` kantara, - chitraloka.com | Kannada Movie News, Reviews | Image

kantara,

  • 100 ಕೋಟಿ ಕ್ಲಬ್‍ನತ್ತ ಕಾಂತಾರ :ಸೃಷ್ಟಿಸಿದ ದಾಖಲೆಗಳೆಷ್ಟು? ಕನ್ನಡದಲ್ಲಿ ಮಾತ್ರ...

    100 ಕೋಟಿ ಕ್ಲಬ್‍ನತ್ತ ಕಾಂತಾರ :ಸೃಷ್ಟಿಸಿದ ದಾಖಲೆಗಳೆಷ್ಟು? ಕನ್ನಡದಲ್ಲಿ ಮಾತ್ರ...

    ಕಾಂತಾರ. ಕನ್ನಡಿಗರೆಲ್ಲರೂ ಎದೆಗೆ ಅಪ್ಪಿಕೊಂಡು ಪ್ರೀತಿಸುತ್ತಿರುವ ಸಿನಿಮಾ. ರಿಷಬ್ ಶೆಟ್ಟಿ ಚಿತ್ರದ ಮೂಲಕ ತಾವೂ ಬೇರೆಯ ಎತ್ತರಕ್ಕೆ ಹೋದರು. ಚಿತ್ರರಂಗವನ್ನೂ ಎತ್ತಿಕೊಂಡು ಹೋದರು. ಈಗ 100 ಕೋಟಿ ಕ್ಲಬ್ ಸನಿಹ ಬಂದಿದೆ.

    ಉ.ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ ಕಾಂತಾರ. ಕನ್ನಡವೂ ಸೇರಿದಂತೆ ಬಹುಭಾಷೆಗಳಲ್ಲಿ ರಿಲೀಸ್ ಆದ ಕೆಜಿಎಫ್, ವಿಕ್ರಾಂತ್ ರೋಣ ಸೇರಿದಂತೆ ಹಲವು ಚಿತ್ರಗಳು ದಾಖಲೆ ಕಲೆಕ್ಷನ್ ಮಾಡಿವೆ. ಆದರೆ ಕೇವಲ ಕನ್ನಡದಲ್ಲಿ ಮಾತ್ರವೇ ರಿಲೀಸ್ ಆಗಿ ದಾಖಲೆ ಮಾಡಿದ್ದು ಕಾಂತಾರ.

    ತಮಿಳುನಾಡು, ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸ್ಕ್ರೀನ್‍ಗಳಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾ ಕಾಂತಾರ. ಕಲೆಕ್ಷನ್‍ನಲ್ಲೂ ನಂ.1 . ಮುಂಬೈನಲ್ಲಿ 100ಕ್ಕೂ ಹೆಚ್ಚು ಶೋ ಕಂಡ ಮೊದಲ ಕನ್ನಡ ಸಿನಿಮಾ ಕಾಂತಾರ.

    ಅಮೆರಿಕ, ಕೆನಡಾ, ಬ್ರಿಟನ್, ಅರಬ್ ರಾಷ್ಟ್ರಗಳು ಸೇರಿದಂತೆ ವಿದೇಶಗಳಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಕಾಂತಾರ. ಕೇವಲ ಕನ್ನಡದಲ್ಲಿ ರಿಲೀಸ್ ಆಗಿ ಕಲೆಕ್ಷನ್ ಮಾಡಿದ್ದು ದಾಖಲೆ

    100 ಕೋಟಿ ಕ್ಲಬ್ ಸೇರುವುದು ಖಚಿತ. ಅಧಿಕೃತ ಮಾಹಿತಿ ಬಂದಿಲ್ಲವಾದರೂ 100 ಕೋಟಿಗೆ ಹತ್ತಿರದಲ್ಲಿದೆ ಎಂಬ ಸುದ್ದಿಯಂತೂ ಇದೆ.

    ರಿಷಬ್ ಶೆಟ್ಟಿಯವರ ಕಿರಿಕ್ ಪಾರ್ಟಿ ಚಿತ್ರದ ಜೀವಮಾನದ ಗಳಿಕೆಯನ್ನು ಈಗಾಗಲೇ ಕಾಂತಾರ ಹಿಂದೆ ಹಾಕಿದೆ. ವಿಕ್ರಾಂತ್ ರೋಣ, ಮಿಸ್ಟರ್ & ಮಿಸೆಸ್ ರಾಮಾಚಾರಿ, ರಾಜಕುಮಾರ, ಚಾರ್ಲಿ 777 ಚಿತ್ರದ ದಾಖಲೆಯನ್ನೂ ಹಿಂದೆ ಹಾಕಿದೆ.

    ಬುಕ್ ಮೈ ಶೋನಲ್ಲಿ ಚಿತ್ರವನ್ನು ಮೆಚ್ಚಿದವರ ಸಂಖ್ಯೆ 99%ಗೂ ಹೆಚ್ಚು. ವೋಟಿಂಗ್ ಮಾಡಿದವರ ಸಂಖ್ಯೆ ಕೂಡಾ ಅಷ್ಟೆ. 30 ಸಾವಿರಕ್ಕೂ ಹೆಚ್ಚು. ಇದೂ ದಾಖಲೆಯೇ.

    ಈಗ ಹಿಂದಿಯಲ್ಲಿ ಅಕ್ಟೋಬರ್ 17ಕ್ಕೆ ರಿಲೀಸ್ ಆಗುತ್ತಿದೆ. ಹಿಂದಿ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ತೆಲುಗಿನಲ್ಲಿ ಅಕ್ಟೋಬರ್ 15ಕ್ಕೆ ಬಿಡುಗಡೆಯಾಗುತ್ತಿದೆ. ತೆಲುಗಿನ ಟ್ರೇಲರ್‍ಗೂ ಉತ್ತಮ ರಿಯಾಕ್ಷನ್ ಸಿಕ್ಕಿದೆ.

    ದಂತಕತೆಯ ಸಕ್ಸಸ್ ಸ್ಟೋರಿಗೆ ಕೊಟ್ಟಿರುವ ಹೆಸರು ಡಿವೈನ್ ಹಿಟ್ ಎನ್ನುವುದು. ಅಫ್‍ಕೋರ್ಸ್.. ಇದು ಖಂಡಿತ ದೈವೀಕ ಯಶಸ್ಸು.

  • 200 ಕೋಟಿ ಕ್ಲಬ್ ಸೇರಿದ ಕಾಂತಾರ

    200 ಕೋಟಿ ಕ್ಲಬ್ ಸೇರಿದ ಕಾಂತಾರ

    ದಿನ ದಿನಕ್ಕೂ ಕಾಂತಾರ ಕ್ರೇಜ್ ಹೆಚ್ಚುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಕ್ರೇಜ್‍ನ್ನು ರಿಲೀಸ್ ಆದ 4 ವಾರದ ನಂತರವೂ ಉಳಿಸಿಕೊಂಡ ಇನ್ನೊಂದು ಚಿತ್ರ ಇಲ್ಲ. ಈಗಾಗಲೇ ಚಿತ್ರ ನೋಡಿದವರ ಸಂಖ್ಯೆಯಲ್ಲಿ ಕೆಜಿಎಫ್ ಚಾಪ್ಟರ್ 2 ದಾಖಲೆಯನ್ನು ಮೀರಿ ಮುನ್ನುಗ್ಗುತ್ತಿರುವ ಚಿತ್ರ ಕಾಂತಾರ. ಇನ್ನು ಕೆಲವೇ ದಿನಗಳಲ್ಲಿ 1 ಕೋಟಿ ಪ್ರೇಕ್ಷಕರ ಸಂಖ್ಯೆ ಗಡಿ ದಾಟಲಿದೆ. ಹೊಂಬಾಳೆ, ರಿಷಬ್ ಶೆಟ್ಟಿ ಇಬ್ಬರೂ ದಾಖಲೆಗಳ ಸರದಾರರಾಗುತ್ತಿದ್ದಾರೆ.

    ಕಾಂತಾರ ಕನ್ನಡದಲ್ಲಿಯೇ 120 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಅದೂ ಕೂಡಾ ಕರ್ನಾಟಕದಲ್ಲಿಯೇ ಎನ್ನವುದು ವಿಶೇಷ. ವಿಶ್ವದಾದ್ಯಂತ ಸೇರಿ 150 ಕೋಟಿ ದಾಟಿದೆ ಎನ್ನುವುದು ಒಂದು ಅಂದಾಜು.

    ಹಿಂದಿಯಲ್ಲಿ ವಿಶ್ವದಾದ್ಯಂತ 27 ಕೋಟಿ ಕಲೆಕ್ಷನ್ ಮಾಡಿದ್ದು ದಿನೇ ದಿನೇ ಕಲೆಕ್ಷನ್ ಏರುತ್ತಲೇ ಇದೆ. ವಿಶೇಷವೆಂದರೆ ಟಿಕೆಟ್ ದರವನ್ನು ಕಡಿಮೆ ಮಾಡಿದ್ದರೂ ಈ ಕಲೆಕ್ಷನ್ ಒಂದು ದಾಖಲೆಯೇ. ಡಬ್ ಆದ ಸಿನಿಮಾವೊಂದು ಪ್ರತಿ ದಿನವೂ 2 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವುದು ದಾಖಲೆ. ಹಿಂದಿಯಲ್ಲೇ 50 ಕೋಟಿ ಕಲೆಕ್ಷನ್ ದಾಟುವ ಸಾಧ್ಯತೆ ಇದೆ.

    ಕನ್ನಡ ಮತ್ತು ಹಿಂದಿ ಬಿಟ್ಟರೆ ಅತಿ ಹೆಚ್ಚು ಕಲೆಕ್ಷನ್ ಆಗಿರುವುದು ತೆಲುಗಿನಲ್ಲಿ. ತೆಲುಗಿನಲ್ಲಿ 25 ಕೋಟಿ ದಾಟಿದೆ ಕಾಂತಾರ ಕಲೆಕ್ಷನ್.

    ತಮಿಳು ಹಾಗೂ ಮಲಯಾಳಂ ಬಾಕ್ಸಾಫೀಸಿನಲ್ಲೂ ಇತಿಹಾಸ ಬರೆಯುತ್ತಿದೆ. ಆದರೆ ಪಕ್ಕಾ ಲೆಕ್ಕ ಸಿಕ್ಕಿಲ್ಲ.

    ಅಮೆರಿಕದಲ್ಲಿ 1 ಮಿಲಿಯನ್ ಡಾಲರ್ ಕ್ಲಬ್ ಸೇರಿದೆ. ಕೆಜಿಎಫ್ ಬಿಟ್ಟರೆ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಕಾಂತಾರ. ಸಿಂಗಪುರ, ಮಲೇಷ್ಯಾ, ಇಂಡೋನೇಷ್ಯಾದಲ್ಲಿ ಪ್ರೇಕ್ಷಕರ ಒತ್ತಾಯದ ಮೇರೆಗೆ ತಮಿಳು ವರ್ಷನ್ ಇವತ್ತು ರಿಲೀಸ್ ಆಗುತ್ತಿದೆ.

  • 2022ರ ಸೂಪರ್ ಹಿಟ್ ಸಂಸ್ಥೆ ಯಾವುದು ಗೊತ್ತಾ?

    2022ರ ಸೂಪರ್ ಹಿಟ್ ಸಂಸ್ಥೆ ಯಾವುದು ಗೊತ್ತಾ?

    2022. ಇಡೀ ವರ್ಷ ಕನ್ನಡ ಚಿತ್ರರಂಗಕ್ಕೆ ಶುಭ ಸುದ್ದಿ. ಒಂದರ ಹಿಂದೊಂದು ಹಿಟ್ ಚಿತ್ರಗಳು ಬರುತ್ತಿವೆ. ಈಗ ಗಂಧಧ ಗುಡಿಯೂ ಹಿಟ್ ಸಿನಿಮಾ ಲಿಸ್ಟಿಗೆ ಸೇರಿದೆ. ಅಂದಹಾಗೆ ಈ ವರ್ಷ ಅತೀ ಹೆಚ್ಚು ಮೆಗಾ ಹಿಟ್ ಕೊಟ್ಟ ಸಂಸ್ಥೆ ಹೊಂಬಾಳೆ. ಅದರಲ್ಲಿ ಅನುಮಾನವಿಲ್ಲ. ಕೆಜಿಎಫ್ ಚಾಪ್ಟರ್ 2 ಹಾಗೂ ಕಾಂತಾರ ಈ ವರ್ಷದ ಬ್ಲಾಕ್ ಬಸ್ಟರ್ಸ್. ಡಿವೈನ್ ಹಿಟ್ ಸಿನಿಮಾಗಳು.

