` duniya vijay, - chitraloka.com | Kannada Movie News, Reviews | Image

duniya vijay,

 • ವಿಜಯ್ ಕುಸ್ತಿಗೆ ಚೂರಿಕಟ್ಟೆ ರಘು 

  duniya vijay changed his director

  ದುನಿಯಾ ವಿಜಯ್ ಅಭಿನಯದ ಕುಸ್ತಿ ಚಿತ್ರಕ್ಕೆ ನಿರ್ದೇಶಕರು ಬದಲಾಗಿದ್ದಾರೆ. ಅನಿಲ್ ಜಾಗಕ್ಕೆ ಈಗ ರಘು ಬಂದಿದ್ದಾರೆ. ಯಾರು ಈ ರಘು ಎಂಬ ಪ್ರಶ್ನೆಗೆ ಉತ್ತರ, ಚೂರಿಕಟ್ಟೆ. ಚೌಕಾಬಾರ ಎಂಬ ಕಿರುಚಿತ್ರ ಹಾಗೂ ಚೂರಿಕಟ್ಟೆ ಎಂಬ ಚಿತ್ರದ ಮೂಲಕ ಗಮನ ಸೆಳೆದಿದ್ದ ರಘು ಶಿವಮೊಗ್ಗ, ದುನಿಯಾ ವಿಜಯ್ ಅಭಿನಯದ ಕುಸ್ತಿ ಚಿತ್ರದ ನಿರ್ದೇಶಕ.

  ಈ ಚಿತ್ರದ ಮೂಲಕ ದುನಿಯಾ ವಿಜಿ ಅವರ ಪುತ್ರ ಸಾಮ್ರಾಟ್ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಅಂದಹಾಗೆ ರಘು ಅವರಿಗೆ ಈ ಚಾನ್ಸ್ ಕೊಡಿಸಿದ್ದೇ ಚೂರಿಕಟ್ಟೆ ಸಿನಿಮಾ. ಬಾಕ್ಸಾಫೀಸ್‍ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡದೇ ಇದ್ದರೂ, ಚೂರಿಕಟ್ಟೆ ಸಿನಿಮಾ ವಿಮರ್ಶಕರ ಮನ ಗೆದ್ದಿತ್ತು. ಒಂದು ವರ್ಗದ ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿಕೊಂಡಿದ್ದರು. 

  ದುನಿಯಾ ವಿಜಯ್ ಚೂರಿಕಟ್ಟೆ ಸಿನಿಮಾ ನೋಡಿ, ಸ್ಕ್ರಿಪ್ಟ್ ಇಷ್ಟವಾಗಿ ಸ್ವತಃ ಕರೆದು ತಮ್ಮದೇ ಚಿತ್ರದ ನಿರ್ದೇಶನದ ಅವಕಾಶ ಕೊಟ್ಟಿದ್ದಾರೆ. ಕುಸ್ತಿ ಚಿತ್ರಕ್ಕಾಗಿ ದುನಿಯಾ ವಿಜಯ್ ಹಾಗೂ ಸಾಮ್ರಾಟ್ ಇಬ್ಬರೂ ಬೆವರು ಹರಿಸುತ್ತಿದ್ದು, ಕುಸ್ತಿಯ ಪಟ್ಟುಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ.

 • ವಿಜಯ್ ಕುಸ್ತಿಗೆ ದಂಗಲ್, ಸುಲ್ತಾನ್ ಸ್ಫೂರ್ತಿ

  duniya vikay's kusthi is an ispiration from dangal and sultan

  ಕುಸ್ತಿ, ದುನಿಯಾ ವಿಜಯ್ ನಿರ್ಮಿಸಿ ನಟಿಸುತ್ತಿರುವ ಸಿನಿಮಾ. ದೇಸೀ ಕುಸ್ತಿಯನ್ನೇ ಮೂಲಕಥೆಯಲ್ಲಿ ಹೊಂದಿರುವ ಚಿತ್ರದ ಟೀಸರ್ ಬಿಡಗಡೆಯಾಗಿದೆ. ಕ್ರೀಡೆಯನ್ನು ಕ್ರೀಡೆಯಾಗಿ, ಸ್ಪರ್ಧೆಯಾಗಿ ನೋಡಬೇಕೇ ಹೊರತು, ಪ್ರತಿಷ್ಟೆಯಾಗಿಸಿಕೊಳ್ಳಬಾರದು ಅನ್ನೋದು ಚಿತ್ರದ ಸಂದೇಶ ಮತ್ತು ಕತೆಯ ಸಾರ. ದುನಿಯಾ ವಿಜಯ್ ಮಗ ಸಾಮ್ರಾಟ್ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವ ಚಿತ್ರ ಕುಸ್ತಿ.

