` luckyman, - chitraloka.com | Kannada Movie News, Reviews | Image

luckyman,

  • ಅಪ್ಪು ಅಪ್ಪಿಕೊಂಡಿದ್ದ ಕೃಷ್ಣಗೆ ಅಪ್ಪು ಅಭಿಮಾನಿ ದೇವರ ಅಪ್ಪುಗೆ

    ಅಪ್ಪು ಅಪ್ಪಿಕೊಂಡಿದ್ದ ಕೃಷ್ಣಗೆ ಅಪ್ಪು ಅಭಿಮಾನಿ ದೇವರ ಅಪ್ಪುಗೆ

    ಡಾರ್ಲಿಂಗ್ ಕೃಷ್ಣಗೂ ಪುನೀತ್ ರಾಜಕುಮಾರ್ ಅವರಿಗೂ ವೃತ್ತಿ ಬದುಕಿನ ಸಂಬಂದವಷ್ಟೇ ಅಲ್ಲ. ಅದನ್ನೂ ಮೀರಿದ ಬಾಂಧವ್ಯವಾಗಿತ್ತು. ಅಪ್ಪು ಜೊತೆ ಈ ಹಿಂದೆ ನಟರಾಗಿ, ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅಪ್ಪು ಅಕಾಲಿಕ ಮರಣದ ಸಂದರ್ಭದಲ್ಲಿ ಪುಟ್ಟ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಆದರೆ.. ವಿಧಿಯಾಟ ನೋಡಿ.. ಅಪ್ಪು ಅಭಿನಯಿಸಿರುವ ಕೊನೆಯ ಸಿನಿಮಾ ಲಕ್ಕಿಮ್ಯಾನ್ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಹೀರೋ.

    ಚಿತ್ರದಲ್ಲಿ ದೇವರು ಅಂದರೆ ಅಪ್ಪು, ದೇವಲೋಕಕ್ಕೆ ವಾಪಸ್ ಹೋಗುವಾಗ ನಾಯಕ ಡಾರ್ಲಿಂಗ್ ಕೃಷ್ಣ ನಿಮ್ಮನ್ನು ಕೊನೆಯದಾಗಿ ಅಪ್ಪಿಕೊಳ್ಳಲಾ ಎನ್ನುತ್ತಾರೆ. ಅಪ್ಪು ಅಪ್ಪಿಕೊಳ್ತಾನೆ. ಅಭಿಮಾನಿಗಳಿಗಂತೂ ಈಗ ಡಾರ್ಲಿಂಗ್ ಕೃಷ್ಣ ಅದೃಷ್ಟವಂತ ಎನಿಸಿಕೊಂಡುಬಿಟ್ಟಿದ್ದಾರೆ.

    ಜನಕ್ಕೆ ಆ ಸೀನ್ ಎಷ್ಟು ಕನೆಕ್ಟ್ ಆಗಿದೆ ಅಂದ್ರೆ, ಅಭಿಮಾನಿಗಳು ಬರುತ್ತಾರೆ. ಅಪ್ಪು ಅವರನ್ನು ತಬ್ಬಿಕೊಂಡ ನೀವೇ ಲಕ್ಕಿಮ್ಯಾನ್. ನಿಮ್ಮನ್ನೊಮ್ಮೆ ತಬ್ಬಿಕೊಳ್ಳಲಾ ಎಂದು ಕಣ್ಣೀರು ಹಾಕುತ್ತಲೇ ಕೇಳುತ್ತಾರೆ. ತಬ್ಬಿಕೊಳ್ತಾರೆ. ಲಕ್ಕಿಮ್ಯಾನ್ ನಾನು ಎಂದೆಂದಿಗೂ ಮರೆಲಾಗದ ಸಿಹಿ ನೆನಪು ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ.

    ಮೊದ ಮೊದಲು ಅಶ್ವಿನಿ ಪುನೀತ್ ರಾಜಕುಮಾರ್ ಸಿನಿಮಾ ನೋಡಲು ಒಪ್ಪಲಿಲ್ಲ. ನಾವೆಲ್ಲ ಹೋಗಿ ಕರೆದ ಮೇಲೆ ಬಂದು ನೋಡಿ ಚಿತ್ರವನ್ನು ಮೆಚ್ಚಿಕೊಂಡರು. ದೇವರ ದರ್ಶನಕ್ಕೆ ದೇವಸ್ಥಾನಕ್ಕೆ ಹೋಗಬೇಕು. ಅಪ್ಪು ದರ್ಶನಕ್ಕೆ ಥಿಯೇಟರಿಗೇ ಬನ್ನಿ ಎಂದು ಮನವಿ ಮಾಡಿದ್ದಾರೆ ಲಕ್ಕಿಮ್ಯಾನ್.

    ನಮ್ಮ ಚಿತ್ರದಲ್ಲಿ ನಟಿಸಿದರೂ ಅವರನ್ನು ಭೇಟಿ ಮಾಡೋಕೆ ಆಗಲಿಲ್ಲ. ಈಗಿನ ಪ್ರೇಕ್ಷಕರ  ರಿಯಾಕ್ಷನ್ ನೋಡ್ತಿದ್ರೆ ಅಪ್ಪು ಅಭಿಮಾನ ಗೊತ್ತಾಗುತ್ತೆ. ಚಿತ್ರವನ್ನು ನೋಡುವಾಗಲಂತೂ ಗಂಟಲು ಹರಿಯುವಂತೆ ಕಿರುಚಿದ್ದೇನೆ ಎನ್ನುತ್ತಾರೆ ನಾಯಕಿ ಸಂಗೀತಾ ಶೃಂಗೇರಿ.

    ಇದು ಅಪ್ಪು ಕೊಟ್ಟ ಗೆಲುವು. ಅವರೇ ನಿಂತು ಮುನ್ನಡೆಸಿದ ಸಿನಿಮಾ. ಅವರ ಆಶೀರ್ವಾದದಂತೆಯೇ ಗೆಲುವು ಸಿಕ್ಕಿದೆ ಎನ್ನುವುದು ಡೈರೆಕ್ಟರ್ ನಾಗೇಂದ್ರ ಪ್ರಸಾದ್ ಮಾತು.

    ಡಾರ್ಲಿಂಗ್ ಕೃಷ್ಣ ಎದುರು ಸಂಗೀತಾ ಶೃಂಗೇರಿ, ರೋಷನಿ ಪ್ರಕಾಶ್ ನಾಯಕಿಯರಾಗಿದ್ದಾರೆ. ಸಾಧು ಕೋಕಿಲ, ನಾಗಭೂಷಣ್, ಸುಧಾ ಬೆಳವಾಡಿ ನಟಿಸಿರೋ ಚಿತ್ರದಲ್ಲಿ ಪ್ರಭುದೇವ-ಅಪ್ಪು ಡ್ಯಾನ್ಸ್ ಕೂಡಾ ಹೈಲೈಟ್. ನಾಗೇಂದ್ರ ಪ್ರಸಾದ್ ನಿರ್ದೇಶನದ ಚಿತ್ರಕ್ಕೆ ಮೀನಾಕ್ಷಿ ಸುಂದರಂ ಹಾಗೂ ಆರ್.ಸುಂದರ ಕಾಮರಾಜ್ ನಿರ್ಮಾಪಕರು.

  • ಅಪ್ಪು ಒಪ್ಪಿಕೊಂಡಿದ್ದಕ್ಕೇ ಮಾಡಿದ ಚಿತ್ರ ಲಕ್ಕಿಮ್ಯಾನ್ : ನಾಗೇಂದ್ರ ಪ್ರಸಾದ್

    ಅಪ್ಪು ಒಪ್ಪಿಕೊಂಡಿದ್ದಕ್ಕೇ ಮಾಡಿದ ಚಿತ್ರ ಲಕ್ಕಿಮ್ಯಾನ್ : ನಾಗೇಂದ್ರ ಪ್ರಸಾದ್

    ನಾಗೇಂದ್ರ ಪ್ರಸಾದ್. ಮೂಗೂರು ಸುಂದರ್ ಪುತ್ರ. ಪ್ರಭುದೇವ, ರಾಜು ಸುಂದರಂ ಇವರ ಅಣ್ಣ. ಕೆರಿಯರ್ ವಿಷಯಕ್ಕೆ ಬಂದರೆ ಇವರೂ ಅಣ್ಣಂದಿರ ಹಾಗೆ.. ಮೊದಲು ಕೊರಿಯೋಗ್ರಾಫರ್ ಆಗಿದ್ದವರೇ. ಸಿನಿಮಾಗಳಲ್ಲಿ ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದವರು ಮನಸೆಲ್ಲ ನೀನೆ ಚಿತ್ರದ ಹೀರೋ ಆದರು. ಈಗ ಲಕ್ಕಿಮ್ಯಾನ್ ಮೂಲಕ ಡೈರೆಕ್ಟರ್ ಕೂಡಾ ಆಗಿದ್ದಾರೆ.

    ಡೈರೆಕ್ಟರ್ ಆಗಬೇಕು ಎಂದುಕೊಂಡಾಗ ಇಷ್ಟವಾಗಿದ್ದು ಓ ಮೈ ಕಡವುಳೆ ಸಿನಿಮಾ. ಆದರೆ ಅದನ್ನು ಕನ್ನಡದಲ್ಲಿ ಮಾಡಬೇಕು ಎಂದುಕೊಂಡಾಗ ನೆನಪಾಗಿದ್ದೇ ಪುನೀತ್ ರಾಜಕುಮಾರ್. ಅವರು ಓಕೆ ಎಂದರಷ್ಟೇ ಮುಂದಕ್ಕೆ ಹೋಗೋಣ ಎಂದುಕೊಂಡು ಅಪ್ರೋಚ್ ಮಾಡಿದೆ. ಖುಷಿಯಾಗಿ ಒಪ್ಪಿಕೊಂಡರು. ಬಹುಶಃ ಪುನೀತ್ ಓಕೆ ಎನ್ನದಿದ್ದರೆ ನಾನು ಈ ಚಿತ್ರ ಮಾಡುತ್ತಲೇ ಇರಲಿಲ್ಲ ಎನ್ನುತ್ತಾರೆ ನಾಗೇಂದ್ರ ಪ್ರಸಾದ್.

    ತಮಿಳಿನಲ್ಲಿ ವಿಜಯ್ ಸೇತುಪತಿ ಮಾಡಿದ್ದ ಪಾತ್ರವನ್ನ ಇಲ್ಲಿ ಪುನೀತ್ ಮಾಡಿದ್ದಾರೆ. ಅವರದ್ದೇ ಧ್ವನಿಯಲ್ಲಿ ನೀವು ಪುನೀತ್ ಅವರನ್ನು ನೋಡಬಹುದು. ಪುನೀತ್ ಯೆಸ್ ಎಂದ ಮೇಲೆ ಲವ್ ಮಾಕ್ಟೇಲ್ ನೋಡಿದೆ. ಡಾರ್ಲಿಂಗ್ ಕೃಷ್ಣ ಹೀರೋ ಆಗಿ ಆಯ್ಕೆಯಾದರು ಎನ್ನುವುದು ನಾಗೇಂದ್ರ ಪ್ರಸಾದ್ ಮಾತು.

    ನಾವು ನಮ್ಮ ಪ್ರೀತಿ ಪಾತ್ರರ ವಿಷಯದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶ ಸಿಕ್ಕರೆ ಹೇಗಿರುತ್ತೆ ಅನ್ನೋ ಕಾನ್ಸೆಪ್ಟ್‍ನಲ್ಲಿ ಮೂಡಿರುವ ಸಿನಿಮಾ. ಸಂಗೀತಾ ಶೃಂಗೇರಿ ಮತ್ತು ರೋಷನಿ ಪ್ರಕಾಶ್ ನಾಯಕಿಯರಾಗಿ ನಟಿಸಿದ್ದಾರೆ. ಆದರೆ ಚಿತ್ರದ ಹೈಲೈಟ್ ಪುನೀತ್ ರಾಜಕುಮಾರ್. ಮುಕ್ಕಾಲು ಗಂಟೆ ಹೊತ್ತು ತೆರೆಯ ಮೇಲಿರೋ ಪುನೀತ್ ಚಿತ್ರದ ಸೂತ್ರಧಾರಿಯೂ ಹೌದು.

    ಈಗ ದೇವರಾಗಿ ಬಂದಿದ್ದಾರೆ. 

  • ಅಪ್ಪು ಸರ್`ನ ಭೇಟಿಯಾಗಲೇ ಇಲ್ಲ : ಲಕ್ಕಿಮ್ಯಾನ್ ನಾಯಕಿ ಸಂಗೀತಾ ಶೃಂಗೇರಿ

    ಅಪ್ಪು ಸರ್`ನ ಭೇಟಿಯಾಗಲೇ ಇಲ್ಲ : ಲಕ್ಕಿಮ್ಯಾನ್ ನಾಯಕಿ ಸಂಗೀತಾ ಶೃಂಗೇರಿ

    ಲಕ್ಕಿಮ್ಯಾನ್ ಚಿತ್ರದ ನಾಯಕಿ ಸಂಗೀತಾ ಶೃಂಗೇರಿ. ಚಾರ್ಲಿ 777 ನಂತರ ಸಂಗೀತಾ ನಟಿಸುತ್ತಿರೋ ಸಿನಿಮಾ. ಇದು ಅಪ್ಪು ಅಭಿನಯದ ಕೊನೆಯ ಚಿತ್ರವೂ ಹೌದು. ಆದರೆ ಅಪ್ಪು ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲವಂತೆ.

    ಅಪ್ಪು ಸರ್ ಜೊತೆ ನಾನು ಡ್ಯಾನ್ಸ್ ಶೂಟ್‍ನಲ್ಲಿ ಭೇಟಿಯಾಗುತ್ತೇವೆ ಎಂದುಕೊಂಡಿದ್ದೆ. ಕೊನೆಯಲ್ಲಿ ಎಲ್ಲವೂ ಬದಲಾಗಿ ಹೋಯ್ತು. ಡ್ಯಾನ್ಸ್ ಶೂಟಿಂಗ್‍ಗೆ ಬರೋಕೆ ಆಗಲಿಲ್ಲ. ಆದರೆ ಪ್ರೆಸ್‍ಮೀಟ್‍ನಲ್ಲಿ ಸಿಗುತ್ತೇನೆ ಎಂದುಕೊಂಡಿದ್ದೆ. ವಿಧಿಯಾಟವೇ ಬೇರೆಯಾಗಿತ್ತು ಎಂದು ಭಾವುಕರಾಗುತ್ತಾರೆ ಸಂಗೀತಾ ಶೃಂಗೇರಿ.

    ನಟನೆ ಕೂಡಾ ದೊಡ್ಡ ಜವಾಬ್ದಾರಿ. ಈಸಿ ವರ್ಕ್ ಅಲ್ಲ. ಪಾತ್ರ ಯಾವುದೇ ಇರಲಿ, ಅದಕ್ಕೆ ಡೆಡಿಕೇಷನ್ ಇರಬೇಕು. ಹರಹರ ಮಹಾದೇವ ಸೀರಿಯಲ್‍ನಿಂದಲೂ ನಾನು ಪಾಲಿಸಿಕೊಂಡು ಬಂದಿರುವ ತತ್ವ ಇದು ಎನ್ನುವ ಸಂಗೀತಾಗೆ ಲಕ್ಕಿಮ್ಯಾನ್ ಚಿತ್ರದಲ್ಲಿನ ಕಥೆ ಹಾಗೂ ನನ್ನ ಪಾತ್ರ ಎರಡೂ ಇಷ್ಟವಾಗಿದೆ. ಖಂಡಿತಾ ಸಕ್ಸಸ್ ಆಗುತ್ತೆ ಎನ್ನುತ್ತಾರೆ.

    ಇದು ನಾನ್ ಕಡವುಳೆ ಚಿತ್ರದ ರೀಮೇಕ್. ಡೈರೆಕ್ಟರ್ ಮೊದಲು ರೀಮೇಕ್ ಹಾಗೂ ಇಬ್ಬರು ನಾಯಕಿಯರು ಎಂದಾಗ ನಾನು ಬೇಡ ಎನ್ನುತ್ತಿದೆ. ಇಬ್ಬರು ಹೀರೋಯಿನ್ಸ್ ಇರೋ ಚಿತ್ರದಲ್ಲಿ ನಟಿಸಬಾರದು ಎಂದು ನನಗೆ ನಾನೇ ಹಾಕಿಕೊಂಡಿರುವ ಬೌಂಡರಿ ಲೈನ್. ಆದರೆ ನಿರ್ದೇಶಕರು ಒಂದ್ ಸಾರಿ ನೋಡಿ ಎಂದು  ಬಲವಂತ ಮಾಡಿದಾಗ ಕಥೆ ಹಾಗೂ ಅನು ಪಾತ್ರದೊಳಗೆ ಕಳೆದುಹೋದೆ. ಇದು ನಮ್ಮ ಬಾಲ್ಯವನ್ನು ನೆನಪಿಸುವ ಪಾತ್ರ ಎನ್ನುತ್ತಾರೆ ಸಂಗೀತಾ ಶೃಂಗೇರಿ.

    ಡಾರ್ಲಿಂಗ್ ಕೃಷ್ಣ ಹೀರೋ ಆಗಿರೋ ಚಿತ್ರದಲ್ಲಿ ಸಂಗೀತಾ ಶೃಂಗೇರಿ, ರೋಷನಿ ಪ್ರಕಾಶ್ ನಾಯಕಿಯರು. ನಾಗೇಂದ್ರ ಪ್ರಸಾದ್ ನಿರ್ದೇಶನದ ಚಿತ್ರದಲ್ಲಿ ಪುನೀತ್ ಹಾಗೂ ಪ್ರಭುದೇವ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಮೀನಾಕ್ಷಿ ಸುಂದರಂ ಹಾಗೂ ಆರ್.ಸುಂದರ ಕಾಮರಾಜ್ ನಿರ್ಮಾಣದ  ಸಿನಿಮಾ ಇದು.

  • ಆಗಸ್ಟ್'ನಲ್ಲಿ ಪುನೀತ್ ದೇವರ ಅವತಾರದ ದರ್ಶನ

    ಆಗಸ್ಟ್'ನಲ್ಲಿ ಪುನೀತ್ ದೇವರ ಅವತಾರದ ದರ್ಶನ

    ಪುನೀತ್ ಹೀರೋ ಆಗಿ ನಟಿಸಿದ್ದ ಕೊನೆಯ ಸಿನಿಮಾ ಜೇಮ್ಸ್ ಮಾರ್ಚ್‍ನಲ್ಲಿ ರಿಲೀಸ್ ಆಗಿ ಸಕ್ಸಸ್ ಕಂಡಿತ್ತು. ಈಗ ಅಪ್ಪು ವಿಶೇಷ ಪಾತ್ರದಲ್ಲಿ ನಟಿಸಿದ್ದ ಲಕ್ಕಿ ಮ್ಯಾನ್ ರಿಲೀಸ್ ಆಗುವ ಸಮಯ. ಆಗಸ್ಟ್‍ನಲ್ಲಿ ಲಕ್ಕಿಮ್ಯಾನ್ ರಿಲೀಸ್ ಆಗುತ್ತಿದ್ದು, ಅಧಿಕೃತ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.

    ಈ ಚಿತ್ರದಲ್ಲಿ ಪುನೀತ್ ದೇವರ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭುದೇವ ಅವರೊಂದಿಗೆ ಸ್ಟೆಪ್ಸ್ ಹಾಕಿದ್ದಾರೆ. ಪ್ರಭುದೇವ ಅವರ ತಮ್ಮ ನಾಗೇಂದ್ರ ಪ್ರಸಾದ್ ನಿರ್ದೇಶನದ ಚಿತ್ರವಿದು.

    ಲಕ್ಕಿಮ್ಯಾನ್ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಹೀರೋ. ಸಂಗೀತಾ ಶೃಂಗೇರಿ ಮತ್ತು ರೋಷನಿ ಪ್ರಕಾಶ್ ನಾಯಕಿಯರು. ತಮಿಳಿನ ಓ ಮೈ ಕಡವುಳೆ ಚಿತ್ರದ ರೀಮೇಕ್ ಇದು.

  • ತೆರೆ ಮೇಲೆ ದೇವರ ದರ್ಶನ : ಸಂಭ್ರಮ.. ಕಣ್ಣೀರು.. ರಾಘಣ್ಣನೂ ಶಿಳ್ಳೆ ಹೊಡೆದಾಗ..

    ತೆರೆ ಮೇಲೆ ದೇವರ ದರ್ಶನ : ಸಂಭ್ರಮ.. ಕಣ್ಣೀರು.. ರಾಘಣ್ಣನೂ ಶಿಳ್ಳೆ ಹೊಡೆದಾಗ..

    ಕೋರ್ಟಿನ ಹಾಲಿನಲ್ಲಿ ನಾಯಕ ಡಾರ್ಲಿಂಗ್ ಕೃಷ್ಣ ಎಂಟ್ರಿಯಾಗುತ್ತಿದ್ದಂತೆ ಕತ್ತಲು.. ಕತ್ತಲು.. ಗಾಡಾಂಧಕಾರ.. ಸಾಧು ಬಂದು ನಮ್ಮ ಬಾಸ್ ಅಲ್ಲಿದ್ದಾರೆ ನೋಡು.. ಎನ್ನುತ್ತಿದ್ದಂತೆಯೇ..

    ಅಸತೋಮಾ ಸದ್ಗಮಯ.. ಸಮತೋಮಾ ಜ್ಯೋತಿರ್ಗಮಯ.. ಬೆಳಕು ಪ್ರತ್ಯಕ್ಷ.. ಪುನೀತ್ ರಾಜಕುಮಾರ ಮಾಸದ ಮುಗುಳ್ನಗೆಯೊಂದಿಗೆ ತೆರೆ ಮೇಲೆ ಪ್ರತ್ಯಕ್ಷವಾಗುತ್ತಿದ್ದಂತೆಯೆ.. ನೋಡುತ್ತಿದ್ದ ಪ್ರೇಕ್ಷಕ ಅಭಿಮಾನದಿಂದ.. ಕಣ್ಣೀರಿನಲ್ಲಿ ಮುಳುಗುತ್ತಾನೆ. ಶಿಳ್ಷೆ.. ಚಪ್ಪಾಳೆಗಳ ಸಂಭ್ರಮ ಮುಗಿಲು ಮುಟ್ಟುತ್ತದೆ. ಸಿನಿಮಾ ಥಿಯೇಟರಿಗೆ ಬಂದಿದ್ದ ಅಣ್ಣ ರಾಘವೇಂದ್ರ ರಾಜಕುಮಾರ್ ಕೂಡಾ ಶಿಳ್ಷೆ ಹೊಡೆದರೆಂದರೆ..

    ಲಕ್ಕಿಮ್ಯಾನ್ ಚಿತ್ರ ನೋಡಿದವರ ಅನುಭವಗಳಿವು. ತಮ್ಮ ಚಿತ್ರಗಳಲ್ಲಿ  ಕುಟುಂಬ, ಬಾಂಧವ್ಯ, ಪ್ರೀತಿಯನ್ನೇ ಹಂಚಿದ್ದ ಪುನೀತ್ ಅವರ ಇಮೇಜ್‍ಗೆ ತಕ್ಕಂತೆಯೇ ಇದೆ ಲಕ್ಕಿಮ್ಯಾನ್ ಚಿತ್ರದ ದೇವರ ಪಾತ್ರ. ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಷನಿ ಪ್ರಕಾಶ್ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ. ಆದರೆ.. ಪ್ರೇಕ್ಷಕ ಮಂತ್ರಮುಗ್ಧರಾಗುವುದು ಮಾತ್ರ ಪುನೀತ್ ಅವರಿಗೇ.

    ನಾಗೇಂದ್ರ ಪ್ರಸಾದ್ ನಿರ್ದೇಶನದ ಕೊನೆಯಲ್ಲಿ ಉಳಿಯುವುದು ಅಪ್ಪು. ಅವರ ಮುಗುಳ್ನಗೆ ಹಾಗೂ ಕೊನೆಯಲ್ಲಿ ಬರುವ ಅಪ್ಪು-ಪ್ರಭುದೇವ ಡಾನ್ಸ್.

  • ನಿಜವಾದ ಲಕ್ಕಿಮ್ಯಾನ್ ನಾನೇ : ಡಾರ್ಲಿಂಗ್ ಕೃಷ್ಣ

    ನಿಜವಾದ ಲಕ್ಕಿಮ್ಯಾನ್ ನಾನೇ : ಡಾರ್ಲಿಂಗ್ ಕೃಷ್ಣ

    ನಾಳೆ ಲಕ್ಕಿಮ್ಯಾನ್ ಚಿತ್ರ ಬಿಡುಗಡೆ. ಚಿತ್ರದ ಹೀರೋ ಡಾರ್ಲಿಂಗ್ ಕೃಷ್ಣ. ಅವರೇ ಲಕ್ಕಿಮ್ಯಾನ್. ಸಂಗೀತಾ ಶೃಂಗೇರಿ ಮತ್ತು ರೋಷನಿ ಪ್ರಕಾಶ್ ನಾಯಕಿಯಾಗಿರೋ ಚಿತ್ರಕ್ಕೆ ನಾಗೇಂದ್ರ ಪ್ರಸಾದ್ ನಿರ್ದೇಶಕ. ಅಪ್ಪು ಅಭಿನಯದ ಕೊನೆಯ ಚಿತ್ರದಲ್ಲಿ ಪ್ರಭುದೇವ ಕೂಡಾ ನಟಿಸಿದ್ದಾರೆ.

    ಈ ಚಿತ್ರದ ಆಫರ್ ಬಂದಾಗ ನಾನು ನಾನ್ ಕಡವುಳೆ ಚಿತ್ರ ನೋಡಿದೆ. ವಿಜಯ್ ಸೇತುಪತಿ ಪಾತ್ರ ಇಷ್ಟವಾಗಿತ್ತು.

    ಚಿತ್ರ ನೋಡಿದ್ದೆ. ನಾಗೇಂದ್ರ ಪ್ರಸಾದ್ 2 ತಿಂಗಳ ನಂತರ ಅಗ್ರಿಮೆಂಟ್‍ಗೆ ಸೈನ್ ಹಾಕೋಕೆ ಫೋನ್ ಮಾಡಿದರು. ಆದರೆ ಮಿಲನಾ ಒಪ್ಪಿರಲಿಲ್ಲ. ಈಗ ಕೆರಿಯರ್ ಬೆಳೆಯುತ್ತಿರೋ ಸಮಯದಲ್ಲಿ ರೀಮೇಕ್ ಬೇಕಾ ಎಂದು ಪ್ರಶ್ನೆಯೆತ್ತಿದರು. ಮಿಲನಾ ಅವರನ್ನು ಒಪ್ಪಿಸಿ ನಟಿಸೋಕೆ ರೆಡಿಯಾದೆ. ಆಮೇಲೆ ಪುನೀತ್ ಸರ್ ಜೊತೆಯಾದರು. ಲಕ್ಕಿಮ್ಯಾನ್ ಅಲ್ಲವೇ ಎನ್ನುವ ಡಾರ್ಲಿಂಗ್ ಕೃಷ್ಣಕ್ಕೆ ಪುನೀತ್ ಜೊತೆ ನಟಿಸುವುದು ಹೊಸದೇನಲ್ಲ.

    ನನಗೆ ಪುನೀತ್ ಅವರ ಜೊತೆ ನಟಿಸುವುದು ಹೊಸದಲ್ಲ. ನನಗೆ ಅವರು 10 ವರ್ಷಗಳಿಂದ ಗೊತ್ತು. ನನ್ನ ಕೆರಿಯರ್‍ನಲ್ಲಿ ಅವರ ಪಾತ್ರವೂ ಇದೆ. ಅಷ್ಟೇ ಅಲ್ಲ, ಜಾಕಿ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದಾಗ ಅವರಿಗೆ ನಿರ್ದೇಶನ ಮಾಡಿದ ಅನುಭವವೂ ಇದೆ. ಆದರೂ ಹೀರೋ ಆಗಿರುವ ಚಿತ್ರದಲ್ಲಿ ಅಪ್ಪು ಸರ್ ನಟಿಸುತ್ತಾರೆ ಎಂದಾಗ ನರ್ವಸ್ ಆಗಿದ್ದಂತೂ ನಿಜ. ಆದರೆ ಅವರೇ ಆ ಆತಂಕ ದೂರ ಮಾಡಿದರು ಎನ್ನುವ ಕೃಷ್ಣಗೆ ಅಪ್ಪು ಅವರ ಕೊನೆಯ ಚಿತ್ರಕ್ಕೆ ನಾನು ಹೀರೋ ಎನ್ನುವ ಪ್ರೀತಿ, ಅಭಿಮಾನ ಇದೆ. ಹೀಗಾಗಿಯೇ ನಾನು ನಿಜವಾದ ಲಕ್ಕಿಮ್ಯಾನ್ ಎನ್ನುತ್ತಾರೆ.

    ಚಿತ್ರದಲ್ಲಿ ಪುನೀತ್ ಜೊತೆ ಪ್ರಭುದೇವ ಕೂಡಾ ಇದ್ದಾರೆ. ಇಬ್ಬರು ನಾಯಕಿಯರಿದ್ದಾರೆ. ರಿಯಲ್ ಲೈಫಲ್ಲಿ ಮತ್ತು ರೀಲ್ ಲೈಫಲ್ಲಿ ಎರಡರಲ್ಲೂ ನಾನು ಲಕ್ಕಿಮ್ಯಾನ್ ಎನ್ನುವ ಕೃಷ್ಣ, ನಾಳೆಯ ರಿಲೀಸ್‍ಗೆ ಕಾಯುತ್ತಿದ್ದಾರೆ.

  • ಮತ್ತೆ ಬೇಕು ಅಂದ್ರೆ ಅಪ್ಪು ಸಿಗಲ್ಲ. ಈ ಸಿನಿಮಾ ಅಪ್ಪಿಕೊಳ್ಳಿ : ಕಿಚ್ಚ ಸುದೀಪ್

    ಮತ್ತೆ ಬೇಕು ಅಂದ್ರೆ ಅಪ್ಪು ಸಿಗಲ್ಲ. ಈ ಸಿನಿಮಾ ಅಪ್ಪಿಕೊಳ್ಳಿ : ಕಿಚ್ಚ ಸುದೀಪ್

    ಲಕ್ಕಿಮ್ಯಾನ್. ಸೆಪ್ಟೆಂಬರ್`ನಲ್ಲಿ ರಿಲೀಸ್ ಆಗುತ್ತಿರೋ ಸಿನಿಮಾ ಇದು. ನಾನ್ ಕಡುವುಳೆ ಚಿತ್ರದ ರೀಮೇಕ್ ಆಗಿರೋ ಲಕ್ಕಿಮ್ಯಾನ್ ಚಿತ್ರದಲ್ಲಿ ಪುನೀತ್ ರಾಜಕುಮಾರ್ ದೇವರ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭುದೇವ ಕೂಡಾ ನಟಿಸಿರೋ ಚಿತ್ರಕ್ಕೆ ಪ್ರಭುದೇವ  ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶಕ. ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಬಾರೋ ರಾಜ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಿದ ಚಿತ್ರತಂಡ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಿಚ್ಚ ಸುದೀಪ್, ರಾಘವೇಂದ್ರ ರಾಜಕುಮಾರ್, ಸಾಧುಕೋಕಿಲ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು.

    ಚಿತ್ರದ ಹೀರೋ ಡಾರ್ಲಿಂಗ್ ಕೃಷ್ಣ. ಅಪ್ಪು ಸರ್ ಜೊತೆ ನಟಿಸುವುದು ನನಗೆ ಹೊಸದಲ್ಲ. ಈ ಹಿಂದೆ ಅಭಿನಯಿಸಿದ್ದೇನೆ. ಆದರೆ ನಾನು ಲೀಡ್ ರೋಲಿನಲ್ಲಿರುವ ಚಿತ್ರದಲ್ಲಿ ಅಪ್ಪು ಸರ್ ನಟಿಸಿದ್ದಾರೆ ಎನ್ನುವುದು ನನ್ನ ಹೆಮ್ಮೆ ಎಂದರು ಕೃಷ್ಣ.

    ಈ ಚಿತ್ರವನ್ನು ಬಾಚಿ ತಬ್ಬಿಕೊಂಡು ಬಿಡಿ. ಅಪ್ಪುನ ಮತ್ತೆ ನೋಡಬಹುದು ಅನ್ನೋ ಕಾರಣಕ್ಕೆ ನಾನು ಟ್ರೇಲರ್ ನೋಡಿ ಖುಷಿಪಟ್ಟೆ. ಅಪ್ಪು ಅವರು ಈಗಿಲ್ಲ. ಅವರು ದೇವರಾಗಿದ್ದಾರೆ. ಈ ಸಿನಿಮಾದಲ್ಲೂ ದೇವರಾಗಿ ನಟಿಸಿದ್ದಾರೆ. ಮತ್ತೆ ಬೇಕು ಅಂದ್ರೂ ಅಪ್ಪು ನೋಡೋಕೆ ಸಿಗಲ್ಲ. ಅಪ್ಪುಗೆ ದೇವರ ಪಾತ್ರ ಚೆನ್ನಾಗಿ ಸೂಟ್ ಆಗುತ್ತೆ ಎಂದವರು ಸುದೀಪ್.

    ಚಿತ್ರದ ನಿರ್ದೇಶಕ ನಾಗೇಂದ್ರ ಪ್ರಸಾದ್ ಎಲ್ಲವನ್ನೂ ನಡೆಸಿಕೊಟ್ಟ ಅಣ್ಣ ಪ್ರಭುದೇವಗೆ ಥ್ಯಾಂಕ್ಸ್ ಹೇಳಿದರು. ಪ್ರಭುದೇವ ಫೋನಿನಲ್ಲಿ ಕೇಳಿದ ತಕ್ಷಣ ಮರುಮಾತನಾಡದೆ ಖುಷಿಯಿಂದ ಒಪ್ಪಿಕೊಂಡರಂತೆ ಅಪ್ಪು.

    ಡಾರ್ಲಿಂಗ್ ಕೃಷ್ಣ ಮತ್ತು ಸಂಗೀತಾ ಶೃಂಗೇರಿ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಅಪ್ಪು ಅತಿಥಿ ನಟರಾಗಿದ್ದರೂ ಅವರ ಪಾತ್ರ ಮುಕ್ಕಾಲು ಗಂಟೆ ಇರಲಿದೆಯಂತೆ.

    ಲಕ್ಕಿಮ್ಯಾನ್ ಒಂದು ರೀತಿಯಲ್ಲಿ ಅಪ್ಪು ನಟನೆಯ ಕಟ್ಟಕಡೆಯ ಸಿನಿಮಾ. ಇದಾದ ನಂತರ ಗಂಧದ ಗುಡಿ ಬರಲಿದೆಯಾದರೂ ಅದು ಸಾಕ್ಷ್ಯಚಿತ್ರ. ಸಿನಿಮಾ ಅಲ್ಲ.

  • ಲಕ್ಕಿ ಮ್ಯಾನ್ : ಅಪ್ಪು ದೇವರು ಅಭಿಮಾನಿಗಳ ಸಾಗರ

    ಲಕ್ಕಿ ಮ್ಯಾನ್ : ಅಪ್ಪು ದೇವರು ಅಭಿಮಾನಿಗಳ ಸಾಗರ

    ಲಕ್ಕಿಮ್ಯಾನ್ ಚಿತ್ರ ಇದೇ ವಾರ ರಿಲೀಸ್. ಅಪ್ಪು ಕಡೆಯ ಬಾರಿಗೆ ನಟಿಸಿರುವ ಚಿತ್ರವಿದು. ಸಿನಿಮಾದಲ್ಲಿ ಅಪ್ಪುರನ್ನು ನೋಡೋಕೆ ಸಾಧ್ಯವಾಗೋದು ಇದು ಕಡೆಯ ಬಾರಿ. ಜೊತೆಗೆ ಈ ಚಿತ್ರದಲ್ಲಿ ಅಪ್ಪು ದೇವರಾಗಿ ನಟಿಸಿದ್ದಾರೆ. ಹೀಗಾಗಿಯೇ ಚಿತ್ರ ಬಿಡುಗಡೆಗೆ ಮುನ್ನವೇ ಅಭಿಮಾನಿಗಳು ಮುಗಿಬಿದ್ದಿದ್ದಾರೆ.

    ಲಕ್ಕಿಮ್ಯಾನ್ ಚಿತ್ರದಲ್ಲಿ ಹೀರೋ ಡಾರ್ಲಿಂಗ್ ಕೃಷ್ಣ. 777 ಚಾರ್ಲಿ ಖ್ಯಾತಿಯ ಸಂಗಿತಾ ಶೃಂಗೇರಿ ನಾಯಕಿ. ಪ್ರಭುದೇವ ಹಾಗೂ ಅಪ್ಪು ಅವರ ನೃತ್ಯ ಚಿತ್ರದ ಹೈಲೈಟ್. ನೆಕ್ಸ್ಟ್ ಬರೋದು ಗಂಧದಗುಡಿ. ಸಾಕ್ಷ್ಯಚಿತ್ರ. ಅಪ್ಪು ಅವರನ್ನು ಸಿನಿಮಾದಲ್ಲಿ ನೋಡೋಕೆ ಇದು ಕಡೆಯ ಅವಕಾಶ ಎಂಬ ಕಾರಣಕ್ಕೆ ಆನ್‍ಲೈನ್‍ಲ್ಲಿ ಬುಕ್ಕಿಂಗ್ ಜೋರಾಗಿದೆ.

    ಪಿ.ಆರ್.ಮೀನಾಕ್ಷಿ ಸುಂದರಂ ಹಾಗೂ ಆರ್.ಸುಂದರ ಕಾಮರಾಜ್ ನಿರ್ಮಾಣದ ಚಿತ್ರಕ್ಕೆ ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನವಿದೆ. ನಿರ್ಮಾಪಕ ಜಾಕ್ ಮಂಜು ಚಿತ್ರವನ್ನು ವಿತರಣೆ ಮಾಡುತ್ತಿದ್ದು, ಥಿಯೇಟರುಗಳಲ್ಲಿ ಆಗಲೇ ಕಟೌಟುಗಳ ಭರಾಟೆ ಜೋರಾಗಿದೆ. ರಾಯರ ದಿನವಾದ ಗುರುವಾರವೇ ಸಿನಿಮಾ ರಿಲೀಸ್ ಆಗುತ್ತಿದ್ದು ರಾಯರ ಕೃಪಾಶೀರ್ವಾದವೂ ಚಿತ್ರದ ಮೇಲಿದೆ ಎನ್ನುವುದು ಭಕ್ತರ ನಂಬಿಕೆ.

  • ಲಕ್ಕಿ ಮ್ಯಾನ್ ಡಬ್ಬಿಂಗ್`ನಲ್ಲಿ ಡಾರ್ಲಿಂಗ್ ಕೃಷ್ಣ ಸಂಕಟವೇ ಬೇರೆ..

    ಲಕ್ಕಿ ಮ್ಯಾನ್ ಡಬ್ಬಿಂಗ್`ನಲ್ಲಿ ಡಾರ್ಲಿಂಗ್ ಕೃಷ್ಣ ಸಂಕಟವೇ ಬೇರೆ..

    ಡಾರ್ಲಿಂಗ್ ಕೃಷ್ಣ ಹೀರೋ ಆಗುವುದಕ್ಕೆ ಮೊದಲಿನಿಂದಲೂ ಪುನೀತ್ ಅವರ ಅಭಿಮಾನಿ. ಆರಂಭದ ದಿನಗಳಲ್ಲಿ ಪುನೀತ್ ಅವರಿಂದ ಬೆನ್ನು ತಟ್ಟಿಸಿಕೊಂಡಿದ್ದ ಕೃಷ್ಣ ಜೊತೆಗೆ ಪುನೀತ್ ಇತ್ತೀಚೆಗೆ ನಟಿಸಿದ್ದರು. ಕೃಷ್ಣ ಅವರ ಲಕ್ಕಿ ಮ್ಯಾನ್ ಚಿತ್ರದಲ್ಲಿ ಪುನೀತ್ ದೇವರ ಪಾತ್ರದಲ್ಲಿ ನಟಿಸಿದ್ದು, ಪ್ರಭುದೇವ ಜೊತೆ ಡ್ಯಾನ್ಸ್ ಕೂಡಾ ಮಾಡಿದ್ದಾರೆ.

    ಇತ್ತೀಚೆಗೆ ಆ ಚಿತ್ರದ ಡಬ್ಬಿಂಗ್ ಮುಗಿಸಿದ ಕೃಷ್ಣ ಅವರಿಗೆ ಡಬ್ಬಿಂಗ್ ಮಾಡುವಾಗ ಬಹಳ ಕಷ್ಟವಾಯಿತಂತೆ. ಅಪ್ಪು ಸರ್ ಜೊತೆಗಿನ ಶೂಟಿಂಗ್ ನಾನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಇದು ನನಗೆ ಎಂದೆಂದಿಗೂ ವಿಶೇಷ. ಡಬ್ಬಿಂಗ್ ಮಾಡುವಾಗ ತುಂಬಾ ಕಷ್ಟವಾಯಿತು ಎಂದು ಹೇಳಿದ್ದಾರೆ ಕೃಷ್ಣ.

    ಲಕ್ಕಿ ಮ್ಯಾನ್, ತಮಿಳಿನ ಓ ಮೈ ಕಡವಳೆ ಚಿತ್ರದ ರೀಮೇಕ್. ತಮಿಳಿನಲ್ಲಿ ವಿಜಯ್ ಸೇತುಪತಿ ಮಾಡಿದ್ದ ಪಾತ್ರವನ್ನು ಇಲ್ಲಿ ಪುನೀತ್ ಮಾಡಿದ್ದಾರೆ. ಕಷ್ಟದಲ್ಲಿರೋ ನಾಯಕನಿಗೆ ಸಹಾಯ ಮಾಡುವ ದೇವರ ಪಾತ್ರ ಪುನೀತ್ ಅವರದ್ದು.

  • ಲಕ್ಕಿಮ್ಯಾನ್ : ಅಪ್ಪು ದೇವರ ದರ್ಶನ ಎಷ್ಟು ಹೊತ್ತಿರುತ್ತೆ?

    ಲಕ್ಕಿಮ್ಯಾನ್ : ಅಪ್ಪು ದೇವರ ದರ್ಶನ ಎಷ್ಟು ಹೊತ್ತಿರುತ್ತೆ?

    ಲಕ್ಕಿಮ್ಯಾನ್ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ. ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಶನಿ ಪ್ರಕಾಶ್ ಪ್ರಧಾನ ಪಾತ್ರದಲ್ಲಿರೋ ಈ ಚಿತ್ರದ ಅಪ್ಪು ಅಭಿನಯಿಸಿರುವ ಕೊನೆಯ ಸಿನಿಮಾ. ಪುನೀತ್ ರಾಜಕುಮಾರ್ ಅವರ ಜೊತೆಗೆ ಪ್ರಭುದೇವ ಒಟ್ಟಿಗೇ ನಟಿಸಿರುವ ಸಿನಿಮಾ. ಅಂದಹಾಗೆ ಇಡೀ ಸಿನಿಮಾ ಅವಧಿ 151 ನಿಮಿಷ. ಇದರಲ್ಲಿ 40ಕ್ಕೂ ಹೆಚ್ಚು ನಿಮಿಷ ಅವಧಿ ಪುನೀತ್ ತೆರೆ ಮೇಲಿರುತ್ತಾರೆ.

    ಪುನೀತ್ ರಿಯಲ್ ಲೈಫಲ್ಲಿ ಹೇಗಿದ್ದರೋ.. ತೆರೆಯ ಮೇಲೂ ಹಾಗೆಯೇ ಇರುತ್ತಾರೆ. ದೇವರಾಗಿ.. ದೇವರಂತೆ ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ. ದಯೆ, ಕೇರಿಂಗ್, ನಿಷ್ಕಲ್ಮಷ ಪ್ರೀತಿ ಎಲ್ಲಕ್ಕಿಂತ ಹೆಚ್ಚಾಗಿ ನಗು.. ಮಾಸದ ಆ ನಗು ಇಡೀ ಚಿತ್ರದ ತುಂಬಾ ಇರುತ್ತದೆ. ಅವರನ್ನು ಆ ಪಾತ್ರದಲ್ಲಿ ನೋಡುತ್ತಿದ್ದರೆ ಅವರು ಅಭಿನಯಿಸುತ್ತಾರೆ ಎಂದೆನಿಸುವುದಿಲ್ಲ ಎನ್ನುತ್ತಾರೆ ನಾಯಕ ಡಾರ್ಲಿಂಗ್ ಕೃಷ್ಣ.

    ನಾಗೇಂದ್ರ ಪ್ರಸಾದ್ ನಿರ್ದೆಶನದ ಈ ಚಿತ್ರದ ಹೀರೋ ಡಾರ್ಲಿಂಗ್ ಕೃಷ್ಣ. ಅಪ್ಪು ಸರ್ ಜೊತೆ ಈ ಹಿಂದೆಯೂ ನಟಿಸಿದ್ದೇನೆ. ಆದರೆ ನಾನು ಹೀರೋ ಆಗಿರೋ ಚಿತ್ರದಲ್ಲಿ ಅಪ್ಪು ಸರ್ ಅತಿಥಿಯಾಗಿ ನಟಿಸುವುದು ನನ್ನ ಅದೃಷ್ಟ. ಈ ಚಿತ್ರದಲ್ಲಿ ಅವರದ್ದು ದೇವರ ಪಾತ್ರ. ಅವರು ನಟಿಸಿಲ್ಲ. ಹೇಗಿದ್ದರೋ ಹಾಗೆಯೇ ಇದ್ದಾರೆ ಎನ್ನುವುದು ಡಾರ್ಲಿಂಗ್ ಕೃಷ್ಣ ಮಾತು.

    ಸಿನಿಮಾ ಇದೇ ಸೆಪ್ಟೆಂಬರ್ 9ಕ್ಕೆ ತೆರೆ ಕಾಣಲಿದೆ.

  • ಲಕ್ಕಿಮ್ಯಾನ್ : ದೇವರ ಅದೊಂದು ಡೈಲಾಗ್'ಗೆ ಕಣ್ಣೀರಿಟ್ಟ ಪುನೀತ್ ಫ್ಯಾನ್ಸ್

    ಲಕ್ಕಿಮ್ಯಾನ್ : ದೇವರ ಅದೊಂದು ಡೈಲಾಗ್'ಗೆ ಕಣ್ಣೀರಿಟ್ಟ ಪುನೀತ್ ಫ್ಯಾನ್ಸ್

    ಬಾಲ್ಯದ ಗೆಳತಿಯನ್ನೇ ಮದುವೆಯಾಗುವ ನಾಯಕನಿಗೆ, ಅವಳ ಜೊತೆ  ರೊಮ್ಯಾನ್ಸ್ ಮಾಡುವ ಪ್ರೀತಿಯೇ ಹುಟ್ಟುವುದಿಲ್ಲ. ಒಳ್ಳೆ ಫ್ರೆಂಡ್ಸ್ ಆಗಿರ್ತಾರೆ. ಈ ನಡುವೆ ಅವನ ಸೀನಿಯರ್ ಕ್ರಷ್ ಒಬ್ಬಳು ಸಿಗುತ್ತಾಳೆ. ಕ್ರಷ್ ಲವ್ವಾಗುತ್ತೆ. ಇದರ ನಡುವೆ ಅವನು ಇಷ್ಟಪಡುವ ಮನಸ್ಸುಗಳಿಗೆ ನೋವಾಗಿರುತ್ತೆ. ಆಗ ದೇವರು ಅವನಿಗೊಂದು ಚಾನ್ಸ್ ಕೊಡುತ್ತಾನೆ.

    ನಿನಗೆ ಇನ್ನೊಂದು ಲೈಫ್ ಕೊಡ್ತಾ ಇದ್ದೀನಿ. ನೀನು ಪ್ರೀತಿಸುವ ಮನಸ್ಸುಗಳನ್ನೆಲ್ಲ ಮಾಡಿರುವ ತಪ್ಪುಗಳನ್ನೆಲ್ಲ ಸರಿಪಡಿಸಿಕೋ.. ಎನ್ನುತ್ತಾನೆ ದೇವರು. ನಾಯಕನಿಗೆ ಪುನಃ ಹೊಸ ಲೈಫ್ ಪ್ರಾಪ್ತಿ. ಸಿನಿಮಾದಲ್ಲಿ ದೇವರಾಗಿ ಬರುವುದು ಪುನೀತ್ ರಾಜಕುಮಾರ್.

    ಲಕ್ಕಿಮ್ಯಾನ್ ನೋಡಿದ ಅಪ್ಪು ಅಭಿಮಾನಿಗಳು ಕಣ್ಣೀರಿಟ್ಟಿದ್ದೇ ಅದಕ್ಕೆ. ಪುನೀತ್ ಇನ್ನಿಲ್ಲ ಎನ್ನುವುದನ್ನು ಇವತ್ತಿಗೂ ನಂಬದ ಸಾವಿರಾರು ಅಭಿಮಾನಿಗಳಿದ್ದಾರೆ. ಅದರ ಮಧ್ಯೆ ದೇವರು ಯಾರ್ಯಾರಿಗೋ ಒಂದು ಚಾನ್ಸ್ ಕೊಡ್ತಾನೆ. ನಮ್ಮ ಅಪ್ಪುಗೆ ಒಂದು ಚಾನ್ಸ್ ಕೊಡೋಕೆ ಆಗ್ತಾ ಇರಲಿಲ್ವಾ ಎಂದು ದೇವರನ್ನು ಬೈದುಕೊಳ್ಳೋ ಅಭಿಮಾನಿಗಳಿಗೂ ಲೆಕ್ಕವಿಲ್ಲ. ಅಂತಾದ್ರಲ್ಲಿ ಲಕ್ಕಿಮ್ಯಾನ್ ಚಿತ್ರದಲ್ಲಿ ಸ್ವತಃ ದೇವರ ಪಾತ್ರದಲ್ಲಿ ನಟಿಸಿರುವ ಪುನೀತ್ ಇನ್ನೊಂದು ಚಾನ್ಸ್ ಕೊಡ್ತೇನೆ ಎನ್ನುವಾಗ ಪುನೀತ್ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ.

    ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಷನಿ ಪ್ರಕಾಶ್, ನಾಗಭೂಷಣ್, ಸಾಧುಕೋಕಿಲ ಅಭಿನಯದ ಲಕ್ಕಿಮ್ಯಾನ್ ಚಿತ್ರ ಓ ಮೈ ಕಡವುಳೆ ಚಿತ್ರದ ರೀಮೇಕ್. ನಾಗೇಂದ್ರ ಪ್ರಸಾದ್ ನಿರ್ದೇಶಕ.

  • ಲಕ್ಕಿಮ್ಯಾನ್ ಟೀಸರ್ : ಅದೊಂದು ಡೈಲಾಗ್ ಮತ್ತೆ ಭಾವುಕರನ್ನಾಗಿಸಿತು..

    ಲಕ್ಕಿಮ್ಯಾನ್ ಟೀಸರ್ : ಅದೊಂದು ಡೈಲಾಗ್ ಮತ್ತೆ ಭಾವುಕರನ್ನಾಗಿಸಿತು..

    ನಿನಗೆ ನಿನ್ನ ತಪ್ಪುಗಳನ್ನೆಲ್ಲ ತಿದ್ದಿಕೊಳ್ಳೋಕೆ ಸೆಕೆಂಡ್ ಚಾನ್ಸ್ ಕೊಡ್ತೀನಿ..

    ಲಕ್ಕಿಮ್ಯಾನ್ ಟೀಸರ್‍ನಲ್ಲಿ ಬರೋ ಡೈಲಾಗ್ ಅದು. ಆ ಸಂಭಾಷಣೆ ಹೇಳೋದು ಅಪ್ಪು. ಆ ಡೈಲಾಗ್ ಕೇಳಿದವರಿಗೆಲ್ಲ ಥಟ್ಟನೆ ನೆನಪಾಗೋದು.. ಅಪ್ಪುಗೆ ದೇವರು ಒಂದು ಚಾನ್ಸ್ ಕೊಡಬೇಕಿತ್ತು ಅನ್ನೋದು. ಲಕ್ಕಿಮ್ಯಾನ್ ಚಿತ್ರದ ಟೀಸರ್ ಹೊರಬಿದ್ದಾಗಿದೆ. ಚಿತ್ರದಲ್ಲಿ ಪುನೀತ್`ದು ದೇವರ ಪಾತ್ರ. ಅಭಿಮಾನಿಗಳ ಕಣ್ಣಲ್ಲಿ ದೇವರೇ ಆಗಿರುವ ಅಪ್ಪು.. ನಟಿಸಿರುವ ಕೊನೆಯ ಚಿತ್ರವಿದು. ಹೀರೋ ಆಗಿ ನಟಿಸಿದ್ದ ಕೊನೆಯ ಚಿತ್ರ ಜೇಮ್ಸ್ ರಿಲೀಸ್ ಆಗಿ ಬಾಕ್ಸಾಫೀಸ್‍ನಲ್ಲೂ ಗೆದ್ದಾಯ್ತು. ಈಗ ಲಕ್ಕಿಮ್ಯಾನ್ ಸರದಿ.

    ಪ್ರಭುದೇವ ಅವರ ತಮ್ಮ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿರುವ ಚಿತ್ರವಿದು. ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಹನಿ ಪ್ರಕಾಶ್ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಅಪ್ಪು ಪ್ರಭುದೇವ ಜೊತೆ ಸ್ಟೆಪ್ಸ್ ಕೂಡಾ ಹಾಕಿದ್ದಾರೆ. ಇದು ತಮಿಳಿನ ಓ ಮೈ ಕಡವುಳೆ ಚಿತ್ರದ ರೀಮೇಕ್. ಪಿ.ಆರ್. ಮೀನಾಕ್ಷಿ ಸುಂದರಂ ಮತ್ತು ಆರ್. ಸುಂದರ ಮೀನಾಕ್ಷಿ ನಿರ್ಮಿಸಿರುವ ಚಿತ್ರ ಆಗಸ್ಟ್‍ನಲ್ಲಿ ರಿಲೀಸ್ ಆಗೋಕೆ ಸಿದ್ಧವಾಗಿದೆ.