    2021ರಲ್ಲಿ ಕೂಡಾ ಯುವರತ್ನ, ಬಡವ ರಾಸ್ಕಲ್, ಗರುಡ ಗಮನ ವೃಷಭ ವಾಹನ, ತೆಲುಗಿನ ವಕೀಲ್ ಸಾಬ್ ಚಿತ್ರಗಳನ್ನು ವಿತರಣೆ ಮಾಡಿತ್ತು. ಎಲ್ಲವೂ ಸೂಪರ್ ಹಿಟ್.

    2022ರಲ್ಲಿ ಕೆಜಿಎಫ್ 2 ಚಿತ್ರವನ್ನು ನಿರ್ಮಿಸಿದ್ದು ಹೊಂಬಾಳೆಯೇ ಆದರೂ ಕರ್ನಾಟಕದಲ್ಲಿ ಅದನ್ನು ವಿತರಣೆ ಮಾಡಿದ್ದು ಕೆಆರ್ಜಿ ಸ್ಟುಡಿಯೋಸ್. ಕಾರ್ತಿಕ್ ಗೌಡ ಅವರ ಸಂಸ್ಥೆ. ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ಟೇಲ್ 2, ಕೆಜಿಎಫ್ ಚಾಪ್ಟರ್ 2, ರಕ್ಷಿತ್ ಬ್ಯಾನರ್ನ ಸಕುಟುಂಬ ಸಮೇತ, 777 ಚಾರ್ಲಿ, ಕಾಂತಾರ ಮತ್ತೀಗ ಪುನೀತ್ ರಾಜಕುಮಾರ್ ಅವರ ಗಂಧದ ಗುಡಿ ಚಿತ್ರಗಳನ್ನು ವಿತರಣೆ ಮಾಡಿದ್ದು ಕೂಡಾ ಕೆಆರ್ಜಿ ಸ್ಟುಡಿಯೋಸ್.

    ಇವುಗಳಲ್ಲಿ ಗಂಧದ ಗುಡಿ ಇದೀಗ ತಾನೇ ರಿಲೀಸ್ ಆಗಿದೆ. ಕೆಜಿಎಫ್ ಚಾಪ್ಟರ್ 2 ಬಾಕ್ಸಾಫೀಸಿನಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ. ಕಾಂತಾರ 200 ಕೋಟಿ ಕ್ಲಬ್ ಸೇರಿದೆ. 777 ಚಾರ್ಲಿ ಕೂಡಾ 100 ಕೋಟಿಗೂ ಹೆಚ್ಚು ಗಳಿಸಿದ ಸಿನಿಮಾ. ಒಟ್ಟಿನಲ್ಲಿ ಈ ವರ್ಷವೂ ಕೆಆರ್ಜಿ ಸ್ಟುಡಿಯೋಸ್ ಸೂಪರ್ ಸಕ್ಸಸ್.

  • 2ನೇ ವಾರಕ್ಕೆ ಕಾಂತಾರ. 3ನೇ ವಾರಕ್ಕೆ ಗುರು ಶಿಷ್ಯರು

    2ನೇ ವಾರಕ್ಕೆ ಕಾಂತಾರ. 3ನೇ ವಾರಕ್ಕೆ ಗುರು ಶಿಷ್ಯರು

    ಕನ್ನಡ ಚಿತ್ರರಂಗದಲ್ಲೀಗ ಸಂಭ್ರಮ. ದಸರೆಗೂ ಮುಂಚೆ ಬಂದ ಗುರು ಶಿಷ್ಯರು ಸೂಪರ್ ಹಿಟ್. ಶರಣ್-ನಿಶ್ವಿಕಾ ಜೋಡಿಯ ಖೋಖೋ ಆಟದ ಹಿನ್ನೆಲೆಯಲ್ಲಿ ಮೂಡಿ ಬಂದ ಸಿನಿಮಾ ಗುರು ಶಿಷ್ಯರು. ಜಡೇಶ್ ಕುಮಾರ್ ಹಂಪಿ ಭರವಸೆಯ ನಿರ್ದೇಶಕ ಅನ್ನೋದನ್ನ ಸಾಬೀತು ಮಾಡಿದರು. ಕಾಮಿಡಿ ಟ್ರ್ಯಾಕ್ ಜೊತೆ ಜೊತೆಗೇ ಸಾಗಿದ ಖೋಖೋ ಸಿನಿಮಾ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿತು. ಸಿನಿಮಾ ಈಗಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ವಾರ ಭರ್ಜರಿ 3ನೇ ವಾರಕ್ಕೆ ಹೆಜ್ಜೆಯಿಟ್ಟಿದ್ದಾರೆ ಗುರು ಶಿಷ್ಯರು.

    ಮತ್ತೊಂದೆಡೆ ಕನ್ನಡ ಚಿತ್ರರಂಗದಲ್ಲೇ ದಾಖಲೆ ಬರೆಯುತ್ತಿರುವ ಕಾಂತಾರ. 2ನೇ ವಾರಕ್ಕೆ ಕಾಲಿಟ್ಟಿದೆ. ಕಿರಿಕ್ ಪಾರ್ಟಿ ಸಿನಿಮಾ ಇಡೀ ಜರ್ನಿಯಲ್ಲಿ ಗಳಿಸಿದ್ದ ಹಣವನ್ನೆಲ್ಲ ಕಾಂತಾರಾ ಮೂರು ದಿನಗಳಲ್ಲೇ ಗಳಿಸಿದೆ. ಈಗಲೂ ಹೌಸ್ ಹೌಸ್ ಫುಲ್. ರಿಷಬ್ ಶೆಟ್ಟಿಗೆ ಹೋದಲ್ಲಿ ಬಂದಲ್ಲಿ ದೈವ ನಮಸ್ಕಾರ ಸಿಗುತ್ತಿದೆ. ಅದು ಅವರಿಗಲ್ಲ, ಅವರೊಳಗಿನ ದೈವಕ್ಕೆ. ಸಪ್ತಮಿ ಗೌಡ ರೋಮಾಂಚನ ಹುಟ್ಟಿಸಿದ್ದಾರೆ. ಹೊಂಬಾಳೆ ಈಗ ಸಿನಿಮಾವನ್ನು ಬೇರೆ ಭಾಷೆಯಲ್ಲೂ ತರೋಕೆ ಮುಂದಾಗಿದ್ದು ಅಕ್ಟೋಬರ್ 9ರಂದು ಹಿಂದಿಯ ಟ್ರೇಲರ್ ರಿಲೀಸ್ ಆಗಲಿದೆ. ಶೀಘ್ರದಲ್ಲೆ ಇತರೆ ಭಾಷೆಗಳಿಗೂ ಡಬ್ ಆಗಲಿದೆ.

  • 300 ಕೋಟಿ ಕ್ಲಬ್ ಸೇರಿದ ಕಾಂತಾರ : ಫೈನಾನ್ಸ್ ಮಿನಿಸ್ಟರ್ ನೋಡಿದ ಸಿನಿಮಾ

    kantara image

    ಡಿವೈನ್ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ದೈವೀಕ ಯಶಸ್ಸನ್ನೇ ಗಳಿಸಿದೆ. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಶ್ರೀಶ್ರೀಶ್ರೀ ರವಿಶಂಕರ್`ರಂತಹವರೂ ಸಿನಿಮಾ ನೋಡಿದ್ದಾರೆ. ಸಿನಿಮಾ ಮಂದಿಯನ್ನು ಹೊರತುಪಡಿಸಿ ಹಲವು ರಾಜಕಾರಣಿಗಳು, ಧರ್ಮಗುರುಗಳು ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಆ ಲಿಸ್ಟಿಗೀಗ ಹೊಸ ಸೇರ್ಪಡೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ತಮಿಳುನಾಡಿನವಾದರೂ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆ ಸದಸ್ಯರು. ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮಕ್ಕಾಗಿ ಬೆಂಗಳೂರಿನಲ್ಲಿರುವ ನಿರ್ಮಲಾ ಸೀತಾರಾಮನ್ ಬೆಂಗಳೂರಿನ ಗರುಡಾಮಾಲ್‍ನಲ್ಲಿ ಕಾಂತಾರ ನೋಡಿದ್ದಾರೆ.

    ಅಷ್ಟೇ ಅಲ್ಲ, ಸಿನಿಮಾ ನೋಡಿ ಖುಷಿಯಾಗಿ ರಿಷಬ್ ಶೆಟ್ಟಿಯವರ ಜೊತೆ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ.

    ಈ ಸಂಭ್ರಮದ ನಡುವೆಯೇ ರಿಷಬ್ ಶೆಟ್ಟಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಆಶೀರ್ವಾದ ಪಡೆದಿದ್ದಾರೆ. ವೀರೇಂದ್ರ ಹೆಗ್ಗಡೆಯವರು ಸಿನಿಮಾ ನೋಡಿದ್ದು ದೇವರೇ ನೋಡಿದಷ್ಟು ಖುಷಿಯಾಯ್ತು ಎಂದಿದ್ದಾರೆ.

    ಇತ್ತ ಬಾಕ್ಸಾಫೀಸಿನಲ್ಲಿ ಕಾಂತಾರ ದಾಖಲೆಗಳನ್ನೆಲ್ಲ ಪುಡಿಗಟ್ಟಿ ಮುನ್ನುಗ್ಗುತ್ತಿದೆ. 300 ಕೋಟಿ ಕ್ಲಬ್ ಸೇರಿದೆ. ಮೂಲಗಳ ಪ್ರಕಾರ ಕನ್ನಡದಲ್ಲಿ ಕಲೆಕ್ಷನ್ 160 ಕೋಟಿ ದಾಟಿದ್ದು, ಕೆಜಿಎಫ್ ಚಾಪ್ಟರ್ 2 ಕನ್ನಡದಲ್ಲಿ ಸೃಷ್ಟಿಸಿದ್ದ ದಾಖಲೆಗಳನ್ನೆಲ್ಲ ಮುರಿಯುವ ಹಾದಿಯಲಿಲದೆ. ತೆಲುಗಿನಲ್ಲು 50 ಕೋಟಿ ಕಲೆಕ್ಷನ್ ದಾಟಿದ್ದು ಇದೂ ಕೂಡಾ ದಾಖಲೆಯೇ. ಹಿಂದಿಯಲ್ಲಿ ಕೂಡಾ ಕೆಜಿಎಫ್ ಚಾಪ್ಟರ್ 1 ದಾಖಲೆಯನ್ನು ಮುರಿದಿರುವ ಕಾಂತಾರ ಅಲ್ಲಿಯೂ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ತಮಿಳು ಮತ್ತು ಮಲಯಾಳಂ ಬಾಕ್ಸಾಫೀಸ್ ದಾಖಲೆಗಳು ಸಿಗುತ್ತಿಲ್ಲವಾದರೂ ಉತ್ತಮ ಕಲೆಕ್ಷನ್ ಮಾಡುತ್ತಿರುವುದಂತೂ ನಿಜ.

  • 31 ದಿನ 305 ಕೋಟಿ : ಕಾಂತಾರ ರೆಕಾರ್ಡ್

    31 ದಿನ 305 ಕೋಟಿ : ಕಾಂತಾರ ರೆಕಾರ್ಡ್

    ಸತತ 6ನೇ ವಾರವೂ ಕಾಂತಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಷ್ಟೊಂದು ದೊಡ್ಡ ಮಟ್ಟದ ಕ್ರೇಜ್ ಹಿಂದೆಂದು ಸೃಷ್ಟಿಯಾಗಿದ್ದಿಲ್ಲ. ಈಗ 300 ಕೋಟಿಯ ಗಡಿಯನ್ನೂ ದಾಟಿರುವ ಕಾಂತಾರ 31ನೇ ದಿನಕ್ಕೆ 305 ಕೋಟಿ ಬ್ಯುಸಿನೆಸ್ ಮಾಡಿದೆ. ಸೆಪ್ಟೆಂಬರ್ 30ರಂದು ರಿಲೀಸ್ ಆದ ಚಿತ್ರಕ್ಕೆ ದಸರಾ ಹಬ್ಬದ ಓಪನಿಂಗ್ ಸಿಕ್ಕಿತ್ತು. ಆಯುಧಪೂಜೆ, ವಿಜಯದಶಮಿ, ಗಾಂಧಿ ಜಯಂತಿ, ದೀಪಾವಳಿ ಸೇರಿದಂತೆ ಸಾಲು ಸಾಲು ರಜೆಗಳಲ್ಲಿ ಪ್ರೇಕ್ಷಕರು ಚಿತ್ರ ನೋಡಲು ಮುಗಿಬಿದ್ದರು. ಈಗ ನೋಡಿದರೆ 300 ಕೋಟಿಯನ್ನೂ ದಾಟಿ ದಾಖಲೆ ಬರೆದಿದೆ.

