` hoysala, - chitraloka.com | Kannada Movie News, Reviews | Image

hoysala,

  • #Dolly 25 ಹೊಯ್ಸಳ : 2022 ಡಾಲಿ ಧನಂಜಯ್ ಉತ್ಸವವಾಗಲಿದೆಯಾ..?

    #Dolly 25 ಹೊಯ್ಸಳ : 2022 ಡಾಲಿ ಧನಂಜಯ್ ಉತ್ಸವವಾಗಲಿದೆಯಾ..?

    ಡಾಲಿ ಧನಂಜಯ್, ಅನುಮಾನವಿಲ್ಲದೆ ಹೇಳಬಹುದಾದರೆ 2021ನ್ನು ಧನಂಜಯ್ ವರ್ಷವೆನ್ನಬೇಕು. ಏಕೆಂದರೆ ವರ್ಷವಿಡೀ ಸಂಭ್ರಮಿಸಿದ ನಾಯಕ ನಟ ಡಾಲಿ ಧನಂಜಯ್. ವರ್ಷದ ಆರಂಭದಲ್ಲಿ ಕೊರೊನಾ ಬಿಕ್ಕಟ್ಟಿನ ನಡುವೆ ಚಿತ್ರರಂಗವೇ ತಲ್ಲಣಿಸುತ್ತಿದ್ದಾಗ ಗೆಲುವಿನ ಸರಮಾಲೆ ತೊಟ್ಟವರು ಡಾಲಿ. 2021ರ ಕೊನೆಯಲ್ಲಿ ರಿಲೀಸ್ ಧನಂಜಯ್ ಅಭಿನಯದ ಬಡವ ರಾಸ್ಕಲ್ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಅಲ್ಲಿ ಅವರು ನಿರ್ಮಾಪಕರಾಗಿಯೂ ಗೆದ್ದಿದ್ದಾರೆ.

    ತೆಲುಗಿನ ಪುಷ್ಪ ಕೂಡಾ ವರ್ಷದ ಆಲ್ ಇಂಡಿಯಾ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿದೆ. ಅಲ್ಲಿಯೂ ಜಾಲಿ ರೆಡ್ಡಿಯಾಗಿ ಗೆದ್ದಿದ್ದಾರೆ ಡಾಲಿ. ಇದರ ನಡುವೆ ವರ್ಷದ ಇನ್ನೆರಡು ಹಿಟ್ ಚಿತ್ರಗಳಾದ ಸಲಗ ಮತ್ತು ಯುವರತ್ನ ಚಿತ್ರದಲ್ಲಿ ಡಾಲಿ ಗೆಲುವಿನ ನಗು ಬೀರಿದ್ದರು. ಇದರ ನಡುವೆ ರತ್ನನ್ ಪ್ರಪಂಚ ಒಟಿಟಿಯಲ್ಲಿ ಗಿಚ್ಚಗಿಲಿಗಿಲಿ ಸದ್ದು ಮಾಡಿತ್ತು. ಇದರ ನಡುವೆ 2022 ಸಂಪೂರ್ಣ ಡಾಲಿ ವರ್ಷವಾಗಲಿದೆ ಎನ್ನುವ ನಿರೀಕ್ಷೆ ಹುಟ್ಟಿಸಿದೆ.

    ಡಾಲಿ 25ನೇ ಚಿತ್ರ ಹೊಯ್ಸಳ ಶುರುವಾಗಿದೆ. ಈ ಚಿತ್ರಕ್ಕೆ ಹೊಂಬಾಳೆ ಫಿಲಮ್ಸ್ನ ವಿಜಯ ಕಿರಗಂದೂರು ಹಾರೈಕೆ ಇದೆ. ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ ಮತ್ತು ಯೋಗಿ ಬಿ.ರಾಜ್ ನಿರ್ಮಾಪಕರಾಗುತ್ತಿದ್ದಾರೆ. ರತ್ನನ್ ಪ್ರಪಂಚ ನಂತರ ಡಾಲಿ, ಕಾರ್ತಿಕ್ ಮತ್ತು ಯೋಗಿ ಜೋಡಿ ಮತ್ತೆ ಒಂದಾಗಿದೆ. ಗೀತಾ ಚಿತ್ರ ನಿರ್ದೇಶಿಸಿದ್ದ ವಿಜಯ್ ಈ ಚಿತ್ರಕ್ಕೆ ಡೈರೆಕ್ಟರ್. ಹೊಯ್ಸಳದಲ್ಲಿ ಡಾಲಿ ಇನ್ಸ್ಪೆಕ್ಟರ್ ಪಾತ್ರಧಾರಿಯಂತೆ.

    ಇದರ ನಡುವೆ ಅವರೇ ನಿರ್ಮಾಪಕರಾಗಿರೋ ಹೆಡ್ ಬುಷ್ ಶೂಟಿಂಗ್ನಲ್ಲಿದೆ. ಇದೆಲ್ಲದರ ಜೊತೆ ಇರುವ ಚಿತ್ರಗಳ ಲಿಸ್ಟ್ ನೋಡಿ. ಬೈರಾಗಿಯಲ್ಲಿ ಮತ್ತೊಮ್ಮೆ ಶಿವಣ್ಣನ ಜೊತೆ, ಮಾನ್ಸೂನ್ ರಾಗ, ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ, 21 ಅವರ್ಸ್ ಮತ್ತು ತೆಲುಗಿನ ಪುಷ್ಪ ದಿ ರೂಲ್ ಲಿಸ್ಟ್ನಲ್ಲಿವೆ. ಸ್ಸೋ.. 2022 ಕೂಡಾ ಡಾಲಿ ವರ್ಷವಾಗುವ ನಿರೀಕ್ಷೆ ಹುಟ್ಟಿಸಿದೆ.

