ಜನಾರ್ದನ ರೆಡ್ಡಿ ಪುತ್ರ ಕಿರೀಟಿಯ ಚಿತ್ರರಂಗ ಪ್ರವೇಶಕ್ಕೆ ಅದ್ಧೂರಿ ವೇದಿಕೆ ಸಿದ್ಧವಾಗಿದೆ. ಬಾಹುಬಲಿಯಂತಾ ಸಿನಿಮಾ ನಿರ್ಮಿಸಿದ್ದ ವಾರಾಹಿ ಸಂಸ್ಥೆ ಕಿರೀಟಿಯ ಮೊದಲ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಸಿನಿಮಾಗೆ ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯರು ಹಾಜರಿದ್ದು ಶುಭ ಕೋರಿದ್ದು ವಿಶೇಷವಾಗಿತ್ತು.
ಕಿರೀಟಿಯ ಮೊದಲ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್, ಜೆನಿಲಿಯಾ ಕೂಡಾ ನಟಿಸುತ್ತಿದ್ದಾರೆ. ಜೆನಿಲಿಯಾ ಸುಮಾರು 14 ವರ್ಷಗಳ ನಂತರ ಕನ್ನಡಕ್ಕೆ ಬಂದಿದ್ದಾರೆ. ಶ್ರೀಲೀಲಾ ನಾಯಕಿ. ಭಾರತ ಚಿತ್ರರಂಗದ ಸ್ಟಾರ್ ನಿರ್ದೇಶಕ ರಾಜಮೌಳಿ, ಶಿವರಾಜ್ಕುಮಾರ್ ಕೂಡಾ ಕಿರೀಟಿಗೆ ಶುಭ ಕೋರಿದರು.
ಕಿರೀಟಿಗೆ ಒಳ್ಳೆಯ ಟೀಂ ಸಿಕ್ಕಿದೆ. ಜೊತೆಗೆ ರವಿ ಸರ್ ಇದ್ದಾರೆ. ಅವರ ಮಾರ್ಗದರ್ಶನ ಸಲಹೆ ಪಡೆದುಕೊಳ್ಳುವಂತೆ ಚಿತ್ರತಂಡಕ್ಕೆ ಸಲಹೆ ಕೊಟ್ಟವರು ರಾಜಮೌಳಿ.
ಕಿರೀಟಿ ಎಂದರೆ ಅರ್ಜುನ. ಸಾರಥಿ ಕೃಷ್ಣ. ಈ ಚಿತ್ರದ ನಿರ್ದೇಶಕ ರಾಧಾಕೃಷ್ಣ. ಚಿತ್ರದ ನಿರ್ದೇಶಕ ರಾಧಾಕೃಷ್ಣರನ್ನು ಪುನೀತ್ ಪರಿಚಯ ಮಾಡಿಸಿದ್ದರು. ನಾನಿದ್ದೇನೆ. ಜೆನಿಲಿಯಾ ಇದ್ದಾರೆ. ಶ್ರೀಲೀಲಾ ಇದ್ದಾರೆ. ಇದಕ್ಕಿಂತ ಒಳ್ಳೆಯ ಪ್ಯಾಕೇಜ್ ಬೇಕಾ ನಿಮಗೆ ಎಂದು ನಗುತ್ತಲೇ ಶುಭ ಕೋರಿದ್ದು ರವಿಚಂದ್ರನ್.
ಕಾರ್ಯಕ್ರಮಕ್ಕೆ ಬಾರದಿದ್ದರೂ ವಿಡಿಯೋ ಮೂಲಕ ಶುಭ ಕೋರಿದ ಶಿವರಾಜ್ಕುಮಾರ್ ಸ್ವಂತ ಸ್ಟೈಲ್ ಬೆಳೆಸಿಕೊಳ್ಳೋಕೆ ಕಿರೀಟಿಗೆ ಸಲಹೆ ಕೊಟ್ಟರು.
ಚಿತ್ರರಂಗಕ್ಕೆ ಮತ್ತೆ ಬಂದಿರೋದು ಖುಷಿ ಕೊಟ್ಟಿದೆ. ಕಿರೀಟಿಗೆ ಒಳ್ಳೆಯ ಟೀಂ ಸಿಕ್ಕಿದೆ. ಚಿತ್ರರಂಗ ಪ್ರವೇಶಕ್ಕೆ ಶುಭಾಶಯ ಎಂದವರು ಜೆನಿಲಿಯಾ.