    ಕೆಜಿಎಫ್ ಚಾಪ್ಟರ್ 2 ನಂತರ ಕಾಂತಾರ ನಂ.2 ಸಿನಿಮಾ ಎನ್ನಿಸಿಕೊಂಡಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಸಿನಿಮಾದ ಪಂಜುರ್ಲಿ ದೈವ ಹಾಗೂ ಗುಳಿಗ ಈಗ ಮನೆ ಮನೆ ಮಾತು. ಶಿವ-ಲೀಲಾ ರೊಮ್ಯಾನ್ಸ್‍ಗೆ ಕಚಗುಳಿಯಿಟ್ಟುಕೊಂಡವರಷ್ಟೋ.. ಚಿತ್ರದ ಒಂದೊಂದು ಪಾತ್ರ ಸನ್ನಿವೇಶವನ್ನೂ ಜನ ಎಂಜಾಯ್ ಮಾಡುತ್ತಿದ್ದಾರೆ.

    ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಶ್ರೀಶ್ರೀಶ್ರೀ ರವಿಶಂಕರ್, ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಸೂಪರ್ ಸ್ಟಾರ್ ರಜನಿಕಾಂತ್, ಕ್ರಿಕೆಟ್ ಆಟಗಾರ ಎಬಿ ಡೆವಿಲಿಯರ್ಸ್, ಅನಿಲ್ ಕುಂಬ್ಳೆ.. ಹೀಗೆ ಸಿನಿಮಾ ಹೊರತಾದ ದಿಗ್ಗಜರೂ ನೋಡಿ ಮೆಚ್ಚಿದ ಸಿನಿಮಾ ಕಾಂತಾರ.

    ಕನ್ನಡದಲ್ಲಿಯೇ 160 ಕೋಟಿ ಕಲೆಕ್ಷನ್ ಮಾಡಿದ್ದು, ತೆಲುಗು ಹಾಗೂ ಹಿಂದಿಯಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ತಮಿಳು, ಮಲಯಾಳಂನಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಹೊಂಬಾಳೆ ಮತ್ತೊಂದು ದಾಖಲೆ ಸೃಷ್ಟಿಸಿದೆ.

  • ೩ನೇ ವಾರಕ್ಕೆ ಕಾಂತಾರ.. ೧೦೦ ಕೋಟಿ ಸಿಂಗಾರ : ದಾಖಲೆಗಳ ಡಂಗುರ

    ೩ನೇ ವಾರಕ್ಕೆ ಕಾಂತಾರ.. ೧೦೦ ಕೋಟಿ ಸಿಂಗಾರ : ದಾಖಲೆಗಳ ಡಂಗುರ

    ಕಾಂತಾರ ಒಂದು ದಂತಕಥೆ. ಈ ಚಿತ್ರ ಕನ್ನಡದಲ್ಲಿ ದಂತಕಥೆಯೇ ಆಗುತ್ತಿದೆ. ರಿಷಬ್ ಶೆಟ್ಟಿ ನಟರಾಗಿ, ನಿರ್ದೇಶಕರಾಗಿ ದಂತಕಥೆಯನ್ನೇ ಸೃಷ್ಟಿಸಿಬಿಟ್ಟಿದ್ದಾರೆ. ಹೊಂಬಾಳೆ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್. ಆದರೆ ಇದು ಸ್ವಲ್ಪ ವಿಭಿನ್ನ. ದೈವೀಕ ಹಿಟ್ ಆದ ಸಂಭ್ರಮ. ಕರಾವಳಿಯ ನೆಲದ ಸಂಸ್ಕೃತಿಯ ನೆಲೆಯಲ್ಲಿ ತೆರೆದುಕೊಳ್ಳುವ ಕಾಂತಾರ ಈಗ ಕರಾವಳಿಯ ಮಣ್ಣಿನ ಕಥೆಯಷ್ಟೇ ಅಲ್ಲ. ಕರ್ನಾಟಕದ ಎಲ್ಲ ಕಡೆ ಸಿಕ್ಕ ಓಪನಿಂಗ್, ಮೆಚ್ಚುಗೆಯ ಮಹಾಪೂರ ಚಿತ್ರವನ್ನೀಗ ಗಡಿಯಾಚೆಗೂ ವಿಸ್ತರಿಸಿದೆ.

    ಕೆಜಿಎಫ್ ಚಾಪ್ಟರ್ ೧ ಹಾಗೂ ಚಾಪ್ಟರ್ ೨ ನಂತರ ಕಾಂತಾರ ಕೂಡಾ ೧೦೦ ಕೋಟಿ ದಾಖಲೆ ಬರೆದಿದೆ. ಅಂದಹಾಗೆ ಕಾಂತಾರ ಈಗ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿದೆಯೇ ಹೊರತು, ರಿಲೀಸ್ ಆದಾಗ ಆಗಿರಲಿಲ್ಲ. ರಿಲೀಸ್ ಆಗಿದ್ದು ಕನ್ನಡದಲ್ಲಿ ಮಾತ್ರ. ಭರಪೂರ ನಿರೀಕ್ಷೆಗಳಿಲ್ಲದೆಯೇ ಕನ್ನಡದಲ್ಲಿಯೇ ರಿಲೀಸ್ ಆಗಿ ೧೦೦ ಕೋಟಿ ದಾಟಿದ ಸಿನಿಮಾ ಕಾಂತಾರ ಎನ್ನಬಹುದು.

    ಇವತ್ತು ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆಗುತ್ತಿದೆ. ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಚಿತ್ರದ ಹೊಣೆ ಹೊತ್ತಿದ್ದು ಇನ್ನೂ ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ. ಹಿಂದಿಯಲ್ಲಿ ನಾಳೆ ರಿಲೀಸ್ ಆಗುತ್ತಿದೆ. ಒಟ್ಟಿನಲ್ಲಿ ಕಾಂತಾರ ದಾಖಲೆಗಳ ಸುರಿಮಳೆಯನ್ನೇ ಸುರಿಸುತ್ತಿದೆ.

  • 400 ಕೋಟಿಯ ಬಾರ್ಡರ್ ದಾಟಿದ ಕಾಂತಾರ

    400 ಕೋಟಿಯ ಬಾರ್ಡರ್ ದಾಟಿದ ಕಾಂತಾರ

    ಸೆ.30ರಂದು ರಿಲೀಸ್ ಆದ ಕಾಂತಾರದ ಆರ್ಭಟ..ದೈವೀಕ ಯಾತ್ರೆ.. 400 ಕೋಟಿಯ ಗಡಿಯನ್ನೂ ದಾಟಿದೆ. ರಿಷಬ್ ಶೆಟ್ಟಿ, ಹೊಂಬಾಳೆಯ ಜೋಡಿ ಮತ್ತೊಂದು ಹೊಸ ದಾಖಲೆ ಬರೆದಿದೆ. 50 ದಿನಗಳನ್ನು 400 ಕೋಟಿ ಕ್ಲಬ್ ಸೇರಿ ಹೊಸ ದಾಖಲೆಯನ್ನು ಬರೆದಿದೆ. ಅಬ್ಬರದ ಪಬ್ಲಿಸಿಟಿ ಬದಲು ಸಿನಿಮಾ ನೋಡಿದವರ ಮೌತ್ ಪಬ್ಲಿಸಿಟಿಯಿಂದಲೇ ಗೆದ್ದ ಕಾಂತಾರದ 400 ಕೋಟಿಯ ದಾಖಲೆ ವಿಶೇಷಗಳಲ್ಲಿ ವಿಶೇಷ.

    ಕರ್ನಾಟಕ ಬಿಟ್ಟರೆ, ಹಿಂದಿ ಬೆಲ್ಟ್ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಕಾಂತಾರ ಹಿಂದಿ ವರ್ಷನ್ ಸುಮಾರು 96 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇನ್ನೂ ಹೌಸ್ ಫುಲ್ ರನ್ನಿಂಗ್ ಕಾಣುತ್ತಿದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ 60 ಕೋಟಿ ರೂ. ತಮಿಳುನಾಡಿನಲ್ಲಿ 12.70 ಕೋಟಿ ರೂ. ಕೇರಳದಲ್ಲಿ 19.20 ಕೋಟಿ ರೂ. ಹಾಗೇ ವಿದೇಶದಲ್ಲಿ ಸುಮಾರು 44.50 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಬಾಕ್ಸಾಫೀಸ್ ಮೂಲಗಳು ಹೇಳುತ್ತಿವೆ. ಕನ್ನಡದಲ್ಲಿ ಕೆಜಿಎಫ್ ಚಾಪ್ಟರ್ 2ನ 186 ಕೋಟಿಯ ಗಡಿ ದಾಟಿದ್ದು, 200 ಕೋಟಿಯನ್ನೂ ಮೀರಿ ಮುನ್ನಡೆಯುತ್ತಿದೆ.

    ಮೇನ್ ಥಿಯೇಟರ್ ನರ್ತಕಿ ಒಂದನ್ನು ಬಿಟ್ಟರೆ ದೇಶದ ಎಲ್ಲ ಮೆಟ್ರೋ ಸಿಟಿಗಳಲ್ಲಿ 50 ದಿನ ಪೂರೈಸಿದ ಸಿನಿಮಾ ಕಾಂತಾರ. ವಿದೇಶದಲ್ಲಿ ಕೂಡಾ 50 ದಿನ ಪೂರೈಸಿದ 2ನೇ ಕನ್ನಡ ಸಿನಿಮಾ ಕಾಂತಾರ. ಬೆಂಗಳೂರಿನ ಊರ್ವಶಿ, ಕಾವೇರಿ ಥಿಯೇಟರ್ಗಳಲ್ಲಿ ಕಳೆದ 20 ವರ್ಷಗಳಲ್ಲಿ 50 ದಿನ ಪ್ರದರ್ಶನ ಕಂಡ ಮೊದಲ ಸಿನಿಮಾ ಕಾಂತಾರ.

    ಬಾಕ್ಸಾಫೀಸ್ನಲ್ಲಿ 200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ನಂ.1 ಕನ್ನಡ ಸಿನಿಮಾ, ಕೆಜಿಎಫ್ ಚಾಪ್ಟರ್ 2 ಈಗ ನಂ.2 ಸ್ಥಾನ ಗಳಿಸಿದೆ. ಕನ್ನಡದಲ್ಲಿ ಅತೀ ಹೆಚ್ಚು ಜನ ನೋಡಿದ ಸಿನಿಮಾ ಕಾಂತಾರ. 1 ಕೋಟಿಗೂ ಹೆಚ್ಚು ಜನ ನೋಡಿರುವುದು ಕೂಡಾ ದಾಖಲೆಯೇ.  

    ಕಾಂತಾರದ ನಂತರ ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ ಬಿರುದು ಪಡೆದರೆ, ಹೊಸ ಕ್ರಷ್ ಆಗಿ ಹೊರಹೊಮ್ಮಿರುವುದು ಸಪ್ತಮಿ ಗೌಡ. ಚಿತ್ರದೊಂದಿಗೆ ಕರಾವಳಿಯ ಸಂಸ್ಕೃತಿ ದೈವಗಳು, ಭೂತಕೋಲ ಇಡೀ ಜಗತ್ತಿಗೆ ಪರಿಚಿತವಾಗಿದೆ

  • 50 ಕೋಟಿ ದಾಟಿದ ಕಾಂತಾರ

    50 ಕೋಟಿ ದಾಟಿದ ಕಾಂತಾರ

    ಸಾವಿರ ದೈವದ ಮನ ಸಂಪ್ರೀತ ಬೇಡುತ ನಿಂದೆವು ಆರಾಧಿಸುತ...