  • 2023ರ ಮಾರ್ಚ್ 30ಕ್ಕೆ ಸಳಾ ಹೊಯ್ ಅಂತಾನೆ ಹೊಯ್ಸಳ

    2023ರ ಮಾರ್ಚ್ 30ಕ್ಕೆ ಸಳಾ ಹೊಯ್ ಅಂತಾನೆ ಹೊಯ್ಸಳ

    ಡಾಲಿ ಧನಂಜಯ್ ನಿರಂತರವಾಗಿ ಸದ್ದು ಸುದ್ದಿ ಮಾಡುತ್ತಿದ್ದಾರೆ. ಇದೇ ಸೆಪ್ಟೆಂಬರ್‍ನಲ್ಲಿ ಡಾಲಿ ಧನಂಜಯ್ ಅವರ ಎರಡು ಸಿನಿಮಾಗಳು ರಿಲೀಸ್ ಆಗುತ್ತಿದೆ. ಮಾನ್ಸೂನ್ ರಾಗ ಮತ್ತು ತೋತಾಪುರಿ. ತೋತಾಪುರಿಯಲ್ಲಿ ಅವರದ್ದು ಅತಿಥಿ ನಟನ ಪಾತ್ರ. ಬೆನ್ನಲ್ಲೇ ಹೆಡ್ ಬುಷ್, ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ ಚಿತ್ರಗಳಿವೆ. ಇದು ಈ ವರ್ಷದ ಕಥೆಯಾಯಿತು. ಮುಂದಿನ ವರ್ಷಕ್ಕೂ ರಿಲೀಸ್ ಡೇಟ್ ಪಕ್ಕಾ ಮಾಡಿದ್ದಾರೆ ಡಾಲಿ.

    ಕಾರ್ತಿಕ್ ಗೌಡ, ಯೋಗಿ ಬಿ.ರಾಜ್ ಮತ್ತು ಡಾಲಿ ಧನಂಜಯ್ ಅವರ ಕಾಂಬಿನೇಷನ್ ಸಿನಿಮಾ ಹೊಯ್ಸಳ. ವಿಜಯ್ ಎನ್. ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಬೆಳಗಾವಿ ಭಾಗದ ಪೊಲೀಸ್ ಅಧಿಕಾರಿಯ ರಿಯಲ್ ಕಥೆಯನ್ನು ಚಿತ್ರವನ್ನಾಗಿಸಲಾಗಿದೆ. ಡಾಲಿ ಪಾತ್ರದ ಹೆಸರು ಗುರುದೇವ ಹೊಯ್ಸಳ. ಡಾಲಿಗೆ ಅಮೃತಾ ಅಯ್ಯಂಗಾರ್ ನಾಯಕಿ. ಚಿತ್ರದ ಬಿಡುಗಡೆಯೀಗ ಮಾರ್ಚ್ 30ಕ್ಕೆ ಫಿಕ್ಸ್ ಆಗಿದೆ. ಮುಂದಿನ ವರ್ಷಕ್ಕೆ..

  • ಗುರುದೇವ ಹೊಯ್ಸಳ : ಡಾಲಿ ಮತ್ತೊಮ್ಮೆ ಪೊಲೀಸ್ ಆಫೀಸರ್

    ಗುರುದೇವ ಹೊಯ್ಸಳ : ಡಾಲಿ ಮತ್ತೊಮ್ಮೆ ಪೊಲೀಸ್ ಆಫೀಸರ್

    ಹೊಯ್ಸಳ ಸಿನಿಮಾ ಶೂಟಿಂಗ್ ಶುರುವಾಗಿದೆ. ಮೈಸೂರಿನಲ್ಲಿ. ಇದು ಡಾಲಿ ಧನಂಜಯ್ ಸಿನಿಮಾ. ಕಾರ್ತಿಕ್ ಗೌಡ ಮತ್ತು ಯೋಗಿ ಬಿ.ರಾಜ್ ಜಂಟಿಯಾಗಿ ನಿರ್ಮಿಸುತ್ತಿರೋ ಹೊಯ್ಸಳ ಚಿತ್ರದಲ್ಲಿ ಡಾಲಿ ಮತ್ತೊಮ್ಮೆ ಪೊಲೀಸ್ ಆಫೀಸರ್ ಆಗಿದ್ದಾರೆ. ಡಾಲಿ ಪಾತ್ರದ ಹೆಸರೇ ಗುರುದೇವ ಹೊಯ್ಸಳ.

    ನಟ ರಾಕ್ಷಸ ಡಾಲಿ ಈ ಚಿತ್ರದ ಪಾತ್ರಕ್ಕಾಗಿ ಸ್ವಲ್ಪ ತೂಕ ಇಳಿಸಿಕೊಂಡು ಸಣ್ಣಗಾಗಿದ್ದಾರೆ.  ಧನಂಜಯ್ ಜೊತೆ ಲಕ್ಕಿ ಹೀರೋಯಿನ್ ಆಗಿರೋ ಅಮೃತಾ ಅಯ್ಯಂಗಾರ್ ನಟಿಸುತ್ತಿರೋದು ವಿಶೇಷ. ಗಣೇಶ್ ಅವರ ಗೀತಾ ಚಿತ್ರದ ಮೂಲಕ ಗಮನ ಸೆಳೆದಿದ್ದ ವಿಜಯ್ ನಾಗೇಂದ್ರ ಈ ಚಿತ್ರಕ್ಕೆ ಡೈರೆಕ್ಟರ್.

    ಚಿತ್ರದಲ್ಲಿ ಅಚ್ಯುತ್ ಕುಮಾರ್, ನವೀನ್ ಶಂಕರ್, ಪ್ರತಾಪ್ ನಾರಾಯಣ್,  ಅವಿನಾಶ್ ಕೆ.ಜಿ.ಎಫ್, ರಾಘು ಶಿವಮೊಗ್ಗ ಮೊದಲಾದವರು ನಟಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿರುವ ಚಿತ್ರವಿದು.

