ನಿತ್ಯ ಹೊಸ, ಹುಸಿ ರೋಮಾಂಚನ ಬಯಸುವ ಮಹನೀಯರನ್ನು ಮನ್ನಿಸಿ ಮುಂದೆ ಹೋಗೋಣ. ಇಲ್ಲಿ ನಾವೆಲ್ಲ ಮಾಡಲೇಬೇಕಾದ ಜನಪರ ಕೆಲಸಗಳು ಬಹಳಷ್ಟಿವೆ. ಮಾಡೋಣ. ಇನ್ನು ಮಾತು ಸಾಕು ಎಂದಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್.

    ಹೀಗೆ ಎಡಪಂಥೀಯರ ಆಕ್ರೋಶಕ್ಕೆ ಉತ್ತರ ಕೊಟ್ಟ ನಂತರ ಬಲಪಂಥೀಯರು ಮುಗಿಬಿದ್ದಿದ್ದಾರೆ. ಆರ್‍ಎಸ್‍ಎಸ್ ಬಗ್ಗೆ ನಿಮ್ಮ ನಿಲುವು ಏನು ಎಂದು ಸ್ಪಷ್ಟನೆ ಕೊಡಿ ಎಂದು ಎಡಪಂಥೀಯರು ಮುಗಿಬಿದ್ದಂತೆಯೇ, ಇಂತಹ ಡ್ರಾಮ ಏಕೆ. ನಿಮ್ಮಂತಹವು ಆರ್‍ಎಸ್‍ಎಸ್‍ಗೆ ಬೇಕಿಲ್ಲ ಎಂದು ಬಲಪಂಥೀಯರು ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ನಾಗತಿಹಳ್ಳಿ ಚಿತ್ರದಲ್ಲಿ ನಿರೂಪ್ ಭಂಡಾರಿ, ಶಾನ್ವಿ

    ನಾಗತಿಹಳ್ಳಿ ಚಿತ್ರದಲ್ಲಿ ನಿರೂಪ್ ಭಂಡಾರಿ, ಶಾನ್ವಿ

    ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಚಿತ್ರದಲ್ಲಿ ನಿರೂಪ್ ಭಂಡಾರಿ ಹಾಗೂ ಶಾನ್ವಿ ಶ್ರೀವಾಸ್ತವ್ ನಟಿಸುತ್ತಿದ್ದಾರೆ. ಇಂಡಿಯಾ ವರ್ಸಸ್ ಇಂಗ್ಲೆಂಡ್ ನಂತರ ನಾಗತಿಹಳ್ಳಿ ನಿರ್ದೇಶಿಸುತ್ತಿರುವ ಚಿತ್ರವಿದು. ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ರಂಗಿತರಂಗ, ವಿಕ್ರಾಂತ್ ರೋಣ ಚಿತ್ರಗಳಲ್ಲಿ ವ್ಹಾವ್ ಎನ್ನಿಸುವಂತೆ ನಟಿಸಿದ್ದ ನಿರೂಪ್ ಭಂಡಾರಿ, ಕಥೆ ಆಧರಿಸಿದ ಚಿತ್ರಗಳಿಗೆ ಮಹತ್ವ ಕೊಟ್ಟವರು.

    ನಾಗತಿಹಳ್ಳಿ ಚಿತ್ರಗಳಲ್ಲಿ ನಟಿಸುವುದೇ ಒಂದು ಖುಷಿ. ಈ ಚಿತ್ರದಲ್ಲಿಯೂ ಕಥೆ ಅದ್ಭುತವಾಗಿದೆ. ಅಮೆರಿಕಾ ಅಮೆರಿಕಾ ಮಾದರಿಯ ಭಾವನಾತ್ಮಕ ದೃಶ್ಯಗಳಿವೆ. ಮೊದಲು ಕರ್ನಾಟಕದಲ್ಲಿಯೇ ಚಿತ್ರೀಕರಣವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ ನಿರೂಪ್ ಭಂಡಾರಿ.

    ಇನ್ನು ಶಾನ್ವಿ ಶ್ರೀವಾಸ್ತವ್ ಅವರಿಗೂ ಅಷ್ಟೆ. ನಾಗತಿಹಳ್ಳಿ ಚಿತ್ರ ಎಂದ ಕೂಡಲೇ ಮರುಮಾತನಾಡದೆ ಒಪ್ಪಿಕೊಂಡಿದ್ದಾರೆ.

    ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ದೊಡ್ಡ ಮಟ್ಟದ ಹಿಟ್ ಬೇಕಾಗಿದೆ. ನಾಗತಿಹಳ್ಳಿಯವರ ಕೊನೆಯ ಹಿಟ್ ಚಿತ್ರ ಯಾವುದು ಎಂದರೆ 2005ರಲ್ಲಿ ಬಂದಿದ್ದ ಅಮೃತಧಾರೆಯನ್ನೇ ಹೇಳಬೇಕು. ಅದಾದ ಮೇಲೆ ಅವರು 6 ಚಿತ್ರಗಳನ್ನು ನಿರ್ದೇಶಿಸಿದ್ದಾರಾದರೂ ಹಿಟ್ ಸಿಕ್ಕಿಲ್ಲ. ಹೀಗಾಗಿ ನಾಗತಿಹಳ್ಳಿ ಚಂದ್ರಶೇಖರ್ ಕೂಡಾ ದೊಡ್ಡ ಹಿಟ್ ನಿರೀಕ್ಷೆಯಲ್ಲಿದ್ದಾರೆ.

  • ಸ್ವಾತಂತ್ರ್ಯದ ದಿನವೇ ಬಂದ ಸ್ವಾತಂತ್ರ್ಯ.. ಅವತ್ತೇ ಹೋಯ್ತು..!

    nagathihalli chandrashekar, shobha

    ಸ್ವಾತಂತ್ರ್ಯ ದಿನಾಚರಣೆ ಅನ್ನೋದು ದೇಶಕ್ಕೇ ಹಬ್ಬವಾದರೆ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ವಿವಾಹ ವಾರ್ಷಿಕೋತ್ಸವ ಹೌದು. 1958, ಆಗಸ್ಟ್ 15 ಅವರ ಮದುವೆಯಾದ ದಿನ. ಅಂದ್ರೆ, ಈ ಜಗತ್ತಿಗೆ ಅವರು ಅಧಿಕೃತವಾಗಿ ಸ್ವಾತಂತ್ರ್ಯ ಪಡೆದುಕೊಂಡು ಬಂದ ದಿನ.

    ಸ್ವಾತಂತ್ರ್ಯದ ದಿನವೇ ಸಿಕ್ಕಿದ್ದ ಸ್ವಾತಂತ್ರ್ಯವನ್ನು ಸ್ವಾತಂತ್ರ್ಯದ ದಿನವೇ ಸಂತೋಷದಿಂದ ಕಳೆದುಕೊಂಡೆ ಎಂದು ತಮಾಷೆಯಾಗಿಯೇ ನೆನಪಿಸಿಕೊಂಡಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್.

    ನಾಗತಿಹಳ್ಳಿ ಚಂದ್ರಶೇಖರ್ ಅವರದ್ದು ಲವ್ ಮ್ಯಾರೇಜ್. 1986, ಆಗಸ್ಟ್ 15ರಂದು ಅವರು ಶೋಭಾ ಅವರನ್ನು ವಿವಾಹವಾದರು. ಬೆಂಗಳೂರಿನ ನೃಪತುಂಗ ರಸ್ತೆಯ ಸ್ಟೇಟ್ ಯೂತ್ ಸೆಂಟರ್‍ನ ಕಾನ್ಫರೆನ್ಸ್ ಹಾಲ್, ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಶೋಭಾರ ದಾಂಪತ್ಯ ಜೀವನಕ್ಕೆ ಮಂಟಪವಾಗಿತ್ತು. 

    ಅವರಿಬ್ಬರ ಸುಖೀ ದಾಂಪತ್ಯಕ್ಕೀಗ 33 ವರ್ಷ. ಕಥೆಗಾರ, ಸಾಹಿತಿ, 40ಕ್ಕೂ ಹೆಚ್ಚು ದೇಶ ಸುತ್ತಿರುವ ಪ್ರವಾಸಿ, ನಿರ್ಮಾಪಕ, ನಿರ್ದೇಶಕ, ಮೇಷ್ಟ್ರು, ನಟ.. ಹೀಗೆ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್, ಸದ್ಯಕ್ಕೆ ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರವನ್ನು ತೆರೆಗೆ ತರುವ ಕೆಲಸದಲ್ಲ ಮಗ್ನರಾಗಿದ್ದಾರೆ.