    ಸ್ಯಾಂಡಲ್ವುಡ್ನಲ್ಲಿ ಕೋಟಿಗಳ ಮಿಂಚು ಹರಿಯುತ್ತಿದೆ. ಇದು ಪಾನ್ ಇಂಡಿಯಾ ಸಿನಿಮಾ ಅಲ್ಲ. ಕೇವಲ ಕನ್ನಡದಲ್ಲಿಯೇ ಬಿಡುಗಡೆಗೊಂಡು ದಾಖಲೆ ಬರೆಯುತ್ತಿರುವ ಸಿನಿಮಾ. ನಮ್ಮ ನೆಲದ ಒಂದು ಸಂಸ್ಕತಿಯ ಅದ್ಭುತ ಕಥೆಯ ಡಿವೈನ್ ಬ್ಲ್ಯಾಕ್ ಬಾಸ್ಟರ್ ಹಿಟ್. ಸಿನಿಮಾ ರಿಲೀಸ್ ಆಗಿ ಆರೇ ದಿನದಲ್ಲಿ 50 ಕೋಟಿ ಕ್ಲಬ್ ದಾಟಿ ಮುನ್ನುಗ್ಗುತ್ತಿದೆ.

    ರಾಜಕುಮಾರ, ಯುವರತ್ನ, ಕೆಜಿಎಫ್ ಸಿನಿಮಾ  ನಿರ್ಮಾಣ ಮಾಡಿದ್ದ ಹೊಂಬಾಳೆ ಸಂಸ್ಥೆಯ ಮಾಸ್ಟರ್ ಪೀಸ್ ಎನಿಸಿಕೊಳ್ಳುತ್ತಿದೆ ಕಾಂತಾರ. ಸಿನಿಮಾ ಸಕ್ಸಸ್ ಯಾತ್ರೆ ನಡೆಸುತ್ತಿರುವ ಕಾಂತಾರ ಮ್ಯಾಜಿಕ್ ಮಾಡಿದೆ. ಬುಕ್ ಮೈ ಶೋನಲ್ಲೇ 22 ಸಾವಿರಕ್ಕೂ ಹೆಚ್ಚು ಜನ ಚಿತ್ರ ವಿಮರ್ಶೆ ಮಾಡಿದ್ದು ಶೇ.99 ಅಂಕ ಕೊಟ್ಟಿದ್ದಾರೆ. ವೀರೇಶ್ ಚಿತ್ರಮಂದಿರದಲ್ಲಿ ಮೊದಲ ವಾರದ ಎಲ್ಲ ಶೋಗಳೂ ಹೌಸ್ ಫುಲ್ ಎನ್ನುವುದು ಒಂದು ದಾಖಲೆ.

    ಕೆಜಿಎಫ್ ಕನ್ನಡದಲ್ಲಿ ಹೇಗೆ ಕಲೆಕ್ಷನ್ ಮಾಡಿತ್ತೋ ಅದೇ ಹಾದಿಯಲ್ಲಿ ಮುನ್ನುಗ್ಗುತ್ತಿರೋ ಕಾಂತಾರ 10 ದಿನದಲ್ಲಿ 100 ಕೋಟಿ ಕ್ಲಬ್ ಸೇರೋ ಚಾನ್ಸ್ ಹೆಚ್ಚಿದೆ.

    ಕಾಂತಾರ ರಿಷಬ್ ಶೆಟ್ಟಿ ಸಿನಿ ಕೆರಿಯರ್ನಲ್ಲೇ ಮೈಲುಗಲ್ಲಾಗಲಿದೆ. ಸ್ಯಾಂಡಲ್‌ವುಡ್ ಬೆಳ್ಳಿತೆರೆ ಮೇಲೆ ದೈವವೊಂದು ಆರ್ಭಟಿಸುತ್ತಾ ಕುಣಿಯುತ್ತಿದೆ. ಆಯುಧಪೂಜೆ, ವಿಜಯದಶಮಿ ನಡುವೆಯೂ ಜನಜಂಗುಳಿ ಥಿಯೇಟರ್ ಮುಂದಿದೆ. ದಸರಾ ಹಬ್ಬದ ಸಾಲು ಸಾಲು ರಜೆಯನ್ನ ಕಾಂತಾರದ ಡಿವೈನ್ ಲೋಕಕ್ಕೆ ಹೋಗಿ ಪ್ರೇಕ್ಷಕರು ಮಜಾ ಮಾಡುತ್ತಿದ್ದಾರೆ. ವಿಜಯ್ ಕಿರಗಂದೂರುಗೆ ಬಂಪರ್ ಜಾಕ್ ಪಾಟ್. ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಎಲ್ಲರಿಗೂ ಮೆಚ್ಚುಗೆಯ ಮಹಾಪೂರವೇ ಸಿಕ್ಕಿದೆ.

  • 50ನೇ ದಿನದತ್ತ ಕಾಂತಾರ : ಹೊಸ ಇತಿಹಾಸ

    50ನೇ ದಿನದತ್ತ ಕಾಂತಾರ : ಹೊಸ ಇತಿಹಾಸ

    ಕನ್ನಡ ಚಿತ್ರರಂಗದಲ್ಲೇ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಲೇ ಇರುವ ಕಾಂತಾರ ಹಲವು ದಾಖಲೆಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಕಾಂತಾರ ಈಗ ಕನ್ನಡದಲ್ಲೇ ಅತೀ ಹೆಚ್ಚು ಬಾಕ್ಸಾಫೀಸ್ ಗಳಿಕೆ ಮಾಡಿದ ಚಿತ್ರ ಹಾಗೂ ಥಿಯೇಟರಿನಲ್ಲಿ ಅತೀ ಹೆಚ್ಚು ಜನ ನೋಡಿದ ಚಿತ್ರವೂ ಹೌದು. ಈಗ 50ನೇ ದಿನದತ್ತ ಕಾಲಿಟ್ಟಿದೆ. ಈ ಶನಿವಾರಕ್ಕೆ 50ನೇ ದಿನದ ಗುರಿ ಮುಟ್ಟಲಿದೆ ಕಾಂತಾರ.

    ಇದು ವಿಶೇಷವೂ ಹೌದು. ಏಕೆಂದರೆ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ ಅರ್ಧಶತಕ ಪೂರೈಸುತ್ತಿರುವುದು ವಿಶೇಷ ದಾಖಲೆ. 300ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ಕಾಂತಾರ 50 ದಿನ ಪೂರೈಸುತ್ತಿದೆ. ಬೆಂಗಳೂರಿನಲ್ಲೇ ಮಲ್ಟಿಪ್ಲೆಕ್ಸ್ ಬಿಟ್ಟು 30ಕ್ಕೂ ಸೆಂಟರ್‍ಗಳಲ್ಲಿ ಕಾಂತಾರ 50 ದಿನ ಪೂರೈಸುತ್ತಿರುವುದು ವಿಶೇಷ.

    ಆದರೆ ಮೇನ್ ಥಿಯೇಟರ್ ನರ್ತಕಿಯಲ್ಲಿ ಮಾತ್ರ ಹಾಗಾಗುತ್ತಿಲ್ಲ. ನರ್ತಕಿ ಕಾಂತಾರ ಚಿತ್ರದ ಮೇನ್ ಥಿಯೇಟರ್. ಆದರೆ ನರ್ತಕಿಯಲ್ಲಿ 48ನೇ ದಿನಕ್ಕೆ ಕಾಂತಾರ ನಿರ್ಗಮಿಸಲಿದೆ. ಕಾಂತಾರ ಬಿಡುಗಡೆಯಾದ 49ನೇ ದಿನ ನರ್ತಕಿಯಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ರಿಲೀಸ್ ಆಗಲಿದೆ. ಹೀಗಾಗಿ ಮೇನ್ ಥಿಯೇಟರಿನಲ್ಲಿಯೇ ದಾಖಲೆ ಬರೆಯಲಾಗುತ್ತಿಲ್ಲ ಕಾಂತಾರ.

    ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ಕಾಂತಾರ ಈಗಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಥಿಯೇಟರಿನಲ್ಲಿ ಈಗಲೂ ಜನ ಬರುತ್ತಿದ್ದಾರೆ. ಕೆಜಿಎಫ್ ಮೂಲಕ ಸುನಾಮಿ ಹಿಟ್ ಕಂಡಿದ್ದ ಹೊಂಬಾಳೆ, ಕಾಂತಾರ ಮೂಲಕ ಡಿವೈನ್ ಹಿಟ್ ಸಾಧಿಸಿದೆ.

  • IMDB TOP 10 : ಸತ್ಯಕಥೆ-ಕನ್ನಡದ್ದೇ ಹವಾ..!

    IMDB TOP 10 : ಸತ್ಯಕಥೆ-ಕನ್ನಡದ್ದೇ ಹವಾ..!

    2022 ಕನ್ನಡಕ್ಕೆ ಅದ್ಭುತ ಎನ್ನಿಸುವ ವರ್ಷ ಎನ್ನಬಹುದು. ಈ ವರ್ಷ ಕನ್ನಡದ 5 ಚಿತ್ರಗಳು  100 ಕೋಟಿ ಕ್ಲಬ್ ಸೇರಿದರೆ, ಎರಡು ಚಿತ್ರಗಳು ದೇಶದಾದ್ಯಂತ ಸಂಚಲನವನ್ನೇ ಸೃಷ್ಟಿಸಿದವು. ಈಗ   IMDB TOP 10  10ನಲ್ಲೂ ಕನ್ನಡದ್ದೇ ಹವಾ. ಐಎಂಡಿಬಿ ಪಟ್ಟಿಯಲ್ಲಿ ಸೆಲೆಕ್ಟ್ ಆಗಿರುವ 10 ಚಿತ್ರಗಳಲ್ಲಿ 3 ಕನ್ನಡದ್ದೇ. ಇನ್ನೊಂದು ತೆಲುಗು.

    ಐಎಂಡಿಬಿ ಟಾಪ್ 1 ರ್ಯಾಂಕಿಂಗ್‍ನಲ್ಲಿ ಆರ್.ಆರ್.ಆರ್. ಇದೆ. ಅದು ರಾಜಮೌಳಿ ಸೃಷ್ಟಿಸಿದ ದೃಶ್ಯ ವೈಭವ. ಪ್ರೇಕ್ಷಕರೇ ಕೊಟ್ಟ ರೇಟಿಂಗ್ ಪ್ರಕಾರ ಆರ್.ಆರ್.ಆರ್. ಅತೀ ಹೆಚ್ಚು ರೇಟಿಂಗ್ ಪಡೆದಿದ್ದರೆ, 2ನೇ ಸ್ಥಾನದಲ್ಲಿರೋದು ಹಿಂದಿಯ ಕಾಶ್ಮೀರ್ ಫೈಲ್ಸ್. ಕೇವಲ ವಿವಾದದಿಂದಷ್ಟೇ ಅಲ್ಲ, ಮುಚ್ಚಿಟ್ಟಿದ್ದ ಸತ್ಯವೊಂದನ್ನು ಅನಾವರಣಗೊಳಿಸಿದ ಖ್ಯತಿಯೂ ಇದ್ದ ಕಾಶ್ಮೀರ್ ಫೈಲ್ಸ್ ಉತ್ತಮ ಆಯ್ಕೆ ಎನ್ನಬಹುದು. 3ನೇ ಸ್ಥಾನದಲ್ಲಿ ಹೊಂಬಾಳೆಯವರ ಕೆಜಿಎಫ್ ಚಾಪ್ಟರ್ 2 ಇದೆ. ಈ ವರ್ಷದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ನಂ.1 ಆಗಿರುವ ಬಾಕ್ಸಾಫೀಸ್ ಕಿಂಗ್ ಎನಿಸಿಕೊಂಡ ಕೆಜಿಎಫ್, ಐಎಂಡಿಬಿ ರೇಟಿಂಗ್‍ನಲ್ಲಿ 3ನೇ ಸ್ಥಾನ ಪಡೆದಿದೆ.

    ತಮಿಳಿನಲ್ಲಿ ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಹಾಗೂ ಸೂರ್ಯ ನಟಿಸಿದ್ದ ವಿಕ್ರಂ 4ನೇ ಸ್ಥಾನ ಪಡೆದಿದೆ. 5ನೇ ಸ್ಥಾನದಲ್ಲಿರುವುದೇ ನಮ್ಮ ಕಾಂತಾರ. ರಿಷಬ್ ಶೆಟ್ಟಿ ಸೃಷ್ಟಿಯ ಅದ್ಭುತ ಲೋಕ ಪವಾಡಗಳನ್ನೇ ಸೃಷ್ಟಿಸಿದೆ.