  • ನಾವಿಬ್ಬರೂ ಫ್ರೆಂಡ್ಸ್ ಅಷ್ಟೆ : ಅಮೃತಾ ಅಯ್ಯಂಗಾರ್

    ನಾವಿಬ್ಬರೂ ಫ್ರೆಂಡ್ಸ್ ಅಷ್ಟೆ : ಅಮೃತಾ ಅಯ್ಯಂಗಾರ್

    ಡಾಲಿ ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ನಡುವೆ ಏನೋ ಇದೆ ಅನ್ನೋ ಮಾತು ಇವತ್ತಿನದ್ದಲ್ಲ. ಏಕೆಂದರೆ ಅವರಿಬ್ಬರೂ ಒಟ್ಟಿಗೇ ಈಗಾಗಲೇ 3 ಚಿತ್ರಗಳಲ್ಲಿ ನಟಿಸಿದ್ದಾರೆ. ಪಾಪ್ ಕಾರ್ನ್ ಮಂಕಿ ಟೈಗರ್, ಬಡವ ರಾಸ್ಕಲ್ ಚಿತ್ರದಲ್ಲಿ ನಟಿಸಿದ್ದ ಡಾಲಿ ಮತ್ತು ಅಮೃತಾ ಇದೀಗ ಹೊಯ್ಸಳ ಚಿತ್ರದಲ್ಲಿ ಮತ್ತೊಮ್ಮೆ ಜೊತೆಯಾಗಿದ್ದಾರೆ. ಹೀಗಾಗಿ ಇವರಿಬ್ಬರ ನಡುವೆ ಲವ್ ಇದೆ. ಇಬ್ಬರೂ ಮದುವೆಯಾಗ್ತಾರೆ ಅನ್ನೋ ಸುದ್ದಿ ಜೋರಾಗಿ ಹಬ್ಬಿದೆ. ಸ್ವತಃ ಸುದೀಪ್ ಸ್ಟೇಜ್ ಮೇಲೆ ಕಿಚಾಯಿಸಿದ್ದಾರೆ. ಹೀಗಾಗಿ ಇದು ಇನ್ನೂ ಜೋರಾಗಿದೆ.

    ನಮ್ಮೀಬ್ಬರ ಮಧ್ಯೆ ಪ್ರೀತಿ ಇದೆ ಎಂಬ ಹಬ್ಬಿರುವ ಸುದ್ದಿಗೆ ಧನಂಜಯ್ಗೆ ಯಾರು ಹೆಣ್ಣು ಕೊಡ್ತಿಲ್ಲವಂತೆ. ನಮ್ಮೀಬ್ಬರ ಮಧ್ಯೆ ಹಾಗೇನು ನಾವಿಬ್ಬರು ಸ್ನೇಹಿತರು.  ಡಾಲಿ ಜೊತೆ ಫೋಟೋ ಹಾಕಿದ್ದರೆ, ಹಿರಿಯ ನಟರು ಸಿಕ್ಕಾಗ ಇದೇ ಕೇಳುತ್ತಾರೆ. ಸಂಬಂಧಿಕರು ಇದರ ಬಗ್ಗೆ ವಿಚಾರಿಸುತ್ತಾರೆ. ಆಗ ನಾನು ಸ್ಟಷ್ಟನೆ ಕೊಡುತ್ತೇನೆ. ಇದು ಹೇಗೆ ನಿಲ್ಲಿಸಬೇಕು ಎಂದು ತಿಳಿಯುತ್ತಿಲ್ಲ. ಸೆಟ್ನಲ್ಲಿ ನನಗೆ ಹೆಣ್ಣು ಕೊಡುತ್ತಿಲ್ಲ ಎಂದು ಡಾಲಿ ರೇಗಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ ಅಮೃತಾ ಅಯ್ಯಂಗಾರ್.

    ಅಂದಹಾಗೆ ಇದೆಲ್ಲ ಶುರುವಾಗಿದ್ದ ಗಣೇಶ್ ಅವರು ನಿರೂಪಣೆ ಮಾಡುತ್ತಿದ್ದ ಶೋದಿಂದ ಎನ್ನುವುದು ಕೂಡಾ ವಿಶೇಷ. ಟಿವಿಗೆ ನಡೆಸಿಕೊಡುತ್ತಿದ್ದ ಕಾರ್ಯಕ್ರಮದಲ್ಲಿ ಗಣೇಶ್ ಅವರಿಗೆ ಪ್ರಪೋಸ್ ಮಾಡುವ ರೀತಿಯ ಟಾಸ್ಕ್ ಕೊಟ್ಟಿದ್ದರು. ಅವತ್ತು ಪ್ರಪೋಸ್ ಮಾಡಿಸಿಕೊಂಡಿದ್ದು ಡಾಲಿ ಧನಂಜಯ. ಅದನ್ನು ನಿಜವೆಂದೇ ಅಭಿಮಾನಿಗಳು ಫೀಲ್ ಆದರು. ಇದೀಗ ಇಬ್ಬರೂ ಎಷ್ಟು ಸ್ಪಷ್ಟನೆ ಕೊಟ್ಟರೂ ಅಭಿಮಾನಿಗಳು ನಂಬುತ್ತಿಲ್ಲ. ಈಗಲೂ ಅಷ್ಟೆ, ಅಮೃತಾ ಇಷ್ಟೆಲ್ಲ ಸ್ಪಷ್ಟನೆ ಕೊಟ್ಟ ಮೇಲೆಯೂ ಹೋಗ್ಲಿ.. ಬಿಡಿ.. ಮದುವೆ ಯಾವಾಗ ಎನ್ನುತ್ತಿದ್ದಾರಂತೆ.

    ಇದೆಲ್ಲದರ ನಡುವೆಯೆ ಹೊಯ್ಸಳ ಭರ್ಜರಿ ಓಪನಿಂಗ್ ತೆಗೆದುಕೊಳ್ಳೋ ಸುಳಿವು ಇದೆ. ಡಾಲಿ-ಅಮೃತಾ ಅಯ್ಯಂಗಾರ್ ಜೊತೆಯಾಗಿ ನಟಿಸಿರುವ 3ನೇ ಸಿನಿಮಾ ಇದು. ಇದೇ 30ರಂದು ರಿಲೀಸ್.

  • ಮಹಿಳಾ ದಿನವೇ ಅಮೃತಾ ಮೇಲಿನ ಭಾವನೆ ಬಿಚ್ಚಿಟ್ಟ ಹೊಯ್ಸಳ ಧನಂಜಯ

    ಮಹಿಳಾ ದಿನವೇ ಅಮೃತಾ ಮೇಲಿನ ಭಾವನೆ ಬಿಚ್ಚಿಟ್ಟ ಹೊಯ್ಸಳ ಧನಂಜಯ

    ಅರೇ.. ಇದು ಎಂಥಾ ಭಾವನೆ..

    ಹೊಯ್ಸಳ ಚಿತ್ರದ ರೊಮ್ಯಾಂಟಿಕ್ ಸಾಂಗ್‍ನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಗಾಯಗೊಂಡಿರುವ ಹೊಯ್ಸಳನ ಗಾಯಕ್ಕೆ ಡೆಟಾಲ್ ಹಚ್ಚುತ್ತಿರುವ ಅಮೃತಾ ಅಯ್ಯಂಗಾರ್.. ಅಮೃತಾ ಕಾಲಿಗೆ ಗೆಜ್ಜೆ ತೊಡಿಸುತ್ತಿರುವ ಡಾಲಿ ಧನಂಜಯ.. ಪ್ರೀತಿಯ ಲೋಕದ ಈ ಭಾವನೆಗೆ ಸಾಹಿತ್ಯ ನೀಡಿದ ಯೋಗರಾಜ್ ಭಟ್.. ಎಲ್ಲರೂ ಪ್ರೀತಿಯಲ್ಲಿ ಮಿಂದೇಳುತ್ತಾರೆ..