  ಈ ಚಿತ್ರಕ್ಕೆ ಸ್ಫೂರ್ತಿ ದಂಗಲ್ ಹಾಗೂ ಸುಲ್ತಾನ್ ಚಿತ್ರಗಳು ಎಂದರೆ ಅಚ್ಚರಿಯಾಗಬಹುದು. ಸಲ್ಮಾನ್ ಅಭಿನಯದ ಸುಲ್ತಾನ್, ಕುಸ್ತಿಪಟುವೊಬ್ಬನ ಕ್ರೀಡೆ ಹಾಗೂ ಪ್ರೀತಿಯ ಬದುಕಿನ ಏರಿಳಿತದ ಕಥೆ ಹೊಂದಿತ್ತು. ಅಮೀರ್ ಖಾನ್ ನಾಯಕತ್ವದ ದಂಗಲ್, ಮಕ್ಕಳನ್ನು ಕುಸ್ತಿಪಟುಗಳನ್ನಾಗಿ ರೂಪಿಸುವ ಕಥೆ ಹೊಂದಿತ್ತು. ಈ ಚಿತ್ರಗಳ ಯಶಸ್ಸು ನೋಡಿ, ಕನ್ನಡದಲ್ಲೇಕೆ ಕುಸ್ತಿಯ ಕಥೆ ಮಾಡಬಾರದು ಎಂದುಕೊಂಡರಂತೆ ವಿಜಯ್. ಕುಸ್ತಿಗೆ ಕರ್ನಾಟಕದಲ್ಲಿ ತನ್ನದೇ ಆದ ಗರಡಿ ಮನೆಯ ಇತಿಹಾಸವೇ ಇದೆ. ಆಗ ರೂಪುಗೊಂಡಿದ್ದೇ ಕುಸ್ತಿ ಸಿನಿಮಾ.

  ಶಿವಮೊಗ್ಗ ರಘು ನಿರ್ದೇಶನದ ಚಿತ್ರಕ್ಕೆ ಕನಕ ಖ್ಯಾತಿಯ ನವೀನ್ ಸಜ್ಜು ಸಂಗೀತವಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ನಾಯಕಿಯರ ಆಯ್ಕೆ ಇನ್ನಷ್ಟೇ ಆಗಬೇಕಿದೆ.

 • ವಿಜಯ್ ಬಹಿಷ್ಕಾರ ಅಸಾಧ್ಯ - ಫಿಲಂ ಚೇಂಬರ್

  kfcc will not ban duniya vijay

  ಪಾನಿಪೂರಿ ಕಿಟ್ಟಿ ಅಣ್ಣನ ಮಗನ ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ದುನಿಯಾ ವಿಜಯ್‍ರನ್ನು ಚಿತ್ರರಂಗದಿಂದ ನಿಷೇಧಿಸಬೇಕು ಎಂಬ ಕೂಗು ಕೇಳಿಬಂದಿದೆ. ಈ ಕುರಿತು ಪಾನಿಪುರಿ ಕಿಟ್ಟಿ ಕೂಡಾ ಮನವಿ ಮಾಡಿದ್ದಾರೆ. ಆದರೆ, ಅದು ಅಸಾಧ್ಯ ಎಂದು ಹೇಳಿದ್ದಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ.

  ಇದೊಂದು ವೈಯಕ್ತಿಕ ವಿಚಾರದ ಗಲಾಟೆ. ಮೇಲಾಗಿ ಇದು ಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿದೆ. ಅವರನ್ನು ಚಿತ್ರರಂಗದಿಂದ ಬಹಿಷ್ಕರಿಸಲು ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಚಿನ್ನೇಗೌಡ.