    6ನೇ ಸ್ಥಾನದಲ್ಲಿ ರಾಕೆಟ್ರಿ : ದಿ ನಂಬಿ ಎಫೆಕ್ಟ್ ಅನ್ನೋ ತಮಿಳು ಚಿತ್ರವಿದೆ. ಇದು ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದ ವಿಜ್ಞಾನಿ ನಂಬಿಯಾರ್‍ರನ್ನು ಸಂಚು ಮಾಡಿ ದೇಶದ್ರೋಹದ ಆರೋಪ ಹೊರಿಸಿ ಹಿಂಸೆ ಕೊಟ್ಟಿದ್ದ ವಿಜ್ಞಾನಿಯ ಕಥೆ. ಮಾಧವನ್ ನಟಿಸಿದ್ದ ಚಿತ್ರ ಅದ್ಭುತ ಯಶಸ್ಸು ಕಂಡಿತ್ತು.

    ಸಂದೀಪ್ ಉನ್ನಿ ಕೃಷ್ಣನ್ ಬಯೋಪಿಕ್ ಆಗಿದ್ದ ತೆಲುಗಿನ ಮೇಜರ್ ಸಿನಿಮಾಗೆ 7ನೇ ಸ್ಥಾನ ಸಿಕ್ಕಿದ್ದರೆ, ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್ ನಟನೆಯ ಸೀತಾರಾಮನ್ ಎಂಬ ಕಾಲ್ಪನಿಕ ಪ್ರೇಮಕಥೆಗೆ 8ನೇ ಸ್ಥಾನ ಸಿಕ್ಕಿದೆ. ಮಣಿರತ್ನಂ, ಐಶ್ವರ್ಯಾ ರೈ, ವಿಕ್ರಂ, ಕಾರ್ತಿ..ಯಂತಹ ದಿಗ್ಗಜರೇ ಇದ್ದ ಪೊನ್ನಿಯನ್ ಸೆಲ್ವನ್ ಚಿತ್ರಕ್ಕೆ 9ನೇ ರ್ಯಾಂಕ್ ಸಿಕ್ಕಿದೆ. 10ನೇ ಸ್ಥಾನದಲ್ಲಿ ಮತ್ತೊಮ್ಮೆ ಕನ್ನಡದ ಕಹಳೆ ಮೊಳಗಿದ್ದು 777 ಚಾರ್ಲಿ ಚಿತ್ರಕ್ಕೆ 10ನೇ ಸ್ಥಾನ ಸಿಕ್ಕಿದೆ.

    ಅಂದಹಾಗೆ ಈ ಟಾಪ್ 10 ಚಿತ್ರಗಳಲ್ಲಿ 3 ಕನ್ನಡದ ಚಿತ್ರಗಳು. ಕೆಜಿಎಫ್ ಚಾಪ್ಟರ್ 2, ಕಾಂತಾರ ಮತ್ತು 777 ಚಾರ್ಲಿ.

    ತಮಿಳಿನ ಚಿತ್ರಗಳು 3. ವಿಕ್ರಂ, ಪೊನ್ನಿಯನ್ ಸೆಲ್ವನ್. ರಾಕೆಟ್ರಿ ನಂಬಿ ಎಫೆಕ್ಟ್.

    ತೆಲುಗಿನವು 3. ಆರ್.ಆರ್.ಆರ್., ಸೀತಾರಾಮನ್ ಹಾಗೂ ಮೇಜರ್.

    ಹಿಂದಿಯದ್ದು ಕೇವಲ 1. ಕಾಶ್ಮೀರ್ ಫೈಲ್ಸ್. ಅದೂ ಕೂಡಾ ಹಿಂದಿಯ ರೆಗ್ಯುಲರ್ ಫಾರ್ಮಾಟ್ ಬಿಟ್ಟು ರೂಪಿಸಿದ ಸಿನಿಮಾ. ಈ ಟಾಪ್ 10 ಚಿತ್ರಗಳಲ್ಲಿ ಬಹುತೇಕ ಸಿನಿಮಾಗಳು ಸತ್ಯಘಟನೆ ಆಧರಿತ ಚಿತ್ರಗಳು ಎಂಬುದು ಗಮನಾರ್ಹ.

    ಆರ್.ಆರ್.ಆರ್. ಕಥೆಗೆ ಮೂಲ ಸತ್ಯಕಥೆಯೇ ಆಗಿದ್ದರೂ, ಕಾಲ್ಪನಿಕ ವೈಭವದ ಕಥಾ ಹಂದರವೂ ಚಿತ್ರದಲ್ಲಿತ್ತು. ಕಾಶ್ಮೀರ್ ಫೈಲ್ಸ್.. ಕಲ್ಪನೆಯನ್ನೂ ಮಾಡಿಕೊಳ್ಳಲಾಗದ ಸತ್ಯ ಕಥೆಯನ್ನು ಇದ್ದದ್ದು ಇದ್ದಿದ್ದಂತೆ ತೋರಿಸಲಾಗಿತ್ತು. ಪೊನ್ನಿಯನ್ ಸೆಲ್ವನ್, ಸೀತಾರಾಮನ್, ಮೇಜರ್, ರಾಕೆಟ್ರಿ : ದಿ ನಂಬಿ ಎಫೆಕ್ಟ್ ಎಲ್ಲವೂ ಸತ್ಯ ಕಥೆ ಆಧರಿತ ಚಿತ್ರಗಳೇ.

    ಕೆಜಿಎಫ್, ಕಾಂತಾರ, 777 ಚಾರ್ಲಿ, ವಿಕ್ರಂ ಚಿತ್ರಗಳಷ್ಟೇ ಸಂಪೂರ್ಣ ಕಾಲ್ಪನಿಕ ಚಿತ್ರಗಳು. ಒಟ್ಟಿನಲ್ಲಿ ಜನ ಸಿನಿಮಾ ನೋಡುವ ಟ್ರೆಂಡ್ ಬದಲಾಗಿದೆ.

  • Kantara and KGF 2 win most at Film Critics’ Awards

    Kantara and KGF 2 win most at Film Critics’ Awards

    Rishab Shetty’s Kantara and Yash’s KGF Chapter 2, won four and three awards respectively at the 4th Chandanavana Film Critics Academy Awards on Sunday evening. Rishab Shetty who starred in directed Kantara, won the Best Actor award for the film while the film itself was adjudged the Best Film of 2022 by movie critics. Kanatara also won the Best Music award for Ajaneesh Loknath and Best Stunt/Action award for Vikram Mor.

    The gala event at Hotel Lalit Ashok was inaugurated by senior directors Rajendra Singh Babu, Nagatihalli Chandrashekar, actress Ramya and Ashwini Puneeth Rajkumar. The star-studded event witnessed the presence of Sandalwood’s who-is- who. Top producers, directors, technicians of the Kannada film industry were witness to the year’s first awards event. Alliance University, Turbo Steel, Anand Audio, A2 Music, Mysore Sandal Soap, Suraj Productions, Horse Fashions, GAcademy and Veeraloka Books were among the supporters of the Awards Night.

    KGF Chapter 2, starring Yash and directed by Prashant Neel won three awards; Best Cinematography for Bhuvan Gowda, Best Editing for Ujwal Kulkarni and Best VFX for Udaya Ravi Hegde. While these two films bagged the maximum number of awards, the other top awards had winners from other films. The Best Director award went to Kiranraj K for 777 Charlier while actor-director Darling Krishna won the Best Screenplay Award for Love Mocktail 2.

    The Best Lead Actress award was won by Sharmiela Mandre for Gaalipata 2 while Sharvari won the Best Child Artist award making it two for 777 Charlie. Veteran actress Sudharani bagged the Best Supporting Actress award for Thurthu Nirgamana while Suchendra Prasad won the Best Supporting Actor award for Wheelchair Romeo. In the music category, it was a mixed bag with five different films winning the five awards. The technical awards were swept by KGF Chapter 2.

    Seven new awards were introduced this year. Five of these were for debutants. Among these, Sridhar Shikaripura won the Best Writer (Debut) and Best Director  (Debut) Award for Dharani Mandala Madhyadolage. The Best Producer (Debut) award named after Puneeth Rajkumar went to Pawan Wadeyar for Dollu. The Best Debut Actor award named after Sanchari Vijay went to Pruthvi Shamanoor for Padavipoorva while the Best Debut Actress award named after the first Kannada film heroine Tripuramba went to Yasha Shivakumar for Mansoon Raaga.

    Going beyond films, the Chandanavana Academy constituted two new awards for online content creators. KS Parameshwara who runs the Kala Madhyama Youtube channel won the Best Youtube Creator of the Year award while Vikas (of Vicky Pedia fame) was adjudged the Best Social Media Entertainer of the Year. Presidents of the various film industry bodies including Karnataka Media Academy president K Sadashiva Shenoy, Karnataka Chalanachitra Academy president Ashok Cashyap, Ba Ma Harish and Kannada Film Producers Association president Umesh Banakar were present at the event.

    Lending support to the film journalists were other journalists’ bodies. Press Club of Bengaluru president Sridhar, Karnataka Photojournalists Association president Mohan graced the occasion and handed over awards to the winners. Over 50 film journalists and critics voted to select the 27 awards from around 235 Kannada films released this year. For the last four years, Chandanavana Film Critics Academy Awards has become the year’s first awards in Sandalwood.

    Winners List

    Best Film

     Kantara

    Best Director

     Kiranraj K (777 Charlie)

    Best Screenplay

     Darling Krishna (Love Mocktail 2)

    Best Dialogues

     Maasthi (Guru Sishyaru)

    Best Lead Actor

     Rishab Shetty (Kantara)

    Best Lead Actress

     Sharmiela Mandre (Gaalipata 2)

    Best Supporting Actor

     Suchendra Prasad (Wheelchair Romeo)

    Best Supporting Actress

     Sudharani (Thurthu Nirgamana)

    Best Child Artist

     Sharvari (777 Charlie)

    Best Music

     Ajaneesh Loknath (Kantara)

    Best BGM

     Anoop Seelin (Monsoon Raaga)

    Best Lyrics

     Shashank (Jagave Neenu Gelathiye - Love 360)

    Best Singer Male

      Mohan V - (Song: Junjappa – Film: Vedha)

    Best Singer Female

     Aishwarya Rangarajan, (Song: Meet Madana – FilmL Ek Love Ya)

    Best Cinematography

     Bhuvan Gowda (KGF 2)

    Best Editing

     Ujwal Kulkarni (KGF2)

    Best Art Direction

     Shiva Kumar - Vikrant Rona

    Best Choreography

     Mohan (Ek Love Ya - Meet Madona )

    Best Stunt/Action

     Vikram Mor (Kantara)

    Best VFX

     Udaya Ravi Hegde (Unified Media) – KGF Chapter 2

    Best Actor (Debut) - Sanchari Vijay Award

     Pruthvi Shamanoor (Padavipoorva)

    Best Actress (Debut)

     Yasha Shivakumar (Mansoon Raaga)

    Best Director (Debut) - Shankar Nag Award

     Sridhar Shikaripura - Dharani Mandala Madhyadolage

    Best Producer (Debut) - Puneeth Rajkumar Award

     Pawan Wadeyar (Dollu)

    Best Writer (Debut) – Chi Udayshankar Award

     Sridhar Shikaripura (Dharani Mandala Madhyadolage)

    Best YouTube Creator of the Year

     K S Parameshwara (Kala Madhyama)

    Best Social Media Entertainer of the Year

     Vikas (Vicky Pedia)

  • Kantara Movie Review, Chitraloka Rating 4/5

    Kantara Movie Review, Chitraloka Rating 4/5

    Film: Kantara

    Director: Rishab Shetty

    Cast: Rishab Shetty, Sapthami Gowda, Kishore Achyuth Kumar, Pramod Shetty

    Duration: 2 hours 30 minutes

    Certificate: U/A

    Rating: 4

    Kantara is an out-of-this-world experience for which Rishab Shetty and his team needs to be commended. At the end of this film, it is very hard to come out of the trance-like environment he has created. In the film, Rishab’s character, Shiva, is haunted by nightmares. For the audience watching the film, it will be Rishab’s performance in the climax that will repeatedly haunt them. Kantara reminds you of the films of Shankar Nag. In another time, this could well have been a film directed and performed by the late actor.

    Folk stories, with their blend of the supernatural, strange characters, unsolved mysteries and surprises have kept people spellbound for generations. How do you create a new folk story that combines all these elements? Kantara has the answer. And has it worked? It has succeeded beyond expectations.