    ಪಿಸುನುಡಿಯಲ್ಲು ಸುಖವಿದೆಯೆಂದು ಸನಿಹ ತಿಳಿಸಿ ಹೇಳಿದೆ ಉಸಿರಿನ ಶಾಖ ತವಕದ ತೂಕ ಈ ಹೃದಯ ತಡೆಯದಾಗಿದೆ

    ರೂಪಸಿ ನೀನು ರಾಕ್ಷಸ ನಾನು ಮುತ್ತಿನ ಸೋನೆ ಸುರಿಸುವೆ ಏನೇ ಅದರದ ಅಮೃತ ಈ ಪ್ರಾಣ ಉಳಿಸಲಿ..

    ಎಂಬ ಸಾಲುಗಳು ಹೃದಯಕ್ಕೆ ಮುತ್ತಿಗೆ ಹಾಕುತ್ತವೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಹರಿಚರಣ್ ಮಧುರವಾಗಿ ಹಾಡಿದ್ದಾರೆ. ಗುರುದೇವ್ – ಗಂಗಾಳ ಕ್ಯೂಟ್ ರೊಮಾನ್ಸ್ ಅನ್ನು ನಾವು ಈ ಹಾಡಿನಲ್ಲಿ ನೋಡಬಹುದು. ತನ್ನ ಮಡದಿ- ಮನದರಸಿಗೆ ಮನದಾಳದ ಮಾತುಗಳನ್ನು ಈ ಹಾಡಿನ ಮೂಲಕ ಡಾಲಿ ಪ್ರೀತಿಯಿಂದ ವ್ಯಕ್ತಪಡಿಸುತ್ತಿದ್ದಾರೆ. ಬಡವ ರಾಸ್ಕಲ್ ನಲ್ಲಿ ಉಡುಪಿ ಹೋಟೆಲು ಹಾಡಿನಿಂದ ತಮ್ಮ ಜೋಡಿಯ ಮೋಡಿ ಮಾಡಿದ್ದ ಧನಂಜಯ ಹಾಗೂ ಅಮೃತಾ ಐಯ್ಯಂಗಾರ್ ಈಗ

    ಅರೇ ಇದು ಎಂಥಾ ಭಾವನೆ..

    ಎನ್ನುವ ಮೆಲೋಡಿ ಲವ್ ಸಾಂಗ್ ನಲ್ಲಿ ಬಹಳ ಹೋಮ್ಲಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಈ ಹಿಂದೆ ಟೈಟಲ್ ಸಾಂಗ್ ರಿಲೀಸ್ ಆಗಿದ್ದು ಭಾರಿ ಸದ್ದು ಮಾಡಿತ್ತು. ಪೊಲೀಸ್ ಡ್ರಾಮಾ ಸಿನಿಮಾ ಆಗಿರುವ ಹೊಯ್ಸಳ ಚಿತ್ರದ ಟೀಸರ್ ರಿಲೀಸ್ ಆಗಿ ಭರವಸೆ ಮೂಡಿಸಿತ್ತು. ಇನ್ನು ಡಾಲಿ ಧನಂಜಯ್ರ 25ನೇ ಸಿನಿಮಾ ಹೊಯ್ಸಳ ಮಾರ್ಚ್ 30 ರಂದು ತೆರೆಮೇಲೆ ಅಪ್ಪಳಿಸಲಿದೆ. ಸಿನಿಮಾದಲ್ಲಿ ಅಮೃತಾ ಐಯ್ಯಂಗಾರ್ ನಾಯಕಿ, ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಸೇರಿದಂತೆ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ವಿಜಯ್ ಎನ್ ನಿರ್ದೇಶನ ಮಾಡಿದ್ದು, ಕೆಆರ್ಜಿ ಸ್ಟುಡಿಯೋ ಅಡಿಯಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಾಣ ಮಾಡಿದ್ದಾರೆ.

  • ಸಳಾ ಹೊಯ್.. ಹೊಯ್ಸಳ

    ಸಳಾ ಹೊಯ್.. ಹೊಯ್ಸಳ

    ಹೊಯ್ಸಳ. ಕರ್ನಾಟಕವನ್ನಾಳಿದ್ದ ಹೆಮ್ಮೆಯ ರಾಜ ವಂಶ. ಹೊಯ್ಸಳ ಚಕ್ರವರ್ತಿಯ ಚಕ್ರವರ್ತಿ. ಹುಲಿಯನ್ನು ಬರಿಗೈನಲ್ಲೇ ಕೊಂದ ಎನ್ನುವುದು ಹೊಯ್ಸಳನ ಬಗ್ಗೆ ಇರೋ ದಂತಕಥೆ. ಬೇಲೂರು, ಹಳೇಬೀಡು, ಸೋಮನಾಥಪುರ, ಶ್ರವಣ ಬೆಳಗೊಳ.. ಇವೆಲ್ಲ ಹೊಯ್ಸಳರ ಕಾಲದ ಕೊಡುಗೆಗಳು. ಹೊಯ್ಸಳ ಸಾಮ್ರಾಜ್ಯದ ಪ್ರಖ್ಯಾತ ದೊರೆ ಬಿಟ್ಟಿದೇವ ವಿಷ್ಣುವರ್ಧನ. ಆದರೆ ಇದು ಆ ಕಥೆಯಲ್ಲ. ಹೊಯ್ಸಳ ಅನ್ನೋ ಸಿನಿಮಾ ಸೆಟ್ಟೇರಿದೆ.