  ಜೈಲಿನಿಂದ ಬಂದ ಮೇಲೆ ದುನಿಯಾ ವಿಜಯ್ ಮತ್ತು ಪಾನಿಪೂರಿ ಕಿಟ್ಟಿಯನ್ನು ಕೂರಿಸಿಕೊಂಡು ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ.

 • ವಿಜಯ್‍ಗೆ ಚಾನ್ಸ್ ಕೊಡಿಸಿ ಕೆಲಸ ಕಳೆದುಕೊಂಡಿದ್ದ ಚಂದ್ರು

  duniya vijay r chanru's friendship story

  ಆರ್. ಚಂದ್ರು ಮತ್ತು ದುನಿಯಾ ವಿಜಯ್. ಇಬ್ಬರಿಗೂ ಈಗ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರಿದೆ. ಒಬ್ಬರು ಸ್ಟಾರ್ ಡೈರೆಕ್ಟರ್. ಮತ್ತೊಬ್ಬರು ಸ್ಟಾರ್ ನಟ. ಒಂದಾನೊಂದು ಕಾಲದಲ್ಲಿ ಹೀಗಿರಲಿಲ್ಲ. ಇಬ್ಬರೂ ಅವಕಾಶಕ್ಕಾಗಿ ಎದುರು ನೋಡುತ್ತಾ ಸಿಕ್ಕ ಸಿಕ್ಕ ಸಣ್ಣ ಅವಕಾಶಗಳನ್ನೂ ಬಿಡದೆ ದುಡಿಯುತ್ತಿದ್ದರು. ಈಗ ನಾವು ಹೇಳ್ತಿರೋದು ಆಗಿನ ಕಾಲದ ಕಥೆ.

  ಆಗ ಆರ್.ಚಂದ್ರು ಅಸಿಸ್ಟೆಂಟ್ ಡೈರೆಕ್ಟರ್. ಧಾರಾವಾಹಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದ್ರು, ಆ ಪಾತ್ರವನ್ನು ವಿಜಯ್ ಅವರಿಂದ ಮಾಡಿಸಿಬಿಟ್ಟರು. ಅದೇನೂ ದೊಡ್ಡ ಪಾತ್ರವಾಗಿರಲಿಲ್ಲ. ಆದರೆ, ನಿರ್ದೇಶಕರಿಗೆ ಆ ಪಾತ್ರವನ್ನು ವಿಜಯ್ ಅವರಿಂದ ಮಾಡಿಸಿದ್ದು ಇಷ್ಟವಾಗಲಿಲ್ಲ. ಅವರ ಮನಸ್ಸಿನಲ್ಲಿ ಇನ್ಯಾರೋ ಇದ್ದರು. ಹೀಗಾಗಿ ಸಿಟ್ಟಿಗೆದ್ದ ನಿರ್ದೇಶಕರು ಅಂದ್ರು ಚಂದ್ರು ಅವರನ್ನೇ ಅಸಿಸ್ಟೆಂಟ್ ಡೈರೆಕ್ಟರ್ ಸ್ಥಾನದಿಂದ ಕಿತ್ತು ಹಾಕಿದ್ದರು.

  ಆಗ ಆ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಕೆ.ಪಿ. ನಂಜುಂಡಿ, ಚಂದ್ರು ಅವರು ಟೀಂನಲ್ಲಿರಲೇಬೇಕು ಎಂದು ಹಠ ಮಾಡಿದ ಕಾರಣ, ಚಂದ್ರು ಮತ್ತೆ ಕೆಲಸ ಗಿಟ್ಟಿಸಿಕೊಂಡಿದ್ದರು. ಈಗ ಕಾಲ ಬದಲಾಗಿದೆ. ಆರ್.ಚಂದ್ರು ಈಗ ಕನ್ನಡದ ಸ್ಟಾರ್ ಡೈರೆಕ್ಟರ್ ಕಂ ಪ್ರೊಡ್ಯೂಸರ್ ಆಗಿದ್ದಾರೆ. ದುನಿಯಾ ವಿಜಯ್ ಸ್ಟಾರ್ ಆಗಿದ್ದಾರೆ. ಇಬ್ಬರೂ ಸೇರಿ ಕನಕ ಅನ್ನೋ ಚಿತ್ರ ಮಾಡಿ ರಿಲೀಸ್‍ಗೆ ರೆಡಿಯಾಗಿದ್ದಾರೆ. ಅಂದು ತಮ್ಮ ಕೆಲಸ ಉಳಿಸಿದ್ದ ನಂಜುಂಡಿಯವರಿಗೆ ತಮ್ಮ ಚಿತ್ರದಲ್ಲೊಂದು ಪಾತ್ರ ನೀಡಿ ಆರ್.ಚಂದ್ರು ಖುಷಿಯಾಗಿದ್ದಾರೆ. ಎಲ್ಲ ಕಾಲದ ಮಹಿಮೆ.