    Combining the rituals and sports of the coast to a not-so-surprising story of a three-cornered land dispute, Kantara blends the mysterious with the practical and creates a world you will fall in love with. This is a world that drags you in and won’t let go, even after you are done with the film.

    It is nice to see the predictable start to folklore with a ‘once upon a time, there lived a king’ story. This king, in eternal distress, trades his land for peace of mind. He makes a pact with a ‘daiva’, which is accompanied with a warning. Cut to another period (1990) his descendants are trying to undo the deal, threatening to unleash the wrath of the Gods. Unsuspectingly placed in the middle of this war is our hero.

    Most films that talk about nativity end their efforts with the costumes and a stressed accent. Kantara however gives so much attention to every detail that you are literally transported to the place. It will leave you wanting to book a ticket to the place. I would not be surprised if this film results in people making a beeline to watch the ‘daiva’ culture similar to what Nammora Mandara Hoove did to Yaana and Yograj Bhat’s films did to Jog Falls and ‘Mugil Pete.’

    Kola, Kambala, hunting, food, beliefs and rituals are all packed into this film. They provide a unique backdrop for the story on hand. The story is simple enough but the attributes around it that makes it special. While the main characters like the angry Shiva, the sly landlord, the irritable forest officer and the damsel in distress do their job, the minor characters like the feudal henchmen, the amorous friend, the stoned workman, the cautionary higher officers fill up the detailed world of Kantara.

    The brilliant cinematography captures this world in vivid detail. The camera work transports you to the middle of the action which has been made more than a little realistic than possible by the art work. In the meantime Ajaneesh Loknath has rented your mind full time with the background score.

    Kantara is an experience more than a film. This film is where good intentions have been brought to life by a great support. The commitment of the producers cannot be underplayed here. In the end, the team has provided the Kannada audience with a memorable product. Cheers to that.

    -S Shyam Prasad

     

  • ಅದೊಂದು ತಪ್ಪು ಮಾಡಬೇಡಿ : ಕಾಂತಾರ ನೋಡಿದವರಿಗೆ ರಿಷಭ್ ಶೆಟ್ಟಿ ಮನವಿ

    ಅದೊಂದು ತಪ್ಪು ಮಾಡಬೇಡಿ : ಕಾಂತಾರ ನೋಡಿದವರಿಗೆ ರಿಷಭ್ ಶೆಟ್ಟಿ ಮನವಿ

    ಕಾಂತಾರ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆದ ಬೆನ್ನಲ್ಲೇ ಕೆಲವರು ಕೊಂಕನ್ನೂ ತೆಗೆದಿದ್ದಾರೆ. ಆದರೆ ಸಿನಿಮಾ ನೋಡಿದ ಚಿತ್ರರಸಿಕರ ಪಾಲಿಗೆ ಕಾಂತಾರ ಸಿನಿಮಾ ಹಬ್ಬ. ಮಾಸ್ಟರ್ ಪೀಸ್. ಪ್ರೇಕ್ಷಕರು ಇದಕ್ಕೆಲ್ಲ ತಲೆಕೆಡಿಸಿಕೊಳ್ಳುತ್ತಿಲ್ಲ. ಸಿದ್ಧಾಂತಗಳಿಗಿಂತ ಸಿನಿಮಾ ಕೊಡುವ ಮನರಂಜನೆ ಮುಖ್ಯ ಎನ್ನುವವರು ಅವರು. ಸರಿ ತಪ್ಪುಗಳನ್ನು ಬೇರೆಯವರಿಗಿಂತ ಹೆಚ್ಚಾಗಿ ತಮಗೆ ತಾನೇ ನಿರ್ಧರಿಸುವವರು. ಅವರಿಗೆಲ್ಲ ಸಿನಿಮಾ ಖುಷಿ ಕೊಟ್ಟಿದೆ. ಆದರೆ ಈ ಖುಷಿಯ ಜೊತೆಯಲ್ಲೇ ಅತ್ಯುತ್ಸಾಹದಲ್ಲಿ ಮಾಡುತ್ತಿರುವ ಒಂದು ತಪ್ಪನ್ನು ನಟ ನಿರ್ದೇಶಕ ರಿಷಬ್ ಶೆಟ್ಟಿ ಎತ್ತಿ ತೋರಿಸಿದ್ದಾರೆ. ಆ ರೀತಿ ಮಾಡದಂತೆ ಮನವಿ ಮಾಡಿದ್ದಾರೆ.

    ಸಿನಿಮಾದಲ್ಲಿ ನನ್ನ ಪಾತ್ರ ದೈವಾವೇಶದಲ್ಲಿ ಬೊಬ್ಬೆಯಿಡುವ ದೃಶ್ಯವಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಅದರ ಅನುಕರಣೆ ಮಾಡಲಾಗುತ್ತಿದೆ. ಅದು ದೈವಾರಾಧನೆಯ  ಒಂದು ಭಾಗ, ನಂಬಿಕೆಯ ವಿಷಯ. ದೈವಾರಾಧನೆಯ ಆಳ, ಅಗಲ ಎಷ್ಟು, ಏನು ಎಂದು ತಿಳಿದು ಎಲ್ಲರೂ ವ್ಯವಹಾರ ಮಾಡಬೇಕು. ದಯವಿಟ್ಟು ಯಾರೂ ದೈವದಂತೆ ಕೂಗು ಹಾಕೋದನ್ನು ಯಾರೂ ಅನುಕರಣೆ ಮಾಡಬಾರದು ಎಂದು ರಿಷಬ್ ಶೆಟ್ಟಿ ಮನವಿ ಮಾಡಿದ್ದಾರೆ.

    ಸಾಮಾನ್ಯವಾಗಿ ದೇವರು ಕುರಿತಾದ ಪಾತ್ರಗಳನ್ನು ಮಾಡುವವರು ಕೆಲವು ನಿಯಮಗಳನ್ನು ಪಾಲಿಸುತ್ತಾರೆ. ಮಾಂಸ ಸೇವನೆ, ಧೂಮಪಾನ, ಮದ್ಯಪಾನಗಳನ್ನೆಲ್ಲ ಬಿಟ್ಟು ಬದುಕುತ್ತಾರೆ. ಅದೇ ರೀತಿ ರಿಷಬ್ ಶೆಟ್ಟಿಯವರು ಕೂಡಾ ಈ ಪಾತ್ರ ಮಾಡುವಾಗ ತಾವು ಅನುಸರಿಸಿದ ಸಂಪ್ರದಾಯ, ನಂಬಿಕೆ, ಆಚರಣೆಗಳ ಬಗ್ಗೆ ಹೇಳಿದ್ದಾರೆ. ಆ ರೀತಿ ಇಲ್ಲದೆ ಹೋದರೆ ಅಪಚಾರವಾಗುತ್ತದೆ. ಕೆಡುಕಾಗುತ್ತದೆ ಎನ್ನುವುದು ನಂಬಿಕೆ. ಸ್ವತಃ ಕರಾವಳಿ ಕಡೆಯವರಾದ ರಿಷಬ್ ಶೆಟ್ಟಿಯವರಿಗೆ ಆ ನಂಬಿಕೆಯೂ ಇದೆ. ಹೀಗಾಗಿಯೇ ಉತ್ಸಾಹದಲ್ಲಿ ದೈವದಂತೆ ಕೂಗು ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.

    ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಪ್ರಮೋದ್ ಶೆಟ್ಟಿ, ಕಿಶೋರ್ ಪ್ರಮುಖ ಪಾತ್ರದಲ್ಲಿರುವ ಕಾಂತಾರ ಗೆಲುವಿನ ದಶಮಿ ಆಚರಿಸುತ್ತಿದೆ. ಹೊಂಬಾಳೆ ಫಿಲಮ್ಸ್ ಮತ್ತೊಮ್ಮೆ ಜಯಭೇರಿ ಮೊಳಗಿಸಿದೆ.

  • ಅಭಿಮಾನಿಗಳ ಮಧ್ಯೆ ಕಾಂತಾರ ಶಿವನ ಹುಟ್ಟುಹಬ್ಬ

    ಅಭಿಮಾನಿಗಳ ಮಧ್ಯೆ ಕಾಂತಾರ ಶಿವನ ಹುಟ್ಟುಹಬ್ಬ

    ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಕಾಂತಾರ ನಂತರ ರಿಷಬ್ ಶೆಟ್ಟಿ ಅಭಿಮಾನಿಸುವವರ ಸಂಖ್ಯೆ ದೊಡ್ಡದಾಗಿದೆ. ಹೀಗಾಗಿ ಅಭಿಮಾನಿಗಳನ್ನು ಭೇಟಿ ಮಾಡುವುದಕ್ಕಾಗಿಯೇ ತಮ್ಮ ಹುಟ್ಟುಹಬ್ಬವನ್ನು ಹೀಗೆ ಮೈದಾನದಲ್ಲಿ ಸಾರ್ವಜನಿಕವಾಗಿ ಆಚರಿಸಿಕೊಂಡಿದ್ದಾರೆ ಕಾಂತಾರ ಶಿವ. ಬೆಂಗಳೂರಿನ ಹೊಸಕೆರೆಹಳ್ಳಿ ಬಳಿ ಇರುವ ನಂದಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ಸೇರಿದ್ದರು. ಡೊಳ್ಳು ಕುಣಿತ, ನೃತ್ಯ ಕಾರ್ಯಕ್ರಮ ಸೇರಿದಂತೆ ಹಲವು ಮನರಂಜನೆ ಕಾರ್ಯಕ್ರಮಗಳ ಜತೆಗೆ ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬ  ಸೆಲಬ್ರೇಟ್ ಮಾಡಿದ್ದಾರೆ ರಿಷಬ್ ಶೆಟ್ಟಿ. ಮಳೆ ಸುರಿಯುತ್ತಿದ್ದರೂ ಅಭಿಮಾನಿಗಳ ಸಂಭ್ರಮ ಕಡಿಮೆಯಾಗಲಿಲ್ಲ.

    ಮಳೆ ನಡುವೆಯೂ ನೀವು ನನ್ನ ಹುಟ್ಟುಹಬ್ಬಕ್ಕೆ ಬಂದಿದ್ದೀರಿ ಎಂದರೆ ಇದಕ್ಕಿಂತ ದೊಡ್ಡ ಪ್ರೀತಿ ಮತ್ತು ಅಭಿಮಾನ ಇನ್ನೇನಿದೆ. ಇಷ್ಟು ವರ್ಷಗಳ ನನ್ನ ನಿಜವಾದ ಸಂಪಾದನೆ ಎಂದರೆ ಅದು ಅಭಿಮಾನಿಗಳ ಪ್ರೀತಿ. ನ್ನಂಥ ಒಬ್ಬ ಮಧ್ಯಮ ವರ್ಗದ ಹುಡುಗ, ಚಿತ್ರರಂಗಕ್ಕೆ ಬಂದು ಸಿನಿಮಾ ಮಾಡುವ ಕನಸು ಕಾಣಬಹುದು. ಆ ಕನಸು ನನಸು ಕೂಡ ಮಾಡಿಕೊಳ್ಳಬಹುದು ಎಂಬುದನ್ನು ಸಾಬೀತು ಮಾಡಿದ್ದೇ ನೀವು.  ಕನ್ನಡ ಹಾಗೂ ಕನ್ನಡ ಸಿನಿಮಾಗಳ ಮೇಲಿನ ಜನರ ಪ್ರೀತಿ- ಅಭಿಮಾನ ನೋಡಿಯೇ ಡಾ ರಾಜ್ಕುಮಾರ್ ಅವರು ‘ಅಭಿಮಾನಿಗಳೇ ದೇವರು’ ಎಂದಿದ್ದು. ಆ ಮಾತು ನಿಜ. ನಿಮ್ಮ ಈ ಋುಣವನ್ನು ನಾನು ಜೀವನ ಪರ್ಯಾಂತ ತೀರಿಸುತ್ತೇವೆ. ಜೀವನ ಪರ್ಯಾಂತ ನಿಮ್ಮ ಪ್ರೀತಿಯನ್ನು ಹೊತ್ತು ಸಾಗುತ್ತೇನೆ ಎಂದು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು ರಿಷಬ್ ಶೆಟ್ಟಿ.

    ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಹಾಗೂ ನಟ ಪ್ರಮೋದ್ ಶೆಟ್ಟಿ ಹಾಜರಿದ್ದರು. ಚಿತ್ರರಂಗದ ಹಲವಾರು ಕಲಾವಿದರು, ತಂತ್ರಜ್ಞರು ರಿಷಬ್ ಶೆಟ್ಟಿಗೆ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

    ಈ ರೀತಿ ದೊಡ್ಡ ಸಂಖ್ಯೆಯ ಅಭಿಮಾನಿಗಳೊಟ್ಟಿಗೆ ರಿಷಬ್ ಶೆಟ್ಟಿ ತಮ್ಮ ಹುಟ್ಟುಹಬ್ಬ ಆಚರಸಿಕೊಳ್ಳುತ್ತಿರುವುದು ಇದೇ ಮೊದಲು. ಕಾಂತಾರಗೆ ಮುಂಚೆ ಇದನ್ನೆಲ್ಲ ನನಗೆ ಹೇಗೆ ನಿಭಾಯಿಸಬೇಕು ಎಂಬುದು ಸಹ ನನಗೆ ಗೊತ್ತಿರಲಿಲ್ಲ. ಆದರೆ ನಿಮ್ಮನ್ನು ಭೇಟಿ ಆಗುವ ಬಹಳ ಆಸೆಯಿತ್ತು. ನನ್ನ ಪತ್ನಿ ಪ್ರಗತಿ, ಪ್ರಮೋದ್ ಶೆಟ್ಟಿ ಹಾಗೂ ಇತರರು ಒತ್ತಾಯ ಮಾಡಿ ಈ ಕಾರ್ಯಕ್ರಮವನ್ನು ಮಾಡಲೇ ಬೇಕು, ಅಭಿಮಾನಿಗಳಿಗೆ ಧನ್ಯವಾದ ಹೇಳಲೇ ಬೇಕು ಎಂದರು. ಹಾಗಾಗಿ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದ ರಿಷಬ್ ಶೆಟ್ಟಿ, ಅಭಿಮಾನಿಗಳೊಟ್ಟಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

  • ಆಗಸ್ಟ್ 27ಕ್ಕೆ ಕಾಂತಾರ 2 ಮುಹೂರ್ತ

    ಆಗಸ್ಟ್ 27ಕ್ಕೆ ಕಾಂತಾರ 2 ಮುಹೂರ್ತ

    ಅದೇ ಆನೆಗುಡಿ ದೇವಸ್ಥಾನ. ಕಾಂತಾರ ಎಲ್ಲಿ ಶುರುವಾಗಿತ್ತೋ.. ಅಲ್ಲಿಯೇ ಕಾಂತಾರ ಪ್ರೀಕ್ವೆಲ್ ಶುರುವಾಗಲಿದೆ. ಹೌದು, ಕಾಂತಾರ 2ಗೆ ಅರ್ಥಾತ್ ಪ್ರೀಕ್ವೆಲ್`ಗೆ ಆಗಸ್ಟ್ 27ಕ್ಕೆ ಮುಹೂರ್ತ ನಡೆಸುವುದಾಗಿ ಚಿತ್ರತಂಡ ನಿರ್ಧರಿಸಿದೆ.

    ಬಹುತೇಕ ಸ್ಕ್ರಿಪ್ಟ್ ಮುಗಿಸಿರುವ ರಿಷಬ್ ಶೆಟ್ಟಿ, ಸ್ಕ್ರಿಪ್ಟ್`ನ ಸಣ್ಣ ಪುಟ್ಟ ರಿಪೇರಿ ಕೆಲಸ ಮಾಡುತ್ತಿದ್ದಾರಂತೆ. ಲೊಕೇಷನ್`ಗಳನ್ನೂ ಫಿಕ್ಸ್ ಮಾಡುತ್ತಿದ್ದಾರಂತೆ. ಒಟ್ಟಿನಲ್ಲಿ ಆಗಸ್ಟ್ 27ಕ್ಕೆ ಕಾಂತಾರ ಚಿತ್ರ ಸೆಟ್ಟೇರಲಿದೆ. ಆಗಸ್ಟ್ ನಲ್ಲಿ ಕಾಂತಾರ ಪ್ರಿಕ್ವೆಲ್ ಗೆ ಮುಹೂರ್ತವಾದರೆ ಸೆಪ್ಟೆಂಬರ್ ತಿಂಗಳಿಂದ ಚಿತ್ರೀಕರಣ ಆರಂಭಿಸಲಿದ್ದಾರಂತೆ ರಿಷಬ್ ಶೆಟ್ಟಿ. ಪಂಜುರ್ಲಿ ದೈವದ ಸುತ್ತವೇ ಚಿತ್ರಕಥೆ ಇರುವುದರಿಂದ ಕೆರಾಡಿ ಸುತ್ತಮುತ್ತವೇ ಶೂಟಿಂಗ್ ಆಗಲಿದೆ ಎನ್ನುವ ಮಾತು ಹರಿದಾಡುತ್ತಿದೆ. ಜೊತೆಗೆ ‘ಕಾಂತಾರ’ 2 ನಲ್ಲಿ ಯಾರೆಲ್ಲಾ ಕಲಾವಿದರು ಇರುತ್ತಾರೆ ಎಂಬ ಕುತೂಹಲವಿದೆ.

  • ಆಸ್ಕರ್ ರೇಸಿನಿಂದ ಕಾಂತಾರ ಔಟ್. ನಾಟು ನಾಟು ಇನ್

    ಆಸ್ಕರ್ ರೇಸಿನಿಂದ ಕಾಂತಾರ ಔಟ್. ನಾಟು ನಾಟು ಇನ್

    ಆಸ್ಕರ್ ನಾಮನಿರ್ದೇಶನ ಹೊರಬಿದ್ದಿದೆ. ಇದು ಕನ್ನಡಿಗರಿಗೆ ಬೇಸರದ ವಿಷಯವಾದರೂ ಇಂಡಿಯನ್ ಸಿನಿಮಾ ಜಗತ್ತಿನಲ್ಲಿ ಹೊಳಪನ್ನಂತೂ ತಂದಿದೆ. ಕಾಂತಾರ, ವಿಕ್ರಾಂತ್ ರೋಣ ಎರಡೂ ಚಿತ್ರಗಳು ಅಂತಿಮ ನಾಮ ನಿರ್ದೇಶನ ಸುತ್ತಿಗೆ ಹೋಗಿಲ್ಲ. ಕಾಶ್ಮೀರ್ ಫೈಲ್ಸ್, ಗಂಗೂಬಾಯಿ.. ಅಷ್ಟೇ ಏಕೆ, ಭಾರತೀಯ ಸರ್ಕಾರದಿಂದಲೇ ಆಯ್ಕೆಯಾಗಿದ್ದ ಅಧಿಕೃತ ಸಿನಿಮಾ ಚೆಲ್ಲೋ ಶೋ ಚಿತ್ರ ಕೂಡಾ ಆಸ್ಕರ್ ಆರಂಭದ ಸುತ್ತಿನಲ್ಲೇ ಹೊರಬಿದ್ದಿದೆ.

    ಆದರೆ ಆರ್.ಆರ್.ಆರ್. ಚಿತ್ರದ ನಾಟು ನಾಟು.. ಅಂತಿಮ ನಾಮನಿರ್ದೇಶನದ ಸುತ್ತಿನಲ್ಲಿ ಉಳಿದುಕೊಂಡಿದೆ. ಇವತ್ತು ಸಂತೋಷದ ದಿನ. ಭಾರತ ಮಾತೆಯ ಮಡಿಲಿಗೆ, ಕನ್ನಡಾಂಬೆಯ ಮಡಿಲಿಗೆ, ನಿಮ್ಮ ಲಹರಿ ಸಂಸ್ಥೆಗೆ ಖಖಖ ರಾಜಮೌಳಿ ಸಾಹೇಬ್ರ ನಿರ್ದೇಶನ.. ಕೀರವಾಣಿಯವರ ಸಂಗೀತದ ನಾಟು ನಾಟು ಹಾಡಿಗೆ ತಮ್ಮೆಲ್ಲರಿಗೂ ಗೊತ್ತಿರೋ ಹಾಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಸಿಕ್ಕಿತ್ತು.ಈಗ ಆಸ್ಕರ್ ಅವಾರ್ಡ್ನ ಟಾಪ್ 5ಗೆ ಸೆಲೆಕ್ಟ್ ಆಗಿದೆ

    ಹೀಗೊಂದು ಹೃದಯಕ್ಕೆ ನಾಟುವಂತಾ ಟ್ವೀಟ್ ಮಾಡಿದ್ದಾರೆ ಲಹರಿ ವೇಲು. ನಾಟು ನಾಟು ಹಾಡು ಅಂತಿಮ ಸುತ್ತಿನಲ್ಲಿ  5 ಬೆಸ್ಟ್ ಮ್ಯೂಸಿಕ್`ಗಳ ಜೊತೆ ಸ್ಪರ್ಧೆಯಲ್ಲಿದೆ. ಇದೇ ಹಾಡಿಗೆ ಎಂ.ಎಂ.ಕೀರವಾಣಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದಿದ್ದರು. ರಾಜಮೌಳಿ, ರಾಮ್ ಚರಣ್ ತೇಜ, ಜೂ.ಎನ್.ಟಿ.ಆರ್. ಎಲ್ಲರೂ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದರು. ಈಗ ಅಸ್ಕರ್ ರೇಸ್`ಗೂ ಹೋಗಿರುವ ರಾಜಮೌಳಿಯವರ ಆರ್.ಆರ್.ಆರ್. ಪ್ರಶಸ್ತಿ ಗೆಲ್ಲುವ ಎಲ್ಲ ಸಾಧ್ಯತೆಗಳೂ ಇವೆ. ಇನ್ನು ಆರ್.ಆರ್.ಆರ್. ಚಿತ್ರವೂ ಅಷ್ಟೆ, ನಾಟು ನಾಟು ಹಾಡೊಂದನ್ನು  ಬಿಟ್ಟು ಮಿಕ್ಕ ಯಾವುದೇ ವಿಭಾಗದಲ್ಲಿ ನಾಮಿನೇಟ್ ಆಗಿಲ್ಲ.

    ಇವುಗಳ ಜೊತೆಗೆ ವಿವಿಧ ಪಕ್ಷಿ, ಪ್ರಾಣಿಗಳನ್ನು ಸಾಕುವ ದೆಹಲಿಯ ಮುಸ್ಲಿಂ ಕುಟುಂಬವೊಂದರ ಕುರಿತ ಡಾಕ್ಯುಮೆಂಟರಿ 'ಆಲ್ ದಟ್ ಬ್ರೀತ್ಸ್' ಆಸ್ಕರ್ಗೆ ನಾಮಿನೇಟ್ ಆಗಿದೆ. ಇದರ ಜೊತೆಗೆ ಶಾರ್ಟ್ ಡಾಕ್ಯುಮೆಂಟರಿ ವಿಭಾಗದಲ್ಲಿ ಭಾರತದ್ದೇ ಆದ 'ದಿ ಎಲಿಫೆಂಟ್ ವಿಸ್ಪರ್ಸ್' ಸಹ ನಾಮಿನೇಟ್ ಆಗಿದೆ.

    Related Articles ;-

    ಆಸ್ಕರ್ ರೇಸ್ : ಅಧಿಕೃತ ಎಂಟ್ರಿ ಪಡೆದ ಕಾಂತಾರ

    ಆಸ್ಕರ್ ರೇಸ್‍ಗೆ ಕಾಂತಾರ

  • ಆಸ್ಕರ್ ರೇಸ್ : ಅಧಿಕೃತ ಎಂಟ್ರಿ ಪಡೆದ ಕಾಂತಾರ

    ಆಸ್ಕರ್ ರೇಸ್ : ಅಧಿಕೃತ ಎಂಟ್ರಿ ಪಡೆದ ಕಾಂತಾರ

    ಕನ್ನಡ ಚಿತ್ರರಂಗದಲ್ಲೇ ಹೊಸ ಹೊಸ ದಾಖಲೆ, ಇತಿಹಾಸ ಬರೆದ ಕಾಂತಾರ, ಆಸ್ಕರ್ ಪ್ರಶಸ್ತಿಗೆ ಇನ್ನಷ್ಟು ಸಮೀಪ ಹೋಗಿದೆ. ಕನ್ನಡದ ಕಾಂತಾರ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಆಸ್ಕರ್ ಅಂಗಳಕ್ಕೆ ಅಧಿಕೃತ ಪ್ರವೇಶ ಗಿಟ್ಟಿಸಿದೆ. ಕಾಂತಾರ ಚಿತ್ರವನ್ನು ಖಾಸಗಿಯಾಗಿ ಆಸ್ಕರ್ಗೆ ನಾಮನಿರ್ದೇಶನ ಸಲ್ಲಿಸಿದ್ದ ಹೊಂಬಾಳೆ ಸಂಸ್ಥೆಯೇ ಅಧಿಕೃತ ಎಂಟ್ರಿಯನ್ನೂ ಘೋಷಿಸಿದೆ.