    ಡಾಲಿ ಧನಂಜಯ್ ಹೀರೋ ಆಗಿರೋ ಚಿತ್ರ ಹೊಯ್ಸಳಕ್ಕೆ ವಿಜಯ್ ನಿರ್ದೇಶಕ. ಗೀತಾ ಚಿತ್ರದ ನಂತರ ವಿಜಯ್ ನಿರ್ದೇಶನ ಮಾಡುತ್ತಿರೋ ಚಿತ್ರ ಹೊಯ್ಸಳ. ಡಾಲಿಗೆ 25ನೇ ಸಿನಿಮಾ. ಪೊಲೀಸ್ ಆಧಿಕಾರಿಯಾಗಿ ನಟಿಸುತ್ತಿರೋ ಡಾಲಿಯ ಪಾತ್ರಕ್ಕೆ ರಿಯಲ್ ಪೊಲೀಸ್ ಅವರ ವೃತ್ತಿ ಬದುಕೇ ಸ್ಫೂರ್ತಿಯಂತೆ.

    ವಿಜಯ್ ಕಿರಗಂದೂರು ಅರ್ಪಿಸುತ್ತಿತೋ ಚಿತ್ರಕ್ಕೆ ಕೆಆರ್‍ಜಿ ಸ್ಟುಡಿಯೋಸ್ ಬ್ಯಾನರ್ ನಿರ್ಮಾಣದ ಹೊಣೆ ಹೊತ್ತಿದೆ. ಕಾರ್ತಿಕ್ ಗೌಡ, ಯೋಗಿ ಬಿ.ರಾಜ್ ನಿರ್ಮಾಣ ಮಾಡುತ್ತಿರೋ ಚಿತ್ರ ತಂಡದಲ್ಲಿ ಬಹುತೇಕ ರತ್ನನ್ ಪ್ರಪಂಚ ಟೀಂ ಇದೆ. ಬಡವ ರಾಸ್ಕಲ್ ನಂತರ ಡಾಲಿಗೆ ಹಿಟ್ ಜೋಡಿಯಾಗಿರೋ ಅಮೃತಾ ಅಯ್ಯಂಗಾರ್ ಈ ಚಿತ್ರಕ್ಕೆ ನಾಯಕಿ.

  • ಹಾಲು..ರಕ್ತ..ಬೆಂಕಿಯ ಅಭಿಷೇಕದ ಮಧ್ಯೆ ಹೊಯ್ಸಳ ಬಂದ..

    ಹಾಲು..ರಕ್ತ..ಬೆಂಕಿಯ ಅಭಿಷೇಕದ ಮಧ್ಯೆ ಹೊಯ್ಸಳ ಬಂದ..

    ಆತ ಒಳ್ಳೆಯವನೋ.. ಕೆಟ್ಟವನೋ.. ಜಡ್ಜ್‍ಮೆಂಟ್`ಗೆ ಸಿಗವಲ್ದು.. ಆದರೆ ಮಂದಿಗೆ ಬಾಳಾ ಇಷ್ಟ.. ಅಚ್ಯುತ್ ಕುಮಾರ್ ಅವರ ಧ್ವನಿ ಹಿಂದೆ ಕೇಳುತ್ತಿದ್ದರೆ, ಮುಂದೆ ಹಾಲು..ರಕ್ತ..ಬೆಂಕಿಯ ಅಭಿಷೇಕ ಮಾಡಿಕೊಂಡೇ ತೆರೆಯ ಮೇಲೆ ಕುದುರೆಯ ಮೇಲೆ ಬರುತ್ತಾರೆನೆ..ಹೊಯ್ಸಳದ ಗುರುದೇವ್. ಚಿತ್ರದಲ್ಲಿ ಡಾಲಿ ಎಸಿಪಿ ಗುರುದೇವ್ ಆಗಿ ಕಾಣಿಸಿಕೊಂಡಿದ್ದು, ಯಾವುದೋ ಗಲಾಟೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಅಧಿಕಾರಿಯ ಹೋರಾಟದ ದೃಶ್ಯಗಳನ್ನು ಟೀಸರಿನಲ್ಲಿ ತೋರಿಸಲಾಗಿದೆ.

    ಬೆಳಗಾವಿ, ಅಥಣಿಯಲ್ಲಿ ನಡೆಯುವ ಕಥೆ ಇದು. ಅಂದಹಾಗೆ ಇದು ಡಾಲಿಯ 25ನೇ ಸಿನಿಮಾ ಎನ್ನುವುದೇ ವಿಶೇಷ. ಗೀತಾ ಚಿತ್ರದ ನಿರ್ದೇಶಕ ವಿಜಯ್.ಎನ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಸಂಭಾಷಣೆ ಮಾಸ್ತಿ ಅವರದು. ಧನಂಜಯ ಹಾಗೂ ಅಮೃತಾ ಅಯ್ಯಂಗಾರ್ ಜೋಡಿಯ ಚಿತ್ರವನ್ನು ಅರ್ಪಿಸಿರುವುದು ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್. ಕೆ.ಆರ್.ಜಿ ಸ್ಟುಡಿಯೋಸ್ನ  ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಅಜನೀಶ್ ಲೋಕನಾಥ್ ರವರು ಸಂಗೀತ ಸಂಯೋಜಿಸಿದ್ದು, ಕಾರ್ತಿಕ್ ಎಸ್ ಅವರು ಛಾಯಾಗ್ರಾಹಕರಾಗಿದ್ಡಾರೆ. ಅಚ್ಯುತ್ಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ಇನ್ನೊಂದು ವಿಶೇಷವೆಂದರೆ ನೋಡುಗರ ಹೃದಯಲ್ಲಿ ಕಿಚ್ಚು ಹಚ್ಚಿದ ಹೊಯ್ಸಳ ಟೀಸರ್ ರಿಲೀಸ್ ಮಾಡಿದ್ದು ಕಿಚ್ಚ ಸುದೀಪ್. ಟೀಸರ್ ದೃಶ್ಯ ನೋಡುತ್ತಿದ್ದರೆ ಬೆಳಗಾವಿ ಗಡಿಭಾಗದ ಮರಾಠಿ ಮತ್ತು ಕನ್ನಡ ಸಂಘರ್ಷದ ಕಥೆಯಿದೆಯೇನೋ ಎಂದು ಅನ್ನಿಸದೇ ಇರದು.

  • ಹೀರೋ ಡಾಲಿ.. ವಿಲನ್ ಬಾಲಿ.. : ಹೊಯ್ಸಳನ ವಿಲನ್ ಸ್ಕೆಚ್ಚು

    ಹೀರೋ ಡಾಲಿ.. ವಿಲನ್ ಬಾಲಿ.. : ಹೊಯ್ಸಳನ ವಿಲನ್ ಸ್ಕೆಚ್ಚು

    ಗುರುದೇವ ಹೊಯ್ಸಳ ಚಿತ್ರ ಇದೇ 30ನೇ ತಾರೀಕು ತೆರೆಗೆ ಬರುತ್ತಿದೆ. ಡಾಲಿ ಧನಂಜಯ್ ಹೀರೋ. ಇದೇ ಮೊದಲ ಬಾರಿಗೆ ಡಾಲಿ ಚಿತ್ರಕ್ಕೆ ವಿದೇಶದಲ್ಲೂ ಅದ್ಭುತ ಮಾರ್ಕೆಟ್ ಸೃಷ್ಟಿಯಾಗಿದೆ. ಸಿಕ್ಕಾಪಟ್ಟೆ ಡಿಮ್ಯಾಂಡ್ ಬರುತ್ತಿದೆ. ಇದರ ನಡುವೆ ಹೊಯ್ಸಳ ಚಿತ್ರದ ಟ್ರೇಲರ್ ನೋಡಿದವರ ಗಮನ ಸೆಳೆಯುತ್ತಿರುವುದು ಚಿತ್ರದ ವಿಲನ್ ಪಾತ್ರಧಾರಿ ನವೀನ್ ಶಂಕರ್.

    ಇದು ಸಾಮಾನ್ಯ ವಿಲನ್ ರೋಲ್ ಅಲ್ಲ. ಸಾಕಷ್ಟು ವಿಭಿನ್ನವಾಗಿದೆ. ನಿರ್ದೇಶಕ ವಿಜಯ್ ಅವರು ಕಥೆ ಹೇಳಿದ ಮೇಲೆ ಅವರು ಖಳನಾಯಕನ ಪಾತ್ರಕ್ಕಾಗಿಯೇ ಸ್ಪೆಷಲ್ ಸ್ಕೆಚ್ ಹಾಕಿದ್ದಾರೆ ಅನ್ನೋದು ಗೊತ್ತಾಯ್ತು. ನನಗೆ ಯಾವಾಗಲೂ ನಕಾರಾತ್ಮಕ ಪಾತ್ರಗಳಲ್ಲಿ ನಟಿಸಲು ಆಸಕ್ತಿ ಇತ್ತು. ಆದರೆ, ನನ್ನ ವೃತ್ತಿಜೀವನದಲ್ಲಿ ಇಷ್ಟು ಬೇಗ ಅದು ನನಸಾಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ ಎನ್ನುತ್ತಾರೆ ನವೀನ್ ಶಂಕರ್.

    ಹೀರೋ ಆಗಿರೋದು ಡಾಲಿ ಧನಂಜಯ್. ಅವರ ಪಾತ್ರದ ತೀವ್ರತೆಗೆ ತಕ್ಕಂತೆ ನಟಿಸಬೇಕಿತ್ತು. ಧನಂಜಯ್ ಮತ್ತು ನನ್ನ ಮುಖಾಮುಖಿ ಹೇಗಿರಲಿದೆ. ಪ್ರೇಕ್ಷಕರ ರಿಯಾಕ್ಷನ್ ಹೇಗಿದೆ ಅನ್ನೋದನ್ನ ನೋಡೋಕೆ ಕಾಯುತ್ತಿದ್ದೇನೆ ಎನ್ನುತ್ತಾರೆ ನವೀನ್ ಶಂಕರ್.

    ನವೀನ್ ಶಂಕರ್ ಒಳ್ಳೆಯ ನಟ ಎಂದು ಗೊತ್ತಾಗಿದ್ದು ಗುಳ್ಟು ಚಿತ್ರದ ಮೂಲಕ. ಇತ್ತೀಚೆಗೆ ಹೊಂದಿಸಿ ಬರೆಯಿರಿ, ಧರಣಿ ಮಂಡಲ ಮಧ್ಯದೊಳಗೆ ಚಿತ್ರಗಳ ಮೂಲಕ ವ್ಹಾಹ್ ಎನ್ನುವಂತೆ ಆಗಿರುವ ನವೀನ್ ಶಂಕರ್, ಗುರುದೇವ್ ಹೊಯ್ಸಳ ಚಿತ್ರದ ಪ್ರಮುಖ ವಿಲನ್. ಡಾಲಿಗೆ ಅಮೃತಾ ಅಯ್ಯಂಗಾರ್ ಮತ್ತೊಮ್ಮೆ ಜೋಡಿಯಾಗಿದ್ದು ಸಿನಿಮಾ ಇದೇ 30ರಂದು ರಿಲೀಸ್ ಆಗಲಿದೆ.

  • ಹೆಡ್ ಬುಷ್ ಬೆನ್ನಲ್ಲೇ ಉತ್ತರಕಾಂಡ ಶುರು : ಹೊಯ್ಸಳನೂ ಶುರು..

    dhananjaya image

    ಡಾಲಿ ಧನಂಜಯ್ ಹೆಡ್ ಬುಷ್ ಚಿತ್ರವೂ ಗೆದ್ದಿರುವ ಖುಷಿಯಲ್ಲಿಯೇ ಮತ್ತೆ ಕೆಲಸಕ್ಕಿಳಿದಿದ್ದಾರೆ. ಹೆಡ್ ಬುಷ್ ಚಿತ್ರದ ರಿಲೀಸ್ ಬ್ಯುಸಿಯಲ್ಲಿದ್ದ ಧನಂಜಯ್ ಕೆಲವು ದಿನಗಳಿಂದ ಚಿತ್ರೀಕರಣ ಸೇರಿದಂತೆ ಹಲವು ಚಟುವಟಿಕೆಗಳಿಗೆ ಬ್ರೇಕ್ ಕೊಟ್ಟಿದ್ದರು. ಈಗ ಎಲ್ಲವನ್ನೂ ಮುಗಿಸಿ ಕೆಲಸಕ್ಕೆ ಮುಂದಾಗಿದ್ದಾರೆ.

    ಕೆಆರ್‍ಜಿ ಸ್ಟುಡಿಯೋಸ್‍ನ ಕಾರ್ತಿಕ್ ಗೌಡ, ಯೋಗಿ ಬಿ.ರಾಜ್ ಜೊತೆಗೂಡಿ ಸಿದ್ಧವಾಗುತ್ತಿರುವ ಸಿನಿಮಾ ಉತ್ತರಕಾಂಡ. ರೋಹಿತ್ ಪದಕಿ ನಿರ್ದೇಶನದ ಉತ್ತರಾಖಂಡಕ್ಕೆ ಮತ್ತೆ ವೇಗ ಸಿಕ್ಕಿದೆ. ನವೆಂಬರ್ 6ರಂದು ಶೂಟಿಂಗ್ ಶುರುವಾಗುತ್ತಿದೆ.

    ಇನ್ನೊಂದೆಡೆ ಅವರದ್ದೇ ಹೊಯ್ಸಳ ಚಿತ್ರದ ಚಿತ್ರೀಕರಣವೂ ನವೆಂಬರ್ 7ರಿಂದ ಶುರುವಾಗುತ್ತಿದೆ. ಎನ್. ವಿಜಯ್ ನಿರ್ದೇಶನದ ಹೊಯ್ಸಳದ ಚಿತ್ರೀಕರಣವೂ ಶುರುವಾಗಲಿದೆ.

  • ಹೊಯ್ಸಳ ಕಾಲಿಂಗ್..

    ಹೊಯ್ಸಳ ಕಾಲಿಂಗ್..

    ಡಾಲಿ ಧನಂಜಯ್ ಮತ್ತು ಕಾರ್ತಿಕ್ ಗೌಡ-ಯೋಗಿ ಬಿ.ರಾಜ್ ಕಾಂಬಿನೇಷನ್‍ನಲ್ಲಿ ತೆರೆಗೆ ಬರುತ್ತಿರೋ ಸಿನಿಮಾ ಹೊಯ್ಸಳ. ವಿಜಯ್ ನಿರ್ದೇಶನದ ಚಿತ್ರದ ಕಥೆಯ ಬಗ್ಗೆಯೇ ನೂರಾರು ಕಥೆಗಳಿವೆ. ಆ ಕಥೆಗೀಗ ಕಲಾವಿದರು ಬೇಕಾಗಿದ್ದಾರೆ.

    ನೀವು ನಿಮ್ಮ ಹೈಟು, ವೇಯ್ಟು, ಲುಕ್ಕು, ಕಲರುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅದ್ಭುತವಾಗಿ ನಟಿಸುತ್ತೀರಾ.. ಅಷ್ಟು ಕ್ವಾಲಿಫಿಕೇಷನ್ ಸಾಕು. 8ರಿಂದ 60ನೇ ವಯಸ್ಸಿನವರು ಪ್ರಯತ್ನಿಸಿ ಎಂದು ಕರೆಕೊಟ್ಟಿದೆ ಹೊಯ್ಸಳ ಟೀಂ. ಹೊಯ್ಸಳ ಪೇಜಿಗೆ ಹೋದರೆ ಅಲ್ಲಿಯೇ ಮೇಯ್ಲ್ ಐಡಿ ಮತ್ತು ಡೀಟೈಲ್ಸ್ ಸಿಗುತ್ತೆ. 

  • ಹೊಯ್ಸಳನ ಆರ್ಭಟ.. ಇದೇ ಫಸ್ಟು..

    ಹೊಯ್ಸಳನ ಆರ್ಭಟ.. ಇದೇ ಫಸ್ಟು..

    ಹೆಸರು ಗುರುದೇವ್.. ಗುರುವಿಗೆ ಇರಬೇಕಾದ ಸಹನೆಯೂ ಇಲ್ಲ. ದೇವರಿಗೆ ಇರಬೇಕಾದ ಗುಣವೂ ಇಲ್ಲ. ಅದಕ್ಕೇ ನಮ್ಮ ಡಿಪಾರ್ಟ್‍ಮೆಂಟಿನವರು ಅವನನ್ನ ಹೊಯ್ಸಳ ಎಂದು ಕರೀತಾರೆ. ಒಂದು ಪುಟ್ಟ ಇಂಟ್ರೊಡಕ್ಷನ್ನಿನೊಂದಿಗೆ ಶುರುವಾಗುತ್ತೆ ಹೊಯ್ಸಳ ಚಿತ್ರದ ಸಳಸಳ ಹೊಯ್ಸಳ ಹಾಡು..

    ಮಿಕ್ಕಿದ್ದೆಲ್ಲ ಢಂಢಂಢಂ..ರಕ್ತಪಾತ..ಕತ್ತರಿಸಿ..ಕೊಚ್ಚುವ ದೃಶ್ಯಗಳೇ. ಹಾಡನ್ನು ಗುರುದೇವ್ ಎಂಬ ಅಧಿಕಾರಿಯ ಆಟಿಟ್ಯೂಡ್ ಮತ್ತು ವ್ಯಕ್ತಿತ್ವ ತೋರಿಸುವುದಕ್ಕೇ ಮೀಸಲಿಟ್ಟು ರೂಪಿಸಲಾಗಿದೆ. ಸಲಗದ ನಂತರ ಮತ್ತೊಮ್ಮೆ ಖಾಕಿ ತೊಟ್ಟಿರುವ ಡಾಲಿ ಧನಂಜಯ ವ್ಹಾವ್ ಎನ್ನಿಸುತ್ತಾರೆ. ಹಾಡಿಗೆ ಸಾಹಿತ್ಯ ನೀಡಿರುವುದು ಸಂತೋಷ್ ಆನಂದರಾಮ್. ಅಜನೀಶ್ ಲೋಕನಾಥ್ ಸಂಗೀತವಿದ್ದು, ನಕಾಶ್ ಅಜೀಜ್ ಧ್ವನಿಯಲ್ಲಿ ಒಂದು ಖಡಕ್‍ತನವಿದೆ.

    ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಯೋಗಿ ಬಿ.ರಾಜ್, ಈ ಹಾಡಿನ ರ್ಯಾಪ್ ಸಾಹಿತ್ಯವನ್ನು ಬರೆದಿರುವುದಷ್ಟೇ ಅಲ್ಲ, ಹಾಡನ್ನೂ ಹಾಡಿದ್ದಾರೆ. ಕಾರ್ತಿಕ್ ಗೌಡ ಹಾಗೂ ಯೋಗಿ ಬಿ.ರಾಜ್ ಒಟ್ಟಾಗಿ ನಿರ್ಮಿಸುತ್ತಿರುವ ಚಿತ್ರ ರಿಲೀಸ್ ಆಗುವುದು ಮಾರ್ಚ್ 30ಕ್ಕೆ. ಒಂದು ತಿಂಗಳು ಮೊದಲೇ ಚಿತ್ರದ ಪ್ರಮೋಶನ್ ಶುರುವಾಗಿದೆ.

    ಡಾಲಿಗೆ ಅಮೃತಾ ಅಯ್ಯಂಗಾರ್ ಈ ಚಿತ್ರದಲ್ಲಿ ಮತ್ತೊಮ್ಮೆ ಹೀರೋಯಿನ್. ಅಚ್ಯುತ್ ಕುಮಾರ್, ಮಯೂರಿ ನಟರಾಜ್, ರಾಜೇಶ್ ನಟರಾಜ್, ನವೀನ್ ಶಂಕರ್.. ಹೀಗೆ ಚೆಂದದ ತಾರಾಗಣವಿರುವ ಚಿತ್ರ ಹೊಯ್ಸಳ.

  • ಹೊಯ್ಸಳನ ಖದರು..ಖಬರು..ಬ್ಯಾರೇನ ಐತಿ..

    ಹೊಯ್ಸಳನ ಖದರು..ಖಬರು..ಬ್ಯಾರೇನ ಐತಿ..

    ನೀನು ಕಂಡಂಗಲ್ಲ ನಮ್ಮ ಬಾಳೇವು..

    ಬ್ಯಾರೇನ ಐತಿ.. ಬ್ಯಾರೇನ ಐತಿ..

    ಹುಟು ಬಾಳೇವು..

    ಬ್ಯಾರೇನ ಐತಿ.. ಬ್ಯಾರೇನ ಐತಿ..

    ಇದನ್ನು ಬರೆದವರೂ ಯೋಗರಾಜ್ ಭಟ್. ಅರೆ ಇದು ಎಂಥಾ ಭಾವನೆ.. ಎಂಬ ದಂಪತಿಗಳ ಪ್ರೇಮಗೀತೆ ಬರೆದು ಹೃದಯದಲ್ಲೊಂದು ಭಾವನೆಗಳ ಸಪ್ಪಳ ಮೂಡಿಸಿದ್ದ ಯೋಗರಾಜ್ ಭಟ್, ಈ ಹಾಡಿನಲ್ಲಿ ಬೇರೆಯದೇ ಜಗತ್ತನ್ನು ಪರಿಚಯಿಸಿದ್ದಾರೆ. ಈ ಹಾಡು ಕೇವಲ ಹಾಡಲ್ಲ.. ಜೀವನ ದರ್ಶನ. ಉತ್ತರ ಕರ್ನಾಟಕದ ಜನಪದ ಸೊಗಡಿರುವ ಈ ಹಾಡಿನಲ್ಲಿ ಜೀವನದ ದರ್ಶನವನ್ನೇ ಮಾಡಿಸಿದ್ದಾರೆ. ಜನಪದ ಸಂಗೀತದ ಹಿನ್ನೆಲೆಯಲ್ಲಿಯೇ ಬಂದಿರುವ ಹಾಡಿಗೆ ಅಜನೀಶ್ ಲೋಕನಾಥ್ ಅದ್ಭುತ ಸಂಗೀತವನ್ನೂ ನೀಡಿದ್ದಾರೆ. ಸ್ವತಃ ಹಾಡನ್ನೂ ಹಾಡಿರುವ ಅಜನೀಶ್, ಹಾಡಿನ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಹಾಡಿನ ಪ್ರತಿ ಸಾಲುಗಳನ್ನು ಅನುಭವಿಸಿ ಹಾಡಿದ್ದಾರೆನ್ನಿಸುತ್ತಿದೆ.

    ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚುವರಿ ಚಿತ್ರೀಕರಣ ಮಾಡಿರುವ ‘ಗುರುದೇವ್ ಹೊಯ್ಸಳ’ ಚಿತ್ರಕ್ಕೂ ಹಾಗೂ ಉತ್ತರ ಕರ್ನಾಟಕಕ್ಕೂ ಏನೋ ಒಂದು ವಿಶೇಷ ಕನೆಕ್ಷನ್ ಇರುವುದಂತೂ ಹೌದು. ಇದನ್ನು ಚಿತ್ರತಂಡವೇ ಸಾಕಷ್ಟು ಬಾರಿ ಹೇಳಿದ್ದುಂಟು. ಬ್ಯಾರೇನೇ ಐತಿ  ಎನ್ನುವ ಈ ಹಾಡು ಉತ್ತರ ಕರ್ನಾಟಕ ಭಾಗದಲ್ಲಿ ವಾಸವಾಗಿರುವ ಅಲೆಮಾರಿಗಳ ಜೀವನ ಹೇಗಿರುತ್ತದೆ ಎಂದು ವರ್ಣನೆ ಮಾಡುತ್ತದೆ. ಗುರುದೇವ್ ಹೊಯ್ಸಳ ಚಿತ್ರದಲ್ಲಿ ಅಲೆಮಾರಿಗಳಿಗೆ ವಿಶೇಷ ಪ್ರಾಮುಖ್ಯತೆ ಸಿಕ್ಕಂತಿದೆ. ಈ ಚಿತ್ರಕ್ಕೂ ಅಲೆಮಾರಿಗಳಿಗೂ ಏನು ಸಂಬಂಧ, ಯಾಕೆ ಅವರ ಪಂಗಡವನ್ನು ಈ ಸಿನಿಮಾ ಹಾಡಿನಲ್ಲಿ ಬಳಸಿಕೊಂಡಿದ್ದಾರೆ ಎನ್ನುವುದು ಸಿನೆಮಾದಲ್ಲೇ ನೋಡಬೇಕಿದೆ.

    ಡಾಲಿ ಧನಂಜಯ ಅಭಿನಯದ 25ನೇ ಸಿನೆಮಾ ಗುರುದೇವ್ ಹೊಯ್ಸಳ. ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್ನಲ್ಲಿ ಯೋಗಿ. ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ನಿರ್ಮಿಸಿರುವ ‘ಗುರುದೇವ್ ಹೊಯ್ಸಳ’ ಸಿನಿಮಾ ಇದೇ ಮಾರ್ಚ್ 30ರಂದು ವಿಶ್ವದಾದ್ಯಂತ ಕನ್ನಡ ಭಾಷೆಯಲ್ಲಿಯೇ ಬಿಡುಗಡೆಯಾಗಲಿದೆ. ವಿಜಯ್ ಎನ್ ರವರು ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.  ಡಾಲಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್ ಹಾಗೂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.