 • ಶ್ರೀರಾಮನ ಅವತಾರದಲ್ಲಿ ದುನಿಯಾ ವಿಜಯ್

  duniya vijay as sree rama

  ಮರ್ಯಾದಾ ಪುರುಷೋತ್ತಮ ಶ್ರೀರಾಮನ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ ದುನಿಯಾ ವಿಜಯ್. ಇದು ಜಾನಿ ಜಾನಿ ಯೆಸ್ ಪಪ್ಪಾ ಚಿತ್ರದ ಒಂದು ದೃಶ್ಯ. ಶ್ರೀರಾಮನವಮಿಗೆ ವಿಶೇಷವಾಗಿ ಈ ಟೀಸರ್ ಕೊಟ್ಟಿರುವ ಚಿತ್ರತಂಡ, ಶ್ರೀರಾಮನವಮಿಯನ್ನು ಈ ಮೂಲಕ ಸಂಭ್ರಮಿಸಿದೆ. 

  ಇಲ್ಲಿ ದುನಿಯಾ ವಿಜಿ ಶ್ರೀರಾಮನಾದರೆ, ರಂಗಾಯಣ ರಘು ಆಂಜನೇಯ. ಶ್ರೀರಾಮನನ್ನು ವೀರ, ಧೀರ, ಸಿಕ್ಸ್‍ಪ್ಯಾಕ್ ರಾಮ ಎಂದು ಸಂಬೋಧಿಸುವ ರಂಗಾಯಣ ರಘು, ಥೇಟು ಆಂಜನೇಯನೇ.

  ದನಕಾಯೋನು ಚಿತ್ರದಲ್ಲಿ ಭಟ್ಟರು, ವಿಜಿಗೆ ಕೃಷ್ಣನ ವೇಷ ತೊಡಿಸಿದ್ದರು. ಈ ಚಿತ್ರದಲ್ಲಿ ಪ್ರೀತಂ ಗುಬ್ಬಿ, ವಿಜಯ್‍ಗೆ ರಾಮನ ವೇಷ ಹಾಕಿಸಿದ್ದಾರೆ. ಇದೇ ಮಾರ್ಚ್ 30ಕ್ಕೆ ಬಿಡುಗಡೆಯಾಗುತ್ತಿರುವ ಸಿನಿಮಾ ಇಂತಹವುಗಳಿಂದಾಗಿಯೇ ಕುತೂಹಲ ಮೂಡಿಸುತ್ತಿದೆ.

 • ಸಮಕಾಲೀನ ನಿರ್ದೇಶಕರಿಗೆ `ಕನಕ'ರತ್ನ ಪುರಸ್ಕಾರ

  kanaka audio launch image

  ಚಿತ್ರವೊಂದರ ಆಡಿಯೋ ಬಿಡುಗಡೆ ಎಂದರೆ, ಅಲ್ಲಿ ಹೀರೋ, ಹೀರೋಯಿನ್, ಸಂಗೀತ ನಿರ್ದೇಶಕರು, ಗಾಯಕರು, ಒಂದಿಷ್ಟು ಹಾಡು, ನೃತ್ಯ ಇರುತ್ತೆ. ನಿರ್ದೇಶಕರು ಆ ದಿನ ತೆರೆಮರೆಯಲ್ಲೇ ಇರಲು ಬಯಸುತ್ತಾರೆ. ಆದರೆ, ಆರ್. ಚಂದ್ರು ಯಾವತ್ತಿಗೂ ಡಿಫರೆಂಟು. ಅವರು ತಮ್ಮ ಕನಕ ಚಿತ್ರದ ಆಡಿಯೋ ಲಾಂಚ್ ವೇಳೆ ಮಾಡಿದ್ದು ಹಾಗೆಯೇ ಇತ್ತು. ಫುಲ್ ಡಿಫರೆಂಟು. ಅವರು `ಕನಕ' ಚಿತ್ರದ ಆಡಿಯೋ ಬಿಡುಗಡೆ ವೇದಿಕೆಯಲ್ಲಿ ತಮ್ಮ ಸಮಕಾಲೀನ ನಿರ್ದೇಶಕರನ್ನೇ ವೇದಿಕೆಗೆ ಕರೆದು, ಗೌರವಿಸಿದರು.