    ಕಾಂತಾರ ಸಿನಿಮಾ 2 ವಿಭಾಗಳಲ್ಲಿ ಆಸ್ಕರ್ ಅರ್ಹತೆ ಸಿಕ್ಕಿದೆ ಎಂದು ಹಂಚಿಕೊಳ್ಳಲು ನಮಗೆ ತುಂಬಾ ಸಂತಸವಾಗುತ್ತಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಪ್ರಯಾಣವನ್ನು ಹಂಚಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದೆ ಹೊಂಬಾಳೆ. ಅತ್ಯುತ್ತಮ ಸಿನಿಮಾ ಹಾಗೂ ಅತ್ಯುತ್ತಮ ನಟ ವಿಭಾಗದಲ್ಲಿ ಕಾಂತಾರ ಆಸ್ಕರ್ಗೆ ಅರ್ಹತೆ ಪಡೆದಿದೆ.

    ಕಾಂತಾರ ಸಿನಿಮಾ ಆಸ್ಕರ್ ಪ್ರಶಸ್ತಿ ಸುತ್ತಿಗೆ ಆಯ್ಕೆಯಾದರೆ ಒಂದು ಇತಿಹಾಸ. ಪ್ರಶಸ್ತಿಯನ್ನು ಗೆದ್ದೂಬಿಟ್ಟರೆ ಅದೊಂದು ಹೊಸ ಇತಿಹಾಸ. ಒಟ್ಟು 301 ಚಿತ್ರಗಳಲ್ಲಿ ಒಂದಾಗಿ ಕಾಂತಾರ ಅರ್ಹತೆ ಪಡೆದಿದ್ದು, ಜನವರಿ 24 ರಂದು ಆಸ್ಕರ್ ಅಂತಿಮ ನಾಮನಿರ್ದೇಶನದ ಪಟ್ಟಿ ಬಿಡುಗಡೆಯಾಗಲಿದೆ.

    ಕಾಂತಾರ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಚಿತ್ರ. ರಿಷಬ್ ಶಿವನಾಗಿ, ನಾಯಕಿ ಸಪ್ತಮಿ ಗೌಡ ಲೀಲಾ ಆಗಿ ನಟಿಸಿದ್ದಾರೆ. ಕಿಶೋರ್, ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿರುವ ಕಾಂತಾರ, 400 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಕನ್ನಡದಲ್ಲಿ ಅತೀ ಹೆಚ್ಚು ಜನ ನೋಡಿದ ಹಾಗೂ ಕನ್ನಡದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರ ಕಾಂತಾರ.

  • ಆಸ್ಕರ್ ರೇಸ್‍ಗೆ ಕಾಂತಾರ

    ಆಸ್ಕರ್ ರೇಸ್‍ಗೆ ಕಾಂತಾರ

    ಆಸ್ಕರ್. ಪ್ರತಿಯೊಬ್ಬ ಚಿತ್ರ ನಿರ್ಮಾಪಕ, ನಿರ್ದೇಶಕ,ಕಲಾವಿದ, ತಂತ್ರಜ್ಞರ ಗುರಿ. ಕನಸು. ಈ ಕನಸಿನಲ್ಲಿ ಈ ಬಾರಿ ಭಾರತೀಯ ಚಿತ್ರರಂಗದಲ್ಲಿ ಅಧಿಕೃತವಾಗಿ ಎಂಟ್ರಿ ಕೊಟ್ಟಿರುವ ಚಿತ್ರ ಗುಜರಾತಿ ಚಿತ್ರ ಚೆಲ್ಲೋ ಶೋ (ದಿ ಲಾಸ್ಟ್ ಶೋ). ಫಿಲ್ಮ್ ಫೆಡರೇಷನ್ ಇಂಡಿಯಾ ವತಿಯಿಂದ ಅಧಿಕೃತವಾಗಿ ಮಾನ್ಯತೆ ಪಡೆದಿರುವ ಚಿತ್ರವಿದು. ಇತ್ತೀಚೆಗೆ ಆರ್.ಆರ್.ಆರ್. ಸಿನಿಮಾ ಕೂಡಾ ಆಸ್ಕರ್ ರೇಸ್‍ಗೆ ಲಗ್ಗೆಯಿಟ್ಟಿದೆ. ಫಾರ್ ಯುವರ್ ಕನ್ಸಿಡರೇಷನ್ ವಿಭಾಗದಲ್ಲಿ ಪ್ರತ್ಯೇಕವಾಗಿಯೇ ಎಂಟ್ರಿ ಕೊಟ್ಟಿದೆ. ಹಿಂದಿಯ ಗಂಗೂಬಾಯಿ ಕಟಿವಾಡಿ ಚಿತ್ರ ಇದೇ ವಿಭಾಗದಲ್ಲಿ ಸ್ಪರ್ಧೆಗಿಳಿದಿದೆ. ಈಗ ಈ ವಿಭಾಗಕ್ಕೆ ಕಾಂತಾರ ಕೂಡಾ ಎಂಟ್ರಿ ಕೊಟ್ಟಿದೆ.

    ನಾವು ಚಿತ್ರವನ್ನು ಆಸ್ಕರ್ ರೇಸ್‍ಗೆ ಕಳಿಸಿದ್ದೇವೆ. ಅಧಿಕೃತವಾಗಿ ಅಪ್ಲಿಕೇಷನ್ ಹಾಕಿದ್ದೇವೆ. ಫೈನಲ್ ಲಿಸ್ಟ್‍ಗಾಗಿ ಕಾಯುತ್ತಿದ್ದೇವೆ. ಕಾಂತಾರ ಈ ನೆಲದ ಮಣ್ಣಿನ ಕಥೆಯಾದರೂ ಯುನಿವರ್ಸಲ್ ಗುಣಗಳನ್ನು ಹೊಂದಿದೆ ಎಂದು ಇಂಡಿಯಾ ಟುಡೇಗೆ ಹೇಳಿಕೆ ನೀಡಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು.

    ಕಾಂತಾರ ಮೊದಲು ಕನ್ನಡದಲ್ಲಿಯಷ್ಟೇ ನಿರ್ಮಾಣವಾದ ಸಿನಿಮಾ. ನಂತರ ಚಿತ್ರದ ಸಕ್ಸಸ್ ಹಾಗೂ ಡಿಮ್ಯಾಂಡ್ ಕಂಡು ಬೇರೆ ಭಾಷೆಗಳಿಗೆ ಡಬ್ ಮಾಡಲಾಯಿತು. ಎಲ್ಲ ಭಾಷೆಗಳಲ್ಲಿಯೂ ಸಕ್ಸಸ್ ಕಂಡ ಸಿನಿಮಾ ಗಳಿಸಿದ್ದು 400 ಕೋಟಿಗೂ ಹೆಚ್ಚು. ಅಷ್ಟೇ ಅಲ್ಲ, ಇಂಗ್ಲಿಷಿಗೂ ಡಬ್ ಆಗಿ ನೆಟ್ ಫ್ಲಿಕ್ಸ್‍ನಲ್ಲಿ ರಿಲೀಸ್ ಆಗಿದೆ. ಅಲ್ಲಿಯೂ ಟ್ರೆಂಡಿಂಗ್‍ನಲ್ಲಿದೆ.

    ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ಕಾಂತಾರ ಚಿತ್ರ ಕರಾವಳಿಯಲ್ಲಿ ನಡೆಯುವ ಪ್ರಕೃತಿ ಮತ್ತು ಮನುಷ್ಯರ ನಡುವಿನ ಹೋರಾಟದ ಕಥೆಯನ್ನು ಹೇಳಿತ್ತು. ಚಿತ್ರದ ಕ್ಲೈಮಾಕ್ಸ್ ಚಿತ್ರಕ್ಕೊಂದು ದೈವೀಕ ಸೊಬಗು ನೀಡಿತ್ತು. ಆಸ್ಕರ್ ಕೂಡಾ ಗೆದ್ದರೆ.. ವ್ಹೋ.. ಎನ್ನಲು ಅಡ್ಡಿಯಿಲ್ಲ.

  • ಇಂದಿನಿಂದ ತುಳು ಕಾಂತಾರ ಚಿತ್ರಮಂದಿರದಲ್ಲಿ..

    ಇಂದಿನಿಂದ ತುಳು ಕಾಂತಾರ ಚಿತ್ರಮಂದಿರದಲ್ಲಿ..

    ಅಭೂತಪೂರ್ವ ಯಶಸ್ಸು ಕಂಡ ಕಾಂತಾರ ಚಿತ್ರ ಈಗಾಗಲೇ ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಲ್ಲಿ 50 ದಿನ ಪ್ರದರ್ಶನ ಕಂಡು ದಾಖಲೆ ಬರೆದಿದೆ. ಕನ್ನಡದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ, ಅತೀ ಹೆಚ್ಚು ಜನ ನೋಡಿದ ಸಿನಿಮಾ, ಅತೀ ಹೆಚ್ಚು ಶೋ ಕಂಡ ಸಿನಿಮಾ.. ಹೀಗೆ ಹಲವು ದಾಖಲೆಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ ಆಗಿದ್ದರೆ, ಸಪ್ತಮಿ ಗೌಡ ಕರ್ನಾಟಕದ ಕ್ರಷ್ ಆಗಿದ್ದಾರೆ. ಹಿಂದಿಯಲ್ಲಿ ಕೂಡಾ ದಾಖಲೆ ಬರೆದು ಪುಷ್ಪ ದಾಖಲೆಯನ್ನೂ ಹಿಂದಿಕ್ಕಿದೆ. ಒಟಿಟಿಯಲ್ಲಿ ರಿಲೀಸ್ ಆಗಿದ್ದರೂ, ಚಿತ್ರಮಂದಿರದಲ್ಲಿ ಕ್ರೇಜ್ ಕಡಿಮೆಯಾಗಿಲ್ಲ.

    ಕನ್ನಡ ಭಾಷೆಯಲ್ಲಿ ಯಶಸ್ಸು ಗಳಿಸುತ್ತಿದ್ದಂತೆಯೇ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿಯೂ ಕಾಂತಾರವನ್ನು ಬಿಡುಗಡೆ ಮಾಡಲಾಯಿತು. ಅಲ್ಲಿಯೂ ಸೂಪರ್ ಡ್ಯೂಪರ್ ಬಂಪರ್ ಸಕ್ಸಸ್. ಇದೀಗ ತುಳು ಆವೃತ್ತಿಯು ಕೂಡ ಕರ್ನಾಟಕದಾದ್ಯಂತ ಸುಮಾರು 50 ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ  ಕನ್ನಡ ಆವೃತ್ತಿಯಲ್ಲಿಯೂ 50 ಹೆಚ್ಚುವರಿ ಚಿತ್ರಮಂದಿರಗಳೊಂದಿಗೆ 250 ಥಿಯೇಟರ್ಗಳಲ್ಲಿ ಪ್ರದರ್ಶನ ಕಾಣಲಿದೆ.

    ಸಿನಿಮಾದಲ್ಲಿನ ವರಾಹ ರೂಪಂ ಹಾಡನ್ನು ಥಿಯೇಟರ್ ಮತ್ತು ಒಟಿಟಿ ಆವೃತ್ತಿಯಲ್ಲಿ ಬದಲಿಸಲಾಗಿದೆ. ಆದರೆ ಇದು ಚಿತ್ರದ ಕಲೆಕ್ಷನ್ ಮತ್ತು ಕ್ರೇಜ್ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ. ಜನ ಬೇಸರಗೊಂಡಿದ್ದರೂ ಕಾಂತಾರವನ್ನು ನೋಡುತ್ತಿದ್ದಾರೆ.

    ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ ಮತ್ತು ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಸಾದ್ ತೂಮಿನಾಡ್, ಸ್ವರಾಜ್ ಶೆಟ್ಟಿ ಮತ್ತು ಮಾನಸಿ ಸುಧೀರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿರುವ ಕಾಂತಾರ ತುಳು ನಾಡಿನದ್ದೇ ಕಥೆ. ಈಗ ತುಳುವಿನಲ್ಲೇ ಬರುತ್ತಿದೆ.