` trikona, - chitraloka.com | Kannada Movie News, Reviews | Image

trikona,

 • ಜೇಮ್ಸ್ ತೆಗೆಯೋದು ಬೇಡ.. ನಾವೇ ಲೇಟ್ ಆಗಿ ಬರ್ತೇವೆ : ತ್ರಿಕೋನ ಏಪ್ರಿಲ್ 8ಕ್ಕೆ

   ಜೇಮ್ಸ್ ತೆಗೆಯೋದು ಬೇಡ.. ನಾವೇ ಲೇಟ್ ಆಗಿ ಬರ್ತೇವೆ : ತ್ರಿಕೋನ ಏಪ್ರಿಲ್ 8ಕ್ಕೆ

  ಏಪ್ರಿಲ್ 1ಕ್ಕೆ ರಿಲೀಸ್ ಡೇಟ್ ಘೋಷಿಸಿಕೊಂಡಿದ್ದ ತ್ರಿಕೋನ ಸಿನಿಮಾ ಥಿಯೇಟರ್ ಸಿಗದ ಕಾರಣಕ್ಕೆ ರಿಲೀಸ್ ಡೇಟ್ ಬದಲಿಸಿತ್ತು. ಈಗ ಏಪ್ರಿಲ್ 8ಕ್ಕೆ ಬಿಡುಗಡೆಯಾಗುತ್ತಿದೆ. ತಮ್ಮ ಚಿತ್ರದ ಬಿಡುಗಡೆಯನ್ನೇ ಮುಂದಕ್ಕೆ ಹಾಕಿದ್ದರ ರಿಯಲ್ ಕಾರಣವನ್ನು ಚಿತ್ರತಂಡ ಈಗ ಹೇಳಿದೆ.

  ಥಿಯೇಟರ್ ಸಮಸ್ಯೆಯಿದ್ದಾಗ ಕೆಲವು ವಿತರಕರು ಜೇಮ್ಸ್ ಚಿತ್ರವನ್ನು ತೆಗೆದು ಅಲ್ಲಿ ನಮ್ಮ ಚಿತ್ರದ ಶೋ ಹಾಕೋದಾಗಿ ಹೇಳಿದರು. ನಾನೂ ಕೂಡಾ ಪುನೀತ್ ಅಭಿಮಾನಿ. ಜೇಮ್ಸ್ ಅಲ್ಲೆಲ್ಲ ಚೆನ್ನಾಗಿಯೇ ಹೋಗುತ್ತಿತ್ತು. ಅಲ್ಲಿ ಬೇಡ ಎಂದು ನಿರ್ಧರಿಸಿ ನಾವೇ ಒಂದು ವಾರ ಮುಂದಕ್ಕೆ ಹೋದೆವು ಎಂದು ಹೇಳಿದ್ದಾರೆ ನಿರ್ಮಾಪಕ ರಾಜಶೇಖರ್. ನಿರ್ದೇಶಕ ಚಂದ್ರಕಾಂತ್ ಮತ್ತು ಪ್ರಚಾರದ ರಾಯಭಾರಿ ಸುಚೇಂದ್ರ ಪ್ರಸಾದ್.

  ಇದೆಲ್ಲದರ ಜೊತೆಗೆ ತ್ರಿಕೋನ ರಿಲೀಸ್ ಡೇಟ್ ಘೋಷಿಸಿದಾಗ ಏಪ್ರಿಲ್ 1ಕ್ಕೆ ಇದ್ದದ್ದು ಅವರದ್ದೊಂದೇ ಕನ್ನಡ ಚಿತ್ರ. ಅದಾದ ಮೇಲೆ ಅದೇ ವಾರ ಏಳೆಂಟು ಸಿನಿಮಾಗಳು ರಿಲೀಸ್ ಆದವು. ಇದರಿಂದಾಗಿ ವಾದ ವಿವಾದ ಮಾಡುವ ಬದಲು ನಾವೇ ಮುಂದಕ್ಕೆ ಹೋದೆವು ಎಂದಿದೆ ಚಿತ್ರತಂಡ.

  ತ್ರಿಕೋನ ಚರ್ವಿತಚರ್ವಣ ತಥಾಕಥಿತ ಮಾದರಿಯ ಚಿತ್ರವಲ್ಲ. ಬೇರೆಯದ್ದೇ ಅಭಿರುಚಿಯ ಸಿನಿಮಾ ಎನ್ನುವುದು ಸುಚೇಂದ್ರ ಪ್ರಸಾದ್ ಕೊಡುತ್ತಿರುವ ಭರವಸೆ. ಅಚ್ಯುತ್ ಕುಮಾರ್, ಸುಧಾರಾಣಿ, ಲಕ್ಷ್ಮೀ ಪ್ರಧಾನ ಪಾತ್ರದಲ್ಲಿರೋ ಸಿನಿಮಾ ತ್ರಿಕೋನ.

 • Trikona Movie Review. Chitraloka Rating 3.5/5

  Trikona Movie Review. Chitraloka Rating 3.5/5

  Film: Trikona

  Director: Chandrakanth 

  Cast: Achyuth Kumar, Lakshmi, Sudharani, Suresh Heblikar, Sadhu Kokila 

  Duration: 125 minutes 

  Stars: 

  Patience, Ego and Strength: Who wins? 

  Trikona is a unique trijunction of three diverse stories all of which are mutually tied up in a race of cause and effect. Three couples are on a journey and encounter a problem. One couple has patience to deal with it, the second has ego and the third brute force. How these diverse emotions come to play a role in their lives and how all three are interconnected becomes the crux of the narrative.

  Director Chandrakanth has picked up an unusual story for the film. The characters he has created come from different backgrounds and deal with similar problems in different manners. This makes the story special. Lakshmi and Suresh Heblikar as the elderly couple bring a fascinating angle to the narrative with brilliant dialogues and pure grace. 

  Achyuth outdoes himself in a role where he has to showcase ego and selfishness. Sudharani as his counterpart is a perfect foil. Raj Veer is the angry young man who believes brute force can solve any problem. They are faced with a semi-fantasy character as the antagonist.

  Trikona is a travel story and at times it seems that the director has taken a lengthy detour instead of keeping the journey going smoothly on the highway. But it is necessary to flesh out the characters and bring about their uniqueness before the audience. 

  All three groups of characters are travelling from Bengaluru to Mangaluru. Unknown to them, their destinies are tied up. Their destination is the same but their goals are different. All three are stopped on their tracks by Kaala, a sort of doomsday man and God of death combined. How the three face him and who wins forms the rest of the story. 

  There are lots of experiments in the way the story is constructed and good techniques used to keep the audience hooked. The performances of the senior actors alone is enough to keep the film engaging.

 • ಅರೆ.. ಕಥೆಯನ್ನೂ ಹೀಗೂ ಹೇಳಬಹುದಾ..?

  ಅರೆ.. ಕಥೆಯನ್ನೂ ಹೀಗೂ ಹೇಳಬಹುದಾ..?

  ತ್ರಿಕೋನ ಚಿತ್ರ ರಿಲೀಸ್ ಆಗಿದೆ. ಧಾಂಧೂಂ ಎನ್ನುವ ರಿಲೀಸ್ ಅಲ್ಲ. ರಿಲೀಸ್ ಆದ ಬಹಳಷ್ಟು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅದಕ್ಕಿಂತ ಹೆಚ್ಚಾಗಿ ಚಿತ್ರ ನೋಡಿದ ಪ್ರೇಕ್ಷಕರು ಕಥೆಯನ್ನು ಹೀಗೂ ಹೇಳಬಹುದಾ ಎಂದು ಬೆರಗಾಗುತ್ತಿರುವುದು.

  ವಯಸ್ಸಾದ ಜೋಡಿಯಾಗಿ ತಾಳ್ಮೆಯ ಪ್ರತಿರೂಪವಾಗಿ ಸುರೇಶ್-ಹೆಬ್ಳೀಕರ್, ಸಿಡುಕು ಮೂತಿಯ ಕೋಪಿಷ್ಠನಾಗಿ ಅಚ್ಯುತ್ ಕುಮಾರ್-ಸುಧಾರಾಣಿ ನಡುವಯಸ್ಕ ಜೋಡಿಯಾಗಿ ಹಾಗೂ ಹದಿಹರೆಯದ ಹುಡುಗನಾಗಿ ಅಹಂ ಪ್ರತಿನಿಧಿಸುವ ರಾಜ್‍ವೀರ್.. ಅವರು ಹೇಳೋ ಕಥೆ ಎಲ್ಲವೂ ವಿಭಿನ್ನ. ಆಗ ಅಲ್ಲಿ ಯಮ ಬರುತ್ತಾನೆ..

  ಕಾಲ ಅರ್ಥಾತ್ ಯಮನನ್ನು ಚಿತ್ರದಲ್ಲಿ ತರೋಕೆ ಹೇಗೆ ಸಾಧ್ಯ..? ಈ ಪ್ರಶ್ನೆಗೆ ಉತ್ತರ ಸಿಕ್ಕೋದು ಚಂದ್ರಕಾಂತ್ ಅವರ ಪ್ರಯೋಗಾತ್ಮಕ ನಿರ್ದೇಶನದಲ್ಲಿ. ನಿರ್ಮಾಪಕ ರಾಜಶೇಖರ್ ಅವರು ಹೊಸದಾದ ವಿಭಿನ್ನ ಕಥೆಗೆ ರಕ್ತಮಾಂಸ ತುಂಬಿದ್ದಾರೆ. ಹೊಸ ಪ್ರಯೋಗ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಬೆರಗು ಹುಟ್ಟಿಸುತ್ತಿದೆ. ಇಂತಹ ಪ್ರಯೋಗಗಳು ಸದಾ ಆಗುತ್ತಿರಬೇಕು.

 • ಏಪ್ರಿಲ್‌ ಒಂದರಂದು ವಿಭಿನ್ನ ಕಥೆಯ "ತ್ರಿಕೋನ" ಬಿಡುಗಡೆ.

  ಏಪ್ರಿಲ್‌ ಒಂದರಂದು ವಿಭಿನ್ನ ಕಥೆಯ "ತ್ರಿಕೋನ" ಬಿಡುಗಡೆ.

  ಕೊರೋನ ಹಾವಳಿ ಕಡಿಮೆಯಾದ ಮೇಲೆ ಕನ್ನಡ ಚಿತ್ರರಂಗ ಮೊದಲಿನಂತೆ ತನ್ನ ವೈಭವಕ್ಕೆ ಮರಳುತ್ತಿದೆ. ಸಾಲುಸಾಲು ಚಿತ್ರಗಳು ತೆರೆಗೆ ಬರುತ್ತಿದೆ. ಆ ಪೈಕಿ ವಿಭಿನ್ನ ಕಥೆಯ "ತ್ರಿಕೋನ" ಸಹ ಏಪ್ರಿಲ್ ಒಂದರಂದು ಬಿಡುಗಡೆಯಾಗಲಿದೆ.

  ಈ ವಿಷಯ ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.ನಿರ್ಮಾಣ ಮಾಡಿರುವ ರಾಜಶೇಖರ್ ಅವರೆ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. 143 ಚಿತ್ರವನ್ನು ನಿರ್ದೇಶಿಸಿದ್ದ ಚಂದ್ರಕಾಂತ್ "ತ್ರಿಕೋನ" ವನ್ನು ನಿರ್ದೇಶಿಸಿದ್ದಾರೆ.

  ಎಲ್ಲಾ ಮನುಷ್ಯನಲ್ಲೂ ಮನಸ್ಸಿದೆ. ಆ ಮನಸ್ಸನ್ನು ನಾವು ಕ್ರೀಡಾ ಮೈದಾನ ಎನ್ನಬಹುದು. ಏಕೆಂದರೆ ಮನಸ್ಸಿನಲ್ಲಿ ಮೋಸ, ದ್ವೇಷ, ಅಸೂಯೆ, ಸೇಡು, ದುರಾಸೆ ಎಂಬ ಕ್ರೀಡೆಗಳು ನಡೆಯುತ್ತಿರುತ್ತದೆ. ಇದರಲ್ಲಿ ಅಹಂ, ಶಕ್ತಿ ಹಾಗೂ ತಾಳ್ಮೆ ಎಂಬ ಸ್ಪರ್ಧಿಗಳು ಇದ್ದಾರೆ. ಈ ಮೂವರಲ್ಲಿ ಗೆಲವು ಯಾರಿಗೆ? ಎಂದು ನೋಡಲು ನೀವು ನಮ್ಮ ಸಿನಿಮಾ ನೋಡಬೇಕು ಎಂದರು ನಿರ್ದೇಶಕರು.

  ನಾನು ಈ ಹಿಂದೆ ಕೆಲವು ಸಿನಿಮಾಗಳನ್ನು ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದೇನೆ. ಮೊದಲ ಬಾರಿಗೆ ನಿರ್ದೇಶನವನ್ನು ಚಂದ್ರಕಾಂತ್ ಅವರಿಗೆ ಬಿಟ್ಟುಕೊಟ್ಟಿದ್ದೇನೆ. ಕಥೆ ನಾನೇ ಬರೆದಿದ್ದೇನೆ. ಬೇರೆ ಚಿತ್ರಗಳನ್ನು ನಿರ್ಮಾಣ ಮಾಡಲಿದ್ದು, ಬೇರೆ ನಿರ್ದೇಶಕರೆ ಚಿತ್ರ ನಿರ್ದೇಶಿಸಲಿದ್ದಾರೆ. ಏಕೆಂದರೆ ಚಂದ್ರಕಾಂತ್ ಸೇರಿದಂತೆ ಬೇರೆ ನಿರ್ದೇಶಕರಿಂದ ನಾನು ತಿಳಿಯುವುದಿದೆ. ಈ ಚಿತ್ರ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಕನ್ನಡ ಭಾಷೆಯಲ್ಲಿ ಮಾತ್ರ ಏಪ್ರಿಲ್ ಒಂದರಂದು ಬಿಡುಗಡೆಯಾಗಲಿದೆ. ಪ್ರಚಾರ ರಾಯಭಾರಿಯಾಗಿ ಖ್ಯಾತ ನಟ ಸುಚೀಂದ್ರ ಪ್ರಸಾದ್ ಅವರಿರುತ್ತಾರೆ. ವಿತರಕ ಭಾಷಾ ಅವರು ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ ಎಂದರು ನಿರ್ಮಾಪಕ ರಾಜಶೇಖರ್.

  ತಮ್ಮ ಪಾತ್ರ ವಿವರಣೆ ನೀಡಿದ ಖ್ಯಾತ ನಟ ಸುರೇಶ್ ಹೆಬ್ಳೀಕರ್, ಚಿತ್ರತಂಡಕ್ಕೆ ಶುಭ ಕೋರಿದರು. ವಿತರಕ ಭಾಷಾ ಸಿನಿಮಾ ವಿತರಣೆ ಬಗ್ಗೆ ಮಾಹಿತಿ ನೀಡಿದರು.

  ನಾನು ಹಾಗೂ ನಿರ್ಮಾಪಕ ರಾಜಶೇಖರ್ ಸಹಪಾಠಿಗಳು. ತ್ರಿಕೋನ ಚಿತ್ರದ ರಾಯಭಾರಿಯಾಗಲು ಕೇಳಿದರು. 

  ಚಿತ್ರ ನೋಡಿದೆ. ಚೆನ್ನಾಗಿದೆ. ರಾಯಭಾರಿಯಾಗಲು ಒಪ್ಪಿದ್ದೇನೆ. ಚಿತ್ರತಂಡಕ್ಕೆ ಶುಭವಾಗಲಿ ಎಂದರು ನಟ ಸುಚೀಂದ್ರ ಪ್ರಸಾದ್. ಚಿತ್ರದಲ್ಲಿ ನಟಿಸಿರುವ ರಾಜವೀರ್ ಹಾಗೂ ಮಾರುತೇಶ್ ಪಾತ್ರ ಪರಿಚಯ ಮಾಡಿಕೊಟ್ಟರು.

  ಪೊಲೀಸ್ ಪ್ರಕಿ ಪ್ರೊಡಕ್ಷನ್ ಲಾಂಛನದಲ್ಲಿ ರಾಜಶೇಖರ್ ನಿರ್ಮಿಸಿರುವ ಈ ಚಿತ್ರವನ್ನು ಚಂದ್ರಕಾಂತ್ ನಿರ್ದೇಶಿಸಿದ್ದಾರೆ. ಸುರೇಂದ್ರನಾಥ್ ಸಂಗೀತ ನಿರ್ದೇಶನ ಹಾಗೂ ಶ್ರೀನಿವಾಸ್ ವಿನ್ನಕೋಟ ಛಾಯಾಗ್ರಹಣ ಈ ಚಿತ್ರಕ್ಕಿದೆ. 

  ಸುರೇಶ್ ಹೆಬ್ಳೀಕರ್, ಲಕ್ಷ್ಮೀ, ಅಚ್ಯುತಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಾರುತೇಶ್, ರಾಜವೀರ್, ಬೇಬಿ ಅದಿತಿ, ಬೇಬಿ ಹಾಸಿನಿ, ಮನದೀಪ್ ರಾಯ್, ರಾಕ್ ಲೈನ್ ಸುಧಾಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 • ಜನರೇಷನ್ ಗ್ಯಾಪ್ ಬ್ರಿಡ್ಜ್ ಸಿನಿಮಾ ತ್ರಿಕೋನ

  ಜನರೇಷನ್ ಗ್ಯಾಪ್ ಬ್ರಿಡ್ಜ್ ಸಿನಿಮಾ ತ್ರಿಕೋನ

  ಒಂದು ಸಮಸ್ಯೆ ಅಥವಾ ಸವಾಲು. ಆ ಸಮಸ್ಯೆಯನ್ನು 20-25 ವರ್ಷದ ಮಕ್ಕಳು ಹೇಗೆ ನಿಭಾಯಿಸುತ್ತಾರೆ..? 40-60ರ ವಯಸ್ಸಿನ ತಂದೆ ತಾಯಿ ಹೇಗೆ ನಿಭಾಯಿಸುತ್ತಾರೆ..? ತಾಳ್ಮೆ, ಸಹನೆ ಅನ್ನೋದು ಎಷ್ಟು ಮುಖ್ಯ..? ಇಂತಾ ಅಂಶಗಳನ್ನಿಟ್ಟುಕೊಂಡು ಸಿದ್ಧವಾಗಿರೋ ಸಿನಿಮಾ ತ್ರಿಕೋನ. ಹಾಗಂತ ಇದು ಆರ್ಟ್ ಸಿನಿಮಾ. ಕಲಾತ್ಮಕತೆ ಶೈಲಿಯಲ್ಲಿ ಸಿದ್ಧವಾಗಿರೋ ಕಮರ್ಷಿಯಲ್ ಸಿನಿಮಾ..

  ಹೀಗೆ ತಮ್ಮ ತ್ರಿಕೋನ ಚಿತ್ರದ ಕಾನ್ಫಿಡೆನ್ಸ್ ಆಗಿ ಹೇಳಿರೋದು ಬಿ.ಆರ್. ನಿರ್ಮಾಪಕ ರಾಜಶೇಖರ್. ಬರ್ಫಿ, ಪರೋಲ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ರಾಜಶೇಖರ್ ಈ ಚಿತ್ರಕ್ಕೆ ಪ್ರೊಡ್ಯೂಸರ್. ಕಥೆಗಾರರೂ ಅವರೇ. ನಿರ್ದೇಶನದ ಜವಾಬ್ದಾರಿಯನ್ನು ಚಂದ್ರಕಾಂತ್ ಅವರ ಹೆಗಲಿಗೆ ಹೊರಿಸಿದ್ದಾರೆ.

  ಅಚ್ಯುತ್ ಕುಮಾರ್, ಸುಧಾರಾಣಿ, ಲಕ್ಷ್ಮಿ, ಸುರೇಶ್ ಹೆಬ್ಳೀಕರ್.. ಹೀಗೆ ದೊಡ್ಡ ದೊಡ್ಡ ಕಲಾವಿದರ ಸೈನ್ಯವನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಪಿ.ಶೇಷಾದ್ರಿ, ಸುಚೇಂದ್ರ ಪ್ರಸಾದ್ ಮೊದಲಾದವರು ಈಗಾಗಲೇ ಸಿನಿಮಾ ನೋಡಿ ಬೆನ್ನು ತಟ್ಟಿದ್ದಾರೆ. ಸಿನಿಮಾ ಏಪ್ರಿಲ್ 1ಕ್ಕೆ ರಿಲೀಸ್ ಆಗುತ್ತಿದೆ.

 • ತಾಳ್ಮೆ.. ಅಹಂ.. ಶಕ್ತಿ.. ಮೂರು ಕೋನಗಳ ತ್ರಿಕೋನ

  ತಾಳ್ಮೆ.. ಅಹಂ.. ಶಕ್ತಿ.. ಮೂರು ಕೋನಗಳ ತ್ರಿಕೋನ

  ಒಂದೇ ಸಮಸ್ಯೆ.. ಮೂರು ವಿಭಿನ್ನ ತಲೆಮಾರು.. ಮೂರು ವಯೋಮಾನದವರು.. ಒಬ್ಬೊಬ್ಬರದ್ದೂ ಒಂದೊಂದು ಮಾರ್ಗ. ಆ ಮಾರ್ಗಗಳೇ ತಾಳ್ಮೆ.. ಅಹಂ.. ಶಕ್ತಿ...

  ಇದೇ ತ್ರಿಕೋನದ ಕಥೆ. ಒಂದು ಸಮಸ್ಯೆಯನ್ನು ತಾಳ್ಮೆ.. ಅಹಂ.. ಶಕ್ತಿ..ಮೂರೂ ಮಾರ್ಗಗಳನ್ನು ಬಳಸಿ ಜಯಿಸಬೇಕು ಅನ್ನೋದು ಚಿತ್ರದ ಒನ್‍ಲೈನ್ ಸ್ಟೋರಿ. ಕಥೆ ಸ್ವತಃ ನಿರ್ಮಾಪಕ ರಾಜಶೇಖರ್ ಅವರದ್ದು. ಅವರಿಗೆ ಈ ಹಿಂದೆ ಪೆರೋಲ್, ಬರ್ಫಿ, ಅಮೃತವಾಣಿಯಂತಾ ಚಿತ್ರಗಳನ್ನು ನಿರ್ಮಿಸಿದ್ದ ಅನುಭವವಿದೆ. ನಿರ್ದೇಶನವೂ ಗೊತ್ತಿದೆ. ಆದರೆ ಈ ಚಿತ್ರಕ್ಕೆ ಚಂದ್ರಕಾಂತ್ ಡೈರೆಕ್ಟರ್.

  ಸುಧಾರಾಣಿ, ಅಚ್ಯುತ್ ಕುಮಾರ್, ಲಕ್ಷ್ಮೀ, ಸುರೇಶ್ ಹೆಬ್ಳೀಕರ್ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಸುಚೇಂದ್ರ ಪ್ರಸಾದ್ ಪ್ರಚಾರ ರಾಯಭಾರಿ.

 • ತ್ರಿಕೋನ : ಕಥೆಗಾಗಿಯೇ ಕಳೆದಿದ್ದರು 8 ತಿಂಗಳು..

  ತ್ರಿಕೋನ : ಕಥೆಗಾಗಿಯೇ ಕಳೆದಿದ್ದರು 8 ತಿಂಗಳು..

  ತ್ರಿಕೋನ. ಈಗ ಥಿಯೇಟರಿನಲ್ಲಿರೋ ಸಿನಿಮಾ. ಟ್ರೇಲರ್ ಮೂಲಕ ಸಂಥಿಂಗ್ ಸ್ಪೆಷಲ್ ಎಂಬ ಭರವಸೆ ಹುಟ್ಟಿಸಿರೋ ಸಿನಿಮಾ. ಸುರೇಶ್ ಹೆಬ್ಳೀಕರ್-ಲಕ್ಷ್ಮೀ, ಅಚ್ಯುತ್ ಕುಮಾರ್-ಸುಧಾರಾಣಿ ಪ್ರಧಾನ ಪಾತ್ರದಲ್ಲಿರೋ ಚಿತ್ರ ರೆಗ್ಯುಲರ್ ಸಿನಿಮಾಗಳಿಗಿಂತ ಡಿಫರೆಂಟ್ ಆಗಿದೆ.

  ಥಿಯೇಟರಿಗೆ ಬರುವ ಪ್ರೇಕ್ಷಕರಿಗೆ ಒಂದು ಕ್ಷಣವೂ ಬೋರ್ ಹೊಡೆಸಲ್ಲ. ಸಸ್ಪೆನ್ಸ್, ಥ್ರಿಲ್, ಕಾಮಿಡಿ, ಎಮೋಷನ್ಸ್ ಎಲ್ಲವೂ ಇದೆ. ಚಿತ್ರದ ಕಥೆಗಾಗಿಯೇ 8 ತಿಂಗಳು ಸಮಯ ತೆಗೆದುಕೊಂಡಿದ್ದೇವೆ. ಒಂದೊಂದು ಸನ್ನಿವೇಶವನ್ನೂ ನಾನು ಮತ್ತು ನಿರ್ದೇಶಕ ಚಂದ್ರಕಾಂತ್ ಹಲವು ಬಾರಿ ಚರ್ಚೆ ಮಾಡಿ ಸಿದ್ಧ ಮಾಡಿದ್ದೇವೆ ಎಂದು ವಿಶ್ವಾಸದಿಂದ ಹೇಳ್ತಿರೋದು ನಿರ್ಮಾಪಕ ಹಾಗೂ ತ್ರಿಕೋನ ಚಿತ್ರದ ಕಥೆಗಾರ ರಾಜಶೇಖರ್.

  ನಿದೇಶಕ ಚಂದ್ರಕಾಂತ್ 143 ಅನ್ನೋ ಸಿನಿಮಾ ನಿರ್ದೇಶಿಸಿದ್ದವರು. ಈ ಚಿತ್ರವನ್ನು ಎಲ್ಲ ವಯೋಮಾನದವರಿಗೂ ತಲುಪುವಂತೆ ಮಾಡಲಾಗಿದೆ ಎಂದಿದ್ದಾರೆ ರಾಜಶೇಖರ್. 

 • ತ್ರಿಕೋನ ರಿಲೀಸ್ ಮುಂದಕ್ಕೆ : ಕಾರಣ ಏನ್ ಗೊತ್ತಾ?

  ತ್ರಿಕೋನ ರಿಲೀಸ್ ಮುಂದಕ್ಕೆ : ಕಾರಣ ಏನ್ ಗೊತ್ತಾ?

  ತ್ರಿಕೋನ. ಏಪ್ರಿಲ್ 1ಕ್ಕೆ ರಿಲೀಸ್ ಮಾಡೋಕೆ ಎಲ್ಲವನ್ನೂ ಪ್ಲಾನ್ ಮಾಡಿಕೊಂಡಿದ್ದ ಚಿತ್ರ. ಅಚ್ಯುತ್ ಕುಮಾರ್, ಸುಧಾರಾಣಿ, ಲಕ್ಷ್ಮಿ, ಸುರೇಶ್ ಹೆಬ್ಳಳೀಕರ್ ಪ್ರಧಾನ ಪಾತ್ರದಲ್ಲಿರೋ ತ್ರಿಕೋನ ಈಗ ಏಪ್ರಿಲ್ 1ಕ್ಕೆ ರಿಲೀಸ್ ಆಗುತ್ತಿಲ್ಲ.

  ಕಾರಣ ಬೇರೇನಿಲ್ಲ. ಒಂದ ಕಡೆ ಜೇಮ್ಸ್.. ಮತ್ತೊಂದು ಕಡೆ ಕಾಶ್ಮೀರ್ ಫೈಲ್ಸ್.. ಇನ್ನೊಂದು ಕಡೆ ಆರ್.ಆರ್.ಆರ್. ಈ ಮೂರೂ ಚಿತ್ರಗಳು ಬಹುತೇಕ ಎಲ್ಲ ಚಿತ್ರಮಂದಿರ, ಸ್ಕ್ರೀನ್‍ಗಳನ್ನೂ ಆಕ್ರಮಿಸಿಕೊಂಡುಬಿಟ್ಟಿವೆ. ಎಲ್ಲವೂ ಚೆನ್ನಾಗಿಯೇ ಹೋಗುತ್ತಿರೋ ಕಾರಣ ತ್ರಿಕೋನ ಚಿತ್ರಕ್ಕೆ ಥಿಯೇಟರ್ ಸಿಗುತ್ತಿಲ್ಲ. ಸಿಕ್ಕ ಕಡಿಮೆ ಥಿಯೇಟರಿನಲ್ಲಿ ರಿಲೀಸ್ ಮಾಡೋದಕ್ಕಿಂತ ನಿಧಾನವಾಗಿ ಬರೋದೇ ಬೆಟರ್ ಎಂದು ನಿರ್ಧರಿಸಿದ್ದಾರೆ ನಿರ್ಮಾಪಕ ರಾಜಶೇಖರ್.

  ಚಿತ್ರದಲ್ಲಿರೋದು ಔಟ್ ಆಫ್ ಬಾಕ್ಸ್ ಕಂಟೆಂಟ್. ಹೀಗಾಗಿ ತರಾತುರಿಯಲ್ಲಿ ಬೇಡ, ನಿಧಾನವಾದರೂ ಪರವಾಗಿಲ್ಲ. ನಮ್ಮ ಟಾರ್ಗೆಟ್ ಪ್ರೇಕ್ಷಕರನ್ನು ತಲುಪಬೇಕು ಎಂದು ನಿರ್ಧರಿಸಿದ್ದೇವೆ ಎನ್ನೋದು ಡೈರೆಕ್ಟರ್ ಚಂದ್ರಕಾಂತ್ ಮಾತು.

 • ತ್ರಿಕೋನದಲ್ಲಿ ಚಂದನದ ಗೊಂಬೆ..

  ತ್ರಿಕೋನದಲ್ಲಿ ಚಂದನದ ಗೊಂಬೆ..

  ಕನ್ನಡಿಗರ ಪಾಲಿನ ನಿತ್ಯನೂತನ ಚಂದನದ ಗೊಂಬೆ ಲಕ್ಷ್ಮೀ. ಬಹಳ ದಿನಗಳ ನಂತರ ಮತ್ತೊಮ್ಮೆ ತೆರೆ ಮೇಲೆ ಬರುತ್ತಿದ್ದಾರೆ. ತ್ರಿಕೋನ ಚಿತ್ರದ ಮೂಲಕ ಕನ್ನಡದಲ್ಲಿ ಮತ್ತೆ ನಟಿಸುತ್ತಿದ್ದಾರೆ ಲಕ್ಷ್ಮೀ. 2017ರಲ್ಲಿ ಸಾಹೇಬ ಚಿತ್ರದಲ್ಲಿ ನಟಿಸಿದ್ದೇ ಕೊನೆ, ಮತ್ತೆ ಕನ್ನಡದಲ್ಲಿ ನಟಿಸಿರಲೇ ಇಲ್ಲ. ಈಗ ತ್ರಿಕೋನದಲ್ಲಿ ನಟಿಸಿದ್ದು, ಇದೇ ಏಪ್ರಿಲ್ 1ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

  ಲಕ್ಷ್ಮೀ ಅವರ ಜೊತೆ ಸುಧಾರಾಣಿ, ಅಚ್ಯುತ್ ಕುಮಾರ್ ಪ್ರಧಾನ ಪಾತ್ರದಲ್ಲಿದ್ದಾರೆ. 143 ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ನಿರ್ದೇಶಕ ಚಂದ್ರಕಾಂತ್, ತ್ರಿಕೋನ ಚಿತ್ರದ ಡೈರೆಕ್ಟರ್. ಸುರೇಶ್ ಹೆಬ್ಳೀಕರ್ ಕೂಡಾ ನಟಿಸಿದ್ದಾರೆ. ಚಿತ್ರದ ಪ್ರಚಾರ ರಾಯಭಾರಿ ಸುಚೇಂದ್ರ ಪ್ರಸಾದ್. ಚಿತ್ರದ ಪ್ರಚಾರಕ್ಕೊಬ್ಬ ರಾಯಭಾರಿ ಎನ್ನುವ ಕಾನ್ಸೆಪ್ಟ್ ಕನ್ನಡ ಚಿತ್ರರಂಗಕ್ಕೆ ಹೊಸತು.

  ನಿರ್ಮಾಪಕ ರಾಜಶೇಖರ್ ಅವರೇ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಅಂದಹಾಗೆ ರಾಜಶೇಖರ್ ಮತ್ತು ಸುಚೇಂದ್ರ ಪ್ರಸಾದ್ ಪರಮಾಪ್ತ ಗೆಳೆಯರು ಕೂಡಾ

 • ತ್ರಿಕೋನದಲ್ಲಿ ಹೀರೋ ಹೀರೋಯಿನ್ ಇಲ್ಲ : ಕೋದಂಡರಾಮ

  ತ್ರಿಕೋನದಲ್ಲಿ ಹೀರೋ ಹೀರೋಯಿನ್ ಇಲ್ಲ : ಕೋದಂಡರಾಮ

  ಮುಂದಿನ ವಾರ ರಿಲೀಸ್ ಆಗುತ್ತಿರೋ ಹೊಸತನದ ಚಿತ್ರದಲ್ಲಿ ಹೀರೋ ಮತ್ತು ಹೀರೋಯಿನ್ ಇಬ್ಬರೂ ಇಲ್ಲ. ಹೀಗಂತ ಹೇಳಿರೋದು ಕೋದಂಡರಾಮ. ಈ ಕೋದಂಡರಾಮ ಯಾರೆಂದು ಗೊಂದಲ ಬೇಡ. ಅಚ್ಯುತ್ ಕುಮಾರ್ ಅವರು ತ್ರಿಕೋನದಲ್ಲಿ ನಟಿಸಿರೋ ಪಾತ್ರದ ಹೆಸರದು.

  ನನ್ನದು ಕೋದಂಡರಾಮ ಅನ್ನೋ ಹೆಸರಿನ ಪಾತ್ರ. ಹಠಮಾರಿ. ಯಾರ ಮಾತನ್ನೂ ಕೇಳದವನು. ತಾನು ಹೇಳಿದ್ದನ್ನೇ ಮನೆಯಲ್ಲಿರುವವರೆಲ್ಲ ಫಾಲೋ ಮಾಡಬೇಕು ಎಂದು ಬಯಸುವವನು. ಅಂತಹ ಕೋದಂಡರಾಮ ಒಮ್ಮೆ ಬೆಂಗಳೂರಿನಿಂದ ದ.ಕನ್ನಡಕ್ಕೆ ಕಾರಿನಲ್ಲಿ ಕುಟುಂಬದ ಜೊತೆ ಹೋಗುತ್ತಾನೆ. ಆಗ ಕೋದಂಡರಾಮನಿಗೆ ಎದುರಾಗುವ ಘಟನೆ, ಸಮಸ್ಯೆಗಳು ಆತನನ್ನು ಬದಲಿಸುತ್ತಾ ಹೋಗುತ್ತವೆ... ಹೀಗೆ ತಮ್ಮ ಪಾತ್ರದ ವಿವರ ಬಿಚ್ಚಿಟ್ಟಿದ್ದಾರೆ ಅಚ್ಯುತ್ ಕುಮಾರ್.

  ಚಿತ್ರದಲ್ಲಿ ಅಚ್ಯುತ್ ಕುಮಾರ್ ಅವರಿಗೆ ಸುಧಾರಾಣಿ ಜೋಡಿ. ಆರಂಭದಿಂದ ಕೊನೆಯವರೆಗೂ ನಾವಿರುತ್ತೇವೆ. ಆದರೆ ಹೀರೋ ಹೀರೋಯಿನ್ ಆಗಿ ಅಲ್ಲ. ಇಲ್ಲಿ ಪ್ರತಿ ಪಾತ್ರಗಳೂ ನಾಯಕ ನಾಯಕಿಯಷ್ಟೇ ಪ್ರಾಮುಖ್ಯತೆ ಹೊಂದಿವೆ.

  ಸುರೇಶ್ ಹೆಬ್ಳೀಕರ್ ಮತ್ತು ಲಕ್ಷ್ಮೀ ಅವರದ್ದು ಸೀನಿಯರ್ ಜೋಡಿ. ಅಚ್ಯುತ್ ಮತ್ತು ಸುಧಾರಾಣಿಯವರದ್ದು ಮಧ್ಯಮ ವಯಸ್ಸಿನ ಜೋಡಿ. ಇವರ ನಡುವೆ ಹದಿಹರೆಯದ ಹುಡುಗ. ಅಟ್ಟಿಸಿಕೊಂಡು ಬರೋ ಕೋಣನ ಮುಖದ ಲಾರಿ. ಇವೆಲ್ಲ ಕುತೂಹಲಗಳನ್ನಿಟ್ಟುಕೊಂಡೇ ಚಿತ್ರ ನಿರ್ದೇಶಿಸಿದ್ದಾರೆ ಚಂದ್ರಕಾಂತ್. ಚಿತ್ರದ ನಿರ್ಮಾಪಕ ಮತ್ತು ಕಥೆಗಾರ ಬಿ.ಆರ್.ರಾಜಶೇಖರ್. ತ್ರಿಕೋನ ಏಪ್ರಿಲ್ 8ರಂದು ರಿಲೀಸ್ ಆಗುತ್ತಿದೆ.

 • ಯಶಸ್ಸಿನ ಸೀಕ್ರೆಟ್ ತಿಳ್ಕೋಬೇಕಾ..? ತ್ರಿಕೋನ ನೋಡಿ..!

  ಯಶಸ್ಸಿನ ಸೀಕ್ರೆಟ್ ತಿಳ್ಕೋಬೇಕಾ..? ತ್ರಿಕೋನ ನೋಡಿ..!

  ಪ್ರತಿಯೊಬ್ಬರೂ ಸಕ್ಸಸ್‍ಗಾಗಿ ಹಂಬಲಿಸುತ್ತಾರೆ. ಸಾಧನೆ ಮಾಡಬೇಕು ಎಂದು ಕನಸು ಕಾಣುತ್ತಾರೆ. ಆದರೆ ಹೆಚ್ಚಿನವರು ಶಾರ್ಟ್ ಕಟ್ ಅಥವಾ ಅಡ್ಡದಾರಿ ಹಿಡಿದು ಬಿಡುತ್ತಾರೆ. ಹಾಗೆ ಅಡ್ಡದಾರಿ ಹಿಡಿದರೆ ಏನಾಗುತ್ತೆ.. ಏನೆಲ್ಲಾ ಅಪಾಯಗಳನ್ನು ಎದುರಿಸಬೇಕಾಗುತ್ತೆ.. ಯಾವ ರೀತಿ ಅದನ್ನು ಎದುರಿಸಬೇಕು ಅನ್ನೋ ಕಥೆಯನ್ನು ಆ್ಯಕ್ಷನ್ ಥ್ರಿಲ್ಲರ್ ಕಥೆಯಲ್ಲಿ ಹೇಳಿದ್ದೇವೆ. ಅವುಗಳನ್ನು ಮೂರು ವಿಭಿನ್ನ ವಯೋಮಾನದ ಪಾತ್ರಗಳ ಮೂಲಕ ಹೇಳಿದ್ದೇವೆ. ಲಕ್ಷ್ಮೀ-ಸುರೇಶ್ ಹೆಬ್ಳೀಕರ್ ಮತ್ತು ಸುಧಾರಾಣಿ-ಅಚ್ಯುತ್ ಕುಮಾರ್ ಅವರದ್ದು ಒಂದು ಜೋಡಿ. ಮಾರುತೇಶ್, ರಾಜ್‍ವೀರ್, ಸಾಧುಕೋಕಿಲ ಮೊದಲಾದವರು ನಟಿಸಿರೋ ಚಿತ್ರ.. ಪ್ರತಿ ಕ್ಷಣದಲ್ಲೂ ಕುತೂಹಲ ಕಾಯ್ದುಕೊಳ್ಳುತ್ತದೆ.. ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ಚಂದ್ರಕಾಂತ್.

  143 ಚಿತ್ರದ ನಿರ್ದೇಶಕರಾಗಿದ್ದ ಚಂದ್ರಕಾಂತ್ ಅವರಿಗೆ ತ್ರಿಕೋನದಲ್ಲಿ ನಿರ್ದೇಶನದ ಅವಕಾಶ ಕೊಟ್ಟಿರೋದು ರಾಜಶೇಖರ್. ನಿರ್ದೇಶಕರಾಗಿದ್ದ ರಾಜಶೇಖರ್, ಈ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ. ಅಹಂ.. ತಾಳ್ಮೆ ಮತ್ತು ಶಕ್ತಿಯ ಕಥೆ ಹೇಳುತ್ತಿರೋ ತ್ರಿಕೋನ ಇದೇ ವಾರ ರಿಲೀಸ್ ಆಗುತ್ತಿದೆ.