  ನಿರ್ದೇಶಕ ಯೋಗರಾಜ್ ಭಟ್, ಸೂರಿ, ಶಶಾಂಕ್ ಹಾಗೂ ಆರ್. ಚಂದ್ರು ಗೌರವಕ್ಕೆ ಪಾತ್ರರಾದರು. ಅವರನ್ನು ವೇದಿಕೆಗೆ ಗೌರವಿಸಿದರು. ನಟ ದುನಿಯಾ ವಿಜಯ್ ತಮ್ಮ ತಮ್ಮ ಪತ್ನಿ, ಮಕ್ಕಳ ಸಮೇತ ವೇದಿಕೆಯಲ್ಲಿದ್ದರು.

  ಸನ್ಮಾನ ಸ್ವೀಕರಿಸಿದ ಯೋಗರಾಜ್ ಭಟ್, ಕೆಲವರು ನನ್ನನ್ನು ಈಗಾಗಲೇ ಗುರುಗಳ ಪಟ್ಟಕ್ಕೆ ಏರಿಸಿಬಿಟ್ಟಿದ್ದಾರೆ. ಆದರೆ, ನಾನಿನ್ನೂ ಕಲಿಯುವ ಹಂತದಲ್ಲಿರುವ ಲಾಸ್ಟ್ ಬೆಂಚ್ ಪೋಲಿ ವಿದ್ಯಾರ್ಥಿ ಎಂದು ಹೇಳಿಕೊಂಡರು.

  ನಿರ್ದೇಶಕ ಸೂರಿ ದುನಿಯಾ ಚಿತ್ರ ಸೃಷ್ಟಿಯಾದ ದಿನಗಳನ್ನು ನೆನಪಿಸಿಕೊಂಡರೆ, ಶಶಾಂಕ್, ಮೊಗ್ಗಿನ ಮನಸ್ಸು ದಿನಗಳಿಗೆ ಜಾರಿದರು. ಕನಕ ಚಿತ್ರದ ಆಡಿಯೋ ಲಾಂಚ್ ವಿಭಿನ್ನ ಎನಿಸಿದ್ದು ಇದೇ ಕಾರಣಕ್ಕೆ.

 • ಹುಟ್ಟುಹಬ್ಬದ ಸ್ಪೆಷಲ್ - 80 ಅಡಿ ಕಟೌಟು, ಬಿರಿಯಾನಿ, ಸ್ವೀಟು

  duniya vijay in kanaka

  ದುನಿಯಾ ವಿಜಯ್ ಅಭಿನಯದ ಕನಕ ಚಿತ್ರ ಇದೇ 26ರಂದು ತೆರೆಗೆ ಬರುತ್ತಿದೆ. ಇದರ ನಡುವೆಯೇ, ಚಿತ್ರದ ಬಿಡುಗಡೆಗೆ ಕೇವಲ ಒಂದು ವಾರ ಮುಂಚೆ ದುನಿಯಾ ವಿಜಿ ಹುಟ್ಟುಹಬ್ಬ ಇರುವುದು ವಿಶೇಷ. ಹೀಗಾಗಿಯೇ ಆರ್. ಚಂದ್ರು, ದುನಿಯಾ ವಿಜಿ ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿ ಸೆಲಬ್ರೇಟ್ ಮಾಡಲು ನಿರ್ಧರಿಸಿದ್ದಾರೆ.

  ಅಂದು ದುನಿಯಾ ವಿಜಯ್ ಮನೆ ಎದುರು ಅವರ 80 ಅಡಿ ಎತ್ತರದ ಕಟೌಟ್ ನಿಲ್ಲಿಸುತ್ತಿದ್ದಾರೆ. ಬಹುಶಃ ಇದುವರೆಗೆ ಕನ್ನಡ ಚಿತ್ರರಂಗದಲ್ಲಿ ಯಾವ ನಟನಿಗೂ 80 ಅಡಿ ಎತ್ತರದ ಕಟೌಟ್ ಸಿಕ್ಕಿಲ್ಲವೇನೋ. ಅಷ್ಟೇ ಅಲ್ಲ, ಆ ದಿನ ಅಭಿಮಾನಿಗಳಿಗೆ ಬಿರಿಯಾನಿ ಮತ್ತು ಸಿಹಿ ಹಂಚಲು ನಿರ್ಧರಿಸಿದ್ದಾರೆ.

  ಹರಿಪ್ರಿಯಾ, ಮಾನ್ವಿತಾ ಹರೀಶ್ ನಾಯಕಿಯರಾಗಿರುವ ಚಿತ್ರಕ್ಕೆ ಆರ್.ಚಂದ್ರು ನಿರ್ದೇಶಕರಷ್ಟೇ ಅಲ್ಲ, ನಿರ್ಮಾಪಕರೂ ಹೌದು. ಡಾ.ರಾಜ್ ಅಭಿಮಾನಿಯ ಆದರ್ಶಗಳ ಕಥೆ ಹೊಂದಿರುವ ಸಿನಿಮಾದ ಟ್ರೇಲರ್, ಹಾಡುಗಳು ಈಗಾಗಲೇ ಹಿಟ್ ಆಗಿದ್ದು ಭಾರಿ ನಿರೀಕ್ಷೆ ಮೂಡಿಸಿವೆ.

 • ಹೊಸ ವರ್ಷಕ್ಕೆ ಎಣ್ಣೆ ಹೊಡೆಸ್ತಾನೆ ಕನಕ..!

  enne song by kanaka team

  ಕನಕ ಚಿತ್ರ ಮುಂದಿನ ಜನವರಿಯಲ್ಲಿ ರಿಲೀಸ್ ಆಗೋದು ಹೆಚ್ಚೂ ಕಡಿಮೆ ನಿಶ್ಚಿತವಾಗಿದೆ. ಅಂಜನೀಪುತ್ರ, ಮಫ್ತಿ ಚಿತ್ರಗಳಿಂದಾಗಿ ತಮ್ಮ ಚಿತ್ರದ ಬಿಡುಗಡೆಯನ್ನೇ ಮುಂದಕ್ಕೆ ಹಾಕಿದ ಆರ್. ಚಂದ್ರ, ಜನವರಿಯಲ್ಲಿ ಕನಕನನ್ನು ನುಗ್ಗಿಸೋಕೆ ರೆಡಿಯಾಗಿದ್ದಾರೆ. ಆದರೆ, ಅದಕ್ಕೂ ಮುಂಚೆ ಎಣ್ಣೆ ಹೊಡೆಸಲಿದ್ದಾರೆ.

  `ಎಣ್ಣೆ ನಮ್ದು.. ಊಟ ನಿಮ್ದು..' ಅನ್ನೋ ಎಣ್ಣೆ ಸಾಂಗ್, ಹೊಸ ವರ್ಷದ ದಿನವೇ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಇತ್ತೀಚೆಗೆ ಎಣ್ಣೆ ಸಾಂಗ್ ಟ್ರೆಂಡ್ ಆಗುತ್ತಿರುವ ಹಿನ್ನೆಲೆಯಲ್ಲಿ ಚಂದ್ರು ಈ ಪ್ರಮೋಷನಲ್ ಸಾಂಗ್ ಸೃಷ್ಟಿಸಿದ್ದಾರೆ. ಹೊಸ ವರ್ಷಕ್ಕೆ ಒಂದು ದಿನ ಮುಂಚೆ ಈ ಹಾಡು ರಿಲೀಸ್ ಆಗಲಿದೆ.

  ಅಲ್ಲಿ, ಹೊಸ ವರ್ಷದ ಕುಣಿತಕ್ಕೆ ಹೊಸ ಕಿಕ್ಕು. ಅದು ಕನಕನ ಕಿಕ್ಕು ಸಿಗಲಿರೋದು ಗ್ಯಾರಂಟಿ ಅಂದಂಗಾಯ್ತು.

#

The Terrorist Movie Gallery

Thayige Thakka Maga Movie Gallery