2021 ಮುಗೀತು. 2022 ಶುರುವಾಯ್ತು. 100 ಚಿತ್ರಗಳು ರಿಲೀಸ್ ಆದ 2021ರಲ್ಲಿ ಹಲವರು ಗೆದ್ದರು. ಮತ್ತೂ ಕೆಲವರು ಬಿದ್ದರು. ಇಷ್ಟೆಲ್ಲದರ ಮಧ್ಯೆ ವರ್ಷವಿಡೀ ಗೆದ್ದವರು ಯಾರು ಎಂದು ಹುಡುಕಿದರೆ ಅನುಮಾನವಿಲ್ಲದಂತೆ ಸಿಗುವ ಹೆಸರು ಡಾಲಿ ಧನಂಜಯ್ ಅವರದ್ದು.
ಡಾಲಿಯವರ 2021ರ ಜರ್ನಿ ಶುರುವಾಗಿದ್ದು ಪೊಗರು ಚಿತ್ರದಿಂದ. ಅಲ್ಲಿ ಅವರದ್ದು ಪುಟ್ಟ ಪಾತ್ರ. ಆದರೆ ಸಿನಿಮಾ ಗೆದ್ದಿತು.
ಪೊಗರು ನಂತರ ಯುವರತ್ನ. ಅಪ್ಪು ಎದುರು ನಟಿಸಿ ಸೈ ಎನಿಸಿಕೊಂಡರು. ಯುವರತ್ನ ಚಿತ್ರಕ್ಕೆ ಲಾಕ್ ಡೌನ್ ಬಿಸಿ ತಟ್ಟಿದರೂ ರಿಲೀಸ್ ಆದ ಕೆಲವೇ ದಿನಗಳಲ್ಲಿ ಹಿಟ್ ಲಿಸ್ಟ್ ಸೇರಿದ್ದ ಚಿತ್ರ ಗೆದ್ದಿತ್ತು.
ಯುವರತ್ನ ನಂತರ ಬಂದಿದ್ದು ಸಲಗ. ಹೀರೋ ಕಂ ಡೈರೆಕ್ಟರ್ ದುನಿಯಾ ವಿಜಯ್ ಎದುರು ಘರ್ಜಿಸಿದ ಡಾಲಿ ನಂತರ ಮಿಂಚಿದ್ದು ಓಟಿಟಿಯಲ್ಲಿ.
ಒಟಿಟಿಯಲ್ಲಿ ರತ್ನನ್ ಪ್ರಪಂಚ ಚಿತ್ರದ ಮೂಲಕ ಗೆದ್ದರು. ಗಿಚ್ಚಗಿಲಿಯಾಗಿ ಸಂಭ್ರಮಿಸುತ್ತಿದ್ದ ಡಾಲಿಗೆ ನಂತರ ಸಕ್ಸಸ್ ಕೊಟ್ಟಿದ್ದು ತೆಲುಗು ಚಿತ್ರರಂಗ.
ಈಗಲೂ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿರುವ ಪುಷ್ಪ ಚಿತ್ರದಲ್ಲಿ ಡಾಲಿ ಅವರದ್ದು ಪ್ರಮುಖ ಪಾತ್ರ.
ಪುಷ್ಪ ರಿಲೀಸ್ ಆದ ಮರುವಾರವೇ ಕನ್ನಡದಲ್ಲಿ ರಿಲೀಸ್ ಆದ ಸಿನಿಮಾ ಬಡವ ರಾಸ್ಕಲ್. ಧನಂಜಯ್ ಈ ಚಿತ್ರದ ಮೂಲಕ ನಿರ್ಮಾಪಕರೂ ಆದರು. ಗೆದ್ದರು. ಮಾಸ್ ಮತ್ತು ಕ್ಲಾಸ್ ಎರಡೂ ವರ್ಗದ ಪ್ರೇಕ್ಷಕರನ್ನು ರಂಜಿಸಿದ ಧನಂಜಯ್ , ವರ್ಷದ ಹೀರೋ ಎಂದರೆ ತಪ್ಪಾಗಲಿಕ್ಕಿಲ್